Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗೆ ಅನುಮತಿ ನೀಡಲಾಗಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ರಾಜ್ಯದ ಆರೋಗ್ಯ ಇಲಾಖೆಯ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ-1 ಅವರು ಆರೋಗ್ಯ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ 2024-25 ನೇ ಸಾಲಿನ ವರ್ಗಾವಣೆಯನ್ನು ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ಕೆ’ಯಂತೆ ಕೈಗೊಳ್ಳಲು ಅನುಮತಿ ನೀಡಲಾಗುತ್ತಿದೆ ಎಂದಿದ್ದಾರೆ. ಪುಸ್ತಾವನೆಯನ್ನು ಪರಿಶೀಲಿಸಿದ ಕರ್ನಾಟಕ ನಾಗರೀಕ ಸೇವಾ (ವೈದ್ಯಾಧಿಕಾರಿಗಳ ಹಾಗೂ ಇತರೆ ಸಿಬ್ಬಂದಿಗಳ ವರ್ಗಾವಣೆ) ಕಾಯ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಕಾಯ್ದೆಗಳಡಿ ಹಾಗೂ ಈ ಕಾಯ್ದೆಯಡಿ ರಚಿಸಲಾಗಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ ಸರ್ಕಾರ ಸಹಮತಿ ನೀಡಿದೆ ಎಂದು ತಿಳಿಸಿದ್ದಾರೆ. ಮುಂದುವರೆದು, ಪುಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯು ತರವಾದ ನಂತರ, ಪುಸ್ತಾಪಿತ ವರ್ಗಾವಣಾ ಪ್ರಕ್ರಿಯೆಯನ್ನು ಕೈಗೊಂಡು, ಜುಲೈ…

Read More

ಬೆಂಗಳೂರು: ರಾಜ್ಯಾಧ್ಯಂತ ಶಾಲೆಗಳು ಆರಂಭಗೊಂಡಿವೆ. 2024-25ನೇ ಸಾಲಿನ ಶೈಕ್ಷಣಿಕ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಶೈಕ್ಷಣಿಕ ವರ್ಷಾರಂಭದ ಮೊದಲೇ ಪಠ್ಯಪುಸ್ತಕ, ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಸರ್ಕಾರ ಮಾಡಿತ್ತು. ಈ ಬೆನ್ನಲ್ಲೇ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕುಂಠಿತಗೊಳ್ಳಬಾರದು ಎನ್ನುವ ಕಾರಣಕ್ಕೆ ಬರೋಬ್ಬರಿ 33,863 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಜ್ಞಾಪನ ಹೊರಡಿಸಿದ್ದು, 2024-25 ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಯಾವುದು ಮೊದಲೂ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಟ್ಟು 35000, ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಉಲ್ಲೇಖ-01ರ ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ ಎಂದಿದ್ದಾರೆ. ಒಟ್ಟು-35000. ಹುದ್ದೆಗಳಿಗೆ ಅಥಿತಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸಹಮತಿಸಿದ್ದು ಪ್ರಸ್ತುತ ರಾಜ್ಯದ ಸರ್ಕಾರಿ…

Read More

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದಂತ ಕೋಟ್ಯಂತರ ಹಣ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಇಂದು ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ಮೂಲಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವಂತ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಯ ಮೇಲೆ ಎಸ್ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಇಬ್ಬರು ಆರೋಪಿಗಳ ಜೊತೆಗೆ ಸ್ಥಳ ಮಹಜರನ್ನು ಎಸ್ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವಂತ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಯ ಮೇಲೆ ದಾಳಿ ನಡೆಸಿರುವಂತ ಎಸ್ಐಟಿ ಅಧಿಕಾರಿಗಳು ಡಿಜಿಟಲ್ ಎವಿಡೆನ್ಸ್ ಗಾಗಿ ಕಚೇರಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ತನಿಖೆಯನ್ನು ಚುರುಕುಗೊಳಿಸಿದ್ದಂತ ಎಸ್ಐಟಿ ಅಧಿಕಾರಿಗಳು ನಿಗಮದ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದರು. ಅಲ್ಲದೇ ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಮೂಲಕ ತಮ್ಮ ವಶಕ್ಕೆ ಪಡೆದಿದ್ದಾರೆ. ಈಗ ನಿಗಮದ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. https://kannadanewsnow.com/kannada/wont-be-surprised-if-siddaramaiah-govt-brands-peddler-as-innocent-just-because-he-is-brother-bjp/ https://kannadanewsnow.com/kannada/case-registered-against-dr-sudhakar-for-misusing-state-governments-letterhead/

Read More

ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಜೂನ್ 2 ರಿಂದ ಆಯೋಜಿಸಲಾಗುತ್ತಿರುವ ಟಿ 20 ವಿಶ್ವಕಪ್ ( T20 World Cup ) ಅನ್ನು ಡಿಡಿ ಫ್ರೀ ಡಿಶ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರ ಮಾಡುವುದಾಗಿ ಪ್ರಸಾರ ಭಾರತಿ ಇಂದು ಪ್ರಕಟಿಸಿದೆ. ದೂರದರ್ಶನವು ಹಲವಾರು ಪ್ರಮುಖ ಜಾಗತಿಕ ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಪ್ರಸಾರದೊಂದಿಗೆ ಟಿ 20 ವಿಶ್ವ ಕಪ್ ನ ಉನ್ನತ ಮಟ್ಟದ ಪ್ರಸಾರವನ್ನು ಅನುಸರಿಸುತ್ತದೆ. ಇದರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್ 2024 (ಜುಲೈ 26-ಆಗಸ್ಟ್ 11, 2024), ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್ (ಆಗಸ್ಟ್ 28 ರಿಂದ ಸೆಪ್ಟೆಂಬರ್ 8, 2024), ಭಾರತ ವಿರುದ್ಧ ಜಿಂಬಾಬ್ವೆ (ಜುಲೈ 6 ರಿಂದ ಜುಲೈ 1, 2024) ಮತ್ತು ಭಾರತ ವಿರುದ್ಧ ಶ್ರೀಲಂಕಾ (ಜುಲೈ 27 ರಿಂದ ಆಗಸ್ಟ್ 7, 2024) ಮತ್ತು ಫ್ರೆಂಚ್ ಓಪನ್ 2024 ರ ಮಹಿಳಾ ಮತ್ತು ಪುರುಷರ ಫೈನಲ್ಸ್ನ ನೇರ ಪ್ರಸಾರ ಮತ್ತು ಮುಖ್ಯಾಂಶಗಳು ಸೇರಿವೆ. ಪ್ರಸಾರ ಭಾರತಿ ಸಿಇಓ ಗೌರವ್ ದ್ವಿವೇದಿ…

Read More

ಬೆಂಗಳೂರು: ಕಳೆದ 24 ವರ್ಷದಿಂದ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅನುಕಂಪದ ಆಧಾರದ ನೌಕರಿಗೆ ಸೇರಿದ್ದಂತ ಅವರು ಸಹಾಯ ಆಡಳಿತಾಧಿಕಾರಿಯಾಗಿಯೂ ಕೆಲಸ ಮಾಡ್ತಿದ್ದರು. ಆದ್ರೇ 24 ವರ್ಷಗಳ ಬಳಿಕ ಸುಳ್ಳಿ ಆದಾಯ ಪ್ರಮಾಣ ಪತ್ರ ನೀಡಿದ ಕಾರಣಕ್ಕೆ ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದಂತ ಡಿ.ರಂದೀಪ್ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಆರ್. ವಾಣಿ, ಸಹಾಯಕ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯ ಸೌಧ, ಬೆಂಗಳೂರು ಇವರು ಅಕ್ರಮವಾಗಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೇಮಕಾತಿ ಪಡೆದಿರುತ್ತಾರೆಂಬ ಎಂದು ಸಿ. ಆರ್. ಮಂಜುನಾಥ ಹಾಸನ ಶಿವಣ್ಣ ಕೆ.ಹೆಚ್. ಮತ್ತು ಮಂಜುನಾಥ ನಿಲಸೋಗೆ ಬೆಂಗಳೂರು ಇವರುಗಳು ಮೇಲೆ ಓದಲಾದ (1) ಮತ್ತು (2)ರಲ್ಲಿ ದೂರು ಸಲ್ಲಿಸಿದ್ದು ಸದರಿ ದೂರಿಗೆ ಸಂಬಂಧಿಸಿದಂತೆ ಮುಖ್ಯ ಜಾಗೃತಾಧಿಕಾರಿಗಳು, ಜಾಗೃತಕೋಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರು…

Read More

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council -ICC) ಸೋಮವಾರ ಪುರುಷರ ಟಿ 20 ವಿಶ್ವಕಪ್ 2024 ಗಾಗಿ ( Men’s T20 World Cup 2024 ) 11.25 ಮಿಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಘೋಷಿಸಿದೆ. “ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರ ವಿಜೇತರು ಕನಿಷ್ಠ 2.45 ಮಿಲಿಯನ್ ಡಾಲರ್ ಪಡೆಯಲಿದ್ದಾರೆ – ಇದು ಈವೆಂಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಹುಮಾನದ ಮೊತ್ತವಾಗಿದೆ” ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪಂದ್ಯಾವಳಿಯ ಒಂಬತ್ತನೇ ಆವೃತ್ತಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ ಒಂಬತ್ತು ಸ್ಥಳಗಳಲ್ಲಿ 28 ದಿನಗಳ ಅವಧಿಯಲ್ಲಿ 20 ತಂಡಗಳು ಭಾಗವಹಿಸಲಿದ್ದು, ಇದು ಈ ರೀತಿಯ ಅತಿದೊಡ್ಡ ಘಟನೆಯಾಗಿದೆ. ರನ್ನರ್ ಅಪ್ ಸ್ಥಾನ ಪಡೆಯುವವರು ಕನಿಷ್ಠ 1.28 ಮಿಲಿಯನ್ ಡಾಲರ್ ಪಡೆಯಲಿದ್ದು, ಸೆಮಿಫೈನಲ್ನಲ್ಲಿ ಸೋತ ತಂಡಗಳು ತಲಾ 787,500 ಡಾಲರ್ ಪಡೆಯಲಿದ್ದಾರೆ. ಎರಡನೇ ಸುತ್ತನ್ನು ದಾಟಲು ವಿಫಲವಾದ ತಂಡಗಳು ತಲಾ $ 382,500 ಮತ್ತು ಒಂಬತ್ತನೇ…

Read More

ಮುಂಬೈ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲಿ ಪ್ರತಿಪಕ್ಷ ಇಂಡಿ ಮೈತ್ರಿಕೂಟವು ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ. ಜೂನ್ 1 ರಂದು ಕೊನೆಗೊಂಡ ಏಳು ಹಂತಗಳ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ರಿಂದ ನಡೆಯಲಿದೆ. ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ನೇತೃತ್ವದ ಹಲವಾರು ವಿರೋಧ ಪಕ್ಷಗಳನ್ನು ಒಳಗೊಂಡಿರುವ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಇಂಡಿಯಾ) ಪ್ರಧಾನಿ ಅಭ್ಯರ್ಥಿಯ ಬಗ್ಗೆ ಕೇಳಿದಾಗ, “ನಾವು ಪ್ರಧಾನಿ ಹುದ್ದೆಗೆ ಅನೇಕ ಅಭ್ಯರ್ಥಿಗಳನ್ನು ಹೊಂದಿದ್ದೇವೆ. ಆದರೆ ಬಿಜೆಪಿ ಬಗ್ಗೆ ಏನು? ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲಿ ಇಂಡಿ ಮೈತ್ರಿಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿದೆ. ವಿರೋಧ ಬಣದ ಎಲ್ಲಾ ನಾಯಕರು ದೆಹಲಿಯಲ್ಲಿ ಸಭೆ ಸೇರುತ್ತಾರೆ ಮತ್ತು ಅಲ್ಲಿ ಘೋಷಣೆ ಮಾಡಲಾಗುವುದು ಎಂದು ಶಿವಸೇನೆ (ಯುಬಿಟಿ) ರಾಜ್ಯಸಭಾ ಸಂಸದ ಪ್ರತಿಪಾದಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ರಾಮ್ ಲಲ್ಲಾ’ ಹೆಸರಿನಲ್ಲಿ…

Read More

ಬೆಂಗಳೂರು: ಮತದಾನೋತ್ತರ ಸಮೀಕ್ಷೆ ಬಗ್ಗೆ ಕಾಂಗ್ರೆಸ್ ಮಾಡಿರುವ ಟೀಕೆಯ ಬಗ್ಗೆ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು; ಇದು ಮೋದಿ ಎಕ್ಸಿಟ್ ಪೋಲ್, ಮಿಡಿಯಾ ಎಕ್ಸಿಟ್ ಪೋಲ್ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ನಾಳೆ ಮಧ್ಯಾಹ್ನದವರೆಗೆ ಅವರು ಸಂತೋಷವಾಗಿರಲಿ. ಅವರ ಸಂತೋಷಕ್ಕೆ ನಾನು ಯಾಕೆ ಅಡ್ಡಿಪಡಿಸಲಿ, ಅವರು ಸಂತೋಷವಾಗಿರಲಿ ಬಿಡಿ ಎಂದರು. ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕೊನೆಪಕ್ಷ 25 ಸೀಟು ಗೆಲ್ಲುತ್ತೇವೆ. ಮತಗಟ್ಟೆ ಸಮೀಕ್ಷೆ ಇದನ್ನೇ ಹೇಳುತ್ತಿದೆ. ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದರು ಕುಮಾರಸ್ವಾಮಿ ಅವರು. ದೇಶದಲ್ಲಿ ಎನ್ ಡಿಎ ಪರವಾದ ಅಲೆ ಇದೆ. ಮೂರನೇ ಬಾರಿಗೆ ಮೋದಿ ಸರ್ಕಾರ ಬರುವುದು ಖಚಿತ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಉತ್ತಮ ಫಲಿತಾಂಶ ನೀಡಲಿದೆ. ಅದನ್ನೇ ಮತಗಟ್ಟೆ ಸಮೀಕ್ಷೆ ಹೇಳಿದೆ. ವಿಧಾನಸಭೆ ಚುನಾವಣೆ ನಂತರ ಕೇಂದ್ರದ ಗೃಹ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮೈತ್ರಿಗೆ ಒಪ್ಪಿದರು. ಎರಡೂ ಪಕ್ಷಗಳ ಮೈತ್ರಿಯಲ್ಲಿ ಒಟ್ಟಾಗಿ ಹೋಗಬೇಕೆಂದು ಸಲಹೆ ನೀಡಿದರು. ಮೈತ್ರಿಯಾಗಿ…

Read More

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ವಿಚಾರ ಏನಿದ್ದರೂ ತನಿಖೆ ಮಾಡುತ್ತಿರುವ ಎಸ್ ಐಟಿ ಹಾಗೂ ಸರಕಾರಕ್ಕೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ಪ್ರಜ್ವಲ್ ಘಟನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಒಂದು ತಿಂಗಳಿಂದ ನೋಡಿದ್ದೇನೆ. ಅವರು ವಿದೇಶದಿಂದ ವಾಪಸ್ ಬಂದು ಎಸ್ ಐಟಿ ಮುಂದೆ ಹಾಜರಾಗಬೇಕು ಎಂದು ನಾನು ಮತ್ತು ದೇವೇಗೌಡರು ಹೇಳಿದ್ದೆವು. ಜತೆಗೆ ದೇವೇಗೌಡರು ಕೊನೆಯ ಎಚ್ಚರಿಕೆ ನೀಡಿದ್ದರು. ನಮ್ಮ ಮಾತಿನಂತೆ ಅವರು ಬಂದು ಹಾಜರಾಗಿದ್ದಾರೆ. ಅಲ್ಲಿಗೆ ನಮ್ಮ ಕುಟುಂಬದ ಪಾತ್ರ ಮುಗಿಯಿತು. ಇನ್ನು ಎಸ್ ಐಟಿ ಮತ್ತು ಸರ್ಕಾರದ್ದೇ ಜವಾಬ್ದಾರಿ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಈಗ ಅವರು ವಾಪಸ್ ಬಂದಿದ್ದಾರೆ. ತನಿಖೆ ನಡೆಯುತ್ತಿದೆ. ಅವರು ಗೆದ್ದ ಮೇಲೆ ಏನೂ ಅಂತ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು. ಭಾವಾನಿ ರೇವಣ್ಣ ಅವರಿಗೆ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಕಾನೂನು ಪ್ರಕಾರ ಭವಾನಿ ರೆವಣ್ಣ…

Read More

ಬೆಂಗಳೂರು: ಕಳೆದ ರಾತ್ರಿ ಇಷ್ಟು ಮಳೆ ಸುರಿದರೂ ಮಾನ್ಯ ಡಿಸಿಎಂ ಸಾಹೇಬರು ಯಾಕೆ ಸಿಟಿ ರೌಂಡ್ಸ್ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಆಗಿದ್ದರೂ ಅವರು ಇನ್ನೂ ಯಾಕೋ ನಗರ ಪ್ರದಕ್ಷಿಣೆಗೆ ಹೋಗಿಲ್ವಾ? ಶೋ ಕೊಡುವುದಕ್ಕೆ ಕಳೆದ ವಾರ ಹೋಗಿದ್ದರಲ್ಲ? ಆಗ ಏನು ಕ್ರಮ ಕೈಗೊಂಡಿದ್ದರು ಇವರು? ಕೆರೆಗಳನ್ನು ನುಂಗಿ ನೀರು ಕುಡಿದರಲ್ಲಾ..? ಯಾವ ಪುರುಷಾರ್ಥಕ್ಕೆ ನಗರ ಪ್ರದಕ್ಷಿಣೆ ಮಾಡುತ್ತಾರೆ? ಡಿಸಿಎಂ ಅಂತಿದ್ರಪ್ಪ.. ಹೋಲ್ ನೈಟ್ ಓಡಾಡ್ತೀನಿ ಅಂತ. ಅದೇನು ನಿದ್ದೆ ಮಾಡ್ತಾ ಇದ್ರೊ ಗೊತ್ತಿಲ್ಲ ಎಂದು ಕುಟುಕಿದರು ಮಾಜಿ ಮುಖ್ಯಮಂತ್ರಿಗಳು. https://kannadanewsnow.com/kannada/cm-siddaramaiah-directly-responsible-for-money-laundering-in-valmiki-development-corporation-hdk/ https://kannadanewsnow.com/kannada/wont-be-surprised-if-siddaramaiah-govt-brands-peddler-as-innocent-just-because-he-is-brother-bjp/

Read More