Author: kannadanewsnow09

ಹುಬ್ಬಳ್ಳಿ: ಪುಣೆ-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ ನಿಂದ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಇದು ಕರ್ನಾಟಕದ ಪಾಲಿನ 9ನೇ ವಂದೇ ಭಾರತ್ ರೈಲು ಆಗಿದ್ದು, ವಾರಕ್ಕೆ 3 ದಿನ ಸಂಚಾರ ನಡೆಸಲಿದೆ. ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿ ಮತ್ತು ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಇಂದು ಮೋದಿ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್.18ರಿಂದ ವಾರಕ್ಕೆ ಮೂರು ದಿನಗಳು ಈ ರೈಲು ಸಂಚರಿಸಲಿದೆ. ಪ್ರತಿ ಬುಧವಾರ, ಶುಕ್ರವಾರ ಮತ್ತು ಭಾನುವಾರ ಎಸ್ ಎಸ್ ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ಹೊರಟು 5.15ಕ್ಕೆ ಧಾರವಾಡ, 6.55ಕ್ಕೆ ಬೆಳಗಾವಿ, 9.15ಕ್ಕೆ ಮೀರಜ್, 9.30ಕ್ಕೆ ಸಾಂಗ್ಲಿ, 10.35ಕ್ಕೆ ಸತಾರಾ ಹಾಗೂ 1.30ಕ್ಕೆ ಪುಣೆಯನ್ನು ತಲುಪಲಿದೆ. ಹೀಗಿದೆ ಟಿಕೆಟ್ ದರ ಎಕ್ಸಿಕ್ಯೂಟಿವ್ ಕ್ಲಾಸ್ ಗೆ ರೂ.2,780 ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಕ್ಯಾಟರಿಂಗ್ ಇಲ್ಲದೇ ಚೇರ್ ಕಾರ್ ಗೆ ರೂ.1,185, ಎಕ್ಸಿಕ್ಯೂಟಿವ್ ಕ್ಲಾಸ್ ಗೆ…

Read More

ಯಾದಗಿರಿ: ರಾಜ್ಯದಲ್ಲಿ ಪಿಎಸ್ಐ ಪರಶುರಾಂ ದಿಢೀರ್ ಸಾವು, ಕೋಲಾಹಲವನ್ನೇ ಸೃಷ್ಠಿಸಿತ್ತು. ಈಗ ಅವರ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ. ಅದರಲ್ಲಿ ಪಿಎಸ್ಐ ಪರಶುರಾಂ ಸಾವಿಗೆ ಹೃದಯಾಘಾತವೇ ಕಾರಣ ಎಂಬುದಾಗಿ ಬಹಿರಂಗವಾಗಿದೆ. ಯಾದಗಿರಿಯ ನಗರ ಠಾಣೆಯ ಕಾನೂನು ಸುವ್ಯವಸ್ಥೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಕುರಿತು ಹಲವು ಊಹಾಪೋಹಗಳು ಎದ್ದಿದ್ದವು. ಈಗ ಇವುಗಳಿಗೆ ತೆರೆ ಬಿದ್ದಿದೆ. ಪಿಎಸ್ಐ ಪರಶುರಾಮ್ ಅವರದ್ದು ಆತ್ಮಹತ್ಯೆಯಲ್ಲ, ಹೃದಯಾಘಾತದಿಂದಾದ ಸಾವು ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದು ಬಂದಿದೆ. ಪಿಎಸ್ಐ ಪರಶುರಾಂ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅವರ ಮೃತದೇಹದ ವಿವಿಧ ಅಂಗಾಂಗಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈ ಪರೀಕ್ಷೆಯಲ್ಲಿ ಪರಶುರಾಂ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಕಂಡುಬಂದಿಲ್ಲ. ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. https://kannadanewsnow.com/kannada/census-to-be-conducted-soon-no-decision-yet-on-caste-census-sources/ https://kannadanewsnow.com/kannada/state-government-employees-association-elections-when-will-the-polling-be-held-the-results-will-be-out-here-are-the-details/

Read More

ನವದೆಹಲಿ: ದಶಮಾನದ ಜನಗಣತಿ ನಡೆಸಲು ಸರಕಾರವು ಸಿದ್ಧತೆಗಳನ್ನು ಆರಂಭಿಸಿದೆ, ಆದರೆ ಈ ಪ್ರಕ್ರಿಯೆಯ ಭಾಗವಾಗಿ ಜಾತಿಯ ಕಾಲಂ ಸೇರಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಮೂಲಗಳು ರವಿವಾರ ತಿಳಿಸಿವೆ. ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ ಮೂಲವೊಂದು, ದಶಮಾನದ ಗಣತಿಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಹೇಳಿದರು. ಭಾರತವು 1881 ರಿಂದ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತದೆ. ಈ ದಶಕದ ಜನಗಣತಿಯ ಮೊದಲ ಹಂತವು ಏಪ್ರಿಲ್ 1, 2020 ರಂದು ಪ್ರಾರಂಭವಾಗಬೇಕಿತ್ತು ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಬೇಕಾಯಿತು. ಕಳೆದ ವರ್ಷ ಸಂಸತ್ತು ಜಾರಿಗೆ ತಂದ ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನವೂ ದಶಮಾನದ ಜನಗಣತಿಯ ನಿರ್ವಹಣೆಗೆ ಸಂಬಂಧಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸುವ ಕಾನೂನು ಜಾರಿಗೆ ಬಂದ ನಂತರ ದಾಖಲಾದ ಮೊದಲ ಜನಗಣತಿಯ ಸಂಬಂಧಿತ ಅಂಕಿಅಂಶಗಳ ಆಧಾರದ ಮೇಲೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಗೊಂಡ ನಂತರ ಜಾರಿಗೆ ಬರಲಿದೆ. ದಶಮಾನದ ಜನಗಣತಿಯಲ್ಲಿ ಜಾತಿಯ ಕಾಲಂ…

Read More

ಹೈದರಾಬಾದ್: ಭಯ ಅಥವಾ ತಪ್ಪು ಕಲ್ಪನೆಯಲ್ಲಿರುವ ಮಹಿಳೆಯ ಒಪ್ಪಿಗೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದು ಅತ್ಯಾಚಾರಕ್ಕೆ ಸಮಾನ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಮದುವೆಯ ನೆಪದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ಪ್ರಶ್ನಿಸಿ ರಾಘವ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನೀಸ್ ಕುಮಾರ್ ಗುಪ್ತಾ ವಜಾಗೊಳಿಸಿದ್ದಾರೆ. ಆಗ್ರಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದಾಖಲಾದ ದೂರಿನಲ್ಲಿ 2018 ರ ಡಿಸೆಂಬರ್ನಲ್ಲಿ ತನ್ನ ವಿರುದ್ಧ ಸಲ್ಲಿಸಲಾದ ಚಾರ್ಜ್ಶೀಟ್ ಅನ್ನು ರದ್ದುಗೊಳಿಸುವಂತೆ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದ್ದರು. ಈ ಆರೋಪಪಟ್ಟಿಯ ಮೇಲೆ, ಕ್ರಿಮಿನಲ್ ವಿಚಾರಣೆಗಳು ಪ್ರಾರಂಭವಾದವು, ಇದು ಆಗ್ರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಬಾಕಿ ಇದೆ. ಅರ್ಜಿದಾರರು ಮೊದಲು ಮಹಿಳೆಯನ್ನು ಪ್ರಜ್ಞಾಹೀನರನ್ನಾಗಿ ಮಾಡುವ ಮೂಲಕ ದೈಹಿಕ ಸಂಬಂಧವನ್ನು ಬೆಳೆಸಿದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ನಂತರ, ಅವನು ಮದುವೆಯ ನೆಪದಲ್ಲಿ ಅವಳನ್ನು ದೈಹಿಕವಾಗಿ ಶೋಷಿಸುವುದನ್ನು ಮುಂದುವರಿಸಿದನು ಎಂದು ಆರೋಪಿಸಲಾಗಿದೆ. ಅರ್ಜಿದಾರರು ಮತ್ತು…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳೂ 2000 ಪಡೆಯುತ್ತಿದ್ದಂತ 1.78 ಲಕ್ಷ ಯಜಮಾನಿಯರಿಗೆ ಹಣ ಪಾವತಿ ಮಾಡದಂತೆ ತಡೆ ಹಿಡಿಯಲಾಗಿದೆ. ಈ ಮೂಲಕ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಗೃಹ ಲಕ್ಷ್ಮೀ ಯೋಜನೆಯ ನಿಯಮಾನುಸಾರ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯಡಿ ಪ್ರಯೋಜನ ಸಿಗುವುದಿಲ್ಲ. ಆದರೂ ಯೋಜನೆಗೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೂ 1.78 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡು, 2000 ಪಡೆಯುತ್ತಿದ್ದಂತ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತನಿಖೆ ಕೈಗೊಂಡು, ಪರಿಶೀಲನೆ ನಡೆಸಿದ ಕಾರಣ, ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಂತ ಮಹಿಳೆಯರಿಗೆ ಹಣ ಪಾವತಿ ನಿಲ್ಲಿಸಲಾಗಿದೆ. ಅಲ್ಲದೇ ದಾಖಲೆ ಪರಿಶೀಲನೆಗೆ ಚಾಲನೆ ನೀಡಲಾಗಿದೆ. ಇ-ಗವರ್ನೆನ್ಸ್ ಇಲಾಖೆಗೆ ತನಿಖೆ ನಡೆಸಲು ಮಹಿಳಾ ಇಲಾಖೆ ಸೂಚಿಸಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ತೆರಿಗೆ ಪಾವತಿದಾರರಾದ ಕಾರಣ 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮೀ ಹಣಕ್ಕೆ…

