Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಕುಷ್ಠರೋಗ ಅಂಟು ರೋಗವಲ್ಲ. ಈ ರೋಗದ ಬಗ್ಗೆ ತಾರತಮ್ಯ, ಬೇಧ-ಭಾವ ಬೇಡ. ಆದರೆ ಕುಷ್ಠರೋಗ ಇರುವ ವ್ಯಕ್ತಿ ಕೆಮ್ಮುವಾಗ ಅಥವಾ ಸೀನಿದಾಗ ಇನ್ನೊಬ್ಬರಿಗೆ ಹರಡಬುದಾದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್ ನಟರಾಜ್ ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿವಾರಣ ಕಾರ್ಯಕ್ರಮ ಶಿವಮೊಗ್ಗ, ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇವರುಗಳ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಹಸಿರು ನಿಶಾನೆಯ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ 53 ಕುಷ್ಠರೋಗ ಪ್ರಕರಣಗಳು ಇವೆ. ಇದಲ್ಲದೇ ಏಪ್ರಿಲ್ ನಿಂದ ಇಲ್ಲಿಯವರೆಗೂ 32 ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ. ಅದರಲ್ಲಿ ಶಿಕಾರಿಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ನಮ್ಮ ದೇಶ ತುಂಬು ಕುಟುಂಬ…
ಶಿವಮೊಗ್ಗ : ನಗರದ ಅಶೋಕ ರಸ್ತೆ ಮತ್ತು ಶಿವಾಜಿ ರಸ್ತೆ ಬಳಿ ವಿದ್ಯುತ್ ಪರಿಕರಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಶೋಕರಸ್ತೆ, ಶಿವಾಜಿ ರಸ್ತೆ, ಎಸ್ಪಿಎಂ ರಸ್ತೆ, ವಿನಾಯಕ ರಸ್ತೆ, ಯಾಲಕಪ್ಪ ಕೇರಿ, ಬೇಡರ ಕೇರಿ, ಭೂಪಾಳಂ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.31 ರಂದು ಬೆಳಗ್ಗೆ 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ. ಕುಷ್ಠರೋಗ ಅಂಟು ರೋಗವಲ್ಲ-ತಾರತಮ್ಯ ಬೇಡ-ಎಚ್ಚರಿಕೆ ಅಗತ್ಯ : DHO ಡಾ.ಕೆ.ಎಸ್.ನಟರಾಜ್ ಶಿವಮೊಗ್ಗ : ಕುಷ್ಠರೋಗ ಅಂಟು ರೋಗವಲ್ಲ. ಈ ರೋಗದ ಬಗ್ಗೆ ತಾರತಮ್ಯ, ಬೇಧ-ಭಾವ ಬೇಡ. ಆದರೆ ಕುಷ್ಠರೋಗ ಇರುವ ವ್ಯಕ್ತಿ ಕೆಮ್ಮುವಾಗ ಅಥವಾ ಸೀನಿದಾಗ ಇನ್ನೊಬ್ಬರಿಗೆ ಹರಡಬುದಾದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿವಾರಣ ಕಾರ್ಯಕ್ರಮ ಶಿವಮೊಗ್ಗ, ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ…
ಬೆಳಗಾವಿ: ಈಗಾಗಲೇ ಜಿಲ್ಲೆಯಲ್ಲಿ ಪ್ರಯಾಗ್ ರಾಜ್ ನ ಮಹಾ ಕುಂಭ ಮೇಳಕ್ಕೆ ತೆರಳಿದ್ದಂತ ನಾಲ್ವರು ಕಾಲ್ತುಳಿತದಿಂದ ಉಂಟಾದಂತ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಪ್ರಯಾಗ್ ರಾಜ್ ಗೆ ತೆರಳಿದ್ದಂತ ಬೆಳಗಾವಿಯ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಬೆಳಗಾವಿಯ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಟಗಾ(61) ಎಂಬುವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿದ್ದಂತ ಮಹಾ ಕುಂಭಮೇಳಕ್ಕೆ ತೆರಳಿದ್ದರು. ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡು ಬೆಳಗಾವಿಗೆ ರೈಲಿನಲ್ಲಿ ಹಿಂದಿರುಗುತ್ತಿದ್ದರು. ಪ್ರಯಾಗ್ ರಾಜ್ ನಿಂದ ಬೆಳಗಾವಿಗೆ ಪಾವಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಪುಣೆಯ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾಗಿ ರವಿ ಜಟಗಾ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/another-fire-breaks-out-at-mahakumbh-mela-several-pandals-gutted/ https://kannadanewsnow.com/kannada/now-applying-for-karnataka-chief-ministers-relief-fund-is-simpler-just-sit-down-and-submit-online/
ಉತ್ತರ ಪ್ರದೇಶ: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಒಂದು ದಿನದ ನಂತರ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಜಾತ್ರೆ ಪ್ರದೇಶದ ಸೆಕ್ಟರ್ 22ರಲ್ಲಿ ಹಲವಾರು ಡೇರೆಗಳನ್ನು ಸುಟ್ಟು ಭಸ್ಮವಾಗಿದ್ದಾವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ. ಬೆಂಕಿ ಕಾಣಿಸಿಕೊಂಡ ಪ್ರದೇಶದಲ್ಲಿ ಯಾವುದೇ ಜನರು ಇರಲಿಲ್ಲ, ಆದ್ದರಿಂದ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಆದಾಗ್ಯೂ, ಬೆಂಕಿಯ ಕಾರಣವನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. https://twitter.com/viralnewsvibes/status/1884903169790247226 ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಬುಧವಾರ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 30 ಭಕ್ತರು ಸಾವನ್ನಪ್ಪಿದ್ದರು. ಜನವರಿ 19ರಂದು ಬೆಂಕಿ ಕಾಣಿಸಿಕೊಂಡು 180 ಗುಡಿಸಲುಗಳು ಸುಟ್ಟುಹೋಗಿದ್ದವು ಜನವರಿ 19 ರಂದು ಸಂಜೆ 4: 30 ರ ಸುಮಾರಿಗೆ ಮಹಾ ಕುಂಭದ ಜಾತ್ರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾಸ್ತ್ರಿ ಸೇತುವೆ ಬಳಿಯ ಸೆಕ್ಟರ್ ೧೯ ರ ಗೀತಾ ಪ್ರೆಸ್ ಕ್ಯಾಂಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೀತಾ ಪ್ರೆಸ್ ನ…
ಬೆಂಗಳೂರು: ಪ್ರತಿಯೊಬ್ಬ ನಾಗರಿಕನು ತನ್ನ ಬಿಬಿಎಂಪಿ ಇ-ಖಾತೆ ಯನ್ನು ಸರಾಗವಾಗಿ, ಉಚಿತವಾಗಿ ತಾನೇ ಸ್ವಂತವಾಗಿ ಪಡೆಯುವುದನ್ನು ಸಕ್ರಿಯಗೊಳಿಸಲು ಈ ಕೆಳಗಿನಂತೆ ಸ್ಪಷ್ಟೀಕರಿಸಿದೆ. 1. ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ ಅಗತ್ಯವಿಲ್ಲ. 2. ಕೇವಲ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ತಕ್ಷಣದ ಮಾರಾಟ ಅಥವಾ ವಹಿವಾಟಿಗೆ ಮಾಡುವವರು ಮಾತ್ರ ಬಿಬಿಎಂಪಿ ಇ-ಖಾತೆ ವ್ಯವಸ್ಥೆಯಲ್ಲಿ ಒಂದು ಬಾರಿಗೆ ಮಾತ್ರ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರ (EC) ಅನ್ನು ನೀಡಬೇಕಾಗುತ್ತದೆ. ಇದು ಒಟ್ಟು ಆಸ್ತಿಯಲ್ಲಿ ಕೇವಲ 5% ಆಗಿರುತ್ತದೆ. 3. ಮೇಲಿನ ವಿಶೇಷ ಪ್ರಕರಣದಲ್ಲಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು(EC), I. “ಯಾವ ದಿನಾಂಕದಿಂದ”- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ಹಾಲಿ ಹಕ್ಕು ಹೊಂದಿರುವ ಮಾಲೀಕನು ಕ್ರಯ/ನೋಂದಾಯಿತ ಪತ್ರದ ಮೂಲಕ ಪಡೆದ ದಿನಾಂಕದ ಕನಿಷ್ಟ ಒಂದು ದಿನದ ಹಿಂದಿನ ದಿನಾಂಕದಿಂದ ಮತ್ತು II. “ಯಾವ ದಿನಾಂಕದವರೆಗೆ”- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ದಿನಾಂಕ: 31.10.2024 ರ ವರೆಗೆ ಇರಬೇಕು https://twitter.com/DKShivakumar/status/1884868190871912590 4. ಆಸ್ತಿ ಋಣಭಾರ…
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆಯ ಅಸ್ತ್ರವನ್ನು ಪ್ರಯೋಗಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ಸುಗ್ರೀವಾಜ್ಞೆಗೆ ಒಪ್ಪಿಗೆ ಕೂಡ ನೀಡಲಾಗಿದೆ. ಇದಕ್ಕಾಗಿ ಇಂದು ಸಂಜೆ 4 ಗಂಟೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಎಲ್ಲವೂ ಫೈನಲ್ ಆಗಲಿದೆ. ಈ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸಂಬಂಧ ಸುಗ್ರೀವಾಜ್ಞೆಗೆ ಇಂದಿನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಕೆಲ ಅಂಶಗಳ ಕುರಿತಂತೆ ಚರ್ಚಿಸಲು ಇಂದು ಸಂಜೆ 4 ಗಂಟೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದರು. ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಸಿಎಂ ಸಿದ್ಧರಾಮಯ್ಯ ಅವರಿಗೆ ಸಂಪುಟವು ಪರಮಾಧಿಕಾರ ನೀಡಿದೆ. ಹಿರಿಯ ಸಚಿವರು, ಶಾಸಕರ ನೇತೃತ್ವದಲ್ಲಿ ನಡೆಯುವಂತ ಇಂದಿನ ಸಭೆಯಲ್ಲಿ ಕೆಲ ಅಂಶಗಳ…
ಬೆಂಗಳೂರು : ಮತಾಂಧ ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಗುಂಡಿಟ್ಟು ಕೊಂದು, ಅವರು ಇಹಲೋಕ ತ್ಯಜಿಸಿರಬಹುದು. ಆದರೆ ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಾಗಲಿ ಕೊಲ್ಲಲು ಸಾಧ್ಯವಿಲ್ಲ. ಇಂದಿಗೂ ಅವರ ವಿಚಾರಧಾರೆಗಳು , ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪ್ರಸ್ತುತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹುತಾತ್ಮರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜನವರಿ 30, 1948 ರಂದು ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ ದಿನ. ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದರು. ಅವರ ಹೋರಾಟಡ ಬದುಕು, ಅಹಿಂಸೆ, ಸತ್ಯಾಗ್ರಹ, ಇವು ನಮಗೆ ಪ್ರೇರಣೆ. ಜಗತ್ತಿನಲ್ಲಿ ಸತ್ಯ, ಅಹಿಂಸೆ, ಸತ್ಯಾಗೃಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ದೇಶದಲ್ಲಿ ಬಹಳ ದೀರ್ಘ ಕಾಲ ನಡೆದ ಹೋರಾಟದ ನಾಯಕತ್ವವನ್ನು ಗಾಂಧೀಜಿ ವಹಿಸಿದ್ದರು. 1915 ರಲ್ಲಿ ದಕ್ಷಿಣ ಆಫ್ರಿಕಾ ದಿಂದ…
ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗಿರುವಂತ ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಂಪುಟ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಫೈನಾನ್ಸ್ ಗಳ ಕಡಿವಾಣಕ್ಕೆ ತರಲಿರುವ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆಯ ಸುಗ್ರೀವಾಜ್ಞೆ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಸಲಾಯಿತು. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ಸಂಬಂಧ ಮಂಡಿಸಲಾದಂತ ಸುಗ್ರೀವಾಜ್ಞೆ ತರುವಂತ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇನ್ನೂ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ ಬಳಿಕ, ಅವರು ಒಪ್ಪಿಗೆ ಸೂಚಿಸಿದ್ರೇ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಬೀಳಿದೆ. https://kannadanewsnow.com/kannada/congress-mp-rakesh-rathod-arrested-on-rape-charges/ https://kannadanewsnow.com/kannada/breaking-msc-student-brutally-murdered-with-slit-throat-in-raichur/
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಸೀತಾಪುರದ ಲೋಕಸಭಾ ಸಂಸದ ರಾಥೋಡ್ ಅವರನ್ನು ಶರಣಾಗತರಾದ ನಂತರ ಬಂಧಿಸಿ ಭಾರಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಮಹಿಳೆಯೊಬ್ಬಳು ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಥೋಡ್ ವಿರುದ್ಧ ಜನವರಿ 17 ರಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅವನು ತನ್ನನ್ನು ಲೈಂಗಿಕವಾಗಿ ಶೋಷಿಸುತ್ತಿದ್ದಾನೆ ಎಂದು ಅವಳು ಆರೋಪಿಸಿದಳು ಮತ್ತು ಅವನು ಅವಳನ್ನು ಮದುವೆಯಾಗಿ ರಾಜಕೀಯ ವೃತ್ತಿಜೀವನವನ್ನು ಮಾಡುವುದಾಗಿ ಭರವಸೆ ನೀಡಿದ್ದಾನೆ ಎಂದು ಹೇಳಿದರು. ಅವರು ಕರೆ ವಿವರಗಳು ಮತ್ತು ಕರೆ ರೆಕಾರ್ಡಿಂಗ್ ಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಬುಧವಾರ, ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು ಮತ್ತು ಶರಣಾಗುವಂತೆ ಕೇಳಿಕೊಂಡಿತು. ಹೈಕೋರ್ಟ್ಗೆ ಮುಂಚಿತವಾಗಿ, ಸೀತಾಪುರದ ಎಂಪಿ-ಎಂಎಲ್ಎ ನ್ಯಾಯಾಲಯವು ಜನವರಿ 23 ರಂದು ಅವರ…
ಬೆಂಗಳೂರು : “ಬಿಜೆಪಿಯವರು ಗಾಂಧಿಯವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅದನ್ನು ಉಳಿಸುವ ಕೆಲಸ ಮಾಡಬೇಕು. ಮಹಾತ್ಮ ಗಾಂಧಿ ಅವರ ತತ್ವಗಳನ್ನು ಒಪ್ಪದ ಬಿಜೆಪಿಯವರು ಅವರ ಪ್ರತಿಮೆ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಹುತಾತ್ಮ ದಿನಾಚರಣೆ ಅಂಗವಾಗಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು. “ಬಿಜೆಪಿಯವರು ಗಾಂಧಿ ಅವರ ತತ್ವಗಳನ್ನು ಬಾಯಲ್ಲಿ ಹೇಳದೇ ಇರಬಹುದು ಆದರೆ ಆಡಳಿತ ಪಕ್ಷವನ್ನು ವಿರೋಧಿಸಲು ಗಾಂಧಿ ಅವರ ಪ್ರತಿಮೆಯನ್ನೇ ಆಶ್ರಯಿಸಬೇಕು. ಧರಣಿ ಮಾಡಬೇಕು ಎಂದು ಹೇಳಿಕೊಟ್ಟವರೇ ಗಾಂಧಿ. ಗಾಂಧಿ ಅವರ ಮೌನ, ಧ್ಯಾನದ ಹಿಂದೆ ದೊಡ್ಡ ಸಂದೇಶವಿದೆ. ಸ್ವದೇಶಿ ಆಲೋಚನೆ ಹೇಳಿಕೊಟ್ಟವರು ಗಾಂಧಿ. ಪ್ರಧಾನಿ ಅವರು ಇದನ್ನೇ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿದ್ದಾರೆ” ಎಂದರು. “ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ…