Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪ್ರತಿಬಂಧಕ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದಲ್ಲದೇ ಧಾರ್ಮಿಕ ದತ್ತಿ ವಿಧೇಯಕಕ್ಕೂ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆಯನ್ನು ನೀಡಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಪುಟದ ನಿರ್ಣಯಗಳನ್ನು ಮಾಧ್ಯಮಗಳಿಗೆ ತಿಳಿಸಿದರು. ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ್ಕೆ ಒಪ್ಪಿಗೆಯನ್ನು ನೀಡಲಾಗಿದೆ. ಬಯಲುಸೀಮೆ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದೆ. ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಧಾರ್ಮಿಕ ದತ್ತಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಹತ್ಯೆ ಸಂರಕ್ಷಣೆ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ ಎಂಬುದಾಗಿ ಹೇಳಿದರು. ಇನ್ನೂ ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಒಟ್ಟು 8 ಬಿಲ್ ಗೆ ಅನುಮೋದನೆ ಮಾಡಿದ್ದೇವೆ. ಮತೀಯ ದ್ವೇಷ ಭಾಷಣವೂ ಇದರಲ್ಲಿ ಸೇರಿದೆ. ದ್ವೇಷ ಭಾಷಣ,ಸೈದ್ಧಾಂತಿಕ ನಿಲುವುಗಳ ಬಗ್ಗೆ ಸ್ಪಷ್ಟವಾಗಿದೆ. ವಿಧೇಯಕದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು. ವಿಶ್ವಬಂಡವಾಳ…
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ “66/11KV ಕಾಡುಗೋಡಿ”ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 06.12.2025 (ಶನಿವಾರ) ರಂದು ಬೆಳಗ್ಗೆ 09:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಡಿ.6ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳತೂರು, ಅಯ್ಯಪ್ಪ ದೇವಸ್ಥಾನ, ಕುಂಬೇನ ಅಗ್ರಹಾರ, ಪಟ್ಟಲಮ್ಮ ಲೇಔಟ್, ವಿ.ಎಸ್.ಆರ್ ಲೇಔಟ್, ಕಾಡುಗೋಡಿ, ಚನ್ನಸಂದ್ರ, ಎಫ್ಸಿಐ ಗೋದಾಮು, ಸಫಲ್, ಶಂಕರಪುರ, ಸಿದ್ಧಾರ್ಥ ಲೇಔಟ್, ಸಾಯಿ ಆಶ್ರಮ, ಎಚ್ಡಿಎಫ್ಸಿ ಬ್ಯಾಂಕ್, ಅಲಾಂಬಿಕ್ ಅಪಾರ್ಟ್ಮೆಂಟ್, ಮಾರ್ವೆಲ್ ಅಪಾರ್ಟ್ಮೆಂಟ್, ಇಮ್ಮಡಿಹಳ್ಳಿ, ಕೈತೋಟ, ದಿನ್ನೂರು, ಜಿ.ಕೆ ಲೇಔಟ್, ದಿನ್ನೂರು ಪೊಲೀಸ್ ಸ್ಟೇಷನ್, ಮೈತ್ರಿ ಲೇಔಟ್, ಸರ್ಕಾರಿ ಪಾಲಿಟೆಕ್ನಿಕ್, ಚನ್ನಸಂದ್ರ ಮೈನ್ ರೋಡ್, ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೊಮ್ಮರಪಾಳ್ಯ, ಪ್ರಶಾಂತ್ ಲೇಔಟ್, ಉಪ್ಕರ್ ಲೇಔಟ್, ಪೃಥ್ವಿ ಲೇಔಟ್ ಕರೆಂಟ್ ಇರೋದಿಲ್ಲ. ಸ್ವಾಮಿ ವಿವೇಕಾನಂದ ರಸ್ತೆ, ವೈಟ್ಫೀಲ್ಡ್ ಮೆೈನ್ ರೋಡ್, ಇಸಿಸಿಸಿ ರಸ್ತೆ, ನೈಡು ಲೇಔಟ್, ಇನರ್ ಸರ್ಕಲ್, ಕಾರಮ್ಮರಿಯಪ್ಪ ದೇವಸ್ಥಾನ ರಸ್ತೆ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್,…
