Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದಂತ ಸ್ಟಾಫ್ ನರ್ಸ್ ಗಳನ್ನು ಖಾಯಂಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಜಯದೇವ ಆಸ್ಪತ್ರೆ 10ಕ್ಕೂ ಹೆಚ್ಚು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಂತ ಸ್ಟಾಫ್ ನರ್ಸ್ ಗಳ ಸೇವೆಯನ್ನು ಖಾಯಂಗೊಳಿಸುವಂತೆ ಆದೇಶಿಸಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಬಿ.ಜೆ ರಾಣಿ ಸೇರಿದಂತೆ 10ಕ್ಕೂ ಹೆಚ್ಚು ಸ್ಟಾಫ್ ನರ್ಸ್ ಗಳು ಗುತ್ತಿಗೆ ಆಧಾರದಲ್ಲಿ ಜಯದೇವ ಹೃದಯ ರಕ್ತನಾಳದ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿಮ್ಮ ಸೇವೆಯನ್ನು ಕಾಯಂಗೊಳಿಸಲು ಆಗದು ಎಂಬುದಾಗಿ ಲಿಖಿತವಾಗಿ ಪತ್ರದಲ್ಲಿ ಆಸ್ಪತ್ರೆಯು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠವು, ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದ 10ಕ್ಕೂ ಹೆಚ್ಚು ಅರ್ಜಿದಾರ ನರ್ಸ್ ಗಳನ್ನು ಖಾಯಂಗೊಳಿಸುವಂತೆ ಆದೇಶಿಸಿದರು. ಜಯದೇವ ಹೃದ್ರೋಗ ಸಂಸ್ಥೆಗೆ,…
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ತೆರಳುತ್ತಿದ್ದಂತ ಸಂದರ್ಭದಲ್ಲೇ ಸಿಎಂ ಕಾನ್ವೆಗೆ ಎದುರಾಗಿ ಸಂಚಾರ ನಿಯಮ ಉಲ್ಲಂಘಿಸಿ, ಮಾಜಿ ಸಚಿವ ಹಾಲಿ ಶಾಸಕ ಜನಾರ್ಧನ ರೆಡ್ಡಿ ಕಾರು ಚಾಲಕ ಕಾರು ಚಲಾಯಿಸಿದ್ದನು. ಹೀಗಾಗಿ ಸಿಎಂ ಕಾನ್ವೆ ರೂಲ್ಸ್ ಉಲ್ಲಂಘಿಸಿದ ಕಾರಣ, ಶಾಸಕ ಜನಾರ್ಧನ ರೆಡ್ಡಿಗೆ ಸೇರಿದಂತೆ ರೇಂಜ್ ರೋವರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಕೆಲ ದಿನಗಳ ಹಿಂದೆ ಗಂಗಾವತಿಯಿಂದ ಬಳ್ಳಾರಿಗೆ ತೆರಳುತ್ತಿದ್ದರು. ಈ ವೇಳೆ ಅವರಿಗಾಗಿ ಜೀರೋ ಟ್ರಾಫಿಕ್ ನಿಯಮವನ್ನು ಮಾರ್ಗದಲ್ಲಿ ಅಳವಡಿಸಲಾಗಿತ್ತು. ಆದರೇ ಈ ನಿಯಮ ಮೀರಿ ಶಾಸಕ ಜನಾರ್ಧನ ರೆಡ್ಡಿ ಸಿಎಂ ಕಾನ್ವೆ ನಿಯಮಕ್ಕೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ತೆರಳಿ, ನಿಯಮ ಉಲ್ಲಂಘಿಸಿದ್ದರು. ಸಿಎಂ ಕಾನ್ವೆ ನಿಯಮ ಉಲ್ಲಂಘಿಸಿದಂತ ಜನಾರ್ಧನ ರೆಡ್ಡಿ ಕಾರು ಚಾಲಕ ಹಾಗೂ ಇತರೆ ಮೂರು ಕಾರುಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಶಾಸಕ ಜನಾರ್ಧನ ರೆಡ್ಡಿಗೆ ಸೇರಿದ್ದಂತ ರೇಂಜ್ ರೋವರ್ ಕಾರನ್ನು ಜಪ್ತಿ ಮಾಡಿದಂತ ಗಂಗಾವತಿ ಠಾಣೆಯ ಪೊಲೀಸರು,…
ಬೆಂಗಳೂರು: ಮಹಿಳೆಯರ ವಿಚಾರದಲ್ಲಿ ಬಿಜೆಪಿ ಸಮರ್ಥವಾಗಿದ್ದರೆ ಯಡಿಯೂರಪ್ಪ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಬೇಕು. ಜಾನಿ ಮಾಸ್ಟರ್ ಪ್ರಕರಣದಲ್ಲಿನ ನಿಲುವು, ಯಡಿಯೂರಪ್ಪನವರ ಪ್ರಕರಣದಲ್ಲಿ ಯಾಕಿಲ್ಲ? ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಪೋಕ್ಸೋ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೃತ್ಯ ನಿರ್ದೇಶಕರಾದ ಜಾನಿ ಮಾಸ್ಟರ್ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಅವರ ಈ ದಿಟ್ಟ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ನಾವು ಸಹನೆ ಇಟ್ಟುಕೊಳ್ಳಬಾರದು. ಅಂತಹವರ ವಿರುದ್ಧ ನಾವು