Author: kannadanewsnow09

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆಗೆ ವ್ಯಕ್ತಿಯೊಬ್ಬ ಯತ್ನಿಸಿರುವಂತ ಘಟನೆ ನಡೆದಿದೆ. ಕೆಲ ತಿಂಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿತ್ತು. ತೂಗು ಸೇತುವೆ ನೋಡೋದಕ್ಕೆ ದಿನಂ ಪ್ರತಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಮೈಸೂರಿನಿಂದ ಆಗಮಿಸಿದಂತ ಆಂಜನೇಯ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದು ಬಂದಿದೆ. ಮೈಸೂರಿನ ಆಂಜನೇಯ ಲೆಕ್ಕಪರಿಶೋಧಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವೈಯಕ್ತಿಕ ವಿಚಾರಕ್ಕೆ ಆಂಜನೇಯ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಮಾಹಿತಿ ತಿಳಿದು ಬಂದಿದೆ. ಸಿಗಂದೂರು ಸೇತುವೆಯ ಮೇಲೆ ನಿಂತಿದ್ದ ಆಂಜನೇಯ ಆತ್ಮಹತ್ಯೆಗೆ ಯತ್ನಿಸಿದ ವೇಳೆಯಲ್ಲಿ ಇಂಜಿನಿಯರ್ ರಂಜೇಶ್ ರಕ್ಷಿಸಿದ್ದಾರೆ. ಕೂಡಲೇ 112ಗೆ ಕರೆ ಮಾಡಿ ಇಂಜಿನಿಯರ್ ರಂಜೇಶ್ ಮಾಹಿತಿ ನೀಡಿದ್ದಾರೆ. ಇಂಜಿನಿಯರ್ ರಂಜೇಶ್ ಸಮಯ ಪ್ರಜ್ಞೆಯಿಂದ ಆಂಜನೇಯ ಜೀವ ಉಳಿದಿದೆ. ವಿಚಾರಣೆ ವೇಳೆಯಲ್ಲಿ ಆಂಜನೇಯ ಸ್ಲೀಪಿಂಗ್ ಮಾತ್ರೆ ನುಂಗಿದ್ದಾಗಿ ತಿಳಿದು ಬಂದಿದೆ. ಆತನಿಗೆ ಬ್ಯಾಕೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ. https://kannadanewsnow.com/kannada/a-record-93925-jobs-created-in-2-5-years-of-the-state-congress-governments-tenure/…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಸರ್ಕಾರದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ ಮಾಡಿರುವುದಾಗಿ ಮಾಹಿತಿಯನ್ನು ಸಚಿವ ಎಂ.ಬಿ ಪಾಟೀಲ್ ಹಂಚಿಕೊಂಡಿದ್ದಾರೆ. ನಮ್ಮ ಸರ್ಕಾರದ ಉದ್ಯಮಸ್ನೇಹಿ ವಾತಾವರಣ ಹಾಗೂ ನೂತನ ಕೈಗಾರಿಕಾ ನೀತಿಗಳು ಚಮತ್ಕಾರ ಮಾಡುತ್ತಿವೆ. ಕಳೆದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗಗಳು ಸೃಷ್ಟಿಯಾಗಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿ. ಇನ್ನೂ1,886 ಯೋಜನೆಗಳಿಂದ 6,92,545 ಉದ್ಯೋಗಾವಕಾಶಗಳು ನಿರೀಕ್ಷೆಯಲ್ಲಿದ್ದು, ಇದು ಕರ್ನಾಟಕದ ವೇಗವಾದ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ 67 ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ₹1,91,454 ಕೋಟಿ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದೆ. ನಮ್ಮ ಸರ್ಕಾರ ನಿರ್ಮಾಣ ಮಾಡಿರುವ ಭದ್ರ ಮತ್ತು ಸ್ಥಿರ ಕೈಗಾರಿಕಾ ಪರಿಸರ ಅಪಾರ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದು ವಿಕಾಸದತ್ತ ಕರ್ನಾಟಕ ದೃಢ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ. https://twitter.com/MBPatil/status/1999830205687599497 https://kannadanewsnow.com/kannada/dogital-arrest-man-1-crore/ https://kannadanewsnow.com/kannada/history-created-india-reaches-historic-first-squash-world-cup-final/

Read More

ನವದೆಹಲಿ: ಶನಿವಾರ ನಡೆದ ಪಂದ್ಯದಲ್ಲಿ ನಿರ್ಭೀತ, ಸರ್ವತೋಮುಖ ಪ್ರದರ್ಶನ ನೀಡಿದ ಆತಿಥೇಯರು ಎರಡು ಬಾರಿಯ ಚಾಂಪಿಯನ್ ಈಜಿಪ್ಟ್ ತಂಡವನ್ನು 3-0 ಅಂತರದಿಂದ ಸೋಲಿಸಿ ತಮ್ಮ ಮೊದಲ ಸ್ಕ್ವಾಷ್ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟರು. ಎರಡನೇ ಶ್ರೇಯಾಂಕ ಪಡೆದಿರುವ ಭಾರತ, ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪಂದ್ಯದಲ್ಲಿ ಹಾಂಗ್ ಕಾಂಗ್ ಚೀನಾ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಂಗ್ ಕಾಂಗ್ ಜಪಾನ್ ತಂಡವನ್ನು ಸೋಲಿಸಿದ ನಂತರ. ಭಾರತ ಆರಂಭಿಕ ಸ್ವರವನ್ನು ಸ್ಥಾಪಿಸಿತು. ರಾಷ್ಟ್ರೀಯ ಚಾಂಪಿಯನ್ ವೆಲವನ್ ಸೆಂಥಿಲ್‌ಕುಮಾರ್ ಇಬ್ರಾಹಿಂ ಎಲ್ಕಬ್ಬಾನಿ ಅವರನ್ನು 7-1, 7-3, 7-6 ಅಂತರದಿಂದ ಸೋಲಿಸಿ ಆತಿಥೇಯರಿಗೆ ಭರ್ಜರಿ ಆರಂಭ ನೀಡಿದರು. ಭಾರತದ ಅಗ್ರ ಶ್ರೇಯಾಂಕಿತ ಮಹಿಳಾ ಆಟಗಾರ್ತಿ ಅನಾಹತ್ ಸಿಂಗ್ ಐದು ಪಂದ್ಯಗಳ ಕಠಿಣ ಹೋರಾಟದಲ್ಲಿ ನೂರ್ ಹೈಕಲ್ ಅವರನ್ನು ಸೋಲಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದಾಗ ಮಾತ್ರ ಈ ಆವೇಗ ಹೆಚ್ಚಾಯಿತು. ಈಜಿಪ್ಟ್ ತತ್ತರಿಸುವುದರೊಂದಿಗೆ, ಅಭಯ್ ಸಿಂಗ್ ಒಪ್ಪಂದವನ್ನು ಮಾಡಿಕೊಂಡರು. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಆಡಮ್ ಹವಾಲ್…

Read More

ಬೆಂಗಳೂರು: ನಮ್ಮ ಮೆಟ್ರೋ ದರ ಹೆಚ್ಚಾದ ಬಳಿಕ, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿತ್ತು. ಇದರ ನಡುವೆ ದರ ಇಳಿಕೆಯ ನಿರೀಕ್ಷೆಯಲ್ಲೂ ಪ್ರಯಾಣಿಕರಿದ್ದರು. ಆದರೇ ದರ ಇಳಿಕೆ ಮಾಡೋದಲಿಲ್ಲ ಎಂಬುದಾಗಿ ದರ ನಿಗದಿ ಸಮಿತಿ ತಿಳಿಸುವ ಮೂಲಕ, ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ನಮ್ಮ ಮೆಟ್ರೋ ದರ ಇಳಿಕೆ ಮಾಡುವಂತೆ ಪ್ರಯಾಣಿಕರು, ಸಾರ್ವಜನಿಕರು ಒತ್ತಾಯಿಸಿದ್ದರು. ಜೊತೆಗೆ ಆರಂಭದಲ್ಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಆದರೇ ದರ ನಿಗದಿ ಸಮಿತಿ ಮಾತ್ರ, ದರ ಇಳಿಕೆ ಮಾಡೋದಿಲ್ಲ ಎಂಬುದಾಗಿ ಉತ್ತರಿಸಿದೆ. ಅಂದಹಾಗೇ ಬಿಎಂಆರ್ ಸಿಎಲ್ ಮೆಟ್ರೋ ಪ್ರಯಾಣದ ದರ ಇಳಿಕೆ ಬಗ್ಗೆ ದರ ನಿಗದಿ ಸಮಿತಿಗೆ ಸಲಹೆಯನ್ನು ಕೇಳಿತ್ತು. ದರ ಇಳಿಕೆ ಬಗ್ಗೆ ಸಲಹೆ ನೀಡುವಂತೆಯೂ ಕೋರಿತ್ತು. ಆದರೇ ದರ ನಿಗದಿ ಸಮಿತಿಯು ಮಾತ್ರ ದರ ಇಳಿಕೆ ಸಾಧ್ಯವಿಲ್ಲ. ಇಳಿಕೆಯೂ ಮಾಡಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಹೀಗಾಗಿ ನಮ್ಮ ಮೆಟ್ರೋ ಟಿಕೆಟ್ ದರ ಇಳಿಕೆಯಾಗಲ್ಲ ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/gunmen-open-fire-at-bondi-beach-in-sydney-australia-killing-10-people/ https://kannadanewsnow.com/kannada/dogital-arrest-man-1-crore/

Read More

ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಹನುಕ್ಕಾ ಆಚರಣೆಯಲ್ಲಿ ಭಾನುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಕಪ್ಪು ಬಟ್ಟೆ ಧರಿಸಿದ ಇಬ್ಬರು ಬಂದೂಕುಧಾರಿಗಳು ಸುಮಾರು 1,000–2,000 ಜನರ ಗುಂಪಿನ ಮೇಲೆ ಗುಂಡು ಹಾರಿಸಿದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಬೀಚ್‌ಫ್ರಂಟ್‌ನಲ್ಲಿ ಭೀತಿ ಭುಗಿಲೆದ್ದ ಕಾರಣ 50 ಕ್ಕೂ ಹೆಚ್ಚು ಗುಂಡು ಹಾರಿಸಲಾಯಿತು, ಜನರು ಪಲಾಯನ ಮಾಡಲು ಅಥವಾ ಒಳಾಂಗಣದಲ್ಲಿ ಆಶ್ರಯ ಪಡೆಯಲು ಒತ್ತಾಯಿಸಲಾಯಿತು. “ಬೋಂಡಿಯಲ್ಲಿನ ದೃಶ್ಯಗಳು ಆಘಾತಕಾರಿ ಮತ್ತು ದುಃಖಕರವಾಗಿವೆ. ಜೀವಗಳನ್ನು ಉಳಿಸಲು ಪೊಲೀಸರು ಮತ್ತು ತುರ್ತು ಪ್ರತಿಕ್ರಿಯೆ ನೀಡುವವರು ಕಾರ್ಯಪ್ರವೃತ್ತರಾಗಿದ್ದಾರೆ. ಬಾಧಿತರಾದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ನನ್ನ ಆಲೋಚನೆಗಳು ಇವೆ” ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. https://twitter.com/AlboMP/status/2000133674583687452 ಅವರು AFP ಆಯುಕ್ತರು ಮತ್ತು NSW ಪ್ರೀಮಿಯರ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು. “ನಾವು NSW ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಹೆಚ್ಚಿನ ಮಾಹಿತಿ…

Read More

ನವದೆಹಲಿ : “ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ವೋಟ್ ಚೋರಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಾವು ಮತಕಳ್ಳತನ ವಿರುದ್ಧದ ಹೋರಾಟ ಆರಂಭಿಸಿದ್ದೆವು. ಈಗ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಈ ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಸಂದೇಶ ನೀಡಲಾಗುತ್ತಿದೆ. ದೇಶದ ಚುನಾವಣೆಗಳು ಈಗ ನ್ಯಾಯಸಮ್ಮತವಾಗಿಲ್ಲ. ಮತಕಳ್ಳತನ ಮಾಡಲಾಗುತ್ತಿದೆ. ಇದಕ್ಕೆ ಸಾವಿರಾರು ಉದಾಹರಣೆಗಳಿವೆ. ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಇನ್ನು ಹಲವು ಬಾರಿ ಮಾಧ್ಯಮಗೋಷ್ಠಿ ಮೂಲಕ ದಾಖಲೆಗಳನ್ನು ಬಹಿರಂಗಗೊಳಿಸಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗದಿಂದ ಸರಿಯಾದ ಉತ್ತರ ಸಿಗುತ್ತಿಲ್ಲ. ಹೀಗಾಗಿ ಸಾಂವಿಧಾನಿಕ…

Read More

ಬೆಂಗಳೂರು; ನೀವು ಉಪ ಮುಖ್ಯಮಂತ್ರಿಯೋ ಅಥವಾ ಬೀದಿ ರೌಡಿಯೋ? ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲಾ ಜನಸಾಮಾನ್ಯರಿಗೆ ಇದೆ ಎಂಬುದಾಗಿ ಜೆಡಿಎಸ್ ಹೇಳಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್ ಪಕ್ಷವು, “ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ, ನನ್ನತ್ರ ಇದೆಲ್ಲಾ ಬೇಡ” ! ಡಿಕೆ ಶಿವಕುಮಾರ್ ಹೌದು.. ಮಿಸ್ಟರ್‌ ಧಮ್ಕಿ ಡಿಕೆಶಿ ಅವರೇ, ಆ ದಿನಗಳಲ್ಲಿ ನೀವು ಯಾರ ಜೊತೆ ಇದ್ದೀರಿ ? ನಿಮ್ಮ ಹಿನ್ನೆಲೆ ಏನು ? ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲ ಎಂದಿದೆ. ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಬೀದಿರೌಡಿಯಂತೆ ವೇದಿಕೆಯಲ್ಲೇ ನಾಗರಿಕರಿಗೆ ಹೆದರಿಸುವುದು, ಬೆದರಿಸುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದಿದೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಜನಸಾಮಾನ್ಯರಿಗೂ ಇದೆ. “ಸಂವಿಧಾನ ರಕ್ಷಿಸುತ್ತೇವೆ” ಎಂದು ಸಂವಿಧಾನ ಪುಸ್ತಕ ಹಿಡಿದರೇ ಸಾಲದು. ಈ ನಿಮ್ಮ ದರ್ಪ, ದುರಂಹಕಾರಕ್ಕೆ ಮತಹಾಕುವ ಜನರೇ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದೆ. https://twitter.com/JanataDal_S/status/1999789362062795102 https://kannadanewsnow.com/kannada/mp-pankaj-chaudhary-elected-as-bjp-state-president-of-uttar-pradesh/ https://kannadanewsnow.com/kannada/dogital-arrest-man-1-crore/

Read More

ಉತ್ತರ ಪ್ರದೇಶ: ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಂಕಜ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತಂತೆ ಪಿಯೂಷ್ ಗೋಯಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ಯುಪಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಸಭೆ ನಡೆಯಿತು. ಈ ಸಭೆಯಲ್ಲಿ ಮಹಾರಾಜ್ ಗಂಜ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವಂತ ಪಂಕಜ್ ಚೌಧರಿ ಅವರನ್ನು ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಯುಪಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವಂತ ಪಂಕಜ್ ಚೌಧರಿ ಅವರು, 7 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. https://kannadanewsnow.com/kannada/it-is-ridiculous-that-bjp-members-are-bothering-about-the-congress-partys-chief-minister-minister-h-c-mahadevappa/ https://kannadanewsnow.com/kannada/dogital-arrest-man-1-crore/

Read More

ಬೆಂಗಳೂರು: ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆಯಾಗಿದೆ ಎಂಬುದಾಗಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಜನಾದೇಶ ಪಡೆಯದೇ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿ, ಕೊನೆಗೆ ರಚಿಸಿದ ಸರ್ಕಾರದಲ್ಲಿ ನಾಲ್ಕೈದು ಮಂದಿ ಮುಖ್ಯಮಂತ್ರಿಗಳನ್ನು ಬದಲಿಸಿ, ಅಸ್ಥಿರ ಸರ್ಕಾರದ ಜೊತೆಗೆ ಕೆಟ್ಟ ಆಡಳಿತವನ್ಬು ನೀಡಿ, ಜನರಿಂದ ಛೀಮಾರಿ ಹಾರಿಸಿಕೊಂಡ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ವಿಷಯಕ್ಕೆ ತಲೆ ಕೆಡಿಸಿಕೊಂಡಿರುವುದು ಹಾಸ್ಯಾಸ್ಪದ ಬೆಳವಣಿಗೆ ಎಂದಿದ್ದಾರೆ. ಪಕ್ಷ ಏರ್ಪಡಿಸುವ ಸಭೆ, ಸಮಾರಂಭ ಮತ್ತು ಹೋರಾಟಗಳಿಗೆ ಸ್ವಪಕ್ಷೀಯರನ್ನೇ ಕರೆಸಲು ಸಾಧ್ಯವಾಗದ ವಿಜಯೇಂದ್ರ ಹಾಗೂ ಯತ್ನಾಳ್ ಅವರು ನಿಜವಾದ ವಿಪಕ್ಷ ನಾಯಕ ನಾನು ರೀ.. ಎಂದು ಸದನದಲ್ಲೇ ಹೇಳುತ್ತಿದ್ದರೂ, ವಿಪಕ್ಷ ನಾಯಕ ನಾನು ಎಂದು ಗಟ್ಟಿಯಾಗಿ ಹೇಳಲು ದನಿಯಿಲ್ಲದ ಆರ್.ಅಶೋಕ್ ಅಂತವರು ಕಾಂಗ್ರೆಸ್ ಪಕ್ಷದ ವಿಷಯಗಳ ಬಗ್ಗೆ ಮಾತನಾಡುವುದನ್ನು ಕೇಳುತ್ತಿದ್ದರೆ…

Read More

ಬೆಂಗಳೂರು; ನಗರದ ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ KSIIDC ಮತ್ತೊಂದು ಭರವಸೆಯ ಹೆಜ್ಜೆ ಯನ್ನು ಇರಿಸಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ಬೆಂಗಳೂರು ಹೊರವಲಯದಲ್ಲಿ ಆಯ್ಕೆ ಮಾಡಲಾದ 3 ಸ್ಥಳಗಳ ವಿವರವಾದ ಕಾರ್ಯತಂತ್ರ ಮತ್ತು ಕಾರ್ಯಸಾಧ್ಯತಾ ವರದಿ ಸಿದ್ದಪಡಿಸಲು ಟೆಂಡರ್ ಕರೆಯುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದಿದ್ದಾರೆ. ಈ ಕ್ರಮವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ನಡೆಸಿದ ಪ್ರಾಥಮಿಕ ಪರಿಶೀಲನೆಯ ನಂತರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತಾವಿತ ಗ್ರೀನ್‌ಫೀಲ್ಡ್ (ಹೊಸ) ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/coffee-thief-gang-active-in-chikkamagaluru-khadims-arrested-for-attacking-farmer/ https://kannadanewsnow.com/kannada/dogital-arrest-man-1-crore/

Read More