Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಜೂನ್.11, 2023ರಂದು ಆರಂಭಗೊಂಡ ಈ ಯೋಜನೆ ಯಶಸ್ಸು ಕಂಡಿದೆ. ಕೋಟ್ಯಂತರ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ದಿನಾಂಕ 11-06-2023ರಂದು ಶಕ್ತಿ ಯೋಜನೆಯನ್ನು ಕರ್ನಾಟಕದಲ್ಲಿ ಸರ್ಕಾರ ಜಾರಿಗೊಳಿಸಿತು. ದಿನಾಂಕ 11-06-2025ರ ಇಂದಿಗೆ ಎರಡು ವರ್ಷ ಕಳೆದಿದೆ. ಜೂನ್.10, 2025ರವರೆಗೆ ಮೂರು ಸಾರಿಗೆ ಬಸ್ಸುಗಳಲ್ಲಿ ಒಟ್ಟು 4,74,82,49,843 ಮಹಿಳೆಯರು ಟಿಕೇಟ್ ಮೌಲ್ಯ ಪಾವತಿಸದೇ ಶೂನ್ಯ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಿರುವುದಾಗಿ ತಿಳಿಸಿದ್ದಾರೆ. ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ದಿನಾಂಕ 11-06-2025ರವರೆಗೆ ಪ್ರಯಾಣಿಸಿದಂತ ಮಹಿಳೆಯರ ಸಂಖ್ಯೆ 144,23,83,328 ಆಗಿದ್ದರೇ ಇದರ ಟಿಕೆಟ್ ಮೌಲ್ಯ ರೂ.4556,27,06,789 ಆಗಿದೆ. ಬಿಎಂಟಿಸಿ ಬಸ್ಸಿನಲ್ಲಿ ಇಲ್ಲಿಯವರೆಗೆ 150,69,56,654 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೇ, ಅದರ ಟಿಕೆಟ್ ಮೌಲ್ಯ ರೂ.2061,04,38,637 ಆಗಿದೆ ಎಂದಿದ್ದಾರೆ. ಇನ್ನೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ…

Read More

ಹುಬ್ಬಳ್ಳಿ : ರಾಜ್ಯದ ವಿಶ್ವವಿದ್ಯಾಲಯ ‘KSLU’ ಪ್ರತಿಷ್ಠೆ ಮತ್ತಷ್ಟು ಹೆಚ್ಚಿದೆ. ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಅಭಿವೃದ್ಧಿಗೆ ಫುಲ್ ಮಾರ್ಕ್ಸ್ ನೀಡಿರುವ ನ್ಯಾಕ್‌ ತಂಡ ‘ಎ’ ಗ್ರೇಡ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನ್ಯಾಕ್‌ ನಿಂದ ‘ಎ’ ಗ್ರೇಡ್ ದೊರೆತಿದ್ದು, ವಿಶ್ವವಿದ್ಯಾಲಯದ ಹೆಮ್ಮೆ ಹೆಚ್ಚಿಸಿದೆ ಎಂನು ಶಿಕ್ಷಣ ತಜ್ಞರು ಸಂತಸ ಹಂಚಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ವಿವಿಯು ಕಾನೂನು ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸುತ್ತಿದ್ದು, 128 ಸಂಯೋಜಿತ ಕಾನೂನು ಕಾಲೇಜುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ ಮೇ ತಿಂಗಳಲ್ಲಿ ನ್ಯಾಕ್ ಪೀರ್ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅಧ್ಯಕ್ಷೆ ಡಾ. ನಿಶಿತಾ ಜಾಲ, ಡಾ.ಕೆ. ಜಯಚಂದ್ರ ರೆಡ್ಡಿ, ಡಾ. ಜಯಶಂಕರ ಕೆ. ಐ., ಡಾ. ಸುಭೀರ್ ಕುಮಾರ ರಾಯ್, ಡಾ. ಧರಮೇಂದ್ರ ಕುಮಾರ ಮಿಶ್ರಾ, ಡಾ. ತೆನುಮೋಜಿ ರಾಮಾನುಜಂ ಮತ್ತು ಡಾ. ಜಗನ್ನಾಥ ಪಾಟೀಲ ಅವರನ್ನೊಳಗೊಂಡ ತಂಡವು ಹೈಬ್ರಿಡ್ ಮೋಡ್‌ನಲ್ಲಿ,…

