Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದಲ್ಲಿ ಬೆಸ್ಕಾಂನಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಸೆ.23ರಂದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಸ್ಕಾಂ(BESCOM), ದಿನಾಂಕ 23.09.2024 (ಸೋಮವಾರ) ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 04:00 ಗಂಟೆಯವರೆಗೆ “66/11 ಕೆ.ವಿ ಹೆಣ್ಣೂರು ಉಪ-ಕೇಂದ್ರ” ದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗುವುದಾಗಿ ತಿಳಿಸಿದೆ. ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜ್, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್ಶಿಪ್, ನಗರಗಿರಿ ಟೌನ್ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿ.ಡಿ.ಎಸ್. ಗಾರ್ಡನ್, ಕೊತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿ.ಎಸ್.ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲ ಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್…
ಬೆಂಗಳೂರು: ನಗರದ ವೈಯಾಲಿಕಾವಲ್ ನಲ್ಲಿ ದೆಹಲಿಯ ಶ್ರದ್ಧಾ ವಾಕರ್ ಕೊಲೆ ಮಾದರಿಯಲ್ಲೇ 26 ವರ್ಷದ ಮಹಿಳೆಯನ್ನು ಕೊಲೆ ಮಾಡಿ, ದೇಹವನ್ನು 30 ಪೀಸ್ ಪೀಸ್ ಮಾಡಿ ಪ್ರಿಡ್ಜ್ ನಲ್ಲಿ ಇಟ್ಟಿರುವಂತ ಬರ್ಬರ ಕೊಲೆ ಪ್ರಕರಣ ನಡೆದಿದೆ. ಬೆಂಗಳೂರಿನ ವೈಯಾಲಿಕಾವಲ್ ನಲ್ಲಿರುವಂತ ಪೈಪ್ ಲೈನ್ ರಸ್ತೆಯ ವೀರಣ್ಣ ಭವನದ ಬಳಿಯಲ್ಲಿದ್ದಂತ ಮನೆಯೊಂದರಲ್ಲಿ ಗಂಡನಿಂದ ದೂರವಾಗಿ ಒಬ್ಬಳೇ ವಾಸವಾಗಿದ್ದಂತ 26 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಮೊದಲು ನೆಲಮಂಗಲದಲ್ಲಿ ವಾಸವಾಗಿದ್ದಂತ 26 ವರ್ಷದ ಮಹಿಳೆ ಮಹಾಲಕ್ಷ್ಮಿ ವೈಯಾಲಿಕಾವಲ್ ನಲ್ಲಿನ ಪೈಪ್ ಲೈನ್ ರಸ್ತೆಯ ವೀರಣ್ಣ ಭವನದ ಬಳಿಯಲ್ಲಿನ ನಿವಾಸದಲ್ಲಿ ಪತಿಯಿಂದ ದೂರವಾಗಿ ಒಬ್ಬಳೇ 6 ರಿಂದ 7 ತಿಂಗಳಿಂದ ವಾಸವಾಗಿದ್ದಳು. ಮಲ್ಲೇಶ್ವರಂನ ಮಂತ್ರಿ ಮಾಲ್ ನಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಕಳೆದ ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಲೆ ಮಾಡಿರುವಂತ ಹಂತಕರು, ಪ್ರಿಡ್ಜ್ ನಲ್ಲಿ ಆಕೆಯ ಮೃತ ದೇಹವನ್ನು 30 ಪೀಸ್ ಪೀಸ್ ಮಾಡಿ ತುಂಬಿಟ್ಟು…
ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಅತಿಶಿ ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಪದಗ್ರಹಣ ಮಾಡಿದ್ದಾರೆ. ದೆಹಲಿಯ ರಾಜಭವನ ಕಚೇರಿಯಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಇಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಪ್ರಮಾಣ ವಚನ ಸ್ವೀಕರಿಸಿದರು. https://twitter.com/ANI/status/1837448438306558271 ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಸಂಜೆ 4.30ಕ್ಕೆ ರಾಜ್ ನಿವಾಸದಲ್ಲಿ ಅತಿಶಿ ಮತ್ತು ಅವರ ಮಂತ್ರಿಮಂಡಲಕ್ಕೆ ಪ್ರಮಾಣ ವಚನ ಬೋಧಿಸಿದರು. ಸಿಸೋಡಿಯಾ ಮತ್ತು ಕೇಜ್ರಿವಾಲ್ (ಹಿಂದೂಸ್ತಾನ್ ಟೈಮ್ಸ್) ಬಂಧನದ ಸಮಯದಲ್ಲಿ ಅತಿಶಿ ದೆಹಲಿ ಸರ್ಕಾರದ ಮುಖವಾಗಿ ಹೊರಹೊಮ್ಮಿದ್ದಾರೆ. https://twitter.com/ANI/status/1837448448821678183 ದೆಹಲಿ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜ್ ನಿವಾಸದಲ್ಲಿ ಸ್ವಾಗತಿಸಿದರು. ಹಾಲಿ ಸಚಿವರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿದ್ದು, ದಲಿತ ಶಾಸಕ ಮುಖೇಶ್ ಅಹ್ಲಾವತ್ ಸಂಪುಟದಲ್ಲಿ ಹೊಸ ಮುಖವಾಗಲಿದ್ದಾರೆ. ಇನ್ನೂ…
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮೊದಲ ಬಾರಿಗೆ ಇಂದು ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ಸೋಮವಾರಕ್ಕೆ ಕೋರ್ಟ್ ಮುಂದೂಡಿದೆ. ಇಂದು ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನ್ಯಾಯಮೂರ್ತಿ ಜೈ.ಶಂಕರ್ ಅವರು ವಿಚಾರಣ ನೆಡಸಿದರು. ಎಸ್ ಪಿಪಿಗೆ ನೋಟಿಸ್ ಜಾರಿಗೆ ಕೋರ್ಟ್ ಆದೇಶಿಸಿ, ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಅಂದಹಾಗೇ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಬೆಳಕಿಗೆ ಬಂದ ನಂತ್ರ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರು ಅಲ್ಲಿಂದಲೇ ತಮ್ಮ ಪರ ವಕೀಲ ಸುನೀಲ್ ಮೂಲಕ ಜಾಮೀನಿಗಾಗಿ ಮೊದಲ ಬಾರಿಗೆ ಅರ್ಜಿಯನ್ನು ಸಲ್ಲಿಸಿದ್ದರು. https://kannadanewsnow.com/kannada/bengaluru-in-yet-another-shocking-incident-a-young-woman-was-brutally-murdered/ https://kannadanewsnow.com/kannada/nipah-scare-rises-in-bengaluru-one-person-diagnosed-with-symptoms-41-under-home-quarantine/
ಬೆಂಗಳೂರು: ನಗರದಲ್ಲಿ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾಡರಿಯಲ್ಲೇ ಯುವತಿಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಯುವತಿಯೊಬ್ಬಳನ್ನು ಕೊಲೆಗೈದಿರುವಂತ ದುಷ್ಕರ್ಮಿಗಳು, ಆಕೆಯ ದೇಹವನ್ನು ಪೀಸ್ ಪೀಸ್ ಮಾಡಿ ಪ್ರಿಡ್ಜ್ ನಲ್ಲಿ ಇಟ್ಟಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ವೈಯಾಲಿಕಾವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಹತ್ತರಿಂದ ಹದಿನೈದು ದಿನಗಳ ಹಿಂದೆ ನಡೆದಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 25 ರಿಂದ 26 ವರ್ಷದ ಯುವತಿಯನ್ನು ಕೊಲೆಗೈದಿರುವಂತ ಆರೋಪಿಗಳು, ಪ್ರಿಡ್ಜ್ ನಲ್ಲಿ ದೇಹವನ್ನು ಪೀಸ್ ಪೀಸ್ ಮಾಡಿ ಇಟ್ಟಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ವಯಾಲಿಕಾವಲ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ವೈಯಾಲಿಕಾವಲ್ ಠಾಣೆಯ ಪೊಲೀಸರು, ಆರೋಪಿಗಳ ಪತ್ತೆಗೆ ಮಲೆ ಬೀಸಿದ್ದಾರೆ. https://kannadanewsnow.com/kannada/bengaluru-youth-hacked-to-death-in-tamil-nadu/ https://kannadanewsnow.com/kannada/nipah-scare-rises-in-bengaluru-one-person-diagnosed-with-symptoms-41-under-home-quarantine/
ಬೆಂಗಳೂರು: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಯುವಕನನ್ನು ತಮಿಳುನಾಡಿನಲ್ಲಿ ಬರ್ಬರವಾಗಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಗಣಪತಿ ಇಡುವ ವಿಚಾರಕ್ಕಾಗಿ ಜಗಳ ನಡೆದು, ಯುವಕ ರೇವಂತ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. 2 ದಿನಗಳ ಹಿಂದೆಯೇ ರೇವಂತ್ ಕೊಲೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಕೈಯಲ್ಲಿದ್ದಂತ ಹಚ್ಚೆಯ ಆಧಾರದ ಮೇಲೆ ಕೊಲೆಯಾದಂತ ಯುವಕ ಬೆಂಗಳೂರು ಮೂಲದ ರೇವಂತ್ ಎಂಬುದಾಗಿ ತಮಿಳುನಾಡು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿಗೆ ಬೆಂಗಳೂರಿನಿಂದ ಪರಿಚಯಸ್ಥರೊಬ್ಬರು ತಮ್ಮ ಕಾರಿನಲ್ಲಿ ಯುವಕ ರೇವಂತ್ ಕರೆದೊಯ್ದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. https://kannadanewsnow.com/kannada/nipah-scare-rises-in-bengaluru-one-person-diagnosed-with-symptoms-41-under-home-quarantine/ https://kannadanewsnow.com/kannada/air-marshal-ap-singh-appointed-as-next-chief-of-air-staff-air-marshal-a-p-singh/
ಮಡಿಕೇರಿ :-ಸರ್ಕಾರದ ಮಹತ್ತರ ಯೋಜನೆಯಾದ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕವಾಗಿ ಒಂದು ಬಾರಿಗೆ ರೂ. 5 ಸಾವಿರ ಗಳ ಸಹಾಯಧನವನ್ನು ಸರ್ಕಾರದಿಂದ ಡಿ.ಬಿ.ಟಿ ಮೂಲಕ (ನೇರ ನಗದು ವರ್ಗಾವಣೆ) ನೀಡಲಾಗುತ್ತಿದೆ. 2024-25 ನೇ ಸಾಲಿಗೆ ಸಹಾಯಧನವನ್ನು ಪಡೆಯಲು ಜಿಲ್ಲೆಯ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರು ಹಾಗೂ ನೇಕಾರಿಕೆ ಪೂರಕ ವೃತ್ತಿಯನ್ನು ಅವಲಂಬಿಸಿರುವ ಎಲ್ಲಾ ನೇಕಾರರು ಈ ಯೋಜನೆಯಡಿ ರೂ. 5 ಸಾವಿರ ಗಳ ವಾರ್ಷಿಕ ಒಂದು ಬಾರಿಯ ಸಹಾಯಧನ ಪಡೆಯಲು ಅರ್ಹರಿದ್ದು, ಅರ್ಜಿ ನಮೂನೆಗಳನ್ನು ತಮ್ಮ ನೇಕಾರ ಸಹಕಾರ ಸಂಘಗಳಿಂದ/ ಕಚೇರಿಯಿಂದ ಪಡೆದು ಸಂಘದ ಮೂಲಕ ಸಲ್ಲಿಸಬೇಕಿದೆ. ವೈಯಕ್ತಿಕ ನೇಕಾರರಾಗಿದ್ದಲ್ಲಿ ನೇಕಾರ್ ಸಮ್ಮಾನ್ ಅರ್ಜಿ ನಮೂನೆಗಳನ್ನು ಈ ಕಚೇರಿಯಿಂದ ಪಡೆದು ಸಲ್ಲಿಸಬಹುದಾಗಿದೆ. ಕೈಮಗ್ಗ ನೇಕಾರರಿಂದ ಸಲ್ಲಿಸಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ್ ಸಮ್ಮಾನ್ ಐಡಿ/ ಪೆಹಚಾನ್ ಕಾರ್ಡ್, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಪಾಸ್ಬುಕ್ ಪ್ರತಿ, ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿ…
ಮಡಿಕೇರಿ: ಪ್ರಸಕ್ತ (2024-25) ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕೋರ್ಸ್ಗೆ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೋಮಾ ಕೃಷಿ ದಾಖಲಾತಿಗೆ ಈ ಹಿಂದೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು 14.09.2024 ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ಸೆಪ್ಟೆಂಬರ್, 30 ರವರೆಗೆ ವಿಸ್ತರಿಸಲಾಗಿದೆ. ಅರ್ಜಿಯನ್ನು www.uahs.edu.in ವೈಬ್ಸೈಟ್ ಇಲ್ಲಿ ಎಲ್ಲಾ ಅಧಿಸೂಚನೆಗಳು ಶೀರ್ಷಿಕೆ ಅಡಿಯಲ್ಲಿ ಡೌನ್ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬಹುದಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ, ಕನಿಷ್ಠ ಶೇ.45 (ಕನಿಷ್ಠ ಶೇ. 40 ಪ.ಜಾ. ಮತ್ತು ಪ.ಪಂ./ ಪ್ರವರ್ಗ-1) ಅಂಕಗಳೊಂದಿಗೆ ಉತ್ತೀರ್ಣರಾದ, 19 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ ಇರುತ್ತದೆ. ಈ ಎರಡು ವರ್ಷದ ಡಿಪ್ಲೋಮಾ ಕೋರ್ಸ್ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುವಿಜ್ಞಾನ, ರೇಷ್ಮೆ ಕೃಷಿ, ಜೇನು ಕೃಷಿ ಹೀಗೆ…
ಉತ್ತರ ಕನ್ನಡ: ಜಿಲ್ಲೆಯ ಶಿರೂರು ಬಳಿಯ ಹೆದ್ದಾರಿ 66ರಲ್ಲಿ ಬೆಟ್ಟ ಕುಸಿತ ಉಂಟಾಗಿ, ಕೇರಳ ಮೂಲದ ಅರ್ಜುನ್ ಎಂಬುವರ ಲಾರಿ ನಾಪತ್ತೆಯಾಗಿತ್ತು. ಇಂದು ಲಾರಿಯು ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡು 10 ಮಂದಿ ನಾಪತ್ತೆಯಾಗಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಕೇರಳ ಮೂಲಕ ಅರ್ಜುನ್ ಎಂಬುವರಿಗೆ ಸೇರಿದಂತ ಲಾರಿ ಕೂಡ ನಾಪತ್ತೆಯಾಗಿತ್ತು. ಇಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಗಂಗಾವಳಿ ನದಿಯಲ್ಲಿ ಮುಳುಗಿದ್ದಂತ ಕೇರಳ ಮೂಲದ ಅರ್ಜುನ್ ಎಂಬುವರಿಗೆ ಸೇರಿದಂತೆ ಲಾರಿಯನ್ನು ಪತ್ತೆ ಹಚ್ಚಲಾಗಿದೆ. ಇದೀಗ ಲಾರಿಗೆ ಹಗ್ಗವನ್ನು ಕಟ್ಟಿ, ಮೇಲೆ ಎಳೆಯುವಂತ ಕಾರ್ಯಾಚರಣೆ ನಡೆಯುತ್ತಿದೆ. https://kannadanewsnow.com/kannada/bjp-accuses-congress-of-being-behind-nagamangala-riots/ https://kannadanewsnow.com/kannada/nipah-scare-rises-in-bengaluru-one-person-diagnosed-with-symptoms-41-under-home-quarantine/
ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ನಡೆದಂತ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬುದಾಗಿ ಬಿಜೆಪಿ ಗಂಭೀರ ಆರೋಪ ಮಾಡಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ಕಾಂಗ್ರೆಸ್ ಸರ್ಕಾರದ ತುಷ್ಠೀಕರಣದ ನೀತಿಯಿಂದಾಗಿಯೇ ನಾಗಮಂಗಲದಲ್ಲಿ ಗಲಭೆಯಾಗಿದೆ ಎಂದು ಬಿಜೆಪಿಯ ಸತ್ಯಶೋಧನಾ ಸಮಿತಿ ವರದಿ ನೀಡಿದೆ ಎಂದಿದೆ. ಈ ಗಲಭೆ ಪೂರ್ವನಿಯೋಜಿತವಾಗಿದ್ದು, ಹಿಂದೂ ಸಮುದಾಯದ ಅಂಗಡಿಗಳಿಗೆ ಮಾತ್ರ ಬೆಂಕಿ ಹಚ್ಚಲಾಗಿದೆ. ಕಳೆದ ವರ್ಷವೂ ಇದೇ ರೀತಿ ಗಲಭೆ ನಡೆದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿ, ಗಣೇಶ ಮೂರ್ತಿಯ ವಿಸರ್ಜನೆಗೆ ವಿಘ್ನ ತರಲು ಮುಂದೆ ನಿಂತು ಸಹಕಾರ ನೀಡಿದೆ ಎಂಬುದಾಗಿ ಆರೋಪಿಸಿದೆ. ಹಿಂದೂ ಸಮುದಾಯ ಅಭದ್ರವಾಗಿದ್ದಷ್ಟೂ ತನಗೆ ಲಾಭ ಎಂದು ಅರಿತುಕೊಂಡಿರುವ ಕಾಂಗ್ರೆಸ್ ಸರ್ಕಾರ ಪದೇ ಪದೇ ಹಿಂದೂ ಸಮುದಾಯವನ್ನು ಅವಮಾನಿಸುತ್ತಿದೆ ಎಂಬುದಾಗಿ ಕಿಡಿಕಾರಿದೆ. https://twitter.com/BJP4Karnataka/status/1837379965106409835 https://kannadanewsnow.com/kannada/decision-to-conduct-prasadam-testing-in-all-temples-in-the-state-minister-ramalinga-reddy/ https://kannadanewsnow.com/kannada/nipah-scare-rises-in-bengaluru-one-person-diagnosed-with-symptoms-41-under-home-quarantine/