Author: kannadanewsnow09

ಬೆಂಗಳೂರು: “ಪದೇ, ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ. ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರ ಮನಸ್ಸನ್ನು ಕೇಂದ್ರ ಸರ್ಕಾರ ಕೆಣಕುತ್ತಿದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು. ರಾಜ್ಯಗಳಿಗೆ ತೆರಿಗೆ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ಪಟ್ಟಿಯ ಬಗ್ಗೆ ಮಾಧ್ಯಮದವರು ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಕೇಳಿದಾಗ ಸುರೇಶ್ ಅವರು ಹೀಗೆ ಉತ್ತರಿಸಿದರು. “ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕಕ್ಕೆ 6,498 ಕೋಟಿ ರೂಪಾಯಿ ಕೊಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರ ಪ್ರದೇಶ ರಾಜ್ಯವೊಂದಕ್ಕೆ 31,962 ಕೋಟಿ ರೂಪಾಯಿ ನೀಡಲಾಗಿದೆ. ನಮಗೆ ಈಗಾಗಲೇ ಆಗಿರುವ ಅನ್ಯಾಯವನ್ನಾದರೂ ಕನಿಷ್ಠ ಪಕ್ಷ ಸರಿದೂಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಹುದಿತ್ತು. 2022 ರ ಕೇಂದ್ರ ಬಜೆಟ್ ಸಂದರ್ಭದಲ್ಲಿಯೇ ರಾಜ್ಯಗಳ ತೆರಿಗೆ ಪಾಲಿನ ತಾರತಮ್ಯದ…

Read More

ನವದೆಹಲಿ: 30 ಲಕ್ಷ ಕೋಟಿ ರೂ.ಗಳ ಟಾಟಾ ಗ್ರೂಪ್ ಸಾಮ್ರಾಜ್ಯದ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಟಾಟಾ ಟ್ರಸ್ಟ್ ನ ಹೊಸ ಅಧ್ಯಕ್ಷರಾಗಿ ರತನ್ ಟಾಟಾ ಅವರ ಸೋದರ ನೋಯೆಲ್ ಟಾಟಾ ಅವರನ್ನು ನೇಮಿಸಲಾಗಿದೆ. ಮುಂಬೈನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಗುಂಪು ನೋಯೆಲ್ ಅವರನ್ನು ಹೊಸ ಮುಖ್ಯಸ್ಥರಾಗಿ ಸರ್ವಾನುಮತದಿಂದ ಹೆಸರಿಸಿತು. ಹಾಗಾದ್ರೇ ನೋಯೆಲ್ ಟಾಟಾ ಯಾರು.? ಹಿನ್ನಲೆ ಏನು.? ಪುಲ್ ಡಿಟೆಲ್ಸ್ ಮುಂದೆ ಓದಿ. 86 ನೇ ವಯಸ್ಸಿನಲ್ಲಿ ಗುರುವಾರ ನಿಧನರಾದ ಟಾಟಾ ಗ್ರೂಪ್ನ ಅಧ್ಯಕ್ಷ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ನೋಯೆಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೋಯೆಲ್ ಟಾಟಾ ನಾಲ್ಕು ದಶಕಗಳಿಂದ ಟಾಟಾ ಗ್ರೂಪ್ನಲ್ಲಿ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಮೂಹದ ವಿವಿಧ ವಿಭಾಗಗಳನ್ನು ಮುನ್ನಡೆಸುವ ಮೂಲಕ ಅನುಕರಣೀಯ ವ್ಯವಹಾರ ಚತುರತೆಯನ್ನು ಪ್ರದರ್ಶಿಸಿದ್ದಾರೆ. ಅವರ ನಾಯಕತ್ವದಲ್ಲಿ, ವಿದೇಶದಲ್ಲಿ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಟಾಟಾ ಗ್ರೂಪ್ನ ಅಂಗವಾದ ಟಾಟಾ ಇಂಟರ್ನ್ಯಾಷನಲ್ ಮತ್ತು ಸಮೂಹದ ಚಿಲ್ಲರೆ ವಿಭಾಗವಾದ ಟ್ರೆಂಟ್ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿವೆ. ಅವರು ಟಾಟಾ…

Read More

ಬೆಂಗಳೂರು: ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ ಮುಖ್ಯಮಂತ್ರಿ, ಮುಡಾ ಹಗರಣದ ಎ1 ಆರೋಪಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಅಕ್ಷಮ್ಯ ಎಂಬುದಾಗಿ ಕರ್ನಾಟಕ ಬಿಜೆಪಿ ಕಿಡಿಕಾರಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಬಿಜೆಪಿಯು, ಮುಡಾ ಹಗರಣದ ಆರೋಪಿ ಸಿದ್ಧರಾಮಯ್ಯ ಅವರೇ, ಈ ರೀತಿ ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ. ರಾಮ ಸತ್ಯನೇ, ಆದರೆ ಸಿದ್ದರಾಮಯ್ಯ ಬ್ರಹ್ಮಾಂಡ ಸುಳ್ಳು. ಶ್ರೀರಾಮ ಸತ್ಯ ಅನ್ವೇಷಣೆಗಾಗಿ ಸೀತೆಯಿಂದ ದೂರವಾಗಿ ಸತ್ಯಶೋಧನೆ ನಡೆಸಿದ್ದ. ಅದೇ ಮಾರ್ಗದಲ್ಲಿ ನೀವು ನಡೆಯುವುದಾದರೆ ಸಿಎಂ ಪದವಿಗೆ ರಾಜೀನಾಮೆ ಸಲ್ಲಿಸಿ ಸತ್ಯಶೋಧನೆಗೆ ಅವಕಾಶ ನೀಡಿ ಎಂಬುದಾಗಿ ಒತ್ತಾಯಿಸಿದೆ. https://twitter.com/BJP4Karnataka/status/1844616008075821077 https://kannadanewsnow.com/kannada/central-government-releases-tax-share-to-various-states-including-karnataka/ https://kannadanewsnow.com/kannada/japans-nihon-hidankyo-wins-2024-nobel-peace-prize/

Read More

ನವದೆಹಲಿ: ಕೇಂದ್ರ ಸರ್ಕಾರದಿಂದ ಜಿಎಸ್ಟಿ ಬಾಕಿ ಹಣವನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಬಾಕಿ ಹಣವನ್ನು ಬಿಡುಗಡೆ ಮಾಡಿದೆ.  ಉತ್ತರ ಪ್ರದೇಶಕ್ಕೆ 31,962 ಕೋಟಿಯನ್ನು ಬಿಡುಗಡೆ ಮಾಡಿದ್ದರೇ, ಬಿಹಾರಕ್ಕೆ 17,921 ಕೋಟಿ, ಮಧ್ಯಪ್ರದೇಶಕ್ಕೆ 13,987 ಕೋಟಿ, ಪಶ್ಚಿಮ ಬಂಗಾಳಕ್ಕೆ 13,404 ಕೋಟಿ, ತಮಿಳುನಾಡಿಗೆ 7,268 ಕೋಟಿ, ಆಂಧ್ರಪ್ರದೇಶಕ್ಕೆ 7,211 ಕೋಟಿ ಹಾಗೂ ಕರ್ನಾಟಕಕ್ಕೆ 6,498 ಕೋಟಿ ತೆರಿಗೆ ಪಾಲು ಬಿಡುಗಡೆ ಮಾಡಿದೆ. ಆದೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಪಾಲು ಬಿಡುಗಡೆಯಲ್ಲೂ ಅನ್ಯಾಯ ಮಾಡಿದೆ ಎಂಬುದಾಗಿ ಮಾಜಿ ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ. ನಾವು ಭಾರತಾಂಬೆಯ ಮಕ್ಕಳು. ಕೇಂದ್ರ ಸರ್ಕಾರ ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸುವಂತೆ ಮಾಡಿದೆ. ಹೀಗೆ ಕೂಗು ಏಳಿಸಬೇಡಿ. ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ ಎಂಬುದಾಗಿ ಕಿಡಿಕಾರಿದ್ದಾರೆ. ಪ್ರತ್ಯೇಕ ದಕ್ಷಿಣ ಭಾರತದ ಕೂಗು ನನ್ನ ಕೂಗಲ್ಲ. ತಮಿಳುನಾಡಿನಲ್ಲಿ ಬಹಳ ಹಿಂದೆಯೇ ಇತ್ತು ಎಂಬುದಾಗಿ ಮೈಸೂರಿನಲ್ಲಿ ಮಾಜಿ ಸಂಸದ ಡಿ.ಕೆ…

