Author: kannadanewsnow09

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟವನ್ನು ಪ್ರಶ್ನಿಸಿದ್ದಕ್ಕಾಗಿ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಹೊರಡಿಸಲಾದ ಮಾನನಷ್ಟ ಸಮನ್ಸ್ ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ಸಂಜಯ್ ಸಿಂಗ್ ಪ್ರಶ್ನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟವನ್ನು ಪ್ರಶ್ನಿಸಿದ್ದಕ್ಕಾಗಿ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಹೊರಡಿಸಲಾದ ಮಾನನಷ್ಟ ಸಮನ್ಸ್ ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. https://kannadanewsnow.com/kannada/allu-arjun-drapes-a-saree-beats-up-goons-in-a-mass-first-clip-watch/ https://kannadanewsnow.com/kannada/breaking-sc-stays-hc-order-for-class-5-8-9-11-board-exams/

Read More

ಬೆಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಸ್ಪರ್ಧಿ ಸೌಮ್ಯ ಬೇರೆಯಲ್ಲ. ನನ್ನ ಮಗಳು ಐಶ್ವರ್ಯ ಬೇರೆಯಲ್ಲ ಎಂಬುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ Rallyಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತ ಯಾಚಿಸಿದರು. ಸೌಮ್ಯ ರೆಡ್ಡಿ ನಾಮ ಪತ್ರಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಸೌಮ್ಯ ರೆಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚಿನ ಅಂತರದ ಮತಗಳಿಂದ ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಸೌಮ್ಯ ನಮ್ಮ ಮನೆ ಮಗಳು ಅವರನ್ನು ಗೆಲ್ಲಿಸಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದರು. ಸೌಮ್ಯ ಬೇರೆಯಲ್ಲ ನನ್ನ ಮಗಳು ಐಶ್ವರ್ಯ ಬೇರೆಯಲ್ಲ ಸೌಮ್ಯ ರೆಡ್ಡಿಯನ್ನು ಗೆಲ್ಲಿಸಿದರೆ ನನ್ನ ಮಗಳನ್ನು ಗೆಲ್ಲಿಸಿದಂತೆ, ಈ ದೇವರ ಸನ್ನಿಧಿಯಲ್ಲಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದ‌ು ಡಿ.ಕೆ ಶಿವಕುಮಾರ್ ತಿಳಿಸಿದರು. https://kannadanewsnow.com/kannada/allu-arjun-drapes-a-saree-beats-up-goons-in-a-mass-first-clip-watch/ https://kannadanewsnow.com/kannada/breaking-sc-stays-hc-order-for-class-5-8-9-11-board-exams/

Read More

ನವದೆಹಲಿ: ಮಾಜಿ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಖಿಚ್ಡಿ ಹಗರಣದ ಕಿಂಗ್ಪಿನ್ ಎಂದು ಆರೋಪಿಸಿದರು. ಬಿಎಂಸಿಯಲ್ಲಿ ಖಿಚ್ಡಿ ಹಗರಣ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ 8 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಮಾಜಿ ಬಿಜೆಪಿ ಸಂಸದ ಕಿರಿತ್ ಸೋಮಯ್ಯ ಆರೋಪಿಸಿದ್ದರು. ಹಗರಣದ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವತ್ ವಿರುದ್ಧ ಸೋಮಯ್ಯ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ತೊರೆದಿರುವ ಸಂಜಯ್ ನಿರುಪಮ್ ಕೂಡ ಈ ಪ್ರಕರಣದಲ್ಲಿ ಸಂಜಯ್ ರಾವತ್ ವಿರುದ್ಧ ಆರೋಪ ಮಾಡಿದ್ದಾರೆ. ಸಂಜಯ್ ರಾವತ್ ಖಿಚ್ಡಿ ಹಗರಣದ ಮಾಸ್ಟರ್ ಮೈಂಡ್. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರುಪಮ್, ಈ ಪ್ರಕರಣದಲ್ಲಿ ತಮ್ಮ ಕುಟುಂಬವು 1 ಕೋಟಿ ರೂ.ಗಳ ಬ್ರೋಕರೇಜ್ ಪಡೆದಿದೆ ಎಂದು ಆರೋಪಿಸಿದರು. ಸಂಜಯ್ ನಿರುಪಮ್ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ರಾವತ್ ವಿರುದ್ಧ ಆರೋಪಗಳನ್ನು ಮಾಡಿದರು. ಖಿಚಡಿ ಹಗರಣದಲ್ಲಿ ಸಂಜಯ್ ರಾವತ್ ಅವರ ಕುಟುಂಬವು 1 ಕೋಟಿ…

