Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕಾರ್ಯಕ್ರಮವೊಂದಕ್ಕೆ ತೆರಳಿದ್ದಂತ ನಟಿ ರಾಗಿಣಿ ದ್ವಿವೇದಿ ಈಗ ಸುದ್ದಿಯಲ್ಲಿದ್ದಾರೆ. ಸೆಲ್ಫಿ ಪೋಟೋ ತೆಗೆಸಿಕೊಳ್ಳೋದಕ್ಕೆ ಮುಂದಾದಂತ ಅಭಿಮಾನಿಯ ಕೆನ್ನೆಗೆ ಕಪಾಳ ಮೋಕ್ಷ ಮಾಡುವ ಮೂಲಕವಾಗಿದೆ. ನಗರದಲ್ಲಿನ ಕಾರ್ಯಕ್ರಮವೊಂದಕ್ಕೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ತೆರಳಿದ್ದರು. ಸೆಲ್ಫಿ ಪೋಟೋ ಕೇಳಿದಂತ ಅಭಿಮಾನಿಯೊಂದಿಗೆ ಪೋಸ್ ಕೊಟ್ಟಿದ್ದರು. ಈ ಸಂದರ್ಭದಲ್ಲಿಯೇ ಅಭಿಮಾನಿಯೊಬ್ಬ ಕೈ ಹಿಡಿದು ಎಳೆದೇ ಬಿಟ್ಟನು. ಅಭಿಮಾನಿಯೊಬ್ಬ ಕೈ ಹಿಡಿದು ಎಳೆಯುತ್ತಿದ್ದಂತೆ ಸಿಟ್ಟಾದಂತ ನಟಿ ರಾಗಿಣಿ ದ್ವಿವೇದಿ ಅವರು ದಿಢೀರ್ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯ ಕೆನ್ನೆಗೆ ನಟಿ ರಾಗಿಣಿ ದ್ವಿವೇದಿ ಬಾರಿಸಿದಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. https://kannadanewsnow.com/kannada/special-train-services-between-visakhapatnam-and-bengaluru-on-the-occasion-of-holi/ https://kannadanewsnow.com/kannada/attention-public-these-10-blood-tests-must-be-done-at-least-once-a-year/
ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಕರಾವಳಿ ರೈಲ್ವೆಯು ವಿಶಾಖಪಟ್ಟಣಂ-ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 08549/08550 ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಹೋಳಿ ವಿಶೇಷ ರೈಲು (2 ಟ್ರಿಪ್). ರೈಲು ಸಂಖ್ಯೆ 08549 ಮಾರ್ಚ್ 16 ಮತ್ತು 23, 2025 ರಂದು ಮಧ್ಯಾಹ್ನ 3:30ಕ್ಕೆ ವಿಶಾಖಪಟ್ಟಣಂನಿಂದ ಹೊರಟು, ಮರುದಿನ ಮಧ್ಯಾಹ್ನ 12.45ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಆಗಮಿಸಲಿದೆ. ಹಿಂದಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 08550 ಮಾರ್ಚ್ 17 ಮತ್ತು 24, 2025 ರಂದು ಮಧ್ಯಾಹ್ನ 3.50ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಟು, ಮರುದಿನ ಮಧ್ಯಾಹ್ನ 12:30ಕ್ಕೆ ವಿಶಾಖಪಟ್ಟಣಂ ತಲುಪಲಿದೆ. ಮಾರ್ಗಮಧ್ಯೆ, ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದುವ್ವಾಡ, ಅನಕಪಲ್ಲಿ, ಸಾಮಲ್ಕೊಟ್, ರಾಜಮಂಡ್ರಿ, ಎಲೂರು, ವಿಜಯವಾಡ, ಒಂಗೋಲ್, ನೆಲ್ಲೂರು, ಗುಡೂರು, ಪೆರಂಬೂರ್, ಅರಕ್ಕೋಣಂ, ಕಟಪಾಡಿ, ಜೋಲಾರ್ ಪೆಟ್ಟೈ, ಕುಪ್ಪಂ, ಬಂಗಾರಪೇಟೆ ಮತ್ತು…
