Author: kannadanewsnow09

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಈತನಕ  274 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿದ್ದು ಈತನಕ ಯಾವುದೇ ಸೋಂಕು ಕಂಡು ಬಂದಿಲ್ಲ. ಹೊಸನಗರ ತಾಲ್ಲೂಕಿನಲ್ಲಿ 169 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಡಿದ್ದು 8 ಪ್ರಕರಣ ಪತ್ತೆಯಾಗಿದೆ ಎಂಬುದಾಗಿ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೆ.ಎಫ್.ಡಿ. ಮತ್ತು ಪಲ್ಸ್ ಪೊಲೀಯೋ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕಿನಲ್ಲಿ ಕೆಎಫ್‌ಡಿ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ. ಹೊಸನಗರ ತಾಲ್ಲೂಕಿನ ಸೋನಲೆ ವ್ಯಾಪ್ತಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರಾಥಮಿಕ ಕೇಂದ್ರವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಜನರ ರಕ್ತಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಸಾಗರ ಉಪವಿಭಾಗೀಯ ಅಸ್ಪತ್ರೆಯಲ್ಲಿ ಮಂಗನ ಕಾಯಿಲೆಗಾಗಿ 10 ಬೆಡ್‌ನ ವಿಶೇಷ ಘಟಕ ಪ್ರಾರಂಭಿಸಲಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್‌ನಿಂದ…

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಡಿಸೆಂಬರ್ 14 ರಂದು ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಐ ಪಂದ್ಯಕ್ಕೆ ಅನಾರೋಗ್ಯದ ಕಾರಣದಿಂದ ಗೈರುಹಾಜರಾಗಿದ್ದ ಭಾರತದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ನಡೆಯುತ್ತಿರುವ ಸರಣಿಯಿಂದ ಹೊರಗುಳಿದಿದ್ದಾರೆ. ಡಿಸೆಂಬರ್ 17 ರಂದು ಲಕ್ನೋದಲ್ಲಿ ಮತ್ತು ಡಿಸೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉಳಿದ ಎರಡು ಪಂದ್ಯಗಳಿಗೆ ಅವರು ಲಭ್ಯವಿಲ್ಲದಿರುವ ಎಂಬುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ದೃಢಪಟಿಸಿದೆ. https://twitter.com/BCCI/status/2000568936820289945 ಅನಾರೋಗ್ಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಟಿ20ಐಗಳಿಂದ ಟೀಮ್ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಹೊರಗಿಡಲಾಗಿದೆ. ಆದಾಗ್ಯೂ, ಅವರು ಲಕ್ನೋದಲ್ಲಿ ತಂಡದಲ್ಲಿದ್ದಾರೆ, ಅಲ್ಲಿ ಅವರನ್ನು ಮತ್ತಷ್ಟು ವೈದ್ಯಕೀಯವಾಗಿ ನಿರ್ಣಯಿಸಲಾಗುತ್ತದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಅಕ್ಷರ್ ಅವರ ಬದಲಿಯಾಗಿ, ಬಂಗಾಳದ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ಭಾರತದ ತಂಡಕ್ಕೆ ಸೇರಿಸಲಾಗಿದೆ. ಪುರುಷರ…