Read More

ಬೆಂಗಳೂರು: 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ ಫಲಿತಾಂಶವನ್ನು ದಿನಾಂಕ 08-04-2024ರ ಇಂದು ಬೆಳಗ್ಗೆ ಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗಿರುತ್ತದೆ ಎಂದಿದ್ದಾರೆ. ಸದರಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ದಿನಾಂಕ: 02.04.2024 ರ ಒಳಗಾಗಿ ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ಮರುರವಾನಿಸಲು ಸೂಚಿಸಲಾಗಿತ್ತು. ಉಲ್ಲೇಖ 3 ರ ಮಾನ್ಯ ಆಯುಕ್ತರ ಸುತ್ತೋಲೆಯಂತೆ ದಿನಾಂಕ: 08.04.2024 ರ ಸಮುದಾಯದತ್ತ ಶಾಲಾ ದಿನದಂದು 1 ರಿಂದ 9 ನೇ ತರಗತಿಯ…

Read More

ರಾಜಸ್ಥಾನ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497 ರ ಅಡಿಯಲ್ಲಿ ವ್ಯಭಿಚಾರದ ಅಪರಾಧವು ಇದಕ್ಕೆ ಅಪವಾದವಾಗಿದೆ, ಆದರೆ ಇದನ್ನು ಈಗಾಗಲೇ 2018 ರಲ್ಲಿ ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ರದ್ದುಗೊಳಿಸಿದೆ ಎಂದು ನ್ಯಾಯಮೂರ್ತಿ ಬೀರೇಂದ್ರ ಕುಮಾರ್ ಹೇಳಿದರು. “ಎಸ್.ಖುಷ್ಬೂ ವರ್ಸಸ್ ಕನ್ನಿಯಮ್ಮಾಳ್ ಮತ್ತು ಇತರರ ಪ್ರಕರಣದಲ್ಲಿ ವಯಸ್ಕರು ಆಯ್ಕೆಯ ಮೇರೆಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದಾಗ ಯಾವುದೇ ಶಾಸನಬದ್ಧ ಅಪರಾಧವಿಲ್ಲ, ಇದು ಈ ಹಿಂದೆ ಐಪಿಸಿ ಸೆಕ್ಷನ್ 497 ರ ಅಡಿಯಲ್ಲಿ ವ್ಯಭಿಚಾರಕ್ಕೆ ಅಪವಾದವಾಗಿತ್ತು, ನಂತರ ಅದನ್ನು ರದ್ದುಪಡಿಸಲಾಗಿದೆ, ಅದು ಅಪರಾಧವಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದ್ದಾರೆ. ಏನಿದು ಪ್ರಕರಣ? ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366 (ಮಹಿಳೆಯನ್ನು ಅಪಹರಿಸುವುದು, ಅಪಹರಿಸುವುದು ಅಥವಾ ಮದುವೆಯಾಗಲು ಒತ್ತಾಯಿಸುವುದು) ಅಡಿಯಲ್ಲಿ ದಾಖಲಾದ ಎಫ್ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿದ ಆದೇಶವನ್ನು ಹಿಂಪಡೆಯುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಎಫ್ಐಆರ್ ದಾಖಲಿಸಿದ ವ್ಯಕ್ತಿ ತನ್ನ ಹೆಂಡತಿಯನ್ನು ಮೂವರು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವಿಚಾರಣೆಯ…

Read More

ಹಾವೇರಿ: ಕಾಂಗ್ರೆಸ್ ಪಕ್ಷ ಹುಟ್ಟಿದ್ದೇ ಸುಳ್ಳಿನಿಂದ ಮಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಹೇಳಿದ್ದರು. ಇವರು ಕಾಂಗ್ರೆಸ್ ನ್ನು ವಿಸರ್ಜಿಸದೆ ಸುಳ್ಳು ಹೇಳಿಕೊಂಡೆ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ನದಿ ಹರಳಹಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕೂ ಮುಂಚೆ ಮಾಧ್ಯಮಗಳಿಗೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ನಾಯಕರು ಒಬ್ಬೊಬ್ಬರು ಒಂದೊಂದು ಸುಳ್ಳು ಹೇಳುತ್ತಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕಾಂಗ್ರೆಸ್ ನಿರಂತರವಾಗಿ ಸುಳ್ಳು ಹೇಳುತ್ತಲೇ ಬಂದಿದೆ. ಇಂದಿರಾಗಾಂಧಿಯವರು ಗರೀಬಿ ಹಠಾವೊ ಅಂತ ಹೇಳಿದ್ದರು. ದೇಶದಲ್ಲಿ ಈಗಲೂ ಬಡತನ ಇದೆ. ಅವರು ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಇಂದೊಂದೆ ಸಾಕ್ಷಿ ಸಾಕು ಎಂದು ಹೇಳಿದರು. ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆ ಮುಕ್ತಾಯ ಆಗಿದೆ. ಕಣ ಸಿದ್ದವಾಗಿದೆ. ವಿಶ್ವಾಸ ಇದೆ. ಮೊದಲ ಹಂತದಲ್ಲಿ ನಮಗೆ…

Read More

ಬೆಂಗಳೂರು: ಮೋದಿ ಒಂದು ಸುಳ್ಳು ಹೇಳ್ತಾರೆ-ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ-ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು ಹೇಳ್ತಾರೆ. ಈ ಸುಳದಳಿನ ಪಾರ್ಟಿಗೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದರು. ಒಟ್ಟಾರೆಯಾಗಿ ಮೋದಿ ಒಂದು ಸುಳ್ಳು ಹೇಳ್ತಾರೆ-ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ-ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು ಹೇಳ್ತಾರೆ. ಈ ಸುಳ್ಳಿನ ಪಕ್ಷಕ್ಕೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರತ್ತಾ ಎಂದು ಪ್ರಶ್ನಿಸಿದಂತ ಸಿಎಂ ಸಿದ್ಧರಾಮಯ್ಯ ಅವರು, ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. https://kannadanewsnow.com/kannada/record-sunny-temperature-in-the-country-today-gulbarga-recorded-42-7-degrees-celsius/ https://kannadanewsnow.com/kannada/four-rowdy-sheeters-deported-in-hubballi/

Read More

ನವದೆಹಲಿ: ದೇಶಾದ್ಯಂತ ಇಂದು ಬಿಸಿಲ ತಾಪಮಾನ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 44.5 ಸೆಲ್ಸಿಯಸ್ ದಾಖಲಾಗುವ ಮೂಲಕ, ಹೊಸ ದಾಖಲೆಯನ್ನು ಬರೆದಿದೆ. ಕರ್ನಾಟಕದ ಗುಲ್ಬರ್ಗದಲ್ಲಿ ಇಂದು ಅತಿ ಹೆಚ್ಚು ಎನ್ನುವಂತೆ 42.7 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪಮಾನ ದಾಖಲಾಗಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ರಾಯಲ ಸೀಮೆಯ ಕರ್ನೂಲ್ ನಲ್ಲಿ ನಿನ್ನೆ 44.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನ, ಇಂದು 43.3ಕ್ಕೆ ಇಳಿದಿತ್ತು. ನಂದ್ಯಾಲದಲ್ಲಿ 43.5 ದಾಖಲಾಗಿದ್ದರೇ, ದೇಶದಲ್ಲೇ ಅತಿಹೆಚ್ಚು ಎನ್ನುವಂತೆ ಅನಂತಪುರದಲ್ಲಿ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆಂಧ್ರಪ್ರದೇಶದ ರೆಂಟಚಿಂತಲ್ ನಲ್ಲಿ 43.4 ತಾಪಮಾನ ದಾಖಲಾಗಿದ್ದರೇ, ಕರ್ನಾಟಕ ಗುಲ್ಬರ್ಗಾದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತೆಲಂಗಾಣದ ನಲಗೊಂಡದಲ್ಲಿ 42, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 42.2 ಡಿಗ್ರಿ ಸೆಲ್ಸಿಯಸ್ ತಾಪಾಮಾನ ಇಂದು ದಾಖಲಾಗಿದೆ. https://twitter.com/Indiametdept/status/1776972966284406794 https://kannadanewsnow.com/kannada/delhi-metro-constable-commits-suicide-by-shooting-himself-with-rifle/ https://kannadanewsnow.com/kannada/four-rowdy-sheeters-deported-in-hubballi/

Read More

ನವದೆಹಲಿ: ಪಾಕಿಸ್ತಾನದ ಅಮೂಲ್ಯ ಬಂದರು ನಗರವಾದ ಗ್ವಾದರ್ ಚೀನೀಯರು ಅದನ್ನು ‘ಆಶೀರ್ವದಿಸುವವರೆಗೂ’ ಮೀನುಗಾರರು ಮತ್ತು ವ್ಯಾಪಾರಿಗಳಿಂದ ಕೂಡಿದ್ದಂತ ಪಟ್ಟಣವಾಗಿತ್ತು. ಸುತ್ತಿಗೆ ಆಕಾರದ ಮೀನುಗಾರಿಕಾ ಗ್ರಾಮವು ಈಗ ಪಾಕಿಸ್ತಾನದ ಮೂರನೇ ಅತಿದೊಡ್ಡ ಬಂದರನ್ನು ಹೊಂದಿದೆ, ಇದು ಕಳಂಕಿತ ಚೀನಾದ ಉಡುಗೊರೆಯಾಗಿದೆ. ಆದಾಗ್ಯೂ, ಗ್ವಾದರ್ ಯಾವಾಗಲೂ ಪಾಕಿಸ್ತಾನದೊಂದಿಗೆ ಇರಲಿಲ್ಲ. ಇದು ಸುಮಾರು 200 ವರ್ಷಗಳ ಕಾಲ, 1950 ರ ದಶಕದವರೆಗೆ ಒಮಾನಿ ಆಳ್ವಿಕೆಯಲ್ಲಿತ್ತು. 1958 ರಲ್ಲಿ ಗ್ವಾದರ್ ಅಂತಿಮವಾಗಿ ಪಾಕಿಸ್ತಾನದ ಸ್ವಾಧೀನಕ್ಕೆ ಬರುವ ಮೊದಲು, ಇದನ್ನು ವಾಸ್ತವವಾಗಿ ಭಾರತಕ್ಕೆ ನೀಡಲಾಯಿತು. ಇದನ್ನು ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಭಾರತ ಸರ್ಕಾರ ನಿರಾಕರಿಸಿತು. ಗ್ವಾದರ್ 1783 ರಿಂದ ಒಮಾನ್ ಸುಲ್ತಾನನ ವಶದಲ್ಲಿತ್ತು. ಮುಂಬರುವ ಲೋಕಸಭಾ ಚುನಾವಣೆ ಇತ್ತೀಚೆಗೆ ಭಾರತದ ಕಾರ್ಯತಂತ್ರದ ‘ಪ್ರಮಾದಗಳಲ್ಲಿ’ ಒಂದಾದ ಕಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸುವುದನ್ನು ಮರಳಿ ತಂದಿತು. ಕಚತೀವು ಪ್ರಕರಣದಲ್ಲಿ ಭಾರತದ ಪ್ರಾದೇಶಿಕ ಹಿತಾಸಕ್ತಿಗಳನ್ನು ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ಹೊರಿಸಿರುವ ಆರೋಪವು ಹಿಂದಿನ ಆರೋಪಗಳ ಸರಣಿಯನ್ನು ಅನುಸರಿಸುತ್ತದೆ. ಆದಾಗ್ಯೂ, ಕಾಶ್ಮೀರ “ಪ್ರಮಾದ”, “ಟಿಬೆಟ್ ಅನ್ನು…

Read More

ಈ ಜನ್ಮದಲ್ಲಿ… ತಂದೆ, ತಾಯಿ, ಅಣ್ಣ, ಅಕ್ಕ, ಹೆಂಡತಿ, ಗಂಡ, ಪ್ರೇಯಸಿ, ಪ್ರಿಯಕರ, ಮಿತ್ರರು, ಶತ್ರುಗಳು ಎನ್ನುವ ಅನೇಕ ಸಂಬಂಧಗಳು ನಮಗೆ ಈ ಪ್ರಪಂಚದಲ್ಲಿ ಲಭಿಸುತ್ತದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್…

Read More