ನವದೆಹಲಿ: ವಲಸೆ ಮತ್ತು ವಿದೇಶಿಯರಿಗೆ ಅವರ ಪ್ರವೇಶ, ನಿರ್ಗಮನ ಮತ್ತು ದೇಶದಲ್ಲಿ ಉಳಿಯುವುದು ಸೇರಿದಂತೆ ವಿವಿಧ ಸೇವೆಗಳನ್ನು ಸುಗಮಗೊಳಿಸಲು ಪ್ರಯತ್ನಿಸುವ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಪರಿಚಯಿಸಲಾಯಿತು. ವಲಸೆ ಮತ್ತು ವಿದೇಶಿಯರ ಮಸೂದೆ, 2025 ಅನ್ನು ತರಲು ಸಂಸತ್ತಿಗೆ ಶಾಸನಾತ್ಮಕ ಸಾಮರ್ಥ್ಯವಿಲ್ಲ ಎಂಬ ಸಲಹೆಗಳನ್ನು ತಿರಸ್ಕರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಈ ವಿಷಯದ ಬಗ್ಗೆ ಶಾಸನಗಳನ್ನು ತರಲು ಕೇಂದ್ರ ಸರ್ಕಾರದ ಅಡಿಯಲ್ಲಿ ಎಲ್ಲಾ ಹಕ್ಕುಗಳಿವೆ ಎಂದು ಹೇಳಿದರು. ಪ್ರವಾಸಿಗರು ಭಾರತಕ್ಕೆ ಬರಲು ಸ್ವಾಗತವಿದ್ದರೂ, ರಾಷ್ಟ್ರದ ಶಾಂತಿ ಮತ್ತು ಸಾರ್ವಭೌಮತ್ವವು ಹಾಗೇ ಉಳಿಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಇಂದು ಬೆಳಿಗ್ಗೆ 11 ಗಂಟೆಗೆ ಪುನರಾರಂಭಗೊಂಡಿತು. ಹೊಸ ಮಸೂದೆಗಳು ಮತ್ತು ಮಣಿಪುರ ಬಜೆಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಅನುಮೋದನೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಣಿಪುರ ಬಜೆಟ್ ಮಂಡನೆ ಕುರಿತು ಲೋಕಸಭೆಯಲ್ಲಿ…
ಬೆಂಗಳೂರು : ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಸಜ್ಜುಗೊಳಿಸಿರುವ 135 “ಸಂಚಾರಿ ಆರೋಗ್ಯ ಘಟಕ” ಆ್ಯಂಬುಲೆನ್ಸ್ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮಾಜದಲ್ಲಿ ದುಡಿಯುವ ವರ್ಗ ಒಂದು ಕಡೆ ಇದ್ದರೆ, ದುಡಿಸಿಕೊಳ್ಳುವ ವರ್ಗ ಮತ್ತೊಂದು ಕಡೆ ಇರುತ್ತದೆ. ಯಾರು ಉತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೋ ಅವರೇ ದೇಶ ನಿರ್ಮಾತೃಗಳು ಎಂದರು. ಇಡೀ ದೇಶ ಕಾರ್ಮಿಕರ ಶ್ರಮವನ್ನು ಅವಲಂಬಿಸಿದೆ. ಸಮಾಜದಲ್ಲಿ ಒಂದೇ ವರ್ಗದವರು ದುಡಿಯುತ್ತಿರಬಾರದು, ಎಲ್ಲಾ ವರ್ಗದವರೂ ದುಡಿಯಬೇಕು. ಆಗ ಮಾತ್ರ ಬುದ್ದ, ಬಸವ, ಅಂಬೇಡ್ಕರ್ ಆಶಯದ ಸಮ ಸಮಾಜ ನಿರ್ಮಾಣ ಸಾಧ್ಯ. ಸಚಿವ ಸಂತೋಷ್ ಲಾಡ್ ಅವರ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯಿಂದಾಗಿ ಉಚಿತ ಸಂಚಾರಿ ಆಸ್ಪತ್ರೆಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರ ಸೆಸ್ ಹಣದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸಂಚಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು. ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ…
