Author: kannadanewsnow09

ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕನ್ನಡಿಗರಿಗೆ ನೈಜ. .ತರ್ಕ ಬದ್ಧ ಹಾಗೂ ಮೌಲ್ಯಯುತ ಸುದ್ದಿಗಳನ್ನ ಹೊತ್ತು ತರಲು ಗ್ಯಾರಂಟಿ ನ್ಯೂಸ್ ಸಜ್ಜಾಗಿದೆ. ಕನ್ನಡಿಗರ ಹೆಮ್ಮೆಯ ನ್ಯೂಸ್ ಚಾನಲ್ “ಗ್ಯಾರಂಟಿ ನ್ಯೂಸ್” ಹೆಸರು ಹಾಗೂ ಲೋಗೋವನ್ನ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅನಾವರಣಗೊಳಿಸಿದರು. ಈ ವೇಳೆ ಖ್ಯಾತ ನಟ ರಾಘವೇಂದ್ರ ರಾಜ್ ಕುಮಾರ್, ಗ್ಯಾರಂಟಿ ನ್ಯೂಸ್ ವೆಬ್ ಸೈಟ್ ಲಾಂಚ್ ಮಾಡಿದ್ರು. ಲೋಗೋ ಅನಾವರಣಗೊಳಿಸಿ ಮಾತನಾಡಿದ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್, ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ತಂಡವೇ ಗ್ಯಾರಂಟಿ ನ್ಯೂಸ್ ಚಾನಲ್ ಆರಂಭ ಮಾಡುತ್ತಿದ್ದಾರೆ. ಇತರ ಮಾಧ್ಯಮಗಳಿಗಿಂತ ವಿಭಿನ್ನವಾಗಿ ಮೂಡಿ ಬರುವ ವಿಶ್ವಾಸ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ನೀವು ದೊಡ್ಡ ಸವಾಲನ್ನೇ ಸ್ವೀಕಾರ ಮಾಡಿದ್ದೀರಿ. ಜನತೆಗೆ ನೈಜ ಸುದ್ದಿಗಳನ್ನ ನೀಡುವ ವಿಶ್ವಾಸ. ಇಂದಿನ ಅನೇಕ ಸುದ್ದಿ ಮಾಧ್ಯಮಗಳು, ಸುದ್ದಿ ನೀಡುವ ಭರದಲ್ಲಿ ಜಡ್ಜ್ಮೆಂಟ್ ನೀಡುವ ಅಭ್ಯಾಸ ಶುರುವಾಗಿದೆ. ಸುದ್ದಿ ಮಾಧ್ಯಮವಾಗಿ ಸುದ್ದಿಯನ್ನ ಬಿತ್ತರಿದಸಬೇಕು.…

Read More

ಕೋಲಾರ: ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ಹೇಳುವ ಮೂಲಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ನಡೆಸಿದರು. ಈ ವೇಳೆ ಮಾತನಾಡಿದಂತ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರೀಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂಬುದಾಗಿ ಘೋಷಿಸಿದರು. ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆಯೇ ಕಲುಷಿತಗೊಂಡು, ಮೌಲ್ಯಗಳಿಗೆ ಉರುಳಿಲ್ಲದಂತೆ ಆಗಿದೆ. ನಾನು ಇಷ್ಟು ದಿನ ರಾಜಕೀಯ ಜೀವನದಲ್ಲಿ ನಾನು ನ್ಯಾಯಯುತವಾಗಿ ಬದುಕಿದ್ದೇನೆ. ನಾನು ಯಾವತ್ತೂ ಹಣಪಡೆದು ರಾಜಕೀಯ ಮಾಡಿಲ್ಲ. ಆದ್ರೇ ಪಕ್ಷದಲ್ಲಿ ಕೆಲವರು ಹಣಕ್ಕಾಗಿ ತಮ್ಮ ತಲೆ ಮಾರಿಕೊಂಡು ನನಗೆ ಮೋಸ ಮಾಡಿ ಬಿಟ್ರು ಅಂತ ಅಳಲು ತೋಡಿಕೊಂಡರು. ನಾನು ಕಾಂಗ್ರೆಸ್ ಪಕ್ಷವನ್ನು ತಾಯಿಯಂತೆ ಭಾವಿಸಿದ್ದೇನೆ. ಇಂತಹ ತಾಯಿಯಂತ ಪಕ್ಷಕ್ಕೆ ದ್ರೋಹವನ್ನು ಕೆಲವರು ಮಾಡಿದ್ರು. ಅಧಿಕಾರದ ಆಸೆಗಾಗಿ ಅನೈತಿಕ ರಾಜಕಾರಣ ಕೂಡ ಮಾಡುತ್ತಿದ್ದಾರೆ.…

