Author: kannadanewsnow09

ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಆರೋಪದಲ್ಲಿ ದಾಖಲಾಗಿದ್ದಂತ ಪ್ರಕರಣದ ತನಿಖೆಯನ್ನು, ಸಿಐಡಿಗೆ ವಹಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಮಹಿಳೆಯರೊಬ್ಬರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಅತ್ಯಾಚಾರ ಆರೋಪದಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಬಳಿಕ ನಾನು ಆಕೆಯನ್ನು ಮುಟ್ಟಿಯೇ ಇಲ್ಲ. ನನ್ನ ತಾಯಿ ಸಮಾನ ಎಂಬುದಾಗಿ ಸ್ಪಷ್ಟ ಪಡಿಸಿ, ಅತ್ಯಾಚಾರ ಆರೋಪ ಮಾಡಿ, ದೂರು ನೀಡಿದ್ದಂತ ಮಹಿಳೆಯ ವಿರುದ್ಧವೇ ಶಾಸಕ ವಿನಯ್ ಕುಲಕರ್ಣಿ ಪ್ರತಿದೂರು ನೀಡಿದ್ದರು. ಇಂತಹ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ವಿರುದ್ಧದ ಅತ್ಯಾಚಾರ ಕೇಸ್ ಸಂಬಂಧ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ಈ ಮೂಲಕ ಸಿಐಡಿ ತನಿಖೆಗೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಕೇಸ್ ಆದೇಶಿಸಿದೆ. https://kannadanewsnow.com/kannada/former-pakistan-cricketers-video-with-star-mia-khalifa-goes-viral-watch-video/ https://kannadanewsnow.com/kannada/journalist-ganesh-popularly-known-as-crime-ganesh-passes-away/ https://kannadanewsnow.com/kannada/kannada-film-producer-and-udaya-tv-chairman-selvam-passes-away/

Read More

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ರಾಘವೇಂದ್ರ ಡೆವಲಪರ್ಸ್ ನಿಂದ ಲೇಔಟ್ ಮಾಡಲಾಗಿದೆ. ಈ ಲೇಔಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸತ್ಯಕ್ಕೆ ದೂರವಾದಂತ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ರಾಘವೇಂದ್ರ ಡೆವಲಪರ್ಸ್ ಮಾಲೀಕ ಪ್ರದೀಪ್ ಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಇಂದು ಈ ಕುರಿತಂತೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಾಗರ ಜನತೆಗೆ ನಮಸ್ಕಾರ. ನಾನು ಪ್ರದೀಪ್ ಕುಮಾರ್. ರಾಘವೇಂದ್ರ ಡೆವಲಪರ್ಸ್ ಮಾಲೀಕನಾಗಿದ್ದೇನೆ. ನಾನು ಸಾಗರ ನಗರಸಭೆ ವ್ಯಾಪ್ತಿಯನ್ನು ಒಳಗೊಂಡ ವಿಜಯನಗರ 2ನೇ ಹಂತದಲ್ಲಿ 4 ಎಕರೆ ಜಮೀನನ್ನು ಜಂಟಿ ಅಭಿವೃದ್ಧಿ ಮಾಡಲು ಮಾಲೀಕರಾದಂತ ಅನಿಲ್ ಕುಮಾರ್ ಅವರಿಂದ ಖರೀದಿಸಿರುತ್ತೇನೆ ಎಂದಿದ್ದಾರೆ. ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಈ ಸಂಬಂಧ ನೋಂದಾಯಿಸಿಕೊಳ್ಳಲಾಗಿದೆ. ಒಪ್ಪಂದದಂತೆ ನನ್ನ ಬ್ಯಾಂಕ್ ಖಾತೆಯಿಂದ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿರುತ್ತದೆ. ಒಪ್ಪಂದದ ಪ್ರಕಾರ ನಾನು ರಸ್ತೆ, ಚರಂಡಿ, ಯುಜಿಡಿ, ವಿದ್ಯುತ್ ಕಂಬಗಳನ್ನು ಕೂಡ ಅಳವಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ. ಜಂಟಿ ಅಭಿವೃದ್ಧಿಯ…