ಬೆಂಗಳೂರು: ಎಲ್ಲಾ ಏತ ನೀರಾವರಿ ಯೋಜನೆಗಳಲ್ಲಿ ಇಂಧನ ಪರಿಶೀಲನೆ ಮತ್ತು ಉಳಿತಾಯದ ಯಾಂತ್ರಿಕತೆಯ ಕಾರ್ಯವಿಧಾನಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನ ಮಾಡಿದರೆ, ಇಲಾಖೆಗೆ ಬಹಳಷ್ಟು ಹಣ ಉಳಿತಾಯವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ.ಕೆ.ಪವಿತ್ರ ಹೇಳಿದರು. ಸಣ್ಣ ನೀರಾವರಿ ಇಲಾಖೆಯು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಸಚಿವಾಲಯ ಕ್ಲಬ್ನಲ್ಲಿ `ಇಂಧನ ಲೆಕ್ಕಪರಿಶೋಧನೆ ಮತ್ತು ಇಂಧನ ಉಳಿತಾಯಕ್ಕೆ ಪ್ರಮುಖ ಕಾರ್ಯತಂತ್ರ’ ಎಂಬ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆಗಳನ್ನು ಈಗಾಗಲೇ ನಮ್ಮ ರಾಜ್ಯದಲ್ಲಿ ಹಲವು ಕಡೆ ಕೈಗೆತ್ತುಕೊಂಡಿದ್ದೇವೆ. ಇದರಲ್ಲಿ ವೃಷಭಾವತಿ ವ್ಯಾಲಿ ಕೆರೆ ಯೋಜನೆ ಕೂಡ ಒಂದಾಗಿದೆ. ನಾವು ಇದರ ಅನುಷ್ಠಾನದ ವೇಳೆ ಸೂಕ್ತವಾದ ಇಂಧನ ಪರಿಶೀಲನೆ ಮತ್ತು ಉಳಿತಾಯದ ಯಾಂತ್ರಿಕತೆಯನ್ನು ಬಳಸಿಕೊಂಡಿದ್ದೇ ಆದಲ್ಲಿ, ನೀರಾವರಿ ಇಲಾಖೆಗೆ ಎದುರಾಗುವ ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅಲ್ಲದೆ, ಯಂತ್ರೋಪಕರಣಗಳು ಸಹ ಹೆಚ್ಚಿನ ಕಾಲ ಕಾರ್ಯನಿರ್ವಹಿಸುವುದರಿಂದ ಇದರ ನಿರ್ವಹಣೆಯ ಸಮಸ್ಯೆ ಕೂಡ ಎದುರಾಗುವುದಿಲ್ಲ ಎಂದರು. ವಿಶ್ವಬ್ಯಾಂಕ್ನ ಪ್ರತಿನಿಧಿ ಹಾಗೂ ಇಂಧನ ತಜ್ಞ ಅಲ್ಬರ್ಟ್ ವಿಲಿಯಂ…
ನವದೆಹಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ, ಪ್ರಸ್ತುತ ಟೋಲ್ ಸಂಗ್ರಹ ವ್ಯವಸ್ಥೆಯು ಒಂದು ವರ್ಷದೊಳಗೆ ಕೊನೆಗೊಳ್ಳಲಿದೆ ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಯು ಜಾರಿಗೆ ಬರಲಿದೆ, ಇದು ಹೆದ್ದಾರಿ ಬಳಕೆದಾರರಿಗೆ ಸುಗಮ ಅನುಭವವನ್ನು ಖಚಿತಪಡಿಸುತ್ತದೆ. ಹೊಸ ವ್ಯವಸ್ಥೆಯನ್ನು 10 ಸ್ಥಳಗಳಲ್ಲಿ ಜಾರಿಗೆ ತರಲಾಗಿದ್ದು, ಒಂದು ವರ್ಷದೊಳಗೆ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು. ಈ ಟೋಲ್ ವ್ಯವಸ್ಥೆ ಕೊನೆಗೊಳ್ಳುತ್ತದೆ. ಟೋಲ್ ಹೆಸರಿನಲ್ಲಿ ನಿಮ್ಮನ್ನು ತಡೆಯಲು ಯಾರೂ ಇರುವುದಿಲ್ಲ. ಒಂದು ವರ್ಷದೊಳಗೆ, ದೇಶಾದ್ಯಂತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ದೇಶಾದ್ಯಂತ ಪ್ರಸ್ತುತ 10 ಲಕ್ಷ ಕೋಟಿ ರೂ. ಮೌಲ್ಯದ 4,500 ಹೆದ್ದಾರಿ ಯೋಜನೆಗಳು ನಡೆಯುತ್ತಿವೆ ಎಂದು ಗಡ್ಕರಿ ಹೇಳಿದರು. ಇತ್ತೀಚೆಗೆ ಬಿಡುಗಡೆಯಾದ ಅಧಿಕೃತ ಹೇಳಿಕೆಯ ಪ್ರಕಾರ, ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ಭಾರತದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಸುಗಮಗೊಳಿಸಲು ಎಲೆಕ್ಟ್ರಾನಿಕ್ ಟೋಲ್ ಪಾವತಿಗಳಿಗಾಗಿ ಏಕೀಕೃತ,…