Read More

ಶ್ರೀನಗರ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯ ಮೂಲದ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಜಾಟ್ ಅವರನ್ನು ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಚುಕೋರ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೆಸರಿಸಿದೆ. ಈ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕ ಸಾವನ್ನಪ್ಪಿದರು. ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರಿಗೆ ಈ ದಾಳಿಯ ಸಂಚನ್ನು ಔಪಚಾರಿಕವಾಗಿ ಪತ್ತೆಹಚ್ಚಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಶಾಸನಬದ್ಧ ಗಡುವಿಗೆ ಮುಂಚಿತವಾಗಿ ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ 1,597 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಸಾಜಿದ್ ಜಾಟ್ ಸೇರಿದಂತೆ ಏಳು ಆರೋಪಿಗಳನ್ನು ಸಂಸ್ಥೆ ಹೆಸರಿಸಿದೆ. ಲಷ್ಕರ್-ಎ-ತೊಯ್ಬಾ ಮತ್ತು ಅದರ ಪ್ರಾಕ್ಸಿ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮೂಲಕ ದಾಳಿಯನ್ನು ಸಂಘಟಿಸಿದ ಪಾಕಿಸ್ತಾನ ಮೂಲದ ನಿರ್ವಾಹಕ ಎಂದು ಸಂಸ್ಥೆ ವಿವರಿಸಿದೆ. ಪಹಲ್ಗಾಮ್ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಈ ದಾಳಿ ನಡೆದಿದ್ದು, ಪ್ರವಾಸಿ…

Read More

ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯ ವಿಚಾರ ಬಿಸಿ ಬಿಸಿಯಾಗಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನು ಹೇಳಿದ್ದಾರೆ ಅಂತ ಮುಂದೆ ಓದಿ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಮೊಟ್ಟೆಯಲ್ಲಿ ಕ್ಯಾನ್ಸರ್‌ ಉಂಟುಮಾಡುವ ಅಂಶಗಳು ಕಂಡುಬಂದಿವೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ವದಂತಿಗೆ ಜನರು ಭಯಪಡುವ ಅಗತ್ಯ ಇಲ್ಲ. ರಾಜ್ಯಾದ್ಯಂತ ಉಂಟಾಗಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ಮೊಟ್ಟೆಗಳ ಬಗೆಗೆ ಉಂಟಾಗಿರುವ ಸಂಶಯಕ್ಕೆ ಅನುಸಾರವಾಗಿ ಪರೀಕ್ಷೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ. ಇದೇ ರೀತಿಯಲ್ಲಿ ಈ ಹಿಂದೆ ಮೊಟ್ಟೆ ವಿಚಾರದಲ್ಲಿ ವದಂತಿ ಹರಡಿದಾಗ ನಡೆಸಿದ್ದ ಪರೀಕ್ಷೆಗಳಲ್ಲಿ ಮೊಟ್ಟೆಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಕಂಡುಬಂದಿರಲಿಲ್ಲ ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿದೆ. ನಾಗರೀಕರು ನಿರ್ಭೀತಿಯಿಂದ ಇರುವಂತೆ ಕೋರಿದ್ದಾರೆ. https://kannadanewsnow.com/kannada/shock-for-those-who-travelled-without-tickets-in-ksrtc-buses-7-61-lakh-fine-collected-from-3974-people/ https://kannadanewsnow.com/kannada/shamanur-shivashankarappa-cremated-with-full-government-honors-only-the-memory-of-the-generous-donor-remains/

Read More

ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಬೇಸಿಗೆ ಬೆಳೆಗೆ ಯಾವುದೇ ರೀತಿಯ ಲೋಪವಾಗದಂತೆ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮದ್ದೂರು ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ಅವರ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಕಾವೇರಿ ನೀರಾವರಿ ನಿಗಮದ ಮೂಲಕ 400 ಕೋಟಿ ಗೂ ಹೆಚ್ಚಿನ ಅನುದಾನದಲ್ಲಿ ಕೆರೆಗಳ ಅಭಿವೃದ್ಧಿ, ನಾಲೆಗಳ ಆಧುನಿಕರಣ ಹಾಗೂ ಹೂಳು ತೆಗೆಯುವ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ಮುಂಬರುವ ಬೇಸಿಗೆ ಬೆಳೆ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬನ್ನಹಳ್ಳಿ ಸೇರಿದಂತೆ ಹಲವು ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಶೀಘ್ರದಲ್ಲೇ…

Read More

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನೇಮಿಸಿರುವಂತ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ. ಈ ಕುರಿತಂತೆ 71 ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿ, ಇತ್ಯರ್ಥಪಡಿಸಿದೆ. ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ 71 ರಿಟ್ ಅರ್ಜಿ ಸಲ್ಲಿಸಿದ್ದವುಗಳನ್ನು ಇತ್ಯರ್ಥ ಪಡಿಸಲಾಗಿದೆ. ಅವಧಿ ಮುಗಿದ ನಗರಸಭೆ, ಪುರಸಭೆಗಳಿಗೆ ಸರ್ಕಾರ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಕ್ಷೇತ್ರ ಪುನರ್ವಿಂಗಡನೆಗೆ 150 ದಿನ ಬೇಕಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು. ಸಂವಿಧಾನದ 243(ಯು) ನಂತೆ 5 ವರ್ಷ ಅವಧಿ ನಿಗದಿಯಾಗಿದೆ. ಅವಧಿ ಮುಗಿದ ಮೇಲೆ ಹಾಲಿ ಸದಸ್ಯ, ಅಧ್ಯಕ್ಷರನ್ನು ಮುಂದುವರಿಸಲಾಗದು. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂಬುದಾಗಿ ಸರ್ಕಾರ ವಾದಿಸಿತ್ತು. ಸರ್ಕಾರದ ಪರ ಹೆಚ್ಚುವರಿ ಎಜಿ ಪ್ರತಿಮಾ ಹೊನ್ನಾಪುರ ವಾದಿಸಿದರು. ಈ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಆಡಳಿತಾಧಿಕಾರಿ ನೇಮಕದಲ್ಲಿ ಮಧ್ಯಪ್ರವೇಶಿಸಲು ನಕಾರ ವ್ಯಕ್ತಪಡಿಸಿದೆ. https://kannadanewsnow.com/kannada/husband-commits-suicide-after-killing-wife-over-family-dispute/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/

Read More

ಬೆಂಗಳೂರು ದಕ್ಷಿಣ: ಜಿಲ್ಲೆಯಲ್ಲಿ ಕೌಟುಂಬಿಕ ಕಲಹದಿಂದ ಪತ್ನಿಯನ್ನು ಹತ್ಯೆಗೈದು ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ರಾಮನಗರ ತಾಲ್ಲೂಕಿನ ಹಾಲನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಹಾಲನಹಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಪತ್ನಿ ವತ್ಸಲ(25) ಹತ್ಯೆ ಮಾಡಿ, ಪತಿ ನವೀನ್(35) ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/allegations-of-opening-a-restaurant-illegally-fir-filed-against-bastin-pub-owned-by-actress-shilpa-shetty/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/

Read More

ಬೆಂಗಳೂರು: ಅವಧಿ ಮೀರಿ ಮಧ್ಯ ಸರಬರಾಜು ಮಾಡುತ್ತಿದ್ದ ಆರೋಪದಡಿ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರಲ್ಲಿ ಇರುವಂತ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ನಲ್ಲಿ ಅವಧಿ ಮೀರಿ ಅನಧಿಕೃತವಾಗಿ ರೆಸ್ಟೋರೆಂಟ್ ತೆರೆಯುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ 103 ಕೆಪಿ ಆಕ್ಟ್ ಅಡಿ ಸುಮೋಟೋ ದೂರನ್ನು ಪೊಲೀಸರು ದಾಖಲಿಸಿಕೊಂಡು ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವಂತ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ಮತ್ತು ರೆಸ್ಟೋರೆಂಟ್ ಇದಾಗಿದೆ. ಇದಲ್ಲದೇ ರೆಸಿಡೆನ್ಸಿ ರಸ್ತೆಯಲ್ಲಿರುವ ಸೋರ್ ಬ್ಯಾರಿ ಪಬ್ ವಿರುದ್ಧವೂ ಕೇಸ್ ದಾಖಲಾಗಿದೆ. ಹೀಗೆ ಅವಧಿ ಮೀರಿ ಗ್ರಾಹಕರಿಗೆ ಅನುವು ಮಾಡಿಕೊಟ್ಟಿದ್ದ ಎರಡು ಪಬ್ ಗಳಿಗೆ ಪೊಲೀಸರು ಎಫ್ಐಆರ್ ದಾಖಲಿಸಿ, ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ಪಬ್ ಗಳ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. https://kannadanewsnow.com/kannada/senior-congress-mla-shamanur-shivashankarappa-shivaikya-kailash-shiva-ganaradhana-on-december-26th/ https://kannadanewsnow.com/kannada/shamanur-shivashankarappa-cremated-with-full-government-honors-only-the-memory-of-the-generous-donor-remains/

Read More

ದಾವಣಗೆರೆ: ಭಾನುವಾರದಂದು ನಿಧನರಾದಂತ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು. ಈ ಬೆನ್ನಲ್ಲೇ ಡಿಸೆಂಬರ್.26ರಂದು ಕೈಲಾಸ ಶಿವ ಗಣರಾಧನೆ ನಡೆಯಲಿದೆ. ಈ ಕುರಿತಂತೆ ಶಾಮನೂರು ಕುಟುಂಬದಿಂದ ದಿನಾಂಕ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕೈಲಾಸ ಶಿವ ಗಣರಾಧನೆಯನ್ನು ಡಿಸೆಂಬರ್.26ರಂದು ನಡೆಸುವುದಾಗಿ ತಿಳಿಸಿದೆ. ಡಿಸೆಂಬರ್.26, 2025ರಂದು ಮಧ್ಯಾಹ್ನ 12.30ಕ್ಕೆ ಕೈಲಾಸ ಶಿವಗಣರಾಧನೆ ನೆರವೇರಿಸಲಾಗುತ್ತದೆ. ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಶಿವಗಣರಾಧನೆ ನೆರವೇರಿಸುವುದಾಗಿ ಪುತ್ರ ಬಕ್ಕೇಶ್, ಗಣೇಶ್, ಮಲ್ಲಿಕಾರ್ಜನ್ ಕುಟುಂಬ ಆಹ್ವಾನಿಸಿದೆ. https://kannadanewsnow.com/kannada/shivashankarappas-funeral-with-full-government-honours-senior-congress-mla-shamanur-shivaikya/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/

Read More

ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಹಿರಿಯ ಶಾಸಕ ಶಆಮನೂರು ಶಿವೈಕ್ಯರಾದಂತೆ ಆಗಿದೆ. ಆ ಮೂಲಕ ಇನ್ಮುಂದೆ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ನೆನಪು ಮಾತ್ರವೇ ಆಗುವಂತಾಗಿದೆ. ಕಳೆದ 1 ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ನಿನ್ನೆಯ ಭಾನುವಾರದ ಸಂಜೆ 6.20ಕ್ಕೆ ಬಹು ಅಂಗಾಂಗ ವೈಫಲ್ಯದಿಂದ ಅವರು ನಿಧನರಾಗಿದ್ದರು. ಶಾಮನೂರು ಶಿವಶಂಕರಪ್ಪ ನಿಧನದಿಂದಾಗಿ ದಾವಣಗೆರೆಯಲ್ಲಿ ನೀರವಮೌನವೇ ಆವರಿಸಿತ್ತು. ಕೊಡುಗೈ ದಾನಿಯ ಕೊನೆಯ ಯಾತ್ರೆಯಲ್ಲಿ ಜನಸಾಗರವೇ ಸೇರಿತ್ತು. ಭಾವುಕರಾಗಿಯೇ ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಇಂದು ದಾವಣಗೆರೆಯಲ್ಲಿ ಅಂತಿನ ದರ್ಶನದ ಬಳಿಕ ಕಲ್ಲೇಶ್ವರ ಮಿಲ್ ಗೆ ಶಾಮನೂರು ಶಿವಶಂಕರಪ್ಪ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿತ್ತು. ವೀರ ಶೈವ ಲಿಂಗಾಯತ ಸಂಪ್ರದಾಯದಂತೆ ಪತ್ನಿ…

Read More