Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಎಲ್ಲಾ ಪ್ರೌಢ ಶಾಲೆಗಳಿಗೆ ಇಂಟರ್ನೆಟ್ ಒದಗಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 200 ಕೋಟಿ ರೂ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಶಿಗ್ಗಾಂವಿ, ಹಾನಗಲ್, ಕುಂದಗೋಳದಲ್ಲಿ ಹಳ್ಳ ಹರಿಯುತ್ತದೆ. ಇದನ್ನ ನಿಯಂತ್ರಿಸುವುದಕ್ಕೆ ನೂತನ ಯೋಜನೆಗೆ ಅನುಮತಿಸಲಾಗಿದೆ. ನೀರು ಸದ್ಬಳಕೆ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. 16 ಟಿಎಂಸಿ ನೀರು ಇದರಲ್ಲಿ ವ್ಯರ್ಥವಾಗುತ್ತದೆ. ರೈತರ ದೃಷ್ಟಿಯಿಂದ ಈ ಯೋಜನೆ ತರಲಾಗುತ್ತಿದೆ. ಪ್ರೌಢಶಾಲೆಗಳಲ್ಲಿ ಇಂಟರ್ ನೆಟ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 74 ಆದರ್ಶ ವಿದ್ಯಾಲಯಗಳ ಮೇಲ್ದರ್ಜೆಗೇರಿಕೆಗೆ ಸಮ್ಮತಿ ನೀಡಲಾಗಿದೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿವಿಲ್ ಸರ್ವೀಸ್ ಕೋಡ್ ಮಾಡಬೇಕು. ಹೈಕೋರ್ಟ್ ಇದನ್ನಹೇಳಿತ್ತು. ಸಿವಿಲ್ ಸರ್ವೀಸ್ ಕೋಡ್ ಬೇಕೇ ಬೇಡವೇ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಸಚಿವ ಸಂಪುಟ ಉಪ ಸಮಿತಿ…
ಬೆಂಗಳೂರು: ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಪುಟದ ನಿರ್ಧಾರಗಳನ್ನು ಮಾಧ್ಯಮದವರಿಗೆ ತಿಳಿಸಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದೆ. ಕೇಂದ್ರಕ್ಕೆ ಇದನ್ನೇ ರೆಫರ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹಿಂದೆಯೂ ಇದೇ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದರು. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಾಗಿದೆ. ಎಂಎಲ್ ಸಿ ಬೈ ಎಲೆಕ್ಷನ್ ಗೆ ಸಮ್ಮತಿ ನೀಡಲಾಗಿದೆ. ಮೇಲ್ಮನೆಯ ಎರಡು ಸ್ಥಾನಗಳಿಗೆ ನಾಮಕರಣ ಮಾಡಲಾಗುತ್ತಿದೆ. ಆಯ್ಕೆ ಮಾಡುವ ಅಧಿಕಾರ ಸಿಎಂಗೆ ನೀಡಿಕೆ ಮಾಡಲಾಗಿದೆ ಎಂದರು. ಬೆಂಗಳೂರು ವಿವಿ ಅಭಿವೃದ್ಧಿಗೆ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಐಐಟಿ ಮಾದರಿಯಲ್ಲಿ ನಿರ್ಮಿಸಲು ಅನುದಾನ ನೀಡಲಾಗುತ್ತಿದೆ. 530 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಸಿಖ್ ಸಮುದಾಯ ವಿವಾಹ ನೊಂದಣಿಗೆ ತಿದ್ದುಪಡಿ ತರಲಾಗುತ್ತಿದೆ.…