Read More

ತುಮಕೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಶೀಘ್ರವೇ ನಂದಿನಿ ಹಾಲಿನ ಪ್ರತಿ ಲೀಟರ್ ದರದಲ್ಲಿ ರೂ.5 ಹೆಚ್ಚಳ ಮಾಡಲಾಗುತ್ತಿದೆ ಎಂಬುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಶೀಘ್ರದಲ್ಲೇ ಪ್ರತಿ ಲೀಟರ್ ಹಾಲಿನ ಮಾರಾಟ ದರವನ್ನು 5 ರೂ ಹೆಚ್ಚಳ ಮಾಡಲಾಗುತ್ತಿದೆ. ಏರಿಕೆಯ ಸಂಪೂರ್ಣ ಲಾಭವನ್ನು ರೈತರಿಗೆ ದೊರೆಕಿಸಿಕೊಡುವುದಾಗಿ ತಿಳಿಸಿದರು. ಹಾಲಿನ ಮಾರಾಟ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಲಿದೆ. ಅಲ್ಲದೇ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ. ಹಾಲಿನ ದರ ಏರಿಕೆಯಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಲಾಭವಾಗಲಿದೆಯೇ ಹೊರತು, ರಾಜ್ಯ ಸರ್ಕಾರಕಕ್ಕೆ ಅಲ್ಲ ಎಂದರು. ಇಡೀ ದೇಶದಲ್ಲಿ ರೈತರಿಂದ ಹೆಚ್ಚು ಬೆಲೆಗೆ ಹಾಲು ಖರೀದಿಸಿ, ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡುತ್ತಿರುವುದು ಕರ್ನಾಟಕದಲ್ಲಿ ಮಾತ್ರವೇ ಆಗಿದೆ. ಈ ಹಿನ್ನಲೆಯಲ್ಲಿ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಈ ಸಂಬಂಧ ಹಾಲು ಒಕ್ಕೂಟಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು. https://kannadanewsnow.com/kannada/miscreants-pelt-stones-at-mosque-in-mangaluru-tension-prevails-at-the-site/

Read More

ದಕ್ಷಣಿ ಕನ್ನಡ: ಜಿಲ್ಲೆಯ ಮಂಗಳೂರಿನ ಕಾಟಿಪಳ್ಳದಲ್ಲಿರುವಂತ ಮಸೀದಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿರುವುದಾಗಿ ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿಯಲ್ಲಿರುವಂತ ಕಾಟಿಪಳ್ಳದ 3ನೇ ಬ್ಲಾಕ್ ನಲ್ಲಿರುವಂತ ಬದ್ರಿಯಾ ಮಸೀದಿಯ ಮೇಲೆ ಕಿಡಿಗೇಡಿಗಳು ನಿನ್ನೆ ರಾತ್ರಿ 10.30ರ ಸುಮಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳ ಕಲ್ಲೆಸೆತದಿಂದ ಬದ್ರಿಯಾ ಮಸೀದಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದಾವೆ. ಈ ಕೃತ್ಯವನ್ನು ಎರಡು ಬೈಕ್ ನಲ್ಲಿ ಬಂದಂತ ನಾಲ್ವರು ಕಿಡಿಗೇಡಿಗಳು ಎಸಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಮಸೀದಿ ಬಳಿಯಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿದಂತ ಕಿಡಿಗೇಡಿಗಳನ್ನು ಬಂಧಿಸುವಂತೆ ಮುಸ್ಲೀಂ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದಂತ ಪೊಲೀಸರು, ಪರಿಶೀಲಿಸಿ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಸೀದಿ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Read More

