Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಅಧ್ಯಕ್ಷರನ್ನಾಗಿ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಅವರನ್ನು ನೇಮಕ ಮಾಡಿ, ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಹೊರಡಿಸಿದ್ದು, ರಮೇಶ್ ಬಾಬು ಇವರನ್ನು ಅಧ್ಯಕ್ಷರು, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್, ಬೆಂಗಳೂರು ಹುದ್ದೆಗೆ ನೇಮಿಸುವಂತೆ ಸೂಚಿಸಿದ್ದಾರೆ. ಇನ್ನೂ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ನೇಮಿಸಲಾಗಿದೆ. ಈ ಬಗ್ಗೆ ಕೂಡಲೇ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ. https://kannadanewsnow.com/kannada/west-bengal-cm-mamata-banerjee-injured-after-slipping-at-home-hospitalised/ https://kannadanewsnow.com/kannada/election-commission-uploads-electoral-bonds-data-shared-by-sbi-on-its-website/
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ್ದು, ಡಾ.ಅಜಯ್ ನಾಗಭೂಷಣ್ ಎಂ.ಎನ್., ಐಎಎಸ್ (ಕೆಎನ್: 2004) ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಮುಂದಿನ ಆದೇಶದವರೆಗೆ ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಡಾ.ಅಜಯ್ ನಾಗಭೂಷಣ್ ಎಂ.ಎನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹುದ್ದೆಯ ಸಮವರ್ತಿ ಉಸ್ತುವಾರಿ ವಹಿಸಲಾಗಿದೆ. ಬೆಂಗಳೂರಿನ ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ (ಕೆಎನ್: 2005) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ…
ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮನೆಯ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಹಣೆಗೆ ಹೊಲಿಗೆ ಹಾಕಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮಮತಾ ಅವರ ಹಣೆ ಒಡೆಯುವ ಚಿತ್ರಗಳನ್ನು ತೃಣಮೂಲದ ಎಕ್ಸ್-ಹ್ಯಾಂಡಲ್ (ಮಾಜಿ ಟ್ವಿಟರ್) ನಿಂದ ಬಹಿರಂಗಗೊಳಿಸಲಾಗಿದೆ. ಟಿಎಂಸಿ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತಮ್ಮ ಕಾಲಿಘಾಟ್ ನಿವಾಸದ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಬಿದ್ದನು. ಆಪ್ತ ಮೂಲಗಳ ಪ್ರಕಾರ, ಅವರ ಹಣೆ ಒಡೆದು ರಕ್ತ ಹೊರಬರಲು ಪ್ರಾರಂಭಿಸಿತು. ತಕ್ಷಣ ಅವರನ್ನು ಕೋಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅಲ್ಲಿಗೆ ತಲುಪಿದ್ದಾರೆ ಎಂದಿದೆ. https://twitter.com/AITCofficial/status/1768286010264502610 https://kannadanewsnow.com/kannada/election-commission-uploads-electoral-bonds-data-shared-by-sbi-on-its-website/
