Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ನವೆಂಬರ್.7ರಂದು ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ. ಈ ಕುರಿತು ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರದ ಗಾಂಧಿಬಜಾರ್, ಬರಮಪ್ಪನಗರ, ಎಂ.ಕೆ.ಕೆ. ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಗಾಂಧೀಬಜಾರ್, ಸೊಪ್ಪಿನ ಮಾರ್ಕೇಟ್, ಕೆ.ಆರ್.ಪುರಂ, ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪಕೇರಿ, ತಿರುಪಳಯ್ಯನಕೇರಿ, ಸಾವರ್ಕರ್ ನಗರ ಕರೆಂಟ್ ಇರೋದಿಲ್ಲ. ಅಶೋಕ ರಸ್ತೆ, ಕೋಟೆರಸ್ತೆ, ಎಸ್.ಪಿ.ಎಂ.ರಸ್ತೆ, ರಾಮಣ್ಣಶ್ರೇಷ್ಠಿ ಪಾರ್ಕ್, ಮಹಾರಾಜ ರಸ್ತೆ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್.ರಸ್ತೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ದಿ:07.11.2024 ರಂದು 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/breaking-lineman-dies-due-to-electrocution-in-tumkur/
ಕೆಎನ್‌ಎನ್ ಸ್ಪೆಷಲ್ ಡೆಸ್ಕ್ : ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಪ್ರಕೃತಿ ನಿಯಮವಾಗಿದೆ. ತಿಂಗಳು ಸರಿಯಾದ ಟೈಮ್ ಗೆ ಆದ್ರೆ, ಇಡೀ ಅಂಗಾಗಳು ಸರಿಯಾಗಿ ಇರುತ್ತದೆ. ಇಂದು ಮಿಸ್ ಆದ್ರೆ ನಾನಾ ರೋಗಗಳಿಗೆ ತುತ್ತಾಗಬೇಕಿದೆ. ಆದರೆ ಮನೆಯಲ್ಲಿ ಕೆಲ ಶುಭ ಸಮಾರಂಭಗಳಿದ್ದರೆ, ಪಿರಿಯೆಡ್ಸ್‌ನ್ನು ಮುಂದೂಡಲು ಬಯಸುತ್ತಾರೆ. ಅದಕ್ಕಾಗಿ ಮೆಡಿಕಲ್‌ನಲ್ಲಿ ಸಿಗುವ ಕೆಲವೊಂದು ಮಾತ್ರೆಗಳನ್ನು ನುಂಗುತ್ತಾರೆ. ಹೀಗೆ ತಮಗೆ ಅವಶ್ಯಕವಿದ್ದಾಗ ಮಾತ್ರೆಗಳ ಸಹಾಯದಿಂದ ಪಿರಿಯೆಡ್ಸ್ ಮುಂದೂಡಲು ಮಾತ್ರೆಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹೀಗಿರುವಾ ನೈಸರ್ಗಿಕವಾಗಿಯೇ ಹೇಗೆ ನಾವು ಪಿರಿಯೆಡ್ಸ್ ಮುಂದೂಡಬಹುದು ಎಂದು ಕಾಣಬಹುದಾಗಿದೆ. ಹೆಚ್ಚು ದಾಲ್ಚಿನ್ನಿ ಚಹಾ ಕುಡಿಯಿರಿ: ಇದನ್ನ ಕುಡಿಯವುದರಿಂದ ನಾನಾ ರೋಗಗಳಿಗೆ ಮದ್ದು. ಊರಿಯುವನ್ನ ಕಡಿಮೆ ಮಾಡುವುದರ ಜೊತೆಗೆ ಪಿರಿಯೆಡ್ಸ್ ಸಮಯದಲ್ಲಿ ಬರುವ ಮುಟ್ಟಿನ ಸೆಳತವನ್ನು ಕಡಿಮೆ ಮಾಡುತ್ತದೆ. ನಿಂಬೆ ರಸ ಕುಡಿಯಿರಿ: ಪಿರಿಯೆಡ್ಸ್ ಮುಂದೂಡಿಕೆಗಾಗಿ ನಿಂಬೆ ರಸವನ್ನು ಸೇವಿಸಿಬೇಕು. ಇದರಲ್ಲಿ ಸಿಟ್ರಸ್ ಆಹಾರಗಳು ರಕ್ತಸ್ರಾವವನ್ನು ಮುಂದೂಡಲು ಸಹಾಯ ಮಾಡುತ್ತದೆ ಕಲ್ಲಂಗಡಿ ಹಣ್ಣು ಬೇಸಿಗೆ ಸಮಯದಲ್ಲಿ ಎಲ್ಲರೂ ಇಷ್ಟ ಪಡವಂತಹ…
