Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟದ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ಮಾರ್ಚ್.3ರಿಂದ 22ರವರೆಗೆ ಸಾಲು ಸಾಲು ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಇಂದು ಈ ಸಂಬಂಧ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ಮಾರ್ಚ್.3ರಿಂದ 22ರವರೆಗೆ ರಾಜ್ಯದಲ್ಲಿ ಎಂಇಎಸ್ ಪುಂಡಾಟ ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಮಾರ್ಚ್ 3ರಿಂದ 22ರವರೆಗೆ ಬೃಹತ್ ಹೋರಾಟ ಮಾಡಲಿದ್ದೇವೆ. ಮಾರ್ಚ್.3ರಂದು ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಕೈಗೊಂಡಿದ್ದೇವೆ. ಮಾರ್ಚ್.7ರಂದು ಬೆಳಗಾವಿ ಚಲೋಗೆ ಕನ್ನಡಿಗರು ಸಜ್ಜಾಗಲಿದ್ದಾರೆ ಎಂದು ತಿಳಿಸಿದರು. ಮಾರ್ಚ್.11ರಂದು ಅತ್ತಿಬೆಲೆ ಗಡಿ ಬಂದ್ ಗೆ ನಿರ್ಧರಿಸಲಾಗಿದೆ. ಮಾರ್ಚ್.16ರಂದು ಹೊಸಕೋಟೆ ಟೋಲ್ ಬಂದ್ ಮಾಡಿ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಲಿದ್ದೇವೆ ಎಂದರು. ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ನಿರ್ಧರಿಸಲಾಗಿದೆ. ಅಂದು ಹೋಟೆಲ್, ಅಂಗಡಿ ಮುಂಗಟ್ಟುಗಳು, ಸಾರಿಗೆ ಸಂಚಾರ ಬಂದ್ ಆಗಲಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ…
‘ನಟ ದರ್ಶನ್’ಗೆ ಹೈಕೋರ್ಟ್ ಬಿಗ್ ರಿಲೀಫ್: ಬೆಂಗಳೂರು ಬಿಟ್ಟು ಹೋಗದಂತೆ ವಿಧಿಸಿದ್ದ ಷರತ್ತು ಸಡಿಲಿಕೆ | Actor Darshan
ಬೆಂಗಳೂರು: ನಟ ದರ್ಶನ್ ಗೆ ಹೈಕೋರ್ಟ್ ಬಿಗ್ ರಿಲೀಫ್ ಎನ್ನುವಂತೆ ಬೆಂಗಳೂರು ಬಿಟ್ಟು ಹೋಗದಂತೆ ವಿಧಿಸಿದ್ದಂತ ಷರತ್ತು ಸಡಿಲಗೊಳಿಸಿದೆ. ಈ ಮೂಲಕ ದೇಶಾದ್ಯಂತ ಸಂಚಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಅದರಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಷರತ್ತು ವಿಧಿಸಿತ್ತು. ಈ ಷರತ್ತು ಸಡಿಲಿಕೆ ಮಾಡುವಂತೆ ನಟ ದರ್ಶನ್ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿರುವಂತ ಹೈಕೋರ್ಟ್ ನ್ಯಾಯಪೀಠವು ದೇಶಾಧ್ಯಂತ ಸಂಚಾರಕ್ಕೆ ಅವಕಾಶ ನೀಡಿದೆ. ಆದರೇ ವಿದೇಶಕ್ಕೆ ತೆರಳೋದಕ್ಕೆ ಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. https://kannadanewsnow.com/kannada/kiara-advani-pregnant-sidharth-malhotra-and-his-wife-are-expecting-their-first-child/ https://kannadanewsnow.com/kannada/pro-kannada-organisations-call-for-karnataka-bandh-on-march-22/
ಕೆಎನ್ಎನ್ ಸಿನಿಮಾ ಡೆಸ್ಕ್: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ಅಡ್ವಾಣಿ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಅತ್ಯಂತ ಸುಂದರವಾದ ಜೋಡಿ ಬೇಬಿ ಸಾಕ್ಸ್ನ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ. ಕಿಯಾರಾ ಬರೆದಿದ್ದಾರೆ, “ನಮ್ಮ ಜೀವನದ ದೊಡ್ಡ ಉಡುಗೊರೆ. ಶೀಘ್ರದಲ್ಲೇ ಬರಲಿದೆ” ಎಂದು ಹೇಳಿದ್ದಾರೆ. ನಟ ಇಶಾನ್ ಖಟ್ಟರ್ ಬರೆದುಕೊಂಡಂತೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಸಂತೋಷದ ಸುದ್ದಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. “ಅಭಿನಂದನೆಗಳು, ಹುಡುಗರೇ. ಮತ್ತು ಆಶೀರ್ವದಿಸಿ, ಲಿಲ್. ಸುರಕ್ಷಿತ ಪ್ರಯಾಣ” ಎಂದು ಟ್ವೀಟ್ ಮಾಡಿದ್ದಾರೆ. “ಅತ್ಯುತ್ತಮ ತಾಯಿ ಮತ್ತು ತಂದೆಯಾಗಲಿದ್ದೇನೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. “ಅವರು ಅತ್ಯುತ್ತಮ ಸುದ್ದಿಯನ್ನು ಹಂಚಿಕೊಂಡಿದ್ದಾರೆ” ಎಂದು ಇನ್ನೊಬ್ಬ ಬಳಕೆದಾರರು ಉಲ್ಲೇಖಿಸಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 2023 ರಲ್ಲಿ ರಾಜಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ರೊಮ್ಯಾಂಟಿಕ್ ರಜಾದಿನಗಳಿಂದ ಹಿಡಿದು ಆರಾಮದಾಯಕ ಭೋಜನದ ದಿನಾಂಕಗಳವರೆಗೆ, ದಂಪತಿಗಳು ತಮ್ಮ ಜೀವನದ ಇಣುಕುನೋಟಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.…
ನವದೆಹಲಿ: ಖ್ಯಾತ ಹಿರಿಯ ನಟಿ ಮತ್ತು ಮಾಜಿ ರಾಜಕಾರಣಿ ಜಯಪ್ರದಾ ಅವರು ಇತ್ತೀಚೆಗೆ ತಮ್ಮ ಹಿರಿಯ ಸಹೋದರ ರಾಜಾ ಬಾಬು ಅವರನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಹಿರಿಯ ನಟಿ ಜಯಪ್ರದಾ ಅವರ ಸಹೋದರ ರಾಜಾ ಬಾಬು ಅವರು ಇನ್ನಿಲ್ಲವಾಗಿದ್ದಾರೆ. ಹಿರಿಯ ನಟಿ ಜಯಪ್ರದಾ ಅವರ ಹಿರಿಯ ಸಹೋದರ ರಾಜಾ ಬಾಬು ಅವರು ಫೆಬ್ರವರಿ 27, 2025 ರಂದು ಹೈದರಾಬಾದ್ನಲ್ಲಿ ನಿಧನರಾದರು. ಈ ಸುದ್ದಿಯನ್ನು ಸ್ವತಃ ಜಯಪ್ರದಾ ಭಾವನಾತ್ಮಕ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಸಹೋದರನ ನಿಧನಕ್ಕೆ ಜಯಪ್ರದಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅವರು ಹೈದರಾಬಾದ್ನಲ್ಲಿ ಮಧ್ಯಾಹ್ನ 3:26ಕ್ಕೆ ನಿಧನರಾಗಿರುವುದಾಗಿ ತಿಳಿಸಿದ್ದಾರೆ. ಅವರು ತಮ್ಮ ಅನುಯಾಯಿಗಳು ಮತ್ತು ಹಿತೈಷಿಗಳನ್ನು ತಮ್ಮ ಪ್ರಾರ್ಥನೆಯಲ್ಲಿ ಇರಿಸಿಕೊಳ್ಳುವಂತೆ ವಿನಂತಿಸಿದರು. ಅವರ ಪೋಸ್ಟ್ ತ್ವರಿತವಾಗಿ ಗಮನ ಸೆಳೆಯಿತು, ಮತ್ತು ಅನೇಕ ಜನರು ಕಾಮೆಂಟ್ ಗಳಲ್ಲಿ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. ರಾಜಾ ಬಾಬು ಸಾರ್ವಜನಿಕ ದೃಷ್ಟಿಯಲ್ಲಿ ವ್ಯಾಪಕವಾಗಿ ಪರಿಚಿತರಾಗಿರಲಿಲ್ಲ, ಆದರೆ ಅವರು ಜಯಪ್ರದಾ ಅವರ ಜೀವನದ ಪ್ರಮುಖ ಭಾಗವಾಗಿದ್ದರು.…
ಬೆಂಗಳೂರು: ಬೆಳಗಾವಿಯಲ್ಲಿ ಸಾರಿಗೆ ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಇದನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿಯೇ ಖಂಡಿಸಿದ್ದವು. ಈ ಬೆನ್ನಲ್ಲೇ ಇಂತಹ ಘಟನೆ ಖಂಡಿಸಿ ಮಾರ್ಚ್.22ಕ್ಕೆ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದಾವೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಮರಾಠಿಗರ ಪುಂಡಾಟಿಕೆ ಹೆಚ್ಚಾಗಿದೆ. ಅಲ್ಲದೇ ಕರ್ನಾಟಕದ ಬಸ್ ಗಳಿಗೆ ಮಸಿ ಕೂಡ ಬಳಿಯಲಾಗಿದೆ. ಈ ಎಲ್ಲವನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದಾವೆ. ಬೆಳಗಾವಿಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಮೇಲಿನ ಹಲ್ಲೆ, ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಖಂಡಿಸಿ ಮಾರ್ಚ್.22ರಂದು ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಘೋಷಿಸಿವೆ. ಈ ಸಂಬಂಧ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳಿಂದ ಮಹತ್ವದ ಸಭೆ ಕೂಡ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮಾರ್ಚ್ 22ರಂದು ಕರ್ನಾಟಕ ಬಂದ್ ಫಿಕ್ಸ್ ಆದಂತೆ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬೇಕಿದೆ. https://kannadanewsnow.com/kannada/breaking-brutal-murder-in-chikkaballapur-miscreants-kill-bar-supplier-over-petty-issue/…
