Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೈಬರ್ ವಂಚನೆ ಮಾಡುತ್ತಿದ್ದಂತ 7 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್ ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ ಸೀಜ್ ಮಾಡಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ:07/01/2025 ರಂದು ಪಿರಾದುದಾರರಿಗೆ ಓರ್ವ ವ್ಯಕ್ತಿಯು ಪೇಸ್‌ಬುಕ್‌ನಲ್ಲಿ ನಕಲಿ ಖಾತೆಯಿಂದ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದು, ಆ ನಕಲಿ ಖಾತೆಯ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪಿರಾದುದಾರರ ಹಳೆಯ ಸ್ನೇಹಿತನ ಫೋಟೋ ಇರುವುದನ್ನು ಪಿರಾದುದಾರರು ಕಂಡು ಅದು ನಿಜವೆಂದು ನಂಬಿ, ಪ್ರೆಂಡ್ಸ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿರುತ್ತಾರೆ. ಪೇಸ್‌ಬುಕ್‌ನಲ್ಲಿ ಪ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ವ್ಯಕ್ತಿಯು ಪಿರ್ಯಾದುದಾರರಿಗೆ ತಾನು ದುಬೈನಲ್ಲಿ ಇರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ತಾನು ವಾಪಸ್ ಭಾರತಕ್ಕೆ ಬರುವುದಾಗಿ ತಿಳಿಸಿ ತನ್ನ ಬಳಿ ಇರುವ ಅಪಾರವಾದ ಹಣ ತೆಗೆದುಕೊಂಡು ಭಾರತಕ್ಕೆ ಬಂದರೆ ಹೆಚ್ಚಿನ ತೆರಿಗೆಯನ್ನು ನೀಡಬೇಕಾಗಿರುತ್ತದೆ.…
ಮಂಗಳೂರು: ಕಳೆದ ಒಂದು ವಾರದ ಹಿಂದೆ ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿ, ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಎಂಬುವರನ್ನು ಬಂಧಿಸಿದ್ದರು. ಆತನ ಮೊಬೈಲ್ ಕೂಡ ಸೀಜ್ ಮಾಡಿದ್ದರು. ಇಂತಹ ಮೊಬೈಲ್ ನಲ್ಲಿ ಹೋರಾಟಗಾರರಿಗೆ ಶಕ್ತಿ ತುಂಬೋ ಸಲುವಾಗಿ ಸ್ನೇಹಮಯಿ ಕೃಷ್ಣ, ಗಂಗರಾಜುಗಾಗಿ ಪ್ರಾಣಿ ಬಲಿ ನಡೆಸಿ, ರಕ್ತಾಭಿಷೇಕ ಮಾಡಿರುವಂತ ಶಾಕಿಂಗ್ ವೀಡಿಯೋ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಮಂಗಳೂರು ಕಮೀಷನರ್ ಮಸಾಜ್ ಪಾರ್ಲರ್ ಕೇಸಲ್ಲಿ ಬಂಧಿತ ಆರೋಪಿಯಾಗಿದ್ದಂತ ಪ್ರಸಾದ್ ಅತ್ತಾವರ ಅವರ ಮೊಬೈಲ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ ಸ್ಪೋಟಕ ವೀಡಿಯೋಗಳು ಪತ್ತೆಯಾಗಿವೆ. ದೇವರ ಮುಂದೆ ಪ್ರಾಣಿಬಲಿ ಕೊಟ್ಟು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ, ಗಂಗರಾಜು ಪೋಟೋ ಇರಿಸಿ ರಕ್ತಾಭಿಷೇಕ ಮಾಡಿರೋ ವೀಡಿಯೋ ಕೂಡ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಅಂದಹಾಗೇ ಐದು ಕುರಿಗಳನ್ನು ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಪೋಟೋ ಇರಿಸಿ ಬಲಿಕೊಡಲಾಗಿದೆ. ಆ ಬಳಿಕ ಆ ಪೋಟೋಗಳಿಗೆ ರಕ್ತಾಭಿಷೇಕವನ್ನು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಸಾದ್ ಅತ್ತಾವರ…
ಬೆಂಗಳೂರು: ಹಿರಿಯ ನಾಗರೀಕರಿಗೆ ಉಚಿತ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆಯ ತರಬೇತಿಯನ್ನು ಫೆಬ್ರವರಿ 2ರಂದು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಕಳೆದ 22 ವರ್ಷಗಳಿಂದ ಹಿರಿಯರ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ಪ್ರತಿ ತಿಂಗಳು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಹಿರಿಯರ ನಾಗರಿಕರಿಗೆ ಉಚಿತ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆಯ ತರಬೇತಿಯನ್ನು ಆಯೋಜಿಸಿ, ಹಿರಿಯ ನಾಗರಿಕರಿಗೆ ಇದರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಅದರಂತೆ ದಿನಾಂಕ:02/02/2025 ರ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ನಂ.130, ರಾಷ್ಟ್ರೀಯ ವಿದ್ಯಾಲಯ ರಸ್ತೆ, 2ನೇ ಬ್ಲಾಕ್ ಜಯನಗರ, ಬೆಂಗಳೂರು-560004, ಈ ವಿಳಾಸದಲ್ಲಿರುವ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟಿನ ಡಿಮೆನ್ಸಿಯ ಡೇ ಕೇರ್ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದ್ದರಿಂದ…
ಬೆಂಗಳೂರು: ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದೀರಿ. ಆ ಸುಳ್ಳಿನಿಂದ ಈಗ ನೀವು ಜನರೆದುರು ಬೆತ್ತಲಾಗಿದ್ದೀರಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್ ಪಕ್ಷವು, ಮುಡಾದಲ್ಲಿ ಮುಕ್ಕಿ ತಿಂದಿರುವ ಮಜಾವಾದಿಯ ಸುಳ್ಳುಗಳು ಬಗೆದಷ್ಟು ಹೊರಬರುತ್ತಲೇ ಇದೆ. ಸಿದ್ಧರಾಮಯ್ಯ ಅವರೇ, ನೀವೇ ಹೇಳಿಕೊಂಡಂತೆ, ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದೀರಿ. ಆ ಸುಳ್ಳಿನಿಂದ ಈಗ ನೀವು ಜನರೆದುರು ಬೆತ್ತಲಾಗಿದ್ದೀರಿ ಎಂದಿದೆ. ದೇವನೂರು 3ನೇ ಹಂತದ ಬಡಾವಣೆಯಲ್ಲಿ ಈಗಲೂ ಇನ್ನೂ 370 ನಿವೇಶನಗಳು ಬಾಕಿ ಇದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ( 28-01-2025) ರಂದು ಮಾಹಿತಿ ನೀಡಿದೆ. ತಾವು ರಾಜಕೀಯ ಪ್ರಭಾವ ಬೀರಿ…
ಉತ್ತರಪ್ರದೇಶ: ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳ 2025 ರಲ್ಲಿ ಹೂಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಇಂದೋರ್ನ ಯುವತಿ ಮೊನಾಲಿಸಾ ಭೋಸಲೆ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿ ಮಾರ್ಪಟ್ಟಿದ್ದಾರೆ. ಈಗ ಚಲನಚಿತ್ರ ಜಗತ್ತಿಗೆ ಕಾಲಿಡಲು ಸಿದ್ಧರಾಗಿದ್ದಾರೆ. ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಅವರು ಮುಂಬರುವ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದಲ್ಲಿ ಅವರಿಗೆ ಒಂದು ಪಾತ್ರವನ್ನು ನೀಡಿದ್ದಾರೆ. ಕುಂಭಮೇಳ 2025 ರಲ್ಲಿ ಹೂಮಾಲೆಗಳನ್ನು ಮಾರಾಟ ಮಾಡುವಾಗ, ಮೊನಾಲಿಸಾ ತನ್ನ ಮುಗ್ಧ ಮೋಡಿ ಮತ್ತು ಅದ್ಭುತ ಸೌಂದರ್ಯದಿಂದ ಅನೇಕ ಹೃದಯಗಳನ್ನು ಗೆದ್ದರು. ಅವರ ಖ್ಯಾತಿಯು ಸಾಮಾಜಿಕ ಸಂಬಂಧಿತ ವಿಷಯಗಳ ಮೇಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ನಿರ್ದೇಶಕ ಸನೋಜ್ ಮಿಶ್ರಾ ಅವರ ಗಮನವನ್ನು ಸೆಳೆಯಿತು. ಈ ಹಿಂದೆ ‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ್’ ಚಿತ್ರವನ್ನು ನಿರ್ದೇಶಿಸಿದ್ದ ಮಿಶ್ರಾ, ತಮ್ಮ ಮುಂದಿನ ಯೋಜನೆಯಲ್ಲಿ ಮೊನಾಲಿಸಾಗೆ ಒಂದು ಪಾತ್ರವನ್ನು ನೀಡಲು ನಿರ್ಧರಿಸಿದರು. ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕರು ಮೊನಾಲಿಸಾ ಅವರ ತಂದೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಸಂಬಂಧ ಮಹೇಶ್ವರದಲ್ಲಿ ಒಪ್ಪಂದಕ್ಕೆ ಸಹಿ…
ಮುಂಬೈ: ಸೈಫ್ ಅಲಿ ಖಾನ್ ನಿವಾಸದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಹಿಡಿಯಲಾದ ಚಿತ್ರದೊಂದಿಗೆ ಆರೋಪಿ ಶರೀಫುಲ್ ಇಸ್ಲಾಂ ಅವರ ಮುಖವು ಹೋಲಿಕೆಯಾಗುತ್ತದೆ ಎಂದು ಮುಂಬೈ ಪೊಲೀಸರು ಶುಕ್ರವಾರ ದೃಢಪಡಿಸಿದ್ದಾರೆ. ಶರೀಫುಲ್ ಅವರ ನೋಟವು ತುಣುಕಿನಲ್ಲಿ ಕಂಡುಬರುವ ಒಳನುಗ್ಗುವವರಿಗಿಂತ ಭಿನ್ನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ನಂತರ ಪೊಲೀಸರು ಮುಖ ಗುರುತಿಸುವಿಕೆ ಪರೀಕ್ಷೆಯನ್ನು ನಡೆಸಿದರು. ಕಲಿನಾದ ಎಫ್ಎಸ್ಎಲ್ನಿಂದ ಮುಖ ಗುರುತಿಸುವಿಕೆ ವರದಿಯನ್ನು ಸ್ವೀಕರಿಸಿದ್ದೇವೆ ಎಂದು ಬಾಂದ್ರಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದರು. ಇದು ಪ್ರಯೋಗಾಲಯವು ಶರೀಫುಲ್ ಅವರೊಂದಿಗಿನ ಸಿಸಿಟಿವಿ ಚಿತ್ರವನ್ನು ವಿಶ್ಲೇಷಿಸಿದ ನಂತರ ಸಕಾರಾತ್ಮಕ ಹೋಲಿಕೆಯನ್ನು ತೋರಿಸಿದೆ. ತುಣುಕಿನಲ್ಲಿ ಸೆರೆಹಿಡಿಯಲಾದ ವ್ಯಕ್ತಿ ಅವನು ಎಂದು ಪರೀಕ್ಷೆಯು ದೃಢಪಡಿಸಿದೆ. ಜನವರಿ 29 ರಂದು ಪೊಲೀಸ್ ಕಸ್ಟಡಿಯನ್ನು ಪೂರ್ಣಗೊಳಿಸಿದ ನಂತರ ಶರೀಫುಲ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೈಫ್ ಅಲಿ ಖಾನ್ ಗೆ ಚೂರಿ ಇರಿತ ಸೈಫ್ ಅಲಿ ಖಾನ್ ವಾಸಿಸುವ ಸದ್ಗುರು ಶರಣ್ನಿಂದ ಕೆಲವೇ ಮೀಟರ್ ದೂರದಲ್ಲಿರುವ ಬಾಂದ್ರಾ (ಡಬ್ಲ್ಯೂ) ಹೋಟೆಲ್ನಲ್ಲಿ ಕೆಲಸ ತೆಗೆದುಕೊಳ್ಳುವ ಮೊದಲು ಡಿಸೆಂಬರ್ 31…
