Author: kannadanewsnow09

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು 2025ರ ಪುರುಷರ ಹಾಗೂ ಮಹಿಳಾ ಖೋಖೋ ವಿಶ್ವಕಪ್ ಗೆದ್ದಂತ ಇಬ್ಬರು ಕನ್ನಡಿಗರಿಗೆ ತಲಾ 5 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ. 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ‌ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದರು. ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು. https://kannadanewsnow.com/kannada/five-injured-in-ksrt-car-collision/ https://kannadanewsnow.com/kannada/more-than-500-illegal-immigrants-detained-since-trump-took-office/

Read More

ಚಾಮರಾಜನಗರ: ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿ ಸಿ ಹಾಗೂ ಕಾರಿನ ನಡುವೆ ಭೀಕರ ಅವಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಐವರಿಗೆ ಗಂಭೀರ ಗಾಯವಾಗಿರೋದಾಗಿ ತಿಳಿದು ಬಂದಿದೆ. ಚಾಮರಾಜನಗರದಲ್ಲಿ ಕಾರು ಹಾಗೂ ಕೆ ಎಸ್ ಆರ್ ಟಿಸಿ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದಂತ ಐವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/amul-cuts-milk-prices-by-rs-1-per-litre-across-india/ https://kannadanewsnow.com/kannada/more-than-500-illegal-immigrants-detained-since-trump-took-office/

Read More

ನವದೆಹಲಿ: ಅಮುಲ್ ಹಾಲಿನ ಬೆಲೆಯನ್ನು ಲೀಟರ್ಗೆ 1 ರೂಪಾಯಿ ಕಡಿಮೆ ಮಾಡಲಾಗಿದೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ ಮತ್ತು ಅಮುಲ್ ಫ್ರೆಶ್ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ತಿಳಿಸಿದೆ. ಹೊಸ ದರಗಳು ಇಂದಿನಿಂದ ಜನವರಿ 24 ರಿಂದ ಜಾರಿಗೆ ಬರಲಿವೆ. ಬೆಲೆ ಬದಲಾವಣೆಯ ನಂತರ, ಅಮುಲ್ ಗೋಲ್ಡ್ನ ಒಂದು ಲೀಟರ್ ಪ್ಯಾಕೆಟ್ನ ಬೆಲೆ ಈಗ 65 ರೂ.ಗೆ ಮತ್ತು ಒಂದು ಲೀಟರ್ ತಾಜಾ ಹಾಲಿನ ಪ್ಯಾಕೆಟ್ ಪ್ರತಿ ಲೀಟರ್ಗೆ 53 ರೂ.ಗೆ ಲಭ್ಯವಿದೆ. ಅಮುಲ್ ಗೋಲ್ಡ್, ಅಮುಲ್ ಫ್ರೆಶ್ ಮತ್ತು ಟಿ-ಸ್ಪೆಷಲ್ ಬೆಲೆಗಳನ್ನು ಕಡಿತಗೊಳಿಸಲಾಗಿದೆ. ಕಳೆದ ವರ್ಷ ಸಾರ್ವತ್ರಿಕ ಚುನಾವಣೆಯ ನಂತರ ಕಂಪನಿಯು ಪ್ರತಿ ಲೀಟರ್ಗೆ 2 ರೂಪಾಯಿಗಳಷ್ಟು ಬೆಲೆಯನ್ನು ಹೆಚ್ಚಿಸಿತ್ತು. ಕಳೆದ ವರ್ಷ ಜೂನ್ 4 ರಂದು ಘೋಷಿಸಲಾದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳಿಗೆ ಸ್ವಲ್ಪ ಮೊದಲು ಬೆಲೆಗಳನ್ನು ಹೆಚ್ಚಿಸಲಾಯಿತು. ಮೂರು ದಿನಗಳ ಹಿಂದೆ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದ್ದು, ಅಮುಲ್ ಗೋಲ್ಡ್…