ಬೆಂಗಳೂರು: ನ್ಯಾಯಮೂರ್ತಿಗಳು ಶೇ 63 ಭ್ರಷ್ಟಾಚಾರದ ವಿಚಾರ ಪ್ರಕಟಿಸಿ, ರಾಜ್ಯ ಸರಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದು, ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ಧ ಶೇ 40 ಕಮಿಷನ್ ಎಂದು ವಿಶೇಷ ತನಿಖಾ ದಳ (ಎಸ್ಐಟಿ) ಮಾಡಿದ್ದೀರಲ್ಲವೇ? ಈಗ ಶೇ 63 ಭ್ರಷ್ಟಾಚಾರ ಸಂಬಂಧ ಯಾವ ಎಸ್ಐಟಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿ ಎಂದು ಅವರು ಒತ್ತಾಯಿಸಿದರು. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ಇದೆ ಎಂಬುದು ಜಗಜ್ಜಾಹೀರಾಗಲಿ ಎಂದು ನುಡಿದರು. ಬೋವಿ ನಿಗಮದ ಅಧ್ಯಕ್ಷರೇ ಎಕರೆಗೆ 25 ಲಕ್ಷ ಕಮಿಷನ್ ಪಡೆಯುತ್ತಿದ್ದರು. ವಾಲ್ಮೀಕಿ ನಿಗಮದಡಿ 187 ಕೋಟಿ ಸುಮಾರು 700 ಖಾತೆಗೆ ವರ್ಗಾಯಿಸಲಾಗಿತ್ತು. ಅದನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದು, ತನಿಖೆ ನಡೆಯುತ್ತಿದೆ.…
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ) ವತಿಯಿಂದ ಇತ್ತೀಚೆಗೆ ನಮ್ಮನ್ನು ಅಗಲಿದ ಹಿರಿಯ ಪತ್ರಕರ್ತರಾದ ಟಿ.ಜೆ.ಎಸ್.ಜಾರ್ಜ್ ಮತ್ತು ಅ.ಚ.ಶಿವಣ್ಣ ಅವರುಗಳಿಗೆ ಶ್ರದ್ಧಾಂಜಲಿ ಸಭೆಯನ್ನು ಡಿ.5 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಕೆ.ಜಿ.ರಸ್ತೆ, ಕಂದಾಯ ಭವನದಲ್ಲಿರುವ ಕೆಯುಡಬ್ಲೂಜೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕರಾದ ಹುಣಸವಾಡಿ ರಾಜನ್ ಅವರುಗಳು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ರಾಜ್ಯ ಪದಾಧಿಕಾರಿಗಳು, ವೃತ್ತಿ ಬಾಂಧವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. https://kannadanewsnow.com/kannada/womens-workers-day-to-be-declared-on-september-13-cm-siddaramaiah-promises/ https://kannadanewsnow.com/kannada/good-news-for-the-states-maize-farmers-government-allows-poultry-feed-producers-to-purchase/
ಬೆಂಗಳೂರು : ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರನ್ನು ಅಭಿನಂದಿಸಿ, ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು. ಅವರು ಇಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಬೆಂಗಳೂರು, ವತಿಯಿಂದ ಮಹಿಳಾ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳಾ ನೌಕರರಿಗೆ ಋತುಚಕ್ರ ರಜೆಯನ್ನು ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ. ಸಂಘದ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಬಾಲಭವನದಲ್ಲಿ ಸ್ಥಳಾವಕಾಶ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೊಂದಿಗೆ ಚರ್ಚಿಸಲಾಗಿದೆ. ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡಲಾಗುವುದು ಎಂದರು. ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧ ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರು ಪುರುಷರಿಗೆ ಸರಿಸಮನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ.…
