Author: kannadanewsnow09

ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಸಂತ್ರಗಾಚಿ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಿವರಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ 06541 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಸಂತ್ರಗಾಚಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 11 ಮತ್ತು 15 ರಂದು ಮಧ್ಯಾಹ್ನ 03:50 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮಾರ್ಚ್ 13 ಮತ್ತು 17 ರಂದು ಬೆಳಗ್ಗೆ 6:00 ಗಂಟೆಗೆ ಸಂತ್ರಗಾಚಿ ತಲುಪಲಿದೆ. ಹಿಂದಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 06542 ಮಾರ್ಚ್ 13 ಮತ್ತು 17 ರಂದು ಸಂತ್ರಗಾಚಿಯಿಂದ ಮಧ್ಯಾಹ್ನ 12:10ಕ್ಕೆ ಹೊರಟು, ಮಾರ್ಚ್ 14 ಮತ್ತು 18 ರಂದು ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ರಾತ್ರಿ 08:10 ಗಂಟೆಗೆ ಆಗಮಿಸಲಿದೆ. ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಕುಪ್ಪಂ, ಜೋಲಾರ್ ಪೆಟ್ಟೈ ಜಂಕ್ಷನ್, ಕಟ್ಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಓಂಗೋಲ್,…

Read More

ಬೆಂಗಳೂರು: ನಗರದ ಬ್ಯಾಡರಹಳ್ಳಿ ಠಾಣೆಯ ಪೊಲೀಸರಿಂದ ಬೈಕ್ ನಲ್ಲಿ ಮಾರಕಾಸ್ತ್ರಗಳನ್ನು ಇರಿಸಿಕೊಂಡು ತಿರುಗಾಡುತ್ತಿದ್ದಂತ ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿಯನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಳೆದ ಎರಡು ಮೂರು ತಿಂಗಳಿನಿಂದ ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ವಾಸವಾಗಿದ್ದನು. ನಿನ್ನೆ ಸಹಚರರೊಂದಿಗೆ ಬೈಕ್ ನಲ್ಲಿ ಮಾರಕಾಸ್ತ್ರಗಳನ್ನು ಇರಿಸಿಕೊಂಡು ತೆರಳುತ್ತಿದ್ದಾಗ ಪೊಲೀಸರು ಗಮನಿಸಿದ್ದರು. ಕೂಡಲೇ ಅಲರ್ಟ್ ಆದಂತ ಪೊಲೀಸರು ರೌಡಿ ಶೀಟರ್ ಕುಣಿಗಲ್ ಗಿರಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/7000-cctvs-to-be-installed-at-1640-locations-in-bengaluru/ https://kannadanewsnow.com/kannada/good-news-speaker-u-t-khader-says-club-will-be-set-up-for-mlas-to-chat/

Read More

ಬೆಂಗಳೂರು : ಕಾರವಾರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಇನ್ನೆರಡು ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ವಿಧಾನಸಭೆಗೆ ತಿಳಿಸಿದರು. ಗುರುವಾರ ನಡೆದ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ದಿನಕರ್ ಕೇಶವಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯ ಕಲ್ಪಿಸಲಾಗುತ್ತದೆ. ಕ್ಯಾನ್ಸರ್‌ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇಬ್ಬರು ವೈದ್ಯರು ಮಾತ್ರ ಅರ್ಜಿ ಹಾಕಿದ್ದರು ಎಂದರು. ತಾಲೂಕು ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಿಲ್ಲ. ಹಾಗೆಯೇ ಕುಮಟಾ ತಾಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ರೋಗಿಗಳು ಸೂಪರ್ ಸ್ಪೆಷಾಲಿಟಿ ಸೌಲಭ್ಯಕ್ಕಾಗಿ ಮಂಗಳೂರು ಅಥವಾ ಗೋವಾಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲಾಗುತ್ತಿದೆ. ವೈದ್ಯಕೀಯ…