Read More

ನವದೆಹಲಿ: ಅಮುಲ್ ಹಾಲಿನ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಲು ಅಮುಲ್ ನಿರ್ಧರಿಸಿದೆ. ಈ ಮೂಲಕ ಅಮುಲ್ ಹಾಲು ಬಳಕೆದಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. ಈ ಕುರಿತಂತೆ ಮಾಹಿತಿ ನೀಡಲಾಗಿದ್ದು, ಅಮುಲ್ ತನ್ನ 3 ಪ್ರಮುಖ ರೂಪಾಂತರಗಳಲ್ಲಿ ಪ್ರತಿ ಲೀಟರ್ ಗೆ 1 ರೂಪಾಯಿ ಬೆಲೆ ಕಡಿತವನ್ನು ಘೋಷಿಸಿದೆ. ಪ್ರಮುಖ ಡೈರಿ ಬ್ರಾಂಡ್ ಅಮುಲ್ ತನ್ನ ಮೂರು ಪ್ರಮುಖ ಉತ್ಪನ್ನಗಳಾದ ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್ ಮೇಲೆ ಪ್ರತಿ ಲೀಟರ್ಗೆ 1 ರೂ.ಗಳ ಬೆಲೆ ಕಡಿತವನ್ನು ಘೋಷಿಸಿದೆ. https://kannadanewsnow.com/kannada/governments-permission-mandatory-for-shooting-in-forests-minister-ishwar-khandre/ https://kannadanewsnow.com/kannada/more-than-500-illegal-immigrants-detained-since-trump-took-office/

Read More

ಬೆಂಗಳೂರು : ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿರುವ ಸಚಿವರು, ಚಲನಚಿತ್ರ, ದೂರದರ್ಶನ ಸಾಕ್ಷ್ಯಚಿತ್ರ, ಧಾರಾವಾಹಿ ಇತ್ಯಾದಿ ಚಿತ್ರೀಕರಣಕ್ಕೆ ಸಂಬಂಧಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿತ ಶುಲ್ಕ ಕಟ್ಟಿಸಿಕೊಂಡು ಅನುಮತಿ ನೀಡುತ್ತಿದ್ದಾರೆ. ಇದಲ್ಲದೆ ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ. ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಪ್ರಕೃತಿ ಹಸ್ತಾಂತರಿಸುವ ನಿಟ್ಟಿನಲ್ಲಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ…

Read More

ಹಾಸನ: ಮನೆಯಲ್ಲಿ ಯಾರು ಇಲ್ಲದ ವಿಷಯ ತಿಳಿದಂತ ಕಳ್ಳರು ಬಾಗಿಲು ಮುರಿದು ಕನ್ನ ಹಾಕಿದ್ದಾರೆ. ಮನೆಯಲ್ಲಿ ಸಿಕ್ಕಂತ ಚಿನ್ನ, ಬೆಳ್ಳಿ, ನಗದು ದೋಚಿದಂತ ಕಳ್ಳರು, ಅವೆಲ್ಲವನ್ನು ಮನೆಯ ಮುಂದೆ ನಿಲ್ಲಿಸಿದ್ದಂತ ಮಾಲೀಕರ ಕಾರಿನಲ್ಲಿಯೇ ತುಂಬಿಕೊಂಡು ಪರಾರಿಯಾಗಿರುವಂತ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ವಿದ್ಯಾನಗರದ ನಿವಾಸಿ ವನಜಾಕ್ಷಿ ಎಂಬುವರು ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದರು. ಕಳೆದ ಹತ್ತು ದಿನಗಳ ಹಿಂದೆ ಹೋಗಿದ್ದಂತ ಅವರು, ಮರಳಿ ಮನೆಗೆ ಬಂದಾಗ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರು ಇಲ್ಲದ ವಿಚಾರ ತಿಳಿದಂತ ಕಳ್ಳರು ಒಡವೆ, ಬೆಳ್ಳಿ, ನಗದು ದೋಚಿದ್ದಾರೆ. ಆ ಬಳಿಕ ಮನೆಯಲ್ಲಿಯೇ ಇದ್ದಂತ ಕಾರಿನ ಕೀ ತೆಗೆದುಕೊಂಡು, ಇನ್ನೊಂದು ಗೇಟ್ ನ ಬೀಗ ಒಡೆದು ಕಾರಿನಲ್ಲಿ ಕಳ್ಳತನ ಮಾಡಿದ್ದಂತ ಎಲ್ಲಾ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/cnn-to-lay-off-200-jobs-cnn-layoffs/ https://kannadanewsnow.com/kannada/more-than-500-illegal-immigrants-detained-since-trump-took-office/

Read More

ಬೆಂಗಳೂರು: ತೀವ್ರ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಚಿಕಿತ್ಸೆ ನೀಡಿದರೆ ಅವರು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸದೃಡವಾಗುವ ಸಾಮರ್ಥ್ಯ ಹೊಂದಲು ಶಕ್ತರಾಗಿರುತ್ತಾರೆ ಎಂದು ನಿಮ್ಹಾನ್ಸ್‌ ಹಾಗೂ ಲಿವ್‌ ಲವ್‌ ಲಾಫ್‌ ಫೌಂಡೇಷನ್‌ ನಡೆಸಿದ ಸಂಶೋಧನೆಯಲ್ಲಿ ತಿಳಿಸಿದೆ. ೧೦ ತಿಂಗಳುಗಳ ಕಾಲ ಗ್ರಾಮೀಣ ಭಾಗದಲ್ಲಿ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸೋಷಿಯಲ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆ ಅಧ್ಯಯನವು ಮಾನಸಿಕವಾಗಿ ಕುಗ್ಗಿದವರನ್ನು ಪುನಸ್ಚೇತನಗೊಳಿಸಿದರೆ ಅವರು ಸಹ ಎಲ್ಲರಂತೆಯೇ ಜೀವನ ನಡೆಸಲು ಸಶಸಕ್ತರು ಎಂಬುದು ಇದು ದೃಢಪಡಿಸಿದೆ. ಅಧ್ಯಯನಕ್ಕೆ ಒಳಪಡಿಸಿದ ವ್ಯಕ್ತಿಗಳು ಹಾಗೂ ಕುಟುಂಬಗಳನ್ನು ಸಮುದಾಯ ಆಧರಿತ ಪುನಃಶ್ಚೇತನ (ಸಿಬಿಆರ್) ಕಾರ್ಯಕ್ರಮದ ಫಲಿತಾಂಶವನ್ನು ಸಂಶೋಧನೆಯು ಕೇಂದ್ರೀಕರಿಸಿತ್ತು. ಲೈವ್‌ಲವ್‌ಲಾಫ್‌ ಅಡಿಯಲ್ಲಿ ಒಂದು ಬಾರಿಯ ಅನುದಾನದ ಮೂಲಕ ಸ್ವಯಂ ಉದ್ಯೋಗಿ ಅವಕಾಶಗಳನ್ನು ಒದಗಿಸಲಾಗಿತ್ತು. ಇದಕ್ಕೆ ಹಣವನ್ನು ಕುಟುಂಬದ ನೇತೃತ್ವದ ಸಂಘಟನೆಯಿಂದ ಹೊಂದಿಸಲಾಗಿತ್ತು. ಈ ಯೋಜನೆಯಲ್ಲಿ ಭಾಗಿಯಾದವರು ಸ್ಥಳೀಯವಾಗಿ ಸೂಕ್ತವಾದ ಜೀವನಾವಶ್ಯಕತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕುರಿ ಕಾಯುವುದು ಮತ್ತು ಟೇಲರಿಂಗ್…

Read More

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿರುಋುತಿ(ರಾಕ್ಷಸ)- ನೈಋುತ್ಯ. ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ. ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಅಗ್ನಿಯು ಪೃಥ್ವಿಗೆ ಅಧಿಧಿಪತಿಯಾದ ದೇವತೆ ಎಂದೂ ಪ್ರಸಿದ್ಧ. ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ…

Read More

ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!! ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ  ಹರಕೆ ಮಾಡಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ ಎಲ್ಲಾ ಕಷ್ಟಗಳು  ಜೀವನದಲ್ಲಿ ಪರಿಹಾರವಾಗುತ್ತದೆ . ಪಂಡಿತ್  ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ಬಿಗ್ ಶಾಕ್ ನೀಡಿದೆ. ಅದೇನೆಂದರೇ ಇಲಾಖೆ ವ್ಯಾಪ್ತಿಯ ಇತರೆಡೆ ನಿಯೋಜನೆ, ಅನ್ಯ ಕರ್ತವ್ಯದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳನ್ನು ಕೂಡಲೇ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ಬಿಡುಗಡೆಗೊಳಿಸಿ ಆದೇಶಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರು ನೇಮಕಗೊಂಡ ಮೂಲ ಹುದ್ದೆಯಲ್ಲಿಯ ಕರ್ತವ್ಯಕ ನಿಯೋಜಿಸುವಂತೆ ಸರ್ಕಾರದಿಂದ ಈಗಾಗಲೇ ಹಲವಾರು ಬಾರಿ ನಿರ್ದೇಶನ / ಸೂಚನೆಗಳನ್ನು ನೀಡಲಾಗಿದ್ದರೂ ಸಹ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸದೇ ನಿಯೋಜನೆ/ ಅನ್ನ ಕರ್ತವ್ಯದ ಆಧಾರದ ಮೇಲೆ ಪ್ರಾದೇಶಿಕ ಆಯುಕ್ತರ / ಜಿಲ್ಲಾಧಿಕಾರಿಗಳ ಉಪವಿಭಾಗಾಧಿಕಾರಿ/ ತಹಶೀಲ್ದಾರ್ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದಿದ್ದಾರೆ. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಕಾರ್ಯ ಸ್ವರೂಪವನ್ನು ಸರಳೀಕರಣಗೊಳಿಸಿ ದಿಜಟಲೀಕರಣ…

Read More