Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕೋವಿಡ್ ಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬುದರ ಕುರಿತು ಜನರು ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಧಾರವಾಡದಲ್ಲಿ ಇಂದು ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕೆಲವರಿಗೆ ಅಡ್ಡ ಪರಿಣಾಮಗಳು ಆಗಿರುವ ಬಗ್ಗೆ ಮಾಹಿತಿ ಇದೆ. ಲಸಿಕೆ ಎಂದ ಮೇಲೆ ಸಣ್ಣ ಪ್ರಮಾಣದ ಸೈಡ್ ಎಫೆಕ್ಟ್ ಇರುತ್ತೆ. ಆದರೆ ಜನರು ಏನೋ ಆಗಿಬಿಡುತ್ತೆ ಎಂದು ಭಯಪಡಬಾರದು ಎಂದು ಹೇಳಿದರು. ಕರ್ನಾಟಕದಲ್ಲಿ ಕೋವಿಡ್ ಶೀಲ್ಡ್ ಲಸಿಕೆ ಪಡೆದವರಲ್ಲಿ ಬರಳಣಿಕೆಯಷ್ಟು ಜನರಿಗೆ ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ನಾಲ್ಕು ಐದು ಜನರಿಗೆ ವ್ಯಾಕ್ಸಿನ್ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ ಇದು ಲಸಿಕೆಯಿಂದಲೇ ಆಗಿದೆಯಾ ಅಥವಾ ಬೇರೆ ಅರೋಗ್ಯದ ಸಮಸ್ಯೆಗಳು ಕೂಡ ಕಾರಣವಾ ಎಂಬುದನ್ನ ನೋಡಬೇಕು ಎಂದರು. ಕೋವಿಡ್ ಶೀಲ್ಡ್ ವಾಕ್ಸಿನ್ ಪಡೆದವರೆಲ್ಲರಿಗೂ ಆರೋಗ್ಯ ತೊಂದರೆಗಳಾಗುತ್ತವೆ ಎಂದು…
ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ಧದ ಕಿಡ್ನ್ಯಾಪ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ವೇಳೆಯಲ್ಲಿ, ಕೋರ್ಟ್ ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮೆಮೋ ಸಲ್ಲಿಸಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ವೇಳೆಯಲ್ಲಿ ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರು, ಉಪ ಮುಖ್ಯಮಂತ್ರಿ ಹೇಳಿಕೆ ಉಲ್ಲೇಖಿಸಿದರು. ಡಿಕೆ ಶಿವಕುಮಾರ್ ಅವರು 2 ತಿಂಗಳು ಕಸ್ಟಡಿಯಲ್ಲಿ ಇರಿಸಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ತನಿಖೆಯ ಧಿಕ್ಕು ತಪ್ಪಿಸುತ್ತದೆ. ಇದರ ಹಿಂದಿನ ಉದ್ದೇಶವೇನು ಎಂಬುದಾಗಿ ಪ್ರಶ್ನಿಸಿದಂತ ಅವರು, ಡಿಸಿಎಂ ಡಿಕೆಶಿ ಹೇಳಿಕೆಯ ಬಗ್ಗೆ ಎಸ್ ಪಿಪಿ, ಕೋರ್ಟ್ ಗೆ ಮೆಮೋ ಸಲ್ಲಿಸಿದರು. ಅಲ್ಲದೇ ನಿರೀಕ್ಷಣಾ ಜಾಮೀನು ನೀಡಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳ ಮುಂದೆ ತನಿಖೆಗೆ ಹಾಜರಾಗಲಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಪ್ರಕರಣ ಬಳಸಿಕೊಳ್ಳುತ್ತಿರುವಾಗ ಹೇಗೆ ನಿರೀಕ್ಷಣಾ ಜಾಮೀನು…
ಬೆಂಗಳೂರು: 2024-25ನೇ ಸಾಲಿನ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಬ್ಲಾಕ್ ಹಂತದಿಂದ ಶಾಲಾ ಹಂತಕ್ಕೆ ವಿತರಣೆ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಸೂಚಿಸಿದೆ. ಈ ಮೂಲಕ ಶಾಲಾ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕರ ಸಿಗೋ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಜ್ಞಾಪನ ಪತ್ರವನ್ನು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ಈಗಾಗಲೇ ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ ಎಂದಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಲಭ್ಯಗೊಳಿಸಬೇಕಾಗಿರುವುದರಿಂದ ಈಗಾಗಲೇ ಬ್ಲ್ಯಾಕ್ ಹಂತಕ್ಕೆ ಸರಬರಾಜು ಆಗಿರುವ ಎಲ್ಲಾ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಆಯಾ ಶಾಲಾ ಬೇಡಿಕೆಗೆ ಅನುಗುಣವಾಗಿ ದಿನಾಂಕ:13.05.2024 ರಿಂದ ಆಯಾ ಶಾಲೆಗಳಿಗೆ ಸಾಗಾಣಿಕೆ ಮಾಡಿ ನಿಯಮಾನುಸಾರ ವಿತರಿಸಲು ಕ್ರಮವಹಿಸಲು ತಿಳಿಸಿದೆ. ಮುಂದುವರೆದು, ಮಾರಾಟ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳ ಬೇಡಿಕೆಯನ್ವಯ ಶೇ.10 ರಷ್ಟು ಮುಂಗಡ ಹಣ…
ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿಯಾಗಿರುವಂತ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿ, ದುಬೈ ಬಳಿಕ ಈಗ ಮತ್ತೊಂದು ದೇಶಕ್ಕೆ ಹಾರಿರೋದಾಗಿ ಹೇಳಲಾಗುತ್ತಿದೆ. ತಮ್ಮ ವಿರುದ್ಧದ ಅಶ್ಲೀಲ ವೀಡಿಯೋ ವೈರಲ್ ಆಗುತ್ತಿದ್ದಂತೆ ಜರ್ಮನಿಗೆ ಸಂಸದ ಪ್ರಜ್ವಲ್ ರೇವಣ್ಣ ತೆರಳಿದ್ದರು. ಆ ನಂತ್ರ ದುಬೈಗೆ ಹಾರಿದ್ದರು. ಈಗ ಮತ್ತೊಂದು ದೇಶಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ಅವರು ಹಂಗೇರಿಯದ ಬುಡಾಪೆಸ್ಟ್ ಗೆ ತೆರಳಿ ತಂಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಅಂದಹಾಗೇ ಈ ಎಲ್ಲಾ ಮಾಹಿತಿ ಪ್ರಜ್ವಲ್ ರೇವಣ್ಣ ಕುರಿತು ತನಿಖೆ ನಡೆಸುತ್ತಿರುವಂತ ಎಸ್ಐಟಿ ಅಧಿಕಾರಿಗಳಿಗೆ ಅವರ ಪಾಸ್ ಪೋರ್ಟ್ ಎಂಟ್ರಿ ಮಾಹಿತಿಯ ಮೇರೆಗೆ ಸುಳಿವು ಸಿಕ್ಕಿರೋದಾಗಿ ಹೇಳಲಾಗುತ್ತಿದೆ. ಪಾಸ್ ಪೋರ್ಟ್ ನಲ್ಲಿ ದಾಖಲಾಗಿರುವಂತ ಎಂಟ್ರಿಯ ಆಧಾರದ ಮೇಲೆ ಅವರೀಗ ಜರ್ಮನಿಯ ಬಳಿಕ ಹಂಗೇರಿಯಾದ ಬುಡಾಪೆಸ್ಟ್ ನಲ್ಲಿ ತಂಗಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸುತ್ತಿದೆ. ಹೆಚ್ ಡಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿನ್ನೆ, ಮೊನ್ನೆ ಮಳೆಯಾಗಿತ್ತು. ಈಗ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ್ದು, ಮೇ.7 ಮತ್ತು 8ರ ಬಳಿಕ ಬೆಂಗಳೂರಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳ ಕಾಲ ಬೆಂಗಳೂರಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದಿದೆ. ಬೆಂಗಳೂರಲ್ಲಿ ಮುಂದಿನ ಮೂರು ದಿನ ಉಷ್ಣಾಂಶವು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ಸ್, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ದಾಖಲಾಗೋ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ, ಬೆಂಗಳೂರು, ಕೋಲಾರ ಸೇರಿ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದಿದೆ. ಮೇ 7ರ ಬಳಿಕ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಲಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/why-is-the-central-government-not-cooperating-in-bringing-prajwal-back-by-issuing-a-blue-corner-notice/ https://kannadanewsnow.com/kannada/good-news-for-job-seekers-application-deadline-for-1000-va-recruitment-extended-till-may-15/
ಬೆಂಗಳೂರು: SIT ತಂಡ ಸಿಬಿಐ ಮೂಲಕ ಇಂಟರ್ ಪೋಲ್ ಗೆ ಮನವಿ ಮಾಡಿದರೂ ಆರೋಪಿಯ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಕರೆತರುವಲ್ಲಿ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲವೇಕೆ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಪ್ರಜ್ವಲ್ ರೇವಣ್ಣನ ವಿರುದ್ಧ SIT ತಂಡ ಬ್ಲೂ ಕಾರ್ನರ್ ನೋಟಿಸ್ ಗೆ ಇಂಟರ್ ಪೋಲ್ ಗೆ ಮನವಿ ಮಾಡಿದೆ, ಮಾತೃಶಕ್ತಿ, ನಾರಿಶಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ಪರ ನಿಂತಿರುವುದೇಕೆ? ಎಂದು ಕೇಳಿದೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ಇಲಾಖೆ ಮನಸು ಮಾಡಿದರೆ ಆರೋಪಿಯನ್ನು ಕರೆತರಬಹುದು, ಆದರೆ ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ರೇಪಿಸ್ಟ್ ಅಭ್ಯರ್ಥಿಯ ಪರ ನಿಂತಿದೆ ಎಂಬುದಾಗಿ ಆರೋಪಿಸಿದೆ. ಪ್ರಧಾನಿ ಮೋದಿಗೆ ಮಹಿಳೆಯರ ಹಿತಾಸಕ್ತಿ ಬೇಕಿಲ್ಲ ಎನ್ನುವುದು ಮಣಿಪುರದ ಘಟನೆಯಿಂದ ಹಿಡಿದು ಪ್ರಜ್ವಲ್ ರೇವಣ್ಣನ ಪ್ರಕರಣದವರೆಗೂ ಸಾಬೀತಾಗಿದೆ ಎಂದು ವಾಗ್ಧಾಳಿ ನಡೆಸಿದೆ. https://twitter.com/INCKarnataka/status/1786690528085742002 https://kannadanewsnow.com/kannada/rape-case-minister-krishna-byre-gowda-hints-at-hd-revannas-arrest/ https://kannadanewsnow.com/kannada/good-news-for-job-seekers-application-deadline-for-1000-va-recruitment-extended-till-may-15/
ರಾಯಚೂರು: ಒಂದೆಡೆ ಎಸ್ಐಟಿ ಅಧಿಕಾರಿಗಳು ಅತ್ಯಾಚಾರ ಆರೋಪ ಸಂತ್ರಸ್ತೆಯರನ್ನು ಹೊಳೆನರಸೀಪುರದಲ್ಲಿನ ಹೆಚ್.ಡಿ ರೇವಣ್ಣ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸುತ್ತಿದ್ದಾರೆ. ಮತ್ತೊಂದೆಡೆ ಹೆಚ್.ಡಿ ರೇವಣ್ಣ ಬಂಧನದ ಸುಳಿವನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ನೀಡಿದ್ದಾರೆ. ರಾಯಚೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋ ಪ್ರಮೇಯವೇ ಇಲ್ಲವೆಂದರು. ಹೆಚ್.ಡಿ ರೇವಣ್ಣ ಅವರು ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಇಂದು ಸಂಜೆ 5.30ರ ಒಳಗಾಗಿ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು. ಇಲ್ಲದಿದ್ದರೇ ತನಿಖಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ವಿಚಾರಣೆಗೆ ಹಾಜರಾಗದಿದ್ರೇ ಖಡಾಖಂಡಿತ ಕ್ರಮವಾಗುತ್ತದೆ ಎಂಬುದಾಗಿ ಹೇಳಿದರು. ಈ ಮೂಲಕ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಇಂದು ಎಸ್ಐಟಿ ಅಧಿಕಾರಿಗಳು ಬಂಧಿಸೋ ಸುಳಿವು ನೀಡಿದರು. https://kannadanewsnow.com/kannada/our-government-is-committed-to-protecting-victims-of-rape-by-prajwal-revanna-cm-to-rahul-gandhis-letter/ https://kannadanewsnow.com/kannada/good-news-for-job-seekers-application-deadline-for-1000-va-recruitment-extended-till-may-15/
ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಲಿರುವಂತ ಮೂರು ಶಿಕ್ಷಕರ ಹಾಗೂ ಮೂರು ಪದವೀಧರ ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಈ ಚುನಾವಣೆಯಲ್ಲಿ ಮತದಾನಕ್ಕಾಗಿ ಅರ್ಹ ಶಿಕ್ಷಕರು, ಪದವೀಧರರು ನೋಂದಾಯಿಸಿಕೊಳ್ಳೋದಕ್ಕೆ ಮೇ.6ರವರೆಗೆ ಅವಕಾಶ ನೀಡಲಾಗಿದೆ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ-2024ಕ್ಕೆ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಮೇ.6, 2024 ಕೊನೆಯ ದಿನವಾಗಿದೆ ಎಂದಿದೆ. ಅರ್ಹ ಶಿಕ್ಷಕರು ಹಾಗೂ ಪದವೀಧರರು 2 ಸೆಟ್ ಅಗತ್ಯ ದಾಖಲೆಗಳನ್ನು ಸಮೀಪದ ಚುನಾವಣಾ ನೋಂದಣಾಧಿಕಾರಿಗಳಿಗೆ ಮೇ.6ರ ಒಳಗಾಗಿ ಸಲ್ಲಿಸುವಂತೆ ತಿಳಿಸಿದೆ. ಆದ್ದರಿಂದ ಎಲ್ಲಾ ಶಿಕ್ಷಕರು ಮತ್ತು ಪದವೀಧರರ ಗಮನಿಸಬೇಕಾದದ್ದು, ಮತದಾರರ ನೋಂದಣಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವು ಮೇ 6, 2024 ಆಗಿದೆ. ಕೂಡಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. https://twitter.com/ceo_karnataka/status/1786603845013098695 https://kannadanewsnow.com/kannada/good-news-for-job-seekers-application-deadline-for-1000-va-recruitment-extended-till-may-15/ https://kannadanewsnow.com/kannada/our-government-is-committed-to-protecting-victims-of-rape-by-prajwal-revanna-cm-to-rahul-gandhis-letter/
ಬೆಂಗಳೂರು: ಕೆಇಎಯಿಂದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿತ್ತು. ಈಗ ಉದ್ಯೋಗಾಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸೋದಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಮೇ.15ರವರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇಂದು ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಳ್ಳಲಾಗಿದೆ. ಅದರಲ್ಲಿ, VAO Date Extended ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಮೇ 18ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ. https://twitter.com/KEA_karnataka/status/1786628872035000759 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.…
ಬೆಂಗಳೂರು: ಹಾಸನ ಸಂಸದರಿಗೂ ನನಗೂ ಸಂಪರ್ಕವಿಲ್ಲ. ಹಾಸನ ವೀಡಿಯೋ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂಬುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಬಹಳ ನೋವಾಗಿದೆ. ಅವರು ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದರು. ಈ ಘಟನೆ ದೇವೇಗೌಡ ಮೇಲೆ ಬಹಳ ಪರಿಣಾಮ ಬೀರಿದೆ. ಇದರಿಂದ ದೇವೇಗೌಡರು ಬಹಳ ನೋಂದಿದ್ದಾರೆ. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ. ಹಾಸನ ಅಶ್ಲೀಲ ವೀಡಿಯೋ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂಬುದಾಗಿ ಹೇಳಿದರು. https://kannadanewsnow.com/kannada/rise-in-communicable-diseases-due-to-heat-wave-in-the-state-instructions-to-take-necessary-action/ https://kannadanewsnow.com/kannada/our-government-is-committed-to-protecting-victims-of-rape-by-prajwal-revanna-cm-to-rahul-gandhis-letter/