Read More

ಕಲಬುರಗಿ : ರಾಜ್ಯದ ಕಾಂಗ್ರೆಸ್ ಸರಕಾರವು ಹಗರಣಗಳಲ್ಲಿ ಕ್ಲೀನ್ ಚಿಟ್ ಪಡೆಯಲು ಎಸ್‍ಐಟಿ, ಸಿಐಡಿಯನ್ನು ನೇಮಿಸುತ್ತದೆ ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಆರೋಪಿಸಿದರು. ಈ‌ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಇ.ಡಿ. ಬರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. ಸಿಬಿಐಗೆ ಹೋದಾಗ, ಅದರಲ್ಲಿ ಹಣಕಾಸು ಅವ್ಯವಹಾರ (ಮನಿ ಲಾಂಡರಿಂಗ್) ಇದೆ ಎಂದು ಗೊತ್ತಾದಾಗ ಇ.ಡಿ. ತನಿಖೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು. 187 ಕೋಟಿ ಅವ್ಯವಹಾರ ನಡೆದುದು ನಿಜ; ಆದರೆ, ಕೇವಲ 87 ಕೋಟಿ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಯವರು ಅವತ್ತೇ ಹೇಳಿದ್ದರು. ಸತ್ಯ ಒಪ್ಪಿಕೊಂಡ ಮೇಲೆ ಕ್ರಮ ಆಗಿರಲಿಲ್ಲ. ಕದ್ದ ಮಾಲು ವಾಪಸ್ ಕೊಟ್ಟರೆ ಕೇಸ್ ಖುಲಾಸೆ ಆಗುತ್ತದೆಯೇ? ಇದರಲ್ಲಿ 20 ಕೋಟಿ ಹಣವನ್ನು ತುಕಾರಾಂ ಅವರ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ನಾಗೇಂದ್ರರ ವೈಯಕ್ತಿಕ ವೆಚ್ಚವಾಗಿ ಹಣ ಖರ್ಚಾದುದರ ಕುರಿತು ಇ.ಡಿ. ವರದಿಯಲ್ಲಿ ಉಲ್ಲೇಖವಿದೆ .ಈಗ ಸಿಎಂ ಏನು ಹೇಳುತ್ತಾರೆ…

