Author: kannadanewsnow09

ಬೆಳಗಾವಿ: ಜೆಎಂಎಫ್ ಸಿ ನ್ಯಾಯಾಲಯವು ಪರಿಷತ್ ಸದಸ್ಯ ಸಿ.ಟಿ ರವಿ ಬಂಧನ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿಯನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ. ನಿನ್ನೆಯ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದ ಬಳಕೆ ಸಂಬಂಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. ಇಂದು ಬೆಳಗಾವಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಿ.ಟಿ ರವಿ ಅವರನ್ನು ಹಾಜರುಪಡಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದಂತ ನ್ಯಾಯಪೀಠವು, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕೇಸ್ ವರ್ಗಾವಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ರಸ್ತೆ ಮಾರ್ಗದ ಮೂಲಕ ಬೆಳಗಾವಿಯಿಂದ ಬೆಂಗಳೂರಿಗೆ ಪೊಲೀಸರು ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಕರೆದೊಯ್ಯುತ್ತಿದ್ದಾರೆ. ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. https://kannadanewsnow.com/kannada/is-there-a-desire-for-new-year-celebrations-in-malnad-heres-a-golden-opportunity/…

Read More

ಶಿವಮೊಗ್ಗ: ಓದಿ ಉತ್ತಮ ಸಾಧನೆ ಮಾಡಿ, ತಂದೆ-ತಾಯಿಗಳಿಗೆ, ನೆರೆ ಹೊರೆಯವರಿಗೆ, ಸಮಾಜಕ್ಕೆ ಕೀರ್ತಿ ತರಬೇಕು. ಸಾಧನೆ ಮಾಡಿ ಸಮಾಜ ಸೇವೆ ಮಾಡಬೇಕು ಎನ್ನುವ ಹಂಬಲ, ತುಡಿತವಿದ್ದಂತ ಬಾಲಕಿಗೆ ಅನಾರೋಗ್ಯ ಪೀಡಿತಳಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿರುವಂತ ಬಡ ಕುಟುಂಬ, ಈಗ ನಿಮ್ಮಂತ ಓದುಗರ ನೆರವು, ಸಹಕಾರ ಕೋರುತ್ತಿದೆ. ನಿಮ್ಮ ಸಹಾಯ, ನೆರವಿಗಾಗಿ ಆ ಬಾಲಕಿಯ ಸಮಸ್ಯೆ ಏನು ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮುರಿ ಬಳಿಯ ಮಾರ್ಲಗೋಡು ಗ್ರಾಮದ 9ನೇ ತರಗತಿ ಬಾಲಕಿ ಅಂಕಿತ ಓದಿನಲ್ಲಿ ಬಲು ಚುರುಕು. ಓದಿ ಉತ್ತಮ ಸಾಧನೆ ಮಾಡಿ, ಸಾಮಾಜಿಕ ಸೇವೆ ಮಾಡುವ ಹಂಬಲವಿದ್ದಂತ ಈ ಬಾಲಕಿಗೆ ಗೊತ್ತೇ ಇರದಂತೆ ಬೋನ್ಸ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ವೈದ್ಯರಿಂದ ಈ ವಿಚಾರ ತಿಳಿದಂತ ಅಂಕಿತ ತಂದೆ ಸಂತೋಷ್, ತಾಯಿ ರತ್ನಮ್ಮ ಕೂಲಿ ನಾಲಿ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಮ್ಮ ಮಗಳನ್ನು ಉಳಿಸಿಕೊಳ್ಳೋದಕ್ಕೆ ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿದ್ದು, ಇನ್ನೂ ಚಿಕಿತ್ಸೆಗಾಗಿ…

Read More

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control for Cricket in India -BCCI) ಜನವರಿ 12 ರಂದು ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಹೊಸ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಆಯ್ಕೆ ಮಾಡಲಿದೆ ಎಂದು ಪಿಟಿಐ ವರದಿ ಮಾಡಿದೆ. ಮಾಜಿ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ಬೆಳವಣಿಗೆ ನಡೆದಿದೆ. ಬಿಸಿಸಿಐ ನೂತನ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಯಾರು ಆಗಲಿದ್ದಾರೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ. https://twitter.com/PTI_News/status/1870008694177706143 https://kannadanewsnow.com/kannada/is-there-a-desire-for-new-year-celebrations-in-malnad-heres-a-golden-opportunity/

Read More

ಮಹಾರಾಷ್ಟ್ರ: ಇಂದು ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಹಲವರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಬಸ್ ಪಲ್ಟಿಯಾಗಿ 5 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರಿಗೆ ಗಾಯಗೊಂಡಿರುವಂತ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದಂತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳೀಯರ ನೆರವಿನೊಂದಿಗೆ ರವಾನಿಸಿ, ಚಿಕಿತ್ಸೆ ಕೊಡಿಸುವಂತ ವ್ಯವಸ್ಥೆ ಮಾಡಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/is-there-a-desire-for-new-year-celebrations-in-malnad-heres-a-golden-opportunity/

Read More

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಸಂಬಂಧ ಕೆ.ಲಕ್ಷ್ಮಣ್, ಸುರ್ಜೇವಾಲಾ, ಸಂಜಯ್ ಸಿಂಗ್ ಸೇರಿದಂತೆ 12 ರಾಜ್ಯಸಭಾ ಸಂಸದರು ಜೆಪಿಸಿಗೆ ನಾಮನಿರ್ದೇಶನ ಮಾಡಲಾಗಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಉಪಕ್ರಮದ ಬಗ್ಗೆ ಚರ್ಚಿಸಲು ನಿಯೋಜಿಸಲಾದ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಹನ್ನೆರಡು ರಾಜ್ಯಸಭಾ ಸದಸ್ಯರನ್ನು ನೇಮಿಸಲಾಗಿದೆ. ಈ ಪಟ್ಟಿಯಲ್ಲಿ ಘನಶ್ಯಾಮ್ ತಿವಾರಿ, ಭುವನೇಶ್ವರ್ ಕಲಿಯಾ, ಕೆ.ಲಕ್ಷ್ಮಣ್, ಕವಿತಾ ಪಾಟಿದಾರ್, ಸಂಜಯ್ ಕುಮಾರ್ ಝಾ, ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ಬಾಲಕೃಷ್ಣ ವಾಸ್ನಿಕ್, ಸಾಕೇತ್ ಗೋಖಲೆ, ಪಿ.ವಿಲ್ಸನ್, ಸಂಜಯ್ ಸಿಂಗ್, ಮಾನಸ್ ರಂಜನ್ ಮಂಗರಾಜ್ ಮತ್ತು ವಿ.ವಿಜಯಸಾಯಿ ರೆಡ್ಡಿ ಸೇರಿದ್ದಾರೆ. https://kannadanewsnow.com/kannada/is-there-a-desire-for-new-year-celebrations-in-malnad-heres-a-golden-opportunity/

Read More

ಪಾದಚಾರಿ ಮಾರ್ಗದಲ್ಲಿ ವಾಸಿಸುವ ವ್ಯಕ್ತಿಯಿಂದ ಹಿಡಿದು ಬಂಗಲೆಯಲ್ಲಿ ವಾಸಿಸುವ ಶ್ರೀಮಂತ ಉದ್ಯಮಿಯವರೆಗೆ ಎಲ್ಲರಿಗೂ ಸಾಲದ ಸಮಸ್ಯೆ ಇದೆ. ಆ ಸಾಲದ ಸಮಸ್ಯೆಯು ಪ್ರಮಾಣದಲ್ಲಿ ಬದಲಾಗುತ್ತದೆ ಆದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೂಪದಲ್ಲಿ ಉಳಿಯುತ್ತದೆ. ಕೆಲವು ಜನರು ಪಾವತಿಸದ ಸಾಲಕ್ಕೆ ಬಡ್ಡಿಯನ್ನು ಪಾವತಿಸುವ ಮೂಲಕ ಬಳಲುತ್ತಿದ್ದಾರೆ. ಈ ಸಂಧರ್ಭದಲ್ಲಿ ಎಂತಹ ಸಾಲದ ಹೊರೆಯಿದ್ದರೂ ಆ ಋಣ ತೀರಿಸಲು ನಾವು ಮಾಡಬಹುದಾದ ಉಪಾಯವೇ ಇಳನೇರ್ ದೀಪಂ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಎಳನೀರನ್ನು ಬಳಸಿ ದೀಪವನ್ನು ಹೇಗೆ ಬೆಳಗಿಸಬೇಕು ಎಂದು ನಾವು ನೋಡಲಿದ್ದೇವೆ . ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ,…

Read More

ಕೆಎನ್ಎನ್ ಸ್ಪೆಷಲ್ ಡೆಸ್ಕ್: ಮಲೆನಾಡಿನ ಸೊಬಸು ಸವಿಯೋದಕ್ಕೆ ಬಹುತೇಕರು ಇಷ್ಟ ಪಡುತ್ತಾರೆ. ಈ ಸೊಬಗಿನ ಸಿರಿಯಲ್ಲಿ ಹೊಸ ವರ್ಷ ಆಚರಣೆ ಇನ್ನೂ ಮನಮೋಹಕ. ಅಷ್ಟೇ ಅಚ್ಚಳಿಯದೇ ಉಳಿಯುವ ನೆನಪು ಕೂಡ. ಹೀಗೆ ಮಲೆನಾಡಲ್ಲಿ ಹೊಸ ವರ್ಷಾಚರಣೆ ಮಾಡುವ ಆಸೆ ಇದ್ದರೇ.. ನಿಮಗೆ ಅವಕಾಶವೊಂದಿದೆ. ಅದು ಎಲ್ಲಿ.? ಏನೆಲ್ಲಾ ಇರುತ್ತೆ ಎನ್ನುವ ಮಾಹಿತಿ ಮುಂದೆ ಓದಿ. ಸದ್ಗುರು ಗ್ರೂಪ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ ಸದ್ಗುರು ಗ್ರೂಪ್ಸ್ ವತಿಯಿಂದ ಸಾಗರದಲ್ಲಿ ಮೊದಲ ಬಾರಿಗೆ ಅತಿದೊಡ್ಡ ಸಂಗೀತ ಕಾರ್ಯಕ್ರಮವನ್ನು ಹೊಸ ವರ್ಷಾಚರಣೆಗೆ ಆಯೋಜಿಸಲಾಗುತ್ತಿದೆ. ಪ್ರಸಿದ್ಧ ಸಿಂಗರ್ ಗಳ ಮ್ಯೂಸಿಕಲ್ ನೈಟ್ಸ್ ನಿಮ್ಮ ಹೊಸ ವರ್ಷಾಚರಣೆಗೆ ಮತ್ತಷ್ಟು ಮೆರುಗು ನೀಡಲಿದೆ. ಡಿಸೆಂಬರ್.31ರ ಸಂಜೆ 7 ಗಂಟೆಗೆ ಸಂಗೀತ, ಡಿಜೆ, ಸೆಲ್ಪಿ ಬೂತ್, ವೆಜ್ ಅಂಡ್ ನಾನ್ ವೆಜ್ ಪುಡ್, ಆಟಗಳ ಜೊತೆಗೆ ಹೊಸ ವರ್ಷ ಬರ ಮಾಡಿಕೊಳ್ಳೋರಿಗೆ ಸಖತ್ ಮುದಗೊಳಿಸು ಸದ್ಗುರು ಗ್ರೂಪ್ ಸಿದ್ಧಗೊಂಡಿದೆ. ಮಲೆನಾಡಿನಲ್ಲಿ ಏಲ್ಲಿ ಆಚರಣೆ ಗೊತ್ತಾ? ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿ ಕ್ರಾಸ್…

Read More

ಶಿವಮೊಗ್ಗ: ನಾನು 100% ಸ್ವಚ್ಛವಾಗಿದ್ದೇನೆ. ನನ್ನ ಕೃಷಿಯಿಂದ ಬಂದ ಆದಾಯದಲ್ಲಿ ಜನರಿಗೆ ಸಹಾಯ, ಸಹಕಾರ ಮಾಡುತ್ತಿದ್ದೇನೆ. ಯಾವುದೇ ಭ್ರಷ್ಟಾಚಾರ, ಅಕ್ರಮದಿಂದ ಅಲ್ಲ. ಈ ಬಗ್ಗೆ ನಾನು ಕರ್ನಾಟಕದ ಯಾವುದೇ ದೇವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ಸಿದ್ಧ ಎಂಬುದಾಗಿ ಶಾಸಕರು, ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ಸವಾಲ್ ಎಸೆದಿದ್ದಾರೆ. ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಲ್ಯಾವಿಗೆರೆಯಲ್ಲಿ ಅವರ ಕಲ್ಲುಕ್ವಾರೆ ಕಲ್ಲು ಸೇಲ್ ಆಗಲಿ ಅಂತ ಹೀಗೆ ಮಾಡಿದ್ದಾರೆ. ನಾವು, ಹಾಲಪ್ಪನವರು ಎಸ್ಪಿ ಹತ್ತಿರ ಹೋಗಿ ಹೇಳಿರೋದು ಸಣ್ಣ ಪುಟ್ಟವರಿಗೆ ತೊಂದರೆ ಕೊಡಬೇಡಿ. ರಾಜಕೀಯವಾಗಿ ಎಷ್ಟೇ ಒತ್ತಡ ಇರಬಹುದು. ಪಾರ್ಟಿ ಪಕ್ಷ ಬೇಡ. ಒಂದು ಕಡೆ ಎಲ್ಲರಿಗೂ ಸಹಾಯ ಆಗಲಿ ಅನ್ನೋ ನಿಟ್ಟಿನಲ್ಲಿ ಹೇಳಲಾಗಿತ್ತು. ನಾವು ಮರಳು ಹೊಡೆಯೋರು, ಕಲ್ಲು ಕ್ವಾರಿಯವರ ಪರವಾಗಿಯೇ ಇದ್ದೇವೆ. ನಾನು ಎಲ್ಲಿಯೂ ಕಲ್ಲುಕ್ವಾರೆ, ಮರಳು ಸಾಗಾಣಿಕೆ ನಿಲ್ಲಿಸಿ ಅಂತ ಹೇಳಿಲ್ಲ ಎಂಬುದಾಗಿ ಬಿಜೆಪಿ ಮುಖಂಡ, ಮಾಜಿ…

Read More

ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ 384 ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಗೆ ವೇಳಾಪಟ್ಟಿಯನ್ನು ಕರ್ನಾಟ ಲೋಕಸೇವಾ ಆಯೋಗ ಪ್ರಕಟಿಸಿದೆ. ಇಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ 384 ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಿರುವುದಾಗಿ ತಿಳಿಸಿದ್ದಾರೆ. ದಿನಾಂಕ 29-12-2024ರ ಭಾನುವಾರದಂದು ಒಂದೇ ದಿನ ಎರಡು ಪತ್ರಿಕೆಗಳ ಪೂರ್ವಭಾವಿ ಮರು ಪರೀಕ್ಷೆ ನಡೆಸಲು ವೇಳಾಪಟ್ಟಿಯಲ್ಲಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. ದಿನಾಂಕ 29-12-2024ರಂದು ಬೆಳಿಗ್ಗೆ 10 ರಿಂದ 12ರವರೆಗೆ ಪತ್ರಿಕೆ-1, ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಪತ್ರಿಕೆ-2ರ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ತಿಳಿಸಿದ್ದಾರೆ. https://kannadanewsnow.com/kannada/snehamayikrishna-releases-another-important-document-on-muda-scam/ https://kannadanewsnow.com/kannada/epfo-extends-deadline-for-employers-to-upload-pending-pension-applications-until-january-31-2025/

Read More

ಮೈಸೂರು: ಮುಡಾ ಹಗರಣದ ಬಗ್ಗೆ ಸಮರವನ್ನೇ ಸಾರಿರುವಂತ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣ ಅವರು, ಈಗ ಮುಡಾ ಹಗರಣದ ಬಗ್ಗೆ ಮತ್ತೊಂದು ಮಹತ್ವದ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಇಂದು ಸ್ನೇಹಮಯಿಕೃಷ್ಣ ಬಿಡುಡಗಡೆ ಮಾಡಿರುವಂತ ದಾಖಲೆ ಮುಡಾ ಹಗರಣದ ತನಿಖೆಗೆ ಸರ್ಕಾರ ರಚಿಸಿರುವಂತ ತನಿಖಾ ಆಯೋಗದ ಅಧ್ಯಕ್ಷ ಪಿಎನ್ ದೇಸಾಯಿ ಅವರಿಗೆ ಸಂಬಂಧಿಸಿದ್ದಾಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಸಿಎಟಿ ಸದಸ್ಯರಾಗಿ ಪಿಎನ್ ದೇಸಾಯಿ ಅವರನ್ನು ನೇಮಕ ಮಾಡಿತ್ತು. ಆದರೇ ವೈಯಕ್ತಿಕ ಕಾರಣದಿಂದ ಸದಸ್ಯತ್ವವನ್ನು ಪಿಎನ್ ದೇಸಾಯಿ ಒಪ್ಪಿರಲಿಲ್ಲ. ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಒಪ್ಪಿದ್ದ ಅವರು, ನೇಮಕಾತಿ ಆದೇಶವನ್ನು ನಿರಾಕರಿಸದಿರುವುದು, ಆದೇಶದ 30 ದಿನಗಳ ಒಳಗಾಗಿ ಸದಸ್ಯರಾಗಿ ಅಧಿಕಾರ ಸ್ವೀಕರಿಸುವುದು ಸೇರಿದಂತೆ ಹಲವು ನಿಬಂಧನೆಗಳನ್ನು ಒಪ್ಪದೇ ಸದಸ್ಯತ್ವನನ್ನು ನಿರಾಕರಿಸಿದ್ದರ ಬಗ್ಗೆ ಇಂದು ಸ್ನೇಹಮಯಿಕೃಷ್ಣ ಅವರು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. https://kannadanewsnow.com/kannada/basavana-bagewadi-development-authority-to-be-formed-minister-krishna-byre-gowda/ https://kannadanewsnow.com/kannada/alert-mobile-users-beware-if-you-see-these-signs-it-means-your-phone-is-hacked/

Read More