Author: kannadanewsnow09

ಬೆಂಗಳೂರು: ಪ್ರಸಕ್ತ ಸಾಲಿನ ಡಿಸಿಇಟಿ ಮೂರು ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ. ಆ.25ರಿಂದ 27ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು, ಆ.28ರೊಳಗೆ ಶುಲ್ಕ ಪಾವತಿಸುವುದು. ಕಾಷನ್ ಡೆಪಾಸಿಟ್ ಕಟ್ಟಿದವರ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೀಟು ಖಾತರಿ ಚೀಟಿಯನ್ನು ಆ.29ರೊಳಗೆ ಡೌನ್‌ಲೋಡ್ ಮಾಡಿಕೊಂಡು ಆ.30ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಕೊನೆ ಸುತ್ತಿನಲ್ಲಿ ಒಟ್ಟು 860 ಮಂದಿಗೆ ವಿವಿಧ ವಿಭಾಗಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. https://kannadanewsnow.com/kannada/power-outage-in-these-areas-of-bangalore-city-tomorrow/ https://kannadanewsnow.com/kannada/invitation-to-apply-for-agniveer-recruitment/

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11ಕೆ.ವಿ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ದಿನಾಂಕ 23.08.2025 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹುಡಿ ವಿಲೇಜ್, ತಿಗಲಾರಪಾಳ್ಯ, ಸೀತಾರಾಮಪಾಳ್ಯ, ಬಸವನಗರ, ಸೊನ್ನೆಹಳ್ಳಿ, ಟ್ರಂಕ್ ಕೇಬಲ್ ದೋಷ, ಎನ್ಜಿಇಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಫ್ಯಾಕ್ಟರಿ, ಇಎಸ್ಐ ರಸ್ತೆ, ವಿಎಸ್ಎನ್ಎಲ್ ಡೇಟಾ ಸೆಂಟರ್, ಪುರವ ಪಾರ್ಕ್ ವಿಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್ ರಸ್ತೆ, ರಾಮಕೃಷ್ಣ ರೆಡ್ಡಿ ಲೇಔಟ್, ಗರುಡಾಚಾರ್ ಪಾಳ್ಯ, ಆರ್ಎಚ್ಬಿ ಕಾಲೋನಿ, ಲಕ್ಷ್ಮೀ ಸಾಗರ, ಮಹೇಶ್ವರಮ್ಮ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. https://kannadanewsnow.com/kannada/good-news-from-ksrtc-for-those-who-wish-to-see-the-singhadurga-bridge-bus-service-from-bangalore/ https://kannadanewsnow.com/kannada/invitation-to-apply-for-agniveer-recruitment/

Read More

ಬೆಂಗಳೂರು: ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು. ಗಣಪತಿ ಹಬ್ಬವನ್ನು ಬಹುಕಾಲದಿಂದ, ತಲೆತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗುಲ್ಬರ್ಗದಲ್ಲಿ ರಿಪಬ್ಲಿಕ್ ಆಫ್ ಗುಲ್ಬರ್ಗ ಎಂದು ಕರೆಯುತ್ತಾರೆ. ರಾಜ್ಯದ ಕಾನೂನು, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ. ರಾಜ್ಯಕ್ಕೆ ಒಂದೇ ಕಾನೂನು, ನೀತಿ ಇರಬೇಕು ಎಂದು ಶಾಸಕರು ಪ್ರಸ್ತಾಪಿಸಿದ್ದರು. ಗುಲ್ಬರ್ಗದಲ್ಲಿ ಸದ್ದೇ ಮಾಡದೇ ಗಣಪತಿ ಉತ್ಸವ ಮಾಡಬೇಕೇ? ಕಾಂಗ್ರೆಸ್ಸಿನವರಿಗೆ ಮಾತ್ರ ಮೌನ ಗಣಪತಿ ಬೇಕು ಎಂದು ಟೀಕಿಸಿದರು. ದಕ್ಷಿಣ ಕನ್ನಡದಲ್ಲೂ ಹಿಂದೂಗಳನ್ನು ತುಳಿಯುವ ಕೆಲಸ…

Read More

ಬೆಂಗಳೂರು: ಸಿಂಗದೂರು ಕೇಬಲ್ ಬ್ರಿಡ್ಜ್ ಉದ್ಘಾಟನೆಯ ಬಳಿಕ ನೋಡೋದಕ್ಕೆ ತೆರಳೋರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಿಂದ ಸಿಗಂದೂರು ಸೇತುವೆ ನೋಡೋ ಪ್ಲಾನ್ ಮಾಡಿದ್ದರೇ, ಕೆ ಎಸ್ ಆರ್ ಟಿಸಿ ನೇರವಾಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿ ಸಿಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಸಿಗಂದೂರು ವಯಾ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ದಿನಾಂಕ 22-08-2025 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದಿದೆ. ಹೀಗಿದೆ ವೇಳಾಪಟ್ಟಿ ಮತ್ತು ಪ್ರಯಾಣದರ ಬೆಂಗಳೂರಿನಿಂದ ಸಿಗಂದೂರಿಗೆ ರೂ.950 ದರವನ್ನು ನಾನ್ ಎಸಿ ಸ್ಲೀಪರ್ ಬಸ್ಸಿಗೆ ನಿಗದಿ ಪಡಿಸಲಾಗಿದೆ. ಈ ಬಸ್ಸು ರಾತ್ರಿ 9.40ಕ್ಕೆ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಸಿಗಂದೂರು ತಲುಪಲಿದೆ. ಸಿಗಂದೂರನ್ನು ರಾತ್ರಿ…

Read More

ಬೆಂಗಳೂರು: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ಕ್ಕೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಈ ಬಗ್ಗೆ ಬಾನು ಮುಷ್ತಕ್ ಹೇಳಿದ್ದೇನು ಅಂತ ಮುಂದೆ ಓದಿ. ಲಂಡನ್ ನಿಂದಲೇ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮ ನಾಡಹಬ್ಬ ಆಚರಣೆ ನಮಗೂ ಖುಷಿ ತರುವ ವಿಚಾರವಾಗಿದೆ. ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರೋದಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ನನ್ನ ಜೊತೆ ಮಾತನಾಡಿದ್ದಾರೆ ಎಂದರು. ದಸರಾ ಸಂದರ್ಭದಲ್ಲಿ ಸಮಯ ಕಾಯ್ದಿರಿಸಿಕೊಳ್ಳಿ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ದಸರಾ ಉದ್ಘಾಟನೆಗೆ ಒಪ್ಪಿಗೆ ನೀಡಿರುವ ಬಗ್ಗೆ ಖುಷಿಯನ್ನು ಬಾನು ಮುಷ್ತಕ್ ಹಂಚಿಕೊಂಡಿದ್ದಾರೆ. https://kannadanewsnow.com/kannada/invitation-to-apply-for-agniveer-recruitment/ https://kannadanewsnow.com/kannada/bumper-news-for-job-seekers-2-5-lakh-new-jobs-available-in-banking-finance-sector/

Read More

ನವದೆಹಲಿ: ಗೋವಿಂದ ಅವರೊಂದಿಗಿನ ವಿಚ್ಛೇದನದ ವದಂತಿಗಳನ್ನು ಉಲ್ಲೇಖಿಸುವಾಗ ಸುನೀತಾ ಅಹುಜಾ ಇತ್ತೀಚೆಗೆ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಬೇಸರಗೊಂಡು ಸುದ್ದಿಯಲ್ಲಿದ್ದರು. ಇದೀಗ ನಟ ಗೋವಿಂದ ಅವರಿಂದ ವಿಚ್ಛೇದನ ಕೋರಿ ಪತ್ನಿ ಸುನೀತಾ ಅಹುಜಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ದಂಪತಿಗಳು 37 ವರ್ಷಗಳಿಂದ ಒಟ್ಟಿಗೆ ಇದ್ದರೂ, ದಾಂಪತ್ಯದಲ್ಲಿನ ತೊಂದರೆಗಳ ಬಗ್ಗೆ ಊಹಾಪೋಹಗಳು ತೀವ್ರಗೊಂಡವು. ಹೌಟರ್‌ಫ್ಲೈ ವರದಿಯ ಪ್ರಕಾರ, ಅಹುಜಾ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವ್ಯಭಿಚಾರ, ಕ್ರೌರ್ಯ ಮತ್ತು ತೊರೆದು ಹೋಗುವಿಕೆಯ ಆಧಾರದ ಮೇಲೆ ಅವರು ಬೇರ್ಪಡುವಿಕೆಯನ್ನು ಕೋರಿದ್ದಾರೆ ಎಂದು ವರದಿ ಹೇಳುತ್ತದೆ. ಸುನೀತಾ ಅಹುಜಾ ಡಿಸೆಂಬರ್ 5, 2024 ರಂದು ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 (1) (i), (ia), ಮತ್ತು (ib) ಅಡಿಯಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಮೇ 25 ರಂದು ನ್ಯಾಯಾಲಯವು ಗೋವಿಂದ ಅವರಿಗೆ ಸಮನ್ಸ್ ಜಾರಿ ಮಾಡಿತ್ತು ಮತ್ತು ಜೂನ್‌ನಿಂದ ದಂಪತಿಗಳು ವಿಷಯಗಳನ್ನು…

Read More

ಬೆಂಗಳೂರು: ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್, ಬೆಂಗಳೂರು ಇಲ್ಲಿ ಯುಹೆಚ್‌ಕ್ಯೂ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್ ನೇಮಕಾತಿ ನಡೆಯಲಿದೆ. 17 1/2 ವರ್ಷದಿಂದ 21 ವರ್ಷದೊಳಗಿನ (2004 ರ ಅಕ್ಟೋಬರ್ 01 ರಿಂದ 2008 ರ ಏಪ್ರಿಲ್ 01 ರ ನಡುವೆ ಜನಿಸಿರುವ) ಮಾಜಿ ಸೈನಿಕರ ಮಕ್ಕಳು ಮತ್ತು ಅವರ ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್(ಜನರಲ್ ಡ್ಯೂಟಿ, ಟೆಕ್ನಿಕಲ್), ಅಗ್ನಿವೀರ್(ಟ್ರೇಡ್ಸ್ಮನ್ 8ನೇ ಮತ್ತು 10 ನೇ ತರಗತಿ ಪಾಸ್) ಹಾಗೂ ಅಗ್ನಿವೀರ್ ಸ್ಪೋರ್ಟ್ಸ್ಮೆನ್(ಓಪೆನ್ ಕೆಟಗರಿ) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಗ್ರೂಪ್ ಇಂಜಿನಿಯರಿಂಗ್ ಮತ್ತು ಸೆಂಟರ್, ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು(ಪ್ರ) ಇವರು ಪ್ರಕಟಣೆಯಲ್ಲಿ ತಿಳಿದ್ದಾರೆ. https://kannadanewsnow.com/kannada/district-administration-invites-banu-mushtaq-to-the-dussehra-inauguration-cm-siddaramaiah/ https://kannadanewsnow.com/kannada/rcp-timeline-case-here-are-the-highlights-of-the-answer-given-by-cm-siddaramaiah-in-the-legislative-assembly/

Read More

ಬೆಂಗಳೂರು: RCP ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಸರ್ಕಾರದ ಉತ್ತರದ ಹೈಲೈಟ್ಸ್ ಮುಂದೆ ಓದಿ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಾನ್ಯ ಸದಸ್ಯರುಗಳು ದಿನಾಂಕ 11-8-2025 ರಂದು ನಿಲುವಳಿ ಸೂಚನೆ ನೀಡಿರುತ್ತಾರೆ. ಸದರಿ ನಿಲುವಳಿಯನ್ನು ಮಾನ್ಯ ಸಭಾಧ್ಯಕ್ಷರು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಲಾಗಿದೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸದಸ್ಯರಾದ ಶ್ರೀ ಸುರೇಶ್ ಕುಮಾರ್, ಜೆಡಿಎಸ್‌ನ ಶ್ರೀ ಎಂ.ಟಿ ಕೃಷ್ಣಪ್ಪ ಅವರು ಮಾತನಾಡಿದ್ದಾರೆ. ಸುರೇಶ್ ಕುಮಾರ್ ಅವರು ಕಡಿಮೆ ಮಾತನಾಡಿದರೂ ಶೇಕ್ಸ್ಪಿಯರ್‌ನ ಜೂಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿಯ ಭಾಷಣದಂತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆಂಟನಿ, ಮಾತುಗಳ ಮೂಲಕವೇ ದಂಗೆ ಎಬ್ಬಿಸಲು ಪ್ರಯತ್ನಿಸಿದ ಮಾತುಗಾರ. 2.​ಆರ್. ಅಶೋಕ್ ಅವರು ಬಹುಶಃ ಜೂನ್ 4 ರಿಂದಲೆ ಹೇಗೆ ಮಾತನಾಡಬೇಕೆಂದು ತಯಾರಿ ಮಾಡಿಕೊಂಡ ಹಾಗೆ ಕಾಣುತ್ತದೆ. ಒಬ್ಬ ರಾಜಕಾರಣಿ ಹೇಗೆ ಮಾತನಾಡಬೇಕೊ ಹಾಗೆ ಮಾತನಾಡಿದ್ದಾರೆ. ತನ್ನ ವಾದ ಸರಣಿಗೆ ಪೂರಕವಾದ ವಿಚಾರಗಳನ್ನು ಪ್ರಸ್ತಾಪಿಸಿದರು. ಅಡ್ಡವಾಗುವ ಅನೇಕ…