ಸಾಧ್ಯವಾದಷ್ಟು ಹೆಚ್ಚಿನ ಕಠಿಣ ನಿರ್ಧಾರ ಕೈಗೊಳ್ಳಬೇಕು. ಮಹಿಳೆಯರು ಸಾರ್ವಜನಿಕ ಕ್ಷೇತ್ರ, ಉದ್ಯಮ ಹಾಗೂ ವ್ಯಾಪಾರದಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರಿಗೆ ಮುಜುಗರ ಹಾಗೂ ತೊಂದರೆಯಾಗದಂತಹ ವಾತಾವರಣ ನಿರ್ಮಿಸುವುದು ಎಲ್ಲಾ ಸರ್ಕಾರಗಳ ಜವಾಬ್ದಾರಿ. ಹೀಗಾಗಿ ಈ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ ಎಂದರು. ಕೇಂದ್ರ ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಒಂದು ಕಡೆಯಾದರೆ, ಬಿಜೆಪಿ…
ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ಮೈಸೂರು ಸಂಘದ ಕೆಲ ಪದಾಧಿಕಾರಿಗಳು ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ತೆಲಗಿ ಮಾದರಿಯ ನಕಲಿ ಛಾಪಾ ಕಾಗದ ಹಗರಣ ನಡೆಸಿದ್ದು, ಕಾನೂನು ಬಾಹಿರ ಫ್ರಾಂಕಿಂಗ್ ಸೇವೆಗಳ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡಿದ್ದಾರೆ. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟುವ ಜೊತೆಗೆ ಈ ಕುರಿತು ವಿಶೇಷ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಆರ್. ಈಶ್ವರ ರಾಜು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಅನುತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಮೈಸೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಭಾರೀ ಪ್ರಮಾಣದಲ್ಲಿ ಅಕ್ರಮಗಳನ್ನು ನಡೆಸಿದ್ದು, ಗ್ರಾಹಕರ ಹಿತ ರಕ್ಷಣೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಬೆಂಗಾವಲಾಗಿ ನಿಲ್ಲಬೇಕಾದ ಇವರು ಅಕ್ಷರಶಃ ಬೇಲಿಯೇ ಎದ್ದು ಹೊಲ ಮೇಯ್ದಂತೆ ವರ್ತಿಸಿದ್ದಾರೆ. ವಿದ್ಯುತ್ ಗುತ್ತಿಗೆದಾರರ ಮೂಲಕ ಮನೆಗೆ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಮಂಗಳವಾರ ನಡೆದ ಚುನಾವಣಾ ಫಲಿತಾಂಶದಲ್ಲಿ ಪಕ್ಷ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್ ಅರ್ಧದಷ್ಟು ದಾಟಿದ ನಂತರ ತಮ್ಮ ಮಗ ಒಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, “ಜನರು ತಮ್ಮ ಆದೇಶವನ್ನು ನೀಡಿದ್ದಾರೆ. ಆಗಸ್ಟ್ 5 ರಂದು ತೆಗೆದುಕೊಂಡ ನಿರ್ಧಾರವನ್ನು (370 ನೇ ವಿಧಿಯನ್ನು ರದ್ದುಪಡಿಸುವುದು) ಅವರು ಸ್ವೀಕರಿಸುವುದಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ. ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಲಿದ್ದಾರೆ. ಈ ವರದಿಯನ್ನು ಸಲ್ಲಿಸುವ ಸಮಯದಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಏಳು ಕ್ಷೇತ್ರಗಳನ್ನು ಗೆದ್ದಿತ್ತು ಮತ್ತು 34 ಸ್ಥಾನಗಳಲ್ಲಿ ಮುಂದಿತ್ತು. 90 ಸದಸ್ಯರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಪಕ್ಷವು 46 ಸ್ಥಾನಗಳಿಗಿಂತ ಆರಾಮವಾಗಿ ಮುಂದಿದೆ. ಒಮರ್ ಅಬ್ದುಲ್ಲಾ ಬುಡ್ಗಾಮ್ ಮತ್ತು ಗಂಡರ್ಬಾಲ್ ಎಂಬ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಒಮರ್ ಬುಡ್ಗಾಮ್ ಸ್ಥಾನವನ್ನು 18,485 ಮತಗಳ ಅಂತರದಿಂದ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕೆಎಎಸ್ ಅಧಿಕಾರಿ ಸಿ.