Read More

ಬೆಂಗಳೂರು: ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರೊ.ರಾಜೀವ್ ಗೌಡ ಗೆಲ್ಲೋದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತವಾಗಿ ನುಡಿದರು. ಪ್ರೊ.ರಾಜೀವ್ ಗೌಡ ಪರವಾಗಿ ಮಲ್ಲೇಶ್ವರಂ, ಸುಬ್ರಮಣ್ಯನಗರ, ಗಾಯತ್ರಿನಗರದ ರಸ್ತಡಗಳಲ್ಲಿ ಎರಡು ಗಂಟೆಗೂ ಹೆಚ್ಚು ಲಾಲ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದರು. ಕೇಂದ್ರ ಕೃಷಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ರಾಜ್ಯದ ರೈತರ ಪರವಾಗಿ ಯಾವ ಕೆಲಸಗಳನ್ನೂ ಮಾಡಲಿಲ್ಲ. ಸಂಸದೆಯಾಗಿಯೂ ನಾಡಿನ ಪರವಾಗಿ ಕೆಲಸ ಮಾಡಲಿಲ್ಲ. ಇಂಥವರಿಗೆ ಬೆಂಬಲಿಸಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ ಎಂದು ಪ್ರಶ್ನಿಸಿದರು. https://kannadanewsnow.com/kannada/ipl-2024-phase-two-schedule-for-tata-ipl-fan-park-revealed-by-bcci/ https://kannadanewsnow.com/kannada/delhi-metro-constable-commits-suicide-by-shooting-himself-with-rifle/

Read More

ನವದೆಹಲಿ: 36 ವರ್ಷದ ಸಿಐಎಸ್ಎಫ್ ಕಾನ್ಸ್ಟೇಬಲ್ ಗುರುವಾರ ಪಶ್ಚಿಮ ವಿಹಾರ್ (ಪಶ್ಚಿಮ) ಮೆಟ್ರೋ ನಿಲ್ದಾಣದಲ್ಲಿ ತನ್ನ ಸೇವಾ ರೈಫಲ್ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 6:40 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು. ಮೃತ ಯೋಧ ಸಹರೆ ಕಿಶೋರ್ ಸಮ್ರಾವ್ ಅವರ ಶವವನ್ನು ಎಕ್ಸ್-ರೇ ಬ್ಯಾಗೇಜ್ ಸ್ಕ್ಯಾನರ್ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. https://twitter.com/lavelybakshi/status/1776646096686838232?ref_src=twsrc%5Etfw%7Ctwcamp%5Etweetembed%7Ctwterm%5E1776646096686838232%7Ctwgr%5E414e6575cffc0c12818e9c59cfa70e7d17d19788%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fsuicidecaughtoncameraatdelhimetrostationcisfjawandiesaftershootinghimselfatpaschimviharwestmetrostationshockingvideosurfaces-newsid-n598145782 ಕಾನ್ಸ್ಟೇಬಲ್ 2014 ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಗೆ ಸೇರಿದರು ಮತ್ತು 2022 ರಲ್ಲಿ ಸಿಐಎಸ್ಎಫ್ (ದೆಹಲಿ ಮೆಟ್ರೋ ರೈಲು ನಿಗಮ) ಗೆ ನೇಮಕಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಮೆಟ್ರೋವನ್ನು ಕಾಯುವ ಸಿಐಎಸ್ಎಫ್ ಘಟಕದಲ್ಲಿ ನಿಯೋಜಿಸಲಾಗಿದ್ದ ಜವಾನ್ ತನ್ನ ಸೇವಾ ಶಸ್ತ್ರಾಸ್ತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು. ಮೃತರು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯವರಾಗಿದ್ದು, ದೆಹಲಿಯ ನರೇಲಾ ಪ್ರದೇಶದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.…

Read More

ಬಳ್ಳಾರಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆಗೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣು ನೆಟ್ಟಿದ್ದಾರೆ. ಬಳ್ಳಾರಿಯಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 5 ಕೋಟಿ 50 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. ಬಳ್ಳಾರಿ ನಗರ ಬ್ರೂಸ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ಚೆಕ್ ಪೋಸ್ಟ್ ನಲ್ಲಿ ಕಾರನ್ನು ತಪಾಸಣೆ ನಡೆಸುತ್ತಿದ್ದಂತ ವೇಳೆಯಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ ಹಣ ಪತ್ತೆಯಾಗಿದೆ. ಕಾರಿನಲ್ಲಿ ಹಣ ಸಾಗಿಸುತ್ತಿದ್ದಂತವರನ್ನು ವಶಕ್ಕೆ ಪಡೆದು ದೊರೆತಂತ 5 ಕೋಟಿ, 50 ಲಕ್ಷ ಹಣದ ಬಗ್ಗೆ ದಾಖಲೆ ಕೇಳಿದ್ದಾರೆ. ಆದ್ರೆ ಅದಕ್ಕೆ ಸೂಕ್ತ ದಾಖಲೆ ನೀಡದ ಕಾರಣ ಅದು ಅಕ್ರಮ ಹಣವೆಂದು ಪರಿಗಣಿಸಿ, ಜಪ್ತಿ ಮಾಡಿದ್ದಾರೆ. ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹಣವನ್ನು ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದಂತ 5.50 ಕೋಟಿ ಹಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. https://kannadanewsnow.com/kannada/breaking-bengaluru-elderly-woman-dies-in-hit-and-run-car-driver-flees/ https://kannadanewsnow.com/kannada/ipl-2024-phase-two-schedule-for-tata-ipl-fan-park-revealed-by-bcci/

Read More

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024 ರ ರೋಮಾಂಚಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ಯಾನ್ ಪಾರ್ಕ್ 2024 ರ ಎರಡನೇ ಹಂತದ ಪ್ರಯಾಣದ ವೇಳಾಪಟ್ಟಿಯನ್ನು ಬಹಿರಂಗಪಡಿಸಿದೆ. ಏಪ್ರಿಲ್ 07, 2024 ರ ನಂತರ ಭಾರತದ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಪ್ರಾರಂಭವಾಗಲಿರುವ ಈ ಹಂತವು ಪ್ರತಿಷ್ಠಿತ ಐಪಿಎಲ್ನ 17 ನೇ ಆವೃತ್ತಿಯ ಸಮಯದಲ್ಲಿ 50 ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ಗಳನ್ನು ಆಯೋಜಿಸುವುದಾಗಿ ಬಿಸಿಸಿಐ ಈ ಹಿಂದೆ ಘೋಷಿಸಿದ ನಂತರ ಈ ಹಂತವನ್ನು ಅನುಸರಿಸುತ್ತದೆ. ಮಾರ್ಚ್ 22, 2024 ರಿಂದ ಏಪ್ರಿಲ್ 7, 2024 ರವರೆಗೆ ಬಿಸಿಸಿಐ 11 ಭಾರತೀಯ ರಾಜ್ಯಗಳಲ್ಲಿ 15 ಫ್ಯಾನ್ ಪಾರ್ಕ್ಗಳೊಂದಿಗೆ ಉತ್ಸವವನ್ನು ಪ್ರಾರಂಭಿಸಿತು. ಇದರ ನಂತರ, ಕೊಲ್ಹಾಪುರ, ವಾರಂಗಲ್, ಹಮೀರ್ಪುರ್, ಭೋಪಾಲ್ ಮತ್ತು ರೂರ್ಕೆಲಾ ಏಪ್ರಿಲ್ 13 ಮತ್ತು ಏಪ್ರಿಲ್ 14 ರಂದು ವಿವಿಧ ನಗರಗಳಲ್ಲಿ ಏಕಕಾಲದಲ್ಲಿ ಐದು ಫ್ಯಾನ್ ಪಾರ್ಕ್ಗಳು ತೆರೆದುಕೊಳ್ಳಲಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್,…

Read More

ಉತ್ತರ ಕನ್ನಡ: ವಿದೇಶದಲ್ಲಿರುವಂತ ಹಜ್ ಯಾತ್ರೆಗೆ ತೆರಳಿದ್ದಂತ ಉತ್ತರ ಕನ್ನಡ ಜಿಲ್ಲೆಯ  ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಅಫಾಗ್ ಫಯಾಸ್ ರೋಣ, ಪತ್ನಿ ಅಫ್ರಿನಾ ಬಾನು ಹಾಗೂ ಅಣ್ಣನ ಮಗ ಅಯಾನ್ ರೋಣ ಎಂಬುವರು ಹಜ್ ಯಾತ್ರೆ ಮುಗಿಸಿ ಮಕ್ಕಾದಿಂದ ಹಿಂದಿರುಗುತ್ತಿದ್ದಾಗ ವಿದೇಶದಲ್ಲಿ ನಡೆದಂತ ಅಪಘಾತದಲ್ಲಿ ಸ್ಥಳದಲ್ಲೇ ದುರ್ಮರಣ ಹೊಂದಿರೋದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಮೂವರು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಚ್.26ರಂದು ರಾತ್ರಿ ಮಕ್ಕಾ ಮದೀನಕ್ಕೆ ತೆರಳಿದ್ದರು. ಏಪ್ರಿಲ್.6ರ ನಿನ್ನೆ ರಾತ್ರಿ ಮಕ್ಕಾ ಮದೀನ ನಡುವಿನ ರಸ್ತೆಯಲ್ಲಿ ಅಪಘಾತದಲ್ಲಿ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/the-bull-named-rockstar-which-won-lakhs-and-lakhs-of-prizes-in-haveri-is-no-more/ https://kannadanewsnow.com/kannada/ugc-net-heres-the-important-information-for-the-candidates-applying/

Read More

ಹಾವೇರಿ: ರಾಜ್ಯದ ಜನಪದ ಕ್ರೀಡೆಗಳಲ್ಲಿ ಒಂದು ಹೋರಿ ಹಬ್ಬ ಕೂಡ. ಈ ಕ್ರೀಡೆಯಲ್ಲಿ ಭಾಗಿಯಾಗಿ, ಗೆಲ್ಲೋದಕ್ಕೆ ಅನೇಕ ಹೋರಿಗಳ ಮಾಲೀಕರು ಪ್ರಯತ್ನಿಸುತ್ತಾರೆ. ಅದರಲ್ಲೂ ಹೋರಿ ಹಬ್ಬದಲ್ಲಿ ಭಾಗಿಯಾಗಿ, ಲಕ್ಷ ಲಕ್ಷ ಬಹುಮಾನ ತಂದುಕೊಟ್ಟಿದ್ದು ಮಾತ್ರ ರಾಕ್ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ. ಇಂತಹ ಹೋರಿ ಇನ್ನಿಲ್ಲವಾಗಿದೆ. ಹಾವೇರಿ ನಗರದಲ್ಲಿ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರು ಸಾಕಿದ್ದಂತ ಹೋರಿಯಲ್ಲಿ ರಾಕ್ ಸ್ಟಾರ್ ಕೊಬ್ಬರಿ ಹೋರಿ ಒಂದು. ಈ ಹೋರಿ ಎಲ್ಲೇ ಹೋದ್ರೂ ಬಹುಮಾನ ಫಿಕ್ಸ್. ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದ್ದಂತ ಈ ರಾಕ್ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ, ತುಂಬಾನೇ ಫೇಮಸ್ ಕೂಡ ಆಗಿತ್ತು. ಹೋರಿ ಹಬ್ಬದ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಂತ ಈ ಹೋರಿಗೆ ರಾಕ್ ಸ್ಟಾರ್ ಕೊಬ್ಬರಿ ಹೋರಿ ಎಂಬುದಾಗಿ ಜನಪ್ರಿಯವಾಗಿತ್ತು. ರಾಕ್ ಸ್ಟಾರ್ ಹೋರಿಗೆ ಸುಮಾರು 25 ವರ್ಷವಾಗಿತ್ತು. ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು. ಇಂದು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ರಾಕ್ ಸ್ಟಾರ್ ಹೋರಿ,…

Read More

ಕೋಲಾರ: ಕೋಲಾರದಿಂದ ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದು, ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಎಲ್ಲಾ ಜಾತಿಯ ಜನರು,ಮಧ್ಯಮವರ್ಗದವರು ನಮ್ಮ ಪರವಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಧಿಕ ಅಂತರದಿಂದ ಗೆಲ್ಲಲಿದ್ದಾರೆ ಎಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಇಂದು ಮುಳಬಾಗಿಲು ನಗರದಲ್ಲಿ ಲೋಕಸಭಾ ಅಭ್ಯರ್ಥಿಯಾದ ಡಾ|| ಕೆವಿ ಗೌತಮ್ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು. ಬಿಜೆಪಿಗೆ ಏತಕ್ಕಾಗಿ ಮತ ನೀಡಬೇಕು 5300 ಕೋಟಿ ಕೊಡುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಹೇಳಿದ್ದರು. ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾರೆಯೇ? 15 ನೇ ಹಣಕಾಸು ಯೋಜನೆಯು 5495 ಕೋಟಿ ಕೊಡುವುದಾಗಿ ಹೇಳಿ ಕೊಟ್ಟಿಲ್ಲಾ. ಪೇರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭವೃದ್ಧಿಗೆ ತಲಾ 3000 ಕೋಟಿ ರೂ.ಕೊಡುವುದಾಗಿ ಹೇಳಿದ್ದರು. ಕೊಟ್ಟರೇ? 15 ಲಕ್ಷ ರೂ ವಿದೇಶಗಳಿಂದ ತಂದು ಪ್ರತಿಯೊಬ್ಬರಿಗೂ ಕೊಟ್ಟರೇ?2 ಕೋಟಿ ಉದ್ಯೋಗ ಪ್ರತಿ ವರ್ಷ ಸೃಷ್ಟಿಸುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣ ಮಾಡುವುದೆಂದು ಹೇಳಿದ್ದರು ಮಾಡಿದರೆ…

Read More

ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಪ್ರೊ.ರಾಜೀವ್ ಗೌಡ ಅವರು ಪಾರ್ಲಿಮೆಂಟಿನಲ್ಲಿ ಸಮರ್ಥವಾಗಿ ನಾಡಿನ ಪರವಾಗಿ, ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತುತ್ತಾರೆ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನು ಆಡಿದರು. ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡರ ಪರವಾಗಿ ನಡೆದ ಬೂತ್ ಮುಖಂಡರು ಮತ್ತು ಬ್ಲಾಕ್ ಮುಖಂಡರುಗಳ ಬೃಹತ್ ಸಭೆಯನ್ನು ಹಾಗೂ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ನೀವು ಮತ ಹಾಕಲು ಕಾರಣಗಳೇ ಇಲ್ಲ. ಅವರು ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳು ಬಗ್ಗೆ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಲಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೇ ಗೋ-ಬ್ಯಾಕ್ ಎಂದು ಓಡಿಸಿದ್ದಾರೆ. ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಕಾರ್ಯಕರ್ತರೇ ಅವರನ್ನು ಗೋ ಬ್ಯಾಕ್ ಎಂದು ಕಳುಹಿಸಿದ್ದಾರೆ. ಆದ್ದರಿಂದ ಇವರಿಗೆ ಇಲ್ಲಿ ಅವರಿಗೆ ಮತಹಾಕಲು ಕಾರಣಗಳೇ ಇಲ್ಲ ಎಂದರು. ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಜನರ ಕೆಲಸ ಮಾಡಲಿಲ್ಲ. ಈ…

Read More