Subscribe to Updates
Get the latest creative news from FooBar about art, design and business.
Author: kannadanewsnow09
ಉತ್ತರ ಕನ್ನಡ: ಜಿಲ್ಲೆಯಲ್ಲಿನ 32 ಚಾರಣ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಚಾರಣಕ್ಕೆ ಅವಕಾಶ ನೀಡುವ ಸಂಬಂಧ ಚಾರಣ ಪಥವನ್ನು ಜಿಲ್ಲಾಡಳಿತ ಗುರುತಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾರಣಕ್ಕೆ ಉತ್ತಮ ಎನಿಸುವ ಪ್ರದೇಶಗಳ ಬಗ್ಗೆ ಸರ್ವೆ ನಡೆಸಲಾಯಿತು. ಈ ಸರ್ವೆಯಲ್ಲಿ 32 ಚಾರಣ ಪಥಗಳನ್ನು ಗುರಿತಿಸಲಾಗಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾರಣಕ್ಕಾಗಿ ಗುರುತಿಸಿರುವಂತ 32 ಸ್ಥಳಗಳನ್ನು ಚಾರಣ ಪಥಗಳಾಗಿ ಅನುಮತಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ನೀಡಿದ ಬಳಿಕ 32 ಕಡೆ ಚಾರಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದ ಬಳಿಕ ಉತ್ತರ ಕನ್ನಡ ಜಿಲ್ಲೆಯ 32 ಚಾರಣ ಪಥಗಳ ಬಗ್ಗೆ ವೆಬ್ ಸೈಟ್ ಹಾಗೂ ಪ್ರವಾಸೋದ್ಯ ಇಲಾಖೆಯ ಮೂಲಕ ಪ್ರಚಾರ ನೀಡಲಾಗುತ್ತದೆ. ಈ ಚಾರಣ ಸ್ಥಳಗಳನ್ನು…
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಉಚಿತವಾಗಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ತಿಳಿಸಿದೆ. ಪಡಿತರ ಚೀಟಿದಾರರು ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬೆರಳಚ್ಚು ಮೂಲಕ ತಮ್ಮ ಗುರುತು, ನೋಂದಣಿ ಅಥವಾ ಮರು ನೋಂದಣಿ ಮಾಡಿಸದೆ ಇರುವ ಎಲ್ಲಾ ಸದಸ್ಯರು ಏ.30 ರೊಳಗೆ ಬಯೋಮೆಟ್ರಿಕ್ ಸಂಗ್ರಹಣೆ (ಇ-ಕೆವೈಸಿ) ಮಾಡಿಸಿಕೊಳ್ಳಲು ಅಂತಿಮ ಅವಕಾಶವನ್ನು ನೀಡಲಾಗಿದ್ದು, ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ ಎಂದಿದೆ. ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳು ಆಹಾರ ಧಾನ್ಯ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಆಧಾರ್ ದೃಢೀಕರಣ (ಇ-ಕೆವೈಸಿ)ಯನ್ನು ಮಾಡದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. https://kannadanewsnow.com/kannada/dr-mallikarjuna-kalamarahallis-kadugolla-tribal-kulakathana-wins-book-title/…
ಹುಬ್ಬಳ್ಳಿ: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಗುಜರಾತ್ ರಾಜ್ಯದ ಅಹಮದಾಬಾದ್ ಹತ್ತಿರವಿರುವ ವಾಟ್ವಾ ನಿಲ್ದಾಣಗಳ ನಡುವೆ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ರೈಲು ಸಂಖ್ಯೆ 07333 ಎಸ್ಎಸ್ಎಸ್ ಹುಬ್ಬಳ್ಳಿಯಿಂದ ವಾಟ್ವಾಗೆ ಏಪ್ರಿಲ್ 13 ರಿಂದ ಜೂನ್ 15, 2025 ರವರೆಗೆ ಪ್ರತಿ ಭಾನುವಾರದಂದ ಸಂಜೆ 7:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದೆ. ಈ ರೈಲು ಮರುದಿನ ಸೋಮವಾರ ಸಂಜೆ 6:45 ಗಂಟೆಗೆ ತನ್ನ ಗಮ್ಯಸ್ಥಾನವಾದ ವಾಟ್ವಾವನ್ನು ತಲುಪಲಿದೆ. ರೈಲು ಸಂಖ್ಯೆ 07334 ವಾಟ್ವಾದಿಂದ ಎಸ್ಎಸ್ಎಸ್ ಹುಬ್ಬಳ್ಳಿಗೆ ಏಪ್ರಿಲ್ 14 ರಿಂದ ಜೂನ್ 16, 2025 ರವರೆಗೆ ಪ್ರತಿ ಸೋಮವಾರ ವಾಟ್ವಾದಿಂದ ರಾತ್ರಿ 9:45 ಗಂಟೆಗೆ ಹೊರಡಲಿದೆ. ಈ ರೈಲು ಮಂಗಳವಾರ ರಾತ್ರಿ 7:45ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ,…