ಎನ್ ಮಂಜುನಆಥ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ. ಇಂದು ಸಹಕಾರ ಇಲಾಖೆಯ ಸರ್ಕಾರದ ಅಧೀನ ಅಧಿಕಾರಿ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಕೋರಿರುತ್ತಾರೆ ಎಂದು ಹೇಳಿದ್ದಾರೆ. ಮೇಲ್ಕಂಡ ಅಂಶಗಳನ್ನು ಪರಿಶೀಲಿಸಲಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು, ಈ ಸಂಘವು ಬೃಹತ್ ಸಂಘವಾಗಿದ್ದು, ಸಂಘದ ಆಡಳಿತ ಮಂಡಳಿ ಅವಧಿ ಮುಗಿದಿರುವುದರಿಂದ ಸಂಘದ ಸದಸ್ಯರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸಂಘದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರವು ತೀರ್ಮಾನಿಸಿದೆ, ಅದರಿಂದ ಈ ಆದೇಶಿಸಿದ್ದಾರೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 27-ಎ ರನ್ವಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು-560001, ಈ ಸಂಘಕ್ಕೆ ಶ್ರೀ. ಸಿ.ಎನ್. ಮಂಜುನಾಥ್, ಕೆ.ಎ.ಎಸ್(ಆಯ್ಕೆ ಶ್ರೇಣಿ), ಪ್ರಧಾನ ವ್ಯವಸ್ಥಾಪಕರು, ಆಹಾರ…
ಬೆಂಗಳೂರು: ಬೆಂಗಳೂರು ನಗರದ ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಅವರು, ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಆಂದೋಲನವೂ ನಡೆದಿತ್ತು. ಪ್ರಕೃತಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರ ಇಂದು ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದರು. 2021ರ ಜನವರಿ 19ರಂದು ನಡೆದಿದ್ದ 15ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾಪ ತಿರಸ್ಕರಿಸಲಾಗಿತ್ತು. ರಾಜ್ಯ ಹೈಕೋರ್ಟ್ ಈ ಕುರಿತು ಪುನರ್ ನಿರ್ಣಯ ಕೈಗೊಳ್ಳುವಂತೆ ಸೂಚಿಸಿತ್ತು. ಬೆಂಗಳೂರು ಕಾಂಕ್ರೀಟ್ ಕಾಡಾಗಿ ಮಾತ್ರ ಬೆಳೆಯದೆ, ಹಚ್ಚ ಹಸುರಿನ ತಾಣವಾಗಿಯೂ ಉಳಿಯಬೇಕು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಸರ್ಕಾರ…
ಬೆಂಗಳೂರು : ಕಪ್ಪತ್ತಗುಡ್ಡ ವನ್ಯಜೀವಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿನ ಗಣಿಗಾರಿಕೆ ಪ್ರಸ್ತಾವನೆಗಳಿಗೆ ಅವಕಾಶ ಕೋರಿದ್ದ ಒಟ್ಟು 28 ಪ್ರಸ್ತಾವನೆಗಳನ್ನು ಮುಂದೂಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಿರ್ಧರಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಅವರು, 16ನೇ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಈ ಕುರಿತು ಚರ್ಚಿಸಿ ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ ವ್ಯಾಪ್ತಿಯಲ್ಲಿ ಚಾಲನೆಯಲ್ಲಿರುವ ಅನಧಿಕೃತ ಗಣಿಗಾರಿಕೆಗಳಿಗೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ನೋಟೀಸ್ ನೀಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಿ, ಅನಧಿಕೃತ ಗಣಿಗಾರಿಕೆಗಳ ಕುರಿತು ವಾಸ್ತವಾಂಶದ ವರದಿ ನೀಡುವಂತೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಕಾನೂನಿನ ಅಂಶಗಳನ್ನು ಒಳಗೊಂಡ ವರದಿಯೊಂದಿಗೆ ಮೇಲ್ಕಂಡ ಪ್ರಸ್ತಾವನೆಗಳನ್ನು ಮುಂದಿನ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮರು ಮಂಡಿಸಲು ಸೂಚಿಸಲಾಗಿತ್ತು. ಅದರಂತೆ ಇಂದು ಈ ಪ್ರಸ್ತಾಪ ಮಂಡನೆಯಾಯಿತು. ಆದರೆ ಈ ಪ್ರಸ್ತಾವನೆ ಮುಂದೂಡಲುಇರುವ ತೀರ್ಮಾನಿಸಲಾಯಿತು…