ನವದೆಹಲಿ: ಇಂದಿನಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India – NPCI) ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (Unified Payments Interface -UPI) ವಹಿವಾಟು ಮಿತಿಗಳಲ್ಲಿ ಭಾರಿ ಬದಲಾವಣೆಯಾಗಲಿದೆ. ಯುವಿಐ ಬಳಕೆದಾರರು 5 ಲಕ್ಷ ರೂ.ವರೆಗೆ ಹಣ ಪಾವತಿಗೆ ಅವಕಾಶ ನೀಡಲಾಗುತ್ತಿದೆ. ಹೌದು. ಸೆಪ್ಟೆಂಬರ್ 16, 2024ರ ಇಂದಿನಿಂದ ಜಾರಿಗೆ ಬರುವಂತೆ, ದೇಶಾದ್ಯಂತದ ತೆರಿಗೆದಾರರು 5 ಲಕ್ಷ ರೂ.ವರೆಗಿನ ವಹಿವಾಟುಗಳಿಗೆ UPI ಅನ್ನು ಬಳಸಲು ಅಧಿಕಾರ ನೀಡಲಾಗುವುದು. ಇದು ಹಿಂದಿನ ಮಿತಿ 1 ಲಕ್ಷ ರೂ.ಗಳಿಂದ ಗಣನೀಯ ಹೆಚ್ಚಳವಾಗಿದೆ. ಈ ಪ್ರಮುಖ ಹೊಂದಾಣಿಕೆಯನ್ನು ಆಗಸ್ಟ್ 24, 2024 ರ ಸುತ್ತೋಲೆಯಲ್ಲಿ ಬಹಿರಂಗಪಡಿಸಲಾಗಿದೆ, ಇದು ತೆರಿಗೆ ಪಾವತಿಗಳನ್ನು ಸುವ್ಯವಸ್ಥಿತಗೊಳಿಸುವಲ್ಲಿ ಮತ್ತು ಹೆಚ್ಚು ಅಂತರ್ಗತ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವಲ್ಲಿ ಪರಿವರ್ತಕ ಹೆಜ್ಜೆಯನ್ನು ಸೂಚಿಸುತ್ತದೆ. ಪ್ರತಿ ವಹಿವಾಟು ಮಿತಿಯನ್ನು ಗಮನಾರ್ಹವಾಗಿ ವರ್ಧಿಸುವ ಮೂಲಕ, ಎನ್ಪಿಸಿಐ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಯುಪಿಐ ಅನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಕೇಟ್ ವಿನ್ಸ್ಲೆಟ್ ತನ್ನ “ಲೈಂಗಿಕ ಡ್ರೈವ್” ಹೆಚ್ಚಿಸಲು ಹಾರ್ಮೋನ್ ಚಿಕಿತ್ಸೆಗೆ ಒಳಗಾಗುವ ಬಗ್ಗೆ ತೆರೆದಿಟ್ಟಿದ್ದಾರೆ. ನಟಿ ತಮ್ಮ 40 ಮತ್ತು 50ರ ವಯಸ್ಸಿನ ಅನೇಕ ಮಹಿಳೆಯರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಚರ್ಚಿಸುವುದಿಲ್ಲ. ಹೌ ಟು ಫೇಲ್ ಪಾಡ್ಕಾಸ್ಟ್ನಲ್ಲಿ ನಡೆದ ನೇರ ಸಂಭಾಷಣೆಯಲ್ಲಿ, ಕೇಟ್ ತನ್ನ ಕಾಮಾಸಕ್ತಿಯಲ್ಲಿನ ಕುಸಿತವನ್ನು ಪರಿಹರಿಸಲು 48 ನೇ ವಯಸ್ಸಿನಲ್ಲಿ ಟೆಸ್ಟೋಸ್ಟೆರಾನ್ ಬದಲಿ ಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಕೆಲವೊಮ್ಮೆ ಮಹಿಳೆಯರು ಕಾಮಾಸಕ್ತಿಯಲ್ಲಿ ನಿಜವಾದ ಕುಸಿತವನ್ನು ಹೊಂದಿರುತ್ತಾರೆ. ಏಕೆಂದರೆ ಅವರ ಥೈರಾಯ್ಡ್ನಲ್ಲಿ ವಿಷಯಗಳು ನಡೆಯಬಹುದು ಎಂದು ವಿನ್ಸ್ಲೆಟ್ ಶುಕ್ರವಾರದ ಸಂಚಿಕೆಯಲ್ಲಿ ಹೇಳಿದರು. ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟದೊಂದಿಗೆ ವಿಷಯಗಳು ಸಹ ನಡೆಯಬಹುದು ಎಂದಿದ್ದಾರೆ. ಬಹಳಷ್ಟು ಜನರಿಗೆ ಇದು ತಿಳಿದಿಲ್ಲ. ಆದರೆ ಮಹಿಳೆಯರ ದೇಹದಲ್ಲಿ ಟೆಸ್ಟೋಸ್ಟೆರಾನ್ ಇದೆ. ಅದು ಮುಗಿದಾಗ, ಮೊಟ್ಟೆಗಳಂತೆ, ಅದು ಹೋಗುತ್ತದೆ. ಅದು ಹೋದ ನಂತರ ನೀವು ಅದನ್ನು ಬದಲಾಯಿಸಬೇಕು. ಅದು ಮಾಡಬಹುದಾದ ವಿಷಯವಾಗಿದೆ ಮತ್ತು ನೀವು ಮತ್ತೆ…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಮರಸ ಗ್ರಾಮದಲ್ಲಿ ಅಂಗಡಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ, ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಬಕಾರಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಮರಸ ಗ್ರಾಮದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಂತ ಮಾಹಿತಿ ಆಧರಿಸಿ ಅಬಕಾರಿ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಈ ದಾಳಿಯ ವೇಳೆಯಲ್ಲಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಇರಿಸಲಾಗಿದ್ದಂತ 22 ಟೆಟ್ರಾ ಪ್ಯಾಕೇಟ್ ಅಂದರೆ 1.8 ಲೀಟರ್ ಮದ್ಯವನ್ನು ಸೀಜ್ ಮಾಡಿದ್ದಾರೆ. ಈ ಸಂಬಂಧ ಅಂಗಡಿಯ ಮಾಲೀಕರನ್ನು ವಶಕ್ಕೆ ಪಡೆದು, ಆ ಬಳಿಕ ವಿಚಾರಣೆ ನಡೆಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮರಸ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರಿಗೆ ಬಿಗ್ ಶಾಕ್ ಅನ್ನು ಸಾಗರ ತಾಲ್ಲೂಕಿನ ಅಬಕಾರಿ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ನೀಡಿದ್ದಾರೆ. ಇಂದು ನಡೆದಂತ ಈ…

Read More