Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು; ಕಿಯೋನಿಕ್ಸ್ ಹಗರಣ ಸಂಬಂಧ ರಾಜ್ಯ ಸರ್ಕಾರದಿಂದ ಕಿರುಕುಳ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಜಂಟಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ. ಅವರು ಏನು ಹೇಳಿದ್ರು ಅಂತ ಮುಂದೆ ಓದಿ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಯೆಯಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆಯೇ ಹೊರತು ನಮ್ಮಿಂದಲ್ಲ. ಭ್ರಷ್ಟಾಚಾರದೆಡೆಗಿನ ನಮ್ಮ ಸರ್ಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರೆಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು “ಕಿರುಕುಳ“ ಎಂದು ಹೆಸರು ಕೊಡುವುದು ಎಷ್ಟು ಸರಿ? ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ! ಇಂದು ಕಿಯೋನಿಕ್ಸ್ ಸರಬರಾಜುದಾರರ ಬಿಲ್ ಬಾಕಿ ಉಳಿದಿದೆ ಎಂದರೆ ಅದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಬೊಮ್ಮಯಿಯವರು ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರೇ ನೇರ ಕಾರಣ. ಜನಸಾಮಾನ್ಯರ ಬೆವರಿನ ನೂರಾರು ಕೋಟಿ ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕ ಇಡುವುದು ನಮ್ಮ ಹೊಣೆ ಮತ್ತು ಅತ್ಯಗತ್ಯದ…
ಬೆಂಗಳೂರು: ನಾಳೆ ಸಿಎ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಇದೇ ಸಮಯಕ್ಕೆ ಇಂದು ದಿಢೀರ್ ಬೆಂಗಳೂರು ವಿವಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಎನ್ನುವಂತೆ ನಾಳೆ ಬಿಕಾಂ ಪರೀಕ್ಷೆಯನ್ನು ಇರಿಸಲಾಗಿದೆ. ಇದೀಗ ನಾಳೆ ಸಿಎ ಪರೀಕ್ಷೆ ಬರೆಯೋದೋ ಅಥವಾ ಬಿಕಾಂ ಪರೀಕ್ಷೆ ಬರೆಯೋದೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳನ್ನು ದೂಡಲಾಗಿದೆ. ಈ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅವರ ಪೋಸ್ಟ್ ಸಾರಾಂಶ ಈ ಕೆಳಕಂಡಂತಿದೆ. ನನ್ನ ಮನೆಗೆ ಇಂದು ಸಂಜೆ ಓರ್ವ ಫಸ್ಟ್ ಬಿಕಾಂ ವಿದ್ಯಾರ್ಥಿನಿ ತನ್ನ ತಂದೆಯ ಜೊತೆ ಬಂದಿದ್ದರು. ನಾಳೆ ಬೆಳಗ್ಗೆ (16.1.2025, ಗುರುವಾರ) 9.30 ಗಂಟೆಗೆ ಅವರಿಗೆ ಮೊದಲನೇ ಬಿಕಾಂ ನ ಪರೀಕ್ಷೆ ನಿಗದಿಯಾಗಿತ್ತು. ಆಕೆ ಸಿಎ ಶಿಕ್ಷಣವನ್ನು ಸಹ ಪಡೆಯುತ್ತಿರುವುದರಿಂದ, ಸಿಎ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ. ಆದರೆ ಇಂದು ಸಂಜೆ 4:30ಗೆ ಆಕೆಯ ಮೊಬೈಲ್ ಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಈ ಕೆಳಕಂಡ ಮೆಸೇಜ್ ಬಂದು “ನಾಳೆ…
ಜ್ಯೋತಿಷ್ಯ ಎನ್ನುವುದು ವೇದದ ಒಂದು ಅಂಗ. ವೇದವು ಷಡಂಗ ಗಳಿಂದ ಕೂಡಿದೆ. ಆರು ಅಂಗಗಳಲ್ಲಿ ಜ್ಯೋತಿಷ್ಯವು ವೇದದ ಕಣ್ಣು ಎಂದೇ ಪರಿಪೂರ್ಣತೆಯನ್ನು ಪಡೆದಿದೆ. ಜ್ಯೋತಿಷ್ಯವು ಸುಳ್ಳು ಎನ್ನುವುದಾದರೆ ವೇದ ಕೂಡ ಸುಳ್ಳು ಎಂದಂತೆ ಆಗುತ್ತದೆ. ವೇದ ಸುಳ್ಳಾದರೆ ಇಂದು ದೇವಾಲಯಗಳಲ್ಲಿ ಮಾಡುವ ಸಕಲ ಪೂಜಾವಿಧಾನಗಳು ಸಕಲ ವೈದಿಕ ಮಂತ್ರಗಳು ಅಷ್ಟಾದಶ ಪುರಾಣಗಳು, ಉಪನಿಷತ್ತುಗಳು, ಭಗವದ್ಗೀತೆ ,ಪಂಚಾಂಗಗಳು (ವಾರ ತಿಥಿ ನಕ್ಷತ್ರ ಯೋಗ ಕರಣ) ಗ್ರಹಣ ಮುಹೂರ್ತಗಳು ಉತ್ಸವಗಳು ರಥೋತ್ಸವಗಳು ದೇವ ಪ್ರತಿಷ್ಠೆಗಳು ಸಂಪ್ರದಾಯಬದ್ಧ ದೈವಿಕ ವಿಷಯಗಳು ಇತ್ಯಾದಿಗಳೆಲ್ಲವೂ ಕೂಡ ಸುಳ್ಳು ಎಂದಂತೆ ಆಗುತ್ತದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯದ ಬಗ್ಗೆ ಅಲ್ಲಸಲ್ಲದ ಹೇಳಿಕೆಗಳು ಕುಚೋದ್ಯ ಉಕ್ತಿಗಳು ಅಲ್ಲಲ್ಲಿ ಕಂಡುಬರುತ್ತವೆ. ನವ ನಾಗರಿಕತೆಯು ಪ್ರತಿಯೊಂದನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಸ್ವೀಕರಿಸುವುದರಿಂದ ಜ್ಯೋತಿಷ್ಯವು ಈ ಕಾಲಘಟ್ಟದ ವಿಜ್ಞಾನಕ್ಕೂ ಕೂಡ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯತೆ ಕಡಿಮೆ ಇರುವುದರಿಂದ ಇದರ ಬಗ್ಗೆ ಅವಹೇಳನ ಮಾಡುವ ಒಂದು ಸಮೂಹ ಸೃಷ್ಟಿಯಾದದ್ದು ಸುಳ್ಳಲ್ಲ….! ಅದಕ್ಕಾಗಿಯೇ ಈ…
ಬೆಂಗಳೂರು: ಭ್ರಷ್ಟಾಚಾರದ ಅನೇಕ ಹಗರಣಗಳು, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ- ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ. ಗೋಲ್‍ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆಯನ್ನು ಮುಂದಕ್ಕೆ ತಂದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಅವರ ಪಕ್ಷದಲ್ಲೇ ಅದಕ್ಕೆ ವಿರೋಧ ಇದೆ. ಒಂದು ಕಡೆ ಡಿ.ಕೆ.ಶಿವಕುಮಾರ್, ಇನ್ನೊಂದು ಕಡೆ ಶಾಮನೂರು ಶಿವಶಂಕರಪ್ಪ ಅವರೂ ವಿರೋಧ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಕಾಂತರಾಜ್ ವರದಿಯಲ್ಲಿ ಏನಿದೆಯೋ ಅದನ್ನೇ ಜಯಪ್ರಕಾಶ್ ಹೆಗ್ಡೆಯವರೂ ಕೊಟ್ಟಿದ್ದಾರೆ. ಅಂದಮೇಲೆ ಕಳೆದ ಹಲವು ವರ್ಷಗಳಲ್ಲಿ ಏನು ಬದಲಾವಣೆ ಆಗಿದೆ? ವಾಸ್ತವವಾಗಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಈಗ ಸುಮಾರು 1.50 ಕೋಟಿ ಇದ್ದರೂ ಅದನ್ನು ಒಂದು ಕೋಟಿ ಎಂಟು ಲಕ್ಷ ಎಂದೇ ತೋರಿಸಿದ್ದಾರೆ ಎಂದು ಟೀಕಿಸಿದರು. ಸರಿಯಾದ ಅಂಕಿಅಂಶ ಇಲ್ಲ; ಮುಂದಿನ ಏಪ್ರಿಲ್, ಮೇ ತಿಂಗಳಿನಲ್ಲಿ ಜನಗಣತಿ ನಡೆಯಲಿದೆ. ಆಗ ಸರಿಯಾದ ಅಂಕಿಅಂಶ…
ಬೆಂಗಳೂರು: ಹೊಸ ಬಿಲ್ಡಿಂಗ್ ಒಂದಕ್ಕೆ ವಿದ್ಯುತ್ ಸಂಪರ್ಕ ನೀಡಲು 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಬೆಸ್ಕಾಂ ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಬಸನಗರದ ಬೆಸ್ಕಾಂ ಸಹಾಯಕ ಎಂಜಿನಿಯರ್ ಯೋಗರಾಜ್.ಎಲ್ ಹಾಗೂ ಬೆಸ್ಕಾಂ ಖಾಸಗಿ ಚಾಲಕ ಮುರಳಿ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದಂತವರಾಗಿದ್ದಾರೆ. ಮಧು ಗೌಡ ಎಂಬುವರು ಹೊಸದಾಗಿ ನಿರ್ಮಿಸಲಾದ ಕಟ್ಟಡಕ್ಕೆ ಬೆಸ್ಕಾಂನಿಂದ ಹೊಸ ವಿದ್ಯುತ್ ಸಂಪರ್ಕ ನೀಡಲು 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬೆಸ್ಕಾಂ ಎಇ ಯೋಗರಾಜ್.ಎಲ್ ಅವರು ಲಂಚದ ಮೊತ್ತವನ್ನು ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ. ಬೆಂಗಳೂರು ನಗರದ ಲೋಕಾಯುಕ್ತ ಎಸ್ಪಿ ಡಾ.ಕೆ ವಂಶಿಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ಪಿಐ ಆಂಜನ್ ಕುಮಾರ್.ವಿ, ಪಿಐ ವಿಜಯ ಕೃಷ್ಣ, ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/ksrtc-conductor-suspended-for-issuing-tickets-to-passengers-from-passengers/ https://kannadanewsnow.com/kannada/the-state-government-has-given-green-signal-to-fill-up-the-vacant-posts-of-teachers-in-private-aided-high-schools/
ಬೆಂಗಳೂರು: ಪ್ರಯಾಣಿಕರಿಂದಲೇ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಿದಂತ ಕೆ ಎಸ್ ಆರ್ ಟಿಸಿ ಕಂಡಕ್ಟರ್ ಒಬ್ಬರನ್ನು ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ. ಕೆ ಎಸ್ ಆರ್ ಟಿ ಸಿ ರಾಮನಗರ ವಿಭಾಗಕ್ಕೆ ಸಂಬಂಧಿಸಿದಂತ ಬಸ್ಸಿನಲ್ಲಿ ನಿರ್ವಾಹಕ ಬೇರೊಬ್ಬರಿಂದ ಟಿಕೇಟ್ ವಿತರಣೆ ಮಾಡಿಸುತ್ತಿರುವ ವಿಡಿಯೋ ಹಾಗೂ ಸುದ್ದಿಗೆ ಸಂಬಂಧಪಟ್ಟಂತೆ ಸದರಿ ನಿರ್ವಾಹಕರನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ. ರಾಮನಗರ ಡಿಪೋಗೆ ಸಂಬಂಧಿಸಿದಂತ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಚಾಲಕ ಕಂ ನಿರ್ವಾಹಕ ನವೀನ್.ಟಿಎನ್ ಎಂಬುವರು ಪ್ರಯಾಣಿಕರಿಂದಲೇ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ, ನವೀನ್ ಟಿ ಎಸ್, ಚಾಲಕ ಕಂ ನಿರ್ವಾಹಕ, ರಾಮನಗರ ವಿಭಾಗ ಅವರು ಮೇಲ್ನೋಟಕ್ಕೆ ಸಾಭೀತಾಗುವಂತಹ ಮತ್ತು ಕೆ ಎಸ್ ಆರ್ ಟಿಸಿ ನಡತೆ ಹಾಗೂ ಶಿಸ್ತು ನಿಯಮಾವಳಿಗಳು 1971ರ ಪ್ರಕಾರ ದಂಡನಾರ್ಹವಾದ ಅಪರಾಧಗಳನ್ನು ಎಸಗಿದ್ದಾರೆಂದು ವರದಿಯಿಂದ ತಿಳಿದಿರುತ್ತದೆ. ಈ ಹಿನ್ನಲೆಯಲ್ಲಿ…
ಹುಬ್ಬಳ್ಳಿ: ಮೈಸೂರಿನ ಮುಡಾ ಹಗರಣದಡಿ ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಮುಖ್ಯಮಂತ್ರಿಗಳ ಕುಟುಂಬ ಅಕ್ರಮವಾಗಿ ಪಡೆದುಕೊಂಡಿತ್ತು. ನಿವೇಶನಗಳನ್ನು ಹಿಂತಿರುಗಿಸಿದರೂ ತಪ್ಪು ತಪ್ಪೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಅಪರಾಧ ಅಪರಾಧವೇ; ನಿವೇಶನ ಹಿಂತಿರುಗಿಸಿದ ಮಾತ್ರಕ್ಕೆ ಕಳಂಕದಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ. ಇವತ್ತು ಸ್ನೇಹಮಯಿ ಕೃಷ್ಣರ ಮೇಲೆ ಬೆದರಿಕೆ ಹಾಕಿ ಕೇಸುಗಳನ್ನು ಹಾಕುತ್ತಿದ್ದಾರೆ. ಇವೆಲ್ಲ ಷಡ್ಯಂತ್ರ, ಪಿತೂರಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು. ಸ್ನೇಹಮಯಿ ಕೃಷ್ಣ ನ್ಯಾಯಪರ ಹೋರಾಟ ಕೈಬಿಟ್ಟಿಲ್ಲ; ಅವರನ್ನು ಅಭಿನಂದಿಸುವೆ ಎಂದ ಅವರು, ಸ್ನೇಹಮಯಿ ಕೃಷ್ಣ ಅವರ ಕೋರಿಕೆಯಂತೆ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದೆಂಬ ವಿಶ್ವಾಸ ಇರುವುದಾಗಿ ಹೇಳಿದರು. 14 ನಿವೇಶನವಷ್ಟೇ ಅಲ್ಲ; ಇದರಲ್ಲಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚಿನ ಹಗರಣ ನಡೆದಿದೆ. ಸಿದ್ದರಾಮಯ್ಯನವರು, ಕಾಂಗ್ರೆಸ್ ಸರಕಾರ ಬಂದಾಗಿನಿಂದ ಸಾವಿರಾರು ನಿವೇಶನಗಳನ್ನು ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಮಾರಿಕೊಂಡಿದ್ದಾರೆ ಎಂದು ಇನ್ನೊಂದು…
ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೆಂಡರ್ಸ್ ಪತ್ರ ಬರೆದಿರುವ ಪ್ರಕರಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತನ್ನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು. ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತುಗಳನ್ನಾಡುವುದು ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್ ಗಳ ಬಾಕಿ ಬಿಲ್ ಗಳನ್ನು ಚುಕ್ತಾ ಮಾಡಲಿ ಎಂದರು. ಈ ಸರಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್ ಗಳ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಸರಕಾರದ ಆಂತರ್ಯ ಏನೆಂಬುದು ಎಲ್ಲರೂ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್ ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು. ಅವರೇನೂ ಭಿಕ್ಷುಕರಲ್ಲ, ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಖರ್ಗೆ…
ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಈ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಕುರಿತಂತೆ ಬಿಎಂಟಿಸಿ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮಧಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ. ಬೆಂ.ಮ.ಸಾ. ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಗಳಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ 16.01.2025 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ: ಕ್ರ.ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ 1 ಎಂ ಎಫ್-8ಎ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಶಿವಾಜಿನಗರ ಮಲ್ಲೇಶ್ವರಂ ಸರ್ಕಲ್, ಗುಟ್ಟಹಳ್ಳಿ, ಮೌಂಟ್ ಕಾರ್ಮೆಲ್ ಕಾಲೇಜು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ 1 ಮಾರ್ಗ ಸಂಖ್ಯೆ : ಎಂಎಫ್-8ಎ ಬಿಡುವ ವೇಳೆ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಶಿವಾಜಿನಗರ 0715, 0845, 1215, 1330 1440, 1625 0805, 0845,…
ನವದೆಹಲಿ: ಮದ್ಯದ ಹಗರಣದಲ್ಲಿ ಛತ್ತೀಸ್ಗಢದ ಮಾಜಿ ಅಬಕಾರಿ ಸಚಿವ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸುಮಾರು 2,161 ಕೋಟಿ ರೂ.ಗಳ ಮದ್ಯ ಹಗರಣದಿಂದ ಉತ್ಪತ್ತಿಯಾದ ಅಪರಾಧದ ಆದಾಯದಿಂದ ಹಿರಿಯ ಕಾಂಗ್ರೆಸ್ ನಾಯಕ ಮಾಸಿಕ ಆಧಾರದ ಮೇಲೆ ಗಣನೀಯ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುತ್ತಿದ್ದರು ಎಂದು ಇಡಿ ಸೋಮವಾರ ಹೇಳಿದೆ. ಏಜೆನ್ಸಿಯ ಪ್ರಕಾರ, ಕವಾಸಿ ಲಖ್ಮಾ ಅವರು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಅವಧಿಯಲ್ಲಿ ಅಪರಾಧದ ಆದಾಯವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. https://kannadanewsnow.com/kannada/micro-finance-staff-harassed-in-cm-siddaramaiahs-hometown-people-try-to-leave-village/ https://kannadanewsnow.com/kannada/what-is-the-difference-between-heart-rate-and-pulse-rate-how-much-should-a-normal-person-have-heres-the-information/