ಉತ್ತರಾಖಂಡ: ಇಲ್ಲಿನ ಬದರೀನಾಥದ ಬಳಿಯಲ್ಲಿ ಭಾರೀ ಹಿಮಪಾತ ಉಂಟಾಗಿದೆ. ಈ ಪರಿಣಾಮ ಹಿಮದಡಿ 57ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ. ಅವರ ರಕ್ಷಣೆಗಾಗಿ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ಮುಂದುವರೆದಿದೆ. ಉತ್ತರಾಖಂಡದ ಬದರೀನಾಥ್ ಧಾಮದಲ್ಲಿ ಭಾರೀ ಹಿಮಪಾತ ಸಂಭವಿಸಿದ ನಂತರ 57 ಕ್ಕೂ ಹೆಚ್ಚು ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ರಾಜ್ಯದ ಮಾನಾದಿಂದ ಘಸ್ಟೋಲಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 57 ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿದ್ದರು. ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿ 16 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿವೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಸುಮನ್ ಮಾಹಿತಿ ನೀಡಿದರು. ಕಳೆದ 48 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಭಾರಿ ಹಿಮಪಾತವಾದ ನಂತರ ಹಿಮನದಿ ನದಿಗೆ ಕುಸಿದಿದೆ. ಹಿಮನದಿಯ ಬಳಿಯ ನಿರ್ಮಾಣ ಸ್ಥಳಗಳು ಗಮನಾರ್ಹ ಹಾನಿಯನ್ನು ಅನುಭವಿಸಿವೆ. https://kannadanewsnow.com/kannada/b-y-vijayendra-meets-cm-siddaramaiah-seeks-more-funds-for-bengalurus-development/ https://kannadanewsnow.com/kannada/breaking-brutal-murder-in-chikkaballapur-miscreants-kill-bar-supplier-over-petty-issue/
ಬೆಂಗಳೂರು: ಬೆಂಗಳೂರು ಮಹಾನಗರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಿಗೆ ಹೆಚ್ಚು ಅನುದಾನವನ್ನು ನೀಡಬೇಕೆಂದು ಹಾಗೂ ಬಜೆಟ್‍ನಲ್ಲಿ 6ರಿಂದ 8 ಸಾವಿರ ಕೋಟಿ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಹಣ ಕೊಡಬೇಕಿದೆ. ಫ್ಲೈಓವರ್, ವಿವಿಧ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಅವುಗಳಿಗೆ ಹೆಚ್ಚು ಅನುದಾನ ನೀಡಿ ಹೆಚ್ಚು ಒತ್ತು ಕೊಡಬೇಕೆಂದು ಕೋರಿರುವುದಾಗಿ ವಿವರಿಸಿದರು. ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು, ಮೆಟ್ರೋ ಪ್ರಯಾಣ ದರ ಜಾಸ್ತಿ ಆಗಿದ್ದು ಅದನ್ನು ಕಡಿಮೆ ಮಾಡುವ ಕುರಿತಂತೆ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಅಭಿವೃದ್ಧಿಗೆ ಅನುದಾನ ಮಾತ್ರವಲ್ಲದೆ, ಮೊದಲ ಬಾರಿ ಗೆದ್ದ ಶಾಸಕರಿಗೆ ಅನುದಾನ ಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ ಎಂದರು. ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿಸಾರಿಯೂ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಂಬಂಧಿಸಿ ಬಿಬಿಎಂಪಿಗೆ…
