Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಹುಲ್ ಗಾಂಧಿಯವರು ಹಿಂದೂಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಾನ್ಯ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಈ ದೇಶವನ್ನು ಮುನ್ನಡೆಸುತ್ತಿದೆ. ಮತ್ತೊಂದು ಕಡೆ ಸತತ 3 ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿ ಕಾಂಗ್ರೆಸ್ ಪಕ್ಷ, ಅದರ ನಾಯಕ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಜವಾಬ್ದಾರಿ ಅವರಿಗೆ ಮೊದಲ ಬಾರಿಗೆ ಲಭಿಸಿದೆ. ನಿನ್ನೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣ ಸುಳ್ಳು, ನಿರಾಶೆ, ಆಧಾರರಹಿತ ಆರೋಪಗಳಿಂದ ಕೂಡಿತ್ತು ಎಂದು ಆಕ್ಷೇಪಿಸಿದರು. ಸದನದಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತಿತ್ತು ಎಂದು ಟೀಕಿಸಿದರು. ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ…
ಶಿವಮೊಗ್ಗ: ರಾಹುಲ್ ಗಾಂಧಿ ಅವರು ಹಿಂದೂಗಳ ಬಗ್ಗೆ ನೀಡಿರುವಂತ ಹೇಳಿಕೆ ಖಂಡನೀಯ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಹಿಂದೂಗಳ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಇಲ್ಲವಾದಲ್ಲಿ ಅವರನ್ನು ರಾಷ್ಟ್ರಪತಿಗಳು ವಿಪಕ್ಷನಾಯಕನ ಸ್ಥಾನದಿಂದ ವಜಾಗೊಳಿಸುವಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಆಗ್ರಹಿಸಿದ್ದಾರೆ. ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಹಿಂದೂಗಳ ಬಗ್ಗೆ ನೀಡಿದಂತ ಹೇಳಿಕೆಯನ್ನು ಖಂಡಿಸಿ, ಸಾಗರ ತಾಲ್ಲೂಕು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಕಚೇರಿಯಿಂದ ಜಾಥಾ ಮೂಲಕ ಎಸಿ ಕಚೇರಿಗೆ ತೆರಳಿದಂತ ಬಿಜೆಪಿ ಮುಖಂಡರು, ರಾಹುಲ್ ಗಾಂಧಿಯವರನ್ನು ವಿಪಕ್ಷ ನಾಯಕ ಸ್ಥಾನದಿಂದ ವಜಾಗೊಳಿಸುವಂತ ಮನವಿಯನ್ನು ನೀಡಿದರು. ಬಿಜೆಪಿ ಸಾಗರ ಉಪವಿಭಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಏನಿದೆ? ನಿನ್ನೆ ಸಂಸತ್ತಿನಲ್ಲಿ ಭಾಷಣ ಮಾಡುವ ವೇಳೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹಿಂದೂಗಳು ಹಿಂಸೆಯನ್ನು ಹರಡುವವರು ಮತ್ತು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವವರು ಎಂದು ಹೇಳಿಕೆ ನೀಡಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ಅತ್ಯಂತ…
ನವದೆಹಲಿ: ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಇನ್ನೂ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿರುವುದರಿಂದ ಪುರುಷರ ಹಿರಿಯ ಆಯ್ಕೆ ಸಮಿತಿಯು ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ಜಿತೇಶ್ ಶರ್ಮಾ ಅವರನ್ನು ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ 20 ಪಂದ್ಯಗಳಿಗೆ ಭಾರತ ತಂಡಕ್ಕೆ ಸೇರಿಸಿದೆ. ಜೈಸ್ವಾಲ್, ದುಬೆ ಮತ್ತು ಸ್ಯಾಮ್ಸನ್ ಭಾರತದ 2024 ರ ಟಿ 20 ವಿಶ್ವಕಪ್ ಅಭಿಯಾನದ ಭಾಗವಾಗಿದ್ದರು ಆದರೆ ಚಂಡಮಾರುತದ ಪರಿಸ್ಥಿತಿಯಿಂದಾಗಿ ಬಾರ್ಬಡೋಸ್ ಅನ್ನು ಇನ್ನೂ ತೊರೆದಿಲ್ಲ ಮತ್ತು ಈಗ ಹರಾರೆಗೆ ತೆರಳುವ ಮೊದಲು ತಂಡದ ಉಳಿದವರೊಂದಿಗೆ ಮೊದಲು ಭಾರತಕ್ಕೆ ಪ್ರಯಾಣಿಸಲಿದ್ದಾರೆ. “ಪುರುಷರ ಆಯ್ಕೆ ಸಮಿತಿಯು ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಬದಲಿಗೆ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರನ್ನು ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ 20 ಪಂದ್ಯಗಳಿಗೆ ಹೆಸರಿಸಿದೆ. “ಜುಲೈ 6 ರ ಶನಿವಾರದಿಂದ ಪ್ರಾರಂಭವಾಗುವ ಮುಂಬರುವ ಐದು ಪಂದ್ಯಗಳ ಟಿ 20 ಐ ಸರಣಿಗಾಗಿ…
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೊಣಚ್ಚ ತಾಯಿಯಾಗುತ್ತಿದ್ದಾರೆ. ಹರ್ಷಿಕಾ ಪೊಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಪೋಟೋ ಶೂಟ್ ಮಾಡಿರುವಂತ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ನಟಿ ಹರ್ಷಿಕಾ ಪೊಣಚ್ಚ ಅವರು ಐದು ತಿಂಗಳ ಗರ್ಭಿಣಿಯಾಗಿದದಾರೆ. ಈ ಖುಷಿ ವಿಚಾರವನ್ನ ವಿಭಿನ್ನ ರೀತಿಯಲ್ಲಿ ಪೋಟೋ ಶೂಟ್ ಮಾಡಿದಂತ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಅಂದಹಾಗೇ ನಟಿ ಹರ್ಷಿಕಾ ಹಾಗೂ ಭುವನ್ ಅನೇಕ ವರ್ಷಗಳ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ಆಗಸ್ಟ್.24, 2023ರಂದು ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿದ್ದಾರೆ. https://kannadanewsnow.com/kannada/4000-crore-in-muda-golmaal-cm-r-ashoks-serious-allegations/ https://kannadanewsnow.com/kannada/rahul-gandhi-refuses-to-apologise-for-anti-hindu-remarks/
ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ( Monsoon session of Karnataka Legislative Assembly ) ಮುಹೂರ್ತ ಫಿಕ್ಸ್ ಆಗಿದೆ. ಜುಲೈ.15ರಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಈ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ನೀಡಲಾಗಿದ್ದು, ಕರ್ನಾಟಕ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ದಿನಾಂಕ: 15.07.2024 ರಿಂದ 26.07.2024 ರವರೆಗೆ ಕರೆಯಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ ಎಂದಿದ್ದಾರೆ. ದಿನಾಂಕ: 20.06.2024 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಧಿಕಾರ ನೀಡಲಾಗಿತ್ತು. ಅದರಂತೆ, ಮುಖ್ಯಮಂತ್ರಿಗಳು ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಿರುತ್ತಾರೆ ಅಂತ ಮಾಹಿತಿ ನೀಡಿದ್ದಾರೆ. ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರು: ರಾಜ್ಯಾಧ್ಯಂತ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ನಿಯಂತ್ರಣ ಕ್ರಮಗಳನ್ನು ಸರ್ಕಾರ ಪ್ರಕಟಿಸಿದ ನಡುವೆಯೂ ಡೆಂಗ್ಯೂ ಕೇಸ್ ಹೆಚ್ಚಳ ಮಾತ್ರ ನಿಂತಿಲ್ಲ. ಈ ಹಿನ್ನಲೆಯಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ರಂದೀಪ್.ಡಿ ಅವರು ಸಭಾ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ. ರಾಜ್ಯದ ಡೆಂಗ್ಯೂ ಜ್ವರ ಪರಿಸ್ಥಿತಿಯ ಹಿನ್ನಲೆಯಲ್ಲಿ ನಿಯಂತ್ರಣ ಕ್ರಮಗಳ ಪರಿಣಾಮ ಅನುಷ್ಠಾನದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಗಳ ಪಾತ್ರವು ಪ್ರಮುಖವಾಗಿದೆ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಸದರಿ ಇಲಾಖೆಗಳ ಪಾತ್ರದ ಕುರಿತು ಚರ್ಚಿಸಿ, ಅಗತ್ಯ ಸಮನ್ವಯವನ್ನು ಸಾಧಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ದಿನಾಂಕ 02-07-2024ರಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಸಮನ್ವಯ ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ ಅಂತ ತಿಳಿಸಿದ್ದಾರೆ. https://kannadanewsnow.com/kannada/revision-of-schedule-of-mysuru-pandharpur-golgumbaz-express-16535/
ಚನ್ನಪಟ್ಟಣ : ಚನ್ನಪಟ್ಟಣಕ್ಕೆ ಶಾಸಕರು ಇಲ್ಲದ ಕಾರಣ, ಈಗ ನಾನೇ ನಿಮ್ಮ ಮನೆ ಮಗ, ನಾನೇ ಸೇವಕ, ನಾನೇ ಶಾಸಕ, ನಾನೇ ಮಂತ್ರಿ, ನಾನೇ ಡಿಸಿಎಂ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ವಿರುಪಾಕ್ಷಿ ಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅರಳಾಳುಸಂದ್ರದ ಶಾಲಾ ಆವರಣದಲ್ಲಿ ಸೋಮವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜನರ ಸೇವೆ ಮಾಡಲು ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ಜನಸೇವೆ ಮಾಡಲು ಮೊದಲು ಅವಕಾಶ ನೀಡಿದವರು ಚನ್ನಪಟ್ಟಣದ ಮತದಾರರು. ನಾನು ಜಾತಿ ನೋಡಿ ಜನಸೇವೆ ಮಾಡಿಲ್ಲ ನೀತಿ ನೋಡಿ ಕೆಲಸ ಮಾಡಿದ್ದೇನೆ” ಎಂದು ಹೇಳಿದರು. ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಯಾವುದೇ ಕಾರಣಕ್ಕೂ ಬಿಡಲು ಹೋಗಬೇಡಿ. ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು, ಜನಪ್ರತಿನಿದಿಗಳು ಬಂದಿದ್ದಾರೆ. ನೀವು ನನ್ನ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನಿಮ್ಮ ಸೇವೆಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ನನ್ನ ಕಚೇರಿಗೆ ಬಂದು ನಿಮ್ಮ ಸಮಸ್ಯೆಗಳನ್ನು…
ನವದೆಹಲಿ: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( former US President Donald Trump ) ಅವರು 2020 ರ ಚುನಾವಣೆಯ ಸೋಲನ್ನು ಉರುಳಿಸುವ ಪ್ರಯತ್ನಗಳನ್ನು ಒಳಗೊಂಡ ಫೆಡರಲ್ ಕ್ರಿಮಿನಲ್ ಆರೋಪಗಳಿಂದ ಭಾಗಶಃ ಮುಕ್ತರಾಗಿದ್ದಾರೆ ಎಂದು ಯುಎಸ್ ಸುಪ್ರೀಂ ಕೋರ್ಟ್ ( US Supreme Court ) ಸೋಮವಾರ (ಜುಲೈ 1) ತೀರ್ಪು ನೀಡಿದೆ. ಅಮೆರಿಕದ ಮಾಜಿ ಅಧ್ಯಕ್ಷರು ಅಧಿಕೃತ ನಡವಳಿಕೆಯಿಂದ ಮುಕ್ತರಾಗಿದ್ದಾರೆಯೇ ಹೊರತು ಖಾಸಗಿ ಕ್ರಮಗಳಿಂದಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ನವದೆಹಲಿ: 2020 ರ ಚುನಾವಣೆಯ ಸೋಲನ್ನು ಹಿಮ್ಮೆಟ್ಟಿಸುವ ಪ್ರಯತ್ನಗಳನ್ನು ಒಳಗೊಂಡ ಫೆಡರಲ್ ಕ್ರಿಮಿನಲ್ ಆರೋಪಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನವನ್ನು ತಿರಸ್ಕರಿಸಿದ ಹಿಂದಿನ ನ್ಯಾಯಾಂಗ ತೀರ್ಪನ್ನು ಯುಎಸ್ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಇದೊಂದು ಬ್ರೇಕಿಂಗ್ ಸ್ಟೋರಿ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಸೇರಿಸಲಾಗುವುದು. https://kannadanewsnow.com/kannada/health-minister-dinesh-gundu-rao-to-chair-crucial-meeting-tomorrow-in-the-wake-of-rising-dengue-cases-in-the-state/ https://kannadanewsnow.com/kannada/revision-of-schedule-of-mysuru-pandharpur-golgumbaz-express-16535/
ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹೆಚ್ಚು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಪಾಲಿಸುವುದು ಅತ್ಯಂತ ಅವಶ್ಯಕ. ರೋಗಿಯ ಪ್ರಾಣ ಉಳಿಸಿದರೆ ವೈದ್ಯರೇ ದೇವರಾಗುತ್ತಾರೆ. ತಮ್ಮ ವೃತ್ತಿಯಲ್ಲಿ ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ತೋರಬಾರದು. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅನಾಹುತವಾಗುತ್ತದೆ ಎಂಬ ಎಚ್ಚರವಿರಬೇಕು. ಇದು ದೇವರ ಕೆಲಸ ಎಂದು ಮಾಡಿದರೆ ಸಮಾಜದಲ್ಲಿ ರೋಗಗಳನ್ನು ತಡೆಗಟ್ಟುವ , ರೋಗಿಗಳ ಸಂಖ್ಯೆಯನ್ನು ಕಡಿಮೆಮಾಡಬಹುದು. ರೋಗಗಳನ್ನು ತಡೆಗಟ್ಟುವುದನ್ನು ಕೂಡ ಆರೋಗ್ಯ ಇಲಾಖೆ ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕರೋನಾ ಸಂದರ್ಭದಲ್ಲಿ ವೈದ್ಯರ ಸೇವೆ ಮರೆಯಲಾಗದು ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೈದ್ಯೋ ನಾರಾಯಣೋ ಹರಿಃ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ಆರೋಗ್ಯ ರಕ್ಷಣೆ ಮಾಡುವವರು…
ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಮನೆಯಲ್ಲಿ ಈ ಒಂದು ಮರದ ಬೇರಿನ ಕಟ್ಟಿಗೆಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಬೇರಿನ ಕಡ್ಡಿ ಇದ್ದರೆ ಸಾಕು ಈ ಕಡ್ಡಿಗೆ ವಿಶೇಷವಾದ ದೇವ ಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟಿದ್ದೆ ಆದಲ್ಲಿ ಯಾವುದೇ ದೋಷಗಳು ಇದ್ದರೂ ಕೂಡ ಸಮಯದಲ್ಲಿ ಕಳೆಯುತ್ತದೆ ಮುಖ್ಯವಾಗಿ ವಾಸ್ತು ದೋಷ ದಾರಿದ್ರ್ಯಾ ಕಳೆಯುತ್ತದೆ ವಾಸ್ತು ದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವ ಸದಸ್ಯರಿಗೆ ಅಭಿವೃದ್ಧಿ ಆಗುತ್ತದೆ ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುವುದು ಆಗಿರಬಹುದು. ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ವಿದ್ವಾನ್ ವಿದ್ಯಾಧರ್ ತಂತ್ರಿ 9686268564. ಈ ಮರದ ಬೇರಿನ ಈ ಕಡ್ಡಿಗೆ ಇರುವ ವಿಶೇಷ ದೈವ…