Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ತೆಂಗು ಬೆಳಗಾರರಿಗೆ ಗುಡ್ ನ್ಯೂಸ್ ಎನ್ನುವಂತೆ, ಸರ್ಕಾರದಿಂದ ತೆಂಗಿನ ಮರಗಳಿಗೆ ಹರಡುವ ಬಿಳಿನೊಣದ ಕೀಟಭಾಧೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತೆಂಗಿನ ಮರಗಳಿಗೆ ಹರಡುವ ಬಿಳಿನೊಣದ ಕೀಟಭಾದೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಸಮಗ್ರ ಪೋಷಕಾಂಶ ಮತ್ತು ಕೀಟ ಹಾಗೂ ರೋಗಗಳ ನಿರ್ವಹಣೆಗೆ ಪ್ರಸಕ್ತ ಸಾಲಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿಗೆ ₹15.31 ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು. https://twitter.com/KarnatakaVarthe/status/1900869765453017526 https://kannadanewsnow.com/kannada/is-ayurvedic-treatment-slow-a-boon-heres-the-information/ https://kannadanewsnow.com/kannada/breaking-shivamogga-woman-dies-of-electrocution-while-starting-motor/
ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಯುರ್ವೇದ ವೈದ್ಯಕೀಯ ಪದ್ಧತಿಯು ಅತ್ಯಂತ ಪ್ರಾಚೀನವಾದ ವೈದ್ಯಕೀಯ ಶಾಸ್ತ್ರವಾದರೂ, ವೈಜ್ಞಾನಿಕ ನೆಲೆಯಿಂದ ಕೂಡಿದೆ. ಹಾಗಾದ್ರೆ ಆಯುರ್ವೇದ ಚಿಕಿತ್ಸೆ ನಿಧಾನವೋ ಅಥವಾ ವರದಾನವೋ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ. ರೋಗಸ್ತು ದೋಷ ವೈಷಮ್ಯಂ ದೋಷ ಸಾಮ್ಯಂ ಅರೋಗತಃ || ಅಂದರೆ ದೇಹದಲ್ಲಿ functional elements ಗಳಾದ ತ್ರಿದೋಷಗಳು ವಾತ, ಪಿತ್ತ, ಕಫ ಮತ್ತು ಸಪ್ತ ಧಾತುಗಳ (tissues) ಅಸಮತೋಲನೆಯಿಂದ ರೋಗದ ಉದ್ಭವವು ಹಾಗೂ ಅವುಗಳ ಸಮತೋಲನ ಕಾರ್ಯದಿಂದ ಆರೋಗ್ಯವು. ಈ ನಿಟ್ಟಿನಲ್ಲಿ ದೋಷಗಳ ಮತ್ತು ಸಪ್ತ ಧಾತುಗಳ ಸಮಸ್ಥಿತಿಯೇ ಆಯುರ್ವೇದ ಚಿಕಿತ್ಸೆಯ ಮೂಲ ಮಂತ್ರ. ಅನ್ಯ ವೈದ್ಯಕೀಯ ಪದ್ಧತಿಗಳ ಆಕರ್ಷಣೆಯಿಂದಾಗಿ, ಪ್ರಾಚೀನ ಆಯುರ್ವೇದ ವೈದ್ಯಕೀಯ ಶಾಸ್ತ್ರದ ಕಡೆಗೆ ಜನರ ಒಲವು ಕಡಿಮೆಯಾಗಿದೆ ಮತ್ತು ಹಲವು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಆ ಸಂದೇಹಗಳ ಪರಿಹಾರಕ್ಕಾಗಿ ಈ ಲೇಖನ. 1.ಆಯುರ್ವೇದ ಚಿಕಿತ್ಸೆಯು ನಿಧಾನ. ಈ ತಪ್ಪು ಕಲ್ಪನೆಯು ಎಲ್ಲಾ ಸಮಯದಲ್ಲೂ ಅಥವಾ ಎಲ್ಲಾ ರೋಗಿಗಳಿಗೆ ಅನ್ವಯಿಸುವುದಿಲ್ಲ ಏಕೆಂದರೆ ಆಯುರ್ವೇದವು…
ಬೆಂಗಳೂರು: ರಾಜ್ಯದ ರಾಜಧಾನಿ ಜನರಿಗೆ ಬಿಗ್ ಶಾಕ್ ಎನ್ನುವಂತೆ ಇನ್ಮುಂದೆ ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ ಪಾವತಿಸಬೇಕಾಗಿದೆ. ಇದು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಸಕ್ಕೂ ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ. ಇದು ತೆರಿಗೆ ಅಲ್ಲ. ಕೇವಲ ಸರ್ವೀಸ್ ಚಾರ್ಜ್ ಆಗಿರುತ್ತದೆ. ಪ್ರಾಪರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದರು. ವಿದ್ಯುತ್ ಬಿಲ್ ರೀತಿಯಲ್ಲೇ ಬೆಂಗಳೂರಲ್ಲಿ ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವೀಸ್ ಚಾರ್ಜ್ ರೀತಿಯಲ್ಲಿ ಬಿಬಿಎಂಪಿ ತೆರಿಗೆಯಲ್ಲೇ ಆಡ್ ಮಾಡಲಾಗುತ್ತದೆ ಎಂದು ಹೇಳಿದರು. ಬೆಂಗಳೂರಲ್ಲಿ ಒಂದು ದಿನ ಕಸ ವಿಲೇವಾರಿ ಸ್ಥಗಿತಗೊಂಡಿತ್ತು. ಅದು ಸರಿಯಾಗಿದ್ದು, ರಾತ್ರಿಯಿಡಿ ಆನ್ ಲೋಡ್ ಮಾಡಲಾಗುತ್ತಿದೆ. ಮನವೊಲಿಕೆ ಯಶಸ್ವಿಯಾಗಿದ್ದು, ರಾತ್ರಿ ವೇಳೆ ಕಸ ವಿಲೇವಾರಿ ಆಗಲಿದೆ ಎಂಬುದಾಗಿ ತಿಳಿಸಿದರು. https://kannadanewsnow.com/kannada/gold-smuggling-case-actress-ranya-rao-moves-sessions-court-seeking-bail/ https://kannadanewsnow.com/kannada/breaking-shivamogga-woman-dies-of-electrocution-while-starting-motor/
ಬೆಂಗಳೂರು: ನಟಿ ರನ್ಯಾ ರಾವ್ ಅವರನ್ನು ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರೀಗ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ನಿನ್ನೆಯಷ್ಟೇ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಯಲಯು ವಜಾಗೊಳಿಸಿತ್ತು. ಹೀಗಾಗಿ ನಟಿ ರನ್ಯಾ ರಾವ್ ಅವರು ಸೆಷನ್ಸ್ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಟಿ ರನ್ಯಾ ರಾವ್ ಅವರು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನವಾಗಿ, ಜೈಲುಪಾಲಾಗಿದ್ದಾರೆ. ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನಲೆಯಲ್ಲಿ ಅವರ ಪರ ವಕೀಲರು ಈಗ ಸೆಷನ್ಸ್ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಗೆ ಅರ್ಜಿಯನ್ನು ನಟಿ ರನ್ಯಾ ರಾವ್ ಪರ ವಕೀಲರು ಸಲ್ಲಿಸಿದ್ದು, ಸೋಮವಾರದಂದು ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅಂದು ಯಾವ ತೀರ್ಪನ್ನು ಕೋರ್ಟ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. https://kannadanewsnow.com/kannada/even-if-the-price-of-water-is-increased-by-1-paise-per-litre-in-bengaluru-it-will-bear-50-90-per-cent-of-the-burden/ https://kannadanewsnow.com/kannada/breaking-shivamogga-woman-dies-of-electrocution-while-starting-motor/
ಬೆಂಗಳೂರು: ನಗರದಲ್ಲಿ ಕಾವೇರಿ ನೀರು ಸರಬರಾಜಿನ ದರವನ್ನು ಪ್ರತಿ ಲೀಟರ್ ಗೆ ಕೇವಲ 1 ಪೈಸೆ ಏರಿಕೆ ಮಾಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸದನದಲ್ಲೇ ಘೋಷಿಸಿದ್ದರು. ಜಸ್ಟ್ 1 ಪೈಸೆ ಪ್ರತಿ ಲೀಟರ್ ಗೆ ನೀರಿನ ದರ ಹೆಚ್ಚಳ ಮಾಡಿದ್ರೂ, ಬೆಂಗಳೂರು ಜನರಿಗೆ ಶೇ.50 ರಿಂದ 90ರಷ್ಟು ದರದ ಹೊರೆ ಬೀಳೋದು ಫಿಕ್ಸ್ ಆದಂತೆ ಆಗಿದೆ. ಅದು ಹೇಗೆ ಅಂತ ಮುಂದೆ ಓದಿ. ಕುಡಿಯುವ ನೀರಿನ ದರವನ್ನು ಪ್ರತಿ ಲೀಟರ್ ಗೆ 1 ಪೈಸೆ ಹೆಚ್ಚಳ ಮಾಡಿದರೆ ಜನ ಸಾಮಾನ್ಯರಿಗೆ ಭಾರೀ ಹೊರೆಯಾಗಲಿವೆ. ಆದರೆ, ಸ್ಲಾಬ್ ದರದ ಮೇಲೆ 1 ಪೈಸೆ ಏರಿಕೆ ಮಾಡಿದರೆ ಅಂಥಾ ಹೊರ ಆಗಲಾರದು. ಜಲಮಂಡಳಿಯು 2014ರಲ್ಲಿ ಕಾವೇರಿ ನೀರಿನ ದರ ಏರಿಕೆ ಮಾಡಿತ್ತು. ಪ್ರಸ್ತುತ ನಗರದಲ್ಲಿ ಮನೆಗಳಿಗೆ 50 ರೂ. ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ. ಇದಲ್ಲದೆ, 100 ರೂ. ಅಥವಾ ನೀರಿನ ಶುಲ್ಕದ ಶೇ.25 ಸ್ಯಾನಿಟರಿ ಶುಲ್ಕವಿದೆ. ಅದರ ಜತೆಗೆ, ಬಳಸುವ ನೀರಿನ ಪ್ರಮಾಣದ ಮೇಲೆ…
ರಾಯಚೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲು ಜಾಸ್ತಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮನೆ, ಕಚೇರಿಯಿಂದ ಹೊರಬರದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲಾವಣೆ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಮಧ್ಯಾಹ್ನದ ಹೊತ್ತಿನಲ್ಲಿ ಫೀಲ್ಡ್ ವಿಸಿಟ್ ಮಾಡೋದನ್ನು ಬಿಡುವಂತೆ ಸಲಹೆ ಮಾಡಿದರು. ಸರ್ಕಾರಿ ನೌಕರರು ಹೊರಗಡೆ ವೀಕ್ಷಣೆಯನ್ನು ಮಧ್ಯಾಹ್ನ 12ರಿಂದ 3ರವರೆಗೆ ಮಾಡಬಾರದು. ಬೆಳಗಿನ ಜಾವ ಅಥವಾ ಸಾಯಂಕಾಲದ ಹೊತ್ತಿನಲ್ಲಿ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ. ಸಮಯ ಬದಲಾವಣೆ ಮಾಡಿಕೊಂಡರೇ ಒಳ್ಳೇದು ಅಂತ ತಿಳಿಸಿದರು. ರಾಯಚೂರು ಜಿಲ್ಲೆಯಲ್ಲಿ 43 ರಿಂದ 44 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಹೆಚ್ಚಾಗೋ ಸಾಧ್ಯತೆ ಇದೆ. ಮಧ್ಯಾಹ್ನದ ಸಮಯದಲ್ಲಿ ಮನೆಯೊಳಗೆ ಅಥವಾ ಕಚೇರಿಯಲ್ಲೇ ಇರುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಶಾಲೆ, ಖಾಸಗಿ ಸಂಸ್ಥೆಗಳು ಈ ಬಗ್ಗೆ ಗಮನಕೊಡಬೇಕು. ಆಗಾಗ…
ಬೆಂಗಳೂರು: ರಾಜ್ಯದಲ್ಲಿ ಇಂದು ದಾಖಲೆಯ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ದಿನೇ ದಿನೇ ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿರುವುದು ಆಘಾತಕಾರಿಯಾಗಿದೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿ ಇಂದು ದಾಖಲೆ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ರಾಜ್ಯದಲ್ಲೇ ಅತೀ ಹೆಚ್ಚು ಇಂದು ದಾಖಲಾಗಿರುವಂತ ತಾಪಮಾನವಾಗಿರುವುದಾಗಿ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಮಾಹಿತಿ ನೀಡಿದೆ. https://twitter.com/KarnatakaSNDMC/status/1900842652985422208 ಹೀಟ್ ವೇವ್ : ಮುನ್ನೆಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಿಲ್ಲೆಗೆ ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಿದೆ. ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ) ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಮನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೀಟ್ ವೇವ್ ಸ್ಟ್ರೋಕ್ ತಪ್ಪಿಸಲು ಅನುಸರಿಸಬೇಕಾದ ಕ್ರಮಗಳು: ಸಾರ್ವಜನಿಕರು ಹೀಟ್…
