Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ದೆಹಲಿ ಮದ್ಯದ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜೂನ್.5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮೂಲಕ ಶರಣಾಗತಿಯ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಮೇ 10 ರಂದು ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣೆಯ ಮತದಾನ ಶನಿವಾರ ಮುಕ್ತಾಯಗೊಂಡ ಒಂದು ದಿನದ ನಂತರ ಶರಣಾಗಿದ್ದಾರೆ. ಈಗ ರದ್ದುಪಡಿಸಲಾದ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ಬಗ್ಗೆ ನಡೆಯುತ್ತಿರುವ ಕಾನೂನು ಹೋರಾಟಗಳ ಮಧ್ಯೆ ಎಎಪಿ ಮುಖ್ಯಸ್ಥರಿಗೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಅವಕಾಶ ನೀಡಲು ಜಾಮೀನು ನೀಡಲಾಯಿತು. ಸುಮಾರು ಒಂದು ದಶಕದಿಂದ ದೆಹಲಿಯ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.…
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಗಂಭೀರ ಆರೋಪ ಮಾಡಲಾಗಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಬಿಜೆಪಿಯು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲಿ ತೆಲಂಗಾಣದ ರಾಜಕೀಯ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದರೆ ಅದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅತ್ಯಾಪ್ತರೇ ಇರಬೇಕು ಎಂದಿದೆ. ಕನ್ನಡಿಗರ ತೆರಿಗೆ ದುಡ್ಡನ್ನು ಲೂಟಿ ಮಾಡಿ ತೆಲಂಗಾಣದಲ್ಲಿ ಸುರಿದು ತೆಲಂಗಾಣ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಇದೇ ಕಾಂಗ್ರೆಸ್ ಸರ್ಕಾರ. ಇದೀಗ ಎರಡು ರಾಜ್ಯದಲ್ಲೂ ಅಧಿಕಾರದಲ್ಲಿರುವುದರಿಂದ ಹಗರಣ ನಡೆಸುವುದು ಸುಲಭವೆಂದುಕೊಂಡು #ATMSarkara ಸಿಕ್ಕಿ ಬಿದ್ದಿದೆ ಎಂಬುದಾಗಿ ಗುಡುಗಿದೆ. ಮಾನಗೇಡಿ ಕಾಂಗ್ರೆಸ್ ಇನ್ನೂ ಭ್ರಷ್ಟ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯದೆ ಇರುವುದು ದೊಡ್ಡ ಕುಳಗಳನ್ನೇ ರಕ್ಷಣೆ ಮಾಡುವ ಸಂಚು ಹಾಕಿಕೊಂಡಿದೆ. ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಈ ಮೂಲಕ…
ಮೈಸೂರು: ಎಕ್ಸಿಟ್ ಪೋಲ್ ನಲ್ಲಿ ಎನ್ ಡಿಎ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ. ಮ್ಯಾಜಿಕ್ ಸಂಖ್ಯೆಯನ್ನು ದಾಟಲಿದೆ ಅಂತ ನಿನ್ನೆಯಷ್ಟೇ ತಿಳಿದು ಬಂದಿತ್ತು. ಈ ಬೆನ್ನಲ್ಲೇ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬುದಾಗಿ ಕಾಲ ಭರವೇಶ್ವರನ ಶ್ವಾನ ಭವಿಷ್ಯ ನುಡಿದಿದೆ. ಮೈಸೂರಿನ ಕಾಲಭೈರವೇಶ್ವರ ದೇವಸ್ಥಾನದಲ್ಲಿರುವಂತ ಶ್ವಾನದ ಭವಿಷ್ಯ ಅನೇಕ ಬಾರಿ ನಿಜವಾಗಿದೆ. ಇದೇ ಕಾರಣಕ್ಕಾಗಿ ಅನೇಕ ಭಕ್ತರು ಭವಿಷ್ಯ ನುಡಿಯನ್ನು ಕೇಳೋದಕ್ಕೂ ಇಲ್ಲಿಗೆ ಆಗಮಿಸಿ, ತಮ್ಮ ಕಷ್ಟ ಸುಖಗಳಿಗೆ ಹೇಳಿಕೆ ಪಡೆಯೋದು ಇದೆ. ಇಂತಹ ಮೈಸೂರಿನ ಕಾಲಭೈರವೇಶ್ವರ ದೇವಾಲಯದಲ್ಲಿ ಅರ್ಚಕರು ಈ ದೇಶದ ಪ್ರಧಾನಿ ಯಾರು