ಶಿವಮೊಗ್ಗ: ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿಶ್ವವಿದ್ಯಾಲಯದ ಬೋಧಕ – ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ನಡುವೆ ಭ್ರಾತೃತ್ವ, ಸಾಮರ್ಥ್ಯ ಮತ್ತು ಉತ್ಪಾದಕತೆಗಳು ವೃದ್ಧಿಸಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು. ವಿಶ್ವವಿದ್ಯಾಲಯದ ಪಠ್ಯೇತರ ಚಟುವಟಿಕೆ ಘಟಕದ ವತಿಯಿಂದ ಮೂರು ದಿನಗಳ ಕಾಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು “ಸಹ್ಯಾದ್ರಿ ಸಡಗರ” ಉತ್ಸವದ ಅಡಿ ಸೇ. 26-28ರವರೆಗೆ ವಿವಿಯಲ್ಲಿ ಆಯೋಜಿಸಲಾಗಿದೆ. ಜಾಥಾದೊಂದಿಗೆ ಹೆಜ್ಜೆಹಾಕುವ ಮೂಲಕ ಕುಲಪತಿಗಳು ಚಾಲನೆ ನೀಡಿ ಮಾತನಾಡಿದರು. ವಿಶ್ವವಿದ್ಯಾಲಯವು ಉನ್ನತ ಮಟ್ಟದ ಸಂಸ್ಥೆಯಾಗಿದ್ದು ಇಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಸಹ್ಯಾದ್ರಿ ಸಡಗರದ ಮೂಲಕ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನಡುವೆ ಭ್ರಾತೃತ್ವ ಬೆಸೆಯುವ, ಬೆಳೆಸುವ ವೇದಿಕೆ ಒದಗಿಸಲಾಗಿದೆ. ಒಟ್ಟಿಗೆ ಕೆಲಸ ಮಾಡುವ ಮೂಲಕ ವಿವಿಯನ್ನು ಎತ್ತರಕ್ಕೆ ಕೊಂಡೊಯ್ಯಲಾಗುವುದು ಎಂದರು. ಈ ಸಂದರ್ಭದಲ್ಲಿ ವಿವಿಯ ಆಡಳಿತಂಗ ಕುಲಸಚಿವ ಎ ಎಲ್ ಮಂಜುನಾಥ್ ಮತ್ತು ಪರೀಕ್ಷಾಂಗ ಕುಲಸಚಿವ ಪ್ರೊಫೆಸರ್ ಎಸ್ ಎಂ…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದಂತ ಮುಕ್ತ ಅವಕಾಶವನ್ನು ಹಿಂಪಡೆಯುವುದು ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಾಗಾದ್ರೇ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದಿನ ಸಂಪುಟ ಸಭೆಯಲ್ಲಿ 25 ವಿಷಯಗಳ ಬಗ್ಗೆ ಇಂದು ಚರ್ಚೆಯಾಗಿದೆ. ಎರಡು ಹೊರತುಪಡಿಸಿ ಉಳಿದೆಲ್ಲದಕ್ಕೆ ಅನುಮತಿ ನೀಡಲಾಗಿದೆ. ಮಹತ್ವದ ವಿಷಯವನ್ನ ಚರ್ಚೆ ಮಾಡಿದ್ದೇವೆ ಎಂದರು. ರಾಜ್ಯಪಾಲರು ಮೇಲ್ಮೇಲೆ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಕಳಿಸಿ,ನಾಳೆ ಕಳಿಸಿ ಅಂತ ಸೂಚಿಸ್ತಿದ್ದಾರೆ. ಎಲ್ಲಾ ನಿಯಮಗಳನ್ನಪರಿಶೀಲಿಸಿದ್ದೇವೆ. ಯಾವುದೇ ಮಾಹಿತಿ ನೀಡುವ ಮುನ್ನ ಪರಿಶೀಲನೆ ಅಗತ್ಯವಿದೆ. ಕ್ಯಾಬಿನೆಟ್ ಒಪ್ಪಿಗೆ ಪಡೆದು ಕಳಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇವೆ. ಇದನ್ನ ಕ್ಯಾಬಿನೆಟ್ ನಲ್ಲಿ ಸಮ್ಮತಿ ನೀಡಿದ್ದೇವೆ. ಒಪ್ಪಿಗೆ ಇಲ್ಲದೆ ಯಾವುದೇ ಪತ್ರ…
ನವದೆಹಲಿ: ಜನಪ್ರಿಯ ಕಂಟೆಂಟ್ ಕ್ರಿಯೇಟರ್ ರಣವೀರ್ ಅಲ್ಲಾಬಾಡಿಯಾ ಅವರ ಬಿಯರ್ ಬೈಸೆಪ್ಸ್ ಸೇರಿದಂತೆ ಅವರ ಎರಡು ಯೂಟ್ಯೂಬ್ ಚಾನೆಲ್ಗಳನ್ನು ಹ್ಯಾಕ್ ಮಾಡಿ ‘ಟೆಸ್ಲಾ’ ಎಂದು ಮರುನಾಮಕರಣ ಮಾಡಲಾಗಿದೆ. ಅಲ್ಲದೇ ಅದರಲ್ಲಿದ್ದಂತ ವೀಡಿಯೋಗಳನ್ನು ಡಿಲೀಟ್ ಕೂಡ ಮಾಡಲಾಗಿದೆ. ಭಾರತೀಯ ಸುಪ್ರೀಂ ಕೋರ್ಟ್ನ ಯೂಟ್ಯೂಬ್ ಚಾನೆಲ್ ಅನ್ನು ಇತ್ತೀಚೆಗೆ ಹ್ಯಾಕ್ ಮಾಡಿದ ನಂತರ ಈ ಘಟನೆ ನಡೆದಿದೆ. ರಣವೀರ್ ಅವರ ಚಾನೆಲ್ಗಳಲ್ಲಿ ಒಂದಾದ ಬೀರ್ ಬೈಸೆಪ್ಸ್ ಅನ್ನು “@Elon.ಟ್ರಂಪ್.ಟೆಸ್ಲಾ_ಲೈವ್ 2024” ಎಂದು ಮರುನಾಮಕರಣ ಮಾಡಲಾಗಿದೆ. ಅವರ ವೈಯಕ್ತಿಕ ಚಾನೆಲ್ ಅನ್ನು “@Tesla.ಈವೆಂಟ್.ಟ್ರಂಪ್_2024” ಎಂದು ಮರುನಾಮಕರಣ ಮಾಡಲಾಗಿದೆ. ಎರಡೂ ಚಾನೆಲ್ಗಳಲ್ಲಿ, ಎಲ್ಲಾ ಪಾಡ್ಕಾಸ್ಟ್ಗಳು ಮತ್ತು ಸಂದರ್ಶನಗಳನ್ನು ಹ್ಯಾಕರ್ಗಳು ತೆಗೆದುಹಾಕಿದರು ಮತ್ತು ಡೊನಾಲ್ಡ್ ಟ್ರಂಪ್ ಮತ್ತು ಎಲೋನ್ ಮಸ್ಕ್ ಅವರ ಘಟನೆಗಳ ಹಳೆಯ ಫೀಡ್ಗಳನ್ನು ಅವುಗಳ ಸ್ಥಾನದಲ್ಲಿ ಪ್ರಕಟಿಸಲಾಯಿತು. ತಮ್ಮ ಮೊದಲ ಯೂಟ್ಯೂಬ್ ಚಾನೆಲ್ ಬೀರ್ ಬೈಸೆಪ್ಸ್ನೊಂದಿಗೆ, ಅವರು ತಮ್ಮ 22 ನೇ ವಯಸ್ಸಿನಲ್ಲಿ ವೀಡಿಯೊ ರಚನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪ್ರಸ್ತುತ ಸುಮಾರು ಏಳು…
ಬೆಂಗಳೂರು: ನಗರದಲ್ಲಿ ವಾಣಿಜ್ಯ ಕಟ್ಟಡದ ತೆರಿಗೆ ಮೊತ್ತ ಕಡಿಮೆ ಮಾಡೋ ಸಂಬಂಧ ಮಾಲೀಕರಿಂದ 4.50 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಬಿಬಿಎಂಪಿಯ ಎಆರ್ ಓ ರಾಜೇಂದ್ರ ಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಎಂಬುವರೇ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಂತ ಅಧಿಕಾರಿಗಳಾಗಿದ್ದಾರೆ. ಈ ಇಬ್ಬರು ಅಧಿಕಾರಿಗಳು ವಾಣಿಜ್ಯ ಕಟ್ಟಡವೊಂದರ ತೆರಿಗೆ ಕಡಿಮೆ ಮಾಡುವ ಸಂಬಂಧ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮೊದಲ ಕಂತಿನಲ್ಲಿ 4.50 ಲಕ್ಷ ಹಣ ಪಡೆಯುತ್ತಿದ್ದಾಗ ಲಂಚದ ಹಣ ಸಹಿತ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ. ಈ ಸಂಬಂಧ ಬಿಬಿಎಂಪಿಯ ಎ ಆರ್ ಓ ರಾಜೇಂದ್ರ ಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಅವರನ್ನು ಬಂಧಿಸಿರುವಂತ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. https://kannadanewsnow.com/kannada/state-cabinet-to-take-decision-to-withdraw-cbis-open-permission-notification/ https://kannadanewsnow.com/kannada/former-tn-minister-senthil-balaji-granted-bail-by-sc-in-money-laundering-case/ https://kannadanewsnow.com/kannada/good-news-for-rural-journalists-state-govt-orders-distribution-of-free-bus-passes/
ಮಂಡ್ಯ : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಹೈಕೋರ್ಟ್ ತೀರ್ಪು ‘ಪೋಲಿಟಿಕಲ್ ಜಡ್ಜ್ ಮೆಂಟ್’ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ ಆಕ್ರೋಶ ವ್ಯಕ್ತಪಡಿಸಿದರು. ಮದ್ದೂರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಮುಡಾ ಹಗರಣ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದು ತನಿಖೆಗೆ ಆದೇಶಿಸಿದೆ. ಸಂವಿಧಾನಕ್ಕೆ ಅಪಮಾನ ಮಾಡಿದರೆ ಸಹಿಸಲ್ಲ, ನ್ಯಾಯಾಲಯದ ಬಗ್ಗೆ ಮಾತನಾಡುವಾಗ ಜಮೀರ್ ಗೆ ಮಾತಿನ ಮೇಲೆ ನಿಗಾ ಇರಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡಿದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನ್ಯಾಯಾಂಗ ವ್ಯವಸ್ಥೆಯ ತೀರ್ಪು ಅಂತಿಮವಾದ್ದದ್ದು. ಅದರ ವಿರುದ್ಧ ಹೇಳಿಕೆ ನೀಡುವುದು, ತೀರ್ಪಿನ ಕುರಿತು ಬಹಿರಂಗವಾಗಿ ಮಾತನಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಒಂದು ವೇಳೆ ತೀರ್ಪು ನಿಮಗೆ ಸಮಂಜಸವಾಗದಿದ್ದಲ್ಲಿ, ಸಮಾಧಾನ ತರದಿದ್ದಲ್ಲಿ ನೀವು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ಹೊರತುಪಡಿಸಿ…
ಬೆಂಗಳೂರು: ಮುಡಾ ಹಗರಣ ಆರೋಪ ಎದುರಿಸುತ್ತಿರುವಂತ ಸಿಎಂ ಸಿದ್ಧರಾಮಯ್ಯ ಅವರು ಬೀಸೋ ದೊಣ್ಣೆಯ ಏಟಿನಿಂದ ತಪ್ಪಿಸಿಕೊಳ್ಳುವ ಹಾಗೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದೇ ಸಿಬಿಐ ಮುಕ್ತ ಅನುಮತಿ ಅಧಿಸೂಚನೆ ವಾಪಾಸ್ಸಿಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸಂಪುಟದ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಕಾನೂನ ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದರು. ಮೂಡ ಪ್ರಕರಣದಲ್ಲಿಸರ್ಕಾರದ ರಕ್ಷಣಾ ನಡೆ ಎನ್ನುವಂತೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ತನಿಖೆ ಭೀತಿಯಿಂದ ರಕ್ಣಣೆಗೆ ಸಂಪುಟ ಮುಂದಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಕಾನೂನು ಸಂಕಷ್ಟದಿಂದ ರಕ್ಷಣೆ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಸಿಬಿಐ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ಸಿಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ಮುಕ್ತ ಅನುಮತಿ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಎಂಟ್ರಿಗೆ ಅವಕಾಶ ನೀಡಲಾಗಿತ್ತು. ನೇರವಾಗಿ ತನಿಖೆ ನಡೆಸಲು…
