Author: kannadanewsnow09

ನವದೆಹಲಿ: ಜೀವ ವಿಮೆ ಮತ್ತು ಎರಡು ಲಕ್ಷ ರೂ.ವರೆಗಿನ ಅಪಘಾತ ವಿಮೆಯ ಪ್ರಯೋಜನಗಳನ್ನು ಪ್ರತಿ ಅಂಗನವಾಡಿ ಕಾರ್ಯಕರ್ತೆಗೆ ವಿಸ್ತರಿಸಲಾಗಿದೆ. ಪ್ರತಿ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಲೋಕಸಭೆಯಲ್ಲಿ ಇಂದು ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಅಡಿಯಲ್ಲಿ ಈ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಯುಪಿಎ ಆಡಳಿತಾವಧಿಯಲ್ಲಿ 750 ರೂ.ಗಳಿಂದ ಕಾರ್ಮಿಕರಿಗೆ 4,500 ರೂ.ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಪ್ರತಿ ಸಮುದಾಯ ಆಧಾರಿತ ಕಾರ್ಯಕ್ರಮದ ಪ್ರಕಾರ, ಕಾರ್ಮಿಕರಿಗೆ 250 ರೂಪಾಯಿಗಳನ್ನು ನೀಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯು ಫಲಾನುಭವಿಯ ಮನೆಗೆ ಭೇಟಿ ನೀಡಿದರೆ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಮಗುವನ್ನು ಭೇಟಿಯಾದರೇ 500 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಸ್ಮೃತಿ ಇರಾನಿ ಹೇಳಿದರು. ಮತ್ತೊಂದೆಡೆ…

Read More

ಬೆಂಗಳೂರು: ಕೆಎಎಸ್ ಹುದ್ದೆ ( KAS Jobs ) ಆಕಾಂಕ್ಷಿಗಳಿಗೆ ಸಿಹಿಸುದ್ದಿ ಎನ್ನುವಂತೆ ರಾಜ್ಯ ಸರ್ಕಾರದಿಂದ ( Karnataka Government ) 384 ಹುದ್ದೆಗಳ ನೇಮಕಾತಿಗೆ ( KAS Recruitment ) ಚಾಲನೆ ನೀಡಲಾಗಿದೆ. ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್-ಬಿ ವೃಂದದ 384 ಕೆಎಎಸ್ ನೇಮಕಾತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅಲ್ಲದೇ ಇಲಾಖಾ ವಾರು ಹುದ್ದೆಗಳ ಸಂಖ್ಯೆಯನ್ನು ಶುಕ್ರವಾರದಂದು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಮಾಹಿತಿಯಂತೆ ಗ್ರೂಪ್-ಎಯಲ್ಲಿ 159 ಹುದ್ದೆಗಳು ಹಾಗೂ ಗ್ರೂಪ್-ಬಿಯಲ್ಲಿ 225 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಸಂಬಂಧ ಕೆಪಿಎಸ್ಸಿ ಕಾರ್ಯದರ್ಶಿಗೆ ಪತ್ರವನ್ನು ಬರೆದಿರುವ ಡಿಎಪಿಆರ್ ಕಾರ್ಯದರ್ಶಿಗಳು 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಿಯಮಗಳು-1993ರ ಅನುಸಾರ ಜಾರಿಯಲ್ಲಿರುವ ನಿಯಮಗಳಂತೆ ಷರತ್ತುಗಳನ್ನು ಅಳವಡಿಸಿಕೊಂಡು ನೇಕಾತಿ ಪ್ರಕ್ರಿಯೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಕಂದಾಯ ಇಲಾಖೆಯಲ್ಲಿ 41 ತಹಶೀಲ್ದಾರ್ ಹುದ್ದೆಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳ 50…

Read More

ನವದೆಹಲಿ: ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಗೆ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಪಾರ್ಕಿಂಗ್ ಮತ್ತು ವಿಶ್ರಾಂತಿ ಸೌಲಭ್ಯಗಳೊಂದಿಗೆ ಆಧುನಿಕ ಕಟ್ಟಡಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಹೊಸ ಯೋಜನೆಯನ್ನು ರೂಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಮೊದಲ ಹಂತದಲ್ಲಿ ಇಂತಹ 1,000 ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2024 ಅನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು. ಹೊಸ ಸೌಲಭ್ಯಗಳು ಟ್ರಕ್ ಮತ್ತು ಟ್ಯಾಕ್ಸಿ ಚಾಲಕರಿಗೆ ಜೀವನವನ್ನು ಸುಲಭಗೊಳಿಸಲು ಮತ್ತು ಪ್ರಯಾಣಿಸಲು ಸುಲಭವಾಗುವಂತೆ ಉತ್ತೇಜನ ನೀಡುತ್ತದೆ. ಆ ಮೂಲಕ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಅಪಘಾತಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. “ಟ್ರಕ್ ಚಾಲಕರು ಮತ್ತು ಅವರ ಕುಟುಂಬಗಳ ಕಾಳಜಿಯನ್ನು ಸರ್ಕಾರ ಅರ್ಥಮಾಡಿಕೊಂಡಿದೆ” ಎಂದು ಟ್ರಕ್ ಚಾಲಕರು ಎದುರಿಸುತ್ತಿರುವ ಕಷ್ಟಗಳನ್ನು ಎತ್ತಿ ತೋರಿಸಿದರು. ವ್ಯಾಪಾರವನ್ನು ವೇಗಗೊಳಿಸುವಲ್ಲಿ ಮತ್ತು ರಾಜ್ಯ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ರದ್ದುಗೊಳಿಸುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)…

Read More

ನವದೆಹಲಿ : ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿದ್ದು, ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ ಅನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು. ನಮ್ಮ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು ಖಚಿತ. ಕಳೆದ 10 ವರ್ಷಗಳಲ್ಲಿ, ಸರ್ಕಾರದ ಪ್ರಯತ್ನಗಳಿಂದಾಗಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಇಂದಿನ ಭಾರತವು 2047 ರ ವೇಳೆಗೆ ದೇಶವನ್ನು ‘ಅಭಿವೃದ್ಧಿ’ ಮಾಡುವ ಗುರಿಯೊಂದಿಗೆ ಮುಂದುವರಿಯುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ಚಲನಶೀಲತೆ ವಲಯವು ದೊಡ್ಡ ಪಾತ್ರ ವಹಿಸುತ್ತದೆ” ಎಂದು ಪಿಎಂ ಮೋದಿ ಹೇಳಿದರು. ಇದು ಸರಿಯಾದ ಸಮಯ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಈ ಮಂತ್ರವು ಚಲನಶೀಲತೆ ವಲಯಕ್ಕೆ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಭಾರತವು ಚಂದ್ರನ ಮೇಲಿದೆ ಮತ್ತು ವೇಗವಾಗಿ ಚಲಿಸುತ್ತಿದೆ. ಚಲನಶೀಲತೆ ಕ್ಷೇತ್ರಕ್ಕೆ ಇದು ಸುವರ್ಣ…

Read More

ಹೊಸಪೇಟೆ: ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರದಿಂದ ನಮ್ಮ ಪಾಲಿನ ನಯಾಪೈಸೆ ಪರಿಹಾರದ ಹಣ ಇದುವರೆಗೂ ಬಂದಿಲ್ಲ. ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಪರಿಹಾರದ ಹಣವನ್ನು ಜಮಾ ಮಾಡಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಐತಿಹಾಸಿಕ ಹಂಪಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ನಮ್ಮ ಗ್ಯಾರಂಟಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ಹಣ ಉಳಿತಾಯ ಆಗಿ ಬರಗಾಲದ ಸಂಕಷ್ಟದಿಂದ ಬಡ ಮತ್ತು ಮಧ್ಯಮ ವರ್ಗದವರನ್ನು ಪಾರು ಮಾಡಿದೆ ಎಂದರು. ನಮ್ಮ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವ ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ಪುನಃ ರಾಜ್ಯದಲ್ಲಿ ಮರುಕಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ ಎಂದು ತಿಳಿಸಿದರು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇತಿಹಾಸಕಾರ ಅಬ್ದುಲ್ ರಜಾಕ್ ಚಿತ್ರಿಸಿದ್ದಾರೆ, ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು. ಎಂದರು. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ…

Read More

ನವದೆಹಲಿ : ಪ್ರಸ್ತುತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೇರುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಜನರ ಜೇಬುಗಳು ರಂಧ್ರಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಏರಿಕೆಗೆ ಅಂತ್ಯ ಹಾಡಲು ಮೋದಿ ಸರ್ಕಾರ ಸಜ್ಜಾಗಿದೆ. ಬಡವರು ಮತ್ತು ಸಾಮಾನ್ಯ ಜನರಿಗೆ ಅಗ್ಗದ ದರದಲ್ಲಿ ಅಕ್ಕಿಯನ್ನ ಒದಗಿಸಲು ಭಾರತವು ಬ್ರಾಂಡ್ ಹೆಸರಿನಲ್ಲಿ ಅಕ್ಕಿಯನ್ನ ತರುತ್ತಿದೆ. ಗುಣಮಟ್ಟದ ಅಕ್ಕಿಯನ್ನು 29 ರೂ.ಗೆ ನೀಡಲಾಗುವುದು. ಮುಂದಿನ ವಾರದಿಂದ ಭಾರತ್ ಅಕ್ಕಿ ಮಾರಾಟವನ್ನ ಸರ್ಕಾರ ಪ್ರಾರಂಭಿಸಲಿದೆ ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ. ದೇಶದಲ್ಲಿ ಅಕ್ಕಿ ಬೆಲೆಯಲ್ಲಿ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ ಭಾರತ್ ಅಕ್ಕಿಯ ಮಾರಾಟವು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪರಿಹಾರವನ್ನ ನೀಡುತ್ತದೆ. ಕೆಲವು ಸಮಯದಿಂದ ಅಕ್ಕಿಯನ್ನ ಪ್ರತಿ ಕೆ.ಜಿ.ಗೆ 29 ರೂ.ಗೆ ಮಾರಾಟ ಮಾಡಲಾಗುತ್ತದೆ ಎಂಬ ವದಂತಿ ಇದೆ. ಆದ್ರೆ, ಅಕ್ಕಿಯನ್ನ ಎಲ್ಲಿ ಮಾರಾಟ ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯ…

Read More

ಹೊಸಪೇಟೆ: ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು, ಈಗ ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿ ಅದಕ್ಕೆ, “ಮೋದಿ ಗ್ಯಾರಂಟಿ” ಎಂದು ಹೆಸರಿಟ್ಟಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ. ಐತಿಹಾಸಿಕ ಹಂಪಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಧೀಮಂತ ನಾಯಕರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು. ಬಸವಾದಿ ಶರಣರ ಆಶಯ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣುತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದರು. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ – ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ,…

Read More

ಬೆಂಗಳೂರು: ರಾಜ್ಯದಲ್ಲಿ ವಿವಾಹ ನೋಂದಣಿ ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ಸಬ್ ರಿಜಿಸ್ಟಾರ್ ಕಚೇರಿಗೆ ಅಲೆಯೋದಕ್ಕೆ ಬ್ರೇಕ್ ಹಾಕಿರೋ ರಾಜ್ಯ ಸರ್ಕಾರ, ಕಾವೇರಿ-2 ಆಪ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. ಫೆಬ್ರವರಿ.1ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿವಾಹ ನೋಂದಣಿ ಮಸೂದೆಗೆ ತಿದ್ದುಪಡಿ ತರೋ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಿಂದೂ ವಿವಾಹಗಳ ನೋಂದಣಿ(ತಿದ್ದುಪಡಿ) ನಿಯಮಗಳು-2024ಅನ್ನು ಸಚಿವ ಸಂಪುಟ ಸಭೆ ಅನುಮೋದಿಸಲಾಗಿದೆ. ಈ ತಿದ್ದುಪಡಿ ನಿಯಮಗಳಂತೆ ವಿವಾಹ ನೋದಂಣಿ ಇನ್ನೂ ಸುಲಭವಾಗಿದ್ದು, ಕಾವೇರಿ-2 ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ವಿವಾಹ ನೋಂದಣಿಗೆ ಗ್ರಾಮ ಪಂಚಾಯ್ತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ವಿವಾಹ ನೋಂದಣಿಗಾಗಿ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯೋದು ಇನ್ಮುಂದೆ ತಪ್ಪಲಿದೆ. ಇನ್ನೂ ಏನಿದ್ದರೂ ಡಿಜಿಟಲ್ ಯುಗದಲ್ಲಿ ವಿವಾಹ ಆಗೋ ಎಲ್ಲರೂ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ವಿವಾಹ ನೋಂದಣಿಯನ್ನು ಮಾಡಬಹುದಾಗಿದೆ.

Read More

ಚಿಕ್ಕಮಗಳೂರು: ನಾನು ಅಣ್ಣಾಮಲೈ ಕೊಪ್ಪಗೆ ಬಂದಾಗಲೇ ಅವರಿಗೆ ಖಾಕಿ ತೊರೆದು ಕಾವಿ ತೊಡ್ತಾರೆ ಅಂತ ಹೇಳಿದ್ದೆ. ಈಗ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ವಿನಯ್ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ನಡೆದಂತ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತಮಿಳುನಾಡಿನಲ್ಲಿ ಒಂದು ದಿನ ಅಣ್ಣಾಮಲೈ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದನ್ನು ನಾನು ನೋಡುತ್ತೇನೆ. ನೀವು ನೋಡುತ್ತೀರಿ. ಇದು ಭವಿಷ್ಯ ಎನ್ನುವುದಕ್ಕಿಂತ ಸಾಮಾನ್ಯ ಜ್ಞಾನ ಎಂದರು. ಕೊಪ್ಪದ ಬೊಮ್ಲಾಪುರಕ್ಕೆ ಈ ಹಿಂದೆ ಅಣ್ಣಾಮಲೈ ಬಂದಾಗ ನಾನು ಸೇಬು ಹಣ್ಣು ನೀಡಿ ನೀವು ಖಾಕಿ ತೊರೆದು ಖಾದಿ ಹಾಕ್ತೀರಿ ಅಂತ ಹೇಳಿದ್ದೆ. ಜ್ಞಾನ ಚಕ್ಷುವಿನಲ್ಲಿ ಯಾರೇ ಆದರೂ ಧ್ಯಾನ ಮಾಡಿದಾಗ ಅಂತವರಿಗೆ ಕಾಲದ ಒಂದಷ್ಟು ಘಟನೆಗಳನ್ನು ತಿಳಿದುಕೊಳ್ಳೋಕೆ ಆಗುತ್ತದೆ. ಅದು ನನಗಷ್ಟೇ ಅಲ್ಲ. ಸಣ್ಣ ಮಗುವಿಗೂ ಸಾಧ್ಯ ಎಂದರು.

Read More

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ತೆರವಿನ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಬಿಬಿಎಂಪಿ ನೀಡಿರುವಂತ ವಲಯವಾರು ವಾಟ್ಸ್ ಆಪ್ ಸಂಖ್ಯೆಗಳಿಗೆ ಜಸ್ಟ್ ಪೋಟೋ ಸಹಿತ ಸಂದೇಶ ಕಳುಹಿಸಿದ್ರೇ ಸಾಕು, ಅಧಿಕಾರಿಗಳು ಅಂತಹ ಮರದ ಕೊಂಬೆಗಳನ್ನು ತೆರವು ಮಾಡಲಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರೋ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯ ರಸ್ತೆ ಬದಿ/ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದ ವತಿಯಿಂದ ಈಗಾಗಲೆ ತೆರವುಗೊಳಿಸಲಾಗುತ್ತಿದೆ ಎಂದಿದೆ. ಮುಂದುವರಿದು, ಸಾರ್ವಜನಿಕರುಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ಈ ಕೆಳಕಂಡ ಅಧಿಕಾರಿಗಳಿಗಳಿಗೆ ದೂರವಾಣಿ ಮುಖೇನ(ವಾಟ್ಸ್ ಅಪ್ ಮುಖಾಂತರ ಜಿ.ಪಿ.ಎಸ್ ಸಹಿತ ಫೋಟೋ ಲಗತ್ತಿಸಿ) ವಿಳಾಸದೊಂದಿಗೆ ಮಾಹಿತಿ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಬಿ.ಜಿ.ಎಲ್ ಸ್ವಾಮಿ ರವರು ಸಾರ್ವಜನಿಕ ಪ್ರಕಟಣೆ ಮೂಲಕ ಕೋರಿದೆ. ಉಪ ವಿಭಾಗ ಹಾಗೂ…

Read More