Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕ ಪವರ್ ಟ್ರಾನ್ಸ್ ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಅಂದರೆ ಕೆಪಿಟಿಸಿಎಲ್ ನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಮೇಲೆ ಉದ್ಯೋಗಕ್ಕೆ ಅರ್ಜಿ ಕರೆಯಲಾಗಿದೆ. ಬರೋಬ್ಬರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ನಾಳೆಯಿಂದ ಆರಂಭಗೊಳ್ಳಲಿದ್ದು, ನೀವು ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದರೇ ತಪ್ಪದೇ ಅರ್ಜಿ ಸಲ್ಲಿಸಿ. ಈ ಕುರಿತಂತೆ ಕೆಪಿಟಿಸಿಎಲ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 411 ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2268 ಕಿರಿಯ ಪವರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಇಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ. ವಿದ್ಯಾರ್ಹತೆ – ಎಸ್ಎಸ್ ಎಲ್ ಸಿ ಅಥವಾ 10ನೇ ತರಗತಿಯ ಸಿಬಿಎಸ್ಇ, ಐಸಿಎಸ್ಇ ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರುವಂತ ಅಭ್ಯರ್ಥಿಗಳು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು. ಆಯ್ಕೆಯ ವಿಧಾನ- ಸಹನ ಶಕ್ತಿ ಪರೀಕ್ಷೆಯ…
ಹಾಸನ: ರೋಗಿಯನ್ನು ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸಾಗಿಸುವ ವಿಚಾರಕ್ಕಾಗಿ ಎರಡು ಆಂಬುಲೆನ್ಸ್ ಚಾಲಕರ ನಡುವೆ ಮಾರಾಮಾರಿಯಾಗಿದೆ. ಇಬ್ಬರು ಚಾಲಕರು ಪರಸ್ಪರ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ. ಹಾಸನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಎರಡು ಆ್ಯಂಬುಲೆನ್ಸ್ ಚಾಲಕರು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಜಗಳ ತಾರಕಕ್ಕೇರಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು, ಹೊಡೆದಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವಿಚಾರಕ್ಕಾಗಿ ಇಬ್ಬರು ಆ್ಯಂಬುಲೆನ್ಸ್ ಚಾಲಕರ ನಡುವೆ ಗಲಾಟೆಯಾಗಿ, ಪರಸ್ಪರ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ. ಓರ್ವ ಚಾಲಕನಿಗೆ ಹಿಗ್ಗಾಮುಗ್ಗಾ ಮತ್ತೊಂದು ಚಾಲಕರ ಗುಂಪು ಥಳಿಸಿದೆ. ಹೊಡೆದಾಟವನ್ನು ಬಿಡಿಸಲು ಹಾಸನ ಜಿಲ್ಲಾ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹೈರಾಣಾದರು. ಹೊಡೆದಾಟದ ಬಳಿಕ ಚಾಲಕರು ವಾಪಾಸ್ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/breaking-bomb-threat-call-to-kempegowda-international-airport-security-forces-take-precautionary-measures/ https://kannadanewsnow.com/kannada/rain-alert-yellow-alert-sounded-in-13-districts-of-the-state-for-the-next-two-days/
ಕೆಎನ್ಎನ್ ಡಿಜಿಟಲ್ ಡೆಸ್ಕ್: ಗರುಡ ಪುರಾಣವು ಸಾವಿನ ಸಾಮೀಪ್ಯವನ್ನು ಸೂಚಿಸುವ ಕೆಲವು ಚಿಹ್ನೆಗಳನ್ನು ಉಲ್ಲೇಖಿಸುತ್ತದೆ. ಈ ಚಿಹ್ನೆಗಳ ಆಧಾರದ ಮೇಲೆ, ಒಬ್ಬ ವ್ಯಕ್ತಿಯು ತನ್ನ ಸನ್ನಿಹಿತ ಮರಣವನ್ನು ಗ್ರಹಿಸಬಹುದು. ಪಠ್ಯದಲ್ಲಿ ವಿವರಿಸಿದಂತೆ ಕೆಲವು ಮುಖ್ಯ ಚಿಹ್ನೆಗಳು ಇಲ್ಲಿವೆ: ಗರುಡ ಪುರಾಣದ ಪ್ರಕಾರ, ಯಾವುದೇ ವ್ಯಕ್ತಿಯು ತನ್ನ ಕಣ್ಣುಗಳಿಂದ ಮೂಗಿನ ಮುಂದಿರುವ ಭಾಗವನ್ನು ನೋಡಲು ಸಾಧ್ಯವಾಗದಿದ್ದರೆ, ಅದು ಸಾವು ಹತ್ತಿರದಲ್ಲಿದೆ ಎಂಬುದರ ಸಂಕೇತವಾಗಿದೆ. ದೀಪವನ್ನು ಆರಿಸಿದ ನಂತರ ಒಬ್ಬ ವ್ಯಕ್ತಿಯು ಯಾವುದೇ ವಾಸನೆಯನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಅವನು ಬದುಕಲು ಕೆಲವೇ ದಿನಗಳು ಉಳಿದಿವೆ ಎಂಬುದರ ಸಂಕೇತವಾಗಿದೆ. ಒಬ್ಬ ವ್ಯಕ್ತಿಯು ತನ್ನ ಎರಡೂ ಕಿವಿಗಳಲ್ಲಿ ಬೆರಳುಗಳನ್ನು ಇಟ್ಟರೆ ಮತ್ತು ಯಾವುದೇ ಶಬ್ದವನ್ನು ಕೇಳಲು ಸಾಧ್ಯವಾಗದಿದ್ದರೆ, ಅದು ಅವನ ಸಾವು ಹತ್ತಿರದಲ್ಲಿದೆ ಎಂಬುದರ ಸಂಕೇತವಾಗಿದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಪ್ರತಿಬಿಂಬವನ್ನು ತೈಲ ಅಥವಾ ನೆರಳಿನಲ್ಲಿ ನೋಡಲು ಸಾಧ್ಯವಾಗದಿದ್ದರೆ, ಅವನು ಒಂದು ತಿಂಗಳೊಳಗೆ ಸಾಯುತ್ತಾನೆ ಎಂದರ್ಥ. ಮನೆಯಿಂದ ಹೊರಡುವಾಗ ನಾಯಿ ಸತತ ನಾಲ್ಕು…
ಬೆಂಗಳೂರು: ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮೆಲ್ಲರ ನೆಚ್ಚಿನ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅವರಿಗೆ ಅಭಿನಂದನೆ. ಸಲ್ಲಿಸುತ್ತೇನೆ ಎಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ ಕೇಂದ್ರ ನಾಯಕರಿಗೆ, ರಾಜ್ಯದ ನಾಯಕರಾದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಪ್ರಮುಖವಾಗಿ ನಮ್ಮ ತಂದೆ ತಾಯಿಯ ಆಶೀರ್ವಾದದ ಫಲದಿಂದ ನನಗೆ ಈ ಅವಕಾಶ ಸಿಕ್ಕಿದೆ. ನಮ್ಮ ತಂದೆ ಶಿಗ್ಗಾವಿ ಸವಣೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು, ಅಲ್ಲಿನ ಜನರ ಅಪೇಕ್ಷೆಯಂತೆ ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್…
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಒಮರ್ ಅಬ್ದುಲ್ಲಾ ಅವರು ಕಾಶ್ಮೀರ ಮ್ಯಾರಥಾನ್ ಗಾಗಿ ಬೀದಿಗಿಳಿದು 21 ಕಿ.ಮೀ ಓಡುವ ಮೂಲಕ ವೈಯಕ್ತಿಕ ಮೈಲಿಗಲ್ಲನ್ನು ದಾಖಲಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ತನ್ನ ಪ್ರಭಾವಶಾಲಿ ಓಟದ ನವೀಕರಣ ಮತ್ತು ದೃಶ್ಯಗಳನ್ನು ಹಂಚಿಕೊಳ್ಳಲು ಎಕ್ಸ್ ಗೆ ಹೋದರು. “ನಾನು ಇಂದು ನನ್ನ ಬಗ್ಗೆ ತುಂಬಾ ಸಂತೋಷವಾಗಿದ್ದೇನೆ. ನಾನು ಕಾಶ್ಮೀರ ಹಾಫ್ ಮ್ಯಾರಥಾನ್ – 21 ಕಿ.ಮೀ ಅನ್ನು ಪ್ರತಿ ಕಿ.ಮೀ.ಗೆ ಸರಾಸರಿ 5 ನಿಮಿಷ 54 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದೆ” ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ. https://twitter.com/OmarAbdullah/status/1847854829588078827 “ನಾನು ನನ್ನ ಜೀವನದಲ್ಲಿ ಎಂದಿಗೂ 13 ಕಿ.ಮೀ.ಗಿಂತ ಹೆಚ್ಚು ಓಡಿಲ್ಲ ಮತ್ತು ಅದೂ ಒಮ್ಮೆ ಮಾತ್ರ. ಇಂದು ನಾನು ನನ್ನಂತಹ ಇತರ ಹವ್ಯಾಸಿ ಓಟಗಾರರ ಉತ್ಸಾಹದಿಂದ ಪ್ರೇರಿತನಾಗಿ ಮುಂದುವರಿಯುತ್ತಿದ್ದೇನೆ. ಸರಿಯಾದ ತರಬೇತಿ ಇಲ್ಲ, ಓಡುವ ಯೋಜನೆ ಇಲ್ಲ, ಪೌಷ್ಟಿಕಾಂಶವಿಲ್ಲ. ದಾರಿಯುದ್ದಕ್ಕೂ ಒಂದು ಬಾಳೆಹಣ್ಣು ಮತ್ತು ಒಂದೆರಡು ಖಜೂರ್ ಅನ್ನು ಎತ್ತಿಕೊಂಡರು. ನನ್ನನ್ನು…
ನವದೆಹಲಿ: ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸದ ಸ್ಥಳವು “ಅಸುರಕ್ಷಿತ” ಎಂದು ಭಾವಿಸುತ್ತಾರೆ. ವಿಶೇಷವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬುದಾಗಿ ಅಧ್ಯಯನದಿಂದ ತಿಳಿದು ಬಂದಿದೆ. ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು (ವಿಎಂಎಂಸಿ), ಸಫ್ದರ್ಜಂಗ್ ಆಸ್ಪತ್ರೆ ಮತ್ತು ನವದೆಹಲಿಯ ಏಮ್ಸ್ನ ತಜ್ಞರ ನೇತೃತ್ವದ ಈ ಅಧ್ಯಯನವು ಭಾರತೀಯ ಆರೋಗ್ಯ ವ್ಯವಸ್ಥೆಗಳಲ್ಲಿ ಭದ್ರತಾ ಮೂಲಸೌಕರ್ಯಗಳಲ್ಲಿನ ಗಮನಾರ್ಹ ಅಂತರಗಳನ್ನು ಎತ್ತಿ ತೋರಿಸಿದೆ. ‘ಎಪಿಡೆಮಿಯಾಲಜಿ ಇಂಟರ್ನ್ಯಾಷನಲ್’ ಜರ್ನಲ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾದ “ಭಾರತೀಯ ಆರೋಗ್ಯ ವ್ಯವಸ್ಥೆಗಳಲ್ಲಿ ಕೆಲಸದ ಸ್ಥಳದ ಸುರಕ್ಷತೆ ಮತ್ತು ಭದ್ರತೆ: ಒಂದು ಅಡ್ಡ-ವಿಭಾಗ ಸಮೀಕ್ಷೆ” ಆರೋಗ್ಯ ವ್ಯವಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ಸುಧಾರಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ. ಈ ಸಮೀಕ್ಷೆಯು ವಿಎಂಸಿ ಮತ್ತು ಸಫ್ದರ್ಜಂಗ್ ಆಸ್ಪತ್ರೆಯ ಡಾ.ಕಾರ್ತಿಕ್ ಚಾದರ್ ಮತ್ತು ಡಾ.ಜುಗಲ್ ಕಿಶೋರ್, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಡಾ.ರಿಚಾ ಮಿಶ್ರಾ, ಡಾ.ಸೆಮಂತಿ ದಾಸ್, ಡಾ.ಇಂದ್ರ ಶೇಖರ್…
ಬೆಂಗಳೂರು: ಕೆಲಸ ಖಾಲಿ ಇರುವ ಕಡೆ ಅಂಗವಿಕಲರಿಗೆ ಸರ್ಕಾರ ಉದ್ಯೋಗವನ್ನು ನೀಡಬೇಕು ಎಂದು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ. ಗೋಪಾಲಯ್ಯ ಅವರು ಆಗ್ರಹಿಸಿದರು. ನಂದಿನಿ ಲೇಔಟ್ ನ ಶಂಕರನಗರ ಆಟದ ಮೈದಾನದಲ್ಲಿ ಡಾ. ನವೀನ ಗೌಡ ಅವರು ಕಾಂತ ಕ್ಲಿನಿಕ್ ವತಿಯಿಂದ ಆಯೋಜಿಸಿದ್ದ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿಕಲಚೇತನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವಂತಹ ಇಂತಹ ಕಾರ್ಯಕ್ರಮಗಳು ಪ್ರತಿ ವರ್ಷವೂ ನಡೆಯಬೇಕು. ಕಾಂತ ಕ್ಲಿನಿಕ್ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇಂದಿನ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದವು ಯಶಸ್ವಿಯಾಗಲಿ ಇದರ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯದ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ಫ್ರೀಡಂ ಟಿವಿಯ ಮುಖ್ಯಸ್ಥರಾದ ನಾಗರಾಜ್, ಡಾ. ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಮೊದಲು ಅದನ್ನು ಬಹಿರಂಗ ಪಡೆಸಲಿ, ಸಾರ್ವಜನಿಕ ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ಮನ್ನು ಭೇಟಿ ಮಾಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಜಾತಿ ಗಣತಿಯಲ್ಲ. ಸಾಮಾಜಿಕ ಆರ್ಥಿಕ ಸಮೀಕ್ಷೆ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಗಣತಿ ಮಾಡುವ ಅಧಿಕಾರವಿದೆ. ಬಿಹಾರ ಸರ್ಕಾರದ ಜಾತಿ ಗಣತಿಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇವರು ಯಾವುದೋ ಸಮೀಕ್ಷೆ ಮಾಡಿ ಅದಕ್ಕೆ ಜಾತಿ ಗಣತಿಯ ಲೇಪನ ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಈ ವರದಿ ವೈಜ್ಞಾನಿಕವಾಗಿಯೂ…
ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳಿಗೆ ಕಾವೇರಿ ನೀರು ಒದಗಿಸುವ ಸಂಬಂಧ ಕಾವೇರಿ 5ನೇ ಹಂತದ ಯೋಜನೆಗೆ ಜಾಲನೆ ನೀಡಲಾಗಿತ್ತು. ಈ ಬಳಿಕ ಬಿಬಿಎಂಪಿಯಿಂದ ಕಾವೇರಿ ನೀರು ಸಂಪರ್ಕ ಅಭಿಯಾನವನ್ನು ಆರಂಭಿಸಿದ್ದು, ಕಾವೇರಿ ನೀರು ಸಂಪರ್ಕ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳು ಕಾವೇರಿ ನೀರಿನ ಹೊಸ ಸಂಪರ್ಕವನ್ನು ಪಡೆಯಲು ಜಲಮಂಡಳಿಯ ಜಾಲತಾಣದ ಮೂಲಕ ಅಥವಾ ಮಂಡಳಿಯ ಸಮೀಪದ ವಲಯ ಕಚೇರಿಯಲ್ಲಿ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ʼಸಕಾಲʼ ನಿಯಮದಂತೆ ಶುಲ್ಕ ಸಹಿತ ಅರ್ಜಿ ಸ್ವೀಕರಿಸಿದ 15 ರಿಂದ 45 ದಿನಗಳಲ್ಲಿ ನೀರಿನ ಸಂಪರ್ಕವನ್ನು ನೀಡಲಾಗುವುದು. ಈಗಾಗಲೇ 55 ಸಾವಿರ ಸಂಪರ್ಕಗಳನ್ನು ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ. https://twitter.com/KarnatakaVarthe/status/1847646841174683669 ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಜನರು ಹೊಸದಾಗಿ ಕಾವೇರಿ ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಿಬಿಎಂಪಿಯ ಅಧಿಕೃತ ವೆಬ್ ಸೈಟ್ https://owc.bwssb.gov.in/consumer ಗೆ ಭೇಟಿ ನೀಡಿ…
ಬೆಂಗಳೂರು: ನಾಳೆ ಚನ್ನಪಟ್ಟಣ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಫೈನಲ್ ಮಾಡಿ, ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದ್ದಾರೆ. ಇಂದು ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿ ಫೈನಲ್ ಮಾಡುವ ಸಂಬಂಧ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೇಂದ್ರ ಸಚಿವರಾದ HD ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ ಎಸ್ ಪುಟ್ಟರಾಜು, ವೆಂಕಟರಾವ್ ನಾಡಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ.ಅನ್ನದಾನಿ, ಕೊಪ್ಪಳ ಚಂದ್ರಶೇಖರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಅಶೋಕ್ ಭಾಗಿಯಾಗಿದ್ದರು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು, ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಒಪ್ಪಿದಂತ ಒಮ್ಮತದ ಅಭ್ಯರ್ಥಿಯನ್ನು ನಾಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ…