Author: kannadanewsnow09

ಬೆಂಗಳೂರು: ಶಬರಿಮಲೆಗೆ ತೆರಳುವಂತೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು ಟು ನೀಲಕ್ಕರ್ ನಡುವೆ ಕೆ ಎಸ್ ಆರ್ ಟಿಸಿ ವೋಲ್ವೋ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ KSRTC ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರು/ಭಕ್ತಾಧಿಗಳ ಅನುಕೂಲಕ್ಕಾಗಿ ದಿನಾಂಕ 29/11/2024 ರಿಂದ ಹೊಸದಾಗಿ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ವೋಲ್ವೋ ವಾಹನವನ್ನು ಈ ಕೆಳಕಂಡ  ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುವುದು ಎಂದಿದೆ. ವೇಳಾ ಪಟ್ಟಿ ಮತ್ತು ಪ್ರಯಾಣದ ದರದ ವಿವರಗಳು ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೈ) ನಡುವೆ ವೋಲ್ವೋ ಬಸ್ ಸಂಚಾರ ಮಾರ್ಗ ಪ್ರಾರಂಭಿಕ ದಿನಾಂಕ ಪ್ರಯಾಣ ದರ ವಯಸ್ಕರು ರೂ.  ಪೈಸೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡುವ ಸಮಯ ನೀಲಕ್ಕಲ್ (ಪಂಪಾ-ಶಬರಿಮಲೈ) ತಲುಪುವ ಸಮಯ ನೀಲಕ್ಕಲ್  (ಪಂಪಾ-ಶಬರಿಮಲೈ) ಹೊರಡುವ ಸಮಯ ಬೆಂಗಳೂರು ತಲುಪುವ ಸಮಯ ಬೆಂಗಳೂರು-ನೀಲಕ್ಕಲ್     (ಪಂಪಾ -ಶಬರಿಮಲೈ) 29/11/2024 1750=00 13:50 06:45 18:00 10:00…

Read More

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಇ-ಸ್ವತ್ತು ಮಂಜೂರಾತಿ ಪ್ರಕ್ರಿಯೆಯನ್ನು ಸರಳೀಕರಣ ಹಾಗೂ ಸಬಲೀಕರಣಗೊಳಿಸುವ ಸಲುವಾಗಿ ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಕಾರ್ಯಪಡೆಯೊಂದನ್ನು ರಚಿಸುವದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಇ-ಖಾತ ಸಂಬಂಧದಲ್ಲಿ ನಾಳೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಗ್ರಾಮಠಾಣ ವ್ಯಾಪ್ತಿಯ ಹೊರ ಭಾಗದ ಬಹಳಷ್ಟು ಪ್ರದೇಶಗಳಲ್ಲಿ ಶಾಲೆಗಳು, ಉದ್ದಿಮೆಗಳು ಹಾಗೂ ವಸತಿ ಸಮುಚ್ಛಯಗಳು ನಿರ್ಮಾಣಗೊಂಡಿದ್ಗು, ಬಹುಪಾಲು ಆಸ್ತಿಗಳು ಗ್ರಾಮ ಪಂಚಾಯತಿ ತೆರಿಗೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಗ್ರಾಮ ಪಂಚಾಯತಿಗಳ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನಡೆ ಉಂಟಾಗಿದೆ ಎಂದು ಸಚಿವರು ಹೇಳಿದರು. ಗ್ರಾಮ ಪಂಚಾಯತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಸಬಲೀಕರಣ ಹಾಗೂ ನಾಗರಿಕರಿಗೆ ಇ-ಸ್ವತ್ತು ದಾಖಲೆ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇರುವುದರಿಂದ ಸಮಸ್ಯೆಗಳನ್ನು ಬಗಹರಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಕಾರ್ಯಪಡೆಯನ್ನು ರಚಿಸಲಾಗುವುದು…