Read More

ಬೆಂಗಳೂರು: ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಬಾನು ಮುಷ್ತಾಕ್ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಾನು ಮುಷ್ತಾಕ್ ಅವರ ಕೃತಿ ಎದೆಯ ಹಣತೆಗೆ ಬುಕರ್ ಪ್ರಶಸ್ತಿ ದೊರೆತಿದ್ದು, ಕರ್ನಾಟಕದ ಲೇಖಕಿಗೆ ಈ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ರೈತ ಸಂಘ, ಕನ್ನಡ ಚಳವಳಿಯ ಜೊತೆಗೆ ಹೋರಾಟದ ಹಿನ್ನೆಲೆಯುಳ್ಳ ಬಾನು ಮುಷ್ತಾಕ್, ಪ್ರಗತಿಪರ ಚಿಂತಕರೂ ಆಗಿದ್ದಾರೆ ಎಂದರು. ಈ ಬಾರಿ ಶಾಸ್ತ್ರದ ಪ್ರಕಾರ ಹನ್ನೊಂದು ದಿನ ದಸರಾ ನಡೆಯಲಿದೆ. ಅಕ್ಟೋಬರ್ 2 ರಂದು ವಿಜಯದಶಮಿ ಎಂದರು. ರಕ್ಷಣಾ ಸಚಿವರಿಗೆ ಪತ್ರ ಮೈಸೂರು ದಸರಾ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ದಸರಾ ವೀಕ್ಷಣಗೆ ಆಗಮಿಸಬೇಕೆಂದು ಪತ್ರ ಬರೆದಿದ್ದೇನೆ ಎಂದರು. ಆ. 29 ರಂದು ಪಾದಯಾತ್ರೆಯಲ್ಲಿ…

Read More

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರಿಂದ ಉಂಟಾಗುವಂತ ಅಪಘಾತ ತಡೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಅಪಘಾತ ಎಸಗಿದ್ರೆ ಮೊದಲ ಸಲಕ್ಕೆ ಸಸ್ಪೆಂಡ್, ಎರಡನೇ ಸಲಕ್ಕೆ ಕೆಲಸದಿಂದಲೇ ವಜಾಗೊಳಿಸುವಂತ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಈ ಕುರಿತಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಪ್ರಯಾಣಿಕರ ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಯನ್ನು ಪ್ರಧಾನ ಗುರಿಯಾಗಿ ಸಂಸ್ಥೆ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ವಿವರವನ್ನು ಪ್ರಕಟಿಸಿದೆ. ಅಪಘಾತಗಳ ಪರಿಶೀಲನೆ ಆಗಸ್ಟ್ 2025ರಲ್ಲಿ ಒಟ್ಟು 04 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಒಂದು ವಿದ್ಯುತ್‌ಚಾಲಿತ ಬಸ್ಸಿಗೆ ಸಂಬಂಧಿಸಿದೆ. ಪರಿಶೀಲನೆಯ ಪ್ರಕಾರ, 03 ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಕೇವಲ 01 ಪ್ರಕರಣದಲ್ಲಿ ಪ್ರಯಾಣಿಕರ ನಿರ್ಲಕ್ಷ್ಯ ಹಾಗೂ…

Read More