Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಗಳಿಕೆ ರಜೆ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಆದೇನು ಅಂತ ಮುಂದೆ ಓದಿ. ಈ ಕುರಿತಂತೆ ಆರ್ಥಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೇರ್ಪಡೆ ಆದೇಶವನ್ನು ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 21.12.2023 ರ ಸರ್ಕಾರಿ ಆದೇಶ ಸಂಖ್ಯೆ ಆಇ 10(ಇ) ಸೇನಿಸೇ 2023 ಮತ್ತು ದಿನಾಂಕ 17.1.2025 ರ ಸರ್ಕಾರಿ ಆದೇಶ ಸಂಖ್ಯೆ ಆಇ 03 ಸೇನಿಸೇ 2024 ರ ಆದೇಶ ಭಾಗದ ಕೊನೆಯಲ್ಲಿ ಈ ಕೆಳಗಿನವುಗಳನ್ನು ಸೇರಿಸಿ ಓದಿಕೊಳ್ಳತಕ್ಕದ್ದು ಎಂಬುದಾಗಿ ಹೇಳಿದ್ದಾರೆ. ಗಳಿಕೆ ರಜೆ ನಗದೀಕರಣಕ್ಕೆ ಮಂಜೂರಾತಿ ನೀಡುವ ಆದೇಶವನ್ನು ಯಾವುದಾದರೂ ಕಾರಣದಿಂದ ನಿಗಧಿತ ಬ್ಲಾಕ್ ಅವಧಿಯಲ್ಲಿ ಹೊರಡಿಸಲು ಸಾಧ್ಯವಾಗದಿದ್ದರೆ ಸಂಬಂಧಿತ ಪ್ರಾಧಿಕಾರವು ಅಂತಹ ಆದೇಶವನ್ನು ಬ್ಲಾಕ್ ಅವಧಿ ಮುಕ್ತಾಯಗೊಂಡ ನಂತರವೂ ಹೊರಡಿಸಬಹುದು. ಆದರೆ, ಗಳಿಕೆ ರಜೆ ನಗದೀಕರಣದ ಆರ್ಥಿಕ ಪ್ರಯೋಜನವನ್ನು ಸಂಬಂಧಿತ ಆರ್ಥಿಕ ವರ್ಷವು ಅಂತ್ಯಗೊಳ್ಳುವ ಮುನ್ನ ಪಡೆಯತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ. https://kannadanewsnow.com/kannada/bjp-central-disciplinary-committee-issues-show-cause-notice-to-mla-yatnal/ https://kannadanewsnow.com/kannada/haveri-people-shocked-by-the-man-who-survived-when-he-was-brought-home-as-dead-in-hospital/
ಬೆಂಗಳೂರು: ಬಿಜೆಪಿ ಪಕ್ಷದ ವಿರುದ್ಧ, ನಾಯಕರ ವಿರುದ್ಧ ಬಹಿರಂಗವಾಗಿ ವಾಕ್ ಸಮರ ನಡೆಸುತ್ತಿದ್ದಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿ ಶಾಕ್ ನೀಡಲಾಗಿದೆ. ಕೇಂದ್ರೀಯ ಶಿಸ್ತು ಸಮಿತಿಯಿಂದ ಮತ್ತೊಂದು ಶೋಕಾಸ್ ನೋಟಿಸ್ ನೀಡಲಾಗಿದ್ದು, 72 ಗಂಟೆಯಲ್ಲಿ ಉತ್ತರಿಸುವಂತೆ ಡೆಡ್ ಲೈನ್ ನೀಡಲಾಗಿದೆ. ಈ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕೇಂದ್ರೀಯ ಶಿಸ್ತು ಸಮಿತಿಯಿಂದ ನೀಡಿರುವಂತ ಶೋಕಾಸ್ ನೋಟಿಸ್ ನಲ್ಲಿ, ಭಾರತೀಯ ಜನತಾ ಪಕ್ಷದ ಸಂವಿಧಾನ ಮತ್ತು ಅದರ ಅಡಿಯಲ್ಲಿನ ನಿಯಮಗಳಲ್ಲಿ ಪ್ರತಿಪಾದಿಸಿರುವ ಶಿಸ್ತು ಸಂಹಿತೆಗೆ ಸ್ಪಷ್ಟ ವಿರುದ್ಧವಾಗಿ ನಿಮ್ಮ ನಿರಂತರ ವಾಗ್ದಾಳಿ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯನ್ನು ಪಕ್ಷ ಗಮನಿಸಿದೆ ಎಂದಿದೆ. ಈ ಹಿಂದಿನ ಶೋಕಾಸ್ ನೋಟಿಸ್ ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ನಿಮ್ಮ ಭರವಸೆಗಳ ಹೊರತಾಗಿಯೂ, ನೀವು ನಿಮ್ಮ ಸ್ವಂತ ಭರವಸೆಗಳನ್ನು ಉಲ್ಲಂಘಿಸುವುದನ್ನು ಮತ್ತು ಉಲ್ಲಂಘಿಸುವುದನ್ನು ಮುಂದುವರಿಸುತ್ತೀರಿ ಎಂಬುದಾಗಿ ಗರಂ ಆಗಿದೆ. ಪಕ್ಷವು ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ…
