Author: kannadanewsnow09

ಕೊಪ್ಪಳ: ಜಿಲ್ಲೆಯ ಶಾಸಕ ದೊಡ್ಡನಗೌಡ ಆಪ್ತ ಸಹಾಯಕರಾಗಿದ್ದಂತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕುಷ್ಟಗಿಯಲ್ಲಿ ಹೃದಯಾಘಾತದಿಂದ ಶಾಸಕ ದೊಡ್ಡನಗೌಡ ಅವರ ಆಪ್ತ ಸಹಾಯಕ ಚಂದ್ರು ವಡಗೇರಿ(46) ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಶಾಸಕ ದೊಡ್ಡನಗೌಡ ಆಪ್ತ ಸಹಾಯಕರಾಗಿ ಚಂದ್ರು ವಡಗೇರಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಪುರಸಭೆಯ ಮಾಜಿ ಸದಸ್ಯರೂ ಕೂಡ ಆಗಿದ್ದರು. ಸಣ್ಣ ಕರುಳಿನ ಆಪರೇಷನ್ ಗೆ ಒಳಗಾಗಿದ್ದಂತ ಅವರು ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಹೃದಯಾಘಾತದಿಂದ ಚಂದ್ರು ಸಾವನ್ನಪ್ಪಿದ್ದಾರೆ. https://kannadanewsnow.com/kannada/food-is-the-answer-in-this-village-villagers-launch-food-is-ours-water-is-yours-campaign-on-festivals/ https://kannadanewsnow.com/kannada/english-teacher-minister-dr-sharanprakash-patil-video-goes-viral/

Read More

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಹಬ್ಬ ಹರಿದಿನಗಳಲ್ಲಿ ನೀರಿಗಾಗಿ ಪರದಾಟ ತಪ್ಪಿಲ್ಲದಂತಾಗಿದೆ. ಗ್ರಾಮದಲ್ಲಿ ಇದೇ ಜುಲೈ 14ರಂದು ಸೋಮವಾರ ಭೂತಪ್ಪನ ಜಾತ್ರೆ ನಡೆಯಲಿದೆ. ಆದರೆ ಕುಡಿಯುವ ನೀರಿನ ಇಲ್ಲಾದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಬ್ಬಕ್ಕೆ ಬರುವ ನೆಂಟರಿಷ್ಟರು, ಸ್ನೇಹಿತರು ಹಾಗೂ ಬಂಧುಗಳು ಬರುವವರಿಗೆ ಊಟ ನಮ್ದು!ನೀರು ನಿಮ್ಮದು! ಎಂದು ಅಭಿಯಾನ ಆರಂಭಿಸಿದ್ದಾರೆ. ಹಬ್ಬ ಇದ್ದರೂ ಗ್ರಾಮದಲ್ಲಿ ನೀರಿನ ಸಮಸ್ಯೆ ಪೂರೈಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಬಿಟ್ಟು ಅಸಮಾಧಾನ ಹೊರಹಾಕಿದ್ದಾರೆ. ನೀರಿನ ತೀವ್ರ ಅಭಾವದ ನಡುವೆಯೂ ದಿಂಡಾವರ ಪಂಚಾಯತ್ ಪಿ.ಡಿ. ಓ.ರವರ ಫೋನ್ ಸ್ವಿಚ್ ಆಫ್ ಆಗಿದೆ. ಸೆಕ್ರೆಟರಿ ಅವರನ್ನು ಕೇಳಿದರೂ ಸಹ ಅವರು ನಮಗೆ ನೀರು ಬಿಡಲು ಸ್ಪಂದಿಸುತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಚಂದ್ರಗಿರಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನು ಕೇಳಿದರು ಸಹ ಅವರು…

Read More

ರಾಯಚೂರು: ಜಿಲ್ಲೆಯ ಕಳೆದ ಮೂರು ತಿಂಗಳಿನಿಂದ ಚಿರತೆಯೊಂದು ಕಾಣಿಸಿಕೊಂಡು ನಾಯಿ, ಪ್ರಾಣಿಗಳನ್ನು ತಿಂದು ಆತಂಕ ಮೂಡಿಸಿತ್ತು. ಹೀಗೆ ಮೂರು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದಂತ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ತಾಲ್ಲೂಕಿನ ಡಿ.ರಾಂಪುರ ಬಳಿಯ ಬೆಟ್ಟದಲ್ಲಿ ಚಿರತೆ ಸೆರೆ ಹಿಡಿಯಲಾಗಿದೆ. ಈ ಚಿರತೆ 20ಕ್ಕೂ ಹೆಚ್ಚು ನಾಯಿಗಳು, ಮೇಕೆಗಳನ್ನು ತಿಂದು ಹಾಕಿತ್ತು. ಈ ಚಿರತೆ ಓಡಾಡುವಂತ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆಯಲ್ಲಿ ಆತಂಕ ಸೃಷ್ಠಿಸಿದ್ದಂತ ಚಿರತೆಯ ಸೆರೆಗಾಗಿ ಬೆಟ್ಟದಲ್ಲಿ ಎರಡು ಬೋನುಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಇರಿಸಿದ್ದರು. ಹೀಗೆ ಡಿ.ರಾಂಪುರ ಬಳಿ ಬೆಟ್ಟದ ತಪ್ಪಲಿನಲ್ಲಿ ಇರಿಸಿದ್ದಂತ ಬೋನಿಗೆ ಚಿರತೆ ಬಿದ್ದಿದೆ. https://kannadanewsnow.com/kannada/thieves-have-stolen-the-waste-disposal-vehicle-in-raichur/ https://kannadanewsnow.com/kannada/thieves-have-stolen-the-waste-disposal-vehicle-in-raichur/

Read More

ರಾಯಚೂರು: ಜಿಲ್ಲೆಯಲ್ಲಿ ಕಸ ವಿಲೇವಾರಿ ವಾಹನಗಳನ್ನು ಬಿಡದೇ ಕಳ್ಳರು ಕದ್ದೊಯ್ದಿರುವಂತ ಅಚ್ಚರಿಯ ಘಟನೆ ನಡೆದಿದೆ. ರಾಯಚೂರಿನ ಸಿರಿವಾರ ತಾಲ್ಲೂಕಿನ ಕವಿತಾಳದಲ್ಲಿ ಗೇಟ್ ಬೀಗ ಮುರಿದು ಕಸ ವಿಲೇವಾರಿ ವಾಹನಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಡೀಸೆಲ್ ಸಮಸ್ಯೆಯಿಂದಾಗಿ ಕವಿತಾಳ ಪಟ್ಟಣ ಪಂಚಾಯ್ತಿ ಕಚೇರಿ ಆವರಣದಲ್ಲಿ ಕಸವಿಲೇವಾರಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಇತ್ತೀಚಿಗಷ್ಟೇ ಅದಕ್ಕೆ ಹಣ ಬಿಡುಗಡೆಯಾಗಿತ್ತು. ಇನ್ಸೂರೆನ್ಸ್ ಕೂಡ ರಿನೀವಲ್ ಮಾಡಿಸಲಾಗಿತ್ತು. ನಾಲ್ಕು ಕಸ ವಿಲೇವಾರಿ ವಾಹನಗಳಲ್ಲಿ ಒಂದು ಗಾಡಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ವಾಹನದ ಬೆಲೆ ಸುಮಾರು 8 ಲಕ್ಷ ಎನ್ನಲಾಗುತ್ತಿದೆ. ನಿನ್ನೆ ಎರಡನೇ ಶನಿವಾರದಂದು ರಜೆ ಇದ್ದ ಸಂದರ್ಭದಲ್ಲೇ ಈ ಕಳ್ಳತನ ನಡೆದಿದೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/final-decision-on-the-land-acquisition-crisis-in-devanahalli-by-the-chief-minister-on-tuesday-minister-m-b-patil/ https://kannadanewsnow.com/kannada/english-teacher-minister-dr-sharanprakash-patil-video-goes-viral/