ಬೆಂಗಳೂರು: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ಕಾಡುಗೊಲ್ಲ ಬುಡಕಟ್ಟು ಕುಲಕಥನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡ ಮಾಡುವಂತ ಪುಸ್ತಕ ಸೊಗಸು ಬಹುಮಾನ ಸಂದಿದೆ. ಇಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದಂತ ಡಾ.ಮಾನಸ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಡು ಹಾಗೂ ಮುದ್ರಣ ಸೊಗಡು ಬಹುಮಾನಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿತತು. ನಿನ್ನೆ ಈ ಸಂಬಂಧ ಉಪ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮೂರು ವರ್ಷಗಳ ಬಹುಮಾನಗಳಿಗಾಗಿ ಅರ್ಹ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ. 2023ನೇ ಸಾಲಿನ ಕನ್ನಡ ಪುಸ್ತ ಪ್ರಾಧಿಕಾರದಿಂದ ಕೊಡ ಮಾಡುವಂತ ಪುಸ್ತಕ ಸೊಗಡು ಎರಡನೇ ಬಹುಮಾನವನ್ನು ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ಕಾಡುಗೊಲ್ಲ ಬುಡಕಟ್ಟು ಕುಲಕಥನ ಪುಸ್ತಕವನ್ನು ಆಯ್ಕೆ ಮಾಡಲಾಗಿದೆ. ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನದ ಪುಸ್ತಕಕಕ್ಕೆ 2023ನೇ ಸಾಲಿನ ಪುಸ್ತಕ ಸೊಗಡು ಎರಡನೇ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು, ರೂ.20,000 ಬಹುಮಾನ ಒಳಗೊಂಡಿರುತ್ತದೆ ಅಂತ ತಿಳಿಸಿದ್ದಾರೆ. ವರದಿ: ವಸಂತ ಬಿ ಈಶ್ವರಗೆರೆ…
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದಿಂದ 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನವನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ನಿನ್ನೆ ಆಯ್ಕೆ ಉಪ ಸಮಿತಿಯ ಸಭೆಯು ಮೂರು ವರ್ಷಗಳ ಬಹುಮಾನಗಳಿಗೆ ಅರ್ಹ ಪುಸ್ತಕಗಳನ್ನು ಆಯ್ಕೆ ಮಾಡಿದೆ ಎಂದಿದೆ. 2022ನೇ ಸಾಲಿನ ಬಹುಮಾನಗಳ ಪಟ್ಟಿ ಹೀಗಿದೆ.. ಪುಸ್ತಕ ಸೊಗಸು ಮೊದಲ ಬಹುಮಾನ – ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಗದ್ಯ ಗಾರುಡು – ಲೇಖಕರು ಕೇಶವ ಮಳಗಿ, ದೀಪಂಕರ ಪುಸ್ತಕ ಪ್ರಕಾಶನ, ತುಮಕೂರು- ಈ ಪ್ರಶಸ್ತಿ 25 ರೂ ಬಹುಮಾನ ಒಳಗೊಂಡಿದೆ. ಪುಸ್ತಕ ಸೊಗಸು ಎರಡನೇ ಬಹುಮಾನ ರೂ.20,000 – ಅಧಿಷ್ಠಾನ ಬಾಯಿ ಪಾಠ ಪುಸ್ತಕ – ಜಿಕೆ ದೇವರಾಜ ಸ್ವಾಮಿ, ಯುವಸಾಧನೆ ಪ್ರಕಾಶನ,…
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಕೋರ್ಟ್ ಗೆ ಲೋಕಾಯುಕ್ತದಿಂದ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಇದನ್ನು ಇಡಿ ಪ್ರಶ್ನಿಸಿತ್ತು. ಈ ಪ್ರಕರಣದ ಅರ್ಜಿಯ ವಿಚಾರಣೆಯ ನಂತ್ರ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ಲೋಕಾಯುಕ್ತದಿಂದ ಸಲ್ಲಿಸಲಾಗಿದ್ದಂತ ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತು. ಈ ವೇಳೆ ಇಡಿ ಹಾಗೂ ಸಿಎಂ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು, ಆದೇಶವನ್ನು ಏಪ್ರಿಲ್.15ಕ್ಕೆ ಕಾಯ್ದಿರಿಸಿ, ಮುಂದೂಡಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯಗೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ನೀಡಿದೆ. https://kannadanewsnow.com/kannada/shimoga-dcc-bank-scam-former-president-m-r-manjunath-gowda-arrested/ https://kannadanewsnow.com/kannada/alert-those-who-sleep-with-their-mobile-phones-near-their-heads-should-read-this/
ಬೆಂಗಳೂರು: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ ಪ್ರಕರಣ ಸಂಬಂಧ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು 14 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ನಿನ್ನೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 11 ಗಂಟೆಗಳ ಕಾಲ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೇ ಅವರ ನಿವಾಸ ಸೇರಿದಂತೆ 8 ಕಂಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಗೆಸ್ಟ್ ಹೌಸ್ ಮೇಲೂ ದಾಳಿ ನಡೆಸಿ, ಅಲ್ಲಿದ್ದಂತ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಸತತ ವಿಚಾರಣೆಯ ನಂತ್ರ ಇಂದು ಮಂಜುನಾಥ್ ಗೌಡ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಅವರನ್ನು 1ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ…
