Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಸಂಸದ ಪ್ರಜ್ವರ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವಂತ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿ ಸತೀಶ್ ಬಾಬುಗೆ ಮೇ.24ರವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಲಾಗಿತ್ತು. ಆದ್ರೇ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ಆರೋಪಿ ಸತೀಶ್ ಬಾಬುಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮೇ.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಇನ್ನೂ ಮಹಿಳೆ ಕಿಡ್ನ್ಯಾಪ್ ಕೇಸಲ್ಲಿ ಬಂಧನಕ್ಕೆ ಒಳಗಾಗಿರುವಂತ ಮತ್ತೋರ್ವ ಆರೋಪ ಕೀರ್ತಿಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ಕಷ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. https://kannadanewsnow.com/kannada/last-date-to-update-aadhaar-card-today-get-it-updated-in-this-simple-way/ https://kannadanewsnow.com/kannada/sex-determination-of-foetus-punishable-3-year-jail-term-fine-up-to-rs-10000-for-violation/
ಮೈಸೂರು: ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವಂತ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ನಾಮಪತ್ರ ಹಿಂಪಡೆಯೋ ಮಾತೇ ಇಲ್ಲ ಎಂಬುದಾಗಿ ಬಂಡಾಯದ ಭಾವುಟ ಹಾರಿಸಿದ್ದಾರೆ. ಇಂದು ನೈರುತ್ಯ ಪದವೀಧರರ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಶಾಸಕ ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. https://twitter.com/RaghupathiBhat/status/1790997688626110911 ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಜೆಪಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಸಿದ ಮೇಲೆ ಹಿಂತೆಗೆಯೋ ಮಾತೇ ಇಲ್ಲ ಎಂದರು. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ರೆ ನನ್ನ ಆಕ್ಷೇಪ ಇರಲಿಲ್ಲ. ನಾನು ನಾಮಪತ್ರ ಕೂಟ ಸಲ್ಲಿಸುತ್ತಿರಲಿಲ್ಲ. ಆದ್ರೇ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದರು. ಈ ಮೊದಲು ನನಗೆ ಟಿಕೆಟ್ ಕೈ ತಪ್ಪಿದಾಗ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿತ್ತು. ಆದರೇ ನಾನು…
ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು. ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಇಂದು ಪೂರ್ವ ವಲಯದ ರಾಮಸ್ವಾಮಿ ಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತದನಾಡಿದ ಅವರು, ಡೆಂಘೀ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ವಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಫಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬೀಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇನ್ನಿತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸಂಬಂಧ ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆಯಾ ವಲಯದ ವಾರ್ಡ್…
ಗದಗ: ಅಂಜಲಿ ಕೊಲೆ ಬೆದರಿಕೆ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಗದಗನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣ ಕುರಿತು.ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾ ತರನಾಗಿ ಕೊಲೆ ಮಾಡುವುದಾಗಿ ಹೇಳಿದ್ದಾನೆ. ಈ ಬಗ್ಗೆ ಅಂಜಲಿ ಮನೆಯವರು ದೂರು ಸಹ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ ಈ ಕೊಲೆ ತಪ್ಪಿಸಬಹುದಿತ್ತು. ಕೊಲೆಯನ್ನು ತಡೆಯದೇ ಪರೋಕ್ಷವಾಗಿ ಕೊಲೆಗೆ ಪೊಲೀಸರು ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕಲು ಪೊಲೀಸರು ನಿರತರಾಗಿದ್ದಾರೆ. ಪೊಲೀಸರು ಇಸ್ಪೀಟು, ಮಟಕಾ, ಕ್ಲಬ್, ಮರಳು ವ್ಯವಹಾರಗಳ ದಂಧೆಯಲ್ಲಿ ಸಂಪೂರ್ಣವಾಗಿ…
