Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಸರ್ಕಾರಗಳು ಮತ್ತು ನಾಗರಿಕರಿಗೆ ಪ್ರಮುಖ ಜಾಗತಿಕ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ-ಶಕ್ತಗೊಂಡ ಸೇವಾ ಪಾಲುದಾರ ಬಿಎಲ್ಎಸ್ ಇಂಟರ್ನ್ಯಾಷನಲ್ ಸರ್ವೀಸಸ್ ಲಿಮಿಟೆಡ್ ಪ್ರತಿ ಈಕ್ವಿಟಿ ಷೇರಿಗೆ ₹2.0 ನಷ್ಟು ಅತ್ಯಧಿಕ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಇದು ಷೇರುಗಳ ಮುಖಬೆಲೆಯ ಮೇಲೆ ಶೇ.200 ಲಾಭಾಂಶವನ್ನು ಪ್ರತಿನಿಧಿಸುತ್ತದೆ. ಈ ಅವಧಿಯ ಒಟ್ಟು ಲಾಭಾಂಶ ಪಾವತಿಯು ₹ 82.35 ಕೋಟಿಗಳಷ್ಟಿದೆ, ಇದು ಕಂಪನಿಯ ಬಲವಾದ ನಗದು ಉತ್ಪಾದನೆ ಮತ್ತು ಷೇರುದಾರರ ಮೌಲ್ಯವನ್ನು ಹೆಚ್ಚಿಸುವ ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತದೆ. ದಾಖಲೆಯ ಮಧ್ಯಂತರ ಲಾಭಾಂಶ ಘೋಷಣೆಯು Q3FY26 ಮತ್ತು 9MFY26 ರಲ್ಲಿ ದೃಢವಾದ ಹಣಕಾಸು ಕಾರ್ಯಕ್ಷಮತೆಯನ್ನು ಅನುಸರಿಸುತ್ತದೆ, ಇದು ಪ್ರಮುಖ ಲಂಬಗಳಲ್ಲಿ ಆರೋಗ್ಯಕರ ವ್ಯವಹಾರದ ಆವೇಗವನ್ನು ಪ್ರತಿಬಿಂಬಿಸುತ್ತದೆ. Q3FY26 ಆದಾಯವು 736 ಕೋಟಿ ರೂ.ಗೆ ಏರಿದೆ, ಇದು 43.6% YoY ಹೆಚ್ಚಾಗಿದೆ, ಇದು ವೀಸಾ ಮತ್ತು ಕಾನ್ಸುಲರ್ ಸೇವೆಗಳು ಮತ್ತು ಡಿಜಿಟಲ್ ಸೇವೆಗಳ ವಿಭಾಗಗಳಲ್ಲಿ ಬಲವಾದ ಕಾರ್ಯಗತಗೊಳಿಸುವಿಕೆಯಿಂದ ಪ್ರೇರಿತವಾಗಿದೆ. ತ್ರೈಮಾಸಿಕದಲ್ಲಿ EBITDA 25.3% YoY ರಷ್ಟು ಬೆಳೆದಿದೆ, ಆದರೆ…
ಬೀದರ್: ಪರೀಕ್ಷೆಗೆ ಹೆದರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಡಿರುವಂತ ಶಾಕಿಂಗ್ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಶರತ್(16) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಬೀದರ್ ನ ಮಂಠಾಳದ ಶರತ್, ನಾರಾಯಣಪುರ ಗ್ರಾಮದಲ್ಲಿರುವಂತ ನವೋದಯ ವಸತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದನು. ಡೆತ್ ನೋಟ್ ಬರೆದಿಟ್ಟು, ಹಾಸ್ಟೆಲ್ ನಲ್ಲೇ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯಾರ್ಥಿ ಶರತ್ ಬರೆದಿರುವಂತ ಡೆತ್ ನೋಟ್ ನಲ್ಲಿ ಮಮ್ಮಿ ಸಾರಿ, ಅಪ್ಪ ಐ ಲವ್ ಯು ಹಾಗೂ ಕೀಪ್ ಸ್ಮೈಲಿಂಗ್ ಫಾರೆವರ್ ಅಂತ ಬರೆದಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಭಯದಿಂದ ವಿದ್ಯಾರ್ಥಿ ಹೀಗೆ ಮಾಡಿಕೊಂಡಿದ್ದಾನೆ ಎಂಬುದಾಗಿ ಶಂಕಿಸಲಾಗಿದೆ. ಈ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್…
ಬೆಂಗಳೂರು: ನಿನ್ನೆ ವಯೋಸಹಜತೆಯಿಂದ ಮಾಜಿ ಶಾಸಕ, ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು ನಿಧನರಾಗಿದ್ದರು. ಇಂತಹ ಅವರ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ನಾಡಿನ ಹಿರಿಯ ಪತ್ರಕರ್ತರು, ನನ್ನ ಚಿರಕಾಲದ ಮಿತ್ರರು, ಹಿತೈಷಿಗಳು ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದ ಸುದ್ದಿ ತಿಳಿದು ಬಹಳ ನೋವುಂಟಾಯಿತು. The Hindu ಪತ್ರಿಕೆಯ ವರದಿಗಾರರಾಗಿ ಅಷ್ಟೇ ಅಲ್ಲದೆ, ಆತ್ಮೀಯ ಒಡನಾಡಿಯಾಗಿ ದಶಕಗಳ ಕಾಲದಿಂದಲೂ ನನಗೆ ಚಿರಪರಿಚಿತರು. ಪತ್ರಕರ್ತರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಅವರು ಅಪಾರ ಸೇವೆ ಸಲ್ಲಿದ್ದಾರೆ. ಅವರ ನಿಧನದಿಂದ ಪತ್ರಿಕೋದ್ಯಮದ ದೊಡ್ಡ ಕೊಂಡಿಯೊಂದು ಕಳಚಿದೆ. ರಾಜ್ಯ ಸರ್ಕಾರವು ಮೃತ ಮಾಜಿ ಶಾಸಕ, ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸುವಂತೆ ಆದೇಶಿಸಿದೆ. https://kannadanewsnow.com/kannada/budget-presentation-date-to-be-fixed-soon-cm-siddaramaiah/ https://kannadanewsnow.com/kannada/case-of-missing-gold-and-money-bags-in-minister-bayrati-sureshs-office-g-parameshwar-orders-investigation/
ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯ ದ ದಿನಾಂಕವನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸ್ವಂತ ಖರ್ಚಿನಲ್ಲಿ ಶಾಸಕರ ವಿದೇಶ ಪ್ರವಾಸ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಂ ಎಲ್ ಎ ಗಳು ಮತ್ತು ಎಂಎಲ್ ಸಿ ಗಳು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದರು. ವರಿಷ್ಠರ ತೀರ್ಮಾನದಂತೆ ನಡೆಯುತ್ತೇವೆ ಪತ್ರಕರ್ತರು ನಾಯಕತ್ವ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಪತ್ರಕರ್ತರು ಪದೇ ಪದೇ ಒಂದೇ ವಿಷಯವನ್ನು ಕೇಳಬಾರದು. ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಅದರಂತೆ ನಾನು ಮತ್ತು ಉಪಮುಖ್ಯಮಂತ್ರಿಗಳಿಬ್ಬರೂ ನಡೆದುಕೊಳ್ಳುತ್ತೇವೆ ಎಂದರು. https://kannadanewsnow.com/kannada/the-development-of-the-state-is-a-mirage-mlc-n-ravikumar/
ಬೆಂಗಳೂರು: ವಿಧಾನಸೌಧದಲ್ಲಿ 300 ಗ್ರಾಂ ಚಿನ್ನ ಸಿಕ್ಕಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಬಂಗಾರ ವಿಧಾನಸೌಧದಲ್ಲಿ ಹೇಗೆ ಸಿಕ್ಕಿತು. ಯಾರಿಗೆ ಕೊಡಲು ತಂದಿದ್ದರು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಹಣ ಕೊಡುವುದರ ಬದಲು ಬಂಗಾರ ಕೊಡಲೆಂದು ತಂದಿದ್ದರೇ? 1.5 ಲಕ್ಷ ಹಣ ಮತ್ತು ಚಿನ್ನವÀನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಎಂದು ಕೇಳಿದರು. ಇದು ಲಂಚಾವತಾರ- ಭ್ರಷ್ಟಾಚಾರದ ಮತ್ತೊಂದು ಉದಾಹರಣೆ ಎಂದು ಟೀಕಿಸಿದರು. ಇದರಲ್ಲಿರುವ ಬೈರತಿ ಸುರೇಶ್ ಅಥವಾ ಇನ್ಯಾರೇ ಇದ್ದರೂ ತನಿಖೆ ಮಾಡಿ. ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ, ಸಚಿವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು. ಶಾಸಕರ ವಿದೇಶ ಪ್ರವಾಸ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಯಾವ್ಯಾವ ಶಾಸಕರು ಯಾರ್ಯಾರ ತಂಡದಲ್ಲಿ ಹೋಗುತ್ತಿದ್ದಾರೆ ಎಂಬುದು ಕುತೂಹಲದ ವಿಷಯ. ಡಿ.ಕೆ.ಶಿವಕುಮಾರ್ ಕಡೆಯವರು ಯಾರ ಜೊತೆ ಯಾವ ದೇಶಕ್ಕೆ ಹೋಗುತ್ತಿದ್ದಾರೆ? ಸಿದ್ದರಾಮಯ್ಯನವರ ಕಡೆಯವರು ಯಾರ ಜೊತೆ ಯಾವ ದೇಶಕ್ಕೆ ಹೋಗುತ್ತಿದ್ದಾರೆ? ಅಲ್ಲಿ ಹೋಗಿ…
ಬೆಂಗಳೂರು: “ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್ ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಮೊದಲ ಆದ್ಯತೆ ಅವರಿಗೆ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಉತ್ತರಿಸಿದರು. ರಾಜ್ಯ ಸರ್ಕಾರ ಬಿಜೆಪಿ ಮುಖಂಡನಿಗೆ ಸಚಿವ ಸ್ಥಾನಮಾನ ನೀಡಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಎಲ್ಲರನ್ನು ಗೌರವಿಸುತ್ತದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗಳಿಗೆ ಇರುವುದರಿಂದ ಮಾಡಿರಬಹುದು. ಇದರಲ್ಲಿ ತಪ್ಪೇನಿಲ್ಲ” ಎಂದರು. ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ ನಿಮ್ಮ ಸಹೋದರ ಅವರು ದೆಹಲಿಯಲ್ಲಿದ್ದಾರೆ ಎಂದು ಕೇಳಿದಾಗ, “ಅವರು ದೆಹಲಿ ಪ್ರವಾಸಕ್ಕೆ ಹೋಗುವಾಗ ಚುನಾವಣೆ ವಿಚಾರವಾಗಿ ಸಭೆ ಮಾಡಲು ಕರೆದಿದ್ದಾರೆ ಎಂದು ನಿಮಗೆ ಮಾಹಿತಿ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ…
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ತಲೆ ಮರೆಸಿಕೊಂಡಿದ್ದರು. ಅವರ ಬಂಧನಕ್ಕಾಗಿ ಇದೀಗ ಸಿಐಡಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ನಿನ್ನೆಯಷ್ಟೇ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಭೈರತಿ ಬಸವರಾಜ್ ಗೆ ಬಂಧನದ ಭೀತಿ ಎದುರಾಗಿತ್ತು. ಮತ್ತೊಂದೆಡೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನಕ್ಕಾಗಿ ಸಿಐಡಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಅವರು ಬಂಧನದ ಭೀತಿಯಿಂದ ವಿದೇಶಕ್ಕೆ ತೆರಳುವ ಸಾಧ್ಯತೆ ಹಿನ್ನಲೆಯಲ್ಲಿ, ಈ ಕ್ರಮವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ನಗರದಲ್ಲಿ ಶಾಲಾ ಬಸ್ ಹರಿದು ಪೊಲೀಸ್ ಸಿಬ್ಬಂದಿಯ ಇಬ್ಬರು ಮಕ್ಕಳು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯ ಥಣಿಸಂದ್ರ ಬಳಿ ಘಟನೆ ನಡೆದಿದೆ. ಪೊಲೀಸ್ ಪೇದೆಯ ಇಬ್ಬರು ಪುತ್ರರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಮನಕಲಕುವ ಘಟನೆ ನಡೆದಿದೆ. ಮೃತ ಮಕ್ಕಳನ್ನ ವರ್ಷ (2) ಹಾಗು ಭಾನು (4) ಎಂದು ತಿಳಿದುಬಂದಿದೆ. ಬೈಕ್ನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ಶಾಲಾ ಬಸ್ ತೆಗೆದುಕೊಳ್ಳುವಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಮೇಲೆ ಇದ್ದ ಇಬ್ಬರೂ ಮಕ್ಕಳು ಕೆಳಗೆ ಬಿದ್ದಾಗ ಇಬ್ಬರು ಮಕ್ಕಳ ಮೇಲೆ ಶಾಲಾ ಬಸ್ ಹರಿದು ದುರಂತ ಸಂಭವಿಸಿದೆ.
ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ ಎಸ್ ಎಲ್ ಸಿ ಮತ್ತು ಮೆಟ್ರಿಕ್ ನಂತ್ರದ ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಣೆ ಮಾಡಿ, ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಇಲಾಖೆ ನೀಡುತ್ತಿದೆ ಎಂದಿದೆ. ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.60ರಿಂದ 79ರಷ್ಟು ಅಂಕ ಪಡೆದವರಿಗೆ ರೂ.7,500 ಪ್ರೋತ್ಸಾಹಧನ ದೊರೆಯಲಿದೆ. ಶೇ.75ಕ್ಕಿಂತ ಹೆಚ್ಚು ತೆಗೆದವರಿಗೆ ರೂ.15,000 ನೀಡಲಾಗುತ್ತದೆ. ಪಿಯುಸಿ, ಡಿಪ್ಲೋಮಾಗೆ ರೂ.20,000, ಪದವಿ ವಿದ್ಯಾರ್ಥಿಗಳಿಗೆ ರೂ.25,000, ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ರೂ.30,000 ಹಾಗೂ ವೃತ್ತಿಪರ ಪದವಿ, ವೈದ್ಯಕೀಯ, ತಾಂತ್ರಿಕ, ಕೃಷಿ, ಪಶು ವೈದ್ಯಕೀಯ ವ್ಯಾಸಂಗದವರಿಗೆ ರೂ.35,000 ಪ್ರೋತ್ಸಾಹಧನ ನೀಡುತ್ತಿರುವುದಾಗಿ ತಿಳಿಸಿದೆ. ಎಸ್ ಎಸ್ ಎಲ್ ಸಿ ಮತ್ತು ಮೆಟ್ರಿಕ್ ನಂತರದ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 28-02-2026ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಸೇವಾಸಿಂಧು…
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಂತ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸಂಜಯನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದಂತ ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಒಟ್ಟು 8 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಲ್ಲಿ ಕ್ಯಾಮರೂನ್ ದೇಶದ ಐವರು, ಸುಡಾನ್ ದೇಶದ ಮೂವರು ಸೇರಿದಂತೆ ಐವರು ಸೇರಿದಂತೆ 8 ವಿದೇಶಿ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿದ್ದರು. ಅವರನ್ನು ಇಂದು ವಶಕ್ಕೆ ಪಡೆಯಾಲಾಗಿದೆ. ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಈ ವಿದೇಶಿ ಪ್ರಜೆಗಳು ಆಗಮಿಸಿದ್ದರು. ಕಳೆದ ಮೂರು ನಾಲ್ಕು ವರ್ಷಗಳಿಂದ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಲ್ಲೇ ವಾಸಿಸುತ್ತಿದ್ದರು. ಅವರನ್ನು ಬಂಧಿಸಿ ಎಫ್ ಆರ್ ಆರ್ ಓ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಆ ಬಳಿಕ ಅವರ ದೇಶಕ್ಕೆ ವಾಪಾಸ್ ಅವರನ್ನು ಪೊಲೀಸರು ಕಳುಹಿಸಲಿದ್ದಾರೆ. https://kannadanewsnow.com/kannada/128-year-old-royal-family-menu-goes-viral-do-you-know-what-the-maharajas-meal-was-like-in-1897/ https://kannadanewsnow.com/kannada/bjp-mla-bhairati-basavaraj-fears-arrest-anticipatory-bail-plea-dismissed-in-biklu-shiva-murder-case/