ಬೆಂಗಳೂರು: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಬಂಗಾರ ಇರಿಸಿ ಕೋಟ್ಯಂತರ ಸಾಲ ನೀಡಿದ ಹಗರಣದಲ್ಲಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 11 ಗಂಟೆಗಳ ಕಾಲ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಲ್ಲದೇ ಅವರ ನಿವಾಸ ಸೇರಿದಂತೆ 8 ಕಂಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಗೆಸ್ಟ್ ಹೌಸ್ ಮೇಲೂ ದಾಳಿ ನಡೆಸಿ, ಅಲ್ಲಿದ್ದಂತ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಸತತ ವಿಚಾರಣೆಯ ನಂತ್ರ ಇಂದು ಮಂಜುನಾಥ್ ಗೌಡ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಅವರನ್ನು 1ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ…
ಹಾಸನ: ಕನ್ನಡದ ಸಾಹಿತಿ ಭಾನು ಮುಷ್ತಾಕ್ ಅವರ ಕೃತಿಯು ಬೂಕರ್ ಅವರಾಡ್ ಶಾರ್ಟ್ ಲೀಸ್ಟ್ ನಲ್ಲಿ ಸ್ಥಾನ ಪಡೆದಿದೆ. ಈ ರೀತಿಯಾಗಿ ಬೂಕರ್ ಪ್ರಶಸ್ತಿಯ ಶಾರ್ಟ್ ಲೀಸ್ಟ್ ನಲ್ಲಿ ಹೆಸರು ಪಡೆದಂತ ಕನ್ನಡದ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವಂತ ಸಾಹಿತಿ ಭಾನು ಮುಷ್ತಾಕ್ ಅವರು, ನನ್ನ ಕೃತಿ ಬೂಕರ್ ಅವಾರ್ಡ್ ಶಾರ್ಟ್ ಲೀಸ್ಟ್ ಪಡೆದಿರುವುದು ಸಂತಸ ತಂದಿದೆ. ನನ್ನ ನೆರೆ ಜಿಲ್ಲೆಯ ದೀಪಾ ಬಸ್ತಿಯವರು ಇಂಗ್ಲೀಷ್ ಗೆ ನನ್ನು ಕೃತಿಯಾದಂತ ಹಸೀನಾ ಮತ್ತು ಇತರೆ ಕತೆಗಳನ್ನು ಅನುವಾದಿಸಿದ್ದರು ಎಂದರು. ಹಸೀನಾ ಮತ್ತು ಇತರೆ ಕತೆಗಳು ಕೃತಿ ಇಂಗ್ಲೀಷಿನಲ್ಲಿ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಪ್ರಕಟವಾಗಿತ್ತು. ಈ ಕೃತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ಓದುಗರನ್ನು ಸೆಳೆದಿತ್ತು. ಇಂತಹ ಕೃತಿ ಬೂಕರ್ ಅವಾರ್ಡ್ ಶಾರ್ಟ್ ಲೀಸ್ಟ್ ನಲ್ಲಿ ಸ್ಥಾನ ಪಡೆದಿದೆ ಎಂಬುದಾಗಿ ತಿಳಿಸಿದರು. ಬೂಕರ್ ಅವಾರ್ಡ್ ಬಗ್ಗೆ ನನಗೆ ಅರಿವೇ ಇರಲಿಲ್ಲ. ತಳ ಸಮುದಾಯದ ಹೆಣ್ಣುಮಗಳಾಗಿ ಸಾಕಷ್ಟು…
ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ಹಾಗೂ ಅಬ್ದುಲ್ ಕಲಾಂ ಸೇರಿ 92 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸಾರಾಸರಿ ಶೇ. 90 ರಷ್ಟು ಬಂದಿದೆ. ಉತ್ತೀರ್ಣ ರಾದ 2584 ವಿದ್ಯಾರ್ಥಿಗಳ ಪೈಕಿ 2286 ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣ ರಾಗಿ ಶೇ. 90 ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ 200 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಶುಭ ಕೊರಿದ್ದಾರೆ. ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ಮಕ್ಕಳಿಗೆ ಸಿ ಇ ಟಿ, ನೀಟ್,ಜೆ ಇ ಇ ಪರೀಕ್ಷೆ ಗೆ ತರಬೇತಿ ನೀಡಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹೀಮ್, ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ. https://kannadanewsnow.com/kannada/breaking-belagavi-youth-commits-suicide-for-asking-him-to-go-to-college/ https://kannadanewsnow.com/kannada/alert-those-who-sleep-with-their-mobile-phones-near-their-heads-should-read-this/