Read More

ಓಸ್ಲೋ: ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ನಿಂದ ಬದುಕುಳಿದವರ ತಳಮಟ್ಟದ ಆಂದೋಲನವಾದ ಜಪಾನಿನ ಸಂಸ್ಥೆ ನಿಹಾನ್ ಹಿಡಾಂಕ್ಯೊ ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. “ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂದು ಸಾಕ್ಷಿಗಳ ಸಾಕ್ಷ್ಯದ ಮೂಲಕ ಪ್ರದರ್ಶಿಸಿದ್ದಕ್ಕಾಗಿ ಹಿಬಾಕುಶಾ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ” ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ತನ್ನ ಉಲ್ಲೇಖದಲ್ಲಿ ತಿಳಿಸಿದೆ. https://twitter.com/NobelPrize/status/1844664354932932630

Read More

ಮೈಸೂರು : ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಜನತೆಗೆ ದಸರೆಯ ಶುಭ ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ , ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇ ಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು. ದಸರಾ ಉತ್ಸವದ ಬಗ್ಗೆ ಪತ್ರಿಕೆಗಳಲ್ಲಿ ವತಿಯಿಂದ ಪ್ರಕಟವಾದ ಸರ್ಕಾರದ ಜಾಹಿರಾತಿನ ಬಗ್ಗೆ ತಮ್ಮ ಅಭಿಪ್ರಾಯ ನೀಡುತ್ತಾ, ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷೆಯನ್ನು ದಸರೆಯ ಪ್ರತೀಕ. ವಿಜಯನಗರ ಅರಸರ ಜಯದ ಸಂಕೇತವಾಗಿ ಪ್ರಾರಂಭಿಸಲಾದ ಆಯುಧಪೂಜೆ ದಸರಾ ಉತ್ಸವವನ್ನು ಮೈಸೂರು…

Read More

ನವದೆಹಲಿ: ಟಾಟಾ ಗ್ರೂಪ್ನ ಲೋಕೋಪಕಾರಿ ಅಂಗವಾದ ಟಾಟಾ ಟ್ರಸ್ಟ್ಸ್ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರನ್ನು ಅಕ್ಟೋಬರ್ 11 ರಂದು ನೇಮಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಬಿಸಿ ಟಿವಿ 18 ಚಾನೆಲ್ ವರದಿ ಮಾಡಿದೆ. ಅಕ್ಟೋಬರ್ 11 ರಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಇದು ಸರ್ವಾನುಮತದ ನಿರ್ಧಾರ ಎಂದು ಚಾನೆಲ್ ವರದಿ ಮಾಡಿದೆ. ರತನ್ ಟಾಟಾ ಎಂದಿಗೂ ಮದುವೆಯಾಗಲಿಲ್ಲ, ಮಕ್ಕಳಿರಲಿಲ್ಲ ಮತ್ತು ಟಾಟಾ ಟ್ರಸ್ಟ್ಗಳಲ್ಲಿ ಉತ್ತರಾಧಿಕಾರಿಯನ್ನು ಹೆಸರಿಸಲಿಲ್ಲ. 150 ವರ್ಷಗಳಿಗಿಂತಲೂ ಹಳೆಯದಾದ ಟಾಟಾ ಬ್ರಾಂಡ್ ಅಡಿಯಲ್ಲಿ ವಿವಿಧ ಸಂಸ್ಥೆಗಳ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ನಲ್ಲಿ ಟಾಟಾ ಟ್ರಸ್ಟ್ಸ್ 66% ಅನ್ನು ಹೊಂದಿರುವುದರಿಂದ ನೋಯೆಲ್ ಅವರ ನೇಮಕಾತಿ ಮಹತ್ವದ್ದಾಗಿದೆ. ರತನ್ ಟಾಟಾ ಅವರ ‘ಮುಂದುವರಿಯುವ’ ವಿಧಾನವನ್ನು ಗಮನದಲ್ಲಿಟ್ಟುಕೊಂಡು ನೋಯೆಲ್ ಟಾಟಾ ಅವರನ್ನು ಇಂದು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚಾನೆಲ್ ವರದಿ ಮಾಡಿದೆ. ಕಾರ್ಪೊರೇಟ್ ವಕೀಲ ಎಚ್ ಪಿ ರಾನಿನಾ ಅವರು ಟಾಟಾ ಟ್ರಸ್ಟ್ ಗಳು ನೋಯೆಲ್ ಟಾಟಾದಲ್ಲಿ ಸರಿಯಾದ ಆಯ್ಕೆಯನ್ನು ಮಾಡಿದೆ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ರಾಜ್ಯ ಸರ್ಕಾರದಿಂದ 2 ಜೊತೆ ಸಮವಸ್ತ್ರವನ್ನು ವಿತರಿಸೋದಕ್ಕೆ ನಿರ್ಧಾರವನ್ನು ಕೈಗೊಂಡಿದೆ.  ಗುರುವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ವರ್ಷ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಪ್ರತಿ ವರ್ಷ 02 ಸೀರೆಗಳನ್ನು ವಿತರಿಸಲಾಗುತ್ತದೆ. ಕರ್ನಾಟಕ ಕೈಮಗ್ಗ ನಿಗಮ ನಿಯಮಿತದಿಂದಲೇ ಖರೀದಿಸಬೇಕೆಂಬ ಷರತ್ತು ವಿಧಿಸಿ ಈ ಹಿಂದೆ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರದ ಅನುದಾನ ಇರುವುದರಿಂದ ಇ-ಟೆಂಡರ್ ಅಥವಾ ಜೆಮ್ ಪೋರ್ಟಲ್ ಮುಖಾಂತರ ಖರೀದಿಸುವುದು ಸೂಕ್ತವಾಗಿದೆ ಎಂದು ಪರಿಗಣಿಸಿ ಟೆಂಡರ್ ಮುಖಾಂತರ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ. 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರಿಗೆ ಐ.ಸಿ.ಡಿ.ಎಸ್ ಯೋಜನೆಯ ನಿಯಮಾನುಸಾರ ತಲಾ ಎರಡು ಸೀರೆಗಳಂತೆ ಒಟ್ಟು 2,75,018 ಸೀರೆಗಳನ್ನು ಕಟಿಪಿಪಿ ಪೋರ್ಟಲ್…

Read More

ಗೋಕಾಕ್: ಗೃಹ ಲಕ್ಷ್ಮೀ ಯೋಜನೆ ಜಾರಿಗೊಂಡ ನಂತ್ರ ಸರ್ಕಾರದಿಂದ ದೊರೆತಂತ ಹಣದಿಂದ ಯಜಮಾನಿಯರು ಫ್ರಿಡ್ಜ್, ಟಿವಿಗಳನ್ನು ಕೂಡಿಟ್ಟ ಹಣದಲ್ಲಿ ಖರೀದಿಸಿದ್ದರು. ಈಗ ಯಜಮಾನಿಯೊಬ್ಬಳು ತನ್ನ ಮಗನಿಗೆ ಗೃಹ ಲಕ್ಷ್ಮೀ ಯೋಜನೆಯ ಹಣದಿಂದ ಮಗನಿಗೆ ಹೊಸ ಬೈಕ್ ಒಂದನ್ನು ಕೊಡಿಸಿದ್ದಾರೆ. ಹೌದು.. ಈ ಮಾಹಿತಿಯನ್ನು ಸ್ವತಹ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹಂಚಿಕೊಂಡಿದ್ದಾರೆ. ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕೂಡಿಟ್ಟು, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸುತ್ತಿದ್ದಾರೆ. ಶುಕ್ರವಾರ ಬೈಕ್ ಖರೀದಿಸಲು ಮುಂಗಡ ಹಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ‘ಗೃಹಲಕ್ಷಿ’ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದು ಹೇಳಿದ್ದಾರೆ. ಮಹಾನವಮಿ (11/10/2024) ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮೀ ಹಣ ನೀಡಿರುವ ವಿಷಯ ಕೇಳಿ ಖುಷಿಯಾಗಿದೆ. ತಾಯಿ -ಮಗನಿಗೆ ಮನಃಪೂರ್ವಕವಾಗಿ…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ 08-10-2024ರಿಂದ ದಿನಾಂಕ 04-12-2024ರವರೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಭಾಗವಹಿಸಿ, ಮತವನ್ನು ಚಲಾಯಿಸುವ ನೌಕರರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿ ನೀಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ: 08.10.2024 ರಿಂದ 04.12.2024 ರವರೆಗೆ ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ಸರ್ಕಾರಿ ನೌಕರರಿಗೆ ಕಛೇರಿ ವೇಳೆಯಲ್ಲಿ ತೆರಳಿ ಮತದಾನ ಮಾಡಲು ವಿಶೇಷ ಅನುಮತಿ ನೀಡುವಂತೆ ಕೋರಲಾಗಿದೆ ಎಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ತಾಲ್ಲೂಕು ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗಳು, ಜಿಲ್ಲೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನದ ಚುನಾವಣೆಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ ವಿವಿಧ ಇಲಾಖೆಗಳ ರಾಜ್ಯ ಪರಿಷತ್‌ ಸದಸ್ಯ ಸ್ಥಾನದ ಚುನಾವಣೆಗಳು ದಿನಾಂಕ:…

Read More