ಬೆಂಗಳೂರು: ರಾಜ್ಯ ಸರ್ಕಾರದ ಸಭೆ, ಸಮಾರಂಭಗಳ ಆಯೋಜನೆಯಲ್ಲಿ ಕಡ್ಡಾಯವಾಗಿ ಶಿಷ್ಟಾಚರಗಳನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದೇ ಇದ್ದರೇ ಅಂತಹ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಆದೇಶ ಹೊರಡಿಸಿದ್ದು, ಅದರಲ್ಲಿ ಸರ್ಕಾರದ ಸಭೆ ಸಮಾರಂಭಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ ಶಿಷ್ಠಚಾರದ ಕುರಿತು ಸಮಗ್ರವಾದ ಮಾಹಿತಿಯನ್ನು, ಸರ್ಕಾರದ ಉಲ್ಲೇಖಿತ ಸುತ್ತೋಲೆಗಳನ್ವಯ ಹೊರಡಿಸಿದ್ದು ಇರುತ್ತದೆ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕಡ್ಡಾಯವಾಗಿ ಸದರಿ ಮಾನದಂಡಗಳನ್ನು ಅನುಸರಿಸಲು ಈಗಾಗಲೇ ಆಯುಕ್ತಾಲಯ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು ಇರುತ್ತದೆ. ಆದರೂ ಸಹ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಷ್ಟಾಚಾರವನ್ನು ಸಮರ್ಪಕವಾಗಿ ಪಾಲನೇ ಮಾಡದೇ ಇರುವ ಕುರಿತು ಪ್ರಕರಣಗಳು ಹಕ್ಕು ಬಾಧ್ಯತಾ ಸಮಿತಿಯಲ್ಲಿ ದಾಖಲಾಗುತ್ತಿವೆ. ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲು ಅವಕಾಶಗಳಿರುತ್ತವೆ ಎಂದು ತಿಳಿಸಿದ್ದಾರೆ.…
ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಮೂಲಕ 1.5 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತಿರುವುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಹೊಸ ಪ್ರವಾಸೋದ್ಯಮ ನೀತಿಯ ಅಳವಡಿಕೆ ಮೂಲಕ ಮುಂದಿನ 5 ವರ್ಷಗಳಲ್ಲಿ ₹8,000 ಕೋಟಿ ನೇರ ಹೂಡಿಕೆಯ ಆಕರ್ಷಣೆ ಹಾಗೂ 1.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಪ್ರವಾಸೋದ್ಯಮ ನೀತಿಯ ಅನುಷ್ಠಾನಕ್ಕೆ ₹1,350 ಕೋಟಿ ಬಜೆಟ್ ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1895146889353535531 https://kannadanewsnow.com/kannada/woman-injured-as-bmtc-bus-runs-over-her-in-bengaluru/ https://kannadanewsnow.com/kannada/state-government-employees-note-heres-all-you-need-to-know-about-the-registration-for-the-computer-literacy-test/
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಹರಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದಂತ ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ರಸ್ತೆ ದಾಟುತ್ತಿದ್ದಂತ ಮಹಿಳೆಯೊಬ್ಬರ ಮೇಲೆಯೇ ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯನ್ನು ಲಿಂಗಮ್ಮ ಎಂಬುದಾಗಿ ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವಂತ ಲಿಂಗಮ್ಮ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/let-a-thousand-people-oppose-i-trust-you-dcm-d-k-shivakumar/ https://kannadanewsnow.com/kannada/vehicle-collides-with-pedestrians-in-israel-several-injured-suspected-of-terrorist-attack/








