Subscribe to Updates
Get the latest creative news from FooBar about art, design and business.
Author: kannadanewsnow09
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಖೋಖೋ ಸಂಸ್ಥೆಗೆ ನೂತನ ಖಜಾಂಚಿಯಾಗಿ ರಾಷ್ಟ್ರೀಯ ಖೋಖೊಕ್ರೀಡಾಪಟು ಎಸ್.ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಚಿತ್ರದುರ್ಗ ಜಿಲ್ಲಾ ಖೋಖೋ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ನಿ.ಉಪಾಧ್ಯಕ್ಷ ಯತೀಶ್, ಅಶೋಕ ಕ್ಲಬ್ ಕಾರ್ಯದರ್ಶಿ ನಾರಾಯಣ ರಾವ್ ಹಾಗು ನಿವೃತ್ತ ದೈಹಿಕ ನಿರ್ದೇಶಕರಾದ ನಾಗಭೂಷಣ್, ಸಮ್ಮುಖದಲ್ಲಿ ಚಿತ್ರದುರ್ಗ ಜಿಲ್ಲಾ ಖೋಖೊ ಸಂಸ್ಥೆಗೆ 17 ಜನರ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಲಾಯಿತು. ನೂತನ ಗೌರವ ಅಧ್ಯಕ್ಷರಾಗಿ ಪಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷರಾಗಿ ಯುವರಾಜ್ ಪ್ರಧಾನ ಕಾರ್ಯದರ್ಶಿಯಾಗಿ ಓ.ಶ್ರೀನಿವಾಸ್ ಅವರನ್ನು ಉಪಾಧ್ಯಕ್ಷರಾಗಿ ಹಿರಿಯೂರು ತಾಲ್ಲೂಕಿನ ರಾಮಕೃಷ್ಣ, ಚಿತ್ರದುರ್ಗದ ಮಹಮ್ಮದ್ ಹುಸೇನ್, ಎನ್ ಆರ್ ಪುರದ ನವೀನ್ ಕುಮಾರ್,ಚಳ್ಳಕೆರೆಯ ಓ.ಸಿದ್ದೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು..ಸಂಸ್ಥೆಯ ಖಜಾಂಚಿಯಾಗಿ ಚಿತ್ರದುರ್ಗದ ಎಸ್.ಸಿದ್ದರಾಜು ಇವರನ್ನು ಒಮ್ಮತದಿಂದ ಘೋಷಿಸಿದ್ದು, ಸಹಕಾರ್ಯದರ್ಶಿಗಳಾಗಿ ಹಿರಿಯೂರಿನ ಶಿವುಪ್ರಸಾದ್,ಮೊಳಕಾಲ್ಮೂರಿನ ವಿನಯಕುಮಾರ್ ಆಯ್ಕೆ ಮಾಡಲಾಯಿತು.ಸಂಘಟನಾ ಕಾರ್ಯದರ್ಶಿ ಆಗಿ ಎಸ್.ರಾಘವೇಂದ್ರ, ಜಿಲ್ಲಾಸಮಿತಿಯ ನಿರ್ದೇಶಕರಾಗಿ ಶಿವಕುಮಾರ್,ಅಶೋಕ್, ವಿನಾಯಕ,ರಂಗನಾಥ ಸೇರಿದಂತೆ…
ವಿಜಯಪುರ: ಜಿಲ್ಲೆಯ ಭೀಮಾತೀರದಲ್ಲಿ ನಡೆದ್ದಂತ ಬಾಗಪ್ಪ ಹರಿಜನ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ್ನು ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಐವರು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ನಾಲ್ವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಕಳೆದ 2 ದಿನಗಳ ಹಿಂದೆ ವಿಜಯಪುರ ನಗರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ನನ್ನು ಭೀಕರವಾಗಿ ಕೊಲೆಗಯ್ಯಲಾಗಿತ್ತು. ಈ ಹತ್ಯೆ ಸಂಬಂಧ ಪೊಲೀಸರು ಆರೋಪಿ ಪಿಂಟ್ಯಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವಿಜಯಪುರದ ಗಾಂಧಿಚೌಕ್ ನ ಪೊಲೀಸರು ಪಿಂಟ್ಯಾ ಸೇರಿದಂತೆ ನಾಲ್ವರು ಅರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), ರಾಹುಲ್ ತಳಕೇರಿ (20), ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಎಂದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದರು. ಬಂಧಿತ ಆರೋಪಿಗಳನ್ನು ವಿಜಯಪುರದ 2ನೇ…
ಶಿವಮೊಗ್ಗ : ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಜನ ಆರೋಗ್ಯ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸಲು ಯುವ ಪರಿವರ್ತಕರು ಹಾಗೂ ಸಮಾಲೋಚಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನಾಂಕವಾಗಿದ್ದು, ಪ್ರಸ್ತುತ 3 ಯುವ ಪರಿವರ್ತಕರು ಮತ್ತು 1 ಯುವ ಸಮಾಲೋಚಕರ ಹುದ್ದೆ ಖಾಲಿ ಇದ್ದು, ಪದವಿ ಒಳಗೊಂಡಂತೆ ಸೈಕಾಲಜಿ, ಸೋಷಿಯಲ್ ವರ್ಕ್ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಯುವ ಪರಿವರ್ತಕರ ಹುದ್ದೆಗೆ ಕನಿಷ್ಠ 21 ರಿಂದ 35 ವರ್ಷದ ವಯಸ್ಸಿನವರಾಗಿರಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಇರಬೇಕು. ಇವರಿಗೆ ಗೌರವಧನವಾಗಿ ರೂ. 7 ಸಾವಿರ ನೀಡಲಿದ್ದು, ಪ್ರತಿ ಜಿಲ್ಲೆ ಓರ್ವ ಯುವ ಸಮಾಲೋಚಕರನ್ನು ಆಯ್ಕೆ ಮಾಡಲಾಗುತ್ತದೆ. ಯುವ ಸಮಾಲೋಚಕರ ಹುದ್ದೆಗೆ 21 ರಿಂದ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದ್ದು ಪದವಿ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಆಯ್ಕೆ ಸಮಿತಿಯಿಂದ ನೂತನ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ನೇಮಕ ಸಂಬಂಧ ಸಭೆ ನಡೆಯಿತು. ಈ ಸಭೆಯಲ್ಲಿ ಅವರನ್ನು ನೂತನ ಕೇಂದ್ರ ಚುನಾವಣಾ ಮುಖ್ಯ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರಿ ಮುಂದಿನ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಮಾಡುವ ಸಂಬಂಧ ಚರ್ಚೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಹಾಲಿ ಸಿಇಸಿ ರಾಜೀವ್ ಕುಮಾರ್ ಅವರು ತಮ್ಮ 65 ನೇ ವಯಸ್ಸಿನಲ್ಲಿ ಮಂಗಳವಾರ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ. ಸಿಇಸಿ ಜೊತೆಗೆ, ರಾಜೀವ್ ಕುಮಾರ್ ಅವರ ನಿವೃತ್ತಿಯಿಂದ ಸೃಷ್ಟಿಯಾದ ಖಾಲಿ ಸ್ಥಾನವನ್ನು ತುಂಬಲು ಹೊಸ ಚುನಾವಣಾ ಆಯೋಗವನ್ನು ನೇಮಿಸಲಾಗಿದೆ. ರಾಜೀವ್ ಕುಮಾರ್ ನಂತರ ಜ್ಞಾನೇಶ್ ಕುಮಾರ್ ಅತ್ಯಂತ…
ಬೆಂಗಳೂರು: 220/66/11 kV ಎನ್.ಆರ್.ಎಸ್, 66/11 ಕೆ.ವಿ. ಟೆಲಿಕಾಂ ಲೇಔಟ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 18.02.2025ರ ಇಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ರಾಜಾಜಿನಗರ ೧ನೇ ಬ್ಲಾಕ್, 2ನೇ ಬ್ಲಾಕ್, ೩ನೇ ಬ್ಲಾಕ್, ೪ನೇ ಬ್ಲಾಕ್, ೫ನೇ ಬ್ಲಾಕ್ & ೬ನೇ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗುಬ್ಬಣ್ಣ ಇಂಡಸ್ಟ್ರೀಯಲ್ ಏರಿಯಾ, ಡಾ| ಮೋದಿ ಹಾಸ್ಪಿಟಲ್ ರೋಡ್, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ ೧ನೇ ಕ್ರಾಸ್, ೨ನೇ ಕ್ರಾಸ್, ೩ನೇ ಕ್ರಾಸ್, ೪ನೇ ಕ್ರಾಸ್, ೫ನೇ ಕ್ರಾಸ್, ಮಹಾಗಣಪತಿನಗರ, ಕೆ.ಹೆಚ್.ಬಿ.ಕಾಲೋನಿ ೨ನೇ ಹಂತ, ಗಾಯಿತ್ರಿನಗರ ಡಿ ಬ್ಲಾಕ್, ಡಾ| ರಾಜ್ಕುಮಾರ್ ರೋಡ್, ರಾಜಾಜಿನಗರ ೬ ಬ್ಲಾಕ್, ಲಕ್ಷಿನಾರಾಯಣಪುರ, ಬ್ರಿಗೇಡ್ ಗೇಟ್ ವೆ, ಸುಬ್ರಮಣ್ಯನಗರ ಎ ಯಿಂದ ಡಿ ಬ್ಲಾಕ್, ವೆಸ್ಟ್ ಆಫ್ ಕಾರ್ಡ್ ರೋಡ್, ಎಂ.ಸಿ.ಲೇಔಟ್,…
ಬೆಂಗಳೂರು: ನಗರದಲ್ಲಿ ನೀರು ಪೋಲು ಮಾಡೋದಕ್ಕೆ ಬೆಂಗಳೂರು ಜಲಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಆದೇಶ ಹೊರಡಿಸಲಾಗಿದ್ದು, ಬೇಸಿಗೆ ವೇಳೆಯಲ್ಲಿ ಕಳೆದ ಬಾರಿ ಉಂಟಾಗಿದ್ದಂತ ನೀರಿನ ಅಭಾವ ಉಂಟಾಗಬಾರದು. ಅದಕ್ಕಾಗಿ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದೆ. ಕಾರು, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ಬಳಸಿ ವ್ಯರ್ಥ ಮಾಡಬೇಡಿ. ಕುಡಿಯೋದಕ್ಕೆ ನೀರನ್ನು ಬಳಸಿ. ಒಂದು ವೇಳೆ ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ ಅಂತವರಿಗೆ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಸಿದೆ. ಅಂದಹಾಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ 1964ರ ಕಲಂ 33 ಮತ್ತು 34ರ ಅನ್ವಯ ನಗರದಲ್ಲಿ ಕುಡಿಯೋದಕ್ಕೆ ನೀರು ಬಳಕೆ ಮಾಡಬೇಕು. ಅದರ ಹೊರತಾಗಿ ನೀರನ್ನು ವಾಹನಗಳನ್ನು ಕ್ಲೀನ್ ಮಾಡೋದಕ್ಕೆ, ಕೈತೋಟ, ಕಟ್ಟಡ ನಿರ್ಮಾಣಕ್ಕೆ, ಮನರಂಜನಾ ಕಾರಂಜಿಗೆ, ಸಿನಿಮಾ ಮಂದಿರ, ಮಾಲುಗಳಲ್ಲಿ ಕುಡಿಯೋಕೆ ನೀರು ಹೊರತಾಗಿ ಬಳಸುವಂತಿಲ್ಲ. ಒಂದು ವೇಳೆ ಈ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್ ರಾಷ್ಟ್ರದ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಸ್ವಾಗತಿಸಿದರು. https://twitter.com/ANI/status/1891495954219720801 ಅಮೀರ್ ಫೆಬ್ರವರಿ 17 ರಿಂದ 18 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಕತಾರ್ ಅಮೀರ್ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಅವರೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ವ್ಯಾಪಾರ ನಿಯೋಗ ಸೇರಿದಂತೆ ಉನ್ನತ ಮಟ್ಟದ ನಿಯೋಗವಿದೆ. ಅವರು ಈ ಹಿಂದೆ ಮಾರ್ಚ್ 2015ರಲ್ಲಿ ಅಧಿಕೃತ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಫೆಬ್ರವರಿ 18 ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕತಾರ್ ಅಮೀರ್ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಗುವುದು. ಪ್ರಮುಖ ಸಭೆಗಳಲ್ಲಿ ಭಾಗವಹಿಸಲಿರುವ ಕತಾರ್ ಅಮೀರ್ ತಮ್ಮ ಭೇಟಿಯ ಸಮಯದಲ್ಲಿ, ಅಮೀರ್ ಅಧ್ಯಕ್ಷ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅವರು ಅವರ ಗೌರವಾರ್ಥ ಔತಣಕೂಟವನ್ನು ಆಯೋಜಿಸಲಿದ್ದಾರೆ. ಕತಾರ್ ಅಮೀರ್ ಅವರು ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ…
ಕೇರಳ : “ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಯೋಜಿತವಾಗಿ ನಡೆಸಿದ ಹೇಯ ಕೃತ್ಯ. ನಮ್ಮ ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ. ಕೇರಳದ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ ಕೃತ್ಯವನ್ನು ನಿರೀಕ್ಷೆ ಮಾಡಿರಲಿಲ್ಲ. ಹುತಾತ್ಮ ಯುವ ಕಾರ್ಯಕರ್ತರ ಕುಟುಂಬಕ್ಕೆ ಕೆಪಿಸಿಸಿ ವತಿಯಿಂದ ₹25 ಲಕ್ಷ ಪರಿಹಾರ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಕೇರಳದ ಕಾಸರಗೋಡಿನಲ್ಲಿ ಸೋಮವಾರ ನಡೆದ 6ನೇ ಹುತಾತ್ಮರ ದಿನಾಚರಣೆ ಹಾಗೂ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. “ಯುವ ಕಾಂಗ್ರೆಸ್ಸಿನ ನಾಯಕರಾದ ಶರತ್ ಲಾಲ್ ಕೃಪೇಶ್ ಅವರು ಪಕ್ಷಕ್ಕಾಗಿ ತಮ್ಮ ಜೀವವನ್ನೇ ಕೊಟ್ಟಿದ್ದಾರೆ. ಅವರು ನಮ್ಮ ನಡುವೆ ಜೀವಂತವಾಗಿ ಇಲ್ಲದೇ ಇರಬಹುದು ಆದರೆ ಅವರ ಆಲೋಚನೆ, ಚಿಂತನೆಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ, ಹುತಾತ್ಮರಾಗಿದ್ದಾರೆ” ಎಂದು ಹೇಳಿದರು. “ನಾನು ಈ ಇಬ್ಬರು ಗೆಳೆಯರ ಸಾವಿನಿಂದ ಅವರ ಕುಟುಂಬಕ್ಕೆ, ಗೆಳೆಯರಿಗೆ, ಪಕ್ಷಕ್ಕೆ ಆಗಿರುವ ನಷ್ಟದ ಅರಿವಿದೆ. ನಾನು ನಮ್ಮ ಎಲ್ಲಾ ನಾಯಕರ ಪರವಾಗಿ ಕಾಂಗ್ರೆಸ್ ಪಕ್ಷದ ಯುವ…
ಚಿತ್ರದುರ್ಗ: 2023-24 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಮಾಡಿಕೊಂಡ ರೈತರ ತಿರಸ್ಕೃತ ಪಟ್ಟಿ ಪ್ರಕಟ ಮಾಡಲಾಗಿದೆ. ರೈತರ ಪ್ರಸ್ತಾವನೆಗಳನ್ನು ಬೆಳೆ ಸಮಿಕ್ಷೆ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿದಾಗ ಮುಂಗಾರು ಹಂಗಾಮಿನಲ್ಲಿ 478 ಹಾಗೂ ಹಿಂಗಾರು ಹಂಗಾಮಿನಲ್ಲಿ 31 ಸೇರಿ ಒಟ್ಟು 509 ರೈತರ ಬೆಳೆ ವಿಮೆ ಪ್ರಸ್ತಾವನೆಗಳು ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ತಿರಸ್ಕೃತಗೊಂಡಿವೆ. ಈ ಪಟ್ಟಿಗಳನ್ನು ಎಲ್ಲ ರೈತರ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಚೇರಿ ನೋಟಿಸ್ ಬೋರ್ಡ್ಗಳಲ್ಲಿ ಪ್ರಕಟಿಸಲಾಗಿದೆ. ರೈತರು ಬೆಳೆ ನಮೂದಿಸಿರುವ ಪಹಣಿ, ಬೆಂಬಲ ಬೆಲೆ ಪ್ರಯೋಜನ ಪಡೆದ ರಶೀದಿ, ನೊಂದಾಯಿತ ಬೆಳೆಯನ್ನು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ಸಂಬAದಪಟ್ಟ ದಾಖಲೆ ಹಾಗೂ ಆಧಾರ್ ಕಾರ್ಡುಗಳೊಂದಿಗೆ ಮಾರ್ಚ್ 4 ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಇಲ್ಲವಾದಲ್ಲಿ ಬೆಳೆ ವಿಮೆ ಪ್ರಸ್ತಾವನೆಗಳನ್ನು ತಿರಸ್ಕೃತಗೊಳಿಸಲಾಗುವುದು ಎಂದು ಚಿತ್ರದುರ್ಗ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ.ಹೆಚ್.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/bescom-urges-farmers-not-to-use-single-face-at-night/ https://kannadanewsnow.com/kannada/two-killed-three-injured-in-another-road-accident-in-bengaluru/
ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ಯಾಂಕರ್ ನಡುವೆ ನಡೆದಂತ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ದುರ್ಗಾ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಗೌರಿ ಬಿದನೂರಿನಿಂದ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದಂತ ಕಾರು ಮುಂದೆ ಹೋಗುತ್ತಿದ್ದ ವಾಹನ ಓವರ್ ಟೇಕ್ ಮಾಡುವ ಯತ್ನದಲ್ಲಿ ಎದುರಿನಿಂದ ಬರುತ್ತಿದ್ದಂತ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದಂತ ವಸಂತ್(30) ಹಾಗೂ ಚೇತನ್(29) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bescom-urges-farmers-not-to-use-single-face-at-night/ https://kannadanewsnow.com/kannada/breaking-gold-prices-rise-to-rs-550-per-10-grams-today-rise-gold-price-hike/