ಆಂಧ್ರಪ್ರದೇಶ: ರಾಜ್ಯದಲ್ಲಿ ಬ್ಯಾಂಕ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತಂತ ಕುಟುಂಬವೊಂದು, ತಮ್ಮ ಅಂಗಡಿ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ. ಈ ಭೀಕರ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಚಿಲುಕುರಿ ಬಟ್ಟೆ ಅಂಗಡಿ ಮುಂದೆಯೇ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ. ಬೆಂಕಿ ಹಚ್ಚಿಕೊಂಡಂತ ಕುಟುಂಬದ ಸದಸ್ಯರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಕಿರುಕುಳದಿಂದ ಆತ್ಮಹತ್ಯೆಯೋ ಅಥವಾ ಬೇರೆ ಕಾರಣಕ್ಕೋ ಎನ್ನುವ ಬಗ್ಗೆ ತನಿಖೆಯ ನಂತ್ರ ಖಚಿತ ಮಾಹಿತಿ ತಿಳಿದು ಬರಬೇಕಿದೆ. https://kannadanewsnow.com/kannada/cyber-training-for-state-police-personnel-home-minister-dr-g-parameshwara/ https://kannadanewsnow.com/kannada/breaking-shivamogga-woman-dies-of-electrocution-while-starting-motor/
ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ “CIDECODE” ಸೈಬರ್ ಅಪರಾಧ ಶೃಂಗಸಭೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೈಬರ್ ಅಪರಾಧಗಳಿಗೆ ಯಾವುದೇ ರೀತಿಯ ಇತಿಮಿತಿಗಳಿಲ್ಲ. ಪ್ರಪಂಚದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಸಿಸಿಐಟಿಆರ್ ಸ್ಥಾಪಿಸಲಾಗಿದೆ. ಈವರೆಗೆ 46 ಸಾವಿರಕ್ಕು ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. 2023ರಲ್ಲಿ 22 ಸಾವಿರ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಬ್ಯಾಂಕ್ ಅಕೌಂಟ್, ಡೇಟಾ ಹ್ಯಾಕ್, ಸರ್ಕಾರಿ ಖಾತೆಗಳು ಹ್ಯಾಕ್ ಆಗುವುದು ಸೇರಿದಂತೆ ನಾನಾ ರೀತಿಯ ಸೈಬರ್ ಅಪರಾಧಗಳು ಆಗುತ್ತಿವೆ. ಇದನ್ನು ತಡೆಗಟ್ಟದೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗಳಾಗುತ್ತವೆ. ಸಾಮಾನ್ಯ…
ಬೆಂಗಳೂರು: ಕೋರ್ಟ್ ಗೆ ಹಾಜರಾಗುವವರೆಗೂ ನನಗೆ ಊಟ ಕೊಟ್ಟಿಲ್ಲ. ನನಗೆ ಸರಿಯಾಗಿ ನಿದ್ರೆ ಮಾಡೋಕೆ ಬಿಟ್ಟಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಗಾವಿ ಹೀಗೆ ಮಾಡಿದ್ದಾರೆ. ನನಗೆ ಹಿಂಸೆ ಕೊಟ್ಟಿದ್ದಲ್ಲೇ ಕಣ್ಣೀರು ಬರುವಂತೆ ಹೊಡೆದ್ರು. ನನ್ನ ತಂದೆ, ಕುಟುಂಬದವರನ್ನ ಕೂಡ ಬೆದರಿಸುತ್ತಿದ್ದರು. ಅಧಿಕಾರಿಗಳ ವಿರುದ್ಧ ದೂರಿನಲ್ಲಿ ನಟಿ ರನ್ಯಾ ರಾವ್ ಉಲ್ಲೇಖ ಮಾಡಿದ್ದಾರೆ. ನಟಿ ರನ್ಯಾ ರಾವ್ ಚಿನ್ನ ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಿ ಆರ್ ಐ ಅಧಿಕಾರಿಗಳ ವಿರುದ್ಧವೇ ದೂರಿನ ಸುರಿಮಳೆ ಮಾಡಿದ್ದಾರೆ. ಅದರಲ್ಲಿ ನನ್ನ ಮುಖಕಕ್ಕೆ 10 ರಿಂದ 15 ಬಾರಿ ಹೊಡೆದಿದ್ದಾರೆ. 40 ಖಾಲಿ ಹಾಳೆಗಳಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ. ನನ್ನ ತಂದೆಗೂ ಇದಕ್ಕೂ ಸಂಬಂಧವಿಲ್ಲ. ಆದರೂ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಒತ್ತಡ ಹಾಕಿ, ಚಿತ್ರ ಹಿಂಸೆ ನೀಡಿದ್ದಾರೆ ಎಂದಿದ್ದಾರೆ. ನನಗೆ ಹೊಡೆದ ಅಧಿಕಾರಿಗಳನ್ನು ನಾನು ಗುರುತಿಸುತ್ತೇನೆ. ನನ್ನ ಹತ್ತಿರ ಖಾಲಿ ಹಾಳೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಸಾಕ್ಷ್ಯ ಪತ್ರಗಳಲ್ಲಿ 50 ರಿಂದ 60 ಪುಟಗಳಲ್ಲಿ ಸಹಿ ಮಾಡಿದ್ದೇನೆ. ನನಗೆ ಸರಿಯಾಗಿ…