ನವದೆಹಲಿ: ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ವೀಡಿಯೊ ಕರೆಗಳು ಹೆಚ್ಚು ಆದ್ಯತೆಯ ಮಾರ್ಗಗಳಲ್ಲಿ ಒಂದಾಗಿದೆ. ಭೌಗೋಳಿಕ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಬಳಕೆದಾರರಿಗೆ ಜನರೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ ಶ್ರೀಮಂತ ಮತ್ತು ಸ್ಪಷ್ಟ ಸಂವಹನಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಸ್ಕ್ಯಾಮರ್ಗಳು ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಿಸಲು ವೀಡಿಯೊ ಕರೆಗಳನ್ನು ಸಹ ಬಳಸುತ್ತಿದ್ದಾರೆ. ಬಳಕೆದಾರರನ್ನು ಸುರಕ್ಷಿತವಾಗಿಡಲು, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಅಥವಾ ಸಿಇಆರ್ಟಿ-ಇನ್) ಸಲಹೆ ನೀಡಿದೆ. ವೀಡಿಯೊ ಕರೆ ಹಗರಣಗಳು ಎಂದರೇನು: ವೀಡಿಯೊ ಕರೆಗಳ ಹಗರಣಗಳು ಕೆಲವು ಸಮಯದಿಂದ ಅಸ್ತಿತ್ವದಲ್ಲಿವೆ. ಈ ರೀತಿಯ ಹಗರಣಗಳಲ್ಲಿ, ಈ ಕಾರ್ಯವನ್ನು ಬೆಂಬಲಿಸುವ ವಾಟ್ಸಾಪ್ನಂತಹ ಅಪ್ಲಿಕೇಶನ್ನಲ್ಲಿ ವೀಡಿಯೊ ಕರೆ ಮೂಲಕ ಜನರನ್ನು ಸ್ಕ್ಯಾಮರ್ಗಳು ಗುರಿಯಾಗಿಸುತ್ತಾರೆ. ಮುಖ್ಯವಾಗಿ ನಾಲ್ಕು ರೀತಿಯ ವೀಡಿಯೊ ಕರೆಗಳಿವೆ: ಬ್ಲ್ಯಾಕ್ಮೇಲ್ ಹಗರಣಗಳು: ಈ ರೀತಿಯ ಹಗರಣಗಳಲ್ಲಿ, ಸ್ಕ್ಯಾಮರ್ಗಳು ನಿಮಗೆ ತಿಳಿಯದೆ ನಿಮ್ಮ ವೀಡಿಯೊ ಕರೆಯನ್ನು ರೆಕಾರ್ಡ್ ಮಾಡಬಹುದು ಮತ್ತು ನೀವು ಅವರಿಗೆ ಹಣವನ್ನು ಪಾವತಿಸದಿದ್ದರೆ ಅದನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಬಹುದು. ಹೂಡಿಕೆ…
ಯಾದಗಿರಿ: ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಹಾಯಡವಟ್ಟು ಮಾಡಲಾಗಿದೆ. ರೌಡಿ ಶೀಟರ್ ಪಟ್ಟಿಯಲ್ಲಿದ್ದಂತವನನ್ನೇ ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕನನ್ನಾಗಿನ ನೇಮಕ ಮಾಡಲಾಗಿದೆ. ಇಂತಹ ರೌಡಿ ಶೀಟರ್ ಉಪಟಳಕ್ಕೆ ಬೇಸತ್ತು ಆ ಶಾಲೆಯಿಂದ ಅನೇಕ ಶಿಕ್ಷಕರು ಬೇರೆಡೆಗೆ ವರ್ಗಾವಣೆ ಮಾಡಿಕೊಂಡು ಹೋಗಿರೋದಾಗಿ ಹೇಳಲಾಗುತ್ತಿದೆ. ಯಾದಗರಿ ಜಿಲ್ಲೆಯ ಶಹಾಪುರ ತಾಲ್ಲೂಕು ರಸ್ತಾಪುರದಲ್ಲಿನ ಸರ್ಕಾರಿ ಶಾಲೆಗೆ ರೌಡಿ ಶೀಟರ್ ಭಾಗಪ್ಪ ಎಂಬುವರನ್ನೇ ಅತಿಥಿ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ಕಳೆದ ಐದು ವರ್ಷಗಳಿಂದ ಹಿಂದಿ ಭಾಷಾ ಅತಿಥಿ ಶಿಕ್ಷಕನಾಗಿ ರೌಡಿ ಶೀಟರ್ ಭಾಗಪ್ಪ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ಭಾಗಪ್ಪ ಅವರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಈ ವಿಷಯ ಗೊತ್ತಿದ್ದರೂ, ಶಾಲಾ ಶಿಕ್ಷಣ ಇಲಾಖೆ ಮಾತ್ರ ಹಿಂದಿ ಭಾಷಾ ಅತಿಥಿ ಶಿಕ್ಷಕರನ್ನಾಗಿ ಭಾಗಪ್ಪ ಅವರನ್ನು ನೇಮಕ ಮಾಡಿ ಮಹಾ ಎಡವಟ್ಟು ಮಾಡಿದೆ. ಕುಡಿದು ಬಂದು ಶಿಕ್ಷಕರಿಗೆ, ವಿದ್ಯಾರ್ಥಿಗಳ ಜೊತೆಗೆ ರೌಡಿ ಶೀಟರ್ ಭಾಗಪ್ಪ ಅಸಭ್ಯ ವರ್ತನೆ ಕೂಡ ತೋರುತ್ತಿದ್ದಾರಂತೆ ಅಂತೆ. ಇದೇ ಕಾರಣಕ್ಕಾಗಿ ಅವರನ್ನು ಅತಿಥಿ ಶಿಕ್ಷಕರ…
ಬೆಂಗಳೂರು: ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಇದಿಗ ಸಿಬಿಐ ತನಿಖೆ ಭೀತಿ ಎದುರಾಗಿತ್ತು. ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಒಂದು ಪ್ರಕರಣ ಸಿಬಿಐ ತನಿಖೆಗೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ವೇಳೆಯಲ್ಲಿ ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ನವೆಂಬರ್.26ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಇಂದು ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯಲ್ಲಿ ನಂಬಿಕೆಯಿಲ್ಲ. ಸಿಬಿಐ ತನಿಖೆಗೆ ಆದೇಶಿಸುವಂತೆ ಕೇರಿ ಸಲ್ಲಿಸಿದ್ದಂತ ರಿಟ್ ಅರ್ಜಿಯನ್ನು ಹೈ ಕೋರ್ಟ್ ನಲ್ಲಿ ನ್ಯಾ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆಯಲ್ಲಿ ಹೈಕೋರ್ಟ್ ಗೆ ಈ ಪ್ರಕರಣ ಸಂಬಂಧ ವಾದಿಸಲು ಕಾಲಾವಕಾಶ ನೀಡುವಂತೆ ಸಿಎಂ ಸಿದ್ಧರಾಮಯ್ಯ ಪರ ವಕೀಲರು ಕೋರಿದರು. ಈ ಹಿನ್ನಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ. ಅಂದಹಾಗೇ ಕಳೆದ ಸಪ್ಟೆಂಬರ್ 27ರಂದು ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯ ಮೇಲೆ ನಂಬಿಕೆ ಇಲ್ಲ ಎಂದು ಅವರು ಹೈಕೋರ್ಟಿಗೆ ಸಿಬಿಐ ತನಿಖೆಗೆ ಆದೇಶ ಕೋರಿ ರಿಟ್…
ಹಾಸನ: ಜಿಲ್ಲೆಯಲ್ಲಿ ಜನರು ಬೆಚ್ಚಿ ಬೀಳುವಂತೆ ಹಸೆಮಣೆ ಏರಬೇಕಿದ್ದಂತ ಕೆ ಎಸ್ ಐ ಎಸ್ ಎಫ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವಂತ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಗೇಶಪುರದ ವಿ.ಹರೀಶ್ ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ನವೆಂಬರ್.11ರಂದು ಮದುವೆ ಕೂಡ ನಿಗದಿಯಾಗಿತ್ತು. ಮದುವೆ ಆಮಂತ್ರಣ ಪತ್ರವನ್ನು ಹಂಚಿಕೆ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಮೂಲಕ ಹಸೆಮಣೆ ಏರಬೇಕಿದ್ದಂತ ಕೆ ಎಸ್ ಐ ಎಸ್ ಎಫ್ ಕಾನ್ಸ್ ಸ್ಟೇಬಲ್ ವಿ.ಹರೀಶ್ ಬರ್ಬರವಾಗಿ ಕೊಲೆ ಮಾಡಲಾಗಿದೆ. https://kannadanewsnow.com/kannada/sda-commits-suicide-at-belagavi-tahsildars-office/ https://kannadanewsnow.com/kannada/good-news-for-contractors-under-bbmp-25-of-pending-bills-withheld-by-state-govt-released/
ಬೆಳಗಾವಿ: ಜಿಲ್ಲೆಯ ತಹಶೀಲ್ದಾರ್ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ನಡೆದಿದೆ. ಬೆಳಗಾವಿ ತಹಶೀಲ್ದಾರ್ ಕಚೇರಿಯಿಂದ ಸವದತ್ತಿ ತಹಶೀಲ್ದಾರ್ ಕಚೇರಿಗೆ ರುದ್ರಣ್ಣ ಯಡವಣ್ಣನವರ ಎಂಬುವರನ್ನು ಸವದತ್ತಿ ತಹಶೀಲ್ದಾರ್ ಕಚೇರಿಗೆ ನಿನ್ನಯಷ್ಟೇ ವರ್ಗಾವಣೆ ಮಾಡಲಾಗಿತ್ತು. ಸವದತ್ತಿ ತಹಶೀಲ್ದಾರ್ ಕಚೆರಿಗೆ ಎಸ್ ಡಿಎ ರುದ್ರಣ್ಣ ಯಡವಣ್ಣನವರನ್ನು ವರ್ಗಾವಣೆ ಮಾಡಿದ್ದಕ್ಕೆ ಮನನೊಂದು ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. https://kannadanewsnow.com/kannada/good-news-for-contractors-under-bbmp-25-of-pending-bills-withheld-by-state-govt-released/ https://kannadanewsnow.com/kannada/big-news-cm-siddaramaiah-fears-cbi-probe-in-muda-case-hc-to-hear-plea-in-minutes/
ಬೆಂಗಳೂರು: ಬಿಬಿಎಂಪಿಯಲ್ಲಿ ಕಾಮಗಾರಿಯನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆ ಹಿಡಿದಿರುವ ಶೇ.25ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಈ ಮೂಲಕ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳನ್ನು ಶೇ.100ರಷ್ಟು ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀ ಸಾಗರ್ ಎನ್.ಕೆ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ/ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ | ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿವರವಾದ ತನಿಖೆಯನ್ನು ನಡೆಸಲು 4 ವಿಶೇಷ ತನಿಖಾ ತಜ್ಞರ | ಪರಿಣಿತರ ನೇತೃತ್ವದಲ್ಲಿ 4 ಪ್ರತ್ಯೇಖ ತನಿಖಾ ಸಂಸ್ಥೆಗಳನ್ನು ರಚಿಸಿ…
ನವದೆಹಲಿ: 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (60) ಮತ್ತು ಅವರ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78) ಅವರ ಭವಿಷ್ಯವನ್ನು ನಿರ್ಧರಿಸುವುದು ಏಳು ರಾಜ್ಯಗಳಿಗೆ ಬಿಟ್ಟಿದ್ದು. ಈ ಪ್ರಮುಖ ರಾಜ್ಯಗಳಾದ ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ 93 ಎಲೆಕ್ಟೋರಲ್ ಮತಗಳನ್ನು ಹೊಂದಿವೆ ಮತ್ತು ಅಧ್ಯಕ್ಷ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅಗತ್ಯವಿರುವ ಒಟ್ಟು 538 ಎಲೆಕ್ಟೋರಲ್ ಮತಗಳಲ್ಲಿ 270 ಸ್ಥಾನಗಳಿಗೆ ಎರಡೂ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದರಿಂದ ಪ್ರಾಥಮಿಕ ಯುದ್ಧಭೂಮಿಗಳಾಗಿವೆ. ಸ್ವಿಂಗ್ ರಾಜ್ಯಗಳು, ಅಥವಾ ಯುದ್ಧಭೂಮಿ ರಾಜ್ಯಗಳು, ಚುನಾವಣೆಯನ್ನು ಅವಲಂಬಿಸಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಬೆಂಬಲದ ನಡುವೆ ಬದಲಾಗಬಹುದು. ಐತಿಹಾಸಿಕವಾಗಿ ಕಡಿಮೆ ಮತದಾನದ ಅಂತರ ಮತ್ತು ಕಾಲಾನಂತರದಲ್ಲಿ ವೈವಿಧ್ಯಮಯ ಫಲಿತಾಂಶಗಳನ್ನು ಹೊಂದಿರುವ ಈ ರಾಜ್ಯಗಳು ಅಭ್ಯರ್ಥಿಗಳಿಂದ ಗಮನಾರ್ಹ ಗಮನವನ್ನು ಸೆಳೆಯುತ್ತವೆ. ಅವರು ಮತದಾರರನ್ನು ಸೆಳೆಯಲು ಮತ್ತು ನಿರ್ಣಾಯಕ ಚುನಾವಣಾ ಮತಗಳನ್ನು ಪಡೆಯಲು ತಮ್ಮ ಪ್ರಚಾರವನ್ನು ಅಲ್ಲಿ ಕೇಂದ್ರೀಕರಿಸುತ್ತಾರೆ.…
ಹುಬ್ಬಳ್ಳಿ: ನಾನು ನಾಳೆ ಬೆಳಿಗ್ಗೆ 10 ಗಂಟೆಗೆ ಮುಡಾ ಹಗರಣ ಸಂಬಂಧ ಲೋಕಾಯುಕ್ತದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಡಾ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ನಾನು ನಾಳೆ ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಮುಡಾ ಕಚೇರಿಗೆ ತೆರಳಲಿದ್ದೇನೆ ಎಂದರು. ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣಾಧಿಕಾರಿಗಳ ಮುಂದೆ ವಿಚಾರಣೆ ಎದುರಿಸಲಿದ್ದೇನೆ. ಅವರು ಕೇಳುವಂತ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ತಿಳಿಸಿದರು. https://kannadanewsnow.com/kannada/big-news-cm-siddaramaiah-fears-cbi-probe-in-muda-case-hc-to-hear-plea-in-minutes/ https://kannadanewsnow.com/kannada/breaking-lineman-dies-due-to-electrocution-in-tumkur/