ಚಿತ್ರದುರ್ಗ : ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ರೂ.170/-ರಂತೆ ಡಿಬಿಟಿ ಮುಖಾಂತರ ಹಣ ಪಾವತಿಸಲಾಗುತ್ತಿರುತ್ತದೆ. ಫೆಬ್ರವರಿ-2025ರ ಮಾಹೆಯಿಂದ ಪ್ರತಿ ಸದಸ್ಯರಿಗೆ ರೂ.170/-ರ ಡಿಬಿಟಿ ಹಣ ಬದಲಾಗಿ 05 ಕೆ.ಜಿ.ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಗಿರುತ್ತದೆ. ಮಾರ್ಚ್-2025ರ ಮಾಹೆಯ ಆಹಾರಧಾನ್ಯ ಬಿಡುಗಡೆಯಾಗಿದ್ದು ಹಾಗೂ ಫೆಬ್ರವರಿ-2025ರ ಮಾಹೆಯ ಆಹಾರಧಾನ್ಯ ಸೇರಿ ಮಾರ್ಚ್-2025ರ ಮಾಹೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 15 ಕೆ.ಜಿ.ಅಕ್ಕಿ ಹಾಗೂ ಅಂತ್ಯೋದಯ ಎಎವೈ ಪಡಿತರ ಚೀಟಿದಾರರಿಗೆ 01 ರಿಂದ 03 ಸದಸ್ಯರಿಗೆ 35 ಕೆ.ಜಿ.ಅಕ್ಕಿ, 04 ಸದಸ್ಯರಿಗೆ 45 ಕೆ.ಜಿ.ಅಕ್ಕಿ, 05 ಸದಸ್ಯರಿಗೆ 65 ಕೆ.ಜಿ.ಅಕ್ಕಿ, 06 ಸದಸ್ಯರಿಗೆ 85 ಕೆ.ಜಿ.ಅಕ್ಕಿ, 07 ಸದಸ್ಯರಿಗೆ 105 ಕೆ.ಜಿ.ಅಕ್ಕಿ, 08 ಸದಸ್ಯರಿಗೆ 125 ಕೆ.ಜಿ.ಅಕ್ಕಿ, 09 ಸದಸ್ಯರಿಗೆ 145 ಕೆ.ಜಿ.ಅಕ್ಕಿ ಹಾಗೂ 10 ಸದಸ್ಯರಿಗೆ 165 ಕೆ.ಜಿ ಅಕ್ಕಿ ಮುಂದುವರೆದು 10ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ,…
ನವದೆಹಲಿ: ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ X ಇಂದು ಮೂರನೇ ಬಾರಿಗೆ ಜಾಗತಿಕವಾಗಿ ಭಾರಿ ಅಡಚಣೆಯನ್ನು ಅನುಭವಿಸಿದೆ. ಇದರಿಂದಾಗಿ ಸಾವಿರಾರು ಬಳಕೆದಾರರು ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಔಟೇಜ್-ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್ ಪ್ರಕಾರ, ಮೊದಲ ಅಡಚಣೆ IST ಮಧ್ಯಾಹ್ನ 3:30 ರ ಸುಮಾರಿಗೆ ದಾಖಲಾಗಿದೆ, ನಂತರ ಸಂಜೆ 7:00 IST ಕ್ಕೆ ಮತ್ತೊಂದು ಅಡಚಣೆ ಮತ್ತು ರಾತ್ರಿ 8:44 IST ಕ್ಕೆ ಮೂರನೇ ಏರಿಕೆ ಕಂಡುಬಂದಿದೆ. ಈ ಸ್ಥಗಿತವು ಯುನೈಟೆಡ್ ಸ್ಟೇಟ್ಸ್, ಭಾರತ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಡೌನ್‌ಡೆಕ್ಟರ್ ಡೇಟಾವು ಶೇಕಡಾ 52 ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿಯೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಶೇಕಡಾ 40 ರಷ್ಟು ಜನರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಶೇಕಡಾ 7 ರಷ್ಟು ಜನರು ಸರ್ವರ್ ಸಂಪರ್ಕ ವೈಫಲ್ಯಗಳನ್ನು ವರದಿ ಮಾಡಿದ್ದಾರೆ ಎಂದು ತೋರಿಸುತ್ತದೆ. https://kannadanewsnow.com/kannada/it-is-mandatory-for-doctors-to-perform-duties-in-government-hospitals-from-9-am-to-4-pm-minister-dr-sharanprakash-patil/ https://kannadanewsnow.com/kannada/breaking-over-15-passengers-injured-as-bus-overturns-due-to-brake-failure-in-belagavi/
ಕೋಲಾರ: ಶಾಸಕ ಕೊತ್ತನೂರು ಮಂಜುನಾಥ್ ಆಪ್ತ, ಮುಳುಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ ನೀಲಕಂಠೇಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ ನೀಲಕಂಠೇಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದಂತ ಶಾಸಕ ಕೊತ್ತನೂರು ಮಂಜುನಾಥ್ ಆಪ್ತ ಹಾಗೂ ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ ನೀಲಕಂಠೇಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಮುಳಬಾಗಿಲು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿಯೂ ಆಡಳಿತ ನಡೆಸಿದ್ದರು. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮುಳುಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಂತ ನೀಲಕಂಠೇಗೌಡ ಅವರು, ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ. https://kannadanewsnow.com/kannada/hd-deve-gowda-discusses-railways-amendment-bill-in-rajya-sabha/ https://kannadanewsnow.com/kannada/xdown-across-the-world-including-india-for-the-2nd-time/
ನವದೆಹಲಿ: ಇಂದು ಮಧ್ಯಾಹ್ನ ಭಾರತ ಸೇರಿದಂತೆ ವಿಶ್ವದಾದ್ಯಂತ ಈ ಮೊದಲು ಟ್ವಿಟ್ಟರ್ ಎಂದು ಕರೆಯಲಾಗುತ್ತಿದ್ದಂತ ಎಕ್ಸ್ ಸೇವೆಯಲ್ಲಿ ಸಮಸ್ಯೆ ಉಂಟಾಗಿ ಡೌನ್ ಆಗಿತ್ತು. ಈಗ ಮತ್ತೆ ಭಾರತ ಸೇರಿದಂತೆ ವಿಶ್ವದಾದ್ಯಂತ ಎಕ್ಸ್ ಮತ್ತೆ ಡೌನ್ ಆಗಿದೆ. ಹೀಗಾಗಿ ಬಳಕೆದಾರರು ಪರದಾಡುವಂತೆ ಆಗಿದೆ. ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್) ಒಂದೇ ದಿನದೊಳಗೆ ಎರಡನೇ ಪ್ರಮುಖ ಸ್ಥಗಿತವನ್ನು ಎದುರಿಸಿತು. ಇದರಿಂದಾಗಿ ಸಾವಿರಾರು ಬಳಕೆದಾರರು ವೇದಿಕೆಯನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಮಾರ್ಚ್ 10, 2025 ರ ಹೊತ್ತಿಗೆ, ಸೇವಾ ಅಡಚಣೆಗಳ ಬಗ್ಗೆ 40,000 ಕ್ಕೂ ಹೆಚ್ಚು ವರದಿಗಳು ದಾಖಲಾಗಿವೆ, ಇದು ಯುಎಸ್, ಭಾರತ, ಯುಕೆ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಪರಿಣಾಮ ಬೀರಿದೆ. ಸ್ಥಗಿತದ ಜಾಗತಿಕ ಪರಿಣಾಮ ಡೌನ್ಡೆಟೆಕ್ಟರ್ ಪ್ರಕಾರ, ಸಂಜೆ 7:00 ರ ಸುಮಾರಿಗೆ ವಿದ್ಯುತ್ ಕಡಿತವು ಮತ್ತೆ ಉತ್ತುಂಗಕ್ಕೇರಿತು, ಇದು