ಆಗಲಿದ್ದಾರೆ ಅಂತ ರಾಹುಲ್ ಗಾಂಧಿ ಹಾಗೂ ಮೋದಿ ಪೋಟೋಗಳನ್ನು ಶ್ವಾನದ ಎದುರು ಇಟ್ಟು ಕೇಳಿದ್ದಾರೆ. ಭೈರವನ ಶ್ವಾನ ಪೂಜೆಯ ಬಳಿಕ ಮೋದಿ ಪೋಟೋವನ್ನು ಬಾಯಿಯಿಂದ ಕಚ್ಚಿಕೊಂಡು ಭವಿಷ್ಯ ನುಡಿದಿದೆ. ಇದಲ್ಲದೇ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆ ಎಂಬುದಾಗಿಯೂ ಭವಿಷ್ಯ ನುಡಿದಿರೋದಾಗಿ ತಿಳಿದು ಬಂದಿದೆ. ಈಗ ಭೈರವೇಶ್ವರನ ಶ್ವಾನ ಭವಿಷ್ಯ ನುಡಿದಿರುವಂತ ವೀಡಿಯೋ,…
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ದೊಡ್ಡ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಅವರು ಆಗ್ರಹಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನಾಗೇಂದ್ರರ ರಾಜೀನಾಮೆ ಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು. ಸಮಗ್ರ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಿ; ಎಸ್‍ಐಟಿ ತನಿಖೆ ಬೇಡ ಎಂದೂ ಅವರು ತಿಳಿಸಿದರು. ಈ ರೀತಿಯ ಹಗರಣ ರಾಜ್ಯದಲ್ಲಿ ಮೊದಲನೆಯದು ಇದ್ದಂತಿದೆ. ನಕಲಿ ಖಾತೆ ಸೃಷ್ಟಿಸಿ ಹಣವನ್ನು ಹೈದರಾಬಾದ್‍ಗೆ ಕಳಿಸಿದ್ದಾರೆ. ಸರಕಾರದ ಹಣ ಈ ರೀತಿ ದುರುಪಯೋಗ ಆಗಿರುವ ಪ್ರಥಮ ಪ್ರಕರಣದಂತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಇದು ಎಸ್‍ಸಿ, ಎಸ್‍ಟಿ ಜನಾಂಗದ ಹಣ. ಈ ಸಚಿವರು ಮೀಸಲು ಕ್ಷೇತ್ರದಿಂದ ಗೆದ್ದವರು. ಎಸ್‍ಸಿ ಸಮುದಾಯದ ಸಚಿವರಾಗಿ ಅವರ ಜವಾಬ್ದಾರಿ ಏನು? ಅವರು ಪ್ರಮಾಣವಚನಕ್ಕೆ ಬದ್ಧತೆ ಇರುವ ವ್ಯಕ್ತಿ ಆಗಿದ್ದರೆ ಸ್ವಾರ್ಥದ ಸಲುವಾಗಿ ಈ ರೀತಿ…
ಬೆಂಗಳೂರು: “ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ, ಈ ಬಾರಿಯೂ ಸಮೀಕ್ಷೆಗಳು ಸುಳ್ಳಾಗಲಿವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಸಮೀಕ್ಷೆ ಸುಳ್ಳಾಯಿತು. ಆ ಚುನಾವಣೆಯಲ್ಲಿ ನನ್ನ ಭವಿಷ್ಯವೇ ನಿಜವಾಗಿತ್ತು ಎಂದರು. ಸಮೀಕ್ಷೆ ನಡೆಸುವ ಸಂಸ್ಥೆಗಳು ಐದು ಸಾವಿರದಷ್ಟು ಜನರ ಅಭಿಪ್ರಾಯ ಮಾತ್ರ ಸಂಗ್ರಹ ಮಾಡಿರುತ್ತವೆ. ಹೀಗಾಗಿ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ದಾಟಲಿದೆ ಎಂದು ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ರಿಂದ 85 ಸ್ಥಾನ ಮಾತ್ರ ಕೊಟ್ಟಿದ್ದರು. 136 ಸ್ಥಾನ ಗೆಲ್ಲುತ್ತೇವೆ ಎಂದು ನನ್ನ ರಾಜಕೀಯ ಅನುಭವದ ಮೇಲೆ ಹೇಳಿದ್ದೆ. ಜೊತೆಗೆ ನಾನು ನಡೆಸಿದ್ದ ಖಾಸಗಿ ಸಮೀಕ್ಷೆ ಪ್ರಕಾರದಂತೆ ಜನ ನಮಗೆ 136 ಸ್ಥಾನ ನೀಡಿದರು ಎಂದರು. ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ…
BREAKING: ತಿಹಾರ್ ಜೈಲಿನಲ್ಲಿ ಶರಣಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ | Delhi CM Arvind Kejriwal surrenders
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಮೇ 10 ರಂದು ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣೆಯ ಮತದಾನ ಶನಿವಾರ ಮುಕ್ತಾಯಗೊಂಡ ಒಂದು ದಿನದ ನಂತರ ಶರಣಾಗಲಿದ್ದಾರೆ. ಈಗ ರದ್ದುಪಡಿಸಲಾದ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ಬಗ್ಗೆ ನಡೆಯುತ್ತಿರುವ ಕಾನೂನು ಹೋರಾಟಗಳ ಮಧ್ಯೆ ಎಎಪಿ ಮುಖ್ಯಸ್ಥರಿಗೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಅವಕಾಶ ನೀಡಲು ಜಾಮೀನು ನೀಡಲಾಯಿತು. ಸುಮಾರು ಒಂದು ದಶಕದಿಂದ ದೆಹಲಿಯ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, 2021 ರಲ್ಲಿ ಮದ್ಯ ಮಾರಾಟವನ್ನು ಉದಾರೀಕರಣಗೊಳಿಸುವ ನೀತಿಯನ್ನು ಜಾರಿಗೆ ತಂದ ನಂತರ ಅವರ ಸರ್ಕಾರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿತು, ನಂತರ ತನಿಖೆಯ ನಡುವೆ ಅದನ್ನು ಹಿಂತೆಗೆದುಕೊಳ್ಳಲಾಯಿತು. ಇದರ ಪರಿಣಾಮವಾಗಿ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಇಬ್ಬರು ಎಎಪಿ ನಾಯಕರನ್ನು ಜೈಲಿಗೆ ಹಾಕಲಾಯಿತು.…
ನವದೆಹಲಿ: ಟಾಟಾ ಸ್ಟೀಲ್ ಸಿಇಒ ಯುಕೆಯಲ್ಲಿ 2500 ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ. ಕಡಿಮೆ-ಹೊರಸೂಸುವಿಕೆಯ ಎಲೆಕ್ಟ್ರಿಕ್ ಆರ್ಕ್ ಕುಲುಮೆ (ಇಎಎಫ್) ಪ್ರಕ್ರಿಯೆಗೆ ಬದಲಾಗಲು ಸ್ಟೀಲ್ ಮೇಜರ್ ಯೋಜಿಸುತ್ತಿದ್ದಂತೆ, ಸಿಇಒ ಟಿ ವಿ ನರೇಂದ್ರನ್ “ಅನಿವಾರ್ಯ” ಉದ್ಯೋಗ ನಷ್ಟವನ್ನು ಘೋಷಿಸಿದರು. ಟಾಟಾ ಸ್ಟೀಲ್ ಯುಕೆಯ ಅತಿದೊಡ್ಡ ಉಕ್ಕಿನ ಕಾರ್ಖಾನೆಗಳನ್ನು ಹೊಂದಿದೆ. ವರ್ಷಕ್ಕೆ 3 ಮಿಲಿಯನ್ ಟನ್ (ಎಂಟಿಪಿಎ) ಉತ್ಪಾದಿಸುತ್ತದೆ, ಇದು ಸೌತ್ ವೇಲ್ಸ್ನ ಪೋರ್ಟ್ ಟಾಲ್ಬೋಟ್ನಲ್ಲಿದೆ. ಪಿಟಿಐ ವರದಿಯ ಪ್ರಕಾರ, ಇದು ದೇಶದಲ್ಲಿ ತನ್ನ ಎಲ್ಲಾ ಕಾರ್ಯಾಚರಣೆಗಳಲ್ಲಿ ಸುಮಾರು 8,000 ವ್ಯಕ್ತಿಗಳನ್ನು ನೇಮಿಸಿಕೊಂಡಿದೆ. ಟಾಟಾ ಸ್ಟೀಲ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳು ತನ್ನ ಡಿಕಾರ್ಬನೈಸೇಶನ್ ಕಾರ್ಯತಂತ್ರಕ್ಕೆ ಅನುಗುಣವಾಗಿ, ಕಂಪನಿಯು ತನ್ನ ಜೀವನ ಚಕ್ರದ ಅಂತ್ಯವನ್ನು ಸಮೀಪಿಸುತ್ತಿರುವ ಬ್ಲಾಸ್ಟ್ ಕುಲುಮೆ (ಬಿಎಫ್) ಮಾರ್ಗದಿಂದ ಕಡಿಮೆ-ಹೊರಸೂಸುವ ಎಲೆಕ್ಟ್ರಿಕ್ ಆರ್ಕ್ ಕುಲುಮೆ (ಇಎಎಫ್) ಪ್ರಕ್ರಿಯೆಗೆ ಪರಿವರ್ತನೆಗೊಳ್ಳುತ್ತಿದೆ. ಪಿಟಿಐ ಜೊತೆ ಮಾತನಾಡಿದ ನರೇಂದ್ರನ್, ಯುಕೆ ಸರ್ಕಾರದ ನೆರವಿನೊಂದಿಗೆ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ (ಇಎಎಫ್) ಗೆ ಪರಿವರ್ತನೆಯಾಗುವುದರಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ…
ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ತಿನ ಚುನಾವಣೆ ಘೋಷಣೆಯಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯಗೂ ಟಿಕೆಟ್ ನೀಡಲಾಗಿದೆ. ಈಗಾಗಲೇ ಬಿಜೆಪಿಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಿಟಿ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮುಳೆಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಲು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ, ಎನ್ ಎಸ್ ಬೋಸರಾಜು, ಡಾ.ಕೆ ಗೋವಿಂದರಾಜು, ವಸಂತ್ ಕುಮಾರ್, ಜಗದೇವ ಗುತ್ತೇದಾರ, ಐವಾನ್ ಡಿಸೋಜಗೆ ಟಿಕೆಟ್ ನೀಡಲಾಗಿದೆ. ಇನ್ನೂ ಬಿಜೆಪಿ ಪಕ್ಷಕ್ಕೆ ಹೋದಂತ ಜಗದೀಶ್ ಶೆಟ್ಟರ್ ತೆರವಾದಂತ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಈ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಬಸನಗೌಡ ಬಾರ್ದಲಿ ಅವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಈ ಮೂಲಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 7…
ಓಹಿಯೋ: ಓಹಿಯೋದ ಅಕ್ರಾನ್ ನಲ್ಲಿ ಭಾನುವಾರ ಮುಂಜಾನೆ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, 27 ಜನರನ್ನು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಸ್ಥಳೀಯ ವರದಿಗಳ ಪ್ರಕಾರ, ಶೂಟಿಂಗ್ ಘಟನೆಯ ನಂತರ ಅನೇಕ ಆಸ್ಪತ್ರೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. https://twitter.com/tecas2000/status/1797175520997597373 ಸುರಕ್ಷತಾ ಕಾರಣಗಳಿಗಾಗಿ ಶೂಟಿಂಗ್ ಸ್ಥಳದಿಂದ ದೂರವಿರಲು ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದ್ದಾರೆ. ಇದರಿಂದ ಅವರು ಯಾವುದೇ ಅಡೆತಡೆಯಿಲ್ಲದೆ ತಮ್ಮ ತನಿಖೆಯನ್ನು ಮುಂದುವರಿಸಬಹುದು. ಕೆಲ್ಲಿ ಅವೆನ್ಯೂದಲ್ಲಿನ ಶೂಟಿಂಗ್ ಸ್ಥಳದಲ್ಲಿ ಗೊಂದಲದ ದೃಶ್ಯಗಳು ಉಂಟಾಗಿದ್ದು, ಹಲವಾರು ಗುಂಡುಗಳು ಕೇಳಿ ಜನರು ತಮ್ಮ ಪ್ರಾಣಕ್ಕಾಗಿ ಓಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. https://kannadanewsnow.com/kannada/upi-sets-new-record-crosses-rs-20-trillion-turnover/ https://kannadanewsnow.com/kannada/shimoga-new-journalists-association-launched-in-sagar-taluk/
ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ತಿನ ಚುನಾವಣೆ ಘೋಷಣೆಯಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯಗೂ ಟಿಕೆಟ್ ನೀಡಲಾಗಿದೆ. ಈಗಾಗಲೇ ಬಿಜೆಪಿಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಿಟಿ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮುಳೆಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಲು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ, ಎನ್ ಎಸ್ ಬೋಸರಾಜು, ಡಾ.ಕೆ ಗೋವಿಂದರಾಜು, ವಸಂತ್ ಕುಮಾರ್, ಜಗದೇವ ಗುತ್ತೇದಾರ, ಐವಾನ್ ಡಿಸೋಜ ಹಾಗೂ ಬಸನಗೌಡ ಬಾರ್ದಲಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. https://kannadanewsnow.com/kannada/upi-sets-new-record-crosses-rs-20-trillion-turnover/ https://kannadanewsnow.com/kannada/shimoga-new-journalists-association-launched-in-sagar-taluk/