Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು. ಇಂತಹ ಆರೋಪಿಗಳಿಗೆ ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ಬಿಜೆಪಿ ಶಾಸಕ ಮುನಿರತ್ನ ಅವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ, ವಾಪಾಸ್ಸಾಗುತ್ತಿದ್ದಂತ ವೇಳೆಯಲ್ಲಿ ಅವರ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಹೀಗಾಗಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಸಂಬಂಧ ನಂದಿನಿ ಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದಂತ ಚಂದ್ರು, ವಿಶ್ವನಾಥ್ ಹಾಗೂ ಕೃಷ್ಣಮೂರ್ತಿ ಎಂಬುವರನ್ನು ಬಂಧಿಸಿದ್ದರು. ಇಂದು ಬಂಧಿತ ಮೂವರು ಆರೋಪಿಗಳು 32ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳು, ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. https://kannadanewsnow.com/kannada/big-relief-for-income-tax-payers-up-to-rs-10-50-lakh-exemption-likely/ https://kannadanewsnow.com/kannada/former-pm-manmohan-singh-hospitalised-after-health-deteriorates/
ನವದೆಹಲಿ: ವಾರ್ಷಿಕ 10.5 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ಕಡಿತವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಇದು ಮಧ್ಯಮ ವರ್ಗದ ತೆರಿಗೆದಾರರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ. ಫೆಬ್ರವರಿ 1 ರಂದು ಮುಂಬರುವ ಬಜೆಟ್ 2025 ರಲ್ಲಿ ಘೋಷಿಸುವ ಸಾಧ್ಯತೆಯಿರುವ ಈ ಕ್ರಮವು ಬಳಕೆಯನ್ನು ಹೆಚ್ಚಿಸುವ ಮತ್ತು ನಿಧಾನಗತಿಯ ಆರ್ಥಿಕತೆಯ ಮಧ್ಯೆ ಹೆಚ್ಚುತ್ತಿರುವ ಜೀವನ ವೆಚ್ಚಗಳ ಬಗ್ಗೆ ಕಳವಳಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ರಾಯಿಟರ್ಸ್ ವರದಿಯಲ್ಲಿ ಉಲ್ಲೇಖಿಸಲಾದ ಸರ್ಕಾರಿ ಮೂಲಗಳು ತಿಳಿಸಿವೆ. ಈ ಕ್ರಮವು ಜಾರಿಗೆ ಬಂದರೆ, ಲಕ್ಷಾಂತರ ಜನರಿಗೆ, ವಿಶೇಷವಾಗಿ ಹೆಚ್ಚಿನ ವೆಚ್ಚವನ್ನು ಎದುರಿಸುತ್ತಿರುವ ನಗರ ತೆರಿಗೆದಾರರಿಗೆ ಪ್ರಯೋಜನವಾಗಬಹುದು. 2020 ರಲ್ಲಿ ಪರಿಚಯಿಸಲಾದ ಪ್ರಸ್ತುತ ಆಡಳಿತದ ಅಡಿಯಲ್ಲಿ, 3 ಲಕ್ಷ ರೂ.ಗಳಿಂದ 10.5 ಲಕ್ಷ ರೂ.ಗಳವರೆಗಿನ ಆದಾಯಕ್ಕೆ 5% ರಿಂದ 20% ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, 10.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವು 30% ತೆರಿಗೆ ದರವನ್ನು ಎದುರಿಸುತ್ತದೆ. ಈಗಿನಂತೆ, ತೆರಿಗೆದಾರರು ಎರಡು ವ್ಯವಸ್ಥೆಗಳ…
ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಗುರುವಾರ ಸಂಜೆ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 92 ವರ್ಷದ ಸಿಂಗ್ ಅವರನ್ನು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲು ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. https://twitter.com/PTI_News/status/1872298595787096496 https://kannadanewsnow.com/kannada/bengaluru-power-outages-in-these-areas-from-10-am-to-3-pm-tomorrow/ https://kannadanewsnow.com/kannada/breaking-big-relief-for-employees-aadhaar-linking-deadline-with-uan-extended-uan-aadhaar-linking/
ಧಾರವಾಡ : ಧಾರವಾಡ ತಾಲೂಕಿನ ಸಲಕಿನಕೊಪ್ಪ ಹದ್ದಿನ ಸಣ್ಣ ಸೋಮಾಪುರ ಜಮೀನಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಇಲ್ಲದೆ ಮೊರಂ ಗಣಿಗಾರಿಕೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ಇಂದು (ಡಿ.26) ಸಂಜೆ ದಾಳಿ ನಡೆಸಲಾಯಿತು. ಈ ವೇಳೆ ನಾಗೇಶ ಅಣ್ಣಿಗೇರಿ ಹಾಗೂ ಪವನಗೌಡ ಹೊಸೂರ ಎಂಬುವರು ಇಲಾಖೆಯ ಅನುಮತಿ ಇಲ್ಲದೆ ಮೊರಂ ಅಗೆದು ಸಾಗಾಟ ಮಾಡಿರುವುದು ಕಂಡುಬಂದಿತ್ತು. ಮೊರಂ ಸಾಗಿಸಲು ಬಳಸುತ್ತಿದ್ದ 2 ಟಿಪ್ಪರ್ ಹಾಗೂ 3 ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಮತ್ತು ಈ ಕುರಿತು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. https://kannadanewsnow.com/kannada/contractor-suicide-case-do-you-know-what-minister-priyank-kharge-said/ https://kannadanewsnow.com/kannada/bengaluru-property-owners-bbmp-urges-all-citizens-to-get-e-khata/
ಬೆಂಗಳೂರು: ಬಿಬಿಎಂಪಿ ಇ-ಖಾತಾ 22 ಲಕ್ಷ ಆಸ್ತಿಗಳು https://bbmpeaasthi.karnataka.gov.in ನಲ್ಲಿ ಲಭ್ಯವಿದೆ. ಬೆಂಗಳೂರಿನ ಆಸ್ತಿ ಮಾಲೀಕರು ತಪ್ಪದೇ ಇ-ಖಾತಾ ಪಡೆಯುವಂತೆ ಬಿಬಿಎಂಪಿ ಮನವಿ ಮಾಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ಬಿಬಿಎಂಪಿಯು ಎಲ್ಲಾ ಬೆಂಗಳೂರಿಗರಿಗೆ ತಮ್ಮ ಸ್ವತ್ತುಗಳ ಬಿಬಿಎಂಪಿ ಇ-ಖಾತಾಗಳನ್ನು ನೀಡಲು ಸುಮಾರು 22-ಲಕ್ಷ ಕರಡು ಇ-ಖಾತಾಗಳನ್ನು ಆನ್ಲೈನ್ನಲ್ಲಿ ಇರಿಸಲಾಗಿರುತ್ತದೆ. ಎಲ್ಲಾ ನಾಗರೀಕರು ತಮ್ಮ ಬಿಬಿಎಂಪಿ ಇ-ಖಾತಾ ಪಡೆಯಲು ವಿನಂತಿಸಲಾಗಿದೆ. ಬಿಬಿಎಂಪಿಯ ಇ-ಖಾತಾ ಈಗ ನಾಗರೀಕರ ನಿಯಂತ್ರಣದಲ್ಲಿದೆ ಹಾಗೂ ಪ್ರತಿಯೊಬ್ಬರಿಗೂ ಬಿಬಿಎಂಪಿಯ ಇ-ಖಾತಾವನ್ನು ಪಾಲಿಕೆ ಜಾಲತಾಣ https://bbmpeaasthi.karnataka.gov.in ರಲ್ಲಿ ಪಡೆಯಲು ಪಾಲಿಕೆಯಲ್ಲಿ ಸಂಪರ್ಕರಹಿತ, ಫೇಸ್ಲೆಸ್, ಆನ್ಲೈನ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ನಿಮ್ಮ ಆಸ್ತಿ ಇ-ಖಾತಾ ಆನ್ಲೈನ್ನಲ್ಲಿದೆ ಮತ್ತು ಅದನ್ನು ಸರಾಗವಾಗಿ ಈ ಕೆಳಗಿನಂತೆ ಪಡೆಯಿರಿ: 1. ನಿಮ್ಮ ಕರಡು ಇ-ಖಾತಾವನ್ನು ವಾರ್ಡ್ ವಾರು ಪಟ್ಟಿಯಲ್ಲಿ ಹುಡುಕಿ. (ನಿಮ್ಮ ವಾರ್ಡ್ ಅನ್ನು ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ತಿಳಿದುಕೊಳ್ಳಿ) 2.…
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಎನ್ನುವವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಆರೋಪಿಸಿ ಗುತ್ತಿಗೆದಾರ ಸಚಿನ್ ಎಂಬಾತ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದನು. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು ಅಂತ ಮುಂದೆ ಓದಿ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆಯ ಯುವಕ ಸಚಿನ್ ಪಾಂಚಾಳರ ಸಾವು ದುರದೃಷ್ಟಕರವಾದುದು, ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈ ಪ್ರಕರಣದಲ್ಲಿ ಹೆಸರಿಸಿರುವ ಆರೋಪಿಗಳ ಹೇಳಿಕೆಗಳು ಒಂದು ಬಗೆಯಲ್ಲಿವೆ, ಸಚಿನ್ ಬರೆದಿದ್ದೆನ್ನಲಾಗಿರುವ ಡೆತ್ ನೋಟ್ ನಲ್ಲಿ ಇನ್ನೊಂದು ಬಗೆಯ ವಿಷಯಗಳು ಕಂಡು ಬರುತ್ತವೆ. ಈಗಾಗಲೇ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂದಿದ್ದಾರೆ, ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರುವಲ್ಲಿ ತನಿಖಾ ಸಂಸ್ಥೆಗಳು ಪರಿಣಾಮಕಾರಿಯಾಗಿ ತನಿಖೆ…
ಬೆಂಗಳೂರು: ರಾಜಕಾರಣದಲ್ಲಿ ಗಟ್ಟಿ ನಿಲುವು ಮತ್ತು ಹೋರಾಟ ಗೊತ್ತಿಲ್ಲದೇ ಅಧಿಕಾರ ಪಡೆದಿರುವ ವಿಜೇಂದ್ರ, ತಮಗೆ ಶಕ್ತಿ ಇದ್ದರೆ ನಾಳಿನ ಹೋರಾಟಕ್ಕೆ ಅವರ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ಪಾಲ್ಗೊಳ್ಳವಂತೆ ಮಾಡಿದರೆ ಅದೇ ಅವರ ಅತಿ ದೊಡ್ಡ ಸಾಧನೆ ಆಗುತ್ತದೆ! ಬಾಲಭವನದ ಈ ಬಿಜೆಪಿ ಅಧ್ಯಕ್ಷರ ನೋಡಿ ಜಗನ್ನಾಥ ಭವನದ ರಾಜ್ಯ ಬಿಜೆಪಿ ನಾಯಕರು ಬೀದಿ ಬೀದಿಯಲ್ಲಿ ನಗುತ್ತಿದ್ದಾರೆ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಶ್ರೀ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧಿವೇಶನದ ಅಧ್ಯಕ್ಷರಾಗಿ ಒಂದು ನೂರು ವರ್ಷ ಆದ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದಲ್ಲಿ ಗಾಂಧಿ ತತ್ವ ಸಿದ್ದಾಂತಗಳಿಗೆ ಆದರ್ಶ ಗಳಿಗೆ ಎಳ್ಳು ನೀರು ಬಿಟ್ಟು ಕೋಮುವಾದ ದ್ವೇಷ ಬಿತ್ತುತ್ತಿರುವ ಮತೀಯ ಶಕ್ತಿಗಳ ವಿರುದ್ಧ ದೇಶದಲ್ಲಿ ಗಾಂಧೀವಾದ ತತ್ವಗಳ ಬಿತ್ತಲು ಗಾಂಧಿ…
ಬೆಳಗಾವಿ: ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದಂತ ಗರ್ಭಿಣಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಳು. ಈ ಬಾಣಂತಿ ಸಾವಿನ ಕುರಿತಂತೆ ಬಿಮ್ಸ್ ಆಸ್ಪತ್ರೆಯ ವೈದ್ಯರಿಂದ ಸ್ಪಷ್ಟನೆ ನೀಡಲಾಗಿದೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಬಿಮ್ಸ್ ಆಸ್ಪತ್ರೆಯ ವೈದ್ಯರು, ಬೆಳಗಾವಿಯ BIMS ಮೆಡಿಕಲ್ ಕಾಲೇಜಿನಲ್ಲಿ ಪೂಜಾ ಅಡಿವೆಪ್ಪ ಎಂಬುವರು ಹೆರಿಗೆ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ. 25 ವರ್ಷದ ಪೂಜಾ ಅವರು Dilated cardiomyopathy with aspiration pneumonia with antepartum eclampsia ದಿಂದ ಬಳಲುತ್ತಿದ್ದರು ಎಂದಿದ್ದಾರೆ. 24/12/2024 ರಂದು BIMS ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಟ್ ಆಗಿದ್ದ ಪೂಜಾ ಅವರು ಗಂಭೀರ ಸ್ಥಿತಿಯಲ್ಲಿದ್ದರು. ದಾಖಲಾದ ಸಂದರ್ಭದಲ್ಲಿ ರೋಗಿಯ ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವವಾಗುತ್ತಿತ್ತು. ಇದು ಪೂಜಾ ಅವರ ಐದನೆ ಬಾರಿಯ ಪ್ರಗ್ನೆನ್ಸಿಯಾಗಿತ್ತು ಎಂಬುದಾಗಿ ತಿಳಿಸಿದ್ದಾರೆ. ಹೆರಿಗೆಯ ದಿನಾಂಕ ಇನ್ನೂ ಒಂದು ತಿಂಗಳು ಮುಂದಿದ್ದರಿಂದ, ಗರ್ಭಿಣಿ ಪೂಜಾ ಅವರು ಸ್ಥಿತಿ ಗಂಭೀರವಾಗಿದ್ದರಿಂದ ಮಗುವಿನ ಜೀವ ಉಳಿಸುವ ನಿಟ್ಟಿನಲ್ಲಿ ಕುಟುಂಬದವರ ಒಪ್ಪಿಗೆ ಪಡೆದು ಸಹಜ…
ಬೆಂಗಳೂರು: ಕಲ್ಯಾಣ ಕರ್ನಾಟಕದ ಭಾಲ್ಕಿಯ ಗುತ್ತಿಗೆದಾರ ಸಚಿನ್ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ಮಾಡಿಸಬೇಕು. ಸತ್ಯಾಸತ್ಯತೆ ಹೊರಬರಬೇಕಿದೆ. ಈ ವಿಷಯದಲ್ಲಿ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆಯನ್ನು ಸಿದ್ದರಾಮಯ್ಯನವರು ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನ್ಯಾಯಾಂಗ ತನಿಖೆ, ಸಚಿವರ ರಾಜೀನಾಮೆ ಪಡೆಯದೆ ಇದ್ದರೆ ಬಿಜೆಪಿ ಇದರ ಬಗ್ಗೆ ಪ್ರಬಲ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಇವತ್ತು ಸಚಿನ್ ಎಂಬ ಭಾಲ್ಕಿಯ ಯುವ ಗುತ್ತಿಗೆದಾರ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಕಾರಣರನ್ನೂ ಅವರು ಹೆಸರಿಸಿದ್ದಾರೆ. ಮಾಜಿ ಕಾರ್ಪೊರೇಟರ್ ರಾಜು ಕಪನೂರು ಮತ್ತು ಇತರರ ಹೆಸರನ್ನು ಅವರು ಬರೆದಿಟ್ಟಿದ್ದಾರೆ ಎಂದು ವಿವರ ನೀಡಿದರು. ಎಲ್ಲ ವಿಷಯಕ್ಕೂ ಮೂಗು ತೂರಿಸಿ ಮಾತನಾಡುವ ಹಾಗೂ ನೈತಿಕತೆ ಕುರಿತು ಮಾತನಾಡುವ ಪ್ರಿಯಾಂಕ್ ಖರ್ಗೆಯವರು ಸಚಿನ್ ಸಾವಿನ ಕುರಿತು ಕಾಂಗ್ರೆಸ್ಸಿನ ಮಹಾಧಿವೇಶನದಲ್ಲಿ…
ಬೆಂಗಳೂರು: ದಿನಾಂಕ: 05.01.2025 ರ ಭಾನುವಾರದಂದು ಆಯೋಜಿಸಿರುವ ಚಿತ್ರಸಂತೆ ಆಯೋಜಿಸಲಾಗಿದೆ. ಬೆಂಗಳೂರಿನ ಚಿತ್ರಸಂತೆಗೆ ತೆರಳೋರಿಗೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಅದರಲ್ಲಿ ಬಿಎಂಟಿಸಿಯಿಂದ ಮೆಟ್ರೋ ಫೀಡರ್ ಸೇವೆಯನ್ನು ಒದಗಿಸಲಾಗುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುವ ಧ್ಯೇಯದೊಂದಿಗೆ ಪ್ರಯಾಣಿಕರಿಗೆ ದಕ್ಷ, ಉತ್ತಮ ಮತ್ತು ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಮುಂದುವರೆದು, ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ದಿನಾಂಕ: 05.01.2025 ರ ಭಾನುವಾರದಂದು ಆಯೋಜಿಸಿರುವ ಚಿತ್ರಸಂತೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಮಸಾಸಂಸ್ಥೆಯಿಂದ ಬೆಳಗ್ಗೆ 05:00 ಗಂಟೆಯಿಂದ ರಾತ್ರಿ 21:00 ಗಂಟೆಯವರೆಗೆ ರೂ.15.00 ವಿಶೇಷ ದರ (Flat Fare) ಗಳೊಂದಿಗೆ ಮೆಟ್ರೋ ಫೀಡರ್ ಸಾರಿಗೆಗಳನ್ನು ಆಚರಣೆಗೊಳಿಸಲು ಉದ್ದೇಶಿಸಿದ್ದು, ವಿವರಗಳು ಕೆಳಕಂಡಂತೆ ಇರುತ್ತವೆ. ಕ್ರ.ಸಂ ಎಲ್ಲಿಂದ-ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ ಸಮಯ 1 ಕೆಂಪೇಗೌಡ ಬಸ್ ನಿಲ್ದಾಣ-ವಿಧಾನಸೌಧ ಆನಂದರಾವ್…