ಬೆಂಗಳೂರು: ಮುಗಳೊಳ್ಳಿ-ಜಡ್ರಾಮಕುಂಟಿ-ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ: ರೈಲು ಸಂಚಾರ ರದ್ದು: ಫೆ 17 ರಿಂದ 25 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ ಡೈಲಿ ಪ್ಯಾಸೆಂಜರ್ (56906), ಫೆ 18 ರಿಂದ 26 ರವರೆಗೆ ಸೋಲಾಪುರ-ಧಾರವಾಡ ಡೈಲಿ ಪ್ಯಾಸೆಂಜರ್ ಸ್ಪೆಷಲ್, ಫೆ 25 ರಂದು ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್ ಪ್ರೆಸ್ (11415) ಮತ್ತು ಫೆ 26 ರಂದು ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್ ಪ್ರೆಸ್ (11416) ರೈಲುಗಳ ಪ್ರಯಾಣವನ್ನೂ ತಾತ್ಕಾಲಿಕವಾಗಿ ರದ್ದು ರದ್ದುಗೊಳಿಸಲಾಗಿದೆ. ರೈಲುಗಳ ಸಂಚಾರ ಭಾಗಶಃ ರದ್ದು: ಫೆ 16 ರಿಂದ 24 ರವರೆಗೆ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಗದಗ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ವಿಜಯಪುರ ನಿಲ್ದಾಣದ ಬದಲಾಗಿ ಗದಗದಲ್ಲಿ ಕೊನೆಗೊಳ್ಳಲಿದೆ. ಫೆ 17 ರಿಂದ 25 ರವರೆಗೆ…
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿಗೊಳಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅದರಂತೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು. ಈ ಮಸೂದೆಯ ಅಂಶಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆಯ ಜೊತೆಗೆ ರಾಜ್ಯಪಾಲರಿಗೆ ಅಂಕಿತಕ್ಕೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಕಾಯ್ದೆಯನ್ನು ಮರು ರವಾನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ರಾಜ್ಯಪಾಲರು ವಾಪಾಸ್ಸು ಕಳುಹಿಸಿದ್ದಂತ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸುಗ್ರೀವಾಜ್ಞೆಗೆ ಎಲ್ಲಾ ಆಕ್ಷೇಪಣೆಗಳಿಗೆ ಕಾನೂನು ಇಲಾಖೆಯಿಂದ ಸೂಕ್ತ ಸ್ಪಷ್ಟೀಕರಣ ಸಿದ್ಧಪಡಿಸಲಾಗಿದೆ. ಈ ಸ್ಪಷ್ಟೀಕರಣದೊಂದಿಗೆ ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡನ್ನು ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಮರು ರವಾನೆ ಮಾಡಲಾಗಿತ್ತು. ಈಗಾಗಲೇ ಸಿಎಂ ಕಚೇರಿಗೆ ಕಾನೂನು ಇಲಾಖೆಯು ಮೈಕ್ರೋ ಫೈನಾನ್ಸ್ ತಡೆ ಸುಗ್ರೀವಾಜ್ಞೆಗೆ ಸ್ಪಷ್ಟೀಕರಣ ಸಿದ್ಧಪಡಿಸಿ ಸಿದ್ಧರಾಮಯ್ಯ ಅವರ ಅವಗಾಹನೆಗೆ ಕಳುಹಿಸಲಾಗಿತ್ತು. ಈ ಕರಡನ್ನು ಸಿಎಂ ಕಚೇರಿಯಿಂದ ಅಂತಿಮಗೊಳಿಸಿ, ಇಂದು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಈ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ…
ನವದೆಹಲಿ: ನಿರಂತರ ಭಾರೀ ಜನದಟ್ಟಣೆಯ ಹೊರತಾಗಿಯೂ, ಭಾರತೀಯ ರೈಲ್ವೆಯು ನಡೆಯುತ್ತಿರುವ ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರನ್ನು ಕರೆತರುವ ಮೂಲಕ ಮತ್ತು ಅವರ ಮನೆಗೆ ಕರೆದೊಯ್ಯುವ ಮೂಲಕ ಸೇವೆ ಸಲ್ಲಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಯಾಗ್ರಾಜ್ ಪ್ರದೇಶದ ಎಂಟು ವಿವಿಧ ನಿಲ್ದಾಣಗಳಿಂದ ಸುಮಾರು 330 ರೈಲುಗಳು 12 ಲಕ್ಷ 50 ಸಾವಿರ ಪ್ರಯಾಣಿಕರನ್ನು ತಮ್ಮ ಮನೆಗಳಿಗೆ ಕರೆದೊಯ್ದಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟ ಪಡಿಸಿದ್ದಾರೆ. ನೂಕುನುಗ್ಗಲು ಕಡಿಮೆಯಾಗದಿದ್ದರೂ, ಭಾರತೀಯ ರೈಲ್ವೆ ಈ ನಿಲ್ದಾಣಗಳಿಂದ ತಲಾ ಒಂದು ರೈಲನ್ನು ಕೇವಲ 4 ನಿಮಿಷಗಳಲ್ಲಿ ಓಡಿಸುವ ಮೂಲಕ ಭಕ್ತರು ತಮ್ಮ ಪವಿತ್ರ ಸ್ನಾನದ ನಂತರ ಕಾಯಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಿದೆ ಎಂದಿದ್ದಾರೆ. https://twitter.com/AshwiniVaishnaw/status/1888828405354787142 ಮಾಘಿ ಪೂರ್ಣಿಮೆಯ ಮುಂದಿನ ಪವಿತ್ರ ಅಮೃತ ಸ್ನಾನಕ್ಕೆ ಮುಂಚಿತವಾಗಿ, ಈ ರೈಲುಗಳ ಒಂದು ರೇಕ್ ಒಂದೇ ಟ್ರಿಪ್ನಲ್ಲಿ ಸರಾಸರಿ 3780 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಲಯ ಮತ್ತು ವಿಭಾಗೀಯ ರೈಲ್ವೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ ರೈಲ್ವೆ ಮಂಡಳಿಯ…
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ಸಿಡಿದೆದ್ದು ಹೇಳಿಕೆ ನೀಡುತ್ತಿದ್ದಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿಯಿಂದ ಮತ್ತೊಂದು ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಬಿಜೆಪಿಯ ನಾಯಕರು ದೆಹಲಿಯ ಸೋಮಣ್ಣ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬೆನ್ನಲ್ಲೇ, ಶಾಸಕ ಬಸನಗೌಡ ಪಾಟೀಲ್ ಗೆ ಶೋಕಾಸ್ ನೋಟಿಸ್ ನೀಡಿ ಶಾಕ್ ನೀಡಲಾಗಿದೆ. ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಮತ್ತೊಂದು ಶೋಕಾಸ್ ನೀಡಲಾಗಿದ್ದು, ಅದಕ್ಕೆ 72 ಗಂಟೆಯಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಒಂದು ವೇಳೆ ನಿಗದಿತ ಕಾಲಮಿತಿಯಲ್ಲಿ ಉತ್ತರಿಸದೇ ಇದ್ದರೇ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಅಂದಹಾಗೇ ದೆಹಲಿಯಿಂದ ಹೈದರಾಬಾದ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಯಾಣ ಬೆಳೆಸಿದ್ದಾರೆ. ಇದರ ನಡುವೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಮತ್ತೊಂದು ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಈ ಹಿಂದೆಯೂ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಅದಕ್ಕೆ ಅವರು ಕ್ಯಾರೆ ಎನ್ನದೇ ಬಿಜೆಪಿ ಪಕ್ಷದ ವಿರುದ್ಧ ವಾಕ್ ಸಮರ ಮುಂದುವರೆಸಿದ್ದರು. https://kannadanewsnow.com/kannada/haveri-people-shocked-by-the-man-who-survived-when-he-was-brought-home-as-dead-in-hospital/
ಶಿವಮೊಗ್ಗ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಟಿಸಿ ಸಮಸ್ಯೆ ನಿವಾರಿಸಿ ರೈತರಿಗೆ ಸಕಾಲದಲ್ಲಿ ಟಿಸಿ ಸರಬರಾಜು ಮಾಡುವಂತೆ ಖಡಕ್ ಸೂಚನೆ ನೀಡಿದರು. ಇಂದು ಸಾಗರ ಶಾಸಕ ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯ ಪ್ರಮುಖ ಹೈಲೈಟ್ಸ್ * ಹೊಸನಗರ ತಾಲ್ಲೂಕು ಈ ಹಿಂದೆ 20 ಎಂ.ವಿ.ಎ ಇತ್ತು ಅದು ಸುಟ್ಟುಹೋಗಿರುವುದರಿಂದ, ತುರ್ತಾಗಿ 10 ಎಂ.ವಿ.ಎ ಹಾಕಿದ್ದೀರಿ ಆದರೆ 20 ಎಂ.ವಿ.ಎ ಬೇಕಾಗಿದ್ದು ಇದರಿಂದ ಈಗ ಸಮರ್ಪಕವಾಗಿ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ ಕೂಡಲೇ 20 ಎಂ.ವಿ.ಎ ಅಳವಡಿಸಲು ಕ್ರಮ ವಹಿಸುವುದು. * 25 ಕೆ.ವಿ ಯ ಟಿ.ಸಿಗಳನ್ನು 63 ಕೆ.ವಿ ಗಳನ್ನಾಗಿ ಉನ್ನತೀಕರಿಸುವ ಬಗ್ಗೆ. ಬೇಡಿಕೆಗೆ ತಕ್ಕಂತೆ ರಿಪೇರಿ ಆಗದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. * ಟಿ.ಸಿ ಗಳ ಕೊರತೆ…
ಬೆಂಗಳೂರು: ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕೆಂದು ಶಾಸಕ ರವಿ ಸುಬ್ರಹ್ಮಣ್ಯ ಅವರು ಆಗ್ರಹಿಸಿದ್ದಾರೆ. ಬಿಜೆಪಿ ನಿಯೋಗವು ಇಂದು ಮೆಟ್ರೋ ಎಂ.ಡಿ. ಭೇಟಿಯಾಗಿದೆ. ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು; ನಗರದ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೊ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ ಎಂದ ಅವರು, ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ಒತ್ತಾಯಿಸಿದರು. ಮೆಟ್ರೋ ಸಾರ್ವಜನಿಕರಿಗಾಗಿ ಇದೆ. ಲಾಭವನ್ನೇ ನೋಡುವುದು ಸರಿಯಲ್ಲ; ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಇದು ಜಾರಿಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಪ್ರಯಾಣದರ ಹೆಚ್ಚಳ…
ಬೆಂಗಳೂರು: ಇಂದಿನಿಂದ ಜಾರಿಗೆ ಬರುವಂತೆ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ಶೇ.47ರಷ್ಟು ದರವನ್ನು ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರಿಗೆ ಭಾರಿ ಹೊರೆಯಾದಂತೆ ಆಗಿದೆ. ಈ ದರವನ್ನು ಇಳಿಕೆ ಮಾಡದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಬೆಂಗಳೂರು ನಗರ ಘಟಕವು ಬಿಎಂಆರ್ ಸಿಎಲ್ ಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ. ಇಂದು ಬಿಎಂಆರ್ ಸಿಎಲ್ ಗೆ ಪತ್ರ ಬರೆದಿರುವಂತ ಬೆಂಗಳೂರು ನಗರ ಬಿಜೆಪಿ ಘಟಕವು, ಮೆಟ್ರೋ ರೈಲು ಸಂಚಾರ ದರವನ್ನು ತೀವ್ರವಾಗಿ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ಜನತೆಗೆ ಬಹು ದೊಡ್ಡ ಆಘಾತವನ್ನು ನೀಡಿದೆ. ಬೆಂಗಳೂರು ನಗರದ ನಾಗರಿಕರ ಮೇಲೆ ಒಂದಾದ ಮೇಲೆ ಒಂದು ದರ ಏರಿಕೆಯ ಗದಾ ಪ್ರಹಾರ ರಾಜ್ಯ ಸರ್ಕಾರ ಮಾಡುತ್ತಿರುವುದು ಇವರ ಜನವಿರೋಧಿ ನೀತಿಯನ್ನು ಬಯಲು ಮಾಡಿದೆ ಎಂಬುದಾಗಿ ಕಿಡಿಕಾರಿದೆ. ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನತೆಯು ಕೇವಲ ವಿವಿಧ ಸೇವೆಗಳ ದರ ಏರಿಕೆಯನ್ನು ಕಾಣುತ್ತಿದ್ದಾರೆಯೇ ವಿನಹ ಸೇವೆಯ ಗುಣಮಟ್ಟದಲ್ಲಿ ಮಾತ್ರ ಏರಿಕೆ…
ಬೆಂಗಳೂರು: ಮುಡಾ ಹಗರಣ ಸಂಬಂಧ ಸಚಿವ ಬೈರತಿ ಸುರೇಶ್ ಹಾಗೂ ಸಿಎಂ ಪತ್ನಿ ಪಾರ್ವತಿಯವರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರು. ಈ ಸಮನ್ಸ್ ಗೆ ಹೈಕೋರ್ಟ್ ಫೆಬ್ರವರಿ 20ರವರೆಗೆ ತಡೆಯಾಜ್ಞೆ ವಿಸ್ತರಿಸಿ ಆದೇಶಿಸಿದೆ. ಇಂದು ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಇಡಿ ಸಮನ್ಸ್ ರದ್ದುಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠವು ನಡೆಸಿತು. ವಾದ ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ಫೆಬ್ರವರಿ 20ಕ್ಕೆ ವಿಚಾರಣೆ ನಿಗದಿ ಪಡಿಸಿದೆ. ಅಲ್ಲದೇ ಅಲ್ಲಿಯವರೆಗೆ ಇಡಿ ಸಮನ್ಸ್ ಗೆ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಸಿಎಂ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. https://kannadanewsnow.com/kannada/minister-mahadevappa-should-discuss-the-injustice-done-to-valmiki-samaj-r-ashoka/ https://kannadanewsnow.com/kannada/muda-scam-14-plots-have-nothing-to-do-with-byrathi-suresh-says-cv-nagesh/