ಶಿವಮೊಗ್ಗ: ಇ-ಶ್ರಮ ಪೋರ್ಟಲ್ ಮೂಲಕ ನೊಂದಣಿಯಾದ ಅಸಂಘಟಿತ ಕಾರ್ಮಿಕ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂಎಸ್‍ಬಿವೈ) ಅಡಿ ರೂ.2 ಲಕ್ಷಗಳ ಅಪಘಾತ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾ.31 ಅಂತಿಮ ದಿನವಾಗಿದೆ. ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ(ಎನ್‍ಡಿಯುಡಬ್ಲ್ಯು) ಕ್ರೋಢೀಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ದಿ: 26-08-2021 ರಿಮದ ನೋಂದಾಯಿಸಲಾಗುತ್ತಿದ್ದು ದಿ: 31-03-2022 ರವರೆಗೆ ನೋಂದಣಿಯಾದ ಮತ್ತು ಸದರಿ ದಿನಾಂಕದೊಳಗೆ ಅಪಘಾತಕ್ಕೀಡಾದ ಫಲಾನುಭವಿಗಳಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾ.31 ಅಂತಿಮ ದಿನವಾಗಿರುತ್ತದೆ. ಫಲಾನುಭವಿ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್) ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್‍ಐಆರ್, ಪಂಚನಾಮ, ಇತರೆ ಸೂಕ್ತ ದಾಖಲಾತಿಗಳನ್ನು ಕಾರ್ಮಿಕ ಅಧಿಕಾರಿಗಳ ಕಚೇರಿ ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇಲ್ಲಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹೆಚ್ ಎಸ್ ಸುಮ…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹಾಗಾದ್ರೇ ದಿನಾಂಕ 14-3-2019 ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಬಗ್ಗೆ ಮುಂದೆ ಓದಿ. ಆಗ್ರಿ ಇನ್ನೋವೇಷನ್ ಸೆಂಟರ್ ಕೃಷಿ ಕ್ಷೇತ್ರದಲ್ಲಿ ರೈತರ ಉತ್ಪಾದನೆ ಹೆಚ್ಚಾಗಲು ಹೊಸ ತಂತ್ರಜ್ಞಾನ ತರಲು ನವೋದ್ಯಮವನ್ನು ಪ್ರೋತ್ಸಾಹಿಸಬೇಕು. ಅಗ್ರೀ ಬಯೋ ಟೆಕ್ ಸಂಸ್ಥೆಗಳನ್ನು ರೈತರಿಗೆ ತಲುಪಿಸಲು , ಉತ್ಪಾದಕತೆ ಹೆಚ್ಚಿಸಲು, ಬೆಳೆ ಸಂರಕ್ಷಣೆಗಾಗಿ ಹೊಸ ನವೋದ್ಯಮಗಳನ್ನು ಪ್ರೋತ್ಸಾಹಿಸಲು ‘ಆಗ್ರಿ ಇನ್ನೋವೇಷನ್ ಸೆಂಟರ್ ನ್ನು ’ 67.50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಇದನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪೋಲೀಸ್ ನೇಕಾತಿ ಹಗರಣ: ಹೆಚ್ಚಿನ ತನಿಖೆಗೆ ಎಸ್.ಐ.ಟಿ ರಚನೆ ಪೋಲೀಸ್ ನೇಮಕಾತಿ ಹಗರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಬಿ.ವೀರಪ್ಪ ಅವರ ನೇತೃತ್ವದ ಸಮಿತಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.…
ಬೆಂಗಳೂರು: ನಗರದಲ್ಲಿ 50,000 ಲಂಚ ಸ್ವೀಕರಿಸುತ್ತಿದ್ದಾಗೇ ಲೋಕಾಯುಕ್ತ ಬಲೆಗೆ ಕೆಆರ್ ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ( PI) ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ಬಿದ್ದಿದ್ದಾರೆ. ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಆಣೆಯ ಇನ್ಸ್ ಪೆಕ್ಟರ್ ವಜ್ರಮುನಿ ಹಾಗೂ ಪಿಎಸ್ಐ ರಮ್ಯಾ ಅವರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಂತ ಆರೋಪಿಯೊಬ್ಬನ ಬಿಡುಗಡೆಗಾಗಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಇಂದು ಕೆಆರ್ ಪುರಂ ಠಾಣೆಯ ಇನ್ಸ್ ಪೆಕ್ಟರ್ ವಜ್ರಮುನಿ ಹಾಗೂ ಪಿಎಸ್ಐ ರಮ್ಯಾ ಅವರಿಗೆ 5 ಲಕ್ಷದಲ್ಲಿ 50,000 ಮೊದಲ ಕಂತಿನ ಹಣವನ್ನು ಈಗಾಗಲೇ ಪಡೆದಿದ್ದರು. ಇಂದು 1 ಲಕ್ಷ ಹಣವನ್ನು ವ್ಯಕ್ತಿ ನೀಡೋದಕ್ಕೆ ತೆರಳಿದ್ದರು. ಈ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರಿಗೂ ನೀಡಿದ್ದರು. ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಂತ ಆರೋಪಿಯನ್ನು ಬಿಡುಗಡೆ ಮಾಡೋದಕ್ಕೆ 1 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.…
ಕೆಲವೊಬ್ಬರ ಮನೆಯಲ್ಲಿ ಚೆನ್ನಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಆಕಸ್ಮಿಕವಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿಹೋಗುತ್ತದೆ. ಇಷ್ಟೇ ಅಲ್ಲದೆ ಕೆಲವೊಂದು ಬಾರಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತಮ್ಮದೇ ಮನೆಯಲ್ಲಿ ಆಗುವ ಕೆಲವೊಂದು ಬದಲಾವಣೆಗಳು ಗೋಚರಿಸುತ್ತಿರುತ್ತದೆ. ಹಾಗಾದರೆ ಈ ರೀತಿಯ ತೊಂದರೆಗಳಿಂದ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ,…
ಬೆಂಗಳೂರು: ಇಂದು ಕರ್ನಾಟಕದ 25 ಲೋಕಸಭಾ ಕ್ಷೇತ್ರಗಳಿಗೆ ಬಹುಜನ ಸಮಾಜ ಪಾರ್ಟಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಬಾಗಲಕೋಟೆ-ವೈ.ಸಿ.ಕಾಂಬಳೆ, ಬೆಂಗಳೂರು ಕೇಂದ್ರ- ಸತೀಶ್ ಚಂದ್ರ ಎಂ. ಬೆಂಗಳೂರು ಉತ್ತರ-ಚಿಕ್ಕಣ್ಣ,ಬೆಂಗಳೂರು ಗ್ರಾಮಾಂತರ – ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಬೆಂಗಳೂರು ದಕ್ಷಿಣ – ಮಣ್ಣೂರ್ ನಾಗರಾಜು,ಬೆಳಗಾವಿ- ಯಮನಪ್ಪ ತಳವಾರ,ಬಳ್ಳಾರಿ – ಶಕುಂತಲಾ, ಬೀದರ್-ಪುಟ್ಟರಾಜು.ಹೆಚ್, ಬಿಜಾಪುರ- ಕಲ್ಲಪ್ಪ.ಆರ್.ತೊರವಿ, ಚಾಮರಾಜನಗರ (ಎಸ್.ಸಿ) ಸಿ.ಮಹದೇವಯ್ಯ, ಚಿಕ್ಕಬಳ್ಳಾಪುರ- ಆರ್.ಮುನಿಯಪ್ಪ, ಚಿತ್ರದುರ್ಗ ಎಸ್.ಸಿ.- ಅಶೋಕ್ ಚಕ್ರವರ್ತಿ, ದಕ್ಷಿಣ ಕನ್ನಡ-ಕಾಂತಪ್ಪ ಅಳಂಗಾರ್, ದಾವಣಗೆರೆ-ಮಲ್ಲೇಶ್.ಹೆಚ್,ಧಾರವಾಡ-ಶೋಭ ಬಳ್ಳಾರಿ,ಗುಲ್ಬರ್ಗ ಎಸ್.ಸಿ-ಹುಚ್ಚಪ್ಪ ವಟಾರ, ಹಾಸನ- ಗಂಗಾಧರ್ ಬಹುಜನ್, ಹಾವೇರಿ- ಮರಿಯಣ್ಣನವರ,ಕೋಲಾರ ಎಸ್.ಸಿ.- ಮೈಲಾರಪ್ಪ, ಮಂಡ್ಯ-ಶಿವಶಂಕರ್,ಮೈಸೂರು-ಚಂದ್ರ ಶೇಖರ್.ಪಿ. ಶಿವಮೊಗ್ಗ-ಎ.ಡಿ.ಶಿವಪ್ಪ,ತುಮಕೂರು-ರಾಜಸಿಂಹ ಜೆ.ಎನ್,ಉಡುಪಿ-ಚಿಕ್ಕಮಗಳೂರು- ಕೆ.ಟಿ.ರಾಧಾಕೃಷ್ಣ ಅವರನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುನಿಯಪ್ಪ ತಿಳಿಸಿದರು. ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕಿ ಮಾಯಾವತಿಯವರ ತೀರ್ಮಾನದಂತೆ ಎನ್.ಡಿ.ಎ ಹಾಗೂ ಇಂಡಿಯಾ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ,ಸಮಾಜಿಕ…
ನವದೆಹಲಿ: ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ (One97 Communications Limited -OCL) ಗೆ ಮಲ್ಟಿ-ಬ್ಯಾಂಕ್ ಮಾದರಿಯಲ್ಲಿ ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ (Third-Party Application Provider -TPAP) ಆಗಿ ಯುಪಿಐ ಸೇವೆಗಳಲ್ಲಿ ಭಾಗವಹಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India -NPCI) ಅನುಮೋದನೆ ನೀಡಿದೆ. ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಎಂಬ ನಾಲ್ಕು ಬ್ಯಾಂಕುಗಳು ಪೇಟಿಎಂಗೆ ಪಾಲುದಾರ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸಲಿವೆ. “ಯೆಸ್ ಬ್ಯಾಂಕ್ ಒಸಿಎಲ್ಗಾಗಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಯುಪಿಐ ವ್ಯಾಪಾರಿಗಳಿಗೆ ವ್ಯಾಪಾರಿ ಸ್ವಾಧೀನ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. “Paytm” ಹ್ಯಾಂಡಲ್ ಅನ್ನು ಯೆಸ್ ಬ್ಯಾಂಕ್ ಗೆ ಮರುನಿರ್ದೇಶಿಸಲಾಗುವುದು. ಇದು ಅಸ್ತಿತ್ವದಲ್ಲಿರುವ ಬಳಕೆದಾರರು ಮತ್ತು ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳು ಮತ್ತು ಆಟೋಪೇ ಆದೇಶಗಳನ್ನು ತಡೆರಹಿತ ರೀತಿಯಲ್ಲಿ ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಎನ್ಪಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ಅಸ್ತಿತ್ವದಲ್ಲಿರುವ ಎಲ್ಲಾ ಹ್ಯಾಂಡಲ್ಗಳು ಮತ್ತು ಆದೇಶಗಳಿಗೆ…
ಬೆಂಗಳೂರು: ಬಿಜೆಪಿಯವರು ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗುತ್ತೆ. ಹಾಗೇ ಹೀಗೆ ಅಂತ ಬೊಬ್ಬೆ ಹೊಡೆದುಕೊಂಡ್ರು. ಆದ್ರೇ ರಾಜ್ಯದ ಅಭಿವೃದ್ಧಿಗಾಗಿ 1.20 ಲಕ್ಷ ಕೋಟಿ ಮೀಸಲಿಟ್ಟಿದ್ದೇವೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ, ಕರ್ನಾಟಕ ಆರ್ಥಿಕ ದಿವಾಳಿ ಆಗುತ್ತದೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರೂ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇದಕ್ಕಾಗಿ 36 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ 52,090 ಕೋಟಿ ರೂ. ಮೀಸಲಿಟ್ಟಿದ್ದೇವೆ. ಬಿಜೆಪಿ, ಜೆಡಿಎಸ್‌ನವರು ದುಡ್ಡಿಲ್ಲ ಎನ್ನುತ್ತಿದ್ದರೂ ಅಭಿವೃದ್ಧಿಗಾಗಿ 1.20 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆ. ಬಸವರಾಜ ಬೊಮ್ಮಾಯಿ, ಅಶೋಕ್, ವಿಜಯೇಂದ್ರ, ಯಡಿಯೂರಪ್ಪ ಅವರೇ ಬನ್ನಿ, ಒಂದೇ ವೇದಿಕೆ ಮೇಲೆ ಈ ಬಗ್ಗೆ ಚರ್ಚೆ ಮಾಡೋಣ ಎಂದು ಚರ್ಚೆಗೆ ಅಹ್ವಾನ ನೀಡಿದ್ದಾರೆ. https://kannadanewsnow.com/kannada/ias-officer-goes-to-hospital-like-a-patient-reveals-mess-video-goes-viral/ https://kannadanewsnow.com/kannada/if-im-an-ex-is-there-anything-your-job-to-do-call-me-pratap-simha/