Read More

ಚೀನಾ: ದೇಶದಲ್ಲಿ ಕಾರೊಂದರ ಚಾಲಕನ ಹಿಟ್ ಅಂಡ್ ರನ್ ಗೆ 35 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ 43ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ಕಾರಣವಾದಂತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚೀನಾದ ದಕ್ಷಿಣ ನಗರ ಝುಹೈನ ಕ್ರೀಡಾ ಕೇಂದ್ರದ ಹೊರಗೆ ಸೋಮವಾರ ಸಂಜೆ ಕಾರು ಜನರ ಗುಂಪಿನ ಮೇಲೆ ಹರಿದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ ಮತ್ತು 43 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ದೂರದರ್ಶನ ಸಿಸಿಟಿವಿ ಮಂಗಳವಾರ ವರದಿ ಮಾಡಿದೆ. ಶಂಕಿತ, 62 ವರ್ಷದ ವಿಚ್ಛೇದಿತ ಪುರುಷ, ಜನಸಮೂಹದ ಮೇಲೆ ಕಾರನ್ನು ಓಡಿಸಿದನು. ಘಟನಾ ಸ್ಥಳದಲ್ಲಿ ಪೊಲೀಸರು ಆತನನ್ನು ನಿಯಂತ್ರಿಸಿದಾಗ ಶಂಕಿತನು ಚಾಕುವಿನಿಂದ ಸ್ವಯಂ ಹಾನಿ ಮಾಡಲು ಪ್ರಯತ್ನಿಸುತ್ತಿದ್ದನು. ಶಂಕಿತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಝುಹೈ ಪೊಲೀಸರು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚೀನಾದ ದಕ್ಷಿಣ ನಗರ ಝುಹೈನ ಕ್ರೀಡಾ ಕೇಂದ್ರದ ಹೊರಗೆ ನೆರೆದಿದ್ದ ಜನರ ಮೇಲೆ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಕನಿಷ್ಠ…

Read More

ಚೀನಾ: ಇಲ್ಲಿನ ಕ್ರೀಡಾ ಕೇಂದ್ರದ ಹೊರಗಡೆ ಇಂದು ಕಾರೊಂದು ಜನರ ಗುಂಪಿನ ಮೇಲೆ ಹರಿದ ಪರಿಣಾಮ 35 ಮಂದಿ ಸಾವನ್ನಪ್ಪಿ, 43ಕ್ಕೂ ಹೆಚ್ಚು ಜನರು ಗಾಯಗೊಂಡಿರುವಂತ ಘಟನೆ ನಡೆದಿದೆ. ಚೀನಾದ ದಕ್ಷಿಣ ನಗರ ಝುಹೈನ ಕ್ರೀಡಾ ಕೇಂದ್ರದ ಹೊರಗೆ ಸೋಮವಾರ ಸಂಜೆ ಕಾರು ಜನರ ಗುಂಪಿನ ಮೇಲೆ ಹರಿದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ ಮತ್ತು 43 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ದೂರದರ್ಶನ ಸಿಸಿಟಿವಿ ಮಂಗಳವಾರ ವರದಿ ಮಾಡಿದೆ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಗಾಯಗೊಂಡ ಸಹ ನಾಗರಿಕರಿಗೆ ಸಹಾಯ ಮಾಡುವಂತೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜನರನ್ನು ಒತ್ತಾಯಿಸಿದರು ಎಂದು ಚೀನಾದ ರಾಜ್ಯ ಮಾಧ್ಯಮ ವರದಿ ಮಾಡಿದೆ. ಒಟ್ಟಾರೆಯಾಗಿ ಚೀನಾದ ದಕ್ಷಿಣ ನಗರ ಝುಹೈನ ಕ್ರೀಡಾ ಕೇಂದ್ರದ ಹೊರಗೆ ನೆರೆದಿದ್ದ ಜನರ ಮೇಲೆ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 43 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಟೆಲಿವಿಷನ್ ಸಿಸಿಟಿವಿ ವರದಿ ಮಾಡಿದೆ.…

Read More

ತುಳಸಿ ವಿವಾಹವನ್ನು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಮಾಸದಲ್ಲಿ ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ತುಳಸಿ ವಿವಾಹದಲ್ಲಿ, ತುಳಸಿ ಸಸ್ಯದ ಮದುವೆಯನ್ನು ವಿಷ್ಣುವಿನ ಶಾಲಿಗ್ರಾಮ್ ರೂಪದೊಂದಿಗೆ ನಡೆಸಲಾಗುತ್ತದೆ. ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ಮಗಳನ್ನು ಮದುವೆಯಲ್ಲಿ ನೀಡುವಷ್ಟೇ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ವರ್ಷ ತುಳಸಿ ವಿವಾಹ ಯಾವಾಗ ನಡೆಯುತ್ತದೆ, ಶುಭ ಸಮಯ, ಪೂಜಾ ವಿಧಾನ ಮತ್ತು ಸಾಮಗ್ರಿಗಳನ್ನು ಕಂಡುಹಿಡಿಯೋಣ. ತುಳಸಿ ವಿವಾಹ ಯಾವಾಗ? ಪಂಚಾಂಗದ ಪ್ರಕಾರ, ನವೆಂಬರ್ 13 ರಂದು ಬರುವ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹ ಪೂಜೆಯನ್ನು ನಡೆಸಲಾಗುತ್ತದೆ. ದ್ವಾದಶಿ ತಿಥಿ ನವೆಂಬರ್ 12 ರಂದು ಸಂಜೆ 04:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 13 ರಂದು ಮಧ್ಯಾಹ್ನ 01:01 ಕ್ಕೆ ಕೊನೆಗೊಳ್ಳುತ್ತದೆ. ತುಳಸಿ ವಿವಾಹ ಆಚರಣೆ: ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬ್ರಹ್ಮ ಮುಹೂರ್ತದಲ್ಲಿ ಸ್ನಾನ…

Read More

ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ -2ರ ಘಟಕ 5 ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ನ.14 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಆರ್.ಎಂ.ಎಲ್.ನಗರ, ಮಂಡ್ಲಿ ವೃತ್ತ, ಬೈಪಾಸ್, ಎನ್.ಟಿ.ರಸ್ತೆ, ಮರ‍್ನಮಿಬೈಲು, ಜೆ.ಸಿ.ನಗರ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಪಿಯರ್‌ಲೈಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಮೈಸೂರು ಕಿಸಾನ್ ಮಾಲ್ ಸ್ಥಾಪಿಸಲು ಅರ್ಜಿ ಆಹ್ವಾನ ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಗಾಂಧಿಪಾರ್ಕ್ನಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೈಸೂರು ಕಿಸಾನ್ ಮಾಲ್ ಸ್ಥಾಪಿಸಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳಿಂದ ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ರೈತ ಉತ್ಪಾದಕ ಸಂಸ್ಥೆಗಳು ನ.27ರೊಳಗಾಗಿ ಕ.ಪ.ಪ್ರೊ.ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9902546944 ನ್ನು ಸಂಪರ್ಕಿಸುವುದು. https://kannadanewsnow.com/kannada/good-news-for-sslc-puc-science-students-applications-invited-for-this-free-job-oriented-training/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ವಿಶೇಷ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ( CMKKY) ಯೋಜನೆಯಡಿ ನ್ಯೂಬರ್ಗ್ ಆನಂದ್ ಅಕಾಡೆಮಿ ಅಫ್ ಲ್ಯಾಬೋರೇಟರಿ ಮೆಡಿಸಿನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ಬಯಸುವ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ. ಉದ್ಯೋಗ ಆಧಾರಿತ ತರಬೇತಿಯಾದಂತ ಪ್ಲೆಬೋಟೊಮಿಸ್ಟ್ ತರಬೇತಿಯನ್ನು 6 ತಿಂಗಳುಗಳ ಕಾಲ ಎಸ್ ಎಸ್ ಎಲ್ ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಡಯೊಗ್ನೋಸ್ಟಿಕ್ಸ್ ನಲ್ಲಿ ಸಹಾಯಕ ಗುಣಮಟ್ಟ ನಿರ್ವಾಹಕ ತರಬೇತಿಯನ್ನು 2 ತಿಂಗಳವರೆಗೆ ನೀಡಲಾಗುತ್ತದೆ. ರೋಗ ನಿರ್ಣಯ ಕೇಂದ್ರಗಳಲ್ಲಿ ಗುಣಮಟ್ಟ ಪ್ರಕ್ರಿಯೆಗಳನ್ನು ನಿರ್ವಹಿಸಲು ಕೌಶಲ್ಯವನ್ನು ಪಡೆಯಬಹುದಾಗಿದೆ. ಇದಕ್ಕೆ ಪಿಯುಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾಗಿರಬೇಕು. ತರಬೇತಿ ಮಾತ್ರವೇ…

Read More

ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಬಸ್ ಲಾರಿಯೊಂದಕ್ಕೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಚಿಕ್ಕಜೇನಿಯ ಬಳಿಯಲ್ಲಿ ಖಾಸಗಿ ಬಸ್ ಆದಂತ ದುರ್ಗಾಂಬ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದಂತ ದುರ್ಗಾಂಬ ಬಸ್, ಹೊಸನಗರದಿಂದ ಭತ್ತ ಕಟಾವು ಯಂತ್ರವನ್ನು ಕೊಂಡೊಯ್ಯುತ್ತಿದ್ದಂತ ಲಾರಿಗೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಬಸ್ ಪಲ್ಟಿಯಾದಂತ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ರಿಪ್ಪನ್ ಪೇಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/minister-zameer-ahmed-apologises-for-calling-kumaraswamy-kariyanna/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/

Read More

ಮೈಸೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸಚಿವ ಜಮೀರ್ ಅಹ್ಮದ್ ವಿರುದ್ಧ ಮುಗಿ ಬಿದ್ದಿದ್ದರು. ಅಲ್ಲದೇ ಜನಾಂಗೀಯ ನಿಂದನೆಯ ಹೇಳಿಕೆ ನೀಡಿದ್ದಂತ ಜಮೀರ್ ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಅವರು, ನಾನು ಮೊದಲಿನಿಂದಲೇ ಕರಿಯಣ್ಣ ಅಂತಾನೇ ಕರೆಯೋದು. ಇದಕ್ಕೆ ನೋವಾಗಿದ್ದರೇ ಕ್ಷಮೆ ಕೇಳುವೆ ಎಂದಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾನು ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮೊದಲಿನಿಂದಲೂ ಕುಮಾರಣ್ಣ ಅಂತಾನೇ ಕರೆಯೋದು. ಅವರು ನನ್ನ ಕುಳ್ಳ ಅಂತ ಕರೆಯುತ್ತಾರೆ. ಆ ಕಾರಣದಿಂದಲೇ ನಾನು ಕರಿಯಣ್ಣ ಅಂತ ಕುಮಾರಸ್ವಾಮಿ ಕರೆದಿದ್ದು ಎಂಬುದಾಗಿ ಸ್ಪಷ್ಟ ಪಡಿಸಿದರು. ಜೆಡಿಎಸ್ ಮುಖಂಡರಿಗೆ ನಾನು ಕುಮಾರಸ್ವಾಮಿ ಅವರನ್ನು ಕರಿಯಣ್ಣ ಅಂತ ಕರೆದಿದ್ದರಿಂದ ನೋವಾಗಿದೆ ಎಂಬುದಾಗಿ ತಿಳಿದು ಬಂದಿದೆ. ನನ್ನ ಕರಿಯಣ್ಣ ಹೇಳಿಕೆಯಿಂದ ನೋವಾಗಿದ್ದರೇ ದಯವಿಟ್ಟು ಕ್ಷಮಿಸಿ ಎಂಬುದಾಗಿ ಕ್ಷಮೆಯನ್ನು ಕೋರಿದರು. https://kannadanewsnow.com/kannada/yoga-guru-sharath-jois-passes-away-in-us-due-to-cardiac-arrest/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/

Read More

ಮೈಸೂರು: ಅಮೇರಿಕಾದಲ್ಲಿ ಮೈಸೂರಿನ ಅಷ್ಟಾಂಗ ಯೋಗ ಗುರುವಾಗಿದ್ದಂತ ಶರತ್ ಜೋಯಿಸ್ (53) ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅಮೇರಿಕಾದ ವರ್ಜೇನಿಯದಲ್ಲಿ ನೆಲೆಸಿದ್ದಂತ ಅಷ್ಟಾಂಗ ಯೋಗ ಗುರು ಶರತ್ ಜೋಯಿಸ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಯೋಗ ಗುರು ಪಟ್ಟಾಭಿ ಜೋಯಿಸ್ ಅವರ ಮೊಮ್ಮಗರಾಗಿದ್ದಂತ ಶರತ್ ಅವರು, ಗೋಕುಲಂ ನಿವಾಸಿಯಾಗಿದ್ದರು. ದೇಶ ವಿದೇಶಗಳಲ್ಲಿ ಯೋಗವನ್ನು ಕಲಿಸಿಕೊಡುತ್ತಿದ್ದರು. ಇಂತಹ ಸದ್ಯ ವರ್ಜೇನಿಯಾದಲ್ಲಿ ನೆಲೆಸಿದ್ದಂತ ಅವರು ಇನ್ನಿಲ್ಲವಾಗಿದ್ದಾರೆ. https://kannadanewsnow.com/kannada/good-news-for-pensioners-digital-life-certificate-submission-system-introduced-at-doorstep/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/

Read More