Author: ವಸಂತ್‌ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಅವರು ಪ್ರಮುಖವಾಗಿ Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಾಹಿತ್ಯ, ಸಾಮಾಜಿಕ ವರದಿಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.2024-25ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸುವುದರಲ್ಲಿ ಪ್ರಮುಖ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ತಾಜಾ ಸುದ್ದಿಗಳು, ಶಿಕ್ಷಕರ ಪ್ರಶಸ್ತಿಗಳ ಪಟ್ಟಿ, ಮತ್ತು ನ್ಯಾಯಾಂಗ ಸಂಬಂಧಿತ ವರದಿಗಳನ್ನು ನೀಡುತ್ತಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಮೈಸೂರು : ಮಹಿಳೆಯರಿಗೆ ಬ್ಯಾಂಕ್ ಗಳಿಂದ ಸರಿಯಾಗಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರ ಪರಿಣಾಮ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ. ಈ‌ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾ- 2025 ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಸಚಿವರು ಮಾತನಾಡಿದರು. ಮಹಿಳೆಯರ ಸ್ವಾಭಿಮಾನ, ಸಮೃದ್ಧಿ, ತಾಳ್ಮೆ, ಶಕ್ತಿಯ ಪ್ರತೀಕವೇ ದಸರಾ ಹಬ್ಬ. ನವ ದೇವಿಯ ಆರಾಧನೆ ಮಾಡಿ. ದುಷ್ಟರ ವಿರುದ್ಧ ಶಿಷ್ಟರ ರಕ್ಷಣೆ ಮಾಡುವ ದೇವಿಯ ಆರಾಧನೆ ಮಾಡುವುದೇ ವಿಜಯ ದಶಮಿ. ಇಡೀ ವಿಶ್ವಕ್ಕೆ ಸಂಸ್ಕೃತಿಯ ರುಚಿಯನ್ನು ಕೊಟ್ಟವರು ಮಹಿಳೆಯರು. ಹಿಂದೆ ರಾಜರು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಸರ್ಕಾರ ಬಹಳ ವಿಜೃಂಭಣೆಯಿಂದ ದಸರಾ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಧಿಕಾರಿಗಳ ವಿದೇಶ ಪ್ರವಾಸವನ್ನು ಈ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿ ಆದೇಶಿಸಿದೆ. ಈ ಮೂಲಕ ಅಧ್ಯಯನದ ಹೆಸರಿನಲ್ಲಿ ಅಧಿಕಾರಿಗಳು ಕೈಗೊಳ್ಳುತ್ತಿದ್ದಂತ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, 2024ನೇ ಸಾಲಿನ ಆಗಸ್ಟ್ ತಿಂಗಳಿನಿಂದ 2025ರ ಜುಲೈ ತಿಂಗಳವರೆಗೆ ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ಕಲಿಕೆ ಹಾಗು ಶಿಫಾರಸ್ಸುಗಳೊಂದಿಗೆ ಸರ್ಕಾರಕ್ಕೆ ಅಧ್ಯಯನ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಂದ ಸೂಚಿತವಾಗಿರುತ್ತದೆ ಎಂದಿದ್ದಾರೆ. ಆದರೆ, ಹಲವು ಅಧಿಕಾರಿಗಳು ಕೈಗೊಂಡಿರುವ ಅಧಿಕೃತ ವಿದೇಶ ಪ್ರವಾಸದ ವರದಿಗಳನ್ನು ಸಲ್ಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮುಂಬರುವ ದಿನಗಳಲ್ಲಿ ಅಧಿಕೃತ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಪ್ರಸ್ತಾವನೆಯನ್ನು ಸಲ್ಲಿಸುವ ಮುನ್ನ ಕಡ್ಡಾಯವಾಗಿ ಈ ಹಿಂದೆ ಕೈಗೊಂಡಿರುವ ಪ್ರವಾಸಗಳ ಕಲಿಕೆ ಹಾಗೂ ಅನುಷ್ಠಾನ ವರದಿ ನೀಡಿದ್ದಲ್ಲಿ ಮಾತ್ರ ಹಾಲಿ ಪ್ರವಾಸದ ಪ್ರಸ್ತಾವನೆಗೆ…

Read More

ಬೆಂಗಳೂರು: ಜಾತಿ ಪಟ್ಟಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ ನಾರಾಯಣಸ್ವಾಮಿ, ಮಾಜಿ ಸಚಿವ ವಿ ಸುನೀಲ್ ಕುಮಾರ್ ಆರೋಪಿಸಿದಂತ ಈ 14 ಜಾತಿಗಳನ್ನು ಜಾತಿ ಪಟ್ಟಿಯಲ್ಲಿ ಸೇರಿಸಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸ್ಪಷ್ಟ ಪಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಹಿಂದುಳಿದ ವರ್ಗಗಳ ಆಯೋಗವು,  ದಿನಾಂಕ:23-09-20250 ಪತ್ರದ ಮೂಲಕ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳಾದ ಛಲವಾದಿ ನಾರಾಯಣಸ್ವಾಮಿ (ವಿಧಾನ ಪರಿಷತ್ ವಿಪಕ್ಷ ನಾಯಕರು), ಎ.ನಾರಾಯಣಸ್ವಾಮಿ (ಕೇಂದ್ರದ ಮಾಜಿ ಸಚಿವರು) ಹಾಗೂ ವಿ. ಸುನಿಲ್ ಕುಮಾರ್(ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರು) ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಈ ಕೆಳಕಂಡ ಜಾತಿಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸೇರಿಸಬಾರದು ಎಂದು ಆಗ್ರಹಿಸಿರುತ್ತಾರೆ ಎಂದಿದೆ. ಆದಿ ಆಂಧ್ರ ಕ್ರಿಶಿಯನ್ ಆದಿದ್ರಾವಿಡ ಕ್ರಿಶ್ಚಿಯನ್ ಬುಡುಗ ಜಂಗಮ ಕ್ರಿಶ್ಚಿಯನ್ ಲಮಾಣಿ ಕ್ರಿಶ್ಚಿಯನ್ ಮಾದಿಗ ಕ್ರಿಶ್ಚಿಯನ್ ಮಾಲಾ ಕ್ರಿಶ್ಚಿಯನ್ ವಡ ಕ್ರಿಶ್ಚಿಯನ್…

Read More

ಶತ್ರು ವಿಜಯಕ್ಕೆ ಅದ್ಬುತ ಚಮತ್ಕಾರಿ ಮಂತ್ರ -ನೀವು ಸರಿಯಿದ್ದು ನಿಯತ್ತಾಗಿದ್ರು ತೊಂದರೆ ಇದ್ರೆ ಮಾಡಿ. -ನಿಜವಾಗ್ಲೂ ಶತ್ರು ಬಾಧೆ ಇದ್ರೆ ಮಾತ್ರ ಇದು ನಿಮ್ಮ ಪರ ಕೆಲಸ ಮಾಡುತ್ತೆ. -ಸುಳ್ಳು ಆರೋಪ, ಹೊಟ್ಟೆ ಕಿಚಿಂದ ಮಾಡಿದ್ರೆ ನಿಮ್ಮನೆ ಹಾಳು ಮಾಡುತ್ತದೆ ಜೋಪಾನ. -ಅನಗತ್ಯವಾಗಿ ನಿಮ್ಮ ವಿರುದ್ಧ ತೊಂದರೆ ನೀಡುವಂತಹ ಶತ್ರುಗಳು ಇರಬಹುದು ಅಥವಾ ಹಿತಶತ್ರುಗಳು ಇರಬಹುದು, ಇವರನ್ನು ಮಟ್ಟ ಹಾಕಲು ಇದು. -ಈ ಮಂತ್ರವನ್ನು ಒಂದು ನಿಂಬೆಹಣ್ಣನ್ನು ಎಡಗೈಯಲ್ಲಿ ಮುಷ್ಟಿ ಮಾಡಿ ಹಿಡಿದುಕೊಂಡು 21 ಬಾರಿ ಜಪಿಸಿ ನಂತರ ಮೂರು ದಾರಿ ಸೇರುವ ಸ್ಥಳದಲ್ಲಿ ಎಡಗಾಲಿನಿಂದ ತುಳಿದು ಹಿಂತಿರುಗಿ ನೋಡದೆ ನಡೆಯಿರಿ ಖಂಡಿತ ಇವರ ಉಪಟಳ ನಿಗ್ರಹವಾಗುತ್ತದೆ. ||ಓಂ ಅಸ್ಯ ಕ್ಲೀಂ ರೀಂ ಹ್ರೀಂ ಹ್ರೋಂ ಸರ್ವ ಶತ್ರು, ಗ್ರಹ ಪರಾಭವಾ ಪಟ್ ಸ್ವಾಹಾ|| ಚೌಡೇಶ್ವರಿ ಶಕ್ತಿ ಪೀಠ ಕ್ಷೇತ್ರ ಈ ಮಂತ್ರ ಇಂದ ನಿಮಗೆ ಅನುಕೂಲ ಆದಾಗ ಯಾರಾದ್ರೂ ಕನಿಷ್ಠ 4 ಜನ ಬಡವರಿಗೆ/ನಿರ್ಗತಿಕರಿಗೆ, ಕನಿಷ್ಠ ಒಂದು ಹೊತ್ತು ಊಟ…

Read More

ಶಿವಮೊಗ್ಗ : ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ 13 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡಿನ ಭಾಗದಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಹಾಗೂ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಉಂಟಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಎತ್ತರಕ್ಕೆ ಬೆಳೆಯಬೇಕಾದ ಮರಗಳು ಈ ರೋಗದಿಂದ ನೆಲಕಚ್ಚುತ್ತಿವೆ. ಹಾಗಾಗಿ ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಚರ್ಚಿಸಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಔಷಧಿಯನ್ನು ಕಂಡುಹಿಡಿಯಬೇಕು. ಇದರಿಂದ ರೈತರ ಬದುಕಿಗೆ ಅನುಕೂಲಕವಾಗುತ್ತದೆ ಎಂದು ಹೇಳಿದರು. ರೈತರು ಪ್ರಗತಿಯಾದಾಗ ಮಾತ್ರ ಈ ದೇಶ ಪ್ರಗತಿಯಾಗುವುದು. ಆದ್ದರಿಂದ ರೈತರ ಉತ್ಪಾದನೆಗೆ ಹೆಚ್ಚಿನ…

Read More

ಮಡಿಕೇರಿ: ಜಿಲ್ಲೆಯ ಆಂಬುಲೆನ್ಸ್ ಚಾಲಕನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸನ್ಮಾನಿಸಿ ಗೌರವಿಸಿದ್ದಾರೆ. ಅದು ಯಾಕೆ ಅಂತ ಮುಂದೆ ಓದಿ. ಇಂದು ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಂಬ್ಯುಲೆನ್ಸ ಚಾಲಕ ಕಿಶೋರ್ ಪೂಜಾರಿ ಅವರು ಇತ್ತಿಚೆಗೆ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭೀಣಿ ಮಹಿಳೆಯೊರ್ವರನ್ನ ಕರೆತರುವಾಗ ಅಂಬ್ಯುಲೆನ್ಸ್ ನ ಚಕ್ರದಲ್ಲಿ ಸಮಸ್ಯೆ ಎದುರಾದರೂ, ಎಚ್ಚರಿಕೆಯಿಂದ ವಾಹನ ಚಲಾಯಿಸಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿದ್ದಾರೆ ಎಂದು ತಿಳಿಸಿದ್ದಾರೆ. ತಾಯಿ ಮಗುವಿನ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದ ಚಾಲಕ ಬಿ.ಎಸ್ ವೆಂಕಟೇಶ್ (ಕಿಶೋರ್ ಪೂಜಾರಿ) ಅವರಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಇಂದು ನಾನು ಕುಶಾಲ ನಗರ ಪ್ರವಾಸದಲ್ಲಿದ್ದ ವೇಳೆ ಆರೋಗ್ಯ ಇಲಾಖೆಯಿಂದ ಚಾಲಕ ಕಿಶೋರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದು ಹೇಳಿದ್ದಾರೆ. https://twitter.com/dineshgrao/status/1970486384546009441?s=08 https://kannadanewsnow.com/kannada/good-news-for-state-government-employees-arogya-sanjeevini-yojana-to-provide-cashless-treatment-implemented-from-october-1/ https://kannadanewsnow.com/kannada/accenture-set-to-hire-12000-employees-for-new-campus-in-andhra-pradesh/

Read More

ಶಿವಮೊಗ್ಗ : ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿಯಲ್ಲಿ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ವನ್ನಿಯಕುಲ ಕ್ಷತ್ರೀಯ ಎಂದು ನಮೂದಿಸಲು ರಾಜ್ಯ ವನ್ನಿಯಕುಲ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಆರ್. ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಗರದ ರಾಜ್ಯ ವನ್ನಿಯಕುಲ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್.ಆರ್ ಅವರು, ರಾಜ್ಯದ ಹಿಂದುಳಿದ ವರ್ಗಗಳ ಆಯೋಗದವರಿಂದ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಜಾತಿಗಣತಿ ಸಂಬಂಧ ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ, ಜಾತಿ ಕಾಲಂನಲ್ಲಿ ವನ್ನಿಯಕುಲ ಕ್ಷತ್ರೀಯ, ಉಪ ಜಾತಿ ಕಾಲಂನಲ್ಲಿ ವನ್ನಿಯರು, ವನ್ನಿಯ ಗೌಂಡರ್ ಇನ್ನಿತರೆ ನಮೂದಿಸಲು ತಿಳಿಸಿದ್ದಾರೆ. ದಿನಾಂಕ 13-06-1929ರಂದು ಗೌರ್ನಮೆಂಟ್ ಆಫ್ ಮಡ್ರಾಸ್ ಸರ್ಕಾರದ ಸಂದರ್ಭದಲ್ಲಿಯೆ ವನ್ನಿಯಕುಲ ಕ್ಷತ್ರಿಯ ಪ್ರಮುಖ ಜಾತಿ ಎಂದು ನಮೂದಾಗಿದೆ. ವನ್ನಿಯಕುಲ ಕ್ಷತ್ರೀಯರನ್ನು ಹಲವು ಉಪನಾಮಗಳಿಂದ ಕರೆಯುತ್ತಾರೆ. ನಮ್ಮ ಕುಲಬಾಂಧವರು ಜಾತಿಗಣತಿಗೆ ಬಂದಾಗ ತನ್ನ ಉಪಜಾತಿ ಹೆಸರನ್ನು ಸರಿಯಾದ…

Read More

ಶಿವಮೊಗ್ಗ : ಜಾತಿ ಜನಗಣತಿ ಸಂದರ್ಭದಲ್ಲಿ ಬಿಲ್ಲವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಬಿಲ್ಲವ ಎಂದು ನಮೂದಿಸಿ, ಉಪಜಾತಿ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಬಿಲ್ಲವ ಸಂಘದ ಅಧ್ಯಕ್ಷ ಕರ್ಕಿಕೊಪ್ಪ ಚಂದ್ರು ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಎನ್ನುವುದು ನಮ್ಮ ಅಧಿಕೃತ ಜಾತಿಯಾಗಿದ್ದು ಉಪಜಾತಿ ನಮೂದಿಸಿ ಅನಗತ್ಯ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸಮುದಾಯದವರಿಗೆ ಮನವಿ ಮಾಡಿದರು. ರಾಜ್ಯದ ವಿವಿಧ ಬಿಲ್ಲವ ಸಂಘಟನೆಗಳ ತೀರ್ಮಾನಂದAತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮಲ್ಲಿ ಬಳಕೆ ಇರುವ ಉಪನಾಮಗಳ ಬಳಕೆಯಿಂದ ಅನಗತ್ಯ ಗೊಂದಲ ಉಂಟಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಮುಂದಿನ ದಿನಗಳಲ್ಲಿ ತೊಡಕುಂಟಾಗಬಹುದು. ಈ ಹಿನ್ನೆಲೆಯಲ್ಲಿ ಕಾಲಂನಲ್ಲಿ 11ರಲ್ಲಿ ಏನೂ ಬರೆಯುವುದು ಬೇಡ. ಸರ್ಕಾರವು ಬಿಲ್ಲವ ಜಾತಿಯೊಂದಿಗೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿ ಇನ್ನೊಂದು ಉಪಜಾತಿ ಮಾಡುವ ಕುರಿತು ತೆಗೆದುಕೊಂಡ ತೀರ್ಮಾನಕ್ಕೆ ಸಮುದಾಯ ಬಾಂಧವರು ಅಕ್ಷೇಪಣೆ ಸಲ್ಲಿಸಿದ್ದಾರೆ. ನಮ್ಮಲ್ಲಿ…

Read More

ಶಿವಮೊಗ್ಗ: ಜಾತಿ ಜನಗಣತಿಗೆ ಬರುವವರ ಬಳಿ ಸಮುದಾಯ ಬಾಂಧವರು ಜಾತಿ ಕಾಲಂನಲ್ಲಿ ದೀವರು, ಉಪ ಜಾತಿ ಕಾಲಂನಲ್ಲೂ ಸಹ ದೀವರು ಎಂದು ನಮೂದಿಸುವಂತೆ ನಾವು ದೀವರು ಅಭಿಯಾನದ ಸಂಚಾಲಕ ವೆಂಕಟೇಶ್ ಮೆಳವರಿಗೆ ಮನವಿ ಮಾಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ದೀವರ ಜನಸಂಖ್ಯೆ 6ಲಕ್ಷಕ್ಕೂ ಅಧಿಕವಿದ್ದು ಗಣತಿದಾರರು ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸಿ ಎಂದು ತಿಳಿಸಿದರು. ಈಡಿಗ ಎನ್ನುವುದು ಒಂದು ಒಕ್ಕೂಟವಾಗಿದ್ದು, ಇದರಲ್ಲಿ 26 ಪಂಗಡಗಳು ಸೇರಿವೆ. ಕೆಲವು ಕಡೆ ಜಾತಿ ವಿಭಾಗದಲ್ಲಿ ಈಡಿಗ ಎಂದು ಬರೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಸರ್ಕಾರದ ಅನೇಕ ಸೌಲಭ್ಯಗಳಿಂದ ನಾವು ವಂಚಿತರಾಗುವ ಸಾಧ್ಯತೆ ಇದೆ. ಹಿಂದಿನ ಕಾಂತರಾಜ ವರದಿ ಸಂದರ್ಭದಲ್ಲಿ ಸಹ ದೀವರ ಜನಸಂಖ್ಯೆಯನ್ನು ಕೇವಲ 65ಸಾವಿರ ಎಂದು ತೋರಿಸಲಾಗಿದೆ. ಅತ್ಯಂತ ಪ್ರಾಚೀನ ಸಂಸ್ಕೃತಿ, ಆಚಾರ, ವಿಚಾರ,…

Read More

ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರ ಕೃಷಿಯಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೃಷಿ ವಿವಿಗಳು ಕೆಲಸ ಮಾಡಲಿ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವಪ್ಪ ನಾಯಕ ಹೆಸರೇಳಿದರೇ ಮಲೆನಾಡಿನಲ್ಲಿ ಹೊಸ ಸಂಚಲನವೇ ಸೃಷ್ಠಿಯಾಗುತ್ತಿದೆ. ಇಂತಹ ಕೆಳದಿ ಶಿವಪ್ಪ ನಾಯಕರ ಹೆಸರಿನಲ್ಲಿ ವಿವಿಯನ್ನು ಸ್ಥಾಪಿಸಿರುವುದು ಸಂತಸದ ಸಂಗತಿಯಾಗಿದೆ. ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಶ್ರಮದಿಂದ ಇರುವಕ್ಕಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಸ್ಥಾಪನೆಯಾದಂತೆ ಆಯಿತು ಎಂದರು. ಭಾರತದ ತಲಾದಾಯದಲ್ಲಿ ಕೃಷಿಯ ಕೊಡುಗೆ ಪಾಲು ಹೆಚ್ಚಿನದ್ದು ಆಗಿದೆ. ಆದರೇ ರೈತರು ಬೆಳೆದಂತ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅವರ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಪ್ರಗತಿ ಪರ ಕೃಷಿ ನಡೆಸುವಂತೆ ಆಗಬೇಕು.…

Read More