ಬೆಂಗಳೂರು: ಇಂದು ನಮಗೆ ಸಾಮಾಜಿಕವಾಗಿ ಬೇಕಾಗಿರುವುದು ‘ಚಾಯ್ ಪೇ ಚರ್ಚಾ’ದಂತಹ ಬೀಡಾಡಿ ಚರ್ಚೆಗಳಲ್ಲ, ನಮ್ಮೆಲ್ಲರನ್ನು ಬೆಸೆಯುವಂತಹ, ಚಿಂತನೆಗೆ ಹಚ್ಚುವಂತಹ ಆಹಾರ ಸಂಸ್ಕೃತಿಯಂತಹ ಮೌಲಿಕ ಚರ್ಚೆಗಳು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಎಕ್ಸ್ ನಲ್ಲಿ ರಾಹುಲ್ ಗಾಂಧಿಯವರ ವೀಡಿಯೋವೊಂದನ್ನು ಶೇರ್ ಮಾಡಿರುವಂತ ಅವರು, ದಲಿತರ ಊಟದೆಡೆಗೆ ಅವಜ್ಞೆಯಷ್ಟೇ ಅಲ್ಲ, ತೀವ್ರ ಅಸಹನೆಯನ್ನೂ ಬೆಳೆಸಿಕೊಂಡಿರುವ ಸಮಾಜ ನಮ್ಮದು. ದಲಿತರ ಕೈಯಿಂದ ತಯಾರಿಸಿದ ಅಡುಗೆಯ ಸೇವನೆ ಇರಲಿ, ಅವರು ಊಟಕ್ಕೆ ಬಳಸುವ ಪಾತ್ರೆ ಮುಟ್ಟಿದರೂ ಅದನ್ನು ಮೈಲಿಗೆ ಎಂದು ಕರೆಯುವ ಮನಸ್ಥಿತಿ ಇಂದಿಗೂ ನಮ್ಮಲ್ಲಿ ವ್ಯಾಪಕವಾಗಿದೆ ಎಂದಿದ್ದಾರೆ. ಶಾಲೆಗಳಲ್ಲಿ ದಲಿತ ಸಮುದಾಯದವರು ಅಡುಗೆ ಮಾಡಿದರೆ ಅದನ್ನು ವಿರೋಧಿಸುವುದು, ಜಾತ್ರೆ, ದೇವಸ್ಥಾನಗಳ ಅಡುಗೆಯ ಉಸ್ತುವಾರಿಯಿಂದ ದಲಿತರನ್ನು ಪ್ರಜ್ಞಾಪೂರ್ವಕವಾಗಿ ಕೈ ಬಿಡುವುದು ಅಥವಾ ದೂರವಿರಿಸುವುದು ಇವೆಲ್ಲವನ್ನು ನಮ್ಮ ಸಮಾಜದಿಂದ ಇಂದಿಗೂ ತೊಡೆಯಲಾಗಿಲ್ಲ ಎಂದು ಹೇಳಿದ್ದಾರೆ. ಆಹಾರವೆನ್ನುವುದು ಅವರವರ ರುಚಿ, ಇಚ್ಛೆಗೆ ಅನುಸಾರವಾಗಿಯೇ ಇರುವುದಾದರೂ, ತಳ ಸಮುದಾಯಗಳ ಆಹಾರ ಸಂಸ್ಕೃತಿಯನ್ನು ಕೀಳಾಗಿ ಕಾಣುವ ಕೊಳಕು ಮನಸ್ಥಿತಿಯನ್ನು ಬೇರು ಸಹಿತ ಕಿತ್ತು…
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಜಿ ಸಿಇಟಿ 2024ರ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕೆಇಎ, UGCET-24 ಎರಡನೇ ವಿಸ್ತೃತ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶದ ಲಿಂಕ್ ಅನ್ನು KEA ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಹರು ಸೀಟು ಹಂಚಿಕೆ ಬಗ್ಗೆ ಮಾಹಿತಿ ಪಡೆಯಬಹುದು. ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ. ಈ ಸಂಬಂಧದ ಹೆಚ್ಚಿನ ಮಾಹಿತಿಗಾಗಿ ಯುಜಿ ಸಿಇಟಿ ಪರೀಕ್ಷೆ ಬರೆದಂತ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ cetonline.karnataka.gov.in/kea/ ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. https://twitter.com/KEA_karnataka/status/1843297272878264600 https://kannadanewsnow.com/kannada/good-news-for-kannadigas-railways-recruitment-2019-railways-recruitment-2019-notification-for-12-lakh-vacancies/ https://kannadanewsnow.com/kannada/waqf-board-property-doesnt-belong-to-anyone-mr-yatnal-its-a-donation-from-donors-minister-jamir/