ಬೆಂಗಳೂರು: ಈ ಹಿಂದೆ ಸಿಬಿಐಗೆ ರಾಜ್ಯದಲ್ಲಿನ ಅಪರಾಧಗಳ ತನಿಖೆಯನ್ನು ಮುಕ್ತವಾಗಿ ನಡೆಸಲು ಅವಕಾಶ ನೀಡಲಾಗಿತ್ತು. ಈಗ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಹೊರ ಬರುತ್ತಿದ್ದಂತೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಬಿಐಗೆ ನೀಡಿದ್ದಂತ ಮುಕ್ತ ಅವಕಾಶವನ್ನು ಹಾಲಿ ಕಾಂಗ್ರೆಸ್ ಸರ್ಕಾರ ಹಿಂಪಡೆಯಲು ಮಹತ್ವದ ನಿರ್ಧಾರವನ್ನು ಇಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಈ ಹಿಂದೆ ರಾಜ್ಯದಲ್ಲಿನ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶವನ್ನು ನೀಡಿ, ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು ಹಿಂಪಡೆಯಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದರು. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್ಪಿಇ) ಕಾಯ್ದೆ, 1946 ರ ಸೆಕ್ಷನ್ 6 ರ ಪ್ರಕಾರ, ಸಿಬಿಐ ತನಿಖೆ ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕು ಎಂದರು. ಭ್ರಷ್ಟಾಚಾರ ತಡೆ ಕಾಯ್ದೆಯ…
ಬಿಹಾರ: ‘ಜೀವಿಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಬಿಹಾರದ 15 ಜಿಲ್ಲೆಗಳ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 43 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಕಾಣೆಯಾಗಿದ್ದಾರೆ. ಹಬ್ಬದ ಆಚರಣೆಯ ಸಮಯದಲ್ಲಿ ಮುಳುಗಿ ಸಾವನ್ನಪ್ಪಿದ 37 ಮಕ್ಕಳು ಸೇರಿದಂತೆ ಸಾವುನೋವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ‘ಜೀವಿಪುತ್ರಿಕಾ’ ಹಬ್ಬದ ಸಮಯದಲ್ಲಿ, ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತ ಪದ್ಧತಿಯಾಗಿದೆ. ಇದೀಗ ಬಿಹಾರದಲ್ಲಿ ಪವಿತ್ರ ಗಂಗಾ ಸ್ನಾನದ ವೇಳೆಯಲ್ಲಿ ಘೋರ ದುರಂತವೇ ನಡೆದು 37 ಮಕ್ಕಳು ಸೇರಿದಂತೆ 43 ಮಂದಿ ಜಲಸಮಾಧಿಯಾಗಿದ್ದಾರೆ. https://kannadanewsnow.com/kannada/mysuru-police-have-detained-a-drone-that-flew-during-a-gun-toting-drill/ https://kannadanewsnow.com/kannada/former-tn-minister-senthil-balaji-granted-bail-by-sc-in-money-laundering-case/