Read More

ನವದೆಹಲಿ: “ಜಾತಿಗಣತಿ ವಿರೋಧಿಸಿದ ಬಿಜೆಪಿ, ಈಗ ಗೊಂದಲ ನಿವಾರಿಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿರುವುದೇಕೆ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಜಾತಿ ಗಣತಿ ವಿಚಾರವಾಗಿ ಮರು ಸಮೀಕ್ಷೆಗೆ ಮುಂದಾಗಿರುವ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಜಾತಿ ಗಣತಿ ವರದಿ ವಿರೋಧ ಮಾಡಿದವರು ಅವರಲ್ಲವೇ? ಅವರು ಜಾತಿಗಣತಿ ವರದಿ ಸ್ವೀಕಾರ ಮಾಡಲಿಲ್ಲ ಯಾಕೆ? ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಈ ವರದಿಯಲ್ಲಿ ಯಾರ ಅಂಕಿ ಅಂಶಗಳು ಬಿಟ್ಟುಹೋಗಿವೆ ಅವರ ಮಾಹಿತಿಯನ್ನು ಸೇರಿಸಲು ಅವಕಾಶ ನೀಡಲಾಗುವುದು. ಈಗಾಗಲೇ ನೀಡಿರುವ ವರದಿಯನ್ನು ನಾವು ಬಳಸಿಕೊಳ್ಳುತ್ತೇವೆ. ಸಮಾಜಗಳಿಗೆ ನ್ಯಾಯ ಒದಗಿಸಬೇಕು, ಗೊಂದಲಗಳನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ” ಎಂದು ತಿಳಿಸಿದರು. ಈ ಬಾರಿ ವೈಜ್ಞಾನಿಕವಾಗಿ ಮಾಡಲಾಗುವುದೇ ಎಂದು ಕೇಳಿದಾಗ, “ನಾವು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಜೈನ, ಲಂಬಾಣಿ, ಬೆಸ್ತ ಸೇರಿದಂತೆ ಅನೇಕ ಸಮಾಜದ ಜನರು ನನ್ನನ್ನು ಭೇಟಿ ಮಾಡಿ ಆತಂಕ…

Read More

ನವದೆಹಲಿ: ಶೀಘ್ರದಲ್ಲೇ, ಆಧಾರ್ ದೃಢೀಕೃತ ಬಳಕೆದಾರರು ಜುಲೈ 1, 2025 ರಿಂದ ತತ್ಕಾಲ್ ಯೋಜನೆಯಡಿಯಲ್ಲಿ ತಮ್ಮ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಜೂನ್ 10, 2025 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಬಳಕೆದಾರರು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಎಲ್ಲಾ ವಲಯಗಳಿಗೆ ತಿಳಿಸಿದೆ. 01-07-2025 ರಿಂದ ಜಾರಿಗೆ ಬರುವಂತೆ, ತತ್ಕಾಲ್ ಯೋಜನೆಯಡಿಯಲ್ಲಿ ಟಿಕೆಟ್‌ಗಳನ್ನು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವೆಬ್‌ಸೈಟ್ / ಅದರ ಅಪ್ಲಿಕೇಶನ್ ಮೂಲಕ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ಬುಕ್ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ. ಜುಲೈ 15 ರಿಂದ OTP ದೃಢೀಕರಣ ಕಡ್ಡಾಯ ತರುವಾಯ, ಜುಲೈ 15, 2025 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣವನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದಿದೆ. “ಸಿಸ್ಟಮ್-ರಚಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆ / ಅಧಿಕೃತ ಏಜೆಂಟ್‌ಗಳ…

