Author: kannadanewsnow09

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೋಸ್ಟ್ ವಾಂಟೆಂಡ್ ನಕ್ಸಲರು ಎಂಬುದಾಗಿಯೇ ಹೇಳಲಾಗುತ್ತಿದ್ದಂತ ಆರು ನಕ್ಸಲರು ಶರಣಾಗತಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕಾಡು ತೊರೆದು, ನಾಡಿಗೆ ಬರಲು ನಿರ್ಧರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೋಸ್ಟ್ ವಾಂಟೆಂಡ್ ಆರು ನಕ್ಸಲರು ಜಿಲ್ಲಾಡಳಿತ ಮುಂದೆ ಶರಣಾಗಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಶಾಂತಿಗಾಗಿ ನಾಕರಿಕ ವೇದಿಗೆಕೆ ಪತ್ರವನ್ನು ಕೂಡ ನಕ್ಸರು ಬರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ಹೊರಟಿರುವಂತ ಆರು ನಕ್ಸಲರು ಕರ್ನಾಟಕ, ಕೇರಳ, ಆಂಧ್ರಪ್ರದೇಶದಲ್ಲಿನ ಮೋಸ್ಟ್ ವಾಂಟೆಂಡ್ ನಕ್ಸಲರಾಗಿದ್ದಾರೆ. ಯಾರು ಯಾರು ನಕ್ಸಲರು ಶರಣಾಗಲು ನಿರ್ಧಾರ.? ಕರ್ನಾಟಕದಲ್ಲಿ ಮೋಸ್ಟ್ ವಾಂಟೆಂಡ್ ನಕ್ಸಲ್ ಎಂದೇ ಕರೆಸಿಕೊಳ್ಳುವಂತ ತುಂಗಾ ದಳದ ನಾಯಕಿ ಮುಂಡಗಾರು ಲತಾ, ಸುಂದರಿ, ನತಾಕಿ, ದಕ್ಷಿಣ ಭಾರತದ ಮೋಸ್ಟ್ ವಾಂಟೆಂಡ್ ನಕ್ಸಲ್ ಜೀಶಾ, ಆಂಧ್ರಪ್ರದೇಶದ ಕೆ. ವಸಂತ, ಮಾರೆಪ್ಪ ಆರೋಲಿ ಎಂಬುವರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ. https://kannadanewsnow.com/kannada/kolar-youth-murder-case-four-accused-arrested/ https://kannadanewsnow.com/kannada/breaking-yuvanidhi-special-registration-drive-in-all-colleges-in-the-state-govt/

Read More

ಕೋಲಾರ: ಜಿಲ್ಲೆಯ ನೂರ್ ನಗರದಲ್ಲಿ ಯುವಕ ಉಸ್ಮಾನ್ ಎಂಬಾತನನ್ನು ಕುಟುಂಬಸ್ಥರು, ಸಂಬಂಧಿಕರೇ ಅಟ್ಟಾಡಿಸಿಕೊಂಡು ಏರಿಯಾದಲ್ಲಿ ಮರ್ಡರ್ ಮಾಡಿದ್ದರು. ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಕೋಲಾರದ ಗಲ್ ಪೇಟೆ ಠಾಣೆಯ ಪೊಲೀಸರು, ಉಸ್ಮಾನ್ ಎಂಬಾತನನ್ನು ಕಳೆದ ರಾತ್ರಿ ಅಟ್ಟಾಡಿಸಿಕೊಂಡು ಮರ್ಡರ್ ಮಾಡಿದ್ದ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಫ್ರೀದ್, ಜಮೀರ್, ನಜೀರ್, ಸಲ್ಮಾನ್ ಪಾಷಾ ಎಂಬುದಾಗಿ ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಉಸ್ಮಾನ್ ಎಂಬಾತ ಜಬೀನಾ ಎಂಬಾಕೆಯನ್ನು ವಿವಾಹವಾಗಿದ್ದನು. ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಂತ ಜಬೀನಾ ಆರೋಗ್ಯ ವಿಚಾರಿಸಲು ಬಂದಿದ್ದಂತ ಸಿಮ್ರಾನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಉಸ್ಮಾನ್ ಆರೋಪಿಸಿದ್ದನು. ಇದೇ ಕಾರಣದಿಂದಾಗಿ ಗಂಡನ ಮನೆಯನ್ನು ತೊರಿದ್ದಂತ ಜಬೀನಾ, ತವರು ಮನೆಗೆ ತೆರಳಿದ್ದಳು. ನಿನ್ನೆ ಪತ್ನಿಯನ್ನು ಮಾತನಾಡಿಸಿಕೊಂಡು ಬರೋದಕ್ಕೆ ತೆರಳಿದ್ದಾಗ ಜಬೀನಾ ಸಂಬಂಧಿಕರು, ಕುಟುಂಬಸ್ಥರು ಏರಿಯಾದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ, ಉಸ್ಮಾನ್ ಕೊಲೆಗೈದಿದ್ದರು. https://kannadanewsnow.com/kannada/opposition-should-not-make-baseless-allegations-siddaramaiah/ https://kannadanewsnow.com/kannada/breaking-yuvanidhi-special-registration-drive-in-all-colleges-in-the-state-govt/

Read More

ದಾವಣಗೆರೆ : ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಎಂ. ಬಿ .ಎ ಗ್ರೌಂಡ್ ಹೆಲಿಪ್ಯಾಡ್ ಆವರಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದಲ್ಲಿ 60% ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ದರ ಹೆಚ್ಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಕಾಲದಲ್ಲಿಯೂ ಬಸ್ ದರಗಳು ಏರಿಕೆಯಾಗಿದೆ. ನೌಕರರ ವೇತನ, ಡೀಸಲ್ ಬೆಲೆ ಏರಿಕೆ,ಬಸ್ಸುಗಳನ್ನು ಕೊಳ್ಳುವುದು ಹಾಗೂ ಹಣದುಬ್ಬವೂ ಆಗಿದೆ. ವರ್ಷಗಳ ಹಿಂದೆ ಬೆಲೆ ಹೆಚ್ಚಿಸಲಾಗಿದ್ದು, ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎನ್ನುವ ಕಾರಣ ಹಾಗೂ ಬೇಡಿಕೆಯೂ ಇದ್ದುದ್ದರಿಂದ ಬೆಲೆಯೇರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕಾಲದಲ್ಲಿಯೂ ಬೆಲೆ ಹೆಚ್ಚಿಸಲಿಲ್ಲವೇ? ಕೇಂದ್ರ ಸರ್ಕಾರ ರೈಲ್ವೆ…

Read More

ಮೈಸೂರು: ಕಾಂಗ್ರೆಸ್ ಸರಕಾರದಲ್ಲಿ ಮನೆ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು; ಲಂಚದ ಪ್ರಮಾಣ ಶೇ.60 ತಲುಪಿದೆ ಎಂದು ಆರೋಪಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ಕಾಂಗ್ರೆಸ್ ಸರಕಾರದಲ್ಲಿ ಶೇ.60 ರಷ್ಟು ಲಂಚ, ಕಮೀಶನ್ ವಸೂಲಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದರು. ಬಡವರಿಗೆ ಮನೆ ಹಂಚಿಕೆಯಲ್ಲೂ ಲಂಚ ಹೊಡೆಯಲಾಗುತ್ತಿದೆ‌. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದರು. ಈಗ ವಿಧಾನಸೌಧದಲ್ಲಿ ಸಚಿವರೇ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವ ಜಯತೇ ಎಂದರೆ ಇದೇನಾ? ಇವರ ಸತ್ಯಮೇವ ಜಯತೆ ಬರೀ ಜಾಹೀರಾತಿಗೆ ಸೀಮಿತವಾಗಿದೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು. ಗಾಂಧೀಜಿ ಅವರ ಸತ್ಯಮೇವ ಜಯತೆ ಮಾತಿನಂತೆ ಸಿದ್ದರಾಮಯ್ಯ ಅವರು ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರೇ ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ರಾಜ್ಯದ…

Read More

ಬೆಂಗಳೂರು: ಒಳಮೀಸಲಾತಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು ಪ್ರಾಯೋಗಿಕ ಮಾಹಿತಿ ಇಲ್ಲದಿರುವುದರಿಂದ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಚುನಾವಣೆಗಳು ನಡೆದು ಐದು ವರ್ಷ ಕಳೆದಿರುವುದು ವಾಸ್ತವ ಸಂಗತಿ. ಆದೆ ಈ ವಿಷಯ ನ್ಯಾಯಾಲಯದ ಮುಂದೆ ಹೋಗಿದೆ. ಪ್ರಕರಣ ಅಲ್ಲಿಯೇ ಇತ್ಯರ್ಥವಾಗಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ನಾವು ತಯಾರಾಗಿದ್ದೇವೆ. ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ಒಳಮೀಸಲಾತಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು ಪ್ರಾಯೋಗಿಕ ಮಾಹಿತಿ ಇಲ್ಲದಿರುವುದರಿಂದ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಇತರೆ ಸಚಿವರು ಊಟಕ್ಕೆ ಸೇರುವುದೇ ತಪ್ಪೇ? ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ. ಈಗಾಗಲೇ ಹೇಳಿದಂತೆ ಅಲ್ಲಿ…

Read More

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಸಾರಿಗೆ ಬಸ್ ಪ್ರಯಾಣದ ದರ ಶೇ.15ರಷ್ಟು ಹೆಚ್ಚಾಗಿದೆ. ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇದರ ನಡುವೆ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಿಎಂ ಸಿದ್ಧರಾಮಯ್ಯ ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, 60% ಕಮಿಷನ್ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪ‌ ಆಧಾರ ರಹಿತ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ. ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡಬಾರದು ಎಂದಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ದರ ಹೆಚ್ಚಿಸಿರುವುದು ಇದು ಮೊದಲಲ್ಲ. ಎಲ್ಲಾ ಕಾಲದಲ್ಲಿಯೂ ಬಸ್ ದರಗಳು ಏರಿಕೆಯಾಗಿದೆ. ನೌಕರರ ವೇತನ, ಡೀಸಲ್ ಬೆಲೆ ಏರಿಕೆ, ಬಸ್ಸುಗಳನ್ನು ಕೊಳ್ಳುವುದು ಹಾಗೂ ಹಣದುಬ್ಬವೂ ಆಗಿದೆ. ವರ್ಷಗಳ ಹಿಂದೆ ಬೆಲೆ ಹೆಚ್ಚಿಸಲಾಗಿದ್ದು, ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎನ್ನುವ…

Read More

ಮೈಸೂರು: ಆತ್ಮವಿಶ್ವಾಸ, ಶ್ರಮ ಇದ್ದಲ್ಲಿ ಯಶಸ್ಸು ದೊರೆಯುತ್ತದೆ. ಹಾಗಾಗಿ ಕೆಲಸದಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಗೆರೆ ಗೋಪಾಲ್ ಅವರು ಹೇಳಿದರು. ಪರಿಷತ್ ಸಭಾಂಗಣದಲ್ಲಿಂದು ಎಸ್.ಎಸ್. ಕಲಾ ಸಂಗಮ ಟ್ರಸ್ಟ್ ವತಿಯಿಂದ ನಡೆದ ಅಮ್ಮ ಪ್ರಶಸ್ತಿ ಪ್ರದಾನ ಮತ್ತು ಸಂಕ್ರಾಂತಿ ಸಂಭ್ರಮ ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಗುರಿ ನಮ್ಮ ಬೆನ್ನ ಹಿಂದೆ ಇರುತ್ತದೆ ಅದನ್ನು ತಲುಪುವ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾದ ಡಾ. ನಾಗರಾಜ್ ವಿ. ಬೈರಿ ಅವರು ಮಾತನಾಡಿ, ಇಂದು ಮೊಬೈಲ್ ಯುಗ ಆಗಿದ್ದು, ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಹಿತಿ ಗೊರೂರು ಪಂಕಜ ಸೇರಿದಂತೆ ಹತ್ತು ಮಂದಿ ಸಾಧಕರಿಗೆ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕಿ ಕಮಲಾ ಅನಂತರಾವ್, ಸಾಹಿತಿ ಮಹೇಂದ್ರ ಕುಡ್ರಿ, ಕಂದಾಯ ಪರಿವೀಕ್ಷರಾದ ಹೆಚ್.ನಂಜಪ್ಪ, ಅಧಿಕ ರಕ್ತದಾನಿ ತ್ಯಾಗರಾಜ್,…

Read More

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ವಾಹನವು ರಸ್ತೆಯಿಂದ ಜಾರಿ ನದಿಗೆ ಬಿದ್ದ ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಚಾಲಕ ಸೇರಿದಂತೆ ಇಬ್ಬರು ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಟಿಐ ಪ್ರಕಾರ, ಪದ್ದಾರ್ ಪ್ರದೇಶದಲ್ಲಿ ಈ ದುರಂತ ಘಟನೆ ಸಂಭವಿಸಿದ್ದು, ವಾಹನವು ರಸ್ತೆಯಿಂದ ಜಾರಿ, ಬೆಟ್ಟದಿಂದ ಉರುಳಿ ನೀರಿಗೆ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದಲ್ಲಿ ಭಾಗಿಯಾಗಿರುವ ವಾಹನವನ್ನು ಪೊಲೀಸರು ಇನ್ನೂ ಗುರುತಿಸಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪಘಾತದಲ್ಲಿ ಪ್ರಾಣಹಾನಿ ಸಂಭವಿಸಿರುವುದಕ್ಕೆ ಉಧಂಪುರ ಸಂಸದ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ದುಃಖ ವ್ಯಕ್ತಪಡಿಸಿದ್ದಾರೆ. “ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ದುಃಖವಾಗಿದೆ. ಚಾಲಕ ಸೇರಿದಂತೆ ಇತರ ಇಬ್ಬರು ವ್ಯಕ್ತಿಗಳನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ದುಃಖಿತ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪಗಳು” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಪಘಾತದ ವರದಿಯನ್ನು ಸ್ವೀಕರಿಸಿದ ಕೂಡಲೇ ಕಿಶ್ತ್ವಾರ್ ಜಿಲ್ಲಾಧಿಕಾರಿ ರಾಜೇಶ್ ಕುಮಾರ್ ಶಾವನ್…

Read More

ಶನಿವಾರ ಆಂಜನೇಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಈ ಆರು ಪವರ್ ಫುಲ್ ಮಂತ್ರಗಳನ್ನು ಹೇಳಿದರೆ ನಿಮ್ಮ ಕಷ್ಟಗಳು ದೂರವಾಗುವುದು. ಆ ಮಂತ್ರಗಳು ಯಾವುವು ನೋಡಿ.ಓಂ ಹನುಮತೇ ನಮಃ- ಈ ಮಂತ್ರ ಹೇಳುವುದರಿಂದ ನಿಮಗೆ ಕಾನೂನಿನ ವಿವಾದಗಳು, ಸಂಕಷ್ಟಗಳಿದ್ದರೆ ನಿವಾರಣೆಯಾಗುವುದು. ಓಂ ಹಂ ಹನುಮತೇ ರುದ್ರಾತ್ಮಕಾಯಂ ಹಮ್ ಫಟ್- ಈ ಮಂತ್ರವು ನಿಮ್ಮನ್ನು ಮೃತ್ಯುಭಯದಿಂದ ದೂರ ಮಾಡುತ್ತದೆ. ಅಕಾಲ ಮೃತ್ಯು ಭಯವಿದ್ದರೆ ತಪ್ಪದೇ ಈ ಮಂತ್ರವನ್ನು ಜಪಿಸಿ. ಓಂ ಹಂ ಪವನ ನಂದನಾಯೇ ಸ್ವಾಹ- ಈ ಮಂತ್ರವನ್ನು ಹೇಳುವುದರಿಂದ ಹನುಮಂತನ ಆಶೀರ್ವಾದ ಪಡೆಯುತ್ತೀರಿ. ವಿಶೇಷವಾಗಿ ಇದನ್ನು ಬ್ರಹ್ಮಚಾರಿಗಳು ಹೇಳಿದರೆ ಉತ್ತಮ. ಓಂ ನಮೊ ಹರಿ ಮರ್ಕಟ ಮರ್ಕಟಾಯೇ ಸ್ವಾಹ- ಈ ಮಂತ್ರವನ್ನು ಹೇಳುವುದರಿಂದ ಶತ್ರುಭಯ ನಾಶವಾಗುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ…

Read More

ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗೀಯ ರೈಲ್ವೆ ನೂತನ ವ್ಯವಸ್ಥಾಪಕರಾಗಿ ಬೇಲಾ ಮೀನಾ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ಮೂಲಕ ಹುಬ್ಬಳ್ಳಿಯ ವಿಭಾಗೀಯ ನೈರುತ್ಯ ರೈಲ್ವೆಯ ವ್ಯವಸ್ಥಾಪಕರಾಗಿ ಬೇಲಾ ಮೀನಾ ಗದ್ದುಗೆಗೇರಿದ್ದಾರೆ. ಬೇಲಾ ಮೀನಾ ಅವರು ಇಂದು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ (DRM) ಅಧಿಕಾರ ಸ್ವೀಕರಿಸಿದರು. ಇವರು 1996ರ ಬ್ಯಾಚ್‌ನ ಭಾರತೀಯ ರೈಲ್ವೆ ಸಂಚಾರ ಸೇವೆಯ (IRTS) ಅಧಿಕಾರಿಯಾಗಿದ್ದು, 1997ರ ಸೆಪ್ಟೆಂಬರ್ 4ರಂದು ಭಾರತೀಯ ರೈಲ್ವೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭ ಮಾಡಿದರು. 1999 ರಿಂದ 2017ರ ವರೆಗೆ ಮುಂಬಯಿ ಕೇಂದ್ರಿತ ಪಶ್ಚಿಮ ರೈಲ್ವೆಯ (Western Railway) ವಿಭಾಗದಲ್ಲಿ ವಾಣಿಜ್ಯ (Commercial) ಹಾಗೂ ಪರಿಚಾಲನಾ (Operating) ವಿಭಾಗದಲ್ಲಿ ಒಟ್ಟು 6 ವರ್ಷ ಸೇವೆ ಸಲ್ಲಿಸಿ ಮಹತ್ತರ ಕಾರ್ಯ ಸಾಧನೆ ಮಾಡಿದ್ದಾರೆ. ಈ ವಿಭಾಗದ ಬೋರಿವೇಲಿ, ಖಾರ್ ಮತ್ತು ಮಾತುಂಗಾ ರೋಡ್ ನಿಲ್ದಾಣಗಳಿಗೆ ಅತ್ಯಾಧುನಿಕ ಸ್ಫರ್ಶ ನೀಡಿ, ಅವುಗಳ ಆಕರ್ಷಣೆ. ಸ್ವಚ್ಛತೆ ಹಾಗೂ ಸೌಂದರೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಈ…

Read More