Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ : ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ವನ್ಯಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರದ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಕ್ಲೀನ್ ಚಿಟ್ ನೀಡಿದೆ. ಅಂದಹಾಗೆ ಸುಪ್ರೀಂ ಕೋರ್ಟ್ ನಿಂದ ಎಸ್ಐಟಿ ನೇಮಕ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪಿ ಬಿ ವರಾಳೆ ಅವರ ಪೀಠವು ವರದಿಯನ್ನು ದಾಖಲೆಯಾಗಿ ಸ್ವೀಕರಿಸಿ, ವಂತಾರದಲ್ಲಿನ ನಿಯಮದ ಅನುಸರಣೆ ಮತ್ತು ನಿಯಂತ್ರಕ ಕ್ರಮಗಳ ವಿಷಯದ ಬಗ್ಗೆ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದೆ. ಎಸ್ಐಟಿಯಿಂದ ವರದಿಯನ್ನು ಶುಕ್ರವಾರ ಸಲ್ಲಿಸಲಾಯಿತು ಮತ್ತು ಸೋಮವಾರ ಸುಪ್ರೀಂ ಕೋರ್ಟ್ ಅದನ್ನು ಪರಿಶೀಲಿಸಿತು. ವರದಿಯನ್ನು ಪರಿಶೀಲಿಸಿದ ನಂತರ ವಿವರವಾದ ಆದೇಶವನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ ಮತ್ತು ಭಾರತ ಹಾಗೂ ವಿದೇಶಗಳಿಂದ ಪ್ರಾಣಿಗಳನ್ನು, ಅದರಲ್ಲೂ ವಿಶೇಷವಾಗಿ ಆನೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ವಂತಾರ ವಿರುದ್ಧ ಸತ್ಯಶೋಧನಾ ವಿಚಾರಣೆ ನಡೆಸಲು ಆಗಸ್ಟ್ 25ನೇ ತಾರೀಕಿನಂದು ಸುಪ್ರೀಂಕೋರ್ಟ್…
ಬೆಂಗಳೂರು: ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ (ASME) ಮೊದಲ ಬಾರಿಗೆ ಆಯೋಜಿಸಿದ್ದ ವಿಶ್ವದ ಅತಿದೊಡ್ಡ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್, ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ (IMECE) ಇಂಡಿಯಾ 2025 ಯಶಸ್ವಿಗೊಂಡಿದೆ. ಈ ಕಾರ್ಯಕ್ರಮವು ಚಿಂತನೆಗೆ ಹಚ್ಚುವ ಪ್ರಮುಖ ಭಾಷಣಗಳು, ನೀತಿ ಸಂವಾದಗಳೊಂದಿಗೆ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತದ ನಾಯಕತ್ವವನ್ನು ಎತ್ತಿ ತೋರಿಸಿದೆ. ಈ ಕಾರ್ಯಕ್ರಮವು ಸಂಶೋಧನೆ, ಶಿಕ್ಷಣ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ASME ಮತ್ತು ICT ಅಕಾಡೆಮಿ ಆಫ್ ಕೇರಳದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಆಂಧ್ರಪ್ರದೇಶ ಸರ್ಕಾರದ MSME ಸಚಿವ ಶ್ರೀನಿವಾಸ್ ಕೊಂಡಪಲ್ಲಿ ಮಾತನಾಡಿ, ಮೆಕ್ಯಾನಿಕಲ್ ಇಂಜಿನಿಯರ್ಸ್ ಸಮಾವೇಶವು ಇಡೀ ದೇಶದಲ್ಲಿ ಇಂಜಿನಿಯರ್ಸ್‌ಗಳಿಗೆ ಇರುವ ಅವಕಾಶಗಳ ಬಗ್ಗೆ ಎತ್ತಿ ಹಿಡಿಯುತ್ತದೆ. ಮೂಲಸೌಕರ್ಯ, ವಲಯ ಉದ್ಯಾನವನ ಮತ್ತು ನಾವೀನ್ಯತೆ ಕೇಂದ್ರಗಳನ್ನು ಹೊಂದಿರುವ ಆಂಧ್ರಪ್ರದೇಶವು ಉತ್ಪಾದನೆ, MSME ಗಳು ಮತ್ತು ರಫ್ತುಗಳಿಗೆ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ – ಭಾರತದ ಒಟ್ಟು ರಫ್ತಿಗೆ…
ಶಿವಮೊಗ್ಗ: ಮಳಲಗದ್ದೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 45 ವರ್ಷಗಳಿಂದ ನಿರಂತರವಾಗಿ ರೈತರಿಗೆ ಸೇವೆ ನೀಡುತ್ತಾ ಬಂದಿದೆ. ಇದರಿಂದಾಗಿ ರೈತರ ಉತ್ತಮ ಬೆಳವಣಿಗೆಯಾಗಿದೆ. ಕೃಷಿಯ ಜೊತೆಗೆ ಹೈನುಗಾರಿಕೆಗೂ ಉತ್ತೇಜನ ನೀಡಿದರೇ ರೈತರಿಗೆ ಅನುಕಾಲವಾಗಲಿದೆ ಎಂಬುದಾಗಿ ಶ್ರೀ ಕ್ಷೇತ್ರ ಸಿಂಗದೂರು ಚೌಡೇಶ್ವರಿ ದೇಗುಲದ ಧರ್ಮದರ್ಶಿ ಡಾ.ರಾಮಪ್ಪ ಅವರು ಅಭಿಪ್ರಾಯ ಪಟ್ಟರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಳೆಕೊಪ್ಪದ ಧನಾಂಜನೇಯ ದೇವಸ್ಥಾನದ ಸಭಾಭವನಲ್ಲಿ ನಡೆದಂತ ಮಳಲಗದ್ದೆ(ಉಳವಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 2024-25ನೇ ಸಾಲಿನ ಆವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು. ಮಳಲಗದ್ದೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 45 ವರ್ಷಗಳ ಕಾಲ ನಿರಂತರವಾಗಿ ರೈತರಿಗೆ ಸೇವೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರೈತರು ಸಾಲವನ್ನು ನಿಗದಿತ ಅವಧಿಯೊಳೆಗೆ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳು ಕೃಷಿ ಜೊತೆಗೆ ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಇದರಿಂದ ರೈತರ ಕುಟುಂಬಗಳು ಆರ್ಥಿಕವಾಗಿ…
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ ಎನ್ನುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಾಪಾಸ್ ಕಳುಹಿಸಿದ್ದಾರೆ. ರಾಜ್ಯ ಸರ್ಕಾರದಿಂದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ವಿಧೇಯಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೇ ಕೆರೆ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಗೊಳಿಸಿತ್ತು. ಇದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೇ ಈ ವಿಧೇಯಕವನ್ನು ವಾಪಾಸ್ ಕಳುಹಿಸಲಾಗಿದೆ. https://kannadanewsnow.com/kannada/big-news-dasara-inauguration-is-taking-place-according-to-the-mullas-opposition-leader-r-ashoks-statement/ https://kannadanewsnow.com/kannada/judge-shows-humanity-in-front-of-the-public-he-goes-to-the-elderly-man-and-gives-a-verdict-providing-relief-on-the-spot/
ಮಂಡ್ಯ: ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳೋರು. ಮೈಶುಗರ್ ಸ್ಕೂಲ್ ಗೆ 25 ಕೋಟಿ ಕೊಟ್ಟೆ ಕೊಡ್ತಾರೆ ಎಂಬುದಾಗಿ ಶಾಸಕ ಗಾಣಿಗ ರವಿಕುಮಾರ್ ತಿಳಿಸಿದ್ದಾರೆ. ಇಂದು ಮಂಡ್ಯದಲ್ಲಿ ಮೈಶುಗರ್ ಸ್ಕೂಲ್ ಗೆ ಹೆಚ್ಡಿಕೆಯಿಂದ ಅನುದಾನ ವಿಚಾರವಾಗಿ ಮಾತನಾಡಿದಂತ ಅವರು, ಮೈಶುಗರ್ ವಿಚಾರವಾಗಿ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಕೊಡದಿರುವ ಬಗ್ಗೆ ಚರ್ಚೆ ಮಾಡಿ ಸಂಘರ್ಷ ಮಾಡುವುದು ಇಷ್ಟ ಇಲ್ಲ. ಆಟೋ ಸ್ಟ್ಯಾಂಡ್ ಗುದ್ದಿಲಿ ಪೂಜೆ 10 ಲಕ್ಷದು ಮಾತ್ರ ನೋಡಿದ್ದೇನೆ. ಕುಮಾರಸ್ವಾಮಿ ಕೊಟ್ಟರೆ ಅವರ ಮನೆ ಬಾಗಿಲಿಗೆ ಹೋಗಿ ಫಂಡ್ ಇಸ್ಕೊಂಡು ಬರ್ತಿನಿ. ನಾನೇ ನಿಂತು ಅಭಿವೃದ್ಧಿ ಮಾಡ್ತೇನೆ ಎಂದರು. 25 ಕೋಟಿ ಅಂತ ಟಿವಿ ಮುಂದೆ ಚರ್ಚೆ ಆಗಿದೆ ಸ್ಕೂಲ್ ಶಿಕ್ಷಕರಿಗೆ ಸಂಬಳ ಕೊಡಕ್ಕಾಗ್ತಿಲ್ಲ ಪಾಪಾ. ರಾಜಕೀಯ ಸಂಘರ್ಷದಿಂದ ಅಭಿವೃದ್ಧಿ ಕುಂಟಿತ. ಎಂಡಿ, ಅಧ್ಯಕ್ಷರಿಗೆ ಫಂಡ್ 25 ಕೋಟಿ ಇಸ್ಕೊಂಡು ಬರಲು ಸೂಚನೆ ಕೊಟ್ಟಿದ್ದೇನೆ. 25 ಕೋಟಿ ಕೊಟ್ಟೆ ಕೊಡ್ತಾರೆ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳೋರು. ಇನ್ನು ಎರಡೂ ತಿಂಗಳು ಕಳೆಯಲಿ. ಕೇಂದ್ರ…
ಬೆಳಗಾವಿ: ನಿಗದಿಯಂತೆ ಸೆಪ್ಟೆಂಬರ್.22ರಂದು ಸಾಹಿತಿ ಬಾನು ಮುಷ್ತಾಕ್ ಅವರು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ ಎಂಬುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯವರು ಲೇಖಕಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡುವುದನ್ನು ವಿರೋಧ ಮಾಡಬಾರದಿತ್ತು. ಈ ವಿಚಾರದಲ್ಲಿ ಬಿಜೆಪಿಯವರು ಅನಗತ್ಯವಾಗಿ ಗೊಂದಲ ಸೃಷ್ಠಿಸಿದರು ಎಂಬುದಾಗಿ ಹೇಳಿದರು. ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಬಿಜೆಪಿಯವರಿಗೆ ಕೊನೆಗೂ ನ್ಯಾಯಾಲಯದಿಂದ ಸೂಕ್ತ ಉತ್ತರ ಸಿಕ್ಕಿದೆ. ದಸರಾ ಮಾಡೋದು ಉದ್ಘಾಟನೆ ಮುಖ್ಯ, ಜಾತಿ ಧರ್ಮ ಮುಖ್ಯವಲ್ಲ. ಈ ಹಿಂದೆ ಬೇರೆ ಧರ್ಮದವರು ದಸರಾವನ್ನು ಉದ್ಘಾಟನೆ ಮಾಡಿದ್ದಾರೆ. ರಾಜಕೀಯಕ್ಕಾಗಿ ಬಿಜೆಪಿಯವರು ಇನ್ನು ಬಳಸಿಕೊಂಡಿದ್ದು ಸರಿಯಲ್ಲ ಎಂದರು. https://kannadanewsnow.com/kannada/big-news-dasara-inauguration-is-taking-place-according-to-the-mullas-opposition-leader-r-ashoks-statement/ https://kannadanewsnow.com/kannada/judge-shows-humanity-in-front-of-the-public-he-goes-to-the-elderly-man-and-gives-a-verdict-providing-relief-on-the-spot/
ಮಂಡ್ಯ: ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಎಡವಟ್ಟಿಗೆ ವ್ಯಕ್ತಿ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಮದ್ಯೆ ಕಿರು ಸೇತುವೆ ಕಾಮಗಾರಿ ಸ್ಥಳಕ್ಕೆ ಸ್ಕೂಟರ್ ಸಮೇತ ಬಿದ್ದು ವ್ಯಕ್ತಿ ಸಾವನ್ನಪ್ಪಿದಂತ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಟ್ಟ ದಾಸನದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಯಮಾನುಸಾರ ಕಾಮಗಾರಿ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಕಾಮಗಾರಿ ಮಾಹಿತಿ ಫಲಕ ಅಳವಡಿಸದೆ ಕಾಮಗಾರಿ ಇದಾಗಿದೆ. ಕಾಮಗಾರಿ ನಡೆಯುತ್ತಿರುವ ಮಾಹಿತಿ ಇಲ್ಲದೆ ಈ ಮಾರ್ಗದಲ್ಲಿ ಬಂದ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದು ಸಾವನ್ನುಪ್ಪಿದ್ದಾರೆ. ಮೃತರನ್ನು ಕೆಸ್ತೂರು ಗ್ರಾಮದ ರಾಮು(50) ಎಂದು ಗುರುತಿಸಲಾಗಿದೆ. ರಾಮು ಅವರು ಸ್ಕೂಟರ್ ಸಮೇತ ಕೆಳಗೆ ಬಿದ್ದಂತ ವೇಳೆಯಲ್ಲಿ ಸ್ಥಳದಲ್ಲಿ ಸರಳು ಚುಚ್ಚಿ ಸಾವನ್ನಪ್ಪಿದ್ದಾರೆ. ಅವೈಜ್ಞಾನಿಕ ಕಾಮಗಾರಿ ನಡೆಸುತ್ತಾ ವ್ಯಕ್ತಿ ಸಾವಿಗೆ ಕಾರಣರಾದ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/india-likely-to-witness-a-colder-winter-due-to-la-nina/ https://kannadanewsnow.com/kannada/judge-shows-humanity-in-front-of-the-public-he-goes-to-the-elderly-man-and-gives-a-verdict-providing-relief-on-the-spot/
ನವದೆಹಲಿ: ಈ ವರ್ಷದ ಕೊನೆಯಲ್ಲಿ ಲಾ ನಿನಾ ಪರಿಸ್ಥಿತಿಗಳು ಮರಳಬಹುದು ಎಂದು ಉನ್ನತ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದು ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಶೀತ ಚಳಿಗಾಲದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸೆಪ್ಟೆಂಬರ್ 11 ರಂದು ಯುಎಸ್ ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನ ಮುನ್ಸೂಚನಾ ಕೇಂದ್ರವು ಅಕ್ಟೋಬರ್ ಮತ್ತು ಡಿಸೆಂಬರ್ 2025 ರ ನಡುವೆ ಲಾ ನಿನಾ ಬೆಳೆಯುವ ಸಾಧ್ಯತೆ 71% ಎಂದು ಹೇಳಿದೆ. ಡಿಸೆಂಬರ್-ಫೆಬ್ರವರಿ 2026 ಕ್ಕೆ ಸಂಭವನೀಯತೆಯು 54% ಕ್ಕೆ ಇಳಿಯುತ್ತದೆ, ಆದರೆ ಲಾ ನಿನಾ ವಾಚ್ ಜಾರಿಯಲ್ಲಿದೆ. ಎಲ್ ನಿನೋ-ದಕ್ಷಿಣ ಆಂದೋಲನ (ENSO) ಚಕ್ರದ ತಂಪಾದ ಹಂತವಾದ ಲಾ ನಿನಾ, ಸಮಭಾಜಕ ಪೆಸಿಫಿಕ್‌ನಲ್ಲಿ ಸಾಗರ ತಾಪಮಾನವನ್ನು ಬದಲಾಯಿಸುತ್ತದೆ ಮತ್ತು ವಿಶ್ವಾದ್ಯಂತ ಹವಾಮಾನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಭಾರತಕ್ಕೆ, ಇದು ಸಾಮಾನ್ಯವಾಗಿ ಸಾಮಾನ್ಯಕ್ಕಿಂತ ಕಡಿಮೆ ಚಳಿಗಾಲದ ತಾಪಮಾನಕ್ಕೆ ಸಂಬಂಧಿಸಿದೆ. ಅಕ್ಟೋಬರ್-ಡಿಸೆಂಬರ್‌ನಲ್ಲಿ ಲಾ ನಿನಾ ಅಭಿವೃದ್ಧಿಗೊಳ್ಳಲಿದೆ ಭಾರತೀಯ ಹವಾಮಾನ ಇಲಾಖೆ (IMD), ತನ್ನ ಇತ್ತೀಚಿನ ENSO ಬುಲೆಟಿನ್‌ನಲ್ಲಿ, ಪೆಸಿಫಿಕ್‌ನಲ್ಲಿ ಪ್ರಸ್ತುತ ತಟಸ್ಥ…
ಮಂಡ್ಯ: ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರಿನ ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ಹಿಂದು ಮುಖಂಡರಿಂದ ದೂರು ನೀಡಿದ್ದಾರೆ. ಪ್ರಗತಿಪರರ ಸಭೆಯಲ್ಲಿ ಹೋರಾಟಕ್ಕೆ ತನು ಮನ ಧನ ಸಹಾಯ ಮಾಡ್ತಿನೆಂದ ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ದೂರು ನೀಡಲಾಗಿದೆ. ಈತ ಮದ್ದೂರಿ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರ ಸಭೆಯಲ್ಲಿ ಹೋರಾಟಕ್ಕೆ ಆರ್ಥಿಕ ನೆರವು ಬಗ್ಗೆ ಹೇಳಿಕೆ ನೀಡಲಾಗಿದೆ. ಈತನ ಈ ಹೇಳಿಕೆ ಕೋಮು ಗಲಭೆಗೆ ಎಡೆ ಮಾಡಿಕೊಡುವ ಪ್ರಚೋದನಾ ಕೆಲಸ ಎಂದು ಆರೋಪಿಸಲಾಗಿದೆ. ಈತ ಗಲಾಟೆಗೆ ಕಾರಣವಾದ ಜಾಮೀಯ ಮಸೀದಿ ಅಧ್ಯಕ್ಷ. ಗಲಾಟೆ ಬಳಿಕ ತಮ್ಮ ಸುಮದಾಯದಿಂದ ಗಲಭೆಗೆ ಕಾರಣವೆಂದು ಕ್ಷಮೆ ಯಾಚಿಸಿದ್ದರು. ಈಗ ಪ್ರಗತಿಪರರ ಜೊತೆ ಸೇರಿ ಉಲ್ಟಾ ಹೊಡೆದು ಪ್ರತಿಭಟನೆ ಮಾಡಿ ತಮ್ಮ ಸಮುದಾಯದಿಂದ ಆರ್ಥಿಕ ಸಹಾಯ ಮಾಡ್ತಿನೆಂದು ಹೇಳಿಕೆ ನೀಡಲಾಗಿದೆ. ಈ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆ ಮುಂಡರಿಂದ ಮದ್ದೂರು ಪೊಲೀಸರಿಗೆ ದೂರು ನೀಡಲಾಗಿದೆ. ಮತೀಯ ಸಂಘರ್ಷಕ್ಕೆ ಕಾರಣವಾದ ಹೇಳಿಕೆ…
ಕಲಬುರ್ಗಿ: ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ, ಸಿಎಂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರದ ಬಗ್ಗೆಯೂ ಮಾಹಿತಿ ನೀಡಲಾಗಿದೆ, ಮುಂದಿನ ಒಂದು ವಾರದೊಳಗೆ ಪರಿಹಾರ ರೈತರಿಗೆ ಜಮಾ ಆಗಲಿದೆ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇಂದು ಜಿಲ್ಲಾ ಪಂಚಾಯತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡನೆಯ ಸುತ್ತಿನ ಮಳೆ ನಿಲ್ಲದ ಕಾರಣ ಸರ್ವೆ ಮಾಡುವುದು ಕಷ್ಟವಾಗುತ್ತಿದೆ. ಮೊದಲ ಹಂತದಲ್ಲೇ 1.05 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಎರಡನೆಯ ಸುತ್ತಿನ ಸರ್ವೆ ಕೂಡ ಮಾಡಲಾಗುವುದು. ಈ ಬಗ್ಗೆ ನಾಳೆ ಸಚಿವ ಸಂಪುಟ ಸಭೆ ನಂತರ ಸಿಎಂ ಗಮನಕ್ಕೆ ತರಲಾಗುವುದು ಎಂದರು. ಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಬಳಹ ದಿನದಿಂದ ಇತ್ತು. ಕುರುಬ ಸಮಾಜದ ಸಭೆ ಕೂಡಾ ನಡೆಸಲಾಗುತ್ತಿದೆ. ಕುರುಬ ಹಾಗೂ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಸೇರಿಸುವ ವಿಚಾರದಲ್ಲಿ ಎಂಥ್ರಾಪಲಾಜಿ ವರದಿ ಸಲ್ಲಿಸಿದ ಸಮಿತಿಯ…








