Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದೆ. ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿದಂತ ಪುಂಡರು, ಕಾರಿನಲ್ಲಿದ್ದಂತ ದಂಪತಿಗಳಿಗೆ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ತುರುಬರಹಳ್ಳಿ ವಿಬ್ ಗಯಾರ್ ಶಾಲೆಯ ಬಳಿಯಲ್ಲಿ ಕಾರು ಓವರ್ ಟೇಕ್ ವಿಚಾರಕ್ಕೆ ಕಾರು ಅಡ್ಡಗಟ್ಟಿ ಉತ್ತರ ಭಾರತ ಮೂಲದ ದಂಪತಿಗಳಿಗೆ ಧಮ್ಕಿ ಹಾಕಿರುವುದಾಗಿ ತಿಳಿದು ಬಂದಿದೆ. ಈ ಘಟನೆಯ ಸಂಬಂಧ ದಂಪತಿಗಳು ವೀಡಿಯೋ ಸಹಿತ ಬೆಂಗಳೂರು ನಗರ ಪೊಲೀಸರಿ ಟ್ಯಾಗ್ ಮಾಡಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಇದೇ ವೀಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಹಂಚಿಕೊಂಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕನಿಷ್ಠ ಪಕ್ಷ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾತ್ರಿಯಾದರೆ ಪುಂಡರು, ಕಿಡಿಗೇಡಿಗಳು ನಡು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವುದು ದಿನೇ ದಿನೇ ವರದಿಯಾಗುತ್ತಲೇ ಇವೆ ಎಂದಿದ್ದಾರೆ. ತಡರಾತ್ರಿ ಕಾಡುಬೀಸನಹಳ್ಳಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಪುಂಡನೊಬ್ಬ ಬೆದರಿಸುತ್ತಿರುವ ಘಟನೆ ಉದ್ಯೋಗಿಗಳು, ಮಹಿಳೆಯರು, ನಾಗರೀಕರು ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ…
ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖಂಡ ಒಮರ್ ಅಬ್ದುಲ್ಲಾ ಅವರು ಅಕ್ಟೋಬರ್ 16 ರಂದು ಜಮ್ಮು ಮತ್ತು ಕಾಶ್ಮೀರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಕ್ಟೋಬರ್ 16 ರಂದು ಪ್ರಮಾಣವಚನ ಸ್ವೀಕರಿಸುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಳುಹಿಸಿದ ಪತ್ರವನ್ನು ಅಬ್ದುಲ್ಲಾ ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. https://twitter.com/OmarAbdullah/status/1845821318425440259 “ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಅವರಿಂದ 2024 ರ ಅಕ್ಟೋಬರ್ 11 ರಂದು ನನಗೆ ಪತ್ರ ಬಂದಿದೆ, ಅದರಲ್ಲಿ ನಿಮ್ಮನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ” ಎಂದು ಸಿನ್ಹಾ ಅಬ್ದುಲ್ಲಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. “ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ರಚಿಸಲು ಮತ್ತು ಮುನ್ನಡೆಸಲು ನಿಮ್ಮನ್ನು ಆಹ್ವಾನಿಸಲು ನನಗೆ ಸಂತೋಷವಾಗಿದೆ. “ಪ್ರತ್ಯೇಕವಾಗಿ ನಿರ್ಧರಿಸಿದಂತೆ, ನಾನು ನಿಮಗೆ ಮತ್ತು ನಿಮ್ಮ ಮಂತ್ರಿಮಂಡಲದ ಸದಸ್ಯರಾಗಿ ಸೇರ್ಪಡೆಗೊಳ್ಳಲು ಶಿಫಾರಸು ಮಾಡಿದವರಿಗೆ 2024 ರ ಅಕ್ಟೋಬರ್ 16 ರಂದು ಬೆಳಿಗ್ಗೆ…
ಬೆಂಗಳೂರು: ವೈದ್ಯಕೀಯ ವ್ಯಾಸಂಗದ ನಿರೀಕ್ಷೆಯಿಂದ ಯುಜಿ ನೀಟ್-2024ರ ಪರೀಕ್ಷೆ ಬರೆದವರಿಗೆ ಕೋರ್ಸ್ ಗೆ ಶುಲ್ಕ ಪಾವತಿಸಲು ನಾಳೆಯವರೆಗೆ ಅವಧಿಯನ್ನು ವಿಸ್ತರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶಿಸಿದೆ. ಇಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, UG NEET-2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್ ಶುಲ್ಕದ ಮುಂಗಡ ಪಾವತಿಗೆ ಅ.15ರ ಮಧ್ಯಾಹ್ನ 12 ಗಂಟೆವರೆಗೆ ಹಾಗೂ Options ದಾಖಲಿಸಲು ಮಧ್ಯಾಹ್ನ 3 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಅದರ ಬಳಿಕ ಯಾವ ವಿಸ್ತರಣೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. https://twitter.com/KEA_karnataka/status/1845819798678114316 https://kannadanewsnow.com/kannada/madikeri-power-outages-in-these-areas-of-the-district-on-october-15/ https://kannadanewsnow.com/kannada/breaking-i-am-ndas-candidate-in-channapatna-by-election-union-minister-hd-kumaraswamy/ https://kannadanewsnow.com/kannada/india-withdraws-its-high-commissioner-from-canada/