Read More

ಬೆಂಗಳೂರು: ಬೆಂಗಳೂರು ನಗರದಲ್ಲಿ 7 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 1640 ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹೈ ರೆಸೂಲುಷನ್ ಕ್ಯಾಮೆರಾಗಳನ್ನು ಹಾಕಿದ್ದೇವೆ. ಈ ಕ್ಯಾಮೆರಾಗಳಿಗೆ ಎಐ ತಂತ್ರಜ್ಞಾನವನ್ನು ಅಳವಡಿಸಿದ್ದೇವೆ. ಪೊಲೀಸರಿಗೆ ಬಾಡಿವೊರ್ನ್ ಕ್ಯಾಮೆರಾಗಳನ್ನು ಒದಗಿಸಿದ್ದೇವೆ. ಏನೆಲ್ಲಾ ಟೆಕ್ನಾಲಜಿಗಳಿವೆಯೋ ಅದೆಲ್ಲವನ್ನು ಬೆಂಗಳೂರು ನಗರ ಪೊಲೀಸ್ ಸೇರಿದಂತೆ ರಾಜ್ಯದ ಎಲ್ಲ ಪೊಲೀಸರಿಗೆ ಒದಗಿಸಲಾಗಿದೆ. ಕರ್ನಾಟಕ ಪೊಲೀಸರು ಟೆಕ್ನಾನಾಲಾಜಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಭೋಜೇಗೌಡ ಅವರು ಇಂದು ಪ್ರಶ್ನೋತ್ತರ ಕಲಾಪ ವೇಳೆ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೇಳಿದ ವಿವಿಧ ಪ್ರಶ್ನೆಗಳಿಗೆ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಉತ್ತರಿಸಿದ ಅವರು, ರಾಜ್ಯಾದ್ಯಂತ 136 ವ್ಹಿಲಿಂಗ್ ಪ್ರಕರಣಗಳನ್ನು ದಾಖಲಿಸಿ, ಈ ಪ್ರಕರಣಗಳಲ್ಲಿ 128 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2024ರಲ್ಲಿ 266 ಪ್ರಕರಣಗಳಲ್ಲಿ 179 ಜನರನ್ನು ಬಂಧಿಸಲಾಗಿದೆ. 2025ರಲ್ಲಿ ಈವರೆಗೆ 47 ಪ್ರಕರಣಗಳಲ್ಲಿ 30 ಜನರನ್ನು ಬಂಧಿಸಲಾಗಿದೆ ಎಂದರು. ಮಾರಕಸ್ತ್ರಗಳನ್ನು ಹಿಡಿದು ಪುಂಡಾಟಿಕೆ…

Read More

ಲಕ್ನೋ: ಪಾಕ್ ಐಎಸ್ಐ ಜೊತೆಗೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರನೊಬ್ಬ ಮಹಾ ಕುಂಭಮೇಳದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದನು ಎಂಬುದಾಗಿ ತಿಳಿದು ಬಂದಿದೆ. ಇಂತಹ ಖಲಿಸ್ತಾನಿ ಉಗ್ರನನ್ನು ಬಂಧಿಸಲಾಗಿದೆ. ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದಂತ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉಗ್ರನನ್ನು ಮಸಿಹ್ ಎಂಬುದಾಗಿ ತಿಳಿದು ಬಂದಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಮಹಾ ಕುಂಭಮೇಳದಲ್ಲಿ ಕೃತ್ಯ ಎಸಗಲು ಮುಂದಾಗಿದ್ದ ಎನ್ನಲಾಗುತ್ತಿದೆ. ಬಂಧಿತ ಖಲಿಸ್ತಾನಿ ಉಗ್ರ ಪ್ರಯಾಗ್ ರಾಜ್ ಜಿಲ್ಲೆಯಲ್ಲಿನ ಮಹಾ ಕುಂಭದ ಸಮಯದಲ್ಲಿ ದಾಳಿ ನಡೆಸಿ, ನಂತ್ರ ಪೋರ್ಚುಗಲ್ ಗೆ ಪಲಾಯಣ ಮಾಡುವಂತ ಉದ್ದೇಶ ಹೊಂದಿದ್ದನು ಎಂಬುದಾಗಿ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಮಹಾ ಕುಂಭಮೇಳದ ಮೇಲೆ ದಾಳಿ ನಡೆಸಿ, ದುಷ್ ಕೃತ್ಯ ನಡೆಸಲು ಸಂಚು ರೂಪಿಸಿದ್ದಂತ ಆರೋಪಿಯನ್ನು ಬಂಧಿಸಿ, ಆತನ ದಾಳಿಯನ್ನು ವಿಫಲಗೊಳಿಸಲಾಗಿದೆ. ಈತ ಮಹಾ ಕುಂಭದ ಸಿದ್ಧತೆಗಳ ಸಮಯದಲ್ಲಿ ಲಕ್ನೋ ಮತ್ತು ಕಾನ್ಪುರಕ್ಕೆ ಭೇಟಿ ನೀಡಿದ್ದನು…

Read More

ಕಲಬುರ್ಗಿ: ಜಿಲ್ಲೆಯ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಪತ್ತೆಯಾದಂತ ಚಿನ್ನಾಭರಣ ಕಂಡು ಲೋಕಾಯುಕ್ತ ಪೊಲೀಸರೇ ಶಾಕ್ ಆಗಿದ್ದಾರೆ. ಹೌದು.. ಕಲಬುರ್ಗಿಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಮುಖ್ಯ ಯೋಜನಾಧಿಕಾರಿ ಜಗನ್ನಾಥ್ ಹಲಿಂಗೆ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎನ್ ಜಿ ಒ ಕಾಲೋನಿಯಲ್ಲಿನ ಮನೆ ಸೇರಿದಂತೆ 6 ಕಡೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರನಲ್ಲಿನ ಮನೆ, ಬೀದರ್ ಮನೆ ಹಾಗೂ ದನ್ನುರ್ ಕೆ ಫಾರ್ಮ್ ಹೌಸ್ ಸೇರಿದಂತೆ 6 ಕಡೆಯಲ್ಲಿ ಲೋಕಾಯುಕ್ತ ಎಸ್ ಪಿ ಉಮೇಶ್, ಡಿವೈಎಸ್ಪಿ ಗೀತಾ ಬೆನಾಳ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಎರಡು ಕೆಜಿಗೂ ಅಧಿಕ ಬೆಳ್ಳಿ ಪತ್ತೆಯಾಗಿದ್ದರೇ, ಕೀ ಇಲ್ಲದ ಹಿನ್ನಲೆಯಲ್ಲಿ ಲಾಕರ್ ಒಡೆದು ನೋಡಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಜೊತೆಗೆ ಅಳಂದದಲ್ಲಿ 30 ಎಕರೆ ಜಮೀನು, ಕಲಬುರ್ಗಿ ಹೊರವಲಯದ ತಾವರಗೆರೆಯಲ್ಲಿ…

Read More

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಿ ಬಿ-ಖಾತಾ ಪಡೆದುಕೊಳ್ಳಬೇಕು. ಸರ್ಕಾರಿ ಹಾಗೂ ಸರ್ಕಾರದ ಅಧೀನ ಇಲಾಖೆ, ನಿಗಮ, ಮಂಡಳಿಗಳ ಜಾಗಗಳನ್ನು ಹೊರತುಪಡಿಸಿ, ಅನಧಿಕೃತ ಬಡಾವಣೆ, ಭೂ ಪರಿವರ್ತನೆ ಹೊಂದದೆ ಸ್ವಂತವಾಗಿ ತಮ್ಮದೇ ಮಾಲೀಕತ್ವ ಹೊಂದಿದ ನಿವೇಶನ/ಜಾಗಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ನಿವೇಶನ/ಕಟ್ಟಡಗಳನ್ನು 2024 ಸೆ.10 ರ ಒಳಗಾಗಿ ನೋಂದಾವಣೆ ಮೂಲಕ ಖರೀದಿ ಮಾಡಿದಂತಹ ಆಸ್ತಿಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಬಿ-ಖಾತೆ ಪಡೆಯಬಹುದಾಗಿದೆ. ಎ-ಖಾತಾ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು 1. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೊಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ ವಿಭಾಗ * ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು ಕಂದಾಯ ಇಲಾಖೆಯಿಂದ 94 ಸಿ ಸಿ ಅಡಿ ನೀಡಲಾದ ಹಕ್ಕು ಪತ್ರ. 2. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಧೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ 3. ಪ್ರಸಕ್ತ…

Read More

ನವದೆಹಲಿ: ಜಾರ್ಖಂಡ್ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ಧನ್ವಾರ್ ಶಾಸಕ ಬಾಬುಲಾಲ್ ಮರಾಂಡಿ ಅವರನ್ನು ತನ್ನ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಿಸಿದೆ. ರಾಂಚಿಯಲ್ಲಿ ನಡೆದ ಸಭೆಯಲ್ಲಿ, ಜಾರ್ಖಂಡ್ ಬಿಜೆಪಿ ಅಧ್ಯಕ್ಷರೂ ಆಗಿರುವ ಮರಾಂಡಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯದಲ್ಲಿ ತನ್ನ ನಾಯಕತ್ವವನ್ನು ಬಲಪಡಿಸಲು ಪಕ್ಷದ ಕಾರ್ಯತಂತ್ರದ ಒತ್ತಡದ ಮಧ್ಯೆ ಅವರ ನೇಮಕಾತಿ ಬಂದಿದೆ. ಈ ನಿರ್ಧಾರಕ್ಕೆ ಮುಂಚಿತವಾಗಿ, ಬಿಜೆಪಿ ಸಂಸದೀಯ ಮಂಡಳಿ ಬುಧವಾರ ಪಕ್ಷದ ಶಾಸಕಾಂಗ ನಾಯಕನ ಚುನಾವಣೆಯ ಮೇಲ್ವಿಚಾರಣೆಗಾಗಿ ಇಬ್ಬರು ಕೇಂದ್ರ ವೀಕ್ಷಕರನ್ನು ಘೋಷಿಸಿತ್ತು. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಮತ್ತು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್ (ಸಂಸದ) ಅವರಿಗೆ ಈ ಪ್ರಕ್ರಿಯೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಮರಾಂಡಿ ಅವರ ಆಯ್ಕೆಯು ಜಾರ್ಖಂಡ್ನಲ್ಲಿ ಮುಂಬರುವ ರಾಜಕೀಯ ಸವಾಲುಗಳಿಗೆ ಪಕ್ಷವು ಸಜ್ಜಾಗುತ್ತಿರುವಾಗ ತನ್ನ ಸ್ಥಾನವನ್ನು ಬಲಪಡಿಸುವತ್ತ ಬಿಜೆಪಿಯ ನಿರಂತರ ಗಮನವನ್ನು ಸೂಚಿಸುತ್ತದೆ. https://kannadanewsnow.com/kannada/sep-tsp-money-being-used-for-other-purposes-to-cheat-chalavadi-narayanasamy/ https://kannadanewsnow.com/kannada/where-has-the-cms-pro-dalit-concern-gone-did-you-forget-after-coming-to-power/ https://kannadanewsnow.com/kannada/good-news-speaker-u-t-khader-says-club-will-be-set-up-for-mlas-to-chat/

Read More

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ತುಳಿತಕ್ಕೆ ಒಳಗಾದ ಪರಿಶಿಷ್ಟ ಸಮುದಾಯದವರಿಗಾಗಿ ಇರುವ ಎಸ್‍ಇಪಿ- ಟಿಎಸ್‍ಪಿ ವಿಶೇಷ ಯೋಜನೆ. ವಿದ್ಯಾವಂತರನ್ನಾಗಿ ಮಾಡುವುದು, ಜಮೀನು ಖರೀದಿಸಿ ಕೊಡುವುದು, ಭೂಮಿಗೆ ಕೊಳವೆಬಾವಿ ಹಾಕಿಸಿ ನೀರು ಕೊಡುವುದು, ಕೈಗಾರಿಕೆ ಸ್ಥಾಪನೆಗೆ ನೆರವಿನಂಥ ಆಸ್ತಿ ನಿರ್ಮಾಣಕ್ಕೆ ಹಣ ಕೊಡುವ ಯೋಜನೆ ಇದು. ಅದರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು. ಪರಿಶಿಷ್ಟ ಸಮುದಾಯದವರು ಫ್ರೀ ಬಸ್ಸಿನಲ್ಲಿ ಓಡಾಡುವುದಿಲ್ಲ; ಮೋಜು ಮಸ್ತಿ ಮಾಡುವುದಿಲ್ಲ. ಆದರೆ, ನೀವು ನಮ್ಮವರ ವಿಶೇóಷ ಯೋಜನೆಯ ಹಣವನ್ನು ತೆಗೆದು ನಿಮ್ಮ ಖಾತೆಗೆ ಹಾಕಿದ್ದೀರಿ ಎಂದು ಆಕ್ಷೇಪಿಸಿದರು. ಇದು ನಮ್ಮ ಜನಾಂಗಕ್ಕೆ ಮಾಡಿದ ಮೋಸ ಅಲ್ಲವೇ? ಎಂದು ಪ್ರಶ್ನಿಸಿದರು. ನಮ್ಮಲ್ಲಿ ವಿದ್ಯಾವಂತರು ಹೆಚ್ಚಾಗಿದ್ದಾರೆ. ಆದರೆ, ನಿರುದ್ಯೋಗವೂ ಅಷ್ಟೇ ಬೆಳೆಯುತ್ತಿದೆ. ಯುವನಿಧಿ ಪೇಪರಲ್ಲಿ ಇದೆಯೇ ಹೊರತು ನಮ್ಮ ಜನರಿಗೆ ಇದು ದಕ್ಕಿಲ್ಲ ಎಂದು ವಿವರಿಸಿದರು. ರಿಪಬ್ಲಿಕ್ ಪಾರ್ಟಿಯ ರಾಜ್ಯದ ಹಿರಿಯ ಮುಖಂಡ ಡಾ.ಎಂ.ವೆಂಕಟಸ್ವಾಮಿ, ಮಾಜಿ ಸಚಿವ ಮತ್ತು ರಾಜ್ಯ ಉಪಾಧ್ಯಕ್ಷ…

Read More

ಬೆಂಗಳೂರು: ಸಿದ್ದರಾಮಯ್ಯನವರ ದಲಿತಪರ ಕಾಳಜಿ ಎಲ್ಲಿ ಹೋಗಿದೆ? ವಿಪಕ್ಷದಲ್ಲಿದ್ದಾಗ ಇದ್ದ ದಲಿತಪರ ಕಾಳಜಿ ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ. ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಿತು. ಹೋರಾಟ ಸಮಿತಿ ಆಹ್ವಾನದ ಮೇರೆಗೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ ಅವರು, ಅಹಿಂದ ಹೆಸರಿನೊಂದಿಗೆ ರಾಜ್ಯದಲ್ಲಿ ಪರಿóಶಿಷ್ಟ ಜಾತಿ, ಪಂಗಡಗಳ ಕಣ್ಣೀರು ಒರೆಸುವುದಾಗಿ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದವರು; ಅವರು ಈ ಕರಾಳದಿನಕ್ಕೆ ಕಾರಣರು ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರಾ? ಅಥವಾ… ಸಿದ್ದರಾಮಯ್ಯನವರು ಅನುಭವಿ ಮುಖ್ಯಮಂತ್ರಿ; ಅವರು ಅಸಮರ್ಥ ಎನ್ನುವುದಿಲ್ಲ. ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರಾ? ಅಥವಾ ದಲಿತರ ಮೇಲಿನ ಕಾಳಜಿ ಮರೆತುಹೋಗಿದೆಯೇ ಎಂದು ಬಿ.ವೈ. ವಿಜಯೇಂದ್ರ ಅವರು ಕೇಳಿದರು. ದಲಿತ ಸಮುದಾಯಕ್ಕೆ ಶಕ್ತಿ ಕೊಡಬೇಕಾದ ಹಣದ ದುರ್ಬಳಕೆ ಮಾಡಿದ್ದೀರಲ್ಲ? ಇದು ನ್ಯಾಯವೇ ಸಿದ್ದರಾಮಯ್ಯನವರೇ?…

Read More