ದಿನದ ಎರಡನೇ ಪ್ರಮುಖ ಅಡಚಣೆಯನ್ನು ಸೂಚಿಸುತ್ತದೆ. ವರದಿಗಳು ಸೂಚಿಸುತ್ತವೆ: 56 ರಷ್ಟು ಬಳಕೆದಾರರು ಅಪ್ಲಿಕೇಶನ್ನಲ್ಲಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಅನರ್ಹರ ರೇಷನ್ ಕಾರ್ಡ್ ಈಗಾಗಲೇ ಒಂದಷ್ಟು ರದ್ದುಗೊಳಿಸಲಾಗಿದೆ. ಈಗ ಮುಂದುವರೆದು ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚೋದಕ್ಕೆ ಸಮಿತಿ ರಚನೆ ಮಾಡಿದೆ. ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳನ್ನು ಪತ್ತೆ ಹಚ್ಚಿ, ಅವರಿಗೆ ಸಿಗುತ್ತಿರುವ ಸೌಲಭ್ಯವನ್ನು ಅರ್ಹರಿಗೆ ದೊರಕಿಸಿಕೊಡುವ ಸದುದ್ದೇಶದಿಂದ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು. https://twitter.com/KarnatakaVarthe/status/1899105555387474346 https://kannadanewsnow.com/kannada/hd-deve-gowda-discusses-railways-amendment-bill-in-rajya-sabha/ https://kannadanewsnow.com/kannada/it-is-mandatory-for-doctors-to-perform-duties-in-government-hospitals-from-9-am-to-4-pm-minister-dr-sharanprakash-patil/
ನವದೆಹಲಿ: ಭಾರತೀಯ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ ರೇಲ್ವೆ ತಿದ್ದುಪಡಿ ಮಸೂದೆ 2024 ಅನ್ನು ಬೆಂಬಲಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು; ಕಳೆದ ಹತ್ತು ವರ್ಷಗಳ ಅವಧಿಯಲಿ ನರೇಂದ್ರ ಮೋದಿ ಅವರ ಸರಕಾರ ರೇಲ್ವೆ ವಲಯದಲ್ಲಿ ಕ್ರಾಂತಿಕಾರಕ ಅಭಿವೃದ್ಧಿಯನ್ನು ಮಾಡಿದೆ ಎಂದು ಶ್ಲಾಘಿಸಿದರು. ರಾಜ್ಯಸಭೆಯಲ್ಲಿ ಸೋಮವಾರ ಈ ಬಗ್ಗೆಮಾತನಾಡಿದ ಮಾಜಿ ಪ್ರಧಾನಿಗಳು; ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಳ್ವಿಕೆ ವೇಳೆ ಮೈಸೂರು – ಹರಿಹರವರೆಗೂ ಮೀಟರ್ ಗೇಜ್ ರೇಲು ಮಾರ್ಗ ನಿರ್ಮಿಸಿದ್ದನ್ನು ಸ್ಮರಿಸಿದರಲ್ಲದೆ, ಆಗಿನ ತಮ್ಮ ರೇಲು ಪ್ರಯಾಣದ ಅನುಭವವನ್ನು ನೆನೆದರು. ಅದೇ ರೇಲು ಮಾರ್ಗ ಮುಂಬಯಿ- ಚೆನ್ನೈ ರೇಲು ಮಾರ್ಗವಾಗಿದ್ದು, ಅದಕ್ಕೆ ಹರಿಹರ-ದಾವಣಗೆರೆ-ಶೃಂಗೇರಿ-ಬೇಲೂರು ಮೂಲಕ ಚನ್ನೈಗೆ ಸಂಪರ್ಕ ಕಲ್ಪಿಸಬೇಕು. ಇದು ಬಹಳ ಉಪಯುಕ್ತವಾಗಿದ್ದು, ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತ ಮಾಡಬೇಕು ಎಂದು ಅವರು ಮನವಿ ಮಾಡಿದರು. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ರೈಲ್ವೆ ಜಾಲ ಮತ್ತು ಮಾರ್ಗಗಳು ಸಾಕಷ್ಟು ಪ್ರಗತಿ ಸಾಧಿಸಿದೆ.…














