Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರವು ಎಪಿಎಲ್ ಕಾರ್ಡ್ ಗಳ ರದ್ದತಿಗೆ ಆಹಾರ ಇಲಾಖೆಗೆ ನಿರ್ದೇಶ ನೀಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಮೂಲಕ ಎಪಿಎಲ್ ಕಾರ್ಡ್ ರದ್ದಾಗುವ ಆಂತಕದಲ್ಲಿ ಇದ್ದವರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಈ ಮಾಹಿತಿಯನ್ನು ವಾರ್ತಾ ಇಲಾಖೆ ಹಂಚಿಕೊಂಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಎಪಿಎಲ್ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ ಮತ್ತು ಈವರೆಗೆ ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ ಎಂಬುದಾಗಿ ತಿಳಿಸಿದೆ. ಕೆಲವು ದಿನಪತ್ರಿಕೆಗಳಲ್ಲಿ ಇ – ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ ಎಂದಿದೆ. ರಾಜ್ಯದಲ್ಲಿ 2024ರ ಸೆಪ್ಟೆಂಬರ್ 2ರ ವರೆಗೆ 25,13,798 ಎಪಿಎಲ್ ಕಾರ್ಡುಗಳಿದ್ದವು. ನವೆಂಬರ್ 16 ರಂದು 25,62,566 ಕಾರ್ಡುಗಳಿವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ…
ಬೆಂಗಳೂರು: ಕರ್ನಾಟಕ ಅಂಗಾಂಗ ನೋಂದಣಿಯಲ್ಲಿ ದೇಶದಲ್ಲೇ ಮೂರನೇ ಸ್ಥಾವನ್ನು ಪಡೆದಿಕೊಂಡಿದೆ. ಇನ್ನೂ ಬಳ್ಳಾರಿ ಜಿಲ್ಲೆ ದೇಶಕ್ಕೆ ಪ್ರಥಮ ಸ್ಥಾವನ್ನು ಪಡೆದಿದೆ. ಅಂಗಾಂಗ ದಾನ ನೋಂದಣಿಯಲ್ಲಿ ರಾಜ್ಯದ ಬಳ್ಳಾರಿ ಜಿಲ್ಲೆ ದೇಶಕ್ಕೆ ಮೊದಲ ಸ್ಥಾನದಲ್ಲಿರುವುದು ಶ್ಲಾಘನೀಯ. ಧಾರವಾಡ ಜಿಲ್ಲೆಯು ಅಗ್ರ ಐದು ಜಿಲ್ಲೆಗಳ ಪಟ್ಟಿಯಲ್ಲಿದೆ. ದೇಶದಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಅಂಗಾಂಗ ದಾನ ನೋಂದಣಿಯಲ್ಲಿ ಮಹಿಳೆಯರು ಮತ್ತು ಯುವ ಸಮೂಹ ಅಗ್ರ ಸ್ಥಾನದಲ್ಲಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಒಟ್ಟು 24,372 ಮಂದಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ನೀವೂ ಕೂಡ ಅಂಗಾಂಗ ದಾನ ಮಾಡುವ ಸಂಕಲ್ಪವನ್ನು ಕೈಗೊಳ್ಳಬಹುದು. ಅಂಗಾಂಗ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆಯಿರಿ. ನೋಂದಾಯಿಸಿಕೊಳ್ಳಲು https://notto.abdm.gov.in ಲಿಂಕ್ ಕ್ಲಿಕ್ ಮಾಡಿ, ತಪ್ಪದೇ ನೀವು ಅಂಗಾಂಗ ದಾನಿಗಳೋದು ಮರೆಯಬೇಡಿ. https://twitter.com/KarnatakaVarthe/status/1857782264345800782 https://kannadanewsnow.com/kannada/minister-jamirs-statement-wrong-will-work-to-correct-him-dk-shivakumar/ https://kannadanewsnow.com/kannada/do-you-know-how-much-prize-jake-paul-won-after-defeating-boxing-legend-mike-tyson/
ಬೆಂಗಳೂರು : “ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಜಮೀರ್ ಅವರು ಕರಿಯ ಎಂದು ಪದ ಬಳಸಿರುವುದು ತಪ್ಪು. ಅವರನ್ನು ತಿದ್ದುತ್ತೇವೆ. ಕ್ರಮ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಜಮೀರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಅವರು ಪತ್ರ ಬರೆದಿದ್ದು, ಜಮೀರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಿರ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಅದು ಅವರಿಬ್ಬರ ಆಂತರಿಕ ವಿಚಾರ. ಆದರೂ ಜಮೀರ್ ಅವರು ಕುಮಾರಸ್ವಾಮಿ ಬಗ್ಗೆ ಕಪ್ಪು, ಬಿಳುಪು ಹಾಗೂ ಆಸ್ತಿ ವಿಚಾರವನ್ನೆಲ್ಲ ಮಾತನಾಡಬಾರದಿತ್ತು. ಜಮೀರ್ ಅವರು ಪ್ರೀತಿಯಿಂದ, ಸಲಿಗೆಯಿಂದ ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಅವರು ಮಾತನಾಡಿದ್ದು ತಪ್ಪು ಎಂದು ಹೇಳುತ್ತಿದ್ದೇನೆ. ಇದನ್ನು ಅವರಿಗೆ ಆಂತರಿಕವಾಗಿ ಹೇಳಿದ್ದೀವೆ. ಅದಕ್ಕೆ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ” ಎಂದರು. ಕುಮಾರಸ್ವಾಮಿ ಕೊಚ್ಚೆ ಎಂದು ಕರೆದಿದ್ದನ್ನು ಜನ…
ಬೆಂಗಳೂರು: ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಲು ಆಲೋಚನೆ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚುನಾವಣೆ ಬಂದ ಕಾರಣ ಅದನ್ನು ಮಾಡಿಲ್ಲ; ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕೊಡಲು ಕಷ್ಟವೆಂದು ಅದನ್ನು ಮತ್ತೆ ಮುಂದೂಡಿದ್ದಾರೆ. ಕಾಂಗ್ರೆಸ್ ಪಕ್ಷ, ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿ ಆಗಿವೆ. ಆರ್ಥಿಕ ತುರ್ತು ಪರಿಸ್ಥಿತಿ ಹೇರಲು ಮುಖ್ಯಮಂತ್ರಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಗ್ಯಾರಂಟಿ ವಿಚಾರದಲ್ಲಿ ದೇಶಕ್ಕೇ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಡುತ್ತಿರುವುದಾಗಿ ಹೇಳಿದೆ. ಆದರೆ, ಮಹಾರಾಷ್ಟ್ರದಲ್ಲಿ, ರಾಂಚಿಯಲ್ಲಿ ಜಾಹೀರಾತು ಕೊಡುತ್ತಿದ್ದು, 10 ಗ್ಯಾರಂಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇಲ್ಲಿ 5 ಕೊಡುವುದಾಗಿ ಹೇಳುತ್ತಿದ್ದು, ಜಾಹೀರಾತಿನಲ್ಲಿ 10 ಗ್ಯಾರಂಟಿಗಳು ಎಂದು ತೋರಿಸಿದ್ದಾರೆ ಎಂದು ಟೀಕಿಸಿದರು. 5ನ್ನೇ…
ಪೂರ್ವಜರ ಆರಾಧನೆಯನ್ನು ಅತ್ಯಂತ ವಿಶೇಷವಾದ ಆರಾಧನೆ ಎಂದು ಪರಿಗಣಿಸಲಾಗಿದೆ. ಕುಲದೇವತೆಯ ಕೃಪೆಯಿಂದಲೇ ನಮ್ಮ ಜೀವನದಲ್ಲಿ ಪ್ರತಿಯೊಂದು ಶುಭ ಕಾರ್ಯಗಳು ನಡೆಯುತ್ತವೆ ಎಂಬುದು ಹಲವರ ಅನುಭವಕ್ಕೆ ಬಂದಿರುವ ಸತ್ಯ. ಆದುದರಿಂದಲೇ ಇಂದಿನ ಕಾಲದಲ್ಲಿ ಕುಲದೇವತಾ ಆರಾಧನೆಯು ಬಹಳ ವಿಶೇಷವಾಗಿದೆ. ಅಂತಹ ಕುಲದೇವತೆಗೆ ನಾವು ಮಾಡುವ ಪ್ರತಿಯೊಂದು ರೀತಿಯ ಪೂಜೆಯು ವಿಭಿನ್ನ ಪ್ರಯೋಜನಗಳನ್ನು ಹೊಂದಿದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಯಶಸ್ಸನ್ನು ಸಾಧಿಸಲು ಮತ್ತು ಅಡೆತಡೆಗಳನ್ನು ಕಡಿಮೆ ಮಾಡಲು ಕುಲದೈವವನ್ನು ಯೋಚಿಸಿ ಬೆಳಗಬೇಕಾದ ದೀಪದ ಬಗ್ಗೆ ನಾವು ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ಅಡೆತಡೆಗಳನ್ನು…
ಮಹಾರಾಷ್ಟ್ರ: ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ. ಅವರ ಆರೋಪ ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ ಅಂತ ಸವಾಲು ಹಾಕಿದ್ದೀನಿ ಎಂಬುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಮಹಾರಾಷ್ಟ್ರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಯಶಸ್ವಿಯಾಗಿ ರಾಜ್ಯದ ಜನರ ಮನೆ ಮನೆ ತಲುಪಿದೆ. ಶಕ್ತಿ ಯೋಜನೆ: ಇಲ್ಲಿಯವರೆಗೂ ಈ ಗ್ಯಾರಂಟಿಯಿಂದ 325 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಗೃಹಜ್ಯೋತಿ : ಒಂದು ಕೋಟಿ 62 ಲಕ್ಷ ಕುಟುಂಬಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನಭಾಗ್ಯ : ಒಂದು ಕೋಟಿ 20 ಲಕ್ಷ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ: ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು 2,000 ರೂಪಾಯಿ ಗೃಹಲಕ್ಷ್ಮಿ ಹಣ…
ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ನಡು ರಸ್ತೆಯಲ್ಲೇ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಈ ಕಾರಿನಲ್ಲಿದ್ದಂತ ವ್ಯಕ್ತಿಯೊಬ್ಬರು ಸಜೀವವಾಗಿ ದಹನವಾಗಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಮುದ್ದಿನಪಾಳ್ಯ ಬಳಿಯಲ್ಲಿನ ರಸ್ತೆಯೊಂದರಲ್ಲೇ ಕಾರೊಂದು ಹೊತ್ತಿ ಉರಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರಿನ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ನಂದಿದ ಬಳಿಕ ನೋಡಿದ್ರೇ ಕಾರಿನಲ್ಲಿ ವ್ಯಕ್ತಿಯೊಬ್ಬರು ಸಜೀವವಾಗಿ ದಹನವಾಗಿರುವುದು ತಿಳಿದು ಬಂದಿದೆ. ಕಾರಿನಲ್ಲಿ ಸಜೀವವಾಗಿ ದಹನವಾದಂತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/another-good-news-for-the-people-of-the-state-all-old-cases-in-ac-court-to-be-disposed-of-by-february/
ಬೆಂಗಳೂರು : ಉಪ ವಿಭಾಗಾಧಿಕಾರಿ (ಎ.ಸಿ) ಕಂದಾಯ ನ್ಯಾಯಾಲಯದಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ ಶೇ.80ರಷ್ಟು ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದರು. ಶನಿವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿ ಮಾತನಾಡಿದ ಅವರು, “ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿಗದಿಪಡಿಸಿರುವ ಕಾಲಮಿತಿ 6 ತಿಂಗಳು ಮಾತ್ರ. ಆದರೆ ಕಳೆದ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ನ್ಯಾಯಾಲಯಗಳ ಪ್ರಕರಣಗ ವಿಳಂಬದ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಪರಿಣಾಮ ರೈತರು ತೀವ್ರ ತೊಂದರೆ ಒಳಗಾಗಬೇಕಾದ ಸ್ಥಿತಿ ಎದುರಾಗಿತ್ತು” ಎಂದು ವಿಷಾದಿಸಿದರು. “ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಎಸಿ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ 59,339 ಪ್ರಕರಣಗಳು ವಿಲೇ ಆಗದೆ ಬಾಕಿ ಉಳಿದಿದ್ದವು. ಕಂದಾಯ ನ್ಯಾಯಾಲಯಗಳಲ್ಲಿ…
ಶಿವಮೊಗ್ಗ: ಇಂದು ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್. ಎನ್ ಆಯ್ಕೆಯಾಗಿದ್ದಾರೆ. ಸಾಗರದ ತಾಳಗುಪ್ಪ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್. ಎನ್ ಹಾಗೂ ಸುರೇಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. 25 ಮತಗಳನ್ನು ಪಡೆಯುವ ಮೂಲಕ ಸಂತೋಷ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಇನ್ನೂ ಸಾಗರ ತಾಲ್ಲೂಕು ರಾಜ್ಯ ಪರಿಷತ್ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ದೇವೇಂದ್ರಪ್ಪ 24 ಮತಗಳನ್ನು ಗಳಿಸಿ, ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಚುನಾವಣೆ ಮತಗಳ ವಿವರ ಸಂತೋಷ್ ಕುಮಾರ್. ಎನ್ – 25 ಮತಗಳು ಸುರೇಶ್.ಎಸ್.ಕೆ – 08 ಮತಗಳು. ರಾಜ್ಯ ಪರಿಷತ್ ಸ್ಥಾನದ ಚುನಾವಣೆ ಮತಗಳ ವಿವರ ದೇವೇಂದ್ರಪ್ಪ – 24 ಮತಗಳಿಂದ ಗೆಲುವು. ನಾಗರಾಜ.ಕೆ- 07 ಮತಗಳು. ಮಂಜುನಾಥ- 02 ಮತಗಳು. ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಹುಬ್ಬಳ್ಳಿ: ಇಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ನೂತನ ಬಸ್ಸುಗಳನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಲೋಕಾರ್ಪಣೆಗೊಳಿಸಿದರು. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೂತನ ಬಸ್ಸುಗಳ ಲೋಕಾರ್ಪಣೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅಪಘಾತ ರಹಿತ ಸೇವೆಗಾಗಿ 43 ಚಾಲಕರಿಗೆ “ಸುರಕ್ಷಾ ಚಾಲಕ” ಬೆಳ್ಳಿ ಪದಕ ಪ್ರದಾನ ಮಾಡಿದರು. ಅಲ್ಲದೇ ಸಂಸ್ಥೆಯ ನೂತನ ಯೋಜನೆಗಳಾದ ಸಾರಿಗೆ ಸಂಜೀವಿನಿ ಯೋಜನೆಯಡಿ ಕಾರವಾರ/ಬೆಳಗಾವಿ/ಗದಗ ಸರ್ಕಾರಿ ವಿಜ್ಞಾನ ಸಂಸ್ಥೆಗಳೊಂದಿಗೆ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು. ವಾಯವ್ಯ ಸಾರಿಗೆ ಸಂಪದ ಡಿಜಿಟಲ್ ತ್ರೈಮಾಸಿಕ ಪತ್ರಿಕೆಯ ಬಿಡುಗಡೆಯನ್ನು ಮಾಡಿದರು. ಮೃತಪಟ್ಟ ಸಂಸ್ಥೆಯ ನೌಕರರ ಅವಲಂಬಿತರಿಗೆ ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯ ರೂ 5 ಲಕ್ಷ ಮೊತ್ತದ ಚೆಕ್ ವಿತರಣೆ ಮತ್ತು ಸಂಸ್ಥೆಯಲ್ಲಿ ಮೃತಪಟ್ಟ ನೌಕರರ ಅವಲಂಬಿತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ರೂ…