Read More

ಬೆಂಗಳೂರು: ಪ್ರಯಾಣಿಕರ ಹೆಚ್ಚಿದ ಬೇಡಿಕೆ ಮತ್ತು ಮುಂಬರುವ ದಿನಗಳಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಮಂಡಳಿಯು ಯಶವಂತಪುರ – ಯೋಗ ನಗರಿ ರಿಷಿಕೇಶ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06597/06598) ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಮತ್ತು ದಕ್ಷಿಣ ಹಾಗೂ ಉತ್ತರ ಭಾರತದ ನಡುವಿನ ದೂರ ಪ್ರಯಾಣದ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಯಶವಂತಪುರ – ಯೋಗ ನಗರಿ ರಿಷಿಕೇಶ ಎಕ್ಸ್‌ಪ್ರೆಸ್ ವಿಶೇಷ ರೈಲು ವಿವರಗಳು: ರೈಲು ಸಂಖ್ಯೆ 06597 ಯಶವಂತಪುರ – ಯೋಗ ನಗರಿ ರಿಷಿಕೇಶ ವಿಶೇಷ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ಪ್ರತಿ ಗುರುವಾರ ಬೆಳಿಗ್ಗೆ 07:00 ಗಂಟೆಗೆ 19.06.2025, 26.06.2025 ಮತ್ತು 03.07.2025 ರಂದು ಹೊರಟು, ಶನಿವಾರ ಬೆಳಿಗ್ಗೆ 10:20 ಗಂಟೆಗೆ ಯೋಗ ನಗರಿ ರಿಷಿಕೇಶ ತಲುಪಲಿದೆ. ರೈಲು ಸಂಖ್ಯೆ 06598 ಯೋಗ ನಗರಿ ರಿಷಿಕೇಶ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಯೋಗ ನಗರಿ ರಿಷಿಕೇಶದಿಂದ ಪ್ರತಿ ಶನಿವಾರ ಸಂಜೆ 05:55…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸೋದಕ್ಕೆ ಮೊದಲ ಗ್ಯಾರಂಟಿ ಯೋಜನೆಯಾಗಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಿ ಜೂನ್.11ರ ಇಂದಿಗೆ 2 ವರ್ಷ ಕಳೆದಿದೆ. ಇಂತಹ ಶಕ್ತಿ ಯೋಜನೆಗೆ ಭರ್ಜರಿ ರೆಪ್ಸಾನ್ಸ್ ದೊರೆತಿದ್ದು, ಕೋಟ್ಯಂತರ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರವು ಮಾಹಿತಿ ಬಿಡುಗಡೆ ಮಾಡಲಾಗಿದ್ದು, ದಿನಾಂಕ 11-06-2023ರಂದು ಶಕ್ತಿ ಯೋಜನೆಯನ್ನು ಕರ್ನಾಟಕದಲ್ಲಿ ಸರ್ಕಾರ ಜಾರಿಗೊಳಿಸಿತು. ದಿನಾಂಕ 11-06-2025ರ ಇಂದಿಗೆ ಎರಡು ವರ್ಷ ಕಳೆದಿದೆ. ಜೂನ್.10, 2025ರವರೆಗೆ ಮೂರು ಸಾರಿಗೆ ಬಸ್ಸುಗಳಲ್ಲಿ ಒಟ್ಟು 76,40,285 ಮಹಿಳೆಯರು ಟಿಕೇಟ್ ಮೌಲ್ಯ ಪಾವತಿಸದೇ ಉಚಿತವಾಗಿ ಪ್ರಯಾಣಿಸಿರುವುದಾಗಿ ತಿಳಿಸಿದೆ. ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ದಿನಾಂಕ 11-06-2025ರವರೆಗೆ ಪ್ರಯಾಣಿಸಿದಂತ ಮಹಿಳೆಯರ ಸಂಖ್ಯೆ 144,23,83,328 ಆಗಿದ್ದರೇ ಇದರ ಟಿಕೆಟ್ ಮೌಲ್ಯ ರೂ.4556,27,06,789 ಆಗಿದೆ. ಬಿಎಂಟಿಸಿ ಬಸ್ಸಿನಲ್ಲಿ ಇಲ್ಲಿಯವರೆಗೆ 150,69,56,654 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೇ, ಅದರ ಟಿಕೆಟ್ ಮೌಲ್ಯ ರೂ.2061,04,38,637 ಆಗಿದೆ…

Read More

ಬೆಂಗಳೂರು: ರಾಜ್ಯ ಸರ್ಕಾರವು ನವದೆಹಲಿಯಲ್ಲಿರುವಂತ ಕರ್ನಾಟಕ ಭವನದ ವಾಸ್ತವ್ಯ ದರಗಳು ಹಾಗೂ ಷರತ್ತು, ನಿಬಂಧನೆಗಳನ್ನು ಪರಿಷ್ಕರಣೆ ಮಾಡಿ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ನವದೆಹಲಿಯ ಕರ್ನಾಟಕ ಭವನವು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯ ಅಂಗವಾಗಿದ್ದು ಪ್ರಸ್ತುತ 03 ಭವನಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಭವನ-1 ಅನೆಕ್ಸ್ ಕಟ್ಟಡ (ಚಾಣಕ್ಯಪುರಿ), ಕರ್ನಾಟಕ ಭವನ-2 (ಶರಾವತಿ) ಹಾಗೂ ಕರ್ನಾಟಕ ಭವನ-3 (ಭೀಮಾ), ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ನವದೆಹಲಿಯಲ್ಲಿರುವ ಕರ್ನಾಟಕ ಭವನಗಳ ವಾಸ್ತವ್ಯದ ದರಗಳನ್ನು ಹಾಗೂ ಷರತ್ತುಗಳನ್ನು ನಿಗದಿಪಡಿಸಿ ಪಕಟಿಸಲಾಗಿದೆ. ಆದರೆ, ಮೇಲೆ ಓದಲಾದ (2)ರ ಪತ್ರದಲ್ಲಿ ದರ ಹಾಗೂ ಕೊಠಡಿ ಹಂಚಿಕೆ ಮಾರ್ಗಸೂಚಿಗಳಿಗೆ ಕೆಲವೊಂದು ಮಾರ್ಪಾಡು ಮಾಡುವಂತೆ ನಿವಾಸಿ ಆಯುಕ್ತರು ಮತ್ತೊಮ್ಮೆ ಪಸ್ತಾವನೆ ಸಲ್ಲಿಸಿರುತ್ತಾರೆ. ಅಲ್ಲದೇ, ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಹಾಗೂ ಹಕ್ಕು ಭಾದ್ಯತೆಗಳ ಸಮಿತಿಗಳು ಸಹ ಕೆಲವೊಂದು ಮಾರ್ಪಾಡುಗಳನ್ನು ತರುವಂತೆ ಸೂಚಿಸಿರುತ್ತಾರೆ. ಈ ಪುಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ. ನವದೆಹಲಿಯ ಕರ್ನಾಟಕ…

Read More

ಬೆಂಗಳೂರು: ನಗರದಲ್ಲಿ ಭೀಕರ ರಸ್ತೆ ಅಪಘಾತ ಉಂಟಾಗಿದೆ. ಏರ್ ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿಯಲ್ಲಿ ಬೈಕಿನಿಂದ ಸ್ಕಿಡ್ ಆಗಿ ಬಿದ್ದಂತ ಮಹಿಳೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿಯಲ್ಲಿ ಬೈಕ್ ನಲ್ಲಿ ಪತಿ, ಮಕ್ಕಳ ಜೊತೆಗೆ ಮಹಿಳೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಬೈಕ್ ಪಂಕ್ಚರ್ ಆಗಿ ಸ್ಕಿಡ್ ಆಗಿ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಬೈಕಿನಿಂದ ಪತಿ, ಮಹಿಳೆ, ಮಗು ಕೆಳಗೆ ಬಿದ್ದಿದ್ದಾರೆ. ಬೈಕಿನ ಹಿಂದಿನಿಂದ ಬರುತ್ತಿದ್ದಂತ ಸಿಮೆಂಟ್ ಲಾರಿಯೊಂದು ಬೈಕಿನಿಂದ ಕೆಳಗೆ ಬಿದ್ದಂತ ಮಹಿಳೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/i-will-surrender-before-the-peoples-representatives-court-in-bengaluru-former-minister-vinay-kulkarni/ https://kannadanewsnow.com/kannada/rt-pcr-test-made-mandatory-for-ministers-before-meeting-pm-modi-amid-covid-19-surge-report/

Read More

ಧಾರವಾಡ: ಬಿಜೆಪಿಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕೋರ್ಟ್ ನೀಡಿರುವಂತ ಆದೇಶಕ್ಕೆ ತಲೆಬಾಗುತ್ತೇನೆ. ಕೋರ್ಟ್ ಆದೇಶದ ಕಾರಣದಿಂದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಶರಣಾಗುವುದಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನನ್ನ ವಿರುದ್ಧ ಹುನ್ನಾರ ನಡೆದಿದೆ. ನಾನು ಈಗ ಅಸಹಾಯಕ ಸ್ಥಿತಿಯಲ್ಲಿ ಇದ್ದೇನೆ. ಆದರೇ ಸತ್ಯಕ್ಕೆ ಎಂದಿಗೂ ಜಯವಿದೆ. ಸತ್ಯಕ್ಕೆ ಜಯ ಸಿಗುತ್ತದೆ ಎನ್ನುವ ನಂಬಿಕೆ ನನಗಿದೆ ಎಂದರು. ನನ್ನ ಕ್ಷೇತ್ರದಲ್ಲಿ ನಾನು ಇಲ್ಲದೇ ಇದ್ದರೂ ನನ್ನ ಪತ್ನಿ, ಪಕ್ಷದ ಮುಖಂಡರು ಜನರ ಸಂಕಷ್ಟಗಳಿಗೆ ಸ್ಪಂದಿಸುವಂತ ಕೆಲಸ ಮಾಡುತ್ತಿದ್ದಾರೆ. ನಾನು ಕ್ಷೇತ್ರದ ಜನರ ಸಂಕಷ್ಟ ಪರಿಹಾರಕ್ಕಾಗಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿರುವುದಾಗಿ ಹೇಳಿದರು. ಅಂದಹಾಗೇ ಶಾಸಕ ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನೀಡಿದ್ದಂತ ಜಾಮೀನನ್ನು ಸುಪ್ರೀಂ ಕೋರ್ಟ್ ಜೂನ್.6ರಂದು ರದ್ದುಪಡಿಸಲಾಗಿತ್ತು. ಅಲ್ಲದೇ ಒಂದು ವಾರದಲ್ಲಿ ವಿಚಾರಣಾ ಕೋರ್ಟ್ ಮುಂದೆ ಶರಣಾಗುವಂತೆಯೂ ಆದೇಶ ಮಾಡಿತ್ತು. ಹೀಗಾಗಿ ಶಾಸಕ…

Read More

ನವದೆಹಲಿ: ಬುಧವಾರ ಸೋನಮ್ ರಘುವಂಶಿ ಅವರು ತಮ್ಮ ಪತಿ ರಾಜಾ ರಘುವಂಶಿ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಸೋನಮ್ ಈ ತಪ್ಪೊಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಈಗ ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅವರ ಔಪಚಾರಿಕ ಹೇಳಿಕೆಯನ್ನು ದಾಖಲಿಸಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಪೊಲೀಸರು ಆಕೆಯ ತಪ್ಪೊಪ್ಪಿಗೆಯನ್ನು ವೀಡಿಯೊ ಚಿತ್ರೀಕರಣ ಮಾಡಲು ಸಹ ಸಿದ್ಧತೆ ನಡೆಸುತ್ತಿದ್ದರು, ಇದು ಮುಂದೆ ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ರಾಜಾ ರಘುವಂಶಿ ಕೊಲೆ ಪ್ರಕರಣದ ಇತರ ಆರೋಪಿಗಳೊಂದಿಗೆ ಸೋನಮ್ ರಘುವಂಶಿಯನ್ನು ಬುಧವಾರ ಶಿಲ್ಲಾಂಗ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಮೇಘಾಲಯ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿತು. ಐವರು ಆರೋಪಿಗಳನ್ನು ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. https://kannadanewsnow.com/kannada/good-news-for-the-states-farmers-cm-launches-kusum-c-project-henceforth-electricity-will-be-supplied-even-during-the-day/ https://kannadanewsnow.com/kannada/rt-pcr-test-made-mandatory-for-ministers-before-meeting-pm-modi-amid-covid-19-surge-report/

Read More