Subscribe to Updates
Get the latest creative news from FooBar about art, design and business.
Author: kannadanewsnow09
ಹುಬ್ಬಳ್ಳಿ: ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾಳೆ. ಹೀಗಿದ್ದೂ ಬೇರೆ ಸಂದರ್ಭದಲ್ಲಿ ಧ್ವನಿ ಎತ್ತುತ್ತಿರೋ ನೀವುಗಳು ಯಾಕೆ ರಾಜ್ಯದ ಮನೆ ಮಗಳು ಮೃತಪಟ್ಟಾಗ ಎತ್ತುತ್ತಿಲ್ಲ ಅಂತ ಬಿಗ್ ಬಾಸ್ ಸ್ಪರ್ಧಿ ಪ್ರಥಮ್, ನಟ ಪ್ರಕಾಶ್ ರಾಜ್, ಚೇತನ್ ಪ್ರಶ್ನಿಸಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿನ ನೇಹಾ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನೇಹಾ ಅವರ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಜಸ್ಟಿಸ್ ಫಾರ್ ಲವ್ ಅಂದ್ರೆ ಏನು.? ಅವರಿಗೆ ಭಾರತ ರತ್ನ ಕೊಡಬೇಕಾ ಎಂಬುದಾಗಿ ಗರಂ ಆದಂತ ಅವರು, ಎಲ್ಲದಕ್ಕೂ ಪ್ರಧಾನಿ ಮೋದಿ ಪ್ರಶ್ನೆ ಮಾಡ್ತೀರ. ಆದ್ರೇ ಇಲ್ಲಿ ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾಳೆ. ಯಾಕೆ ನೀವು ಧ್ವನಿ ಎತ್ತುತ್ತಾ ಇಲ್ಲ ಅಂತ ಪ್ರಕಾಶ್ ರಾಜ್, ಚೇತನ್ ಗೆ ಪ್ರಶ್ನಿಸಿದರು. https://kannadanewsnow.com/kannada/put-an-end-to-this-great-fraud-of-bjp-government-by-giving-butter-to-north-and-lime-to-south-dinesh-gundu-rao/ https://kannadanewsnow.com/kannada/pm-modi-has-given-a-befitting-reply-to-karnataka-siddaramaiah-on-centre/
ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಉತ್ತರ ಭಾರತಕ್ಕೆ ಬೆಣ್ಣೆ, ದಕ್ಷಿಣ ಭಾರತಕ್ಕೆ ಸುಣ್ಣ ನೀಡುವಂತ ನಿಲುವು ತಳೆಯಲಾಗಿದೆ. ಇಂತಹ ಬಿಜೆಪಿ ಸರ್ಕಾರದ ಮಹಾಮೋಸಕ್ಕೆ ಅಂತ್ಯ ಹಾಡಿ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಇಂದು ಎಕ್ಸ್ ಮಾಡಿರುವಂತ ಅವರು, ದೇಶದ ಆದಾಯಕ್ಕೆ ಅತಿಹೆಚ್ಚು ಕೊಡುಗೆ ನೀಡುವ ಕರ್ನಾಟಕವು ಕೇಂದ್ರಕ್ಕೆ ಸಲ್ಲಿಸುವ 100 ರೂಪಾಯಿ ತೆರಿಗೆಯಲ್ಲಿ ನಮಗೆ ಮರಳಿ ಬರುವುದು ಕೇವಲ 13 ರೂಪಾಯಿ ಮಾತ್ರ! ಕನ್ನಡಿಗರ ಮೇಲಿನ ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು? ಕನ್ನಡಿಗರ ಮೇಲೆ ಈ ಮಲತಾಯಿ ಧೋರಣೆ ಏತಕ್ಕಾಗಿ? ಎಂದು ಪ್ರಶ್ನಿಸಿದ್ದಾರೆ. ಉತ್ತರಕ್ಕೆ ಬೆಣ್ಣೆ ದಕ್ಷಿಣಕ್ಕೆ ಸುಣ್ಣ ನೀಡುವ ಬಿಜೆಪಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಬಿಜೆಪಿ ಸೋಲಿಸೋಣ. ಕನ್ನಡಿಗರ ಮೇಲಿನ ಅನ್ಯಾಯಕ್ಕೆ ಅಂತ್ಯ ಹಾಡೋಣ. #BJPChombuSarkara #loksabha2024 #VoteForCongress ಎಂಬುದಾಗಿ ಹ್ಯಾಶ್ ಟ್ಯಾಗ್ ಮೂಲಕ ಒತ್ತಾಯಿಸಿದ್ದಾರೆ. https://twitter.com/dineshgrao/status/1781936583974772927 https://kannadanewsnow.com/kannada/pm-modi-has-given-a-befitting-reply-to-karnataka-siddaramaiah-on-centre/ https://kannadanewsnow.com/kannada/how-did-modis-empty-chombu-look-like-an-akshaya-patra-to-deve-gowda-siddaramaiah/
ಕೋಲಾರ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಜಿಎಸ್ಟಿ ಪಾವತಿಯ ಹಣವನ್ನು ನೀಡಿಲ್ಲ. ಇದಕ್ಕಾಗೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಚೆಂಬು ಕೊಟ್ಟಿದೆ ಅಂತ ಹೇಳ್ತಿದ್ದೇವೆ. ಆದ್ರೇ ಮೋದಿಯವರ ಖಾಲಿ ಚೊಂಬು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಮಾತ್ರ ಅಕ್ಷಯ ಪಾತ್ರೆಯಂತೆ ಕಾಣಿಸಿದೆ. ಅದು ಹೇಗೆ ಅಂತ ಸಿಎಂ ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಕೋಲಾರ (ಬಂಗಾರಪೇಟೆ) ಯ ರೋಡ್ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವಿನ ಜನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಮಾಡಿದಂತ ಅವರು, ಚಿಕ್ಕಬಳ್ಳಾಪುರದಲ್ಲಿ ಹಾಲಿ ಪ್ರಧಾನಿ ಮೋದಿ,ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ ಎಂದರು. ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ. ಖಾಲಿ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಾಸ್ ಯಾಕೆ ಬರ್ಲಿಲ್ಲ? ಬರಗಾಲದ ಅನುದಾನ ಏಕೆ ಬರಲಿಲ್ಲ? ಪ್ರವಾಹದ ವೇಳೆ ರಾಜ್ಯದ ಅನುದಾನ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಏ.12 ರಿಂದ 19 ರವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 38 ನಾಮಪತ್ರಗಳ ಸಲ್ಲಿಕೆಯಾಗಿತ್ತು. ಇಂದು ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಆಮ್ ಆದ್ಮಿ ಪಕ್ಷದ ಸುಭಾನ್ ಖಾನ್ ಎಂಬ ಅಭ್ಯರ್ಥಿಯು ಸಲ್ಲಿಸಿದ ನಾಮಪತ್ರವು ತಿರಸ್ಕೃತತೊಂಡಿದೆ. ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಚಂದ್ರಶೇಖರ್ ಹೆಚ್.