Read More

ಸೇಡಂ: ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಗೆ ರವಿವಾರ ದಿಢೀರನೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ವಸತಿ ಶಾಲೆಯ ಮಕ್ಕಳೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು.   ವಸತಿ ಶಾಲೆಯ ವ್ಯವಸ್ಥೆ ಹಾಗೂ ಬೋಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳಿದ ಸಚಿವರು ದಿನನಿತ್ಯ ಬೆಳಿಗ್ಗೆ ದೈಹಿಕ ವ್ಯಾಯಾಮ ಜೊತೆಗೆ ದಿನಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಹಿಡಿತ ಬಗ್ಗೆ ಪ್ರಶ್ನೆ ಕೇಳಿ, ತಾವು ತಿಳಿಸಿದ ಪದಗಳನ್ನು ಬೋರ್ಡ್ ಮೇಲೆ ಬರೆಯುವಂತೆ ಮಕ್ಕಳಿಗೆ ತಿಳಿಸಿ, ಕೆಲ ಸಮಯ ಮೇಷ್ಟ್ರಾಗಿ ಬೋಧನೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳು, ತಾಲೂಕಾಡಳಿತ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು

Read More

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕೆನ್ನುವುದು ತಮ್ಮ ಕಳಕಳಿಯಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಭಾನುವಾರ ಹೇಳಿದ್ದಾರೆ. ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʻಅಲ್ಲಿ ಕೆಲವರು ಭೂಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ರೈತರಲ್ಲೇ ಈ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಸರಕಾರವು ಎಲ್ಲಾ ರೀತಿಯ ಸಾಧಕ-ಬಾಧಕಗಳನ್ನೂ ಪರಿಶೀಲಿಸುತ್ತಿದೆʼ ಎಂದಿದ್ದಾರೆ. ಶನಿವಾರದಂದು ʻಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿʼ ಹೆಸರಿನಲ್ಲಿ ಕೆಲವು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 449 ಎಕರೆಯನ್ನು ಸರಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಮೊದಲು ಅಧಿಸೂಚನೆ…

Read More

ಬೆಂಗಳೂರು: ತಮಿಳುನಾಡಿನ ತಿರುವಳ್ಳೂರು ಬಳಿಯಲ್ಲಿ ರೈಲೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ತೆರಳಬೇಕಿದ್ದಂತ ರೈಲುಗಳ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.  ಈ ಕುರಿತಂತೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೆ.ಎನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಿರುವಳ್ಳೂರು ಅಗ್ನಿ ಅವಘಡ ಸಂಭವಿಸಿದ ಕಾರಣ, ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ರೈಲುಗಳ ಮಾರ್ಗ ಬದಲಾವಣೆ 11.7.2025 ರಂದು ಪ್ರಯಾಣ ಆರಂಭಿಸಿದ ಈ ಕೆಳಗಿನ ರೈಲುಗಳನ್ನು ಗುಡೂರು, ರೇಣಿಗುಂಟ, ಮೇಲ್ಪಕ್ಕಂ ಮೂಲಕ ತಿರುತ್ತಣಿಯಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ತಿರುಗಿಸಲಾಗಿದ್ದು, ಗುಡೂರು ಮತ್ತು ಜೋಲಾರ್ಪೆಟ್ಟೈ ನಡುವಿನ ನಿಲುಗಡೆಗಳನ್ನು ಬಿಟ್ಟುಬಿಡಲಾಗಿದೆ. 1. ರೈಲು ಸಂಖ್ಯೆ 12540 ಲಕ್ನೋ – ಯಶವಂತಪುರ ಎಕ್ಸ್‌ಪ್ರೆಸ್ 2. ರೈಲು ಸಂಖ್ಯೆ 12296 ದಾನಾಪುರ- SMVT ಬೆಂಗಳೂರು ಸಂಘ ಮಿತ್ರ ಎಕ್ಸ್‌ಪ್ರೆಸ್ 3. ರೈಲು ಸಂಖ್ಯೆ 22351 ಪಾಟಲಿಪುತ್ರ…

Read More

ದಾವಣಗೆರೆ : ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಕನಕನ ಮಕ್ಕಳು ಕೀಳರಿಮೆಯಿಂದ ಹೊರಗೆ ಬರಬೇಕಿದೆ. ಕೀಳರಿಮೆ ಮೆಟ್ಟಿ ಮೇಲೇಳುವುದಕ್ಕೆ ದಾಸಶ್ರೇಷ್ಠ ಕನಕದಾಸರ ಬಂಡಾಯದ ಮಾದರಿ ನಮ್ಮ‌ ಅಂಗೈಯಲ್ಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು. ಕನಕ ನೌಕರರ ಬಳಗ ಮತ್ತು ಜಿಲ್ಲಾ ಕುರುಬರ ವಿದ್ಯಾವರ್ದಕ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. “ಇತಿಹಾಸ ಅರಿಯದವರು ಭವಿಷ್ಯ ರೂಪಿಸಲಾರರು” ಎನ್ನುವ ಮಾತಿದೆ. ಇವತ್ತು ನಮ್ಮ ಸಮುದಾಯದ ನಾನು ಮತ್ತು ಈ ಮಕ್ಕಳು ಪ್ರತಿಭಾವಂತರಾಗಿ ಇಲ್ಲಿ ಗೌರವಿಸಲ್ಪಡುತ್ತಿದ್ದೇವೆ ಎಂದರೆ ಇದಕ್ಕೆ ನಮ್ಮ ಹಿರಿಯರು ಮತ್ತು ಹಿಂದಿನವರು ನಡೆಸಿದ ಹೋರಾಟಗಳು ಕಾರಣ. ಅಕ್ಷರ ಕಲಿತರೆ ಕಿವಿಗೆ ಕಾದ ಸೀಸ ಸುರಿಯುವ ಶಿಕ್ಷೆ ವಿಧಿಸುತ್ತಿದ್ದ ಕಾಲದಿಂದ ನಮ್ಮದೇ ಆದ ವಿದ್ಯಾವರ್ದಕ ಸಂಘ ಕಟ್ಟಿಕೊಂಡು SSLC ಯಿಂದ MBBS ವರೆಗೂ ಸಾವಿರಾರು ಪ್ರತಿಭಾವಂತರನ್ನು ಪುರಸ್ಕರಿಸುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಈ ಸಾಧನೆಯ ಹಿಂದೆ ಇರುವ ಪ್ರತೀ ಹೆಜ್ಜೆ ಗುರುತುಗಳನ್ನೂ ನಾವು ಅರಿತುಕೊಳ್ಳಬೇಕಿದೆ ಎಂದರು. ದಾಸಶ್ರೇಷ್ಠ ಕನಕದಾಸರು…

Read More

ಮಧ್ಯಪ್ರದೇಶ: ಇಲ್ಲಿನ ಭಿಂದ್ ಜಿಲ್ಲೆಯಲ್ಲಿ ಪರೀಕ್ಷೆಯ ಸಮಯದಲ್ಲಿ ಐಎಎಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿಯೊಬ್ಬರಿಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯ ವಿಡಿಯೋ ಏಪ್ರಿಲ್ 1 ರಂದು ನಡೆದಿದ್ದು, ಈಗ ವೈರಲ್ ಆಗಿದೆ. ಭಿಂದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜೀವ್ ಶ್ರೀವಾಸ್ತವ ಅವರು ವಿದ್ಯಾರ್ಥಿಯನ್ನು ಎದುರಿಸಿ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಶ್ರೀವಾಸ್ತವ ಅವರು ತರಗತಿಯಲ್ಲಿ ಕುಳಿತಿರುವ ರಾಥೋಡ್ ಅವರ ಬಳಿಗೆ ಬರುವಾಗ ಕಾಗದದ ಹಾಳೆಯನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ. ಯಾವುದೇ ಎಚ್ಚರಿಕೆ ನೀಡದೆ, ಅವರು ವಿದ್ಯಾರ್ಥಿಯನ್ನು ತಮ್ಮ ಕುರ್ಚಿಯಿಂದ ಹೊರಗೆಳೆದು ಪದೇ ಪದೇ ಕಪಾಳಮೋಕ್ಷ ಮಾಡುತ್ತಾರೆ. ಎರಡನೇ ವೀಡಿಯೊದಲ್ಲಿ ಶ್ರೀವಾಸ್ತವ ವಿದ್ಯಾರ್ಥಿ ರೋಹಿತ್ ರಾಥೋಡ್‌ನನ್ನು ಸಿಬ್ಬಂದಿ ಕೊಠಡಿ ಎಂದು ನಂಬಲಾದ ಬೇರೆ ಕೋಣೆಗೆ ಕರೆದೊಯ್ಯುವುದನ್ನು ತೋರಿಸಲಾಗಿದೆ. ಅಲ್ಲಿ, ಅವನು ಪತ್ರಿಕೆಯನ್ನು ಇನ್ನೊಬ್ಬ ವ್ಯಕ್ತಿಗೆ ಹಸ್ತಾಂತರಿಸಿ, ವಿದ್ಯಾರ್ಥಿಯ ಕಡೆಗೆ ಸನ್ನೆ ಮಾಡುತ್ತಾನೆ. ನಂತರ ಅವನು ರಾಥೋಡ್ ಕಡೆಗೆ ತಿರುಗಿ, “ನಿನ್ನ ಪತ್ರಿಕೆ ಎಲ್ಲಿದೆ?” ಎಂದು ಕೇಳುತ್ತಾನೆ, ನಂತರ ಮತ್ತೆ ಅವನಿಗೆ ಕಪಾಳಮೋಕ್ಷ ಮಾಡುತ್ತಾರೆ.…

Read More

ನವದೆಹಲಿ: ನೈಋತ್ಯ ದೆಹಲಿಯ ವಸಂತ್ ವಿಹಾರ್ ಪ್ರದೇಶದ ಶಿವಾ ಕ್ಯಾಂಪ್ ಬಳಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದಾಗ, ಆಡಿ ಕಾರಿನ ಚಾಲಕ ಕುಡಿದ ಮತ್ತಿನಲ್ಲಿ ಚಲಾಯಿಸಿದ ಪರಿಣಾಮ ಇಬ್ಬರು ದಂಪತಿಗಳು ಮತ್ತು ಎಂಟು ವರ್ಷದ ಬಾಲಕಿ ಸೇರಿದಂತೆ ಐದು ಜನರು ಗಂಭೀರವಾಗಿ ಗಾಯಗೊಂಡಿರುವುದಾಗಿ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಜುಲೈ 9 ರಂದು ಬೆಳಗಿನ ಜಾವ 1:45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿನ ಚಾಲಕ ಉತ್ಸವ್ ಶೇಖರ್ (40) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯ ಸಮಯದಲ್ಲಿ ಅವರು ಕುಡಿದಿದ್ದರು ಎಂದು ಅವರ ವೈದ್ಯಕೀಯ ವರದಿಗಳು ದೃಢಪಡಿಸಿವೆ ಎಂದು ಅವರು ಹೇಳಿದರು. ಅಧಿಕಾರಿಗಳು ಸ್ಥಳಕ್ಕೆ ತಲುಪಿದರು, ಗಾಯಾಳುಗಳನ್ನು ಈಗಾಗಲೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಬಲಿಪಶುಗಳನ್ನು ಲಾಧಿ (40), ಅವರ ಎಂಟು ವರ್ಷದ ಮಗಳು ಬಿಮ್ಲಾ, ಪತಿ ಸಬಾಮಿ ಅಲಿಯಾಸ್ ಚಿರ್ಮಾ (45), ರಾಮ್ ಚಂದರ್ (45) ಮತ್ತು ಅವರ ಪತ್ನಿ ನಾರಾಯಣಿ (35) ಎಂದು ಗುರುತಿಸಲಾಗಿದೆ, ಇವರೆಲ್ಲರೂ ರಾಜಸ್ಥಾನದ…

Read More