Read More

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ನೇಮಿಸಲಾದ ಜಸ್ಟೀಸ್ ಮೈಕಲ್ ಡಿ ಕುನ್ಹಾ ರವರ ವಿಚಾರಣಾ ಆಯೋಗದ ಮಧ್ಯಂತರ ಅವಧಿಯ ಸತ್ಯಸಂಶೋಧನಾ ವರದಿಯ ಕುರಿತು ತನಿಖೆ ಮತ್ತು ಕ್ರಮಗಳನ್ನು ಮುಂದುವರೆಸಲು ವಿಶೇಷ ತನಿಖಾ ತಂಡ ನೇಮಿಸಲು (ಎಸ್ಐಟಿ) ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ. ಸಚಿವ ಸಂಪುಟದ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ರವರು ಸತ್ಯಸಂಶೋಧನಾ ವರದಿಯ ನಂತರ ಯಾರ ಪಾತ್ರ ಏನು ಎಂಬುದನ್ನು ತನಿಖೆ ಮಾಡಿ ಎಸ್.ಐ.ಟಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. • ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದ್ದು, ರೂ.7223.64 ಕೋಟಿಗಳ ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯ ಅವ್ಯವಹಾರದ ಕುರಿತು ತನಿಖೆ ನಡೆಸಿದೆ. • ರೂ.500.00 ಕೋಟಿಗಳ ಮೊತ್ತದ ವಸೂಲಾತಿ ಶಿಫಾರಸ್ಸು ಮಾಡಿದೆ. ಬಿ.ಬಿ.ಎಂ.ಪಿ 4 ವಲಯಗಳ ಮತ್ತು ರಾಜ್ಯದ ಎಲ್ಲಾ 31 ಜಿಲ್ಲೆಗಳ ವರದಿ ಸಲ್ಲಿಕೆ ಬಾಕಿಯಿದೆ. 55000 ಕಡತಗಳನ್ನು…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: 2024 ರ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ದಕ್ಷಿಣ ಕೊರಿಯಾದ ಲೇಖಕ ಹಾನ್ ಕಾಂಗ್ ಅವರಿಗೆ “ಐತಿಹಾಸಿಕ ಆಘಾತಗಳನ್ನು ಎದುರಿಸುವ ಮತ್ತು ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ತೀವ್ರವಾದ ಕಾವ್ಯಾತ್ಮಕ ಗದ್ಯಕ್ಕಾಗಿ” ನೀಡಲಾಗಿದೆ. https://twitter.com/NobelPrize/status/1844332268191613152 ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನ ನೊಬೆಲ್ ಸಮಿತಿ ಗುರುವಾರ ಈ ಘೋಷಣೆ ಮಾಡಿದೆ. ಅಮೆರಿಕದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಮಂಗಳವಾರ, 2024 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಜೆ ಹಾಪ್ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್ ಅವರಿಗೆ “ಕೃತಕ ನರ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಅಡಿಪಾಯ ಆವಿಷ್ಕಾರಗಳು ಮತ್ತು ಆವಿಷ್ಕಾರಗಳಿಗಾಗಿ” ನೀಡಲಾಯಿತು. ಅವರ ಕೆಲಸವು ಆಧುನಿಕ ಯಂತ್ರ ಕಲಿಕೆಯ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ಬುಧವಾರ, ರಸಾಯನಶಾಸ್ತ್ರದಲ್ಲಿ 2024 ರ ನೊಬೆಲ್ ಪ್ರಶಸ್ತಿಯನ್ನು ಡೇವಿಡ್ ಬೇಕರ್ ಅವರಿಗೆ “ಕಂಪ್ಯೂಟೇಶನಲ್ ಪ್ರೋಟೀನ್ ವಿನ್ಯಾಸಕ್ಕಾಗಿ” ನೀಡಲಾಯಿತು ಮತ್ತು ಉಳಿದ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಜಾಮೀನು ಆದೇಶವನ್ನು ಅಕ್ಟೊಬರ್ 14ಕ್ಕೆ ಕಾಯ್ದಿರಿಸಿದ್ದಾರೆ. ಈ ಮೂಲಕ ಇಂದು ನಟ ದರ್ಶನ್ ಗೆ ಜಾಮೀನು ಭಾಗ್ಯ ದೊರೆಯದಂತೆ ಆಗಿದೆ. ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಯಿತು. ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕ್ರತ್ಯ ಸಾಬೀತುಪಡಿಸುವಂತಹ ಒಂದು ಅಂಶವೂ ಇಲ್ಲ. ರಿಮ್ಯಾಂಡ್ ಅರ್ಜಿ ಸಲ್ಲಿಸಿದರೆ ಕೋರ್ಟಿಗೆ ಕೇಸ್ ಡೈರಿ ಪ್ರತಿ ನೀಡಬೇಕು. ಕೇಸ್ ಡೈರಿಯಲ್ಲ ಡೈರಿಯ ಪ್ರತಿ ಸಲ್ಲಿಸಬೇಕು. ಏಕೆಂದರೆ ಕೆಸ್ ಡೈರಿ ಕೊಟ್ಟರೆ ಅದನ್ನು ತನಿಖಾಧಿಕಾರಿ ಪಡೆಯುತ್ತಾರೆ. ಹೀಗಾಗಿಯೇ ಕೆಸ್ ಡೈರಿಯ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಬೇಕು.ಇದಕ್ಕೆ ಪ್ರಸನ್ನ ಕುಮಾರ್…