ಶಿವ ಮಂತ್ರಂ ಈ ಜಗತ್ತನ್ನು ರಕ್ಷಿಸುವ ಮತ್ತು ರಕ್ಷಿಸುವ ಅದ್ಭುತ ದೇವತೆಗಳಲ್ಲಿ ಶಿವನು ಒಬ್ಬ. ಶಿವನನ್ನು ಪೂಜಿಸಿದರೆ ಪುನರ್ಜನ್ಮ ಇರುವುದಿಲ್ಲ. ಅಂತಹ ಭಗವಾನ್ ಶಿವನನ್ನು ನಾವು ಆದಾಯವನ್ನು ಹೆಚ್ಚಿಸಲು ಅಥವಾ ಕುಟುಂಬದಲ್ಲಿ ಸಂತೋಷಕ್ಕಾಗಿ ಪೂಜಿಸಬೇಕಾದರೆ, ನಾವು ಅವರ ಪಂಚಾಚಾರ ಮಂತ್ರವನ್ನು ಹೇಗೆ ಜಪಿಸಬೇಕು ಎಂಬುದನ್ನು ನಾವು ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ ನೋಡಲಿದ್ದೇವೆ. ಸಾಮಾನ್ಯವಾಗಿ ಶಿವನ ಆರಾಧಕರು ಶಿವನ ಕೃಪೆಗೆ ಪಾತ್ರರಾಗಲು ಓಂ ನಮಶಿವಾಯ ಎಂಬ ಮಂತ್ರವನ್ನು ಪಠಿಸುತ್ತಾರೆ. ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವವರೂ ಇದ್ದಾರೆ. ಶಿವನನ್ನು ಪೂಜಿಸುವಾಗ ಮಾತ್ರ ಅದನ್ನು ಜಪಿಸುವ ಜನರಿದ್ದಾರೆ. ಈ ಮಂತ್ರವನ್ನು ಜಪಿಸುವುದರಿಂದ ನಮ್ಮ ಮನಸ್ಸು ಯಾವುದರ ಮೇಲೂ ಮೋಹದಿಂದ ಮುಕ್ತವಾಗುತ್ತದೆ. ಹೀಗಾದರೆ ಕುಟುಂಬಕ್ಕೆ ಹೊಂದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಹಣ ಸೇರಿಸುವ, ದ್ರವ್ಯ ಸೇರಿಸುವ, ಸಂಸಾರವನ್ನು ನೋಡುವ ಮತ್ತು ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುವ ಯೋಚನೆಯಿಲ್ಲದೆ, ಶಿವನೇ ಮುಖ್ಯ, ಅವನಿಲ್ಲದೆ ಬೇರೇನೂ ಇಲ್ಲ ಎಂದು ಭಾವಿಸಿ ಮಂಗಳಕರವಾದ ತಪಸ್ಸಿನ ಹಂತ ತಲುಪುತ್ತದೆ. ಹಾಗಾಗಿ ಮಠಕ್ಕೆ ಹೋಗಬಯಸುವವರು ಓಂ ನಮಃಶಿವಾಯ…
ಹುಬ್ಬಳ್ಳಿ: ಜಿಲ್ಲೆಯಲ ವೀರಾಪುರ ಓಣಿಯಲ್ಲಿ ನಡೆದಿದ್ದಂತ ಯುವತಿ ಅಂಜಲಿ ಅಂಬಿಗೇರಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ಬೆಂಡಿಗೇರಿ ಠಾಣೆ ಇನ್ಸ್ ಪೇಕ್ಟರ್ ಹಾಗೂ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಯುವತಿ ಅಂಜಲಿ ಅಂಬಿಗೇರಿಯನ್ನು ವಿಶ್ವ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ಈ ಪ್ರಕರಣದ ನಂತ್ರ ಆರೋಪಿ ವಿಶ್ವ ಪರಾರಿಯಾಗಿದ್ದನು. ಆತನ ಬಂಧನಕ್ಕಾಗಿ ಎರಡು ತಂಡವನ್ನು ರಚಿಸಲಾಗಿದೆ. ಈ ಬೆನ್ನಲ್ಲೇ ಯುವತಿ ಅಂಜಲಿ ಅಂಬಿಗೇರಿಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಅಜ್ಜಿ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ವಹಿಸಬೇಕಿದ್ದಂತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಿದ್ದರು. ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಬೆಂಡಿಗೇರಿ ಠಾಣೆಯ ಇನ್ಸ್ ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ರೇಖಾ ಎಂಬುವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.…
ನವದೆಹಲಿ: ನೈಋತ್ಯ ಮಾನ್ಸೂನ್ ( southwest monsoon ) ಮೇ 31 ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಇದು ಭಾರತದ ಕೃಷಿ ಆಧಾರಿತ ಆರ್ಥಿಕತೆಗೆ ನಿರ್ಣಾಯಕವಾದ ನಾಲ್ಕು ತಿಂಗಳ ಮಳೆ ಋತುವಿಗೆ ವೇದಿಕೆಯನ್ನು ಕಲ್ಪಿಸುತ್ತದೆ. “ಈ ವರ್ಷ, ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ” ಎಂದು ಭಾರತ ಹವಾಮಾನ ಇಲಾಖೆ ( India Meteorological Department-IMD) ಬುಧವಾರ ತಿಳಿಸಿದೆ. ಇದು ಬೇಗನೆ ಅಲ್ಲ. ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಮಾನ್ಯ ದಿನಾಂಕ ಜೂನ್.1 ಆಗಿರುವುದರಿಂದ ಇದು ಸಾಮಾನ್ಯ ದಿನಾಂಕಕ್ಕೆ ಹತ್ತಿರದಲ್ಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಬುಧವಾರ ಹೇಳಿದ್ದಾರೆ. ಕಳೆದ ವರ್ಷ, ಜೂನ್-ಸೆಪ್ಟೆಂಬರ್ ನೈಋತ್ಯ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು. ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆ ಈ ಅವಧಿಯಲ್ಲಿ ನಡೆಯುವುದರಿಂದ ಜೂನ್ ಮತ್ತು ಜುಲೈ ಅನ್ನು ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ಹೇರಳವಾದ ಮಳೆಗೆ ಅನುಕೂಲಕರವಾದ ಎರಡು…
ಬೆಂಗಳೂರು: ಉತ್ತಮ ಶಾಲೆಗಳಿಗೆ ಸೇರಿಸಬೇಕು ಎಂಬುದು ಅನೇಕ ಮಕ್ಕಳ ಪೋಷಕರ ಆಸೆ. ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಆರ್ ಟಿಇ. ಈಗ ಆರ್ ಟಿ ಇ ಅಡಿಯಲ್ಲಿ ಅರ್ಜಿ ಸಲ್ಲಿಕೆಗೆ ಅವದಿಯನ್ನು ಮೇ.20ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್.22ರವರೆಗೆ ಆರ್ ಟಿ ಇ ಅಡಿಯಲ್ಲಿ ದಾಖಲಾತಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಇದನ್ನು ಪೋಷಕರ ಕೋರಿಕೆ, ಮನವಿಯ ಮೇರೆಗೆ ಮೇ.20ರವರಗೆ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ. ಮೇ 30ರ ವರೆಗೆ ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ದತೆ ಕುರಿತ ಅರ್ಜಿಗಳ ಪರಿಶೀಲನೆ ನಡೆಸಲಿದ್ದು, ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಜೂನ್ 1 ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಜೂನ್ 5 ರಂದು ಆನ್ ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಜೂನ್ 6 ರಿಂದ ಶಾಲೆಗಳಲ್ಲಿ ಆರ್ಟಿಇ ಅಡಿ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ. ಜೂನ್ 6 ರಿಂದ 14ರ…
ಕೆಎನ್ಎನ್ ಸ್ಪೋರ್ಟ್ಸ್: ಫೆಡರೇಶನ್ ಕಪ್ 2024ರ ಪಂದ್ಯಾವಳಿಯಲ್ಲಿ ಭಾರತದ ನೀರಜ್ ಚೋಪ್ರಾ ಅವರು ಜಾವಲಿನ್ ಫೈನಲ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನೀರಜ್ ಚೋಪ್ರಾ 82.27 ಮೀಟರ್ ದೂರ ಜಿಗಿದು ಚಿನ್ನ ಗೆದ್ದರು. ಡಿ.ಪಿ.ಮನು 82.06 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು. ನೀರಜ್ ನಿಧಾನವಾಗಿ ಪ್ರಾರಂಭಿಸಿದರು. ಆದರೆ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಡಿಪಿ ಮನು ಅವರನ್ನು ಹಿಂದಿಕ್ಕಿದರು. ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಪ್ರಸ್ತುತ ಫೆಡರೇಶನ್ ಕಪ್ 2024 ರ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ನಲ್ಲಿ ಸ್ಪರ್ಧಿಸುತ್ತಿದ್ದರು. ಸ್ಥಳದಲ್ಲಿ ವರದಿಗಾರರ ಪ್ರಕಾರ, ನೀರಜ್ ತನ್ನ ತರಬೇತುದಾರರೊಂದಿಗೆ ಅನಿಮೇಟೆಡ್ ಚಾಟ್ನಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಮೈದಾನಕ್ಕಿಳಿಯುವ ಮೂಲಕ ನೀರಜ್ ಮೂರು ವರ್ಷಗಳ ನಂತರ ಫೆಡರೇಶನ್ ಕಪ್ಗೆ ಮರಳಿದ್ದಾರೆ. 2021ರಲ್ಲಿ ನೀರಜ್ 87.80 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದರು. ಕಳೆದ ವಾರ ದೋಹಾ ಡೈಮಂಡ್ ಲೀಗ್ನಲ್ಲಿ ನೀರಜ್ 88.36 ಮೀಟರ್ ಎಸೆದು…
ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ನಡೆದಿದ್ದಂತ ಅಂಜಲಿ ಅಂಬಿಗೇರೆ ಹತ್ಯೆ ಪ್ರಕರಣ ಸಂಬಂಧ ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಅಂತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಅಂಜಲಿ ಅಂಬಿಗೇರ ಹತ್ಯೆ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಪರಿಚಯಸ್ಥನೇ ಆಗಿದ್ದಾನೆ. ಇಂದು ಮುಂಜಾನೆ ಅಂಜಲಿಗೆ 4 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದರು. ಅಂಜಲಿ ಮನೆಯವರ ಪ್ರಕಾರ ವಿಶ್ವ ಪ್ರೀತಿಸುತ್ತಿದ್ದನು. ಆದ್ರೇ ಅಂಜಲಿ ವಿಶ್ವ ಆಲಿಯಾಸ್ ಗಿರೀಶ್ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಆರೋಪಿಯ ಪತ್ತೆಗಾಗಿ 2 ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು. https://kannadanewsnow.com/kannada/are-you-suffering-from-diabetes-here-are-the-control-tips/ https://kannadanewsnow.com/kannada/a-gods-miracle-in-the-state-akkanamma-finds-marammas-stone-thrown-into-lake-10-years-ago/