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳಿಗೂ ಅಗತ್ಯ ಮೂಲಸೌಕರ್ಯದ ಜೊತೆಗೆ ಡಿಜಿಟಲ್ ಶಿಕ್ಷಣ ನೀಡುವ ಉದ್ದೇಶದಿಂದ ಗ್ಲೋಬಲೋಜಿಕ್, ಮೊಬೈವಿಲ್ ಹಾಗೂ ಇಟಾಚಿ ಕಂಪನಿಗಳ ಸಹಯೋಗದೊಂದಿಗೆ ಸಿಎಸ್‌ಆರ್ ಅಡಿಯಲ್ಲಿ ಹೆಣ್ಣೂರಿನ “ಶ್ರೋಧಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆ” ಹಾಗೂ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್ ಗಳಿಗೆ ಪ್ರತ್ಯೇಕವಾಗಿ ಡಿಜಿಟಲೀಕರಣದ ಶಿಕ್ಷಣಕ್ಕೆ ಸಂಬಂಧಿಸಿದ ಉಪಕರಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಯಿತು. ಮೊದಲಿಗೆ, ಗ್ಲೋಬಲೋಜಿಕ್, ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟೀಸ್ (ಎಪಿಡಿ) ಸಹಯೋಗದೊಂದಿಗೆ, ಶ್ರೋಧಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ 129 ವಿಶೇಷ ಚೇತನ ಮಕ್ಕಳಿಗೆ ಮೂಲಸೌಕರ್ಯಗಳನ್ನು ನೀಡಲಾಯಿತು. ಇಲ್ಲಿನ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ಕಲಿಯಲು ನೆರವು ನೀಡಲಾಯಿತು. ಇದರ ಜೊತೆಗೆ, ವೈಯಕ್ತಿಕ ಚಿಕಿತ್ಸೆ, ಸಹಾಯಕ ಸಾಧನಗಳು ಸೇರಿದಂತೆ ಈ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಈ ಸಂಸ್ಥೆಗಳು ವಹಿಸಿಕೊಂಡವು. ಮತ್ತೊಂದು ಶಾಲೆಯಾದ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್‌ನಲ್ಲಿ ಮಕ್ಕಳಿಗೆ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. 700ಕ್ಕೂ ಅಧಿಕ ಮಕ್ಕಳನ್ನು ಹೊಂದಿರುವ ಈ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರಿಗೆ ಸಿಹಿಸುದ್ದಿಯನ್ನು ನೀಡಲಾಗಿದೆ. ನಾಳೆಯಿಂದ ಜಾರಿಗೆ ಬರುವಂತೆ ರೈತರಿಂದ ಹಾಲು ಖರೀದಿಯ ಬೆಲೆಯಲ್ಲಿ ರೂ.2 ಹೆಚ್ಚಳ ಮಾಡುವುದಾಗಿ ಶಿಮುಲ್ ಘೋಷಣೆ ಮಾಡಿದೆ. ಈ ಕುರಿತಂತೆ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರು ಮಾಹಿತಿ ನೀಡಿದ್ದು, ದಿನಾಂಕ 1.2.2025 ರಿಂದ 31 3.2025 ಶಿವಮೊಗ್ಗ ಹಾಲು ಒಕ್ಕಟದಿಂದ ರೈತರಿಗೆ ಹಾಲಿನ ದರ ಒಂದು ಲೀಟರ್ ಗೆ ರೂ 2 ಹೆಚ್ಚಿಗೆ ಮಾಡಿ ಈ ದಿಸ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ ಎಂಬುದಾಗಿ ತಿಳಿಸಿದ್ದಾರೆ. ಈ ತೀರ್ಮಾನದಂತೆ ನಾಳೆಯಿಂದ ಜಾರಿಗೆ ಬರುವಂತೆ ಶಿಮುಲ್ ವ್ಯಾಪ್ತಿಯಲ್ಲಿ ನಂದಿನಿ ಹಾಲು ರೈತರಿಂದ ಖರೀದಿಸುವಂತ ದರ 2 ರೂ ಹೆಚ್ಚಳವಾಗಲಿದೆ. ಈ ಮೂಲಕ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ ಅನ್ನು ಶಿವಮೊಗ್ಗ ಹಾಲು ಒಕ್ಕೂಟ ನೀಡಿದೆ. https://kannadanewsnow.com/kannada/ordinance-to-regulate-microfinance-to-be-promulgated-soon-siddaramaiah/ https://kannadanewsnow.com/kannada/good-news-for-guest-teachers-lecturers-from-state-government-honorarium-hike/
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ನಿಯಂತ್ರಣಕ್ಕೆ ಸದ್ಯದಲ್ಲಿಯೇ ಸುಗ್ರೀವಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ಹಾಗೂ ಬಿಜೆಪಿಯವರು ರಾಜ್ಯದಲ್ಲಿ ಗೂಂಡಾ ರಾಜ್ಯವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ ಎಂದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ. ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಧ್ಯದಲ್ಲಿಯೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದು, ಕಿರುಕುಳ ನೀಡುತ್ತಿರುವ…
ಬೆಂಗಳೂರು:- ಮೈಕ್ರೋಫೈನಾನ್ಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನುಗಳಿವೆ. ಅವುಗಳನ್ನು ಯಾವ ರೀತಿ ಹೊಸ ಕಾನೂನಿಗೆ ಸೇರಿಸಬಹುದು ಎಂಬುದನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಎರಡು ಮೂರು ದಿನದೊಳಗೆ ಅಂತಿಮವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಿನ್ನೆಯ ಸಭೆಯಲ್ಲಿ ಕಾನೂನು ಸೆಕ್ರೆಟರಿಗಳಿಗೆ, ಪಾರ್ಲಿಮೆಂಟರಿ ಸೆಕ್ರೆಟರಿಗಳಿಗೆ ಸೂಚಿಸಿದ್ದಾರೆ. ಶೀಘ್ರವಾಗಿ ಮಾಡುತ್ತಾರೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ ಮಾಡುತ್ತಿರುವ ಕಾರಣಕ್ಕಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಊರು ಬಿಟ್ಟು ಹೋಗುತ್ತಿದ್ದಾರೆ. ಇದು ನಿಲ್ಲಬೇಕಿದೆ. ಇದಕ್ಕೆ ಮುಖ್ಯವಾಗಿ ಕಾನೂನು ತರಬೇಕಿದೆ ಎಂದರು. ನನ್ನ ಕ್ಷೇತ್ರದಲ್ಲಿ 2.50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಅದಕ್ಕೆ 4.50 ಲಕ್ಷ ರೂ. ವಾಪಸ್ ಕಟ್ಟಿದ್ದಾರೆ. ಆದರೂ ಇನ್ನು 80 ಸಾವಿರ ರೂ. ಕಟ್ಟಬೇಕು ಅಂತ ಮನೆಗೆ ಬೀಗ ಹಾಕಿ, ಮನೆ ಮೇಲೆ ಬರೆದಿದ್ದಾರೆ. ಕುಟುಂಬಸ್ಥರು ಊರು ಬಿಟ್ಟು ಹೋಗಿದ್ದರು. ನನ್ನ ಗಮನಕ್ಕೆ ಬಂದಕೂಡಲೇ ಜಿಲ್ಲಾಧಿಕಾರಿ, ಎಸ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮನೆ…