Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ದಾಖಲಿಸಿದ್ದಂತ ಮಾನನಷ್ಟ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮಾರ್ಚ್.12ರವರೆಗೆ ಮಾನನಷ್ಟ ಪ್ರಕರಣದಕ್ಕೆ ತಡೆಯಾಜ್ಞೆ ನೀಡಿದೆ. ಇಂದು ಹೈಕೋರ್ಟ್ ನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ದಾಖಲಿಸಿದ್ದಂತ ಮಾನನಷ್ಟ ಪ್ರಕರಣದ ಅರ್ಜಿಯ ವಿಚಾರಣೆ ನಡೆಯಿತು. ರಾಜೀ ಸಂಧಾನಕ್ಕೆ ಪ್ರಯತ್ನಿಸುವಂತೆ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರು ಅಭಿಪ್ರಾಯ ಪಟ್ಟರು. ಅಲ್ಲಿಯವರೆಗೆ ಮಾರ್ಚ್.12ರವರೆಗೆ ಮಾನನಷ್ಟ ಪ್ರಕಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಕೋರ್ಟ್ ಆದೇಶಿಸಿದೆ. ಅಂದಹಾಗೆ ಬೆಂಗಳೂರಿನ 7ನೇ ಎಸಿಎಂಎಂ ಕೋರ್ಟ್ ಗೆ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ನೋಟಿಸ್ ನೀಡಿತ್ತು. ಫೆಬ್ರವರಿ 19, 2023ರಂದು ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಂತ್ರ ಅದನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇನಕಾರಿ ಆರೋಪ ಮಾಡಿದ್ದಾರೆ. ಈ ಹೇಳಿಕೆಯನ್ನು 1.8 ಲಕ್ಷ ಜನರು…
ಬೆಳಗಾವಿ: ಜಿಲ್ಲೆಯಲ್ಲಿ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದೆ. ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಕೇಳಿದಕ್ಕೆ ಕನ್ನಡ ಮಾತನಾಡು ಅಂತ ತಿಳಿಸಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದೆ. ಬೆಳಗಾವಿಯ ಸುಳೇಬಾವಿ ಬಾಳೆಕುಂದ್ರಿ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುತ್ತಿದ್ದಾಗ ಯುವತಿಯೊಬ್ಬಳು ಟಿಕೆಟ್ ನೀಡುವಂತೆ ಮರಾಠಿಯಲ್ಲಿ ಕೇಳಿದ್ದಾಳೆ. ಕನ್ನಡ ಬರೋದಿಲ್ವ. ಕನ್ನಡದಲ್ಲೇ ಮಾತನಾಡಿ ಅಂತ ಕಂಡಕ್ಟರ್ ಮಹದೇವ್ ಹೇಳಿದ್ದಾರೆ. ಕಂಡಕ್ಟರ್ ಈ ಮಾತಿನಿಂದ ಸಿಟ್ಟಾದಂತ ಅಲ್ಲೇ ಇದ್ದಂತ ಮರಾಠಿ ಯುವಕರು ಬಸ್ ನಿಲ್ಲಿಸಿ ಮಹದೇವ್ ಮೇಲೆ ಹಲ್ಲೆ ಮಾಡಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿರುವಂತ ಕೆ ಎಸ್ ಆರ್ ಟಿ ಸಿ ಕಂಡಕ್ಟರ್ ಮಹದೇವ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/three-bodies-found-in-tunga-river-in-shivamogga/ https://kannadanewsnow.com/kannada/big-news-nps-abolished-cm-dycm-clear-message-for-implementation-of-ops-cs-shadakshari-2/
ಬೆಂಗಳೂರು: ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ತೆರಳಿದ್ದ ವೇಳೆ ಉತ್ತರ ಪ್ರದೇಶದ ರುಪಾಪೂರ ಬಳಿ ಬೀದರ್ ಜಿಲ್ಲೆಯ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ಪರೀಹಾರ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು. ಲಾಡಗೇರಿಯ 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮತ್ತು ಲಾರಿಯೊಂದರ ನಡುವೆ ಇಂದು ಬೆಳಗಿನ ಜಾವ ಡಿಕ್ಕಿಯಾಗಿ 6 ಜನರು ಮೃತಪಟ್ಟು, ಇತರ 8 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಆಘಾತವಾಯಿತು. ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಮೃತರ ಪಾರ್ಥವ ಶರೀರವನ್ನು ಬೀದರ್ ಗೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಅಲ್ಲಿ ಕರ್ನಾಟಕದವರೇ ಆದ ಚನ್ನಪ್ಪ ಎಂಬ ಅಧಿಕಾರಿಯಿದ್ದು ಅವರೊಂದಿಗೆ ಮಾತನಾಡಿ, ಮೃತರ ಮತ್ತು ಗಾಯಾಳುಗಳ ಕುಟುಂಬಕ್ಕೆ ಸೂಕ್ತ ನೆರವು ದೊರಕಿಸಲು ತಿಳಿಸಿರುವುದಾಗಿ ಈಶ್ವರ ಖಂಡ್ರೆ ಹೇಳಿದ್ದಾರೆ. ಈ…
ಶಿವಮೊಗ್ಗ: ತುಂಗಾ ನದಿಯಲ್ಲಿ ಮೂವರು ಅಪರಿಚಿತರ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಮೃತದೇಹದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗದ ತುಂಗಾ ನದಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಂಡಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದಂತ ಪೊಲೀಸರು ಪರಿಶೀಲಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು, ಅಪರಿಚಿತ ಮೃತದೇಹಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. https://kannadanewsnow.com/kannada/big-news-nps-abolished-cm-dycm-clear-message-for-implementation-of-ops-cs-shadakshari-2/ https://kannadanewsnow.com/kannada/good-news-for-employees-working-in-muzrai-department-temples-from-the-state-government/
ಬೆಂಗಳೂರು: ರಾಜ್ಯ ಸರ್ಕಾರದಿಂದ ಕಾರವಾರದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದಏಶಕ ಜಯಂತ್ ಹೆಚ್.ವಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಉಲ್ಲೇಖಿತ (1)ರ ಪತ್ರ ಹಾಗೂ ಅಡಕಗಳ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಸದರಿ ಪತ್ರದಲ್ಲಿ ಉಲ್ಲೇಖ (2) ರಂತ ಸಹಾಯಕ ಆಯುಕ್ತರು, ಕಾರವಾರ ರವರು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಲಾಗಿದೆ. ಮುಂದುವರೆದು, ಉಲ್ಲೇಖ (3)ರಂತೆ ಜಿಲ್ಲಾಧಿಕಾರಿ ಕಚೇರಿ ಕೊಠಡಿ ಸಂಖ್ಯೆ:24ರ ಸ್ಥಳವನ್ನು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ ಕಚೇರಿಗೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಹಸ್ತಾಂತರಿಸಲಾಗಿದೆ. ಅದರಂತೆ ಸಹಾಯಕ ಆಯುಕ್ತರು, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಕೊಠಡಿ ಸಂಖ್ಯೆ:24ಕ್ಕೆ ಸ್ಥಳಾಂತರಿಸಿ ಉಲ್ಲೇಖ (4)ರಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಸದರಿಯವರ ವರದಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಹಾಸಿಗೆ ಹಾಗೂ ಮಂಚವನ್ನೊಳಗೊಂಡಂತೆ ವಾಸದ…
ಗದಗ: ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು, ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಗ್ಯಾರಂಟಿ’ ಯೋಜನೆಗಳು ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಮಾಡಿದ ಯೋಜನೆಗಳಾಗಿವೆ. ಜನರಿಗೆ, ತಾಯಂದಿರಿಗೆ ಕಣ್ಣಲ್ಲಿ ಮಣ್ಣುಹಾಕುವ ಯೋಜನೆ. ಗೃಹ ಲಕ್ಷ್ಮೀ ಹಣ ಸರಿಯಾಗಿ ಯಾವ ತಿಂಗಳೂ ಬಂದಿಲ್ಲ. ಗೃಹ ಲಕ್ಷ್ಮೀ ಯೋಜನೆ ಹಣ ಸಂಬಳವೆ ಅಂತಾ ಕೇಳುತ್ತಾರೆ. ಅದು ಗೌರವ ಧನ. ಪ್ರತಿ ತಿಂಗಳು ಕೊಟ್ಟಿಲ್ಲ ಅಂದರೆ ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ರಾಜ್ಯದಲ್ಲಿ ಹಣ ಕಾಸಿನ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಮುಖ್ಯಮಂತ್ರಿಗಳು ಭಂಡತನದಿಂದ ಒಪ್ಪಿಕೊಳ್ಳುತ್ತಿಲ್ಲ. ಕೇವಲ ಗ್ಯಾರಂಟಿಗೆ ಅಷ್ಟೆ ಅಲ್ಲ, ಯಾವುದೇ ಅಭಿವೃದ್ಧಿಗೂ ಹಣ ಇಲ್ಲ. ಸಾಲದ ರೂಪದ ಯೋಜನೆಗಳನ್ನು ಬಿಟ್ಟರೆ ಯಾವುದು ಇಲ್ಲ. ಕುಡಿಯುವ ನೀರಿನ ಯೋಜನೆಗೆ ಹಣ ಕೊಡದೇ ಕುಂಠಿತವಾಗಿದೆ. ರಾಜ್ಯ ಸರ್ಕಾರ ಜನರನ್ನ ಸಂಕಷ್ಟಕ್ಕೆ ದೂಡುತ್ತಿದೆ. ಜನ…
ಮಂಡ್ಯ: ಶ್ರಮಕ್ಕೆ ತಕ್ಕ ಫಲ, ದುಡಿಮೆಗೆ ತಕ್ಕ ಸಂಬಳ ಇಲ್ಲದ ಸಮಾಜದಲ್ಲಿ ಗ್ಯಾರಂಟಿಗಳು ದುಡಿಯುವ ವರ್ಗಗಳ ಪಾಲಿನ ಪ್ರಾಣವಾಯು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಪತ್ರಿಕಾ ಭವನದಲ್ಲಿ “ಬಡವರ ಭಾಗ್ಯವಿಧಾತ ಸಿದ್ದರಾಮಯ್ಯ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಾರ್ಪೋರೇಟ್ ಗಳಿಗೆ ಫ್ರೀಬಿ ಕೊಟ್ಟರೆ ಡೆವಲಪ್ಮೆಂಟು ಅಂತಲೂ, ಶ್ರಮಿಕರಿಗೆ ಕೊಟ್ಟರೆ ಆರ್ಥಿಕತೆಗೆ ನಷ್ಟವೆಂದು ಹೇಳುವವರಿಗೆ ಗ್ರಹಿಕೆ ಮತ್ತು ದೃಷ್ಟಿದೋಷ ಎಂದು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಜಾರಿ ಮಾಡಿದ ಗ್ಯಾರಂಟಿಗಳು ಕನ್ನಡ ನೆಲದ ಬಡವರು ಮತ್ತು ಮಧ್ಯಮ ವರ್ಗಗಳ ಪಾಲಿನ ಪ್ರಾಣವಾಯು ಆಗಿವೆ. ಹಲವಾರು ಆರ್ಥಿಕ ಸಮೀಕ್ಷೆಗಳು ಈ ಮಾತನ್ನು ಖಚಿತ ಪಡಿಸಿವೆ ಎಂದರು. ಸಾಮಾಜಿಕ ನ್ಯಾಯದ ಬದ್ಧತೆ, ಅಂಬೇಡ್ಕರ್ ಆಶಯ, ಬಸವಣ್ಣನವರ ನ ಮಾರ್ಗ ಮತ್ತು ರಾಜಕೀಯ ಹಿತಾಸಕ್ತಿಗಳು ಸಿದ್ದರಾಮಯ್ಯ ಅವರ ಭಾಗ್ಯಗಳ ಹಿಂದೆ ಕೆಲಸ ಮಾಡಿವೆ ಎಂದು ಕೆವಿಪಿ ವಿಶ್ಲೇಷಣೆ ಮಾಡಿದರು. ಗ್ಯಾರಂಟಿಗಳ ಮಹತ್ವ ಏನು ಎಂದು ಅರ್ಥವಾಗಬೇಕಾದರೆ, ಇವು ಜಾರಿಯಾದ…
ಬೆಂಗಳೂರು: ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಬೆಳಗಾವಿಯ ಗೃಹ ಕಚೇರಿಯಲ್ಲಿ ಮಾತನಾಡಿದ ಸಚಿವರು, ತಾಲೂಕು ಪಂಚಾಯಿತಿ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ರಸ್ತೆ ಅಪಘಾತದಿಂದಾಗಿ ವಿಶ್ರಾಂತಿಯಲ್ಲಿದ್ದುದರಿಂದಾಗಿ ಹಣ ಸಂದಾಯವಾಗಲು ಸ್ವಲ್ಪ ವಿಳಂಬ ಆಯಿತು. ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶೀಘ್ರದಲ್ಲೇ ಹಣ ಸಂದಾಯವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಇದುವರೆಗೆ ಬೆಂಗಳೂರಿನ ಕೇಂದ್ರ ಕಚೇರಿ ಮೂಲಕ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಇದನ್ನು ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಮೂಲಕ ಹಣ ಬಿಡುಗಡೆ ಮಾಡಿ, ನಂತರ ನಮ್ಮ ಇಲಾಖೆಯ ಶಿಶು ಯೋಜನಾಭಿವೃದ್ಧಿ ಅಧಿಕಾರಿಗಳ (ಸಿಡಿಪಿಓ) ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇನ್ನೊಂದು ವಾರದಲ್ಲಿ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ವಿರೋಧ…
ಕೊನೆಯಿಲ್ಲದ ಆರ್ಥಿಕ ಸಂಕಷ್ಟದಲ್ಲಿರುವವರು ಮಾಸದಲ್ಲಿ ಈ ಒಂದು ದಿನ ಕುಬೇರನನ್ನು ಸ್ಮರಿಸಿ ಪೂಜೆಯನ್ನು ಹೀಗೆ ಮಾಡಿ. ಎಲ್ಲಾ ಹಣಕಾಸಿನ ತೊಂದರೆಗಳು ಮತ್ತು ತೊಂದರೆಗಳನ್ನು ತೊಡೆದುಹಾಕುವ ಮೂಲಕ ನೀವು ಕುಬೇರ ಯೋಗದಿಂದ ಬದುಕಬಹುದು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ…
ಶಿವಮೊಗ್ಗ: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಭೂ ಮಾಫಿಯಾ ದಂಧೆ. ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿ ಅನಾಮಧೇಯ ವ್ಯಕ್ತಿಯ ಹೆಸರಿಗೆ ಮಾಡಲು ಪ್ರಯತ್ನ. ಈ ಘಟನೆ ಸಾಗರದಲ್ಲಿ ಬೆಳಕಿಗೆ ಬಂದಿದೆ. ಅದೂ ಸರ್ಕಾರಿ ಅಧಿಕಾರಿಯಿಂದಲೇ ಭೂಗಳ್ಳರ ಜೊತೆಗೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ತಹಶೀಲ್ದಾರರಿಗೆ ಬರೆದಿರುವಂತ ಪತ್ರದಿಂದಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟದ ಸಮೀಪದ ಸರ್ವೆ ನಂ.12ರ ಸರ್ಕಾರಿ ಭೂಮಿಯನ್ನೇ ಭೂಗಳ್ಳರಿಗೆ ನಕಲಿ ದಾಖಲೆ ಸೃಷ್ಠಿಸಿ ಲಪಟಾಯಿಸೋದಕ್ಕೆ ಯತ್ನಿಸಿದಂತ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಗರದ ಹಿರಿಯ ಪತ್ರಕರ್ತ ಮಹೇಶ್ ಹೆಗಡೆ ಅವರು ಜನ ಹೋರಾಟ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಯನ್ನು ಮಾಡಿದ್ದರಿಂದ ಇಡೀ ಪ್ರಕರಣ ಬಟಾ ಬಯಲಾಗಿದೆ. ಸರ್ಕಾರಿ ಭೂಮಿ ಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಯ ಬಹುದೊಂಡ ಹಗರಣ ಬೆಳಕಿಗೆ ಬಂದಿದೆ. ಏನಿದು ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸೋ ಕೇಸ್? ಸಾಗರ ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಭೂಗಳ್ಳರು ಸರ್ಕಾರಿ ಜಾಗ…