ಮಡಿಕೇರಿ: ಮೂರ್ನಾಡು ಗ್ರಾಮದ 33/11 ಕೆ.ವಿ ವಿದ್ಯುತ್ ಉಪ ಕೇಂದ್ರ ಹೊರಹೊಮ್ಮುವ ನಾಪೋಕ್ಲು ಮತ್ತು ಎಫ್5 ಹೊದ್ದೂರು ಫೀಡರ್ನಲ್ಲಿ ಅಕ್ಟೋಬರ್, 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ನಾಪೋಕ್ಲು, ಕುಂಜಿಲ, ಕಕ್ಕಬೆ, ನಾಲಡಿ, ಯವಕಪಾಡಿ, ಕೊಟ್ಟಮುಡಿ, ಬೇತು, ಪಾಲೂರು, ಹೊದ್ದೂರು, ಹಳೆತಾಲೂಕು, ಎಮ್ಮೆಮಾಡು. ಬಲ್ಲಮಾವಟಿ, ಕೊಳಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. https://kannadanewsnow.com/kannada/important-information-for-parents-of-girl-children-about-bhagya-lakshmi-sukanya-samriddhi-yojana/ https://kannadanewsnow.com/kannada/minister-laxmi-hebbalkar-clarifies-that-money-will-be-credited-to-the-accounts-of-grihalakshmi-beneficiaries-for-one-month/
ನವದೆಹಲಿ: ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಕೆನಡಾದಿಂದ ಹೈಕಮೀಷನರ್ ಅನ್ನು ಭಾರತವು ವಾಪಾಸ್ಸು ಪಡೆದಿದೆ. ಇಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವಂತ ಕೇಂದ್ರ ಗೃಹ ಇಲಾಖೆಯು, ಉಗ್ರವಾದ ಮತ್ತು ಹಿಂಸಾಚಾರದ ವಾತಾವರಣದಲ್ಲಿ, ಟ್ರುಡೊ ಸರ್ಕಾರದ ಕ್ರಮಗಳು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಒತ್ತಿಹೇಳಲಾಯಿತು. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಪ್ರಸ್ತುತ ಕೆನಡಾ ಸರ್ಕಾರದ ಬದ್ಧತೆಯಲ್ಲಿ ನಮಗೆ ನಂಬಿಕೆ ಇಲ್ಲ. ಆದ್ದರಿಂದ, ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಹಿಂತೆಗೆದುಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ ಎಂದಿದೆ. https://twitter.com/ANI/status/1845825994621628674 https://kannadanewsnow.com/kannada/breaking-i-am-ndas-candidate-in-channapatna-by-election-union-minister-hd-kumaraswamy/ https://kannadanewsnow.com/kannada/important-information-for-parents-of-girl-children-about-bhagya-lakshmi-sukanya-samriddhi-yojana/
ಮಡಿಕೇರಿ : ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ, ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ.3000 ದಂತೆ 15 ವರ್ಷಗಳವರೆಗೆ ಒಟ್ಟು ರೂ.45,000 ಗಳನ್ನು ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ ಅಂದಾಜು ರೂ.1.27 ಲಕ್ಷ ನೀಡಲಾಗುತ್ತದೆ. ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಗನವಾಡಿ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಮಗುವನ್ನು ನೋಂದಾಯಿಸಲು ಅವಶ್ಯಕ ದಾಖಲೆಗಳು; ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ ಅರ್ಜಿ ನಮೂನೆ, ಪೋಷಕರೊಂದಿಗೆ ಮಗುವಿನ ಭಾವಚಿತ್ರ, ಮಗುವಿನ ಮೂಲ ಜನನ ಪ್ರಮಾಣ ಪತ್ರ, ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ(ಪಡಿತರ ಚೀಟಿಯಲ್ಲಿ ತಂದೆಯ ಹೆಸರು ಇರಬೇಕು). ಪೋಷಕರ ಆಧಾರ್ ಕಾರ್ಡ್, ಮಗುವಿನ ಆಧಾರ್ ಕಾರ್ಡ್ ಪ್ರತಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಪೋಷಕರ ಸ್ವಯಂ ಘೋಷಣಾ ವಿವಾಹ ದೃಢೀಕರಣ…
BIG NEWS: ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ; ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ- ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ಬಳ್ಳಾರಿ : ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಸಂಡೂರು ಪಟ್ಟಣದ ಅಗ್ನಿಶಾಮಕದಳ ಮುಂಭಾಗದ ವಿಶ್ವಾಸ್ ಯು.ಲಾಡ್ ಮೈದಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಂಡೂರು ಭಾಗದಲ್ಲಿ 280 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 2004 ರಿಂದ 2024 ರವರೆಗೆ 1,216 ಕೋಟಿ ರೂ. ಅನುದಾನ ನೀಡಲಾಗಿದೆ. ರೂ.160.00 ಕೋಟಿ ವೆಚ್ಚದಲ್ಲಿ ನಿಡುಗುರ್ತಿ ಸೇರಿದಂತೆ 58 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. 2013 ರ ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಮನೆಗಳನ್ನು ಕಟ್ಟಲು ಗುರಿ ಹೊಂದಲಾಗಿತ್ತು. ಸಂಡೂರು ಭಾಗದಲ್ಲಿಯೇ 12,000 ಮನೆಗಳನ್ನು ನೀಡಲಾಗಿತ್ತು.…
ಬೆಂಗಳೂರು: ಅಕ್ಟೋಬರ್.25ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ, ಹಣಕಾಸು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಸಚಿವ ಸಂಪುಟದ ಸರ್ಕಾರದ ಜಂಟಿ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದು ದಿನಾಂಕ 25-10-2024ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟದ 2024ನೇ ಸಾಲಿನ 22ನೇ ಸಭೆಯನ್ನು ವಿಧಾನಸೌಧದದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ ಎಂದಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ಪ್ರಣಾಣಿಕೆಯಲ್ಲಿ ಘೋಷಿಸಿದಂತೆ ಜಾರಿಗೊಳಿಸುವುದಾಗಿ ಈ ಹಿಂದೆ ತಿಳಿಸಿದ್ದರು. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಅ.25ರಂದು ನಡೆಯಲಿರುವಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಪ್ರಕಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. https://kannadanewsnow.com/kannada/will-the-bjp-sangh-parivar-also-return-the-land-mla-manjunath-bhandari/ https://kannadanewsnow.com/kannada/minister-laxmi-hebbalkar-clarifies-that-money-will-be-credited-to-the-accounts-of-grihalakshmi-beneficiaries-for-one-month/
ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮಾನುಸಾರ ಹಂಚಿಕೆಯಾಗಿದ್ದ 5 ಎಕರೆ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರು ಇತರರಿಗೆ ಆದರ್ಶರಾಗಿದ್ದಾರೆ. ಈಗ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ತಮಗೆ ಹಂಚಿಕೆಯಾಗಿದ್ದ ಜಮೀನು ಮತ್ತು ನಿವೇಶನಗಳನ್ನು ಹಿಂದುರುಗಿಸುವ ಮೂಲಕ ಆದರ್ಶರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 5 ದಶಕಗಳಿಗೂ ಅಧಿಕ ಕಾಲ ಪರಿಶುದ್ಧ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಕೇಳಿಬರುತ್ತಿದ್ದಂತೆ ರಾಹುಲ್ ಖರ್ಗೆ ಅವರು, ನ್ಯಾಯಬದ್ಧವಾಗಿ ಲಭ್ಯವಾಗಿರುವ ಜಮೀನನ್ನು ಹಿಂದಿರುಗಿಸಿ ಮೇಲ್ಪಂಕ್ತಿ ಹಾಕಿದ್ದಾರೆ. ಹೀಗಾಗಿ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡಬಾರದು. ಅಲ್ಲದೆ ಉದ್ದೇಶ ಪೂರ್ವಕವಾಗಿ ವಿವಾದಕ್ಕೆ ಸಿಲುಕಿಸುವ ಪ್ರಯತ್ನವನ್ನು ಮಾಡುತ್ತಿರುವ ಪ್ರತಿಪಕ್ಷಗಳು ಇನ್ನು ಮುಂದಾದರೂ ಇಂಥ ಕೃತ್ಯದಿಂದ ಹಿಂದೆ ಸರಿಯಬೇಕು. ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕರಾದ ಛಲವಾದಿ…
ನಾವು ಎಲ್ಲಾ ಒಳ್ಳೆಯ ವಿಷಯಗಳಿಗೆ ಅಯಸ್ಕಾಂತವಾಗಬೇಕಾದರೆ, ನಾವು ನಮ್ಮ ಬದ್ಧ ಸ್ವಭಾವವನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯದನ್ನು ಆಕರ್ಷಿಸುವ ವಸ್ತು ವಶಂ ಎಂದು ಅವರು ಹೇಳುತ್ತಾರೆ. ಒಳ್ಳೆಯ ಜನರನ್ನು ನಮ್ಮೆಡೆಗೆ ಆಕರ್ಷಿಸಲು, ಒಳ್ಳೆಯದನ್ನು ನಮ್ಮೆಡೆಗೆ ಆಕರ್ಷಿಸಲು, ಭೌತಿಕ ಸಂತೋಷಗಳನ್ನು ನಮಗೆ ಆಕರ್ಷಿಸಲು, ಹಣವನ್ನು ಆಕರ್ಷಿಸಲು, ನಮಗೆ ಏನು ಬೇಕು? ರೆಸಿಡೆನ್ಸಿ ಅಗತ್ಯವಿದೆ. ಈ ಪೋಸ್ಟ್ ಮೂಲಕ, ನಾವು ಎಲ್ಲವನ್ನೂ ನಮ್ಮ ಕಡೆಗೆ ಆಕರ್ಷಿಸಲು ಸರಳ ಪರಿಹಾರ ಮತ್ತು ಮಂತ್ರ ಜಪವನ್ನು ತಿಳಿಯಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ…