Subscribe to Updates
Get the latest creative news from FooBar about art, design and business.
Author: kannadanewsnow09
ಕೋಲಾರ: ಜಿಲ್ಲೆಯಲ್ಲಿ ಸಮೀಕ್ಷೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರದಲ್ಲಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಅಖ್ತರ್ ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರ ತಾಲ್ಲೂಕಿನ ಕೆ.ಬಿ ಹೊಸಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಅಖ್ತರ್ ಅವರನ್ನು ರಾಜ್ಯದಲ್ಲಿ ನಡೆಯುತ್ತಿರುವಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗಣತಿದಾರರನ್ನಾಗಿ ನೇಮಕ ಮಾಡಲಾಗಿತ್ತು. ಕೋಲಾರದ ನರಸಾಪುರದಲ್ಲಿ ಸಮೀಕ್ಷೆ ಕಾರ್ಯದ ನಂತ್ರ ಶಾಲಾ ಶಿಕ್ಷಕಿ ಅಖ್ತರ್ ನಾಪತ್ತೆಯಾಗಿದ್ದರು. ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯ ನಿವಾಸಿಯಾಗಿದ್ದಂತ ಶಾಲಾ ಶಿಕ್ಷಕಿ ನಾಪತ್ತೆ ಬಗ್ಗೆ ದೂರು ದಾಖಲಾಗಿತ್ತು. ಇದೀಗ ನಾಪತ್ತೆಯಾಗಿದ್ದ ಎರಡು ದಿನಗಳ ಬಳಿಕ ಅಖ್ತರ್ ಬೇಗಂ(53) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ ಐಪಲ್ಲಿ ಕರೆಯಲ್ಲಿ ಸಮೀಕ್ಷೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದಂತ ಶಾಲಾ ಶಿಕ್ಷಕಿ ಅಖ್ತರ್ ಶವ ಪತ್ತೆಯಾಗಿದು, ಹಲವು ಅನುಮಾನಗಳಿಗೆ ಕಾರಣವಾಗಿದೆ. https://kannadanewsnow.com/kannada/great-news-for-job-aspirants-green-signal-from-the-state-government-to-fill-2032-vacancies/ https://kannadanewsnow.com/kannada/breaking-from-now-on-scoring-198-marks-in-puc-and-206-marks-in-sslc-will-be-considered-passing-minister-madhu-bangarappa/
ಬೆಂಗಳೂರು : ಇನ್ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.33ರಷ್ಟು ಅಂಕ ಪಡೆದರೂ ಪಾಸ್ ಎಂಬುದಾಗಿ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಇನ್ಮುಂದೆ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದರು. ಕನಿಷ್ಠ 30 ಅಂಕ ಪಡೆಯುವುದು ಕಡ್ಡಾಯವಾಗಿದೆ ಲಿಖಿತ ಹಾಗೂ ಆಂತರಿಕ ಅಂಕ ಸೇರಿದಂತೆ 30 ಅಂಕ ಪಡೆದು 198 ಅಂಕ ಪಡೆದರೆ ಪಾಸ್ ಆಗಲಿದ್ದಾರೆ. 2025 ಮತ್ತು 26ನೇ ಸಾಲಿನಿಂದ ಪರೀಕ್ಷಾ ಪಾಸಿಂಗ್ ಅಂಕ ಕಡಿತ ಅಗಲಿದ್ದು, ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ. ಕೂಡ 625ಕ್ಕೆ ಕನಿಷ್ಠ 26 ಅಂಕ ಗಳಿಸಿದರೆ ವಿದ್ಯಾರ್ಥಿಗಳು ಪಾಸ್ ಆದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು. ಪಾಸಿಂಗ್ ಮಾರ್ಕ್ಸ್ ಕಡಿತ ವಿಚಾರವಾಗಿ ಪಬ್ಲಿಕ್ ಅಭಿಪ್ರಾಯ ಹಾಕಿದ್ದೆವು. ಶೇಕಡ 33…
ಶಿವಮೊಗ್ಗ: ಸಾಗರದಲ್ಲಿ ಅಕ್ಟೋಬರ್.18 ಮತ್ತು 19ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಾಧನ ಮಲ್ಟಿ ಜಿಮ್ ಗೌರವ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಾಗರದಲ್ಲಿ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಕ್ಟೋಬರ್.18, 19ರಂದು ಸಾಗರದ ಒಕ್ಕಲಿಗರ ಭವನದಲ್ಲಿ ನಡೆಯಲಿದೆ ಎಂದರು. ಪವರ್ ಲಿಫ್ಟಿಂಗ್ ನಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದ್ದಾವೆ. ಇದರಲ್ಲಿ ಸಾಧನೆ ಮಾಡಿದಂತ ಅನೇಕರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಯುವ ಜನತೆ ಪವರ್ ಲಿಫ್ಟಿಂಗ್ ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಸಾಧನ ಮಲ್ಟಿ ಜಿಮ್ ವ್ಯವಸ್ಥಾಪಕ ರಮೇಶ್. ಎನ್ ಮಾತನಾಡಿ, ಸಾಧನ ಮಲ್ಟಿ ಜಿಮ್, ಸಾಗರ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಭದ್ರಾವತಿಯ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್…
ಶಿವಮೊಗ್ಗ: ಕೋರ್ಟ್ ಆದೇಶ ಉಲ್ಲಂಘನೆ ಮಾಡಿ, ಚುನಾವಣೆ ನಡೆಸದೇ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಹಾಲಿ ಸಮಿತಿಯು ಚುನಾವಣೆ ಈವರೆಗೆ ನಡೆಸಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ಶ್ರೀ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮೂರು ತಿಂಗಳ ಒಳಗಾಗಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಲು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ದಿನಾಂಕ 11-07-2025ರಂದು ಆದೇಶ ಮಾಡಿದೆ. ಈ ಆದೇಶದ ಬಳಿಕ 71 ದಿನಗಳ ನಂತರ ದಿನಾಂಕ 20-09-2025ರಂದು ಮಹಾ ಸಭೆ ನಡೆಸಲಾಗಿದೆ. ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಿದರೂ ಕಾರ್ಯಪ್ರವೃತವಾಗದೇ ಕಾಲಹರಣ ಮಾಡಲಾಗಿದೆ ಎಂದು ಆರೋಪಿಸಿದರು. ಈ ಹಿನ್ನಲೆಯಲ್ಲಿ ದಿನಾಂಕ 14-10-2025ರಂದು ಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ನಮ್ಮ ಅರ್ಜಿಯನ್ನು…
ಬೆಂಗಳೂರು: ಇಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಅಲ್ಲದೇ ಸಾಗರ ತಾಲ್ಲೂಕಿನ ಕಾನೂನು ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿದರು. ಅಲ್ಲದೇ ಕೆಲ ಬೇಡಿಕೆ ಈಡೇರಿಸಲು ಮನವಿ ಮಾಡಿದರು. ಯಾವೆಲ್ಲ ಬೇಡಿಕೆ ಈಡೇರಿಸಲು ಮನವಿ ಗೊತ್ತಾ.? * ಸಾಗರ ನಗರದ ವ್ಯಾಪ್ತಿಯು ವಿಶಾಲವಾಗಿದ್ದು, ಹೆಚ್ಚಿನ ಜನಸಂದಣಿಯಿಂದ ಸುರಳಿತ ಸಂಚಾರ ವ್ಯವಸ್ಥೆಗಾಗಿ ಮತ್ತು ವಾಹನಗಳ ಅಪಘಾತ ಪ್ರಕರಣವನ್ನು ತಪ್ಪಿಸುವ ಸಲುವಾಗಿ ಸಾಗರ ಪಟ್ಟಣಕ್ಕೆ ಹೊಸದಾಗಿ ಟ್ರಾಫಿಕ್ ಪೋಲಿಸ್ ಠಾಣೆಯನ್ನು ಮಂಜೂರು ಮಾಡಲು ಕೋರಿದರು. * ಸಾಗರ ಪಟ್ಟಣದಿಂದ ದೂರವಿರುವ ತುಮರಿ-ಬ್ಯಾಕೊಡು ವ್ಯಾಪ್ತಿಯಲ್ಲಿ ಸಿಗಂಧೂರು ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ದಿನ ನಿತ್ಯ ಭೇಟಿ ನೀಡುತ್ತಿದ್ದು, ಕ್ಷೇತ್ರಕ್ಕೆ ಬರುವ ಪ್ರವಾಸಿಗಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ತುಮರಿ-ಬ್ಯಾಕೊಡು ಪ್ರದೇಶದಲ್ಲಿ ಹೊಸದಾಗಿ ಪೋಲಿಸ್ ಠಾಣೆ ಮಂಜೂರು ಮಾಡಲು ಮನವಿ ಮಾಡಿದರು. * ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…
ನವದೆಹಲಿ: ರಿಲಯನ್ಸ್ ರೀಟೇಲ್ ನ ಅವಂತ್ರ ಎಂಬುದು ಸಮಕಾಲೀನ ಸೀರೆಗಳನ್ನು ಖರೀದಿಸಲು ಅತ್ಯುತ್ತಮವಾದ ತಾಣವಾಗಿದೆ. ಆಧುನಿಕ ಭಾರತೀಯ ಮಹಿಳೆಯರ ಆಯ್ಕೆಗೆ ಹೇಳಿ ಮಾಡಿಸಿದ ಸ್ಥಳ ಇದು. ಇದೀಗ ಹೊಸದಾಗಿ ಹಬ್ಬದ ಅಭಿಯಾನವನ್ನು ಅವಂತ್ರ ಶುರು ಮಾಡಿದ್ದು, ದೇಶದೆಲ್ಲೆಡೆ ಈಗ ಮನೆ ಮಾತಾಗಿರುವ ಚೆಲುವೆ, ಕಾಂತಾರ ಸಿನಿಮಾದ ರಾಜಕುಮಾರಿ ಹಾಗೂ ಬಹು ಭಾಷಾ ನಟಿ ರುಕ್ಮಿಣಿ ವಸಂತ್ ಅವರು ರಾಯಭಾರಿ ಆಗಿದ್ದಾರೆ. ಹಬ್ಬಗಳು ಬಂತೆಂದರೆ ಸಂಭ್ರಮ, ಅದರಲ್ಲೂ ಹೆಣ್ಣುಮಕ್ಕಳಿಗೆ ಮತ್ತೂ ವಿಶೇಷವಾದ ಸಂದರ್ಭ ಇದಾಗಿರುತ್ತದೆ. ಹೌದು, ಇವತ್ತಿನ ಮಹಿಳೆಯಲ್ಲಿ ಆತ್ಮವಿಶ್ವಾಸ ಕಾಣಬಹುದು. ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಗುರುತನ್ನು ತೆರೆದಿಡುವ ಹಾಗೂ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಹಬ್ಬದ ಋತುವಿನಲ್ಲಿ ಅವಂತ್ರಗಿಂತ ಮತ್ತೊಂದು ಉತ್ತಮ ಆಯ್ಕೆ ಬೇರಾವುದೂ ಇಲ್ಲ. ಹಬ್ಬದ ಸಂಭ್ರಮಕ್ಕೆ ಮಹಿಳೆಯರು ಹೇಗೆ ಇನ್ನೂ ಹೆಚ್ಚು ಸಂತಸವನ್ನು ಸೇರಿಸುತ್ತಾರೆ ಹಾಗೂ ಪ್ರತಿ ಕ್ಷಣವನ್ನೂ ಹೇಗೆ ವಿಶೇಷವಾಗಿಸುತ್ತಾರೆ ಮತ್ತು ಆ ಮೂಲಕ ಹಬ್ಬದ ಸಂದೇಶವನ್ನು ಹೇಗೆ ದಾಟಿಸುತ್ತಾರೆ ಎಂಬುದನ್ನು ತುಂಬ ಸೊಗಸಾಗಿ ತೆರೆದಿಡಲಾಗಿದೆ. ಈ ಅಭಿಯಾನವನ್ನು…
ಬೆಂಗಳೂರು: 2025-26ನೇ ಸಾಲಿಗೆ ರಾಜ್ಯದ ಪಿಜಿ ವೈದ್ಯಕೀಯ ಪದವಿ/ಡಿಪ್ಲೊಮಾ ಕೋರ್ಸುಗಳಿಗೆ ಸೇರಲು ಆಸಕ್ತರಾದ ನೀಟ್ ಪಿಜಿ- 2025ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅ.17ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸಲು ಅ.17ರ ಬೆಳಿಗ್ಗೆ 11ರವರೆಗೆ ಅವಕಾಶವಿರುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿ.ಎಸ್ಸಿ.ನರ್ಸಿಂಗ್, ಫಾರ್ಮ, ಬಿಪಿಟಿ: ಯುಜಿಸಿಇಟಿ 2025ರ ಬಿ.ಎಸ್ಸಿ.ನರ್ಸಿಂಗ್, ಬಿ-ಫಾರ್ಮ, ಫಾರ್ಮ-ಡಿ ಮತ್ತು ಬಿಪಿಟಿ ಕೋರ್ಸುಗಳಿಗೆ ಅಂತಿಮ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ (ಕನ್ಫರ್ಮೇಷನ್ ಸ್ಲಿಪ್) ಡೌನ್ ಲೋಡ್ ಮಾಡಿಕೊಂಡು ಅ.16ರ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ಅ.16ರ ಸಂಜೆ 4ರೊಳಗೆ ಶುಲ್ಕ ಪಾವತಿಸಿ, ಸಂಜೆ 5ರೊಳಗೆ ಕನ್ಫರ್ಮೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ.…
ಬೆಂಗಳೂರು: ಕಾನೂನುಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವಾದರೆ ಬಿಜೆಪಿ ಹಾಗೂ ಸಂಘಪರಿವಾರ, ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಹೆದರುತ್ತಿರುವುದೇಕೆ? ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಪ್ರಶ್ನಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಿಜೆಪಿ ನಾಯಕರು ಸಂಘ ಪರಿವಾರದ ಹೆಸರನ್ನು ಬಳಸಿ ಅತಿರೇಕದ ಟೀಕೆ ಮಾಡುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಅವರಿಗೆ ಬರೆದ ಪತ್ರ ಹಾಗೂ ಡಿಸಿಎಂ ಅವರು ಶಾಸಕರನ್ನು ಕರೆದದ್ದನ್ನು ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದಾರೆ. ಅವರೆಲ್ಲರೂ ಸಂಘ ಪರಿವಾರದಲ್ಲಿ ಕಲಿತವರು. ಅವರು ಬಳಸುತ್ತಿರುವ ಭಾಷೆ ಅಲ್ಲೇ ಕಲಿತಿದ್ದಾರೆ. ಮುನಿರತ್ನ ಅವರಿಗೆ ಅಥಿಯಾದ ವಿಶ್ವಾಸ ಸಂಘಪರಿವಾರದ ಬಗ್ಗೆ ಇದೆ. ಹೀಗಾಗಿ ಅವರು ಸಂಘ ಪರಿವಾರದ ಚಡ್ಡಿ ಹಾಕಿರುವ ಫೋಟೋ ಇಲ್ಲ. ಅದನ್ನು ಹಾಕಬೇಕು ಎಂದು ತಿಳಿಸಿದರು. ಮಾಧ್ಯಮಗಳ ಮೂಲಕ ಪ್ರಚಾರ ಸಿಗಲಿ ಎಂದು ಮುನಿರತ್ನ ಅವರು ತಹ ಪ್ರಚಾರ ಮಾಡುತ್ತಲೇ ಬಂದಿದ್ದಾರೆ ಎಂದಿದ್ದಾರೆ. ಸಂಘ ಪರಿವಾರದಿಂದ ಬಿಜೆಪಿ ನಾಯಕರು ಸಭ್ಯತೆ ಕಲಿತಿದ್ದರೆ,…
ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಬೆಂಗಳೂರು ಗ್ರಾಮಾಂತರ-1, ಚಿತ್ರದುರ್ಗ-1, ದಾವಣಗೆರೆ-2, ಹಾವೇರಿ-2, ಬೀದರ್-1, ಉಡುಪಿ-1, ಬಾಗಲಕೋಟೆ-1 ಮತ್ತು ಹಾಸನ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ. ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 14.10.2025 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 48 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ ಎಂದಿದೆ. 1) ಮಂಜುನಾಥ. ಜಿ, ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.…
ಶಿವಮೊಗ್ಗ: ಇಂದು ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ದುರ್ಘಟನೆಗಳು ಸಂಭವಿಸಿವೆ. ಟ್ರ್ಯಾಕ್ಟರ್ ಟ್ರಿಲ್ಲರ್ ಹೊಡೆಯುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದರೇ, ಬೈಕ್-ಬೈಕ್ ಗಳ ನಡುವೆ ಡಿಕ್ಕಿಯಾಗಿ ಓರ್ವ ವ್ಯಕ್ತಿಯ ಕಾಲು ಕಟ್ ಅಗಿರುವಂತ ದುರ್ಘಟನೆ ನಡೆದಿದೆ. ವಿದ್ಯುತ್ ಶಾಕ್ ನಿಂದ ಯುವಕನಿಗೆ ಗಂಭೀರ ಗಾಯ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಬೆಳೆದಿದ್ದ ಗಿಡಗೆಂಟೆ, ಹುಲ್ಲು ಕ್ಲೀನ್ ಮಾಡಲು ಟ್ರ್ಯಾಕ್ಟರ್ ಹೊಡೆಯುತ್ತಿದ್ದಾಗ ಕರೆಂಟ್ ಶಾಕ್ ಹೊಡೆದು ಪತ್ರೆಸಾಲಿನ ಅರುಣ್ ಕುಮಾರ್(31) ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಗೆ ವಿದ್ಯುತ್ ಕಂಬದ ಸಮೀಪದಲ್ಲಿ ತುಂಡಾಗಿದ್ದಂತ ಗೈಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಾಹನದಿಂದ ಕೆಳಗೆ ಹಾರುವ ವೇಳೆಗೆ ವಿದ್ಯುತ್ ಶಾಕ್ ನಿಂದ ಅರುಣ್ ಕುಮಾರ್ ಕಾಲು, ಕೈ, ಎದೆಯ ಭಾಗವು ಸುಟ್ಟು ಹೋಗಿವೆ. ವಿದ್ಯುತ್ ಶಾಕ್ ಗೆ ಒಳಗಾದಂತ ಪತ್ರೆಸಾಲಿನ ಅರುಣ್ ಕುಮಾರ್(31) ಗೆ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ…














