Author: kannadanewsnow09

ನವದೆಹಲಿ: ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಆರು ಮಂದಿ ಬಲಿಯಾದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಪ್ರಕಟಿಸಿದ್ದಾರೆ. ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ವಿಫಲವಾದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ಸಿಎಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ತಿರುಪತಿಯ ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ಕೆಲವು ಲೋಪದೋಷಗಳನ್ನು ನಾನು ನೋಡಿದ್ದೇನೆ ಎಂದು ಸಿಎಂ ನಾಯ್ಡು ಕಾಲ್ತುಳಿತದ ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸುಗಮ ಕಾರ್ಯಾಚರಣೆ ನಡೆಸಲು ವಿಫಲರಾದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ತಿರುಪತಿ ಎಸ್ಪಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇನ್ನೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಘಟನೆಯಿಂದ ತನಗೆ ನೋವಾಗಿದೆ ಎಂದು ಹೇಳಿದ ಆಂಧ್ರ ಸಿಎಂ, ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿದರು. 33 ಮಂದಿ ಗಾಯಗೊಂಡಿದ್ದಾರೆ. ಅವರಿಗೆ 2 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು…

Read More

ಚಿತ್ರದುರ್ಗ : ವಾಣಿ ವಿಲಾಸ ಸಾಗರ ಜಲಾಶಯಕ್ಕೆ 700 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, ವಾಣಿವಿಲಾಸ ಸಾಗರ ಜಲಾಶಯದಿಂದ ಅಷ್ಟೇ ಪ್ರಮಾಣದ ನೀರು ಯಾವುದೇ ಸಂದರ್ಭದಲ್ಲಾದರೂ ಕೋಡಿಯ ಮುಖಾಂತರ ವೇದಾವತಿ ನದಿಗೆ ಹರಿಯುತ್ತದೆ. ಹಾಗಾಗಿ ವೇದಾವತಿ ನದಿಯ ತಗ್ಗು ಪ್ರದೇಶ ಹಾಗೂ ನದಿಯ ಎರಡೂ ದಂಡೆಗಳಲ್ಲಿ ಇರುವ ಸಾರ್ವಜನಿಕರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಹಿರಿಯೂರು ಕ್ಯಾಂಪ್ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ. https://kannadanewsnow.com/kannada/b-ed-students-applications-invited-for-special-incentives/ https://kannadanewsnow.com/kannada/bengaluru-power-outages-in-these-areas-tomorrow-and-day-after-tomorrow/

Read More

ಮಡಿಕೇರಿ : 2024-25 ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ವಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ವತಿಯಿಂದ 2024-25 ನೇ ಸಾಲಿನಲ್ಲಿ ಬಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಸೇವಾಸಿಂಧು ಪೋರ್ಟಲ್ ಆನ್‍ಲೈನ್‍ನಲ್ಲಿ (https://sevasindhu.karnataka.gov.in) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ, 20 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ,ಎಫ್.ಎಂ.ಸಿ. ಕಾಲೇಜು ಹತ್ತಿರ ಮಡಿಕೇರಿ, ದೂರವಾಣಿ ಸಂಖ್ಯೆ ; 08272-225528 ಎಂದು ಪ್ರಕಟಣೆ ತಿಳಿಸಿದೆ. https://kannadanewsnow.com/kannada/kpsc-should-admit-its-helplessness-for-not-providing-justice-to-kannadiga-candidates-dr-purushothama-bilimale/ https://kannadanewsnow.com/kannada/bengaluru-power-outages-in-these-areas-tomorrow-and-day-after-tomorrow/

Read More

ಬೆಂಗಳೂರು: ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಗಳಲ್ಲಿನ ಎಡವಟ್ಟುಗಳನ್ನು ಮುಂದುವರೆಸಿರುವ ಕರ್ನಾಟಕ ಲೋಕಸೇವಾ ಆಯೋಗದ ನಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತಂತೆ ಲೋಕಸೇವಾ ಆಯೋಗಕ್ಕೆ ಪತ್ರ ಬರೆದಿರುವ ಡಾ.ಬಿಳಿಮಲೆ, ಆಯೋಗವು ಮತ್ತೊಮ್ಮೆ ಬೇಡದ ಕಾರಣಗಳಿಗೆ ಸುದ್ದಿಯಲ್ಲಿರುವುದು ವಿಷಾದನೀಯವಾದ ಸಂಗತಿಯಾಗಿದೆ. ಪ್ರತಿಬಾರಿ ಆಯೋಗವು ನಡೆಸುವ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಅವಗಣಿಸುತ್ತಿರುವುದು ಆಯೋಗವು ಕನ್ನಡ ವಿರೋಧಿ ಧೋರಣೆಯನ್ನು ತಳೆದಿದೆಯೇ ಎನ್ನುವ ಗೊಂದಲವನ್ನು ಇದು ಉಂಟುಮಾಡುತ್ತಿದೆ ಎಂದಿದ್ದಾರೆ. ಪ್ರಶ್ನೆ ಪತ್ರಿಕೆಯ ಪ್ರಶ್ನೆಯೊಂದನ್ನು ಸಹ ಉಲ್ಲೇಖಿಸಿರುವ ಡಾ.ಬಿಳಿಮಲೆ, “ಭಾರತದಲ್ಲಿನ ಪುನರಂ ಅವರ ಲೋಕನ ವಿಮರ್ಶಿ ಅಧಿಕಾರವು ಉಚ್ಚ ನ್ಯಾಯಾಲಯ ದೋಂದಿಗೆ ಸರ್ವೋಚ್ಚ ನ್ಯಾಯಾಲಯವು ಹೊಂದಿದೆ” ಎನ್ನುವ ಅರ್ಥವಿಲ್ಲದ ವಾಕ್ಯವೂ ಸಹ ಪ್ರಶ್ನೆಯಾಗಿರುವುದು ಆಯೋಗದ ಗಂಭೀರಲೋಪದ ವಿಷಯವಾಗಿರುತ್ತದೆ. ಕಳೆದ ಬಾರಿ ಪ್ರಾಧಿಕಾರದ ಸೂಚನೆಯ ಮೇರೆಗೆ ಆಯೋಗದಲ್ಲಿ ಭಾಷಾಂತರ ವಿಭಾಗವನ್ನು ಆರಂಭಿಸುವುದಾಗಿ ಭರವಸೆಯನ್ನು ನೀಡಿದರೂ ಸಹ ಇಲ್ಲಿಯವರೆಗೂ ಕ್ರಮಕ್ಕೆ ಮುಂದಾಗದಿರುವುದು ಆಯೋಗದ ಅಸಹಾಯಕತೆಯನ್ನು ಅಭಿವ್ಯಕ್ತಿಸುತ್ತದೆ ಎಂದಿದ್ದಾರೆ. ಪದೇ ಪದೇ ಈ ರೀತಿಯ ಪ್ರಮಾದಗಳು ಉಂಟಾಗಲು…

Read More

ಭಗವಾನ್‌ ವಿಷ್ಣುವಿನ ಈ 10 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಹರಿಯ ಆ 10 ಶಕ್ತಿಶಾಲಿ ಮಂತ್ರಗಳಾವುವು ಗೊತ್ತೇ..? ಗುರು ಮತ್ತು ಗುರುವಾರದ ಅಧಿಪತಿಯನ್ನು ಭಗವಾನ್ ಮಹಾವಿಷ್ಣು ಎಂದು ಹೇಳಲಾಗುತ್ತದೆ. ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುದೋಷವಿದ್ದರೆ ಗುರುವಾರದಂದು ಶ್ರೀ ಹರಿ ನಾರಾಯಣ ಮತ್ತು ಬೃಹಸ್ಪತಿ ದೇವರನ್ನು ಪೂಜಿಸುವ ಸಂಪ್ರದಾಯ ಮತ್ತು ಪದ್ಧತಿಯಿದೆ. ಈ ದಿನ ಉಪವಾಸ ವ್ರತವನ್ನು ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೇ, ಮನೆಯಲ್ಲಿ ಹಣದ ಕೊರತೆ ಕೂಡ ಇರುವುದಿಲ್ಲ. ಈ ದಿನ ಭಗವಾನ್ ವಿಷ್ಣುವಿನ ಪೂಜೆಯ ಜೊತೆಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು ಕೂಡ ಶ್ರೇಯಸ್ಕರವಾಗಿರುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ…

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆವಿ ವೆಲ್ ಕ್ಯಾಸ್ಟ್ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 10.01.2025 (ಶುಕ್ರವಾರ) ಬೆಳಗ್ಗೆ 10:00 ರಿಂದ ಸಂಜೆ 03:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಲ್ಲದೇ ನಾಡಿದ್ದು ಇತರೆಡೆಗಳಲ್ಲಿ ಪವರ್ ಕಟ್ ಆಗಲಿದೆ. ಈ ಬಗ್ಗೆ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಜನವರಿ.10ರ ನಾಳೆ, “ರವೀಂದ್ರ ನಗರ, ಪ್ರಸಹನಾಥ್ ನಗರ, ಸಂತೋಷ್ ನಗರ, ಏರ್ ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಾಕಾಶ್ತ್ರ ಅಪಾರ್ಟ್ ಮೇಂಟ್, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಚ್ ಎಚ್ ವಿ, ಡಿಎಂಜಿ, ಕೃಷ್ಣಾ ಫ್ಯಾಚ್ರಿಕೇಶನ್ಸ್, ಜೆಮಿನಿ ಇಂಡಸ್ಟ್ರೀಸ್ ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಪ್ರಿಸ್ ಐಎಲ್, ಎಮ್ ಎಸ್ ಐಎಲ್, ವಿಪ್ರೋವೆಲ್ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ ವೋ, ಏವೆರಿ ಡೆನ್ನಿಸನ್, ಹಿಟಾಚ್ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಅಂತ…

Read More

ಬೆಂಗಳೂರು: ದೀರ್ಘಕಾಲದ ಸೊಂಟ ನೋವಿನಿಂದ ಬಳಲುತ್ತಿದ್ದ ಮಲ್ಲೇಷ್ಯಾ ಮೂಲದ 53 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ರೋಬೋಟ್‌ ಸಹಾಯದ ಮೂಲಕ “ಹಿಪ್‌ ಬದಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.ಸಲಾಯಿತು. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ಪ್ರಧಾನ ನಿರ್ದೇಶಕ ನಾರಾಯಣ್ ಹುಲ್ಸೆ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆ ಬಳಿಕವೇ ರೋಗಿಯು ನಡೆಯಲು ಸಶಕ್ತರಾಗಿದ್ದರು. ಈ ಕುರಿತು ಮಾತನಾಡಿದ ಡಾ. ನಾರಾಯಣ್‌ ಹುಲ್ಸೆ, ಮಲ್ಲೇಷ್ಯಾ ಮೂಲದ 53 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿದ್ದ ರೋಗಿಯು ಮೂರು ವರ್ಷದ ಹಿಂದೆ ಕೋವಿಡ್‌ ಸೋಂಕಿಗೆ ಒಳಗಾಗಿ, ಅದರ ಅಡ್ಡಪರಿಣಾಮದಿಂದ ಅವಾಸ್ಕುಲರ್ ನೆಕ್ರೋಸಿಸ್ (AVN) ಗೆ ಒಳಗಾಗಿ, ದೀರ್ಘಕಾಲದ ಸೊಂಟದ ನೋವಿನಿಂದ ಬಳಲುತ್ತಿದ್ದರು. ವಿಶ್ವಾದ್ಯಂತ ಅನೇಕ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರೂ ಎಲ್ಲಿಯೂ ಸಫಲ ಕಾಣಲಿಲ್ಲ, ಅಷ್ಟೆ ಅಲ್ಲದೆ, ಎರಡು ವಿಫಲ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಬಳಿಕ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಇಲ್ಲಿ ನಮ್ಮ ತಂಡ ಅವರನ್ನು ಸಂಪೂರ್ಣ…

Read More

ಬೆಂಗಳೂರು: 66/11 kV ಫ್ರೇಸ್ಟೀಜ್ ಪಾಲ್ಕಾಂನ್ ಸಿಟಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜಯನಗರ ವಿಭಾಗದ S14 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 11.01.2025 (ಶನಿವಾರ) ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 17:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. “ಪೋರಮ್ ಮಾಲ್, ಫ್ರೇಸ್ಟೀಜ್ ಪಾಲ್ಕಾಂನ್ ಸಿಟಿ ಅಪಾರ್ಟ್ ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮ್ಯೇನ್ ರೋಡ್ ನಾರಾಯಣ ನಗರ, 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್ ಎಸ್ ಶಾಲೆ, ಕೋಣನಕುಂಟೆ ಸರ್ಕಾರಿ ಶಾಲೆ, ಜರಗನಹಳ್ಳಿ ಪಾರ್ಕ್, ಗಂಗಾದಾರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸಾ ಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಾರ್ಜುನ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಇನ್ನೂ 66/11kV ಎನ್.ಜಿ.ಇ.ಎಫ್ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ…

Read More

ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ ವಿಷಯದಲ್ಲಿ ಸರಕಾರವು ಯುವಜನರ ಜೊತೆ ಯಾಕೆ ಆಟ ಆಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಭವಿಷ್ಯ ಕಂಡುಕೊಳ್ಳಲು ಹಲವು ಯುವಕರು ಕೆಪಿಎಸ್ಸಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಪ್ರಿಲಿಮಿನರಿ ಪರೀಕ್ಷೆ ನಡೆದಾಗ 200 ಪ್ರಶ್ನೆಗಳಲ್ಲಿ 57 ಪ್ರಶ್ನೆಗಳು ಕನ್ನಡದಲ್ಲಿ ತಪ್ಪಾಗಿ ಮುದ್ರಣ ಆಗಿತ್ತು. ಅದರಿಂದ ಬಹಳ ಜನರಿಗೆ ಅನ್ಯಾಯ ಆಗಿದ್ದು, ಹೋರಾಟವೂ ನಡೆದಿತ್ತು ಎಂದರು. ಈಗ ಕಳೆದ ವಾರ ಮತ್ತೆ ಪರೀಕ್ಷೆ ನಡೆದಿದೆ. ಈ ಪರೀಕ್ಷೆಯಲ್ಲಿ 200 ಪ್ರಶ್ನೆಗಳ ಪೈಕಿ 33 ಪ್ರಶ್ನೆಗಳು ತಪ್ಪಾಗಿ ಮುದ್ರಣಗೊಂಡಿವೆ. ಆಂಗ್ಲ ಭಾಷೆಯ ಪ್ರಶ್ನೆಗಳು ಕನ್ನಡದಲ್ಲಿ ಅರ್ಥವೇ ಆಗದಂತಿದ್ದು, ಪ್ರಶ್ನೆಯ ರೀತಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರಕ್ಕೆ ಕನ್ನಡವೂ ಬರುವುದಿಲ್ಲ; ಇದು ಮುಖ್ಯಮಂತ್ರಿಗಳ ಪರಿಧಿಯಲ್ಲಿ ಬರುವ ವಿಷಯ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.…

Read More

ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದೆ ಮೋಸ್ಟ್ ವಾಂಟೆಂಡ್ ಆರು ನಕ್ಸಲರು ಶರಣಾಗತರಾಗಿದ್ದರು. ಅವರಿಗೆ ರಾಜ್ಯ ಸರ್ಕಾರದಿಂದ ತಲಾ 3 ಲಕ್ಷ ಸಹಾಯಧನವನ್ನು ಘೋಷಣೆ ಮಾಡಲಾಗಿತ್ತು. ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಂದ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಮುಂದೆ ಶರಣಾಗತರಾದಂತ 6 ನಕ್ಸಲರನ್ನು ಇಂದು ಬೆಂಗಳೂರಿನ NIA ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇಂತಹ ಆರು ನಕ್ಸಲರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಈ ಮೂಲಕ ಮೋಸ್ಟ್ ವಾಂಟೆಂಡ್ ಆರು ನಕ್ಸಲರು ಜೈಲುಪಾಲಾಗಿದ್ದಾರೆ. https://kannadanewsnow.com/kannada/appeal-for-help-from-the-public-may-your-helping-hand-be-to-this-family/ https://kannadanewsnow.com/kannada/state-one-labourer-dies-of-suffocation-while-dumping-chemical-3-critical/

Read More