Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಸಿಲಿಕಾನ್ ಸಿಟಿ ಇಂದು ಅಕ್ಷರಶಃ ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದಂತ ಮಳೆಯಿಂದಾಗಿ ನಗರದ ಪ್ರಮುಖ 58 ರಸ್ತೆಗಳು ಜಲಾವೃತಗೊಂಡಿದ್ದರೇ, 39 ಕಡೆ ಮರ ಬಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ. ಈ ಕುರಿತಂತೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಜಂಟಿ ಪೊಲೀಸ್ ಆಯುಕ್ತರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಬೆಂಗಳೂರಲ್ಲಿ ಭಾರೀ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ 58 ಸ್ಥಳಗಳಲ್ಲಿ ನೀರು ನಿಂತಿದೆ. 39 ಸ್ಥಳಗಳಲ್ಲಿ ಮರಗಳು ಬಿದ್ದಿವೆ. ದಟ್ಟಣೆ ಹೆಚ್ಚಾಗಿದೆ. ರಸ್ತೆಗಳನ್ನು ತೆರವುಗೊಳಿಸಲು ನಾಗರಿಕ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ. https://twitter.com/Jointcptraffic/status/1797278939485720919 ಬೆಂಗಳೂರಲ್ಲಿ ಭಾರೀ ಮಳೆ: ಜನತೆಗೆ ಸಂಚಾರ ಪೊಲೀಸರಿಂದ ಈ ಸಲಹೆ ಬೆಂಗಳೂರಲ್ಲಿ ಸತತ ಒಂದು ಗಂಟೆ ಸುರಿದಂತ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದಾವೆ. ಎಲ್ಲೆಲ್ಲೂ ನೀರು ನುಗ್ಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ…
ಚಿಕ್ಕಮಗಳೂರು: ನಾಳೆ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರು, ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ 4ರವರೆಗೆ ಮತದಾನ ಆರಂಭಗೊಳ್ಳಲಿದ್ದು, ಶಿಕ್ಷಕರ ಕ್ಷೇತ್ರದ ಡಾ.ಕೆ.ಕೆ ಮಂಜುನಾಥ್ ಕುಮಾರ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಕೆ ಮಂಜುನಾಥ್ ಕುಮಾರ್ ಅವರು ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದರು. ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಕೂಡ ಮಾಡಿದ್ದರು. ಚಿಕ್ಕಮಗಳೂರು, ಮಂಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಮತಬೇಟೆ ನಡೆಸಿದ್ದಂತ ಡಾ.ಕೆ.ಕೆ ಮಂಜುನಾಥ್ ಕುಮಾರ್ ಗೆ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸಾಥ್ ನೀಡಿ, ಮತದಾರರ ಮನವೊಲಿಕೆ ಪ್ರಯತ್ನಕ್ಕೆ ಇಳಿದಿದ್ದರು. ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ತಮ್ಮ ಪಕ್ಷದ ಅಭ್ಯರ್ಥಿ ಡಾ.ಕೆ.ಕೆ ಮಂಜುನಾಥ್ ಕುಮಾರ್ ಪರವಾಗಿ ಮತಯಾಚನೆ ಮಾಡಿದ್ರೇ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ನಿನ್ನೆಯಂತೂ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.…
ಬೆಂಗಳೂರು: ನಗರದಲ್ಲಿ ಸತತ ಒಂದು ಗಂಟೆ ಸುರಿದಂತ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದಾವೆ. ಎಲ್ಲೆಲ್ಲೂ ನೀರು ನುಗ್ಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಮೆಜೆಸ್ಟಿಕ್ ಸೇರಿದಂತೆ ವಿವಿಧೆಡೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಜನತೆಗೆ ಕೆಲ ಸಲಹೆ ನೀಡಿದೆ. ಆ ಬಗ್ಗೆ ಮುಂದೆ ಓದಿ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರ ಬಿದ್ದ ಕಾರಣ ಟ್ರಿನಿಟಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ ಅಂತ ತಿಳಿಸಿದೆ. https://twitter.com/blrcitytraffic/status/1797277204264480984 ತುಮಕೂರು ರಸ್ತೆಯಲ್ಲಿ (ಪೀಣ್ಯ ರಸ್ತೆ) IISc ಮುಖ್ಯ ಗೇಟ್ ಮತ್ತು ಯಶವಂತಪುರ ಮೇಲ್ಸೇತುವೆ ನಡುವೆ ಮರ ಬಿದ್ದಿದೆ. ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮರ ಕಡಿಯುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.…
ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು ಗಳೆಂದರೆ,… ಇಂದ್ರ-ಪೂರ್ವ ಕುಬೇರ-ಉತ್ತರ ಯಮ-ದಕ್ಷಿಣ ವರುಣ-ಪಶ್ಚಿಮ ಈಶಾನ್ಯ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ ನಿರುಋುತಿ(ರಾಕ್ಷಸ)- ನೈಋುತ್ಯ. ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ.ವಜ್ರಾಯುಧ ಇವನ ಆಯುಧ.ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ. ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ,ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ.ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ.ಅಗ್ನಿಯು ಪೃಥ್ವಿಗೆ ಅಧಿಧಿಪತಿಯಾದ ದೇವತೆ ಎಂದೂ ಪ್ರಸಿದ್ಧ. ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ.ಈತ ದಕ್ಷಿಣ ದಿಕ್ಕಿನ ಅಧಿಪತಿ.…
ಬೆಂಗಳೂರು: ನಗರದಲ್ಲಿ ಸತತ ಒಂದು ಗಂಟೆಯಿಂದ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧೆಡೆ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಅಂಡರ್ ಪಾಸ್ ಗೆ ನೀರು ನುಗ್ಗಿದ ಪರಿಣಾಮ, ನೀರಿನಲ್ಲಿ ಬಿಎಂಟಿಸಿ ಬಸ್ಸೊಂದು ಸಿಲುಕಿರೋದಾಗಿ ತಿಳಿದು ಬಂದಿದೆ. ಇಂದು ಸಂಜೆ ಬೆಂಗಳೂರಲ್ಲಿ ವರುಣಾರ್ಭಟವಾಗಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಹಲವು ಮರಗಳು ರಸ್ತೆಗಳಿಗೆ ಉರುಳಿವೆ. ದೇವಸಂದ್ರ ಬಸ್ ನಿಲ್ದಾಣದ ಬಳಿ ದೊಡ್ಡ ಮರ ರಸ್ತೆಗೆ ಉರುಳಿ ಬಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ ಅರ್ಧ ಗಂಟೆಯಿಂದ ಬೆಂಗಳೂರು ದಕ್ಷಿಣದಲ್ಲಿ ಬಿರುಗಾಳಿ ಸಹಿತ ರಣ ಭೀಕರ ಮಳೆಯಾಗುತ್ತಿದೆ. ಮಳೆಯ ನೀರು ಚರಂಡಿ ತುಂಬಿ, ರಸ್ತೆಗೆ ಹರಿದ ಪರಿಣಾಮ, ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತ ಬಿರುಗಾಳಿ, ಗುಡುಗು ಸಹಿತ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮೆಟ್ರೋ ರೈಲ್ವೆ ಹಳಿಯ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಇಂದ್ರನಗರದಿಂದ…
ಬೆಂಗಳೂರು: ನಗರದಲ್ಲಿ ಇದೀಗ ಭಾರೀ ಮಳೆಯಾಗುತ್ತಿದೆ. ಬಿರುಗಾಳಿ, ಗುಡುಗು ಸಹಿತ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮೆಟ್ರೋ ರೈಲ್ವೆ ಹಳಿಯ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಇಂದ್ರನಗರದಿಂದ ವೈಟ್ ಫೀಲ್ಡ್ ಹಾಗೂ ಎಂಜಿ ರಸ್ತೆ ನಡುವಿನ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಈ ಬಗ್ಗೆ ಬಿಎಂಆರ್ ಸಿಎಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಟ್ರಿನಿಟಿ ನಿಲ್ದಾಣದ ನಂತರ ಎಂಜಿ ರಸ್ತೆಯ ಕಡೆಗೆ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಈ ಕಾರಣದಿಂದಾಗಿ ಇಂದ್ರನಗರದಿಂದ ವೈಟ್ಫೀಲ್ಡ್ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದವರೆಗೆ ರಾತ್ರಿ 7.26ರಿಂದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ ಎಂದಿದೆ. ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಬಿದ್ದಿರುವಂತ ಮರದ ಕೊಂಬೆಯನ್ನು ತೆರವುಗೊಳಿಸೋ ಕಾರ್ಯ ನಡೆಯುತ್ತಿದೆ. ಈ ತೆರವು ಕಾರ್ಯಾಚರಣೆ ನಡೆದ ಬಳಿಕ, ಸಾಮಾನ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಪ್ರಯತ್ನಿಸಲಾಗುತ್ತದೆ ಅಂತ ತಿಳಿಸಿದೆ. https://twitter.com/OfficialBMRCL/status/1797270565172179155 https://kannadanewsnow.com/kannada/rohit-sharmas-fake-pics-with-big-belly-go-viral/ https://kannadanewsnow.com/kannada/modi-will-become-pm-again-kaala-bhairaveshwars-dog-predicts/
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದಪ್ಪ ಮೈಕಟ್ಟುಗಾಗಿ ಆನ್ಲೈನ್ನಲ್ಲಿ ಆಗಾಗ್ಗೆ ಟ್ರೋಲ್ಗೆ ಒಳಗಾಗುತ್ತಾರೆ. ಅವರ ನಕಲಿ ಚಿತ್ರ ವೈರಲ್ ಆದ ನಂತರ ಅವರು ಮತ್ತೊಮ್ಮೆ ಫ್ಯಾಟ್ ಶೇಮಿಂಗ್ಗೆ ಒಳಗಾಗುತ್ತಾರೆ. ನ್ಯೂಯಾರ್ಕ್ನಲ್ಲಿ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಟಿ 20 ವಿಶ್ವಕಪ್ 2024 ರ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಭಾರತವನ್ನು ಮುನ್ನಡೆಸಿದ್ದರು. ರೋಹಿತ್ ತಮ್ಮ ಬೌಲರ್ಗಾಗಿ ಮೈದಾನವನ್ನು ಸಜ್ಜುಗೊಳಿಸುತ್ತಿರುವುದನ್ನು ಕ್ಯಾಮೆರಾಗಳು ತೋರಿಸಿವೆ. ಅದರ ಸ್ಟಿಲ್ ಚಿತ್ರವು ಈಗ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಆದರೆ ಚಿತ್ರದಲ್ಲಿ ರೋಹಿತ್ ದೊಡ್ಡ ಬೊಜ್ಜಿನ ಹೊಟ್ಟೆಯನ್ನು ಹೊಂದಿರುವುದನ್ನು ತೋರಿಸುತ್ತದೆ. ಇದನ್ನು ಕೆಲವು ಬಳಕೆದಾರರು ಸ್ಪಷ್ಟವಾಗಿ ಮಾರ್ಫಿಂಗ್ ಮಾಡಿ ನಂತರ ಅದನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾರೆ. https://twitter.com/XaviVision/status/1796965760863981687 ನೆಟ್ಟಿಗರು ತಕ್ಷಣ ಅದರ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದರು. ಕೆಲವರು ಎಂಎಸ್ ಧೋನಿ ಅವರ ತಲೆಯನ್ನು ಹೊಂದಿರುವ ಮಗುವಿನ ಚಿತ್ರವನ್ನು ಸಹ ಸೇರಿಸಿದ್ದಾರೆ. “ಅಕಾಯ್ ಶೀಘ್ರದಲ್ಲೇ ಸ್ನೇಹಿತನನ್ನು ಪಡೆಯುತ್ತಿದ್ದಾನೆ” ಎಂದು ಬಳಕೆದಾರರು ಚಿತ್ರಕ್ಕೆ…
ಹೈದರಾಬಾದ್: ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ, 2014 ರ ಪ್ರಕಾರ ದೇಶದ ಗದ್ದಲದ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದಾದ ಹೈದರಾಬಾದ್, ಭಾನುವಾರದಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾಮಾನ್ಯ ರಾಜಧಾನಿಯಾಗುವುದನ್ನು ನಿಲ್ಲಿಸಿದೆ. ಹೈದರಾಬಾದ್ ಇನ್ಮೇಲೆ ತೆಲಂಗಾಣಕ್ಕೆ ಮಾತ್ರವೇ ಸೀಮಿತವಾಗಿದೆ. ಜೂನ್ 2 ರಿಂದ ಹೈದರಾಬಾದ್ ತೆಲಂಗಾಣದ ರಾಜಧಾನಿಯಾಗಲಿದೆ. 2014 ರಲ್ಲಿ ಅವಿಭಜಿತ ಆಂಧ್ರಪ್ರದೇಶದ ವಿಭಜನೆಯಾದಾಗ ಹೈದರಾಬಾದ್ ಅನ್ನು 10 ವರ್ಷಗಳ ಕಾಲ ಎರಡು ರಾಜ್ಯಗಳ ರಾಜಧಾನಿಯನ್ನಾಗಿ ಮಾಡಲಾಯಿತು. ತೆಲಂಗಾಣ ರಾಜ್ಯ 2014ರ ಜೂನ್ 2ರಂದು ಅಸ್ತಿತ್ವಕ್ಕೆ ಬಂದಿತು. ನಿಗದಿತ ದಿನದಂದು (ಜೂನ್ 2) ಅಸ್ತಿತ್ವದಲ್ಲಿರುವ ಆಂಧ್ರಪ್ರದೇಶದ ಹೈದರಾಬಾದ್, ಹತ್ತು ವರ್ಷಗಳನ್ನು ಮೀರದ ಅವಧಿಗೆ ತೆಲಂಗಾಣ ರಾಜ್ಯ ಮತ್ತು ಆಂಧ್ರಪ್ರದೇಶ ರಾಜ್ಯದ ಸಾಮಾನ್ಯ ರಾಜಧಾನಿಯಾಗಲಿದೆ” ಎಂದು ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ ತಿಳಿಸಿದೆ. “ಉಪ-ವಿಭಾಗ (1) ರಲ್ಲಿ ಉಲ್ಲೇಖಿಸಲಾದ ಅವಧಿ ಮುಗಿದ ನಂತರ, ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಲಿದೆ ಮತ್ತು ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ. ಆಂಧ್ರಪ್ರದೇಶ” ಎಂದು ಅದು ಹೇಳಿದೆ. ಫೆಬ್ರವರಿ 2014 ರಲ್ಲಿ ಸಂಸತ್ತಿನಲ್ಲಿ ಆಂಧ್ರಪ್ರದೇಶ…
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ವಿಶ್ರಾಂತಿಗೆಂದು ಇಂಧನ ಸಚಿವ ಕೆಜೆ ಜಾರ್ಜ್ ಅವರ ತೋಟದ ಮನೆಗೆ ತೆರಳಿದ್ದರು. ಈ ವೇಳೆಯಲ್ಲಿ ಸಿಎಂ ಸಿದ್ಧರಾಮಯ್ಯಗೂ ಪವರ್ ಕಟ್ ಬಿಸಿ ತಟ್ಟಿದೆ. ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟದಲ್ಲಿ ನಿನ್ನೆ ರಾತ್ರಿ ಸಿಎಂ ಸಿದ್ಧರಾಮಯ್ಯ ಅವರಿಗೂ ವಿಶ್ರಾಂತಿಯ ವೇಳೆಯಲ್ಲಿ ಪವರ್ ಕಟ್ ಬಿಸಿ ತಟ್ಟಿದೆ. ಸಚಿವ ಕೆ.ಜೆ ಜಾರ್ಜ್ ಅವರ ತೋಟದ ಮನೆಗೆ ಸಿಎಂ ಸಿದ್ಧರಾಮಯ್ಯ ವಿಶ್ರಾಂತಿಗೆ ತೆರಳಿದ್ದರು. ಈ ವೇಳೆಯಲ್ಲಿ ವಿದ್ಯುತ್ ಕೈಕೊಟ್ಟ ಪ್ರಸಂಗ ನಡೆದಿದೆ. ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಪವರ್ ಕಟ್ ಆಗಿದೆ. ಕೆಜೆ ಜಾರ್ಜ್ ಅವರ ತೋಟದ ಮನೆಯಲ್ಲಿ ಮಳೆಯಿಂದಾಗಿ ಪವರ್ ಕಟ್ ಆದ ಕಾರಣ, ಜನರೇಟರ್ ಬಳಸಿ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಬೆಸ್ಕಾಂ ಲೈನ್ ಮ್ಯಾನ್ ಗಳು ಬಂದು, ವಿದ್ಯುತ್ ದುರಸ್ಥಿ ಕಾರ್ಯ ನಡೆಸಿದ ನಂತ್ರ ಮರಳಿ…
ಬೆಂಗಳೂರು: ‘ಕರ್ನಾಟಕ ಬಿಡಿ, ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು – ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್‌ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ ಎಂದು ಸಚಿವರು ವಿವರಗಳನ್ನು ಹಂಚಿಕೊಂಡಿದ್ದಾರೆ. ʼದೇಶದಲ್ಲಿ ಎಫ್‌ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಹಾಗೆಯೇ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು’ ಎಂದು ಅವರು ತಿಳಿಸಿದರು. ಕುಸಿತದ ವಿವರಗಳು ʼಹಣಕಾಸು ವರ್ಷ 2023ರಲ್ಲಿ 71 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶಿ ಎಫ್‌ಡಿಐ, ಹಣಕಾಸು ವರ್ಷ 2024 ರಲ್ಲಿ 70 ಶತಕೋಟಿ ಡಾಲರ್‌ಗೆ ಕುಸಿದಿದೆ. ʼಹಣಕಾಸು ವರ್ಷ 2020-21ರಲ್ಲಿ ₹ 4.42 ಲಕ್ಷ ಕೋಟಿ, 2021-22ರಲ್ಲಿ ₹ 4.37…