Read More

ಚಿತ್ರದುರ್ಗ: ದೇವನಹಳ್ಳಿ ಕೆಐಎಡಿಬಿ ಕರ್ಮಕಾಂಡ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಎಂಬುದಾಗಿ ಬಿಜೆಪಿ ಶಾಸಕ ಸಿ.ಟಿ ರವಿ ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ಭೂ ಕರ್ಮಕಾಂಡಗಳ ಬಗ್ಗೆ ಆಕ್ರೋಶ ಹೊರಹಾಕಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ KIADB ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ಹಗರಣ ನಡೆದಿದ್ದು, ಈ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು. 1984 ರಲ್ಲಿ ಇದೇ ಭೂಮಿಯನ್ನು ಉಳುಮೆ ಮಾಡಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಆದರೆ ಕೆಐಎಡಿಬಿ ಭೂಸ್ವಾದೀನ ಪ್ರಕ್ರಿಯೆ ವೇಳೆ ಜಮೀನಿಗೆ ಮಾಲೀಕರನ್ನು ಹುಟ್ಟುಹಾಕಲಾಗಿದೆ. ಬೇನಾಮಿ ರೀತಿ ಜಮೀನು ಪರಿಹಾರದ ರೂಪದಲ್ಲಿ ಹಣ ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು. ಸಿದ್ದರಾಮಯ್ಯ ಸರ್ಕಾರವು ಈ ಭೂಮಿಯನ್ನು ಕೊಟ್ಟಿದ್ದೇ ಆಗಿದ್ದರೇ, ಅದೂ ಕೂಡಾ ಭಾರೀ ಅಕ್ರಮ ಆಗುತ್ತದೆ.…

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ರಾಫೆಲ್ ನಡಾಲ್ ಈ ಋತುವಿನ ಕೊನೆಯಲ್ಲಿ ವೃತ್ತಿಪರ ಟೆನಿಸ್ನಿಂದ ನಿವೃತ್ತರಾಗುವುದಾಗಿ ಖಚಿತಪಡಿಸಿದ್ದಾರೆ. 38 ವರ್ಷದ ಟೆನಿಸ್ ಐಕಾನ್ ನವೆಂಬರ್ ನಲ್ಲಿ ಮಾಲಾಗಾದಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ಸ್ ನಲ್ಲಿ ಸ್ಪೇನ್ ಪರ ಕೊನೆಯ ಸ್ಪರ್ಧಾತ್ಮಕ ಪ್ರದರ್ಶನ ನೀಡಲಿದ್ದಾರೆ. ನಡಾಲ್ ಗುರುವಾರ ಬಿಡುಗಡೆ ಮಾಡಿದ ವೀಡಿಯೊ ಸಂದೇಶದ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ತಮ್ಮ ಇತ್ತೀಚಿನ ಹೋರಾಟಗಳು ಮತ್ತು ಆಟವು ತನ್ನ ದೇಹದ ಮೇಲೆ ತೆಗೆದುಕೊಂಡ ದೈಹಿಕ ಹಾನಿಯನ್ನು ಪ್ರತಿಬಿಂಬಿಸಿದರು. ಗುರುವಾರ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ನಡಾಲ್, “ನಾನು ವೃತ್ತಿಪರ ಟೆನಿಸ್ನಿಂದ ನಿವೃತ್ತನಾಗುತ್ತಿದ್ದೇನೆ ಎಂದು ನಿಮಗೆ ತಿಳಿಸಲು ನಾನು ಇಲ್ಲಿದ್ದೇನೆ ಎಂದಿದ್ದಾರೆ. ವಾಸ್ತವವೆಂದರೆ ಇದು ಕೆಲವು ಕಷ್ಟಕರ ವರ್ಷಗಳು, ವಿಶೇಷವಾಗಿ ಕಳೆದ ಎರಡು ವರ್ಷಗಳು. ಮಿತಿಗಳಿಲ್ಲದೆ ಆಡಲು ನನಗೆ ಸಾಧ್ಯವಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ. https://twitter.com/RafaelNadal/status/1844308861492318594 https://kannadanewsnow.com/kannada/journalist-ganesh-popularly-known-as-crime-ganesh-passes-away/ https://kannadanewsnow.com/kannada/kannada-film-producer-and-udaya-tv-chairman-selvam-passes-away/

Read More

ಬೆಂಗಳೂರು: ವಾಲ್ಮಿಕಿ ನಿಗಮ ಕರ್ಮಕಾಂಡ, ಮುಡಾ ಸೈಟ್ ಅಕ್ರಮ ಹಗರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಕೆಐಎಡಿಬಿ ಭೂ ಅವ್ಯವಹಾರದ ಉರುಳು ಕೂಡಾ ಸುತ್ತಿಕೊಂಡಿದೆ. ಸರ್ಕಾರಿ ಜಮೀನನ್ನೇ ಬೇರೆಯವರ ಹೆಸರಲ್ಲಿ ಪರಿಗಣಿಸಿ ಪರಿಹಾರ ವಿತರಿಸಿರುವ ಭಾರೀ ಅಕ್ರಮ ಆರೋಪ ಕುರಿತಂತೆ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. “ಸಿಟಿಜನ್ ರೈಟ್ಸ್ ಫೌಂಡೇಷನ್” ಪರವಾಗಿ ಅಧ್ಯಕ್ಷ ಕೆ.ಎ.ಪಾಲ್ ನೀಡಿರುವ ಈ ದೂರು, ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ ಸಹಿತ ಹಲವರಿಗೆ ಉರುಳಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಏನಿದು ಆರೋಪ? ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದಲ್ಲೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಯಿಂದ ಭೂಸ್ವಾಧೀನ ಆದೇಶವಾಗಿದೆ. ಈ ಭೂಸ್ವಾಧೀನ ಪ್ರಕ್ರಿಯೆಯ ದಾಖಲೆಗಳನ್ನು ಗಮನಿಸಿದಾಗ ಅರ್ಹರಲ್ಲದವರ ಹೆಸರಿಗೆ ಹಣ ಸಂದಾಯ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ದೇವನಹಳ್ಳಿ ತಾಲೂಕಿನ ಸುತ್ತಮುತ್ತ ನೂರಾರು ಎಕರೆ ಜಮೀನನ್ನು ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಲು ತಯಾರಿ ನಡೆದಾಗಲೇ, ಕುಂದಾಣ ಹೋಬಳಿ ಚಪ್ಪರದಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” – ತಲಕಾವೇರಿ ಜಾತ್ರೆಗೆ ರೂ.75 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕೊಡಗು ಜಿಲ್ಲೆ, ‌ಮಡಿಕೇರಿ ತಾಲ್ಲೂಕು, ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಸ್ಥಾನದಲ್ಲಿ ಪ್ರತಿ ವರ್ಷದ ರೂಢಿ ಸಂಪ್ರದಾಯದಂತೆ ಈ ವರ್ಷ ದಿನಾಂಕ:17.10.2024 ರಂದು “ಶ್ರೀ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರೆಯು ನಡೆಯಲಿದೆ. ಕಳೆದ ವರ್ಷದಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನ ನೀಡಲಾಗುತ್ತಿದೆ. ಸದರಿ ಜಾತ್ರಾ ಮಹೋತ್ಸವಕ್ಕೆ ಈ ಹಿಂದೆ ಎಂದೂ ಕೂಡ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದಿದೆ. ಆದರೆ ಮಡಿಕೇರಿ( ಕೊಡಗು) ಡಾ. ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ, ಶಾಸಕರು, ವಿರಾಜಪೇಟೆ  ಅವರು ತಲಕಾವೇರಿ ಜಾತ್ರೆಗೆ ಹಣ ಬಿಡುಗಡೆ ಮಾಡಿ ವ್ಯವಸ್ಥಿತ ಜಾತ್ರೆ ನಡೆಸಲು ಹಾಗೂ ಆಗಮಿಸುವ ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸಲು ತಮ್ಮಲ್ಲಿ…

Read More