ಸಿ ಮತ್ತು ಬಹುಜನ ಮುಕ್ತಿ ಪಾರ್ಟಿಯ ಜಿ.ಜಯದೇವ ಅವರ ನಾಮಪತ್ರಗಳನ್ನು ಮಾನ್ಯ ಮಾಡಿದ್ದು ಪಕ್ಷೇತರ ಅಭ್ಯರ್ಥಿಗಳಾಗಿ ಪರಿಗಣಿಸಲಾಗಿದೆ. ನಾಮಪತ್ರಗಳ ಪರಿಶೀಲನೆ ನಂತರ 26 ಅಭ್ಯರ್ಥಿಗಳ ನಾಮಪತ್ರಗಳನ್ನು ಮಾನ್ಯ ಮಾಡಲಾಗಿದೆ. ಏ.22 ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು ಮೇ 7 ರಂದು ಮತದಾನ ನಡೆಯಲಿದೆ. https://kannadanewsnow.com/kannada/pm-modi-has-given-a-befitting-reply-to-karnataka-siddaramaiah-on-centre/ https://kannadanewsnow.com/kannada/she-said-she-wont-talk-to-me-she-says-she-wont-talk-to-fayaz-fayaz-accused-in-front-of-staff/
ಆನೇಕಲ್: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಅವರ ತಂದೆ, ಕಾಂಗ್ರೆಸ್ ಕಾರ್ಪೊರೇಟರ್‌ಗೆ ಕೂಡ ಸರ್ಕಾರ ಸಹಾಯ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಚುನಾವಣಾ ಪ್ರಚಾರದಲ್ಲಿ ಅವರು ಪಾಲ್ಗೊಂಡರು. ಬಳಿಕ ಬಿದಿರುಕುಪ್ಪೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟು ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ದುಷ್ಟ ಕಾಂಗ್ರೆಸ್ ಉಂಟುಮಾಡಿದೆ. ಮುಸ್ಲಿಂ ಮತಾಂಧವಾದಿಗಳಿಗೆ ಈ ಸರ್ಕಾರದಲ್ಲಿ ಬಹಳ ಗೌರವವಿದೆ. ನೀವು ನಮ್ಮ ಮತಬ್ಯಾಂಕ್ ಆಗಿದ್ದು, ನಿಮ್ಮ ಪೂರ್ತಿ ರಕ್ಷಣೆ ಮಾಡುತ್ತೇವೆ ಎಂದು ಸರ್ಕಾರವೇ ಹೇಳಿದೆ. ಜೈ ಶ್ರೀರಾಮ್ ಎಂದರೆ, ಮೋದಿ ಕುರಿತು ಹಾಡು ಹಾಕಿದರೆ ಹೊಡೆಯುತ್ತಾರೆ. ಪಾಕ್ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಜೊತೆಗೆ ಪಾಸ್ ಕೂಡ ಕೊಡುತ್ತಾರೆ ಎಂದರು. ಡಿ.ಕೆ.ಸುರೇಶ್ ಅವರ…
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಈಗಾಗಲೇ ವಿವಿಧ ಸಮುದಾಯಗಳು ಬೆಂಬಲ ಘೋಷಿಸಿದ್ದಾವೆ. ಈ ಬೆನ್ನಲ್ಲೇ ಯಾದವ, ಗಾಣಿಗ ಸಮುದಾಯದವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ ಘೋಷಿಸಿದ್ದಾರೆ. ಅಖಿಲ ಭಾರತ ಯಾದವ ಸಂಘಟನೆ, ‘ಯಾದವ ಸಮುದಾಯ’ ಬೆಂಬಲ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಅಖಿಲ ಭಾರತ ಯಾದವ ಸಂಘಟನೆ ಮತ್ತು ಕರ್ನಾಟಕ ರಾಜ್ಯ ಯಾದವ ಸಮುದಾಯದ ಬೆಂಬಲ ಘೋಷಣೆ ಮಾಡಿದೆ. ದಿನಾಂಕ :20-4- 2024 ರಂದು ನಡೆದ ಸಭೆಯಲ್ಲಿ ವಾಸುದೇವಲು ಯಾದವ್, ಉಪಾಧ್ಯಕ್ಷರು, ಅಖಿಲ ಭಾರತ ಯಾದವ ಮಹಾಸಭಾ, ಡಿ.ಟಿ ಶ್ರೀನಿವಾಸ್, ಅಧ್ಯಕ್ಷರು ಕರ್ನಾಟಕ ರಾಜ್ಯ ಯಾದವ ಸಂಘ, ನಾಗರಾಜ ಯಾದವ್, ಎಂ.ಎಲ್.ಸಿ, ಲಕ್ಷ್ಮಿಪತಿ, ಮಾಜಿ ಅಧ್ಯಕ್ಷರು ಕರ್ನಾಟಕ ಯಾದವ ಸಂಘ, ಮಾಜಿ ಕಾರ್ಪೋರೇಟರ್ ಗಳಾದ ಜಯರಾಂ, ವಿಜಯನಗರ, ಶ್ರೀನಿವಾಸ, ಅಗ್ರಹಾ ದಾಸರಹಳ್ಳಿ, ಕೋಕಿಲ ರಾಮಕೃಷ್ಣ, ಕೋರಮಂಗಲ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ…
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ಬಲಿಜ ಸಂಘದ ಬೆಂಬಲ ಘೋಷಣೆ ಮಾಡಲಾಗಿದೆ. ದಿನಾಂಕ :20-4- 2024 ರಂದು ವಿಲ್ಸನ್ ಗಾರ್ಡನ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯ ಬಲಿಜ ಸಂಘ ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ ವೇಣುಗೋಪಾಲ್ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಲಿಜ ಜನಾಂಗದ ಪ್ರಮುಖರು ಗಳಾದ ಮಮತ ದೇವರಾಜ್, ಫಿಲಂ ಚೇಂಬರ್ ನ ನರಸಿಂಹಲು ವಿಜಯನಗರದ ಸಂಜೀವಪ್ಪ ಬನಗಿರಿ ನಗರದ ಉದ್ಯಮಿ UD ಮಂಜಣ್ಣ ಹಾಗೂ ವೀರೇಂದ್ರ ಕುಮಾರ್, ಜಯನಗರದ ಲಕ್ಷ್ಮಣ್, ಮಿಲ್ಸನ್ ಗಾರ್ಡನ್ ರವಿಚಂದ್ರ, ರಾಜಶೇಖರ್, ಪ್ರಭಾಕರ್, ಲಕ್ಕಸಂದ್ರ ದಿಂದ ಶಾಮಣ್ಣ, ಹೊಸ ರೋಡ್ SLV ಮುನಿರಾಜು, ಬೊಮ್ಮನಹಳ್ಳಿ ಪ್ಯಾರ ಡೈಸ್ ಸ್ಕೂಲ್ ಮಂಜುನಾಥ್, ಮಡಿವಾಳದ ಸಂಜೀವ, BTM ಕ್ಷೇತ್ರದಿಂದ ಚಂದ್ರಶೇಖರ್, ಬಸವನಗುಡಿ ಕ್ಷೇತ್ರದ P G ಶ್ರೀನಿವಾಸಲು ಹಾಗೂ ರವೀಂದ್ರ ಹಾಗೂ ಇನ್ನೂ ಅನೇಕ ಬಲಿಜ ಒಕ್ಕೂಟದ ಪ್ರಮುಖರು ಗಳು ಭಾಗವಹಿಸಿದ್ದ…
ಮುಂಬೈ: ಯುವಕನ ‘ಸಾಪೇಕ್ಷ ನಪುಂಸಕತೆ’ಯಿಂದಾಗಿ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗದ ಯುವ ದಂಪತಿಗಳ ಮದುವೆಯನ್ನು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಎಸ್.ಜಿ.ಚಪಲ್ಗಾಂವ್ಕರ್ ಅವರ ವಿಭಾಗೀಯ ಪೀಠವು ಏಪ್ರಿಲ್ 15 ರಂದು ನೀಡಿದ ತೀರ್ಪಿನಲ್ಲಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಾಗದ “ವಿವಾಹದ ಯುವ ಪೀಡಿತರಿಗೆ” ಸಹಾಯ ಮಾಡಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಹೇಳಿದೆ. ಪ್ರವೇಶ ಹಂತದಲ್ಲಿಯೇ ಮದುವೆಯನ್ನು ರದ್ದುಗೊಳಿಸುವಂತೆ ಕೋರಿ ತನ್ನ 26 ವರ್ಷದ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಫೆಬ್ರವರಿ 2024 ರಲ್ಲಿ ತಿರಸ್ಕರಿಸಿದ ನಂತರ 27 ವರ್ಷದ ವ್ಯಕ್ತಿ ನ್ಯಾಯಪೀಠವನ್ನು ಸಂಪರ್ಕಿಸಿದ್ದರು. ‘ಸಾಪೇಕ್ಷ ನಪುಂಸಕತೆ’ ಎಂಬ ಪದವು ತಿಳಿದಿರುವ ವಿದ್ಯಮಾನವಾಗಿದೆ. ಸಾಮಾನ್ಯ ನಪುಂಸಕತೆಗಿಂತ ಭಿನ್ನವಾಗಿದೆ. ಅಂದರೆ ಸಾಮಾನ್ಯವಾಗಿ ಸಹಬಾಳ್ವೆ ನಡೆಸಲು ಅಸಮರ್ಥತೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಸಾಪೇಕ್ಷ ನಪುಂಸಕತೆಯು ವಿಶಾಲವಾಗಿ ಒಬ್ಬ ವ್ಯಕ್ತಿಯು ಸಂಭೋಗ ನಡೆಸುವ ಸಾಮರ್ಥ್ಯವನ್ನು ಹೊಂದಿರಬಹುದು. ಆದರೆ ಸಂಗಾತಿಯೊಂದಿಗೆ ಅದನ್ನು…
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಗಾಣಿಗ ಸಮುದಾಯವು ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನ ಜಯನಗರದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಗಾಣಿಗ ಸಮುದಾಯದ ಬಂಧುಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಅವರು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ವಿಧಾನಪರಿಷತ್ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ರವರು, ಎಸ್ ಎಲ್ ಎನ್ ಧರ್ಮ ಸಂಸ್ಥೆಯ ಅಧ್ಯಕ್ಷರಾದ ಎಸ್ ಸುರೇಶ್ ರವರು ಕೆಪಿಸಿಸಿ ಸದಸ್ಯರಾದ ಡಿವಿ ಲಕ್ಷ್ಮಿ ರವರು ಕಾಂಗ್ರೆಸ್ ಮುಖಂಡರಾದ ಎಂ ಎಸ್ ಮುನಿರಾಜು ಅವರು ಪರಿಸರ ವೇಣುಗೋಪಾಲ್ ರವರು ಹಾಗೂ ಅನೇಕ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ನೆರೆದಿದ್ದ ಗಾಣಿಗ ಸಮುದಾಯದ ಬಂಧುಗಳು ಒಕ್ಕೊರಲಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಅಖಿಲ ಭಾರತ ಯಾದವ ಸಂಘಟನೆ ಮತ್ತು ಕರ್ನಾಟಕ ರಾಜ್ಯ ಯಾದವ ಸಮುದಾಯದ ಬೆಂಬಲ ಘೋಷಣೆ ಮಾಡಿದೆ. ದಿನಾಂಕ :20-4- 2024 ರಂದು ನಡೆದ ಸಭೆಯಲ್ಲಿ ವಾಸುದೇವಲು ಯಾದವ್, ಉಪಾಧ್ಯಕ್ಷರು, ಅಖಿಲ ಭಾರತ ಯಾದವ ಮಹಾಸಭಾ, ಡಿ.ಟಿ ಶ್ರೀನಿವಾಸ್, ಅಧ್ಯಕ್ಷರು ಕರ್ನಾಟಕ ರಾಜ್ಯ ಯಾದವ ಸಂಘ, ನಾಗರಾಜ ಯಾದವ್, ಎಂ.ಎಲ್.ಸಿ, ಲಕ್ಷ್ಮಿಪತಿ, ಮಾಜಿ ಅಧ್ಯಕ್ಷರು ಕರ್ನಾಟಕ ಯಾದವ ಸಂಘ, ಮಾಜಿ ಕಾರ್ಪೋರೇಟರ್ ಗಳಾದ ಜಯರಾಂ, ವಿಜಯನಗರ, ಶ್ರೀನಿವಾಸ, ಅಗ್ರಹಾ ದಾಸರಹಳ್ಳಿ, ಕೋಕಿಲ ರಾಮಕೃಷ್ಣ, ಕೋರಮಂಗಲ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳ ಯಾದವ/ಗೊಲ್ಲ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರಿಗೆ ನಮ್ಮ ಸಮುದಾಯವು ಒಮ್ಮತದಿಂದ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಘೋಷಿಸಿದರು. ಸದರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾದವ ಸಮುದಾಯದ ಸುಮಾರು 50 ಸಾವಿರಕ್ಕೂ ಹೆಚ್ಚು ಮತದಾರರಿದ್ದು,…