Subscribe to Updates
Get the latest creative news from FooBar about art, design and business.
Author: kannadanewsnow09
ಹಾವೇರಿ: ಬೆಂಗಳೂರು ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಪತ್ರಿಕೆ ಪ್ರಕಟಣೆ ಹೊರಡಿಸಿರುವ ಅವರು, ಭಾರತ ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ ವಿಶೇಷವಾಗಿ ರೈಲ್ವೆ ಸಂಕರ್ಕ, ಡಿಜಿಟಲ್, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶ ಭಾರತ ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಲೈನು ಆಗಿರುವುದ ಕಳೆದ ಹತ್ತು ವರ್ಷದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳ ಅಭಿವೃದ್ದಿಗೆ ಕಳೆದ ವರ್ಷ 7 ಸಾವಿರ ಕೋಟಿ ರೂ. ಹಾಗೂ ಈ ವರ್ಷ 7 ಸಾವಿರ ಕೋಟಿ ರೂ. ಅನುದಾನ…
ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ನೀಡಲಾಗಿತ್ತು. ಈ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿಕೆ ಮಾಡಲಾಗಿದೆ. ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು ಏಪ್ರಿಲ್ 22ಕ್ಕೆ ಮುಂದೂಡಿಕೆ ಮಾಡಿದೆ. ಇನ್ನೂ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 22ಕ್ಕೆ ನಿಗದಿ ಪಡಿಸಿದೆ. ಏಪ್ರಿಲ್ 22ರಂದು ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಚಿತ್ರದುರ್ಗ: ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ನಡೆದಿದೆ. ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಮಗ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಸಿಂಗಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದಂತ ಮಗನನ್ನು ರಕ್ಷಣೆ ಮಾಡಲು ಹೋಗಿ ತಂದೆಯೂ ಸಾವನ್ನಪ್ಪಿದ್ದಾರೆ. ಈಜಾಡಲು ಹೋಗಿ ನೀರಲ್ಲಿ ಮುಳುಗಿ ತಂದೆ ಬಸವರಾಜ (50) ಹಾಗೂ ಪುತ್ರ ಆಕಾಶ್ (15) ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/state-government-officials-employees-invited-for-sarvottam-seva-award/ https://kannadanewsnow.com/kannada/diesel-price-hiked-by-rs-2-per-litre-r-ashoka/
ಬೆಂಗಳೂರು: ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರಹಣ ಮೇಲೆ ಸೆಸ್ ಹಾಕಿದ್ದಾಯ್ತು, ಈಗ ಏಕಾಏಕಿ ಡೀಸೆಲ್ ಬೆಲೆಯನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನಾನು ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ. ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಸಿದ್ಧರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಾಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ. ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರಹಣ ಮೇಲೆ ಸೆಸ್ ಹಾಕಿದ್ದಾಯ್ತು, ಈಗ ಏಕಾಏಕಿ ಡೀಸೆಲ್ ಬೆಲೆಯನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ…
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ ಹಾಗೂ ನೌಕರರ ಗಮನಕ್ಕೆ ಎನ್ನುವಂತೆ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 2024 ಮತ್ತು 2025ನೇ ಸಾಲಿನ ಎರಡು ವರ್ಷಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ತಮ್ಮ ನಾಮನಿರ್ದೇಶನಗಳನ್ನು ದಿನಾಂಕ 14-04-2025ರೊಳಗಾಗಿ ಆನ್ ಲೈನ್ ಮೂಲಕ ಸಲ್ಲಿಸಲು ಸರ್ಕಾರ ಕೋರಿದೆ. ಅರ್ಜಿಯನ್ನು ಆನ್ ಲೈನ್ ಮೂಲಕ ಮಾತ್ರವೇ ಸಲ್ಲಿಸಬಹುದಾಗಿದೆ. Https://sarvothamaawards.karnataka.gov.in ಮೂಲಕ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಬಳಸಬಹುದಾಗಿದ್ದು, ಕನ್ನಡದಲ್ಲಿ ಸಲ್ಲಿಸಲು ನುಡಿ 6.0 ಆವೃತ್ತಿಯನ್ನು ಮಾತ್ರ ಬಳಸಬಹುದು. 2024 ಹಾಗೂ 2025ನೇ ಸಾಲಿನ ಪ್ರಶಸ್ತಿಗಳಿಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈ ಸಂಬಂಧ ಸರ್ಕಾರಿ ಆದೇಶವನ್ನು https://dparar.karnataka.gov.in ನಲ್ಲಿ ವೀಕ್ಷಿಸಿ ಪರಿಶೀಲಿಸಬಹುದಾಗಿದೆ. https://kannadanewsnow.com/kannada/in-yet-another-shock-to-the-people-of-the-state-the-government-has-increased-the-sales-tax-on-diesel-to-21-17-per-cent/ https://kannadanewsnow.com/kannada/doctors-at-fortis-hospital-in-bengaluru-successfully-operate-on-man-who-had-pots-puffy-tumour-on-his-forehead/ https://kannadanewsnow.com/kannada/south-indias-largest-organ-recovery-centre-to-be-set-up-in-bengaluru/
ಬೆಂಗಳೂರು: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಬರೆ ಎಳೆಯಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಶೇ.21.17ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಡೀಸೆಲ್ ದರ ಪ್ರತಿ ಲೀಟರ್ ಗೆ ರೂ.2ರಷ್ಟು ಹೆಚ್ಚಳ ಆದಂತೆ ಆಗಲಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ದಿನಾಂಕ: 04-11-2021 ರ ಹಿಂದೆ ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಕರ್ನಾಟಕ ಮಾರಾಟ ತೆರಿಗೆ ದರ ಶೇ 24ರಷ್ಟು ಇದ್ದು, ಅಂದಿನ ಮಾರಾಟ ದರ ಪ್ರತಿ ಲೀಟರಿಗೆ ರೂ. 92.03 ಇತ್ತು. ದಿನಾಂಕ: 15-06-2024 ರಂದು ಕರ್ನಾಟಕ ರಾಜ್ಯ ಸರ್ಕಾರವು ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಕರ್ನಾಟಕ ಮಾರಾಟ ತೆರಿಗೆ ದರವನ್ನು ಶೇ.18.44ಗೆ ಅಧಿಸೂಚನೆಯನ್ನು ನೀಡಿರುತ್ತದೆ ಎಂದಿದೆ. ದಿನಾಂಕ: 31-03-2025 ರಂತೆ ಪ್ರತಿ ಲೀಟರಿಗೆ ಡೀಸೆಲ್ ಮಾರಾಟ ದರವು ನೆರೆಯ ರಾಜ್ಯಗಳಲ್ಲಿ ಈ ಕೆಳಕಂಡಂತೆ ಇರುತ್ತದೆ ಎಂದು ತಿಳಿಸಿದೆ. ಬೆಂಗಳೂರು – ರೂ.89.02 ಹೊಸೂರು (ತಮಿಳುನಾಡು)- ರೂ. 94.42 ಕಾಸರಗೋಡು (ಕೇರಳ)- ರೂ.95.66 ಅನಂತಪುರ…
ವಾಸ್ತು, ಇತ್ತೀಚೆಗೆ ನಾವು ಈ ವಾಸ್ತು ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ ವಾಸ್ತು ಇಂದು ನಿನ್ನೆಯದಲ್ಲ. ವಾಸ್ತು ರಾಜರ ಕಾಲದಿಂದಲೂ ಇದೆ. ವಾಸ್ತುವನ್ನು ನಂಬುವವರು ಈ ಪರಿಹಾರವನ್ನು ಅನುಸರಿಸಬಹುದು. ಅನೇಕರ ಮನೆಯಲ್ಲಿ ವಾಸ್ತು ಸರಿಯಾಗಿ ಹೊಂದಿಸದೇ ಇರುವುದರಿಂದ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವರಿಗೆ ಮನೆಯಲ್ಲಿ ನೆಮ್ಮದಿ ಕಳೆದುಕೊಳ್ಳಬಹುದು, ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು, ಕೆಲವರಿಗೆ ಮನೆಯಲ್ಲಿ ಜಗಳಗಳು ಕೂಡ ಬರಬಹುದು. ಕೆಲವು ಮನೆಗಳಲ್ಲಿ ವಾಸ್ತು ಸರಿಯಿಲ್ಲದ ಕಾರಣ ಕುಟುಂಬ ಎರಡು ಹೋಳಾಗುತ್ತದೆ. ಸಣ್ಣಪುಟ್ಟ ವಾಸ್ತು ಸಮಸ್ಯೆಯಾಗಿದ್ದರೆ ಅದನ್ನು ಸುಲಭವಾಗಿ ಸರಿಪಡಿಸಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ…
ಬೆಂಗಳೂರು: 54 ವರ್ಷದ ವ್ಯಕ್ತಿಯೊಬ್ಬರ ಹಣೆಯ ಮೇಲೆ ನಿಂಬೆ ಗಾತ್ರದ “ ಟ್ಯೂಮರ್” ಹೊಂದಿದ್ದ ವ್ಯಕ್ತಿಗೆ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ತೆಗೆದು ಹಾಕಲಾಗಿದೆ. ಮುಂಭಾಗದ ಸೈನಸ್‌ನ ಸೋಂಕನ್ನು ಒಳಗೊಂಡಿರುವ ಅಪರೂಪದ ಮತ್ತು ಆಕ್ರಮಣಕಾರಿ ಸ್ಥಿತಿಯಾಗಿರುವ ಪಾಟ್‌ನ ಪಫಿ ಟ್ಯೂಮರ್ ಇದಾಗಿತ್ತು. ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಡಾ. ಸುಶೀನ್ ದತ್ ಮತ್ತು ಓಟೋರಿನೋಲಾರಿಂಗೋಲಜಿ ಸಲಹೆಗಾರ ಡಾ ಅಭಿಷೇಕ್ ಎಸ್. ಅವರ ತಜ್ಞರ ಆರೈಕೆಯಡಿ ಶಸ್ತ್ರಚಿಕಿತ್ಸೆ ನಡೆಸಿ, ಐದು ದಿನಗಳ ನಂತರ ಬಿಡುಗಡೆ ಮಾಡಲಾಯಿತು. ಡಾ. ಸುಶೀನ್ ಮಾತನಾಡಿ, ಅನಂತಪುರದ ನಿವಾಸಿಯಾದ ಶಾಮ್ (ಹೆಸರು ಬದಲಾಗಿದೆ), ಹಣೆಯ ಮೇಲೆ ದೊಡ್ಡ ಗಾತ್ರದ ಊತ ಕಾಣಿಸಿಕೊಂಡಿದೆ. ಕೇವಲ ಮೂರೂವರೆ ವಾರದಲ್ಲೇ ನಿಂಬೆ ಗಾತ್ರಕ್ಕೂ ಹೆಚ್ಚು ದೊಡ್ಡದಾಗಿ ಬೆಳೆದುಕೊಂಡಿತು. ಆರಂಭದಲ್ಲಿ, ಅವರು ತಮ್ಮ ಹುಬ್ಬುಗಳ ನಡುವೆ ಸಾಮಾನ್ಯ ಊತ ಎಂದು ಭಾವಿಸಿದ್ದರು. ಆದರೆ, ಆ ಊತದಿಂದ ವಿಪರೀತ ನೋವು…
ಬೆಂಗಳೂರು: ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತೆ ಕುರಿತು ಬಿ.ಪ್ಯಾಕ್ ಮತ್ತು ಸಿಜಿಐ ಸಂಸ್ಥೆ ನಡೆಸಿದ “ಬಿ.ಸೇಫ್” ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಯಿತು. ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ನಟಿ ಆಶಾಭಟ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ವೈಷ್ಣವಿ ಹಾಗೂ ಸಿಜಿಐ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ನಟಿ ಆಶಾಭಟ್, ಇಂದು ಮಹಿಳೆ ಸಬಲೀಕರಣಕ್ಕೆ ಆದ್ಯತೆ ಹೆಚ್ಚಾಗಿದ್ದು, ಮಹಿಳಾ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಿಪ್ಯಾಕ್ ಸಮೀಕ್ಷೆ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ.ಕೆ. ವೈಷ್ಣವಿ ಮಾತನಾಡಿ, ಬಿ.ಪ್ಯಾಕ್ ಅವರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸುವೆ, ಸರ್ಕಾರವನ್ನು ಬೆಂಬಲಿಸುವ ಮತ್ತು ನಮ್ಮ ಕೆಲಸವನ್ನು ಸರಳಗೊಳಿಸುವ ಬಿ.ಪ್ಯಾಕ್ ನಂತಹ ಹೆಚ್ಚಿನ ಸಂಸ್ಥೆಗಳು ನಮಗೆ ಅಗತ್ಯವಿದೆ. ಅಂತಹ ಸಂಸ್ಥೆಗಳೊಂದಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮತ್ತು ಸುರಕ್ಷಿತ ನಗರವನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ ಎಂದು…
ನವದೆಹಲಿ: ಬಹು ಚರ್ಚಿತ ವಕ್ಫ್ ತಿದ್ದುಪಡಿ ಮಸೂದೆ 2024, ನಾಳೆ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ವಿವಿಧ ರಾಜಕೀಯ ಗುಂಪುಗಳಿಂದ ನಿರೀಕ್ಷಿತ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ನಿಯಂತ್ರಿಸುವ 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮಸೂದೆ ಪ್ರಯತ್ನಿಸುತ್ತಿದೆ. ಈ ಕ್ರಮವು ಗಮನಾರ್ಹ ಪ್ರತಿರೋಧವನ್ನು ಎದುರಿಸಿದೆ. ವಿಶೇಷವಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ (AIMPLB), ಇದು ಬದಲಾವಣೆಗಳನ್ನು ವಿರೋಧಿಸುತ್ತದೆ. ಮುಸ್ಲಿಂ ಕಾನೂನಿನಡಿಯಲ್ಲಿ ಧಾರ್ಮಿಕ, ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಮೀಸಲಾಗಿರುವ ಭೂಮಿಯನ್ನು ಒಳಗೊಂಡಂತೆ ವಕ್ಫ್ ಆಸ್ತಿಗಳ ನಿಯಂತ್ರಣ ಮತ್ತು ಬಳಕೆಯ ಸುತ್ತ ಸಾಕಷ್ಟು ವಿವಾದಗಳಿರುವ ಸಮಯದಲ್ಲಿ ಪ್ರಸ್ತಾವಿತ ತಿದ್ದುಪಡಿಗಳು ಬಂದಿವೆ. ಪ್ರಸ್ತುತ ಶಾಸನವು ಈ ಆಸ್ತಿಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ನಿಯಂತ್ರಿಸುತ್ತದೆ ಮತ್ತು ಸುಮಾರು 9 ಲಕ್ಷ ಎಕರೆಗಳನ್ನು ವ್ಯಾಪಿಸಿರುವ ವಕ್ಫ್ ಭೂಮಿಯನ್ನು ಅಸಮರ್ಥವಾಗಿ ನಿರ್ವಹಿಸಲಾಗುತ್ತಿದೆ ಎಂದು ಸರ್ಕಾರ ಪ್ರತಿಪಾದಿಸುತ್ತದೆ. ಇದು ಸುಧಾರಣೆಗಳ ಅಗತ್ಯವನ್ನು ಹೊಂದಿದೆ. ಈ ತಿದ್ದುಪಡಿ ವಿರೋಧವನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ನೇತೃತ್ವದ…












