Author: kannadanewsnow09

ಬೆಂಗಳೂರು: 2023-24ನೇ ಸಾಲಿನ ಮೆಟ್ರಿಕ್ ನಂತ್ರದ ಹಾಗೂ ಮೆಟ್ರಿಕ್ ಕಂ ಮೀನ್ ಶುಲ್ಕ ಮರುಪಾವತಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸೋದಕ್ಕೆ ದಿನಾಂಕ 15-02-2024 ಕೊನೆಯ ದಿನವಾಗಿದೆ. ಈ ಕುರಿತಂತೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸೋ ಮೊದಲು SSP ತಂತ್ರಾಂಶದಲ್ಲಿ ಲಾಗಿನ್ ಆಗಬೇಕು. ಇದಕ್ಕಾಗಿ ಎಸ್ ಎಸ್ ಪಿ ವಿದ್ಯಾರ್ಥಿ ಖಾತೆಗೆ ಲಾಗಿನ್ ಆಗಲು https://ssp.postmetric.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕಾಗಿದೆ. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಿದ್ದಲ್ಲಿ, ಸದರಿ ಅರ್ಜಿಯು ಸಂಬಂಧಿಸಿದ ಪ್ರಾಯೋಜಿಕ ಕಲ್ಯಾಣ ಇಲಾಖೆಯಿಂದ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಎಸ್ ಎಸ್ ಪಿಯಲ್ಲಿ 2023-24ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ಬಳಕೆದಾರರ ಕೈಪಿಡಿಯನ್ನು ಸಂಪೂರ್ಣವಾಗಿ ಪರಾಮರ್ಶಿಸಿ, ನಂತ್ರ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಬೇಕಾಗುವ ದಾಖಲೆಗಳು ಏನು.? 10ನೇ ತರಗತಿ ನೋಂದಣಿ ಸಂಖ್ಯೆ,…

Read More

ಬೆಂಗಳೂರು: ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಜಾತಿವಾರು ಕಲ್ಪಿಸಲಾಗುತ್ತಿದೆ. ಪರಿಶಿಷ್ಟರಿಗೆ ಶೇ.18ರಷ್ಟು ಮೀಸಲಾತಿ ಕಲ್ಪಿಸಿದ್ರೇ, ಹಿಂದುಳಿದ ವರ್ಗದವರಿಗೆ ಶೇ.32ರಷ್ಟು ಕಲ್ಪಿಸಲಾಗುತ್ತಿದೆ. ಹಾಗಾದ್ರೇ ಯಾರಿಗೆ ಎಷ್ಟು ಮೀಸಲಾತಿ ಅನ್ನೋ ಬಗ್ಗೆ ಮುಂದೆ ಓದಿ. ಪರಿಶಿಷ್ಟ ಜಾತಿ ಈ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಹೊಲೆಯರು, ಮಾದಿಗ, ಬೋವಿ, ಲಂಬಾಣಿ, ಸಮಗಾರ, ಕೊರಚ, ಕೊರಮ ಸೇರಿದಂತೆ 101 ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿದ್ದಾವೆ. ಇಂತಹ ಪರಿಶಿಷ್ಟ ವರ್ಗದವರಿಗೆ ಶೇ.15ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗುತ್ತಿದೆ. ಪರಿಶಿಷ್ಟ ಪಂಗಡ ಈ ಪರಿಶಿಷ್ಟ ಪಂಗಡದಲ್ಲಿ ಪ್ರಮುಖವಾಗಿ ಬರೋ ಜಾತಿಗಳೆಂದರೇ ನಾಯಕ, ವಾಲ್ಮೀಕಿ ಹಾಗೂ ಆದಿವಾಸಿಗಳು. ಇವರು ಸೇರಿದಂತೆ 56 ಜಾತಿಗಳು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದಾವೆ. ಇವರಿಗೆ ಶೇ.03ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಹಿಂದುಳಿದ ವರ್ಗ, ಕೆಟಗರಿ-1 ಪ್ರಮುಖವಾಗಿ ಬರೋ ಹಿಂದುಳಿದ ವರ್ಗಗಗಳ ಜಾತಿಗಳೆಂದ್ರೇ ಉಪ್ಪಾರರು, ಗೊಲ್ಲರು, ಪಿಂಜಾರ ಸೇರಿದಂತೆ 95 ಜಾತಿಗಳಿದ್ದಾವೆ. ಈ ವರ್ಗದವರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಕೆಟಗರಿ 2ಎ ಕುರುಬ, ಈಡಿಗ, ವಿಶ್ವಕರ್ಮ, ನಾಮಧಾರಿ, ದೇವಾಡಿಗ, ಮಡಿವಾಳ,…