ಬೆಂಗಳೂರು: ರಾಜ್ಯದ ಮೆಕ್ಕೆ ಜೋಳ ಬೆಳೆಗಾರ ರೈತರಿಂದ ಕುಕ್ಕುಟ ಆಹಾರ ಉತ್ಪಾದಕರು ಖರೀದಿಸಲು ಸರ್ಕಾರ ಅನುಮತಿಸಿ ಆದೇಶಿಸಿದೆ. ಈ ಮೂಲಕ ರಾಜ್ಯದ ಮಕ್ಕೆ ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. ಈ ಕುರಿತಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕುಕ್ಕುಟ ಆಹಾರ ಉತ್ಪಾದಕರು ಎಂಎಸ್ಪಿ ಗುಣಮಟ್ಟದ ಪ್ರಕಾರ ನಿಗಧಿಪಡಿಸಿರುವ ಬೆಲೆಯಲ್ಲಿ ಮೆಕ್ಕೆ ಜೋಳವನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರ ಅನುಮತಿ ನೀಡಿ ಆದೇಶಿಸಿದ್ದಾರೆ. ಅಂದಹಾಗೇ ದಿನಾಂಕ 01-12-2025ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಕುಕ್ಕುಟ ಮತ್ತು ಪಶು ಆಹಾರ ಉತ್ಪಾದಕರ ಸಭೆ ನಡೆಸಲಾಯಿತು. ಈ ವೇಳೆಯಲ್ಲಿ ರೈತರ ಹಿತದೃಷ್ಟಿಯಿಂದ ರೈತರಿಂದ ನೇರವಾಗಿ ಅಂದಾಜು 5 ಲಕ್ಷ ಟನ್ ಮೆಕ್ಕೆ ಜೋಳವನ್ನು ಖರೀದಿಸಲು ಉದ್ಯಮಿದಾರರನ್ನು ಕೋರಿದ್ದರು. ಈ ವೇಳೆ ಅಗತ್ಯಕ್ಕೆ ತಕ್ಕಂತೆ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದ ಖರೀದಿಸಲು ಸಹಮತ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಮೆಕ್ಕೆ ಜೋಳವನ್ನು ಎಂ ಎಸ್…
ಬೆಂಗಳೂರು: ರಾಜ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸ ಕ್ಷೇತ್ರದ ವಿಸ್ತರಣೆಯನ್ನು ಗುರಿಯಾಗಿ ಇಟ್ಟುಕೊಂಡು 150 ಬಿಲಿಯನ್ ಡಾಲರ್ ಹೂಡಿಕೆ ಸಾಧ್ಯವಾಗುವಂತೆ ವಿಷನ್ ಡಾಕ್ಯುಮೆಂಟ್ ತಯಾರಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಗುರುವಾರ ವಿಧಾನಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ವಿಸ್ತೃತ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಯನ್ನು ಘೋಷಿಸಿದೆ. ಇದಕ್ಕೆ ಸಮಾನಾಂತರವಾಗಿ ರಾಜ್ಯ ಸರಕಾರವು ಕೂಡ ಒಂದು ಯೋಜನೆಯನ್ನು ರೂಪಿಸಲು ಚಿಂತಿಸುತ್ತಿದ್ದು, ಇದರ ಕಾರ್ಯಸಾಧ್ಯತೆಯನ್ನು ಕುರಿತು ಅಧ್ಯಯನ ಮಾಡುತ್ತಿದೆ. ಇದು ಕರಡು ಹಂತದಲ್ಲಿದ್ದು, ಇದಕ್ಕೆ ಐಸಿಇಎ ನೀಡುವ ಸಲಹೆಗಳನ್ನು ಸ್ವಾಗತಿಸಲಾಗುವುದು’ ಎಂದಿದ್ದಾರೆ. ಮೊಬೈಲ್ ಫೋನ್ ಬಿಡಿಭಾಗಗಳು ಮಾತ್ರವಲ್ಲದೆ…
ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ನಗರ ಜಿಲ್ಲಾ ಶಾಖೆಯಲ್ಲಿ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸಲು ಟೈಪಿಸ್ಟ್ ಕಾಮ್ ಸಂಯೋಜಕರು ಹುದ್ದೆ ಹಾಗೂ ದೀರ್ಘಾವಧಿ ಇಂಟರ್ನ್ ಶಿಪ್ ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಗೌರವ ಕಾರ್ಯದರ್ಶಿ, IRCS ಬೆಂಗಳೂರು ನಗರ ಜಿಲ್ಲೆ ಅಥವಾ ಇ-ಮೇಲ್ cdmvm14@gmail.com ಇಲ್ಲಿಗೆ ಪತ್ರಿಕಾ ಪ್ರಕಟಣೆಗೊಂಡ 07 ದಿನಗಳ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-2214243, 2211292 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಶಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