Read More

ಶ್ರೀಕೃಷ್ಣನ ಕೈಯಲ್ಲಿರುವ ಚಕ್ರವನ್ನು ‘ಸುದರ್ಶನ ಚಕ್ರ’ ಎಂದು ಕರೆಯಲಾಗುತ್ತದೆ. ಈ ಮಂತ್ರವನ್ನು ಪಠಿಸಿದರೆ ಅಸಂಖ್ಯಾತ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಯಾವುದೇ ದುಷ್ಟ ಶಕ್ತಿಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತಾರೆ. ಅಂತಹ ಪವಾಡಗಳಿಂದ ಕೂಡಿದ ಸುದರ್ಶನ ಮಂತ್ರ ಇಲ್ಲಿದೆ . ಶ್ರೀ ಸುದರ್ಶನ ಚಕ್ರ ರಕ್ಷಾ ಮಂತ್ರ: ಓಂ ನಮೋ ಸುದರ್ಶನ ಚಕ್ರಾಯ ಸ್ಮರಣ ಮಾತ್ರೇಣ ಪ್ರಗಡಾಯ ಪ್ರಗಡಾಯ ದ್ವಂ ಸ್ವರೂಪಂ ಮಮ ದರ್ಶಯ ದರ್ಶಯ ಮಮ ಸರ್ವತ್ರ ರಕ್ಷಾಯ ರಕ್ಷಾಯ ಸ್ವಾಹಾ ॥ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿರುವ ಈ ಮಂತ್ರವನ್ನು ಮೊದಲು ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದಂದು ದೀಪವನ್ನು ಬೆಳಗಿಸುವ ಮೂಲಕ 1008 ಬಾರಿ ಜಪಿಸಲಾಗುತ್ತದೆ. ಅದರ ನಂತರ ಅಗತ್ಯವಿದ್ದಾಗ 3 ಬಾರಿ ಜಪ ಮಾಡಿದರೆ ಯಾವುದೇ ಅಪಾಯದಿಂದ ಪಾರಾಗಬಹುದು. ಇದು ಯಾವುದೇ ದುಷ್ಟ ಶಕ್ತಿಯಿಂದ ಗುರಾಣಿಯಂತೆ ರಕ್ಷಿಸುತ್ತದೆ. ಇದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿರುವುದರಿಂದ, ನಿಮಗೆ ಅನಿಸಿದಾಗಲೆಲ್ಲಾ ಇದನ್ನು ಜಪಿಸಬಾರದು. ಈ ಮಂತ್ರವನ್ನು ಪ್ರಾರ್ಥಿಸುವ ಮೊದಲು ಒಬ್ಬರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ…

Read More

ಬೆಂಗಳೂರು: 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಲ್ಲಿಸಲಾಗಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರವನ್ನು ಬರೆದಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಗ್ರೂಪ್-ಎ, ಗ್ರೂಪ್ ಬಿ ಹುದ್ದೆಗಳ ರಿಕ್ತ ಸ್ತಾನಗಳ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದ್ದಾರೆ. ಹೀಗಿದೆ ಗ್ರೂಪ್-ಎ ಕೆಎಎಸ್ ಖಾಲಿ ಹುದ್ದೆಗಳ ವಿವರ ಸಹಾಯಕ ಆಯುಕ್ತರು(ಕಿರಿಯ ಶ್ರೇಣಿ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ – 40 ಹುದ್ದೆ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ – 41 ಹುದ್ದೆ ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ – 02 ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

Read More

ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ವರಲೆ ನೇಮಕಗೊಂಡ ನಂತ್ರ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್ ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಇಂತಹ ಅವರು ಇಂದು ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಕರ್ನಾಟಕ ಮುಖ್ಯ ನ್ಯಾಯಮೂರ್ತಿಯಾದಂತ ಪಿ.ಎಸ್ ದಿನೇಶ್ ಕುಮಾರ್ ಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಅವರು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥೇವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು. https://kannadanewsnow.com/kannada/india-will-become-third-largest-economy-during-our-third-term-says-pm-modi/ https://kannadanewsnow.com/kannada/lk-%e0%b2%85%e0%b2%a1%e0%b3%8d%e0%b2%b5%e0%b2%be%e0%b2%a3%e0%b2%bf%e0%b2%97%e0%b3%86-%e0%b2%ad%e0%b2%be%e0%b2%b0%e0%b2%a4-%e0%b2%b0%e0%b2%a4%e0%b3%8d%e0%b2%a8-%e0%b2%98%e0%b3%8b%e0%b2%b7%e0%b2%a3/

Read More

ನವದೆಹಲಿ: ನಿನ್ನೆ ಗರ್ಭಕಂಠ ಕ್ಯಾನ್ಸರ್ ನಿಂದ ನಟಿ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ಆದ್ರೇ ಇಂದು ಸ್ವತಹ ಪೂನಂ ಪಾಂಡೆಯವರೇ ನಾನು ಸಾವನ್ನಪ್ಪಿಲ್ಲ. ಬದುಕಿದ್ದೇನೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಹೌದು.. ರೂಪದರ್ಶಿ, ನಟಿ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಜೀವಂತವಾಗಿದ್ದಾರೆ. ಶನಿವಾರ ಇನ್ಸ್ಟಾಗ್ರಾಮ್ನಲ್ಲಿ, ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ‘ಆಘಾತ’ ನೀಡಿದ್ದಕ್ಕಾಗಿ ಕ್ಷಮೆಯಾಚಿಸುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವಂತ ವೀಡಿಯೋದಲ್ಲಿ ನಾನು ಸಾವನ್ನಪ್ಪಿಲ್ಲ. ನಾನು ಸಾವನ್ನಪ್ಪಿದ್ದೇನೆ ಎಂಬುದು ಸುಳ್ಳು. ನಾನು ಬದುಕಿದ್ದೇನೆ ಎಂಬುದಾಗಿ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ. https://twitter.com/ShivAroor/status/1753672993820356924

Read More

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಇಂದು ಈ ವಿಷಯ ತಿಳಿಸಿದಂತ ಪ್ರಧಾನಿ ನರೇಂದ್ರ ಮೋದಿಯವರು, ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾನಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಎಕ್ಸ್ ಮಾಡಿರುವಂತ ಪ್ರಧಾನಿ ಮೋದಿ ಅವರು, ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪ ಪ್ರಧಾನಿಯಾಗಿ ರಾಷ್ಟ್ರದ ಸೇವೆ ಮಾಡುವವರೆಗೆ ಅವರ ಜೀವನ. ಅವರು ನಮ್ಮ ಗೃಹ ಸಚಿವರಾಗಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿ ತಮ್ಮನ್ನು ಗುರುತಿಸಿಕೊಂಡರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ…

Read More

ನವದೆಹಲಿ: ಭಾರತವು ಪೆಟ್ರೋಲಿಯಂ ತೈಲದ ಮೇಲಿನ ಅನಿರೀಕ್ಷಿತ ತೆರಿಗೆಯನ್ನು ಶನಿವಾರ ಪ್ರತಿ ಟನ್ಗೆ 1,700 ರೂ.ಗಳಿಂದ 3,200 ರೂ.ಗೆ ಹೆಚ್ಚಿಸಿದೆ, ಆದರೆ ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನದ ಮೇಲಿನ ಅನಿರೀಕ್ಷಿತ ತೆರಿಗೆಯನ್ನು ಶೂನ್ಯದಲ್ಲಿರಿಸಿದೆ ಎಂದು ಸರ್ಕಾರ ಶುಕ್ರವಾರ ತಡರಾತ್ರಿ ತಿಳಿಸಿದೆ. ಜನವರಿ 16 ರಂದು ಸರ್ಕಾರವು ಪೆಟ್ರೋಲಿಯಂ ಕಚ್ಚಾ ತೈಲದ ಮೇಲಿನ ಅನಿರೀಕ್ಷಿತ ತೆರಿಗೆಯನ್ನು ಪ್ರತಿ ಟನ್ಗೆ 2,300 ರೂ.ಗಳಿಂದ ಇಳಿಸಿತು. ಜುಲೈ 2022 ರಿಂದ, ಭಾರತವು ಕಚ್ಚಾ ತೈಲ ಉತ್ಪಾದಕರ ಮೇಲೆ ಭಾರಿ ತೆರಿಗೆಯನ್ನು ವಿಧಿಸಿತು. ಪೆಟ್ರೋಲ್, ಡೀಸೆಲ್ ಮತ್ತು ವಾಯುಯಾನ ಇಂಧನ ರಫ್ತುಗಳ ಮೇಲಿನ ಶುಲ್ಕವನ್ನು ಹೆಚ್ಚಿಸಿತು. ಏಕೆಂದರೆ ಖಾಸಗಿ ಸಂಸ್ಕರಣಾಗಾರಗಳು ಸ್ಥಳೀಯವಾಗಿ ಮಾರಾಟ ಮಾಡುವ ಬದಲು ಹೆಚ್ಚಿನ ಸಂಸ್ಕರಣಾ ಲಾಭದಿಂದ ಲಾಭ ಪಡೆಯಲು ವಿದೇಶದಲ್ಲಿ ಇಂಧನವನ್ನು ಮಾರಾಟ ಮಾಡಲು ಆದ್ಯತೆ ನೀಡುತ್ತವೆ. ಇದು ಪ್ರತಿ ಎರಡು ವಾರಗಳಿಗೊಮ್ಮೆ ತೆರಿಗೆಯನ್ನು ಸರಿಹೊಂದಿಸುತ್ತದೆ. https://kannadanewsnow.com/kannada/significant-change-in-va-recruitment-by-state-government-competitive-exam-scheduled/ https://kannadanewsnow.com/kannada/it-is-mandatory-to-sing-national-anthem-at-the-beginning-of-government-programmes-state-government/

Read More

ಇಸ್ಲಾಮಾಬಾದ್: 2011ರಲ್ಲಿ ಅಮೆರಿಕದ ಕಮಾಂಡೋಗಳು ಒಸಾಮಾ ಬಿನ್ ಲಾಡೆನ್ ನನ್ನು ಕೊಲ್ಲುವ ಮೊದಲೇ, ಅಲ್ ಖೈದಾ ನಾಯಕ ತಮ್ಮ ದೇಶದಲ್ಲಿ ಅಡಗಿದ್ದಾನೆ ಎಂದು ಅಮೆರಿಕ ಪಾಕಿಸ್ತಾನಕ್ಕೆ ತಿಳಿಸಿತ್ತು ಎಂಬುದಾಗಿ ಪಾಕ್ ಮಾಜಿ ಪ್ರಧಾನಿ ಗಿಲಾನಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಜಿಯೋ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕಾಂಡೋಲೀಜಾ ರೈಸ್ (ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ) ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅವರು (ಬಿನ್ ಲಾಡೆನ್) ಪಾಕಿಸ್ತಾನದಲ್ಲಿದ್ದಾರೆ ಎಂಬುದು ಅವರ ಆತಂಕವಾಗಿತ್ತು ಎಂದು ಗಿಲಾನಿ ಸಂದರ್ಶನದಲ್ಲಿ ಹೇಳಿದರು. ರೈಸ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದಾಗ ನಾಲ್ಕು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರೆ, ಗಿಲಾನಿ 2008 ರಿಂದ 2012 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಗಿಲಾನಿ ಪ್ರಕಾರ, ಮುಂಬೈ ಭಯೋತ್ಪಾದಕ ದಾಳಿಯ ನಂತರ, ಡಿಸೆಂಬರ್ 2008 ರ ಮೊದಲ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಮುಜರಾಯಿ ಇಲಾಖೆಯ ದೇಗುಲಗಳಿಗೆ ಡಿಜಿಟಲ್ ಸ್ಪರ್ಷ ನೀಡಲಾಗುತ್ತಿದೆ. ಅಲ್ಲದೇ ಪೂಜಾ ಸೇವೆಗಳನ್ನು ಆನ್ ಲೈನ್ ಮೂಲಕವೇ ಖರೀದಿಸೋದಕ್ಕೆ ಅವಕಾಶ ಕಲ್ಪಿಸಿ, ಆಪ್ ಕೂಡ ಬಿಡುಗಡೆ ಮಾಡಲಾಗಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ವಿಶೇಷ ಕಾಳಜಿಯ ಫಲವಾಗಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಏರ್ಪಾಡಾಗುವ ಸೇವೆಗಳನ್ನು ಆನ್ ಲೈನ್ ಮೂಲಕ ಹಾಗೂ ಮೊಬೈಲ್ ಆಪ್ ಮೂಲಕ ಖರೀದಿಸೋದಕ್ಕೆ ಅವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಪೋರ್ಟಲ್ ಹಾಗೂ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ರಾಜ್ಯದ ಮುಜರಾಯಿ ಇಲಾಖೆಯ ದೇಗುಲಗಳ ಸೇವೆಯನ್ನು ಆನ್ ಲೈನ್ ಮೂಲಕ ಕಾಯ್ದಿರಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ. https://kannadanewsnow.com/kannada/significant-change-in-va-recruitment-by-state-government-competitive-exam-scheduled/ https://kannadanewsnow.com/kannada/it-is-mandatory-to-sing-national-anthem-at-